ರನ್ನ ಕವಿ ಪರಿಚಯ | Ranna Information Kannada

ರನ್ನ ಕವಿ ಪರಿಚಯ | Ranna Information Kannada

ರನ್ನ ಕವಿ ಪರಿಚಯ, Ranna Information Kannada, about ranna in kannada, ರನ್ನ ಮಹಾಕವಿಯ ಪರಿಚಯ, ಕನ್ನಡ ಕವಿ ಚಕ್ರವರ್ತಿಗಳು, pdf, notes, essay, GK, kpsc

ರನ್ನ ಕವಿ ಪರಿಚಯ

ರತ್ನತ್ರಯರಲ್ಲಿ ಮೂರನೆಯವನಾದವನು ರನ್ನ

ರನ್ನನು ಇಂದಿನ ಮುಧೋಳದಲ್ಲಿ ಜೈನಮತದ ಬಳೆಗಾರರ ಕುಟುಂಬದಲ್ಲಿ ಹುಟ್ಟಿದವನು .

 • ತಂದೆ – ಜಿನವಲ್ಲಭ ,
 • ತಾಯಿ : ಅತ್ತಿಮಬ್ಬೆ
 • ಪತ್ನಿಯರು: ಶಾಂತಿ ಹಾಗೂ ಜಕ್ಕಿ
 • ಮಕ್ಕಳು : ರಾಯ , ಅತ್ತಿಮಬ್ಬೆ

ಕವಿ ರತ್ನತ್ರಯರು ಯಾರು?

ಪಂಪ ,ಪೊನ್ನ , ರನ್ನ

ರನ್ನನ ಆಶ್ರಯದಾತ ಯಾರು?

ತೈಲಪ

ಕೃತಿಗಳು

 • ಅಜಿತಪುರಾಣ -೧೨ ಆಶ್ವಾಸಗಳ ಪುಟ್ಟ ಕಾವ್ಯ.
 • ಸಾಹಸಭೀಮ ವಿಜಯಂ (ಮಹಾಕವಿ ರನ್ನನ ಗದಾಯುದ್ಧ) – ಕುರುಕ್ಷೇತ್ರದ ಕೊನೆಯ ದಿನದ ಯುದ್ಧಕ್ಕೆ ಸಂಬಂಧಿಸಿದ ಕಥೆಯಾದರೂ,ಸಿಂಹಾವಲೋಕನ ಕ್ರಮದಲ್ಲಿ ಇಡೀ ಮಹಾಭಾರತದ ಕಥೆ ನಿರೂಪಿತವಾಗಿದೆ.
 • ಚಕ್ರೇಶ್ವರ ಚರಿತ
 • ಪರಶುರಾಮ ಚರಿತ
 • ರನ್ನಕಂದ – ೧೨ ಕಂದಪದ್ಯಗಳ ನಿಘಂಟು.

ವಿದ್ಯಾಭ್ಯಾಸ

ಸೌಮ್ಯ ಮುಖದ ಕವಿರತ್ನ ಸೌಮ್ಯನಾಮ ಸಂವತ್ಸರದಲ್ಲಿ (ಎಂದರೆ ಕ್ರಿಸ್ತ ಶಕ ೯೪೯ರಲ್ಲಿ) ಹುಟ್ಟಿದನು. ಅವನ ತಂದೆ ಜಿನವಲ್ಲಭ, ತಾಯಿ ಅಬ್ಬ ಲಬ್ಬೆ. ರನ್ನ ಬಾಲ್ಯದಲ್ಲಿ ನೆರೆಹೊರೆಯ ಮುದ್ದಿನ ಹುಡುಗ. ಚಿಕ್ಕಂದಿನಿಂದ ಪದ್ಯ, ಹಾಡು, ಶ್ಲೋಕಗಳನ್ನು ಕಲಿತು, ಕಟ್ಟಿ, ಹೇಳುವುದರಲ್ಲಿ ಅಪಾರ ಅಕ್ಕರೆ. ಗಟ್ಟಿಮುಟ್ಟಾದ ಮೈಕಟ್ಟು. ಬಳೆಬಳೆದಂತೆ ಕುಲಕಸುಬಾದ ಬಳೆಗಾರ ವೃತ್ತಿ ಬೇಡವೆನಿಸಿತು. ಕುಲಧರ್ಮವಾದ ಜೆನಧರ್ಮವನ್ನು ಅರಿಯುವ ಆಸೆ ಒಂದು ಕಡೆ ; ಕಾವ್ಯ ಕಲೆಯನ್ನು ಕೈವಶಮಾಡಿಕೊಳ್ಳಬೇಕೆಂಬ ಬಯಕೆ ಮತ್ತೊಂದೆಡೆ. ಮುದುವೊಳಲಿನಲ್ಲಿ ಇದಕ್ಕೆ ಅವಕಾಶವಿರಲಿಲ್ಲ.

ವಿದ್ಯಾಭ್ಯಾಸದ ಹಂಬಲದಿಂದ ಹಲವು ಗುರುಗಳನ್ನು ಹುಡುಕುತ್ತಾ ವಿದ್ಯಾ ಭಿಕ್ಷೆಯನ್ನು ಬೇಡಿದನು. ಆದರೆ ಪ್ರತಿಯೊಬ್ಬರೂ ಅವನ ಮನೆತನದ ಬಗ್ಗೆ, ಅವನ ವೃತ್ತಿಯ ಬಗ್ಗೆ ಕೇಳಿ ಆತನಿಗೆ ವಿದ್ಯಾದಾನ ಮಾಡಲು ನಿರಾಕರಿಸಿದರು. ಅಂದಿನ ದಿನಗಳಲ್ಲಿ ರಾಜ ಮನೆತನಕ್ಕೆ, ಬ್ರಾಹ್ಮಣರಿಗೆ ಮಾತ್ರ ಶಿಕ್ಷಣ ಸೀಮಿತವಾಗಿದ್ದುದೇ ಅದಕ್ಕೆ ಪ್ರಮುಖ ಕಾರಣ.
ಒಮ್ಮೆ ಒಬ್ಬ ಗುರುಗಳು ಆತನ ಹೃದಯದಲ್ಲಿ ಕಿಚ್ಚು ಹೊತ್ತಿಸುವಂತೆ ಹೀಗೆ ಹಂಗಿಸಿದರು:
“ಕೊಂಡು ತಂದು, ಹೊತ್ತು ಮಾರಿ, ಲಾಭಗಳಿಸಲು ವಿದ್ಯೆ ಏನು ಬಳೆಯ ಮಲಾರವೇ” ಎಂದು ಜರಿದರು. ಆಗ ರನ್ನನು ಎದೆಗುಂದದೆ ವಿದ್ಯೆಕಲಿಯುವ ಹಟ ತೊಟ್ಟು, ಆಗಿನ ದಿನಗಳಲ್ಲಿ ಜೈನ ಧರ್ಮಕ್ಕೂ ವಿದ್ಯೆಗೂ ನೆಲೆವೀಡು ಎನಿಸಿದ್ದ, ದೂರದ ಗಂಗರಾಜ್ಯಕ್ಕೆ ಪ್ರಯಾಣ ಮಾಡಿದನು.

ಆಗ ರಕ್ಕ ರಾಚಮಲ್ಲನು ಗಂಗಮಂಡಲದ ಅಧಿಪತಿಯಾಗಿದ್ದನು (ಕ್ರಿ.ಶ.೯೭೩-೯೮೬). ಅಲ್ಲಿ ಗಂಗ ದೊರೆಯ ಮಂತ್ರಿ ಯಾಗಿದ್ದವನು ಚಾವುಂಡರಾಯ. ಇವನು ಸ್ವತ: ವಿದ್ಯಾವಂತ, ವಿದ್ಯಾಪಕ್ಷಪಾತಿ ; ಕವಿ ರನ್ನ ಈತನ ಬಳಿಗೆ ಹೋಗಿ ಕಂಡನು, ಪರಿಚಯ ಮಾಡಿಕೊಂಡನು, ವಿದ್ಯೆಯಲ್ಲಿ ಆಸಕ್ತಿ ಹೊಂದಿದ್ದ ಚಾವುಂಡರಾಯನಿಂದ ಸಹಾಯ ಪಡೆಯುವುದು ರನ್ನನಿಗೆ ಕಷ್ಟವಾಗಲಿಲ್ಲ.

ಹೀಗೆ ದೊರೆ ಸಹಾಯದಿಂದ ರನ್ನನು ಅಜಿತ ಸೇನಾಚಾರ್ಯರಂತಹ ಸದ್ಗುರುಗಳ ಬಳಿ ನೆಲಿಸಿ, ಭಾಷೆ ಸಾಹಿತ್ಯಗಳಲ್ಲಿ ಪಾಂಡಿತ್ಯವನ್ನು ಪಡೆದನು ; ಕನ್ನಡ, ಸಂಸ್ಕ್ರತ, ಪ್ರಾಕೃತ ಭಾಷೆಗಳಲ್ಲಿ ನಿಪುಣನಾದನು. ಸಂಸ್ಕೃತದಲ್ಲಿ ರಾಮಾಯಣ ಮಹಾಭಾರತಗಳನ್ನೂ, ಭಾಸ, ಕಾಳಿದಾಸ, ಭಟ್ಟನಾರಾಯಣ, ಬಾಣ ಮುಂತಾದ ಕವಿಗಳ ಗದ್ಯ ಪದ್ಯ ನಾಟಕ ಗ್ರಂಥಗಳನ್ನೂ ಚೆನ್ನಾಗಿ ಓದಿಕೊಂಡನು.

Ranna Information Kannada

ಅತ್ತಿಮಬ್ಬೆ ಎಂಬ ಮಕ್ಕಳು ತನ್ನ ಪೋಷಕರಾದ ಚಾಂವುಡರಾಯ ಹಾಗು ಅತ್ತಿಮಬ್ಬೆಯರ ಹೆಸರನ್ನು ಮಕ್ಕಳಿಗೆ ಇಟ್ಟಿದ್ದಾನೆ .

ಗುರು ಅಜಿತಸೇನಾಚಾರರು ರನ್ನನು ೪ ಕೃತಿಗಳನ್ನು ರಚಿಸಿದ್ದಾನೆಂಬ ಉಲ್ಲೇಖವಿದ್ದರೂ ದೊರೆತಿರುವುದು 2 ಮಾತ್ರ 1. ಅಜಿತ ಪುರಾಣ

2 ) ಚಕ್ರೇಶ್ವರ ಚರಿತ್ರೆ

3) ಸಾಹಸ ಭೀಮ ವಿಜಯ

4 ) ಪರಶುರಾಮ ಚರಿತ್ರೆ

ರನ್ನನು ಗದಾಯುದ್ಧ ಮತ್ತು ಅಜಿತಪುರಾಣ ಎಂಬ ಚಂಪೂ ಗ್ರಂಥಗಳನ್ನು ರಚಿಸಿದ್ದಾನೆ .

ಅಜಿತ ಪುರಾಣವು ಸಗರಚಕ್ರವರ್ತಿಯ ಚರಿತ್ರೆಯನ್ನುಳ್ಳ ಗ್ರಂಥವಾಗಿದೆ .

ಸಾಹಸ ಭೀಮ ವಿಜಯ / ಗದಾಯುದ್ಧ ಮಹಾಭಾರತದ ಕಥೆಯಲ್ಲಿ ತನ್ನ ಆಶ್ರಯದಾತನಾದ ಸತ್ಯಾಶ್ರಯ ಇರೆವಬೆಡಂಗನನ್ನ ಕಾವ್ಯದ ನಾಯಕನಾದ ಭೀಮನೊಂದಿಗೆ ಸಮೀಕರಿಸಿದ್ದಾನೆ .

ಈ ಕಾವ್ಯವು ಪಂಪಭಾರತ ಹಾಗೂ ಭಟ್ಟನಾರಾಯಣ ಕವಿಯ ವೇಣಿ ಸಂಹಾರದಿಂದ ಸ್ಫೂರ್ತಿ ಪಡೆದಿದೆ .

ನಾಟಕೀಯ ರಚಿಸಿರುವ ಶೈಲಿಯಲ್ಲಿ ಗದಾಯುದ್ಧವನ್ನು ರನ್ನನು ಸಿಂಹಾವಲೋಕನ ಕ್ರಮದಿಂದ ಚಿತ್ರಿಸಿರುವುದಾಗಿ ಹೇಳಿದ್ದಾನೆ .

“ ರನ್ನನು ಕೃತಿರತ್ನಮುಮಂ ಪೇಳ್ ಪರೀಕ್ಷಿಪಂಗೆಂಟೆರ್ದೆಯೇ ” ಎಂದು ವಿಮರ್ಶಕರಿಗೆ ಸವಾಲೆಸೆದ ಆತ್ಮ ವಿಶ್ವಾಸದ , ಅಜಿತ ‘ ಪುರಾಣವು 2 ನೇ ತೀರ್ಥಂಕರನಾದ ಅಜಿತ ಸ್ವಾಮಿಯ ಕಥೆಯನ್ನು ಹೇಳಿದ್ದಾರೆ .

ಅಜಿತ ಪುರಾಣದ ಪೀಠಿಕಾ ಭಾಗದಲ್ಲಿ ಅತ್ತಿಮಬ್ಬೆಯ ಮನಃಪೂರ್ವಕವಾಗಿ ಬಣ್ಣಿಸಿ ‘ ಜಿನಧರ್ಮಪಾತಕೆ ‘ ಭಕ್ತಿಯನ್ನು ಕವಿ ಆಕೆಯನ್ನು ಎಂದು ಕೊಂಡಾಡಿದ್ದಾನೆ . ಕವಿಕುಲಚಕ್ರವರ್ತಿ , ಕವಿಜನಚೂಡಾರತ್ನ , ಕವಿತಿಲಕ , ಕವಿ ಚರ್ತುಮುಖ ಕನ್ನಡ ರತ್ನಾತ್ರಯ ಮುಂತಾದ ಬಿರುದುಗಳನ್ನು ಪಡೆದಿದ್ದಾನೆ

ಬಿರುದುಗಳು
 • ಕವಿಚಕ್ರವರ್ತಿ
 • ಕವಿರತ್ನ
 • ಅಭಿನವ ಕವಿಚಕ್ರವರ್ತಿ
 • ಕವಿ ರಾಜಶೇಖರ
 • ಕವಿಜನ ಚೂಡಾರತ್ನ
 • ಕವಿ ತಿಲಕ
 • ಉಭಯಕವಿ ಮುಂತಾದವುಗಳು..

ಇದನ್ನು ಓದಿ :ಪಂಪ ಕವಿ ಪರಿಚಯ ಕನ್ನಡ

ಇನ್ನಷ್ಟು ಮಾಹಿತಿ ಈ ಕೆಳಗೆ ನೋಡಿ

ವಡ್ಡಾರಾಧನೆ ಕೃತಿ ಬಗ್ಗೆ ಮಾಹಿತಿ

ಕವಿರಾಜಮಾರ್ಗ ಬಗ್ಗೆ ಮಾಹಿತಿ

ವೆಬ್ಸೈಟ್

Leave a Reply

Your email address will not be published. Required fields are marked *