ಹೋಳಿ ಹಬ್ಬದ ಮಹತ್ವ | Holi Habbada Shubhashayagalu | ಹೋಳಿ ಹಬ್ಬದ ಶುಭಾಶಯಗಳು

1314202 5 Copy

ಹೋಳಿ ಹಬ್ಬದ ಮಹತ್ವ, Holi Habbada Shubhashayagalu 2022, holi habba in kannada, holi habbada shubhashayagalu, holi festival essay & history, pdf

ಹೋಳಿ ಹಬ್ಬದ ಮಹತ್ವ

ಹೋಳಿಯನ್ನು ಬಣ್ಣಗಳ ಹಬ್ಬ ಎಂದು ಕರೆಯಲಾಗುತ್ತದೆ. ಇದು ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಹಿಂದೂ ಧರ್ಮದ ಅನುಯಾಯಿಗಳು ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಹೋಳಿಯನ್ನು ಉತ್ಸಾಹ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ.

ಈ ಹಬ್ಬವನ್ನು ಆಚರಿಸುವವರು, ಬಣ್ಣಗಳೊಂದಿಗೆ ಆಟವಾಡಲು ಮತ್ತು ರುಚಿಕರವಾದ ಭಕ್ಷ್ಯಗಳನ್ನು ತಿನ್ನಲು ಪ್ರತಿ ವರ್ಷವೂ ಕಾತರದಿಂದ ಕಾಯುತ್ತಾರೆ.

ಹೋಳಿ ಪ್ರಬಂಧ

ಹೋಳಿನ್ನು ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂತೋಷವನ್ನು ಆಚರಿಸುವುದಾಗಿದೆ. ಜನರು ತಮ್ಮ ಕಷ್ಟಗಳನ್ನು ಮರೆತು ಸಹೋದರತ್ವವನ್ನು ಆಚರಿಸಲು ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ.

ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ನಮ್ಮ ದ್ವೇಷಗಳನ್ನು ಮರೆತು ಹಬ್ಬದ ಉತ್ಸಾಹಕ್ಕೆ ಹೋಗುತ್ತೇವೆ. ಹೋಳಿಯನ್ನು ಬಣ್ಣಗಳ ಹಬ್ಬ ಎಂದು ಕರೆಯಲಾಗುತ್ತದೆ ಏಕೆಂದರೆ ಜನರು ಬಣ್ಣಗಳೊಂದಿಗೆ ಆಟವಾಡುತ್ತಾರೆ ಮತ್ತು ಹಬ್ಬದ ಸಂದರ್ಭದಲ್ಲಿ ಬಣ್ಣವನ್ನು ಪರಸ್ಪರರ ಮುಖಕ್ಕೆ ಎರೆಚಿ ಸಂಭ್ರಮಿಸುತ್ತಾರೆ.

ಹೋಳಿ ಇತಿಹಾಸ

ಪುರಾಣದ ಪ್ರಕಾರ ತಾರಕಾಸುರನಿಂದ ರಾಕ್ಷಸನು ಘೋರ ತಪಸ್ಸನ್ನು ಮಾಡಿ ಬ್ರಹ್ಮ ದೇವನಲ್ಲಿ ತನಗೆ ಸಾವೇ ಬರಬಾರದು ಎಂದು ವರವನ್ನು ಕೇಳತ್ತಾನೆ.

ಬ್ರಹ್ಮನು ಆ ವರವನ್ನು ನಿರಾಕರಿಸಿದಾಗ ಶಿವನ 7 ದಿನಗಳ ಮಗುವಿನಿಂದ ತನಗೆ ಸಾವು ಬರಲಿ ಎಂಬ ವರವನ್ನು ಪಡೆದನು.

ತದನಂತರ ತಾರಕಾಸುರದಿಂದ ದೇವತೆಗಳಿಗೆ ಉಪಟಳ ಹೆಚ್ಚಾಗುತ್ತದೆ. ಅದು ಮಿತಿ ಮೀರಿದಾಗ ದೇವತೆಗಳು ಶಿವನಲ್ಲಿ ಮೊರೆ ಹೋಗುತ್ತಾರೆ.

ಆದರೆ ಶಿವನು ಸಮಾಧಿ ಸ್ಥಿತಿಯಲ್ಲಿದ್ದನು. ಆಗ ಶಿವನ ಧ್ಯಾನವನ್ನು ಭಂಗಪಡಿಸಿ ಪಾರ್ವತಿಯನ್ನು ಮೋಹಿತನನ್ನಾಗಿ ಮಾಡಲು ರತಿ ಮನ್ಮಥರನ್ನು ದೇವತೆಗಳು ಒಪ್ಪಿಸುತ್ತಾರೆ.

ಅದರಂತೆ ರತಿ ಮನ್ಮಥರು ಶಿವನ ಮುಂದೆ ನೃತ್ಯವನ್ನು ಮಾಡಿ ಶಿವನ ಧ್ಯಾನಕ್ಕೆ ಭಂಗವನ್ನು ಉಂಟು ಮಾಡುವರು. ಇದರಿಂದ ವ್ಯಘ್ರನಾದ ಶಿವನು ತನ್ನ ಮೂರನೆಯ ಕಣ್ಣನ್ನು ತೆರೆದು ಮನ್ಮಥನನ್ನು ಸುಟ್ಟು ಭಸ್ಮ ಮಾಡುತ್ತಾನೆ.

ಆಗ ರತಿಯು ದುಃಖದಿಂದ ಶಿವನಲ್ಲಿ ಪತಿ ಭಿಕ್ಷೆ ಬೇಡಿದಾಗ ಅವಳಿಗೆ ಮಾತ್ರ ಮನ್ಮಥನು ಕಾಣುವಂತೆ ವರವನ್ನು ಕೊಟ್ಟನು. ಅಂದಿನಿಂದ ಲೋಕ ಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದನು.

ಈ ದಿನದ ಆಚರಣೆಯೇ ಕಾಮನ ಹಬ್ಬ. ಗ್ರಾಮೀಣ ಭಾಗಗಳಲ್ಲಿ ಅವಲಗಿಡ, ಅಡಿಕೆ ಗಿಡ, ಕಬ್ಬು , ಬೆರಣಿಯನ್ನು ಸೇರಿಸಿ ಜೊತೆಗೆ ಒಣ ಕಟ್ಟಿಗೆ ಸೇರಿಸಿ ಊರ ಮುಖಂಡರು ಅದನ್ನು ಪೂಜಿಸಿ ನೈವೇದ್ಯ ಮಾಡಿ ನಂತರ ಅದಕ್ಕೆ ಬೆಂಕಿ ಇಡುವರು. ನಂತರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸುವುದು ವಾಡಿಕೆ.

ಉಪಸಂಹಾರ

ಹೋಳಿ ಪ್ರೀತಿ ಮತ್ತು ಸಹೋದರತ್ವವನ್ನು ಹರಡುತ್ತದೆ. ಇದು ದೇಶದಲ್ಲಿ ಸಾಮರಸ್ಯ ಮತ್ತು ಸಂತೋಷವನ್ನು ತರುತ್ತದೆ. ಹೋಳಿಯು ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಸಂಕೇತಿಸುತ್ತದೆ.

ಈ ವರ್ಣರಂಜಿತ ಹಬ್ಬವು ಜನರನ್ನು ಒಂದುಗೂಡಿಸುತ್ತದೆ ಮತ್ತು ಜೀವನದಿಂದ ಎಲ್ಲಾ ರೀತಿಯ ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ.

ಹೋಳಿ ಹಬ್ಬದ ಶುಭಾಶಯಗಳು

ನಿಮ್ಮ ಇಷ್ಟಾರ್ಥಗಳೆಲ್ಲಾ ನೆರವೇರಲಿ. ಹೋಳಿ ಹಬ್ಬ ಖುಷಿ, ಸಂತೋಷವನ್ನಷ್ಟೇ ನಿಮಗೆ ಕರುಣಿಸಲಿ. ಹ್ಯಾಪಿ ಹೋಳಿ

ಹೋಳಿ ಹಬ್ಬದ ಮಹತ್ವ

ಬಣ್ಣಗಳ ಹಬ್ಬ ನಿಮ್ಮ ಬದುಕಿನಲ್ಲಿ ಖುಷಿಯ ಚಿತ್ತಾರವನ್ನು ಮೂಡಿಸಲಿ. ಕಷ್ಟಗಳೆಲ್ಲಾ ಮಂಜಿನಂತೆ ಕರಗಿ, ನೆಮ್ಮದಿಯೊಂದೇ ನಿಮ್ಮ ಬಾಳಿನಲ್ಲಿ ಶಾಶ್ವತವಾಗಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಹೋಳಿ ಹಬ್ಬದ ಶುಭಾಶಯಗಳು

ಹೋಳಿ ಹಬ್ಬದ ಮಹತ್ವ

ಹೋಳಿ ಎಂದರೆ ಸುಂದರ ಸ್ನೇಹ, ಪ್ರೀತಿಯ ಸಂಕೇತ. ನಿಮ್ಮ ಸ್ನೇಹ ನನ್ನ ಬಾಳಿನಲ್ಲಿ ಹೊಸ ಚೈತನ್ಯ ತಂದಿದೆ. ನನ್ನ ಬದುಕಿನಲ್ಲಿ ಖುಷಿ ತಂದ ನಿಮ್ಮ ಜೀವನದಲ್ಲಿ ಈ ಹಬ್ಬ ಇನ್ನಷ್ಟು ಖುಷಿ, ಸಂತಸ, ಸಡಗರದಿಂದ ತುಂಬಿರಲಿ ಎಂಬ ಹಾರೈಕೆ ನನ್ನದು. ಹ್ಯಾಪಿ ಹೋಳಿ

ಹೋಳಿ ಹಬ್ಬದ ಮಹತ್ವ

ಹೋಳಿಯ ಶುಭದಿನ ಸಂದರ್ಭದಲ್ಲಿ ದೇವರು ನಿಮಗೆ ಉತ್ತಮ ಆರೋಗ್ಯ, ಸಂಪತ್ತು, ದೀರ್ಘಾಯುಷ್ಯ, ಶಾಂತಿ, ನೆಮ್ಮದಿ ಮತ್ತು ಸಂತೋಷವನ್ನು ಆಶೀರ್ವದಿಸಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಹೋಳಿ ಹಬ್ಬದ ಶುಭಾಶಯಗಳು

ಹೋಳಿ ಹಬ್ಬದ ಮಹತ್ವ | Holi Habbada Shubhashayagalu | ಹೋಳಿ ಹಬ್ಬ ಯಾಕೆ ಆಚರಣೆ ಮಾಡ್ತಾರೆ..?

ಖುಷಿ, ಸಡಗರ, ನೆಮ್ಮದಿ, ಪ್ರೀತಿಯ ಹೋಳಿ ನಿಮ್ಮದಾಗಲಿ. ನಿಮ್ಮ ಸಾಧನೆಯ ಹಾದಿಗಿದ್ದ ಅಡೆತಡೆಗಳೆಲ್ಲಾ ನಿವಾರಣೆಯಾಗಿ ಯಶಸ್ಸು ನಿಮಗೆ ಲಭಿಸಲಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಹೋಳಿ ಹಬ್ಬದ ಮಹತ್ವ

ಬದುಕಿನಲ್ಲಿರುವ ಕಷ್ಟಗಳು, ನೋವುಗಳು ಸುಟ್ಟು ಬೂದಿಯಾಗಲಿ, ಆನಂದದ ಬಣ್ಣ ಎಲ್ಲೆಲ್ಲೂ ತುಂಬಲಿ. ಅನುದಿನವೂ ಅನುಕ್ಷಣವೂ ನೆಮ್ಮದಿ ನೆಲೆಗೊಳಲಿ. ಎಲ್ಲರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು

1314202 6 Copy

ಹಿಂದಿನ ಕಷ್ಟಗಳನ್ನು ಮರೆಯೋಣ, ಮುಂದಿನ ಖುಷಿಯ ಜೀವನದ ವಿಶ್ವಾಸದಲ್ಲಿ ಹೆಜ್ಜೆ ಇಡೋಣ, ಸವಾಲುಗಳನ್ನು ಮೆಟ್ಟಿ ನಿಂತು ಜಯಿಸೋಣ. ಸರ್ವರಿಗೂ ಈ ಧೈರ್ಯ, ಛಲವನ್ನು ಹೋಳಿ ಹಬ್ಬ ಕರುಣಿಸಲಿ. ನಿಮಗೆಲ್ಲರಿಗೂ ಬಣ್ಣದ ಹಬ್ಬದ ಶುಭಾಶಯಗಳು

1314202 6 Copy Copy

ಹಿಂದೆಂದಿಗಿಂತಲೂ ಹೆಚ್ಚು ಆನಂದದ ಹೋಳಿ ಹಬ್ಬ ನಿಮ್ಮದಾಗಲಿ. ಈ ಹೋಳಿ ನಿಮ್ಮ ಬದುಕಿನಲ್ಲಿ ಇನ್ನಷ್ಟು ಖುಷಿಯ ರಂಗನ್ನು ತರಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಬಣ್ಣಗಳ ಹಬ್ಬದ ಶುಭಾಶಯಗಳು

1314202 5 Copy

ಇನ್ನಷ್ಟು ಓದಿ : ಕರ್ನಾಟಕ ರತ್ನ ಪ್ರಶಸ್ತಿ ಪಡೆದವರ ಪಟ್ಟಿ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *