ಕನ್ನಡ ನುಡಿಗಟ್ಟುಗಳು | Nudigattugalu in Kannada

ಕನ್ನಡ ನುಡಿಗಟ್ಟುಗಳು | Nudigattugalu in Kannada

ಕನ್ನಡ ನುಡಿಗಟ್ಟುಗಳು, Nudigattugalu in Kannada, KANNADA GRAMMAR, nudigattu in kannada, example, ನುಡಿಗಟ್ಟುಗಳು ಉದಾಹರಣೆ, pdf, notes, vyakarana

ಕನ್ನಡ ನುಡಿಗಟ್ಟುಗಳು


ಗಾಯದ ಮೇಲೆ ಬರೆ ಎಳೆ : ಕಷ್ಟದ ಮೇಲೆ ಕಷ್ಟಕೊಡು .

ಗಾಳ ಹಾಕು : ಪ್ರಲೋಭನೆ ತೋರಿಸು ; ಮರುಳು ಗೊಳಿಸು .

ಗಾಳಿ ಗುದ್ದಿ ಮೈ ನೋಯಿಸಿಕೊಳ್ಳು : ವ್ಯರ್ಥವಾದ ಕೆಲಸದಲ್ಲಿ ತೊಡಗು

ಗಾಳಿಗೆ ತೂರಿಬಿಡು : ನಿರ್ಲಕ್ಷಿಸು

ಗಾಳಿಗೋಪುರ ಕಟ್ಟು : ಬರಿಯ ಕಲ್ಪನೆಗಳನ್ನು ಮಾಡುತ್ತಿರು .

ಗಾಳಿ ಬೀಸು : ಪ್ರಭಾವ ಬೀರು ; ಮುಗಿಯಲು ಬಿಡದಿರು .

ಗಾಳಿ ಸಮಾಚಾರ : ಖಚಿತವಲ್ಲದ ವಾರ್ತೆ ; ಹಾರಿಕೆ ಸುದ್ದಿ .

ಗಾಳಿ ಹಾಕು : ಉತ್ತೇಜಿಸು .

ಗುಟುಕುನೀರು ಕುಡಿಸು : ಪ್ರತೀಕಾರಮಾಡು ; ತೊಂದರೆಕೊಡು .

ಗುಡ್ಡವನ್ನು ಬೆಟ್ಟ ಮಾಡು : ಸಣ್ಣದನ್ನು ದೊಡ್ಡದು ಮಾಡಿಹೇಳು .

ಗುಡಾರ ಎತ್ತು : ಹೊರಡು .

ಗೋಣು ಚೆಲ್ಲು : ಸಾಯು .

ಗೋತ ಹೊಡಿ : ಸಾಯು .

ಗೋರಿ ತೋಡು : ಹಾಳುಮಾಡು ; ಚಕ್ರಹಾಕು

ಹಾಳು ಮಾಡಿಕೊಳ್ಳು . : ತಪ್ಪಿಸಿಕೊಳ್ಳು ; ಮೋಸಮಾಡು ,

ಚಕಾರವೆತ್ತು : ಆಕ್ಷೇಪಣೆ ಮಾಡು .

ಚಟ್ಟಿಯಾಗು : ಅರೆದುಹೋಗು ; ಕಷ್ಟಕ್ಕೆ ಸಿಕ್ಕು .

ಚಳ್ಳೆಹಣ್ಣು ತಿನ್ನಿಸು : ಕಷ್ಟಕೊಡು ; ಮೋಸಪಡಿಸು .

ಚಿಟಿಕೆ ಚಪ್ಪರ : ಸಂಕ್ಷೇಪವಾಗಿ ; ತೀವ್ರಗತಿಯಿಂದ .

ಚಿಟುಕು , ಮುಳ್ಳಾಡಿಸು : ಬಿಡದೆ ಒಂದೇ ಸಮನೆ ತೊಂದರೆ ಪಡಿಸು .

ಜನ್ಮ ಜಾಲಾಡು : ಚೆನ್ನಾಗಿ ಬಯ್ಯು

ಜುಟ್ಟು ಕೈಗೆ ಸಿಗು : ವಶವಾಗು ; ಹಿಡಿತಕ್ಕೆ ಸಿಕ್ಕು .

ಜೇಬಿಗೆ ತೂತು ಬೀಳು : ಹಣ ಖರ್ಚಾಗು .

ಜೇಬಿಗೆ ಹಾಕಿಕೊಳ್ಳು : ವಶಮಾಡಿಕೊಳ್ಳು .

ಟೋಪಿ ಹಾಕು : ಮೋಸಮಾಡು ,

ಡಂಗುರ ಹೊಡ : ಸಾರು ; ಘೋಷಿಸು

Nudigattugalu in Kannada

ಡುಂಕಿ ಹೊಡೆ : ಅನುತ್ತೀರ್ಣನಾಗು

ತಂಪುಹೊತ್ತಿನಲ್ಲಿ ನೆನೆ : ಬಹಳ ಕೃತಜ್ಞತೆಯನ್ನು ತೋರಿಸು .

ತಣ್ಣೀರೆರಚು : ಉತ್ಸಾಹಭಂಗಮಾಡು

ತನ್ನ ಕಾಲ ಮೇಲೆ ತಾನು ನಿಲ್ಲು : ಸ್ವಾವಲಂಬಿಯಾಗು .

ತಲೆ ಎತ್ತಿ ತಿರುಗು : ಮರ್ಯಾದೆಯಿಂದ ಬದುಕು ,

ತಲೆ ಓಡದಿರು : ಏನೂ ತೋಚದಿರು .

ತಲೆಕೆರೆ : ಚಿಂತಿಸು .

ತಲೆ ಕೊಡು : ಭಾರವಹಿಸಿಕೊಳ್ಳು .

ತಲೆಗೆಕಟ್ಟು : ಒತ್ತಾಯದಿಂದ ಹೇರು , ಜವಾಬ್ದಾರಿ ಹೊರಿಸು .

ತಲೆಗೆ ತರು : ತೊಂದರೆಗೆ ಸಿಕ್ಕಿಸು .

ತಲೆಗೆಹಚ್ಚಿಕೊಳ್ಳು : ಬಹಳವಾಗಿ ಚಿಂತಿಸು .

ತಲೆಗೆ ಹತ್ತು : ಅರ್ಥವಾಗು . ತಲೆಗೆ ಹಿಡಿ ,ಅರ್ಥವಾಗು

ತಲೆ ತಪ್ಪಿಸು : ಜಾರಿಕೊಳ್ಳು ; ಕೈಗೆ ಸಿಗದಿರು .

ತಲೆತಾಕು : ಕಷ್ಟಬರು ; ಅನುಭವಕ್ಕೆ ಬರು .

ತಲೆ ತಿನ್ನು : ಕಾಡು ; ಕಾಡಿಸು .

ತಲೆ ತಿರುಗು : ಬುದ್ದಿ ಬದಲಾಗು ; ಅಹಂಕಾರ ಪುಟಾಗು .

ತಲೆ ತೊಳೆದುಕೊಳ್ಳು : ಸಂಬಂಧವನ್ನು ಸಂಪೂರ್ಣವಾಗಿ ಕಳೆದುಕೊಳ್ಳು .

ತಲೆದೂಗು : ಮೆಚ್ಚುಗೆ ಸೂಚಿಸು ತಲೆ ಬಿದ್ದುಹೋಗು : ತುಂಬ ಶ್ರಮವಾಗು ; ಸಾಯು .

ತಲೆ ಬಿಸಿಯಾಗು : ಕೋಪ , ಕೆಲಸ ಮುಂತಾದವುಗಳಿಂದ ಮೆದುಳಿಗೆ ಹೆಚ್ಚು ಶ್ರಮವಾಗು ,ಕಾತುರಕ್ಕೊಳಗಾಗು

ತಲೆ ಬೋಳಿಸು : ನಷ್ಟವಾಗು

ತಲೆಭಾರ : ದೊಡ್ಡ ಹೊಣೆಗಾರಿಕೆ ,

ತಲೆ ಮಾಸಿದವ : ದುರದೃಷ್ಟವಂತ ; ಅನುನುಭವಿ .

ತಲೆಯ ಮೇಲೆ ಕಲ್ಲುಹಾಕು : ನಾಶಮಾಡು , ತೊಂದರೆ ಯುಂಟುಮಾಡು

ತಲೆಯಮೇಲೆ ಕೂರಿಸಿಕೊಳ್ಳು : ಅತಿ ಮುದ್ದುಮಾಡು : ತುಂಬ ಸಲಿಗೆ ಕೊಡು

ತಲೆಯ ಮೇಲೆ ಕೈ ಹೊತ್ತು ಕುಳಿತು ಕೊಳ್ಳು : ಏನೂ ತೋಚದಂತಾಗು : ಚಿಂತಿತನಾಗು .

ತಲೆಯ ಮೇಲೆ ಚಪಡಿ ಎಳೆ : ನಾಶಮಾಡು ; ತೊಂದರೆ ಯುಂಟುಮಾಡು

ಕನ್ನಡ ನುಡಿಗಟ್ಟುಗಳು

ನೆಲಸಮಮಾಡು : ನಾಶಮಾಡು .

ನೊಗಕ್ಕೆ ತಲೆಕೊಡು : ಭಾರ ವಹಿಸಿಕೊಳ್ಳು

ನೊಣಹೊಡೆ : ಕೆಲಸವಿಲ್ಲದೆ ಸೋಮಾರಿಯಾಗಿ ಕುಳಿತಿರು .

ಪಂಚಪ್ರಾಣ : ಅತಿಪ್ರಿಯ ವಸ್ತು ಅಥವಾ ವ್ಯಕ್ತಿ .

ಪಂಚಾಂಗ ಓದು : ಒಣಹರಟೆ ಹೊಡೆ .

ಪಂಚಾಂಗ ಬಿಚ್ಚು : ಒಣಹರಟೆಗೆ ಪ್ರಾರಂಭಿಸು .

ಪಾಠಕಲಿಸು : ಬುದಿಕಲಿಸು .

ಪಾತಾಳಕ್ಕಿಳಿದು ಹೋಗು : ದುಃಖದಿಂದ ಕುಸಿದು ಹೋಗು .

ಪಾಷಾಣ ಹೃದಯ : ಕಠಿಣ ಮನಸ್ಸು .

ಪಿಷ್ಟಪೇಷಣ : ಹೇಳಿದ್ದನ್ನೇ ತಿರುಗಿ ತಿರುಗಿ ಹೇಳುವುದು .

ಪುಕ್ಕ ಕತ್ತರಿಸು : ಗರ್ವ ಇಳಿಸು ; ಹತೋಟಿಯಲ್ಲಿಡು .

ಪುಸ್ತಕದ ಬದನೆಕಾಯಿ : ಪುಸ್ತಕದಲ್ಲಿ ಹೇಳಿದ್ದು ಮಾತ್ರ ಅನುಭವಕ್ಕೆ ಬಾರದ್ದು : ವ್ಯವಹಾರ ಜ್ಞಾನ ಇಲ್ಲದ . ಪ್ರಪಂಚ ಕಾಣದವ : ಅನುಭವವಿಲ್ಲದವ .

ಪ್ರಾಣ ಹಿಂಡು : ಬಹಳವಾಗಿ ಪೀಡಿಸು ; ಕಾಟಕೊಡು .

ಪ್ರಾಣಹೋಗು : ಬಹಳ ಕಷ್ಟವಾಗು .

ಬಡಪಟ್ಟಿಗೆ : ಸುಲಭವಾಗಿ

ಬಣ್ಣ ಕಟ್ಟಿ ಹೇಳು : ಉಪ್ಪೇಕ್ಷಿಸಿ ಹೇಳು .

ಬಣ್ಣ ಕಟ್ಟು : ಕಳೆಯೇರಿಸು ; ಇಲ್ಲದ್ದನ್ನು ಸೇರಿಸು .

ಬಣ್ಣದ ಚಿಟ್ಟೆ : ಸೊಗಸುಗಾತಿ ,

ಬಣ್ಣ ಬದಲಾಯಿಸು : ಸ್ವಭಾವ ಅಥವಾ ಧೋರಣೆ ಯನ್ನು ಬದಲಾಯಿಸು ; ಒಂದೊಂದು ಸಲ ಒಂದೊಂದು ತೆರನಾಗಿರು .

ಬಣ್ಣ ಬಯಲಿಗೆ ಬರು : ಒಳಗುಟ್ಟು ಗೊತ್ತಾಗು ; ರಹಸ್ಯ ಬಯಲಾಗು .

ಬದ್ಧಕಂಕಣನಾಗು : ಸಂಕಲ್ಪ ಮಾಡಿದವನಾಗು .

ಬಲವಂತ ಮಾಘಸ್ನಾನ : ಒತ್ತಾಯದ ಕೆಲಸ .

ಬಲಿಯಾಗು : ನಾಶಕ್ಕೆ ಗುರಿಯಾಗು .

ಬಲೆಗೆ ಬೀಳು : ವಶಕ್ಕೆ ಸಿಕ್ಕು .

ಬಳೆ ತೊಡಿಸು : ಬಂಧಿಸು ; ಕೋಳ ಹಾಕು ; ಅವಮಾನ ಪಡಿಸು .

ಬಳಗೂಡು : ಹೇಡಿಯಾಗು .

ಬಾದರಾಯಣ ಸಂಬಂಧ : ಸುತ್ತು ಬಳಸಿನ ಸಂಬಂಧ .

ಬಾಯಿಕಟ್ಟು : ಮಾತನಾಡದಿರು ; ದಾಕ್ಷಿಣ್ಯಕ್ಕೆ ಸಿಕ್ಕು ; ದಾಕ್ಷಿಣ್ಯಕ್ಕೆ ಸಿಕ್ಕಿಸು .

ಇನ್ನಷ್ಟು ಓದಿ …….

ಇತರೆ ಪ್ರಮುಖ ವಿಷಯಗಲಮಾಹಿತಿ

ಚಂಪೂ ಸಾಹಿತ್ಯದ ಕೃತಿಗಳು

ಜ್ಞಾನಪೀಠ ಪ್ರಶಸ್ತಿ ವಿಜೇತರು

9ನೇ ತರಗತಿ ಕನ್ನಡ

ನುಡಿಗಟ್ಟುಗಳು ಮತ್ತು ಅದರ ಅರ್ಥ

ಬ್ಯುಸಿನೆಸ್ ಮಾಡಲುಇಲ್ಲಿದೆ ಮಾಹಿತಿ

1 thoughts on “ಕನ್ನಡ ನುಡಿಗಟ್ಟುಗಳು | Nudigattugalu in Kannada

Leave a Reply

Your email address will not be published. Required fields are marked *