prakruthi bhava in kannada ।। ಪ್ರಕೃತಿ ಭಾವ | ಕನ್ನಡ ವ್ಯಾಕರಣ | Kannada Grammar

pngtree dark abstract background with overlap layers image 305024

prakruthi bhava in kannada ।। ಪ್ರಕೃತಿ ಭಾವ | ಕನ್ನಡ ವ್ಯಾಕರಣ | Kannada Grammar

ಸ್ವರದ ಮುಂದೆ ಸ್ವರ ಬಂದರೂ ಸಂಧಿ ಕಾರ್ಯ ನಡೆಯದಿರುವುದೇ ಪ್ರಕೃತಿ ಭಾವ . ಅಂದರೆ ಪದಗಳು ಅವುಗಳ ಮೂಲ ಸ್ಥಾನವನ್ನು ಉಳಿಸಿಕೊಳ್ಳುತ್ತವೆ .
ಇದುವರೆಗೆ ಕನ್ನಡದ ಸಂಧಿಗಳಾದ ಲೋಪ , ಆಗಮ , ಆದೇಶ ಸಂಧಿಗಳ ವಿಚಾರವಾಗಿ ತಿಳಿದಿರಿ .

ಸ್ವರದ ಮುಂದೆ ಸ್ವರ ಬಂದರೆ ಲೋಪ ಅಥವಾ ಆಗಮಗಳಲ್ಲಿ ಯಾವುದಾದ ರೊಂದು ಸಂಧಿಯಾಗಬೇಕು ಎಂದು ಹಿಂದೆ ಹೇಳಲಾಯಿತು . ಆದರೆ ಈ ಕೆಳಗಿನ ಕೆಲವು ಉದಾಹರಣೆ ನೋಡಿರಿ :

prakruthi bhava in kannada

ಅಹಹಾ + ಎಷ್ಟು ಚೆನ್ನಾಗಿದೆ ?

ಅಯ್ಯೋ + ಇದೇನು ?

ಓಹೋ + ಇದೇನು ?

ಓಹೋ + ಅವನು ಬಂದನೇ ?

ಅಕ್ಕಾ + ಇತ್ತ ಬಾ

prakruthi bhava in kannada

ಮೇಲಿನ  ವಾಕ್ಯಗಳನ್ನು ನೋಡಿರಿ . ಅಹಹಾ + ಎಷ್ಟು ಚೆನ್ನಾಗಿದೆ , ‘ ಆ ‘ ಕಾರಕ್ಕೆ ( ಪ್ ವ್ಯಂಜನದ ಮುಂದಿನ ಆಕಾರಕ್ಕೆ ) ‘ ಎ ‘ ಕಾರ ಪರವಾಗಿದೆ ( ಎದುರಿಗೆ ಬಂದಿದೆ ) , ಹಿಂದೆ ಹೇಳಿದ ನಿಯಮದ ಪ್ರಕಾರ ಇಲ್ಲಿ ಯಕಾರಾಗಮವಾಗಬೇಕಾಗಿತ್ತಲ್ಲವೆ ? ಅದರಂತೆ , “ ಅಯ್ಯೋ + ಇದೇನು ” ಎಂಬಲ್ಲಿ ಓ ಕಾರದ ಮುಂದೆ ಇ ಕಾರ ಬಂದಿದೆ . “ ಓಹೋ + ಇದೇನು ” ಎಂಬಲ್ಲಿ ಓ ಕಾರದ ಮುಂದೆ ಇ ಕಾರ ಬಂದಿದೆ , “ ಅಕ್ಕಾ + ಇತ್ತ ” ಎಂಬಲ್ಲಿಯೂ ಆ ಕಾರದ ಮುಂದೆ ಇ ಕಾರ ಬಂದಿದೆ . ಈ ನಾಲ್ಕೂ ಕಡೆಯಲ್ಲೂ ಸ್ವರದ ಮುಂದೆ ಸ್ವರ ಬಂದಿದ್ದರೂ ಲೋಪವನ್ನಾಗಲಿ , ಆಗಮವನ್ನಾಗಲಿ ಮಾಡಲೇಬಾರದು . ಅವು ಹೇಗಿವೆಯೋ ಹಾಗೇ ಬಿಡಬೇಕು . ಹೀಗೆ ಇದ್ದ ರೀತಿಯಲ್ಲೇ ಇರುವುದಕ್ಕೆ ” ಪ್ರಕೃತಿಭಾವ ” ಎಂದು ವ್ಯಾಕರಣದಲ್ಲಿ ಹೇಳುತ್ತಾರೆ .

Leave a Reply

Your email address will not be published. Required fields are marked *