ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಆಗುವಂತಹ ಪರಿಸರ ಮಾಲಿನ್ಯದ ಕುರಿತು ಪ್ರಬಂಧ
parisara malinya in kannada, ಪರಿಸರ ಮಾಲಿನ್ಯ, parisara malinya prabandha, parisara malinya prabandha in kannada, ಪರಿಸರ ಮಾಲಿನ್ಯ ಪ್ರಬಂಧ
ಪರಿಸರ ಮಾಲಿನ್ಯ
ಮನುಷ್ಯ ಪರಿಸರದ ಮಗು . ಪರಿಸರವನ್ನು ಬಿಟ್ಟು , ಅವನು ಬದುಕಲು ಆಗದು . ಪ್ರಕೃತಿ , ಮಳೆ , ಗಾಳಿ , ನೀರು – ಇವು ಪರಿಸರದ ಮುಖ್ಯ ಅಂಗಗಳು . ಇವುಗಳ ಇರುವಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ . ಪರಿಸರ ಆರೋಗ್ಯಪೂರ್ಣವಾಗಿದ್ದರೆ ಮನುಷ್ಯನ ಜೀವನ ಆರೋಗ್ಯಪೂರ್ಣವಾಗಿರುತ್ತದೆ .
ಪರಿಸರದಲ್ಲಿ ಮುಖ್ಯವಾಗಿ ವಾಯುಮಾಲಿನ್ಯ , ಜಲ ಮಾಲಿನ್ಯ , ಶಬ್ದಮಾಲಿನ್ಯಗಳು ಉಂಟಾಗುತ್ತಿವೆ . ಇವುಗಳನ್ನು ತಡೆಯಬೇಕು ನೀರು ಮನುಷ್ಯನ ಜೀವನದ ಸಂಜೀವಿನಿ , ನೀರನ್ನು ಕಲುಷಿತಗೊಳಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ . ಹಾಗೆಯೇ ಉಸಿರಾಡಲು ಶುದ್ಧ ಹವ ಬೇಕು.
ಶಬ್ದಮಾಲಿನ್ಯ
ಆಧುನಿಕ ಜೀವನ ಕ್ರಮದಿಂದ ಹವೆ ಅಶುದ್ಧವಾಗುತ್ತಿದೆ . ಕಾರ್ಖಾನೆ , ತ್ಯಾಜ್ಯ ವಸ್ತುಗಳು , ಓಡಾಡುವ ಅಸಂಖ್ಯ ವಾಹನಗಳು ಇವುಗಳಿಂದ ಹವ ಮಲಿನಗೊಳ್ಳುತ್ತಿದೆ . ಇಂತಹ ಹತ್ಯೆಯನ್ನು ಉಸಿರಾಡುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ . ಆದ್ದರಿಂದ ವಾಯುಮಾಲಿನ್ಯ ವನ್ನು ತಡೆಗಟ್ಟುವ ಕೆಲಸ ಆಗಬೇಕು.
ಶಬ್ದಮಾಲಿನ್ಯ ಎಂದರೆ ನಗರಗಳಲ್ಲಿ ಓಡಾಡುವ ನೂರಾರು ಬಗೆಯ ವಾಹನಗಳು ಅತಿಯಾದ ಶಬ್ದವನ್ನು ಉಂಟು ಮಾಡುವುದು . ಇವುಗಳಿಂದ ಮನುಷ್ಯನ ಆಂತರಿಕ ನರಮಂಡಲ ಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ . ಈ ಮೂರು ಸಮಸ್ಯೆಗಳನ್ನು ಅರಿತು , ಇದಕ್ಕೆ ಸೂಕ್ತ ಉಪಾಯಗಳನ್ನು ಕಂಡು ಹಿಡಿಯಬೇಕು . ಆಗ ಪರಿಸರ ಶುದ್ಧವಾಗುತ್ತದೆ . ಮನುಷ್ಯನ ಆರೋಗ್ಯಕ್ಕೆ ಹಾನಿಯಾಗುವುದು ತಪ್ಪುತ್ತದೆ.