vriddhi sandhi in kannada || ವೃದ್ಧಿಸಂಧಿ | vriddhi sandhi examples in kannada

vriddhi sandhi in kannada || ವೃದ್ಧಿಸಂಧಿ | vriddhi sandhi examples in kannada

ವೃದ್ಧಿಸಂಧಿ: 

ಅ, ಆ ಕಾರಗಳಿಗೆ ಏ, ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವು, ಓ, ಔ ಕಾರಗಳು ಪರವಾದರೆ ಅವೆರಡರ ಸಾಧನೆದಲ್ಲಿ ಔ ಕಾರವು ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿಯೆನ್ನುವರು.

ಲೋಕ + ಏಕವೀರ = ಲೋಕೈಕವೀರ

ಜನ + ಐಕ್ಯ = ಜನೈಕ್ಯ

ವಿದ್ಯಾ + ಐಶ್ವರ್ಯ = ವಿದ್ಯೈಶ್ವರ್ಯ

ಘನ + ಔದಾರ್ಯ = ಘನೌದಾರ್ಯ

ಮಹಾ + ಔದಾರ್ಯ = ಮಹೌದಾರ್ಯ

 ( ೧ ) ಅವನು ಏಕೈಕ ವೀರನು .

( ೨ ) ಕೃಷ್ಣದೇವರಾಯ ಅಷ್ಟಶ್ವರದಿಂದ ಕೂಡಿದ್ದನು .

( ೩ ) ಹಿಮಾಲಯದಲ್ಲಿ ವನೌಷಧಿಗಳುಂಟು .

( ೪ ) ನಾರಣಪ್ಪ ಮಹೌನ್ನತ್ಯದಿಂದ ಕೂಡಿದ ಕವಿ .

ಈ ಮೇಲಿನ ವಾಕ್ಯಗಳಲ್ಲಿ ಬಂದಿರುವ ‘ ಏಕೈಕ ‘ , ‘ ಅಷ್ಟೆಶ್ವರ ‘ , ‘ ವನೌಷದಿ ‘ , ‘ ಮಹೌನ್ನತ್ಯ ‘ ಪದಗಳನ್ನು ಬಿಡಿಸಿ ಬರೆದರೆ ಅವು ಈ ಕೆಳಗಿನಂತೆ ಆಗುವುವು :

ಏಕ + ಏಕ = ಏಕ್ + ಐಕ ( ಅ + ಏ + ಐ )

( ಅ + ಏ )

ಅಷ್ಟ + ಐಶ್ವರ = ಅಷ್ + ಐಶ್ವಯ್ಯ = ಅಷ್ಟೆಶ್ವರ ( ಅ + ಐ = ಐ )

( ಅ + ಐ )

ವನ + ಓಷಧಿ = ವನ್ + ಔಷಧಿ = ವನೌಷಧಿ ( ಆ + ಓ = ಔ )

( ಅ + ಓ )

ಮಹಾ + ಔನ್ನತ್ಯ = ಮಪ್ + ಔನ್ನತ್ಯ = ಮಡೌನ್ನತ್ಯ ( ಆ + ಔ = ಔ )

ಪೂರ್ವದಲ್ಲಿ ಎಲ್ಲ ಕಡೆಗೂ ‘ ಅ ‘ ಅಥವಾ ‘ ಆ ‘ ಸ್ವರಗಳಿವೆ . ಎದುರಿಗೆ ಏ , ಐ , ಓ , ಔ ಪರವಾಗಿವೆ . ಏ ಅಥವಾ ಐ ಪರವಾದಾಗ ಒಂದು ‘ ಐ ‘ ಕಾರವೂ , ಓ ಅಥವಾ ಔ ಪರವಾದಾಗ ಒಂದು ಔ ‘ ಕಾರವೂ ಆದೇಶಗಳಾಗಿ ಅಂದರೆ ಆ ಎರಡೂ ಸ್ವರಗಳ ಸ್ಥಾನದಲ್ಲಿ ಬಂದಿವೆ . ಹಾಗಾದರೆ ಇದರ ಸೂತ್ರವನ್ನು ಹೀಗೆ ಹೇಳಬಹುದು :

 ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ ಎ ‘ ಕಾರವೂ , ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ ಔ ‘ ಕಾರವೂ ಆದೇಶಗಳಾಗಿ ಬರುತ್ತದೆ . ಇದಕ್ಕೆ ‘ ವೃದ್ಧಿಸಂಧಿ ‘ ಯೆನ್ನುವರು .

ಉದಾಹರಣೆಗೆ :

ಲೋಕ + ಏಕವೀರ = ಲೋಕವೀರ ( ಅಕಾರಕ್ಕೆ ಪ್ರಕಾರ ಪರವಾಗಿ ಏಕಾರಾದೇಶ )

( ಅ + ಎ )

. ಜನ + ಐಕ್ಯ = ಜನೈಕ್ಯ ( ಅಕಾರಾಕ್ಕೆ ಐಕಾರ ಪರವಾಗಿ ಏಕಾರಾದೇಶ )

( ಅ + ಐ )

ಜಲ + ಓಘ = ಜಲೌಘ ( ಆಕಾರಕ್ಕೆ ಓಕಾರ ಪರವಾಗಿ ಔಕಾರಾದೇಶ )

ಆ+ ಓ

vriddhi sandhi in kannada

samskrutha sandhi examples in kannada ।। ಸಂಸ್ಕೃತ ಸ್ವರ ಸಂಧಿಗಳು

ನಾವು ದೇಶೀಯ ಶಬ್ದಗಳೊಂದಿಗೆ ಸಂಸ್ಕೃತ ಶಬ್ದಗಳನ್ನು ಬಳಸುತ್ತೇವೆ . ಪೂರ್ವಪದ ಮತ್ತು ಉತ್ತರಪದಗಳೆರಡೂ ಸಂಸ್ಕೃತ ಪದಗಳೇ ಇದ್ದ ಸಂಧಿಗಳನ್ನು ‘ ಸಂಸ್ಕೃತ ಸಂಧಿ ‘ ಎಂದು ಹೆಸರು.

ನಾವು ದೇಶೀಯ ಶಬ್ದಗಳೊಂದಿಗೆ ಸಂಸ್ಕೃತ ಶಬ್ದಗಳನ್ನು ಬಳಸುತ್ತೇವೆ . ಪೂರ್ವಪದ ಮತ್ತು ಉತ್ತರಪದಗಳೆರಡೂ ಸಂಸ್ಕೃತ ಪದಗಳೇ ಇದ್ದ ಸಂಧಿಗಳನ್ನು ‘ ಸಂಸ್ಕೃತ ಸಂಧಿ ‘ ಎಂದು ಹೆಸರು . ಸಂಸ್ಕೃತ ಸಂಧಿಗಳಲ್ಲಿ ಸ್ವರ , ವ್ಯಂಜನ ಸಂಧಿಗಳಿವೆ.

ಸಂಸ್ಕೃತ ಸ್ವರ ಸಂಧಿಗಳು:

ಸವರ್ಣಧೀರ್ಘ ಸಂಧಿ

ಗುಣ ಸಂಧಿ

ವೃದ್ಧಿಸಂಧಿ

ಯಣ್ ಸಂಧಿ

ಸವರ್ಣಧೀರ್ಘ ಸಂಧಿ: 

ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.

ಉದಾಹರಣೆ : 

ಲಕ್ಷೀ + ಈಶ = ಲಕ್ಷ್ಮೀಶ

ದೇವ + ಅಸುರ = ದೇವಾಸುರ

ಸುರ + ಅಸುರ = ಸುರಾಸುರ

ಕವಿ + ಇಂದ್ರ = ಕವೀಂದ್ರ

ಗಿರಿ + ಈಶ = ಗಿರೀಶ

ಮಹಾ + ಆತ್ಮ = ಮಹಾತ್ಮ

ಗುಣ ಸಂಧಿ: 

ಅ, ಆ ಕಾರಗಳಿಗೆ ಇ, ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಏ’ ಕಾರವು, ಉ, ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಓ’ ಕಾರವು, ಋ ಕರವು ಪರವಾದರೆ ಅವೆರಡರ ಸ್ಥಾನದಲ್ಲಿ ‘ಆರ್’ ಕಾರವು ಆದೇಶಗಳಾಗಿ ಬರುತ್ತವೆ. ಇದಕ್ಕೆ ‘ಗುಣಸಂಧಿ’ ಎಂದು ಹೆಸರು.

ಉದಾಹರಣೆ : 

ಸುರ + ಇಂದ್ರ = ಸುರೇಂದ್ರ

ಮಹಾ + ಋಷಿ = ಮಹರ್ಷಿ

ಧರಾ + ಇಂದ್ರ = ಧರೇಂದ್ರ

ಧರಾ + ಇಂದ್ರ = ಧರೇಂದ್ರ

ಮಹಾ + ಈಶ್ವರ = ಮಹೇಶ್ವರ

ದೇವ + ಋಷಿ = ದೇವರ್ಷಿ

ಚಂದ್ರ + ಉದಯ = ಚಂದ್ರೋದಯ

ಯಣ್ ಸಂಧಿ: 

ಸಂಧಿ ಮಾಡುವಾಗ ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ, ಈ, ಕಾರಗಳಿಗೆ ‘ಯ್’ ಕಾರವು, ಉ, ಊ, ಕಾರಗಳಿಗೆ ‘ವ್’ ಕಾರವು, ಋ ಕಾರಕ್ಕೆ ‘ರ್’ ವು ಆದೇಶವಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು.

ಅತಿ + ಅವಸರ = ಅತ್ಯವಸರ

ಜಾತಿ + ಅತೀತ = ಜಾತ್ಯಾತೀತ

ಮನು + ಆದಿ = ಮನ್ವಾದಿ

ಕೋಟಿ + ಅಧೀಶ = ಕೋಟ್ಯಾಧೀಶ

ಗತಿ + ಅಂತರ = ಗತ್ಯಂತರ

ಪ್ರತಿ + ಉತ್ತರ = ಪ್ರತ್ಯುತ್ತರ

ಅತಿ + ಆಸೆ = ಅತ್ಯಾಸೆ

ಗುರು + ಆಜ್ಞೆ = ಗುರ್ವಾಜ್ಞೆ

Leave a Reply

Your email address will not be published. Required fields are marked *