ಪತ್ರ ಲೇಖನ | Patra Lekhan In Kannada

patra lekhan in kannada

patra lekhan in kannada, ಪತ್ರ ಲೇಖನ, kasagi patra lekhana in kannada, kannada patra lekhana galu, kannada letter writing in kannada

Patra Lekhan In Kannada

Spardhavani Telegram

ತಂದೆಯವರಿಗೊಂದು ಪತ್ರ ಬರೆಯಿರಿ .

ಗೆ ,

ದ ಪ್ರಗತಿಯನ್ನು ತಿಳಿಸಿ , ದಾವಣಗೆರೆಯಲ್ಲಿರುವ ನಿಮ್ಮ

ಪೂಜ್ಯ ತಂದೆಯವರಿಗೆ ,

ಬೆಂಗಳೂರಿನಿಂದ ನಿಮ್ಮ ಚಿರಂಜೀವಿ ರಮೇಶನು ತಿಳಿಸುವ ವಂದನೆಗಳು . ಇಲ್ಲಿ ನಾನು ನಿಮ್ಮ ಆಶೀರ್ವಾದದಿಂದ ಆರೋಗ್ಯದಿಂದ ಇದ್ದೇನೆ . ಊರಲ್ಲಿ ನೀವು ಕ್ಷೇಮದಿಂದ ಇರುವಿರೆಂದು ಭಾವಿಸಿರುವೆ .

ಶ್ರೀ ಹರೀಶರಾವ ಕೆ . ಬಿ . 202 / ಬಿ . ಪಿ.ಜೆ. ಎಕ್ಸಟೆನಶನ್ ದಾವಣಗರ ಯಿಂದ ,

patra lekhan in kannada

ಇಲ್ಲಿ ನನ್ನ ಅಭ್ಯಾಸ ಸರಿಯಾಗಿ ನಡೆದಿದೆ . ಶಾಲೆಯಲ್ಲಿ ಉತ್ತಮ ಪರಿಸರ , ಒಳ್ಳೆಯ ಶಿಕ್ಷಕ ವರ್ಗ , ಆತ್ಮೀಯ ಸ್ನೇಹಿತರು ಇದ್ದಾರೆ . ಗುರುಗಳು ನಮಗೆ ಚೆನ್ನಾಗಿ ಪಾಠ ಮಾಡುತ್ತಾರೆ . ನಾನು ಸ್ನೇಹಿತರೊಂದಿಗೆ ಕೂಡಿಕೊಂಡು ಶಾಲೆಯ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವ ಎಲ್ಲ ಶಿಕ್ಷಕರಿಗೆ ಮೆಚ್ಚಿನ ವಿದ್ಯಾರ್ಥಿ ಎನಿಸಿರುವೆ . ಎಸ್.ಎಸ್.ಎಲ್.ಸಿ.ಗೆ ಪಬ್ಲಿಕ್ ಪರೀಕ್ಷೆ ಇರುವುದರಿಂದ ಕಷ್ಟಪಟ್ಟು ಅಭ್ಯಾಸ ಮಾಡುವೆ . ಶಾಲೆಗೆ ಪ್ರಥಮ ಸ್ಥಾನದಲ್ಲಿ . ಪಾಸಾಗುವ ಗುರಿ ನನ್ನದು . ಇದಕ್ಕೆ ನಿಮ್ಮ ಆಶೀರ್ವಾದವನ್ನು ಸದಾ ಬಯಸುವೆ.

ಮನೆಯಲ್ಲಿ ತಾಯಿಯವರಿಗೆ ನನ್ನ ವಂದನೆಗಳನ್ನು ತಿಳಿಸಿರಿ . ಸೋದರ ಸೋದರಿಯರಿಗೆ ನನ್ನ ನೆನವುಗಳು .

ರಮೇಶ     

ಸರಕಾರಿ ಪ್ರೌಢಶಾಲೆ ,

ಹತ್ತನೆಯ ತರಗತಿ

ಬೆಂಗಳೂರು 10-6-2012

ನಿಮ್ಮ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವದ ವರದಿಯನ್ನು ಪ್ರಕಟಿಸುವಂತೆ ಕೋರಿ ಹಾಸನದ ಪ್ರಜಾವಾಣಿ ದಿನಪತ್ರಿಕೆಯ ಸಂಪಾಧಕರಿಗೆ ಒಂದು ಮನವಿ ಪತ್ರವನ್ನು ಬರೆಯಿರಿ.

ಮನವಿ ಪತ್ರ

ಇವರಿಂದ,

          ರಾಕೇಶ,

         10ನೇ ತರಗತಿ,

         ಸರ್ಕಾರಿ ಪ್ರೌಢಶಾಲೆ, ಹಂಡ್ರಂಗಿ.

ಇವರಿಗೆ,

         ಸಂಪಾದಕರು,

         ಪ್ರಜಾವಾಣಿ ದಿನಪತ್ರಿಕೆ,

         ಹಾಸನ ವಿಭಾಗ, ಹಾಸನ.

ಮಾನ್ಯರೇ,

                             ವಿಷಯ:-  ಶಾಲಾ ವಾರ್ಷಿಕೋತ್ಸವದ ವರದಿಯನ್ನು ಪತ್ರಿಕೆಯಲ್ಲಿ ಪ್ರಕಟಿಸುವಂತೆ ಕೋರಿ.

          ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, 2019-20ನೇ ಸಾಲಿನ ಶಾಲಾ ವಾರ್ಷಿಕೋತ್ಸವವು ದಿನಾಂಕ 11.08.2021 ರಂದು ಜರುಗಿತು.  ಈ ಸಮಾರಂಭಕ್ಕೆ ನಮ್ಮ ತಾಲ್ಲೂಕಿನ ಶಾಸಕರು ಆಗಮಿಸಿದ್ದರು, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಕ್ರೀಡೆಯಲ್ಲಿ ಮತ್ತು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಶಾಲಾ ಮುಖ್ಯ ಶಿಕ್ಷಕರು ಮಾತನಾಡಿ, ಶಾಲೆಗೆ ಅಗತ್ಯವಿರುವ  ಸೌಲಭ್ಯಗಳನ್ನು ಒದಗಿಸಿ ಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು. ತದನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಈ ಸಮಾರಂಭದ ಕುರಿತು ವಿವರವಾದ ವರದಿಯನ್ನು ಫೋಟೋ ಸಮೇತ ಈಪತ್ರದ ಜೊತೆಗೆ ಲಗತ್ತಿಸಿದ್ದೇನೆ. ದಯವಿಟ್ಟು ಪ್ರಕಟಿಸಬೇಕೆಂದು ಕೋರುತ್ತೇನೆ.

                                                ವಂದನೆಗಳೊಂದಿಗೆ,

                                                                                                ಇತಿ ತಮ್ಮ ವಿಶ್ವಾಸಿ,       

                                                                                                       ರಾಕೇಶ್   

ಸ್ಥಳ      :  ಹಂಡ್ರಂಗಿ

ದಿನಾಂಕ :  10.08.2021   

ಹೊರ ವಿಳಾಸ,

ಗೆ,

ಸಂಪಾದಕರು,

ಪ್ರಜಾವಾಣಿ ದಿನಪತ್ರಿಕೆ,

ಹಾಸನ ವಿಭಾಗ, ಹಾಸನ.

ನಿಮ್ಮನ್ನು ಆತ್ಮರಾಜ, 10ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಹಂಡ್ರಂಗಿ ಎಂದು ತಿಳಿದು ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿರುವ ನಿಮ್ಮ ತಂದೆಗೆ ವಿದ್ಯಾಭ್ಯಾಸದ ಕುರಿತು ಒಂದು ಪತ್ರ ಬರೆಯಿರಿ.

    patra lekhan in kannada                                                                          

  ಶ್ರೀ        ಆತ್ಮರಾಜ

10ನೇ ತರಗತಿ

ಸರ್ಕಾರಿ ಪ್ರೌಢಶಾಲೆ, ಹಂಡ್ರಂಗಿ

ದಿನಾಂಕ : 07.07.2019

         ತೀರ್ಥರೂಪರಿಗೆ ನಿಮ್ಮ ಮಗನಾದ ಆತ್ಮರಾಜನು ಮಾಡುವ ನಮಸ್ಕಾರಗಳು. ಇಲ್ಲಿ ನಾನು ಕ್ಷೇಮ, ನಿಮ್ಮ ಕ್ಷೇಮ ಸಮಾಚಾರಕ್ಕೆ ಪತ್ರ ಬರೆಯಿರಿ.

ಈ ಪತ್ರ ಬರೆಯಲು ಕಾರಣವೇನೆಂದರೆ ನಮ್ಮ ಶಾಲೆಯಲ್ಲಿ ಈಗ ರೂಪಣಾತ್ಮಕ ಪರೀಕ್ಷೆಗಳು ಪ್ರಾರಂಭವಾಗಲಿದೆ. ಈ ಬಾರಿ ನಾನು ಶಾಲೆಗೆ ಪ್ರಥಮ ಸ್ಥಾನವನ್ನು ಪಡೆಯಬೇಕೆಂದುಕೊಂಡಿರುವುದರಿಂದ ಉತ್ತಮವಾಗಿ ಅಭ್ಯಾಸವನ್ನು ಮಾಡುತ್ತಿದ್ದೇನೆ. ನನ್ನ ಸ್ನೇಹಿತರು ಸಹ ನನಗೆ ಸಹಕಾರ ನೀಡುತ್ತಿದ್ದಾರೆ. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಅಭ್ಯಾಸ ಮಾಡುತ್ತಿದ್ದೇನೆ.  ನನಗೆ ಗೊತ್ತಾಗದ ವಿಷಯಗಳನ್ನು ಕೇಳಿ ತಿಳಿಯುತ್ತಿದ್ದೇನೆ.  ನನಗೆ ನಿಮ್ಮ ಆಶೀರ್ವಾದವು ಇರಲಿ.

ಇನ್ನೇನು ವಿಷಯವಿಲ್ಲ. ನನ್ನ ತಾಯಿಗೆ ಹಾಗೂ ಅಣ್ಣನಿಗೆ ನನ್ನ ನಮಸ್ಕಾರಗಳನ್ನು ತಿಳಿಸಿರಿ. ನಿಮ್ಮ ಪತ್ರಕ್ಕಾಗಿ ಕಾದಿರುವೆ.

                                                                                      ಇತಿ ತಮ್ಮ ಪ್ರೀತಿಯ ಮಗ,

                                                                                                                                                                                                                                                                                                                                                                         ಆತ್ಮರಾಜ

ಹೊರ ವಿಳಾಸ

ಗೆ,

ಶಿವಪ್ಪ,

ಮನೆ ನಂ. 12/21, 4ನೇ ಅಡ್ಡರಸ್ತೆ,

ಕುವೆಂಪು ನಗರ, ಮೈಸೂರು

ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂದಿಸಿದ ಇತರೆ ಲಿಂಕ್:

♦ ಕರ್ನಾಟಕದ 31 ಜಿಲ್ಲೆಗಳು ಮತ್ತು ವಿಭಾಗಗಳು

♦ ಕನ್ನಡ ವ್ಯಾಕರಣ

♦ಕನ್ನಡ ಪ್ರಬಂಧ

♦ಗಾದೆಗಳು

Leave a Reply

Your email address will not be published. Required fields are marked *