Halmidi Shasana In Kannada, ಹಲ್ಮಿಡಿ ಶಾಸನ, ಹಲ್ಮಿಡಿ ಶಾಸನ ಬಗ್ಗೆ ವಿವರಣೆ, ಹಲ್ಮಿಡಿ ಶಾಸನ ಬರೆದವರು ಯಾರು, ಹಲ್ಮಿಡಿ ಶಾಸನ ಯಾವ ಜಿಲ್ಲೆಯಲ್ಲಿದೆ, ಹಲ್ಮಿಡಿ ಶಾಸನದ ಇತಿಹಾಸ
Halmidi Shasana In Kannada
ಹಲ್ಮಿಡಿ ಶಾಸನ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದ್ದು ಇದು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾನೇ ಉಪಯುಕ್ತವಾದ ಮಾಹಿತಿಯಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
![Spardhavani Telegram](https://i0.wp.com/spardhavani.com/wp-content/uploads/2022/08/1f2b5f36022a78011bcb1f3da1c10253_anim.gif?resize=384%2C96&ssl=1)
Halmidi Shasana Information In Kannada
ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮವು ಕನ್ನಡ ಭಾಷೆಯ ಇತಿಹಾಸದಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ, ಏಕೆಂದರೆ ಇಲ್ಲಿ ಕನ್ನಡದ ಅತ್ಯಂತ ಹಳೆಯ ಶಾಸನ ಕಂಡುಬಂದಿದೆ. ಆದರೆ, ಇಂದಿಗೂ ಈ ಗ್ರಾಮ ಅಜ್ಞಾತವಾಗಿಯೇ ಉಳಿದಿದೆ. ಬೇಲೂರು ಮತ್ತು ಹಳೇಬೀಡಿನ ಹೊಯ್ಸಳ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಸಾಮಾನ್ಯವಾಗಿ ಹಲ್ಮಿಡಿಯನ್ನು ವೀಕ್ಷಿಸಲು ವಿಫಲರಾಗುತ್ತಾರೆ.
![ಹಲ್ಮಿಡಿ ಶಾಸನ ಬಗ್ಗೆ ವಿವರಣೆ | Halmidi Shasana In Kannada Best No1 Information](https://i0.wp.com/spardhavani.com/wp-content/uploads/2022/11/220px-Halmidi2.jpg?resize=220%2C294&ssl=1)
ಹಲ್ಮಿಡಿ ಶಾಸನ ವಿವರಣೆ
ಶಾಸನವು ಕ್ರಿ.ಶ. 450 ರ ಹಿಂದಿನದು ಮತ್ತು ಇದು ಕನ್ನಡ ಅಕ್ಷರಗಳೊಂದಿಗೆ ಇದುವರೆಗೆ ತಿಳಿದಿರುವ ಅತ್ಯಂತ ಹಳೆಯದು. 16 ಸಾಲುಗಳ ಶಾಸನವು ಆಯತಾಕಾರದ ಮರಳುಗಲ್ಲಿನ ಮೇಲೆ ಇದೆ.
![220px Halmidi1](https://i0.wp.com/spardhavani.com/wp-content/uploads/2022/11/220px-Halmidi1.jpg?resize=220%2C251&ssl=1)
ಹಲ್ಮಿಡಿ ಶಾಸನ ಬಗ್ಗೆ ಮಾಹಿತಿ
- ಹಲ್ಮಿಡಿ ಎಂಬುದು ಹಾಸನ ಜಿಲ್ಲೆಯ ಬೇಲೂರು ಸಮೀಪದ ಒಂದು ಊರು
- ಕನ್ನಡ ಸಾಹಿತ್ಯದ ಮೊದಲ ಚಾರಿತ್ರಿಕ ದಾಖಲೆ ಶಾಸನವಾಗಿದೆ
- ಕ್ರಿ.ಶ 450 ರಲ್ಲಿ ರಚಿತವಾಗಿರುವ ಈ ಶಾಸನ ಕದಂಬರ ಶಾಸನವಾಗಿದೆ .
- ಇದೊಂದು ದಾನ ಶಾಸನ
- ಪಲ್ಲವರೊಡನೆ ಯುದ್ಧದಲ್ಲಿ ಹೋರಾಡಿ ಗೆದ್ದ ವಿಜ ಆರಸ ಎಂಬುವನಿಗೆ ಕದಂಬರ ರಾಜರಾದ ಮೃಗೇಶ ಮತ್ತು ನಾಗೇಶ ಎಂಬುವರು ಬಾಳಚ್ಚು (ಖಡ್ಗಕ್ಕೆ ಕೊಟ್ಟ ಮಾನ್ಯ ) ಕೊಟ್ಟರು ಎಂಬುದೇ ಈ ಶಾಸನದ ವಸ್ತು .
- ಈ ಶಾಸನವು 16 ಸಾಲುಗಳಲ್ಲಿ ಕೇವಲ 20 ಶಬ್ದಗಳು ಮಾತ್ರ ಕನ್ನಡ ಶಬ್ದಗಳಾಗಿವೆ .
- ( ನಮಃ ಶ್ರೀಮತ್ …. ಕದಂಬಪನ್ ಕುಸ್ಥಭಟ್ಟೋರನ್ ಆಳೆ ..ಎಲ್ಲಭಟ್ಟಾರಿಮಾ .. ಸುತನೆ . ವಿಜ ಅರಸನ್ನೆ ಬಾಗ್ಗಚ್ಚು ಪಲ್ಮಡಿಉಂ ಮುಳ್ಳವಳ್ಳಿ ಉಂ ಕೊಟ್ಟಾರ್ ಎಂಬ ವಾಕ್ಯಗಳಿವೆ . ಈ ಶಾಸನದಲ್ಲಿ )
![Halmidi3](https://i0.wp.com/spardhavani.com/wp-content/uploads/2022/11/Halmidi3.jpg?resize=296%2C394&ssl=1)
ಹಲ್ಮಿಡಿ ಶಾಸನ ಬರೆದವರು ಯಾರು
ಕದಂಬ ವಶದ ಕಾಕುಸ್ಥವರ್ಮನ ಕಾಲದಲ್ಲಿ ನರಚಿಸಲ್ಪಟ್ಟಿದೆ
ಹಲ್ಮಿಡಿ ಶಾಸನ ಯಾವ ಜಿಲ್ಲೆಯಲ್ಲಿದೆ
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ
FAQ
ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ
ಕೊಪ್ಪಳ
ಹಲ್ಮಿಡಿ ಶಾಸನದ ಕರ್ತೃ
ಕಾಕುಸ್ಥವರ್ಮ
ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ :
ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು
ಸುಭಾಷ್ ಚಂದ್ರ ಬೋಸ್ ಬಗ್ಗೆ ಮಾಹಿತಿ ಕನ್ನಡ