ಪಗೆಯಂ ಬಾಲಕನೆಂಬರೇ ನೋಟ್ಸ್ ದ್ವಿತೀಯ ಪಿ.ಯು.ಸಿ । 2nd Puc Kannada 4th Poem Notes

ಪಗೆಯಂ ಬಾಲಕನೆಂಬರೇ notes | Pageyam Balakanembare Kannada Poem Notes Free For 2nd PUC Students

Pageyam Balakanembare Kannada Poem Notes, ದ್ವಿತೀಯ ಪಿ.ಯು.ಸಿ ಪಗೆಯಂ ಬಾಲಕನೆಂಬರೇ ಕನ್ನಡ ನೋಟ್ಸ್‌ , 2 PUC Pageyam Balakanembare Kannada Question Answer Notes pdf Download

Pageyam Balakanembare Kannada Poem Notes

ಒಂದು ವಾಕ್ಯದಲ್ಲಿ ಉತ್ತರಿಸಿ . ( ಒಂದು ಅಂಕದ ಪ್ರಶ್ನೆಗಳು )

ನಿಷ್ಟ್ರಯೋಜಕನಾದ ಮಗ ಯಾರು ?

ಮುಪ್ಪಿನಲ್ಲಿ ಆಗದವನು ನಿಷ್ಟ್ರಯೋಜಕನಾದ ಮಗ

ವೀರನಾದವನು ಏನನ್ನು ಬಲ್ಲವನಾಗಿರಬೇಕೆಂದು ಸೋಮನಾಥನು ಹೇಳಿದ್ದಾನೆ ?

ವೀರನಾದವನು ಶತೃಗಳನ್ನು ಇರಿಯಬಲ್ಲವನಾಗಿರಬೇಕೆಂದು ಸೋಮನಾಥನು ಹೇಳಿದ್ದಾನೆ .

ಹಗೆಯನ್ನು ಏನೆಂದು ಉಪೇಕ್ಷಿಸಬಾರದೆಂದು ಸೋಮನು ಹೇಳಿದ್ದಾನೆ ?

ಹಗೆಯನ್ನು ಚಿಕ್ಕದೆಂದು ಬಾಲಕನೆಂದು ಉಪೇಕ್ಷಿಸಬಾರದು ಎಂದು ಸೋಮನಾಥನು ಹೇಳಿದ್ದಾನೆ .

Pageyam Balakanembare Kannada Poem Notes

ಯಾರನ್ನು ಯೋಗಿ ಎನ್ನಬಹುದು ?

ಅರಿಷಡ್ವರ್ಗಗಳಾದ ಕಾಮ , ಕ್ರೋಧ , ಲೋಭ , ಮೋಹ , ಮದ , ಮತ್ಸರಗಳನ್ನು ಗೆದ್ದವನನ್ನು ‘ ಯೋಗಿ ‘ ಎನ್ನಬಹುದು .

ಹಲವು ಹಳ್ಳಗಳು ಸೇರಿ ಏನಾಗುತ್ತದೆ ?

ಹಲವು ಹಳ್ಳಗಳು ಸೇರಿ ಸಮುದ್ರವಾಗುತ್ತದೆ .

Pageyam Balakanembare Kannada Poem Question answer

maxresdefault 2 1

ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕಗಳ ಪ್ರಶ್ನೆಗಳು )

Pageyam Balakanembare Kannada Poem Notes Pdf

ಧನ ಮತ್ತು ಸುತನ ವಿಷಯದಲ್ಲಿ ಸೋಮನಾಥನ ಅಭಿಪ್ರಾಯವೇನು ?

ಧನವನ್ನು ಕೂಡಿಡಬಾರದು . ತಾನು ಅನುಭೋಗಿಸಲಾಗದ ಧನವಿದ್ದು ಏನೂ ಪ್ರಯೋಜನವಿಲ್ಲ . ಅದೇ ರೀತಿ ಸುತನಾದವನು ವೃದ್ಧಾಪ್ಯದಲ್ಲಿ ತಂದೆತಾಯಿಯರ ಸೇವೆ ಮಾಡಬೇಕು . ವೃದ್ಧಾಪ್ಯದಲ್ಲಿ ತಂದೆತಾಯಿಯರ ಸೇವೆ ಮಾಡದ ಮಗ ನಿಷ್ಟ್ರಯೋಜಕನಾಗುತ್ತಾನೆ . ಎಂಬ ಅಭಿಪ್ರಾಯವಿದೆ . ಇದು ಧನ ಮತ್ತು ಸುತನ ವಿಷಯದಲ್ಲಿ ಸೋಮನಾಥನ ಅಭಿಪ್ರಾಯವಾಗಿದೆ

Pageyam Balakanembare Kannada Poem Notes

ರಾಜ ಮತ್ತು ಮಂತ್ರಿಗಳಿಗೆ ಯಾವ ಅರ್ಹತೆಗಳಿರಬೇಕೆಂದು ಸೋಮನಾಥನು ಹೇಳಿದ್ದಾನೆ ?

ರಾಜನು ಪ್ರಜೆಗಳನ್ನು ಕಾಪಾಡುವಂತವನು . ರಾಜನಾಗಬೇಕಾದರೆ ಕೋಪವನ್ನು ತ್ಯಜಿಸಬೇಕು . ಅದೇ ರೀತಿ ಮಂತ್ರಿಯಾದವನು ಚಮತ್ಕಾರಗಳನ್ನು ತಿಳಿದಿರಬೇಕು . ಚಮತ್ಕಾರಗಳನ್ನು ತಿಳಿದವನೇ ಮಂತ್ರಿ , ಈ ಅರ್ಹತೆಗಳು ರಾಜ ಮತ್ತು ಮಂತ್ರಿಗಳಿಗೆ ಇರಬೇಕೆಂದು ಸೋಮನಾಥನು ಹೇಳಿದ್ದಾನೆ .

ಶುಚಿ ಮತ್ತು ಸ್ವಾದಗಳನ್ನು ಕುರಿತು ಸೋಮನಾಥನ ಅಭಿಪ್ರಾಯವೇನು ?

ಕಡುಪಾಪದ ಕೆಲಸ ಮಾಡಿ ಬಲುವಾಗಿ ಮಿಂದರೆ ಅವನು ಶುಚಿಯಾಗುವನೇ ? ಕಾಗೆಗಳ ಗುಂಪು ಸ್ನಾನ ಮಾಡುವುದಿಲ್ಲವೇ ? ಬೆಲ್ಲದ ಪಾನಕದೊಳಗೆ ಬೇವಿನ ಫಲವನ್ನು ಅದ್ದಿದರೆ ಅದರ ‘ ಕಹಿ ಹೋಗಿ ಸಿಹಿಯಾಗುವುದಿಲ್ಲ . ನಿರ್ಮಲವಾದ ಶುಚಿತ್ವ ಗುಣವೇ ಮನುಷ್ಯನಿಗೆ ಮುಖ್ಯ , ಮತ್ತು ಕಹಿಗುಣ ಯಾವತ್ತೂ ಸಿಹಿಯ ಸ್ವಾದವನ್ನು ಹೊಂದುವುದಿಲ್ಲ ಎಂಬುದು ಸೋಮನಾಥನ ಅಭಿಪ್ರಾಯವಾಗಿದೆ .

Pageyam Balakanembare Kannada saramsha

ಯಾರಿಂದ ಯಾವುದನ್ನು ಹೇಗೆ ಕಲಿಯಬೇಕೆಂದು ಸೋಮನಾಥನು ಹೇಳಿದ್ದಾನೆ ?

ಕೆಲವನ್ನು ಬಲ್ಲವರಿಂದ ಕಲಿಯಬೇಕು , ಶಾಸ್ತ್ರಗಳನ್ನು ಕೇಳುತ್ತಾ ಕೆಲವನ್ನು ಕಲಿಯಬೇಕು . ಕೆಲವನ್ನು ನಮ್ಮ ಉತ್ತಮ ಜ್ಞಾನದಿಂದ ಕಲಿಯಬೇಕು . ಕೆಲವನ್ನು ಸಜ್ಜನರ ಸಹವಾಸದಲ್ಲಿದ್ದು ಕಲಿಯಬೇಕೆಂದು ಸೋಮನಾಥನು ಹೇಳದ್ದಾನೆ .

ರಾಜ ಮತ್ತು ಮಂತ್ರಿಗಳಿಗೆ ಯಾವ ಅರ್ಹತೆಗಳಿರಬೇಕೆಂದು ಸೋಮನಾಥನು ಹೇಳಿದ್ದಾನೆ ?

ಕಡುಪಾಪದ ಕೆಲಸ ಮಾಡಿ ಬಲುವಾಗಿ ಮಿಂದರೆ ಅವನು ಶುಚಿಯಾಗುವನೇ ? ಕಾಗೆಗಳ ಗುಂಪು ಸ್ನಾನ ಮಾಡುವುದಿಲ್ಲವೇ ? ಬೆಲ್ಲದ ಪಾನಕದೊಳಗೆ ಬೇವಿನ ಫಲವನ್ನು ಅದ್ದಿದರೆ ಅದರ ‘ ಕಹಿ ಹೋಗಿ ಸಿಹಿಯಾಗುವುದಿಲ್ಲ . ನಿರ್ಮಲವಾದ ಶುಚಿತ್ವ ಗುಣವೇ ಮನುಷ್ಯನಿಗೆ ಮುಖ್ಯ , ಮತ್ತು ಕಹಿಗುಣ ಯಾವತ್ತೂ ಸಿಹಿಯ ಸ್ವಾದವನ್ನು ಹೊಂದುವುದಿಲ್ಲ ಎಂಬುದು ಸೋಮನಾಥನ ಅಭಿಪ್ರಾಯವಾಗಿದೆ .

Pageyam Balakanembare Kannada Poem Notes 2nd puc notes

ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ :

ಜ್ಞಾನವನ್ನು ಹೊಂದುವ ಮಾರ್ಗ ಯಾವುದೆಂಬುದನ್ನು ಕವಿ ಹೇಗೆ ವಿವರಿಸಿದ್ದಾನೆ ?

ಕವಿ ಪುಲಿಗೆರೆ ಸೋಮನಾಥನು “ ಪಗೆಯಂ ಬಾಲಕನೆಂಬರೇ ” ಎಂಬ ಪದ್ಯದಲ್ಲಿ ಬದುಕಿನ ನಡೆ ನುಡಿ ಆಚಾರ ವಿಚಾರಗಳನ್ನು , ಬದುಕಿನ ಮೌಲ್ಯಗಳನ್ನು ತಿಳಿ ಹೇಳಿದ್ದಾನೆ . ಕವಿ ಈ ಪದ್ಯದಲ್ಲಿ ಮನುಷ್ಯ ಯಾವ ಯಾವ ಮೂಲಗಳಿಂದ ಜ್ಞಾನವನ್ನು ಸಂಪಾದಿಸಿ ಸರ್ವಜ್ಞನಾಗಬಹುದೆಂದು ವಿವರಿಸಿದ್ದಾನೆ . ಜ್ಞಾನವೆಂಬುದು ಹುಟ್ಟಿನಿಂದ ಬರುವುದಿಲ್ಲ . ಅದೊಂದು ಸಮುದ್ರವಿದ್ದಂತೆ ಹಲವು ತೊರೆಗಳು ಒಂದು ಸೇರಿ ಸಮುದ್ರ ವಾಗುವಂತೆ ಮನುಷ್ಯ ಜ್ಞಾನವನ್ನು ಬೇರೆ ಬೇರೆ ಮೂಲಗಳಿಂದ , ಬೇರೆ ಬೇರೆ ಮೂಲೆಗಳಿಂದ ಸಂಪಾದಿಸಬೇಕಾಗುತ್ತದೆ .

ಕೆಲವನ್ನು ಬಲ್ಲವರಿಂದ ಅಂದರೆ ತಿಳಿದ ವಿದ್ವಾಂಸರಿಂದ ತಿಳಿದುಕೊಳ್ಳ ಬೇಕಾಗುತ್ತದೆ . ಕೆಲವನ್ನು ಶಾಸ್ತ್ರಗಳನ್ನು ಕೇಳಿ ತಿಳಿದುಕೊಳ್ಳಬೇಕು . ಕೆಲವನ್ನು ಆಚರಿಸುವವರಿಂದ ಕಂಡು , ಕಲಿಯಬೇಕು . ಇನ್ನು ಕೆಲವನ್ನು ಸುಜ್ಞಾನದಿಂದ ನೋಡಿ ಜ್ಞಾನವನ್ನು ಸಂಪಾದಿಸಬೇಕು . ಕೆಲವನ್ನು ಸಜ್ಜನರ ಸಂಗದಿಂದ ಆದುದರಿಂದ ಚಿಕ್ಕದಿರಲಿ , ದೊಡ್ಡದಿರಲಿ ಅಪಾಯ ತರುವ ಸಂಗತಿಗಳಿಂದ ದೂರವಿದ್ದು , ಆ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಹಗೆಯನ್ನು ಬಾಲಕನೆಂದು ತಿಳಿಯಬಾರದು ಎಂದಿದ್ದಾನೆ . ಈ ಎಲ್ಲಾ ಸಂಗತಿಗಳನ್ನು ಉಪೇಕ್ಷಿಸಬಾರದಾಗಿ ಸೋಮನಾಥನು ತಿಳಿಸಿದ್ದಾನೆ

ಸಕಾಲಕ್ಕೆ ಒದಗುವ ಸಹಾಯವೇ ಶ್ರೇಷ್ಠ ಎಂಬುದನ್ನು ಕವಿ ಹೇಗೆ ತಿಳಿಸಿದ್ದಾನೆ ?

ಕವಿ ಪುಲಿಗೆರೆ ಸೋಮನಾಥನು “ ಪಗೆಯಂ ಬಾಲಕನೆಂಬರೇ ” ಎಂಬ ಪದ್ಯದಲ್ಲಿ ಬದುಕಿನ ನಡೆ ನುಡಿ ಆಚಾರ ವಿಚಾರಗಳನ್ನು , ಬದುಕಿನ ಮೌಲ್ಯಗಳನ್ನು ತಿಳಿ ಹೇಳಿದ್ದಾನೆ . ನಮ್ಮ ಆಚಾರ ವಿಚಾರಗಳಲ್ಲಿ ಮೌಲ್ಯಗಳನ್ನು ಮೇಳೆಸಿಕೊಂಡಾಗಲೇ ಬದುಕಿಗೊಂದು ಅರ್ಥ ಪ್ರಾಪ್ತವಾಗುತ್ತದೆ . ನಮ್ಮ ಕಷ್ಟಕಾಲದಲ್ಲಿ ಪ್ರಯೋಜನಕ್ಕೆ ಬಾರದ ವಸ್ತು , ಸಂಗತಿ , ವ್ಯಕ್ತಿಗಳಿಂದ ಯಾವ ಉಪಯೋಗವೂ ಇಲ್ಲವೆಂಬುದನ್ನು ಸೋಮೇಶ್ವರ ಹಲವು ಉದಾಹರಣೆಗಳ ಮೂಲಕ ವಿವರಿಸಿ ಹೇಳಿದ್ದಾನೆ .

ಧನವನ್ನು ಕೂಡಿಡಬಾರದು . ತಾನು ಅನುಭೋಗಿಸಲಾಗದ ಧನವಿದ್ದು ಏನೂ ಪ್ರಯೋಜನವಿಲ್ಲ . ಅದೇ ರೀತಿ ಸುತನಾದವನು ವೃದ್ಧಾಪ್ಯದಲ್ಲಿ ತಂದೆತಾಯಿಯರ ಸೇವೆ ಮಾಡಬೇಕು . ವೃದ್ಧಾಪ್ಯದಲ್ಲಿ ತಂದೆತಾಯಿಯರ ಸೇವೆ ಮಾಡದ ಮಗ ನಿಯೋಜಕ ನಾಗುತ್ತಾನೆ . ಒಣಗುವ ಬೆಳೆಗೆ ನೀರು ಅತ್ಯಾವಶ್ಯಕ . ಬೆಳೆಗೆ ನೀರು ಬೇಕಾದಾಗ ಮಳೆ ಬಾರದೇ ಈಗ ಮಳೆ ಬಂದು ಏನು ಪ್ರಯೋಜನ ? ಕಷ್ಟಕಾಲದಲ್ಲಿ ಕಷ್ಟ ಸುಖಗಳನ್ನು ವಿಚಾರಿಸಿ ಹೋಗುವುದು ಬಂಧುವಿನ ಲಕ್ಷಣ .

ಕೇವಲ ಸುಖವಿರುವಾಗ ಜೊತೆಯಾಗಿದ್ದು ಕಷ್ಟ ಕಾಲದಲ್ಲಿ ದೂರಹೋಗುವ ಬಂಧು ಬಂಧುವೇ ಅಲ್ಲ . ಬಂಧು ಆಪತ್ತಿನಲ್ಲಿರುವವರ ಕಷ್ಟವನ್ನು ನೋಡಬೇಕು . ಆಪತ್ತಿಗಾದವನೇ ನಿಜವಾದ ನೆಂಟ . ಅಂಥವನು ನಿಜವಾದ ಬಂಧು ಎನಿಸಿಕೊಳ್ಳುತ್ತಾನೆ . ಆಪತ್ತಿನಲ್ಲಿ ನೋಡದ ಬಂಧು ಯಾಕಾಗಿ ಬೇಕು ? ಚಿಕ್ಕದಾದ ಸಹಾಯವೂ ಕಷ್ಟದಲ್ಲಿರುವವನಿಗೆ ದೊಡ್ಡದಾಗಿ ಕಾಣ ಸುತ್ತದೆ . ಸಹಾಯ ಚಿಕ್ಕದಿರಲಿ ದೊಡ್ಡದಿರಲಿ ಅದು ಮುಖ್ಯ ಆಗುವುದಿಲ್ಲ . ಸಕಾಲಕ್ಕೆ ಒದಗುವ ಸಹಾಯ ಎಲ್ಲಕ್ಕಿಂ ದೊಡ್ಡದು .

ಕಷ್ಟಕಾಲದಲ್ಲಿ ಸಮಯಕ್ಕೆ ಸರಿಯಾಗಿ ಬಂದು ಸಹಾಯ ಮಾಡುವ ಒಂದು ಹುಲ್ಲು ಕಡ್ಡಿಯೂ ಸಹ ಕಷ್ಟದಲ್ಲಿರುವವನಿಗೆ ಪರ್ವತದಂತೆ ಕಾಣುತ್ತದೆ ‘ ಎಂದು ಸೋಮನಾಥ ಅಭಿಪ್ರಾಯಪಟ್ಟಿದ್ದಾನೆ .

ಯಾವ ಯಾವ ಸಂಗತಿಗಳನ್ನು ಉಪೇಕ್ಷಿಸಬಾರದಾಗಿ ಸೋಮನಾಥನು ತಿಳಿಸಿದ್ದಾನೆ ?

ಪುಲಿಗೆರೆ ಸೋಮನಾಥನ ಶತಕವು ಕನ್ನಡ ನಾಡಿನಲ್ಲಿ ಕವಿವಾಣ ಯಾಗಿ , ಜನವಾಣ ಯಾಗಿ ಹಬ್ಬಿ ಹರಡಿ ನೀತಿಯ ಹಂದರದಲ್ಲಿ ಬದುಕಿನ ತನಿವಣ್ಣುಗಳನ್ನು ತುಂಬಿ ತಂದಿದೆ . ಮೌಲ್ಯಗಳಿಗೆಲ್ಲ ನೀತಿಯೇ ಮೂಲ ಬೀಜ , ಭಕ್ತಿ , ಜ್ಞಾನ , ವೈರಾಗ್ಯ , ನೀತಿಯನ್ನು ಪ್ರತಿಪಾದಿಸುವ ಪದ್ಯಗಳು ಪುಲಿಗೆರೆ ಸೋಮನಾಥನ ಹೆಸರನ್ನು ಸ್ಥಿರವಾಗಿಸಿದೆ . ಕವಿ ಕೆಲವು ಅರಿಯಬೇಕು . ಅಂಥವನು ಮಾತ್ರ ಸರ್ವಜ್ಞನಾಗಲು ಸಾಧ್ಯ ಅದೇ ರೀತಿ ಹಲವು ಹಳ್ಳಗಳು ಕೂಡಿ ಹೇಗೆ ಸಮುದ್ರವಾಗು ತದೆಯೋ ಹಾಗೆಯೇ ಹಲವು ಮೂಲಗಳಿಂದ ಜ್ಞಾನ ಸಂಪಾದಿಸಿ ಸರ್ವಜ್ಞನಾಗಬೇಕು ಎಂದು ಹೇಳಿದ್ದಾನೆ .

ಸಂಗತಿಗಳನ್ನು ಉಪೇಕ್ಷಿಸಬಾರದೆಂದು ಕೆಲವು ಉದಾಹರಣೆಯ ಮೂಲಕ ತಿಳಿಸಿದ್ದಾನೆ . ಬೇವಿನ ಮರ ಚಿಗುರೆಂದು ತಿನ್ನಲು ಸ್ವಾದವಾಗುವುದಿಲ್ಲ . ಬೇವಿನ ಮರದ ಚಿಗುರು ಸಹ ಬೇವಿನ ಸ್ವಾದವನ್ನು ಹೊಂದಿಕೊಂಡೇ ಬೆಳೆಯುತ್ತದೆ . ಚಿಗುರಾದರೂ ಸಹ ಬೇವಿನ ಸ್ವಾದ ಬಿಡದು . ಬೇವು ಎಂದಿಗೂ ಸಹಿಯಾಗುವುದಿಲ್ಲ . ಅದರಂತೆಯೇ ದುಷ್ಟರೆಂದೂ ಒಳ್ಳೆಯ ಗುಣ ತೋರುವುದಿಲ್ಲವಾದ್ದರಿಂದ ಅವರ ಬಗ್ಗೆ ಎಚ್ಚರದಿಂದಿರಬೇಕು . ಉಪೇಕ್ಷಿಸಬಾರದೆಂದು ಕವಿ ಹೇಳುತ್ತಾರೆ .

ಚೇಳು ಚಿಕ್ಕದೆಂದು ಪ್ರೀತಿಯಿಂದ ಬೆಳೆಸಿ , ಅಕ್ಕರೆಯಿಂದ ತೆಗೆಯಲು ಅದು ಕಚ್ಚದೇ ಇರದು . ಹೆಡೆಯಿರುವ ವಿಷ ಸರ್ಪವನ್ನು ಹಾಲನ್ನು ಉಣಿಸಿ ಸಾಕಲು ಅದು ವಿಶ್ವಾಸಕ್ಕೆ ಯೋಗ್ಯವಲ್ಲ . ಪಕ್ಷಿಯನ್ನು ಸಾಕುವೆನೆಂದು ಗೂಬೆವಿಮರಿಯನ್ನು ಮುದ್ದಿನಿಂದ ಸಲಹುವರೇ . ಹಗೆಯನ್ನು ಬಾಲಕನೆಂದು ಉಪೇಕ್ಷಿಸಬಾರದೆಂದು ಸೋಮನಾಥನು ಹೇಳಿದ್ದಾನೆ . ಚಿಕ್ಕವನಿರಲಿ , ದೊಡ್ಡವನಿರಲಿ ಶತ್ರು ಶತ್ರುವೇ .

ಹಾಗೆಯೇ ಸಣ್ಣ ಹುಡುಗ ನಮಗೇನು ಮಾಡಬಲ್ಲನೆಂದು ಶತ್ರುವಾದವನನ್ನು ಎಂದಿಗೂ ಅಲಕ್ಷ ಮಾಡಬಾರದು . ಶತ್ರು ಚಿಕ್ಕವನೆಂದು ಸುಮ್ಮನಿದ್ದರೆ ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತೆ . ದುಷ್ಟರಿಂದ ದೂರವಿರಬೇಕು . ಬೇವಿನ ಮರದ ಚಿಗುರು ಸಹ ತನ್ನ ಸ್ವಾದವನ್ನು ಬಿಡದು ಚಿಕ್ಕದಾಗಿನಿಂದ ಅಕ್ಕರೆಯಿಂದ ಸಾಕಿರುವ ಚೇಳೂ ಸಹ ಕುಟುಕದೇ ಬಿಡಲಾರದು .

Pageyam Balakanembare Kannada Poem Notes

ಪಗೆಯಂ ಬಾಲಕನೆಂಬರೇ notes | Pageyam Balakanembare Kannada Poem Notes Free For 2nd PUC Students
ಪಗೆಯಂ ಬಾಲಕನೆಂಬರೇ notes | Pageyam Balakanembare Kannada Poem Notes Free For 2nd PUC Students

Pageyam Balakanembare Kannada Poem Notes 2nd puc

ವೀರ , ಮಂತ್ರಿ , ರಾಜ ಮತ್ತು ಯೋಗಿಗಳಿಗೆ ಇರಬೇಕಾದ ಅರ್ಹತೆಗಳೇನು ?

ಪುಲಿಗೆರೆ ಸೋಮನಾಥನ ‘ ಸೋಮೇಶ್ವರ ಶತಕವು ‘ ಕನ್ನಡದ ಅತ್ಯಂತ ಜನಪ್ರಿಯ ಶತಕ ಗ್ರಂಥವಾಗಿದ್ದು ಹದಿನಾರನೇ ಶತಮಾನದಲ್ಲಿದ್ದ ಈ ಕವಿಯು ಪುಲಿಗೆರೆಯ ಸೋಮೇಶ್ವರನ ಮಹಾ ಭಕ್ತನಾಗಿದ್ದನು . ಆದ್ದರಿಂದಲೇ ತನ್ನ ಪ್ರತಿಪದ್ಯಗಳ ಕೊನೆಯಲ್ಲಿ ‘ ಹರಹರಾ ಶೀ ಚೆನ್ನ ಸೋಮೇಶ್ವರ ‘ ಅಂಕಿತವನ್ನು ಕಾಣಸಿದ್ದಾನೆ . ಸ್ವತಂತ್ರ ಲೋಕಾನುಭವ , ಸ್ಪೋಪಜ್ಞ ಕವಿತಾ ಶಕ್ತಿ , ಮೊದಲಾದ ಉನ್ನತ ಗುಣಗಳು ಕಂಡುಬರುತ್ತದೆ . ಪ್ರತಿಯೊಂದು ಕೆಲಸಕ್ಕೂ ಅದನ್ನು ನಿರ್ವಹಿಸುವ ಸಾಮರ್ಥ್ಯ ವಿರುವುದು ಮುಖ್ಯವೆಂಬುದನ್ನು ಕವಿ ಸೋಮನಾಥ ತಿಳಿಸಿದ್ದಾನೆ .

ಅವನ ಪ್ರಕಾರ ಯುದ್ಧ ಮಾಡಲು ತಿಳಿದಿರುವವನೇ ಸೈನಿಕ.ಶತ್ರುಗಳನ್ನು ಇರಿದು ಕೊಂದ ಸೈನಿಕನು ಭೂಮಿಯಲ್ಲಿ ನಿಜವಾದ ವೀರನೆನಿಸಿ ಕೊಳ್ಳುವನು . ಕೊಲ್ಲಲು , ಚುಚ್ಚಲು , ತಿವಿಯಲು ಬಲ್ಲವನಾದರೆ ವೀರನಾಗಿರಬೇಕು . ನಾನಾ ರೀತಿಯ ಚಮತ್ಕಾರಗಳನ್ನು ಅರಿತವನೇ ಮಂತ್ರಿ , ಭೂಮಿಯಲ್ಲಿ ನಾನಾ ರೀತಿಯ ಚಮತ್ಕಾರವನ್ನು ತಿಳಿದುಕೊಳ್ಳಬಲ್ಲವನಾದರೆ ಒಳ್ಳೆಯ ಮಂತ್ರಿಯಾಗುತ್ತಾನೆ . ರಾಜನು ಪ್ರಜೆಗಳನ್ನು ಕಾಪಾಡುವಂತವನು .

ರಾಜನಾಗಬೇಕಾದರೆ ಕೋಪವನ್ನು ತ್ಯಜಿಸಬೇಕು . ಕೋಪವನ್ನು ತ್ಯಜಿಸಬಲ್ಲೊಡೆ ರಾಜನಾಗಬೇಕು . ಅರಿಷಡ್ವರ್ಗಗಳಾದ ಕಾಮ , ಕ್ರೋಧ , ಮೋಹ , ಲೋಭ ಮದ , ಮತ್ಸರಗಳನ್ನು ಗೆಲ್ಲಬಲ್ಲವನು ಯೋಗಿಯಾಗಬಹುದು . ಅಂಥವನು ಮಾತ್ರ ತನ್ನ ಹೊಣೆಗಾರಿಕೆಯನ್ನು ಅರಿತುಕೊಂಡು ನಡೆಯುವವನು . ಈ ರೀತಿ ಸೋಮನಾಥನು ವೀರ , ಮಂತ್ರಿ , ರಾಜ ಮತ್ತು ಯೋಗಿಗಳಿಗೆ ಇರಬೇಕಾದ ಅರ್ಹತೆಗಳ ವಿವರ ನೀಡಿದ್ದಾನೆ .

ನಿರ್ಮಲಚಿತ್ತದ ಅಗತ್ಯವನ್ನು ಸೋಮನಾಥ ಹೇಗೆ ನಿರೂಪಿಸಿದ್ದಾನೆ ?

ಕವಿ ಪುಲಿಗೆರೆ ಸೋಮನಾಥನು ‘ ಪಗೆಯಂ ಬಾಲಕನೆಂಬರೇ ಪದ್ಯದಲ್ಲಿ ಬದುಕಿನ ಮೌಲ್ಯವನ್ನು ತಿಳಿ ಹೇಳಿದ್ದಾನೆ . ಮೌಲ್ಯಗಳಿಗೆಲ್ಲ ನೀತಿಯೇ ಮೂಲ ಬೀಜ , ಲೋಕದ ಡೊಂಕನ್ನುತಿದ್ದುವುದರೊಂದಿಗೆ ತಮ್ಮ ಡೊಂಕನ್ನು ತಿದ್ದಿಕೊಳ್ಳುವ ನೈತಿಕ ಅನುಸಂಧಾನವಿದ್ದವರು ಮಹಾತ್ಮರಾದವರು . ಅವರ ಮಾತು ಮತ್ತು ಕೃತಿಗಳು ಸಮಾಜದಲ್ಲಿ ಆದರ್ಶವಾಗಿ ನೆಲೆನಿಂತು ನೀತಿಯ ಸೂಕ್ತಿಯಾದವು , ಸೋಮನಾಥನ ಪ್ರಕಾರ ನಿರ್ಮಲವಾದ ಮನಸ್ಸನ್ನು ಹೊಂದಿರುವಾತನೇ ನಿಜವಾದ ಮಡಿವಂತನಾಗಿದ್ದಾನೆ .

ಹೊಟ್ಟೆಯಲ್ಲಿ ಕೆಸರನ್ನು ತುಂಬಿಕೊಂಡು ಮೇಲೆ ತೊಳೆದರೆ ಶುದ್ಧನಾಗಲು ಸಾಧ್ಯವೇ ? ಕಡುಪಾಪ ಮಾಡಿ ಬಲುವಾಗಿ ಪುಣ್ಯ ತೀರ್ಥಗಳಲ್ಲಿ ಸ್ನಾನ ಮಾಡಿದರೆ ಶುಚಿಯಾಗುತ್ತಾನೆಯೇ ಹಾಗೆ ನೋಡಿದರೆ ಕಾಗೆಯೂ ಕೂಡ ಸ್ನಾನ ಮಾಡುತ್ತದೆ . ಬೆಲ್ಲದ ಪಾನಕದೊಳಗೆ ಬೇವಿನ ಫಲವನ್ನು ಅದ್ದಿಟ್ಟರೆ ಬೇವಿನ ಫಲ ಕಹಿ ಗುಣ ಬಿಡುವುದಿಲ್ಲ .

ಸ್ವಾದವಾಗುವುದಿಲ್ಲ ಮನಸ್ಸಿನ ನೈರ್ಮಲ್ಯ ಕಾಪಾಡಿಕೊಳ್ಳುವುದೇ ನಿಜವಾದ ಮಡಿ , ಇದೇ ರೀತಿ ಮನಸ್ಸಿನಲ್ಲಿ ಕೆಟ್ಟ ವಿಚಾರಗಳನ್ನು ಇಟ್ಟುಕೊಂಡು ಮೇಲ್ನೋಟಕ್ಕೆ ಎಷ್ಟೇ ಸ್ವಚ್ಛವಾಗಿ ಕಾಣಿಸಿದರೂ ಆತ ಶುಚಿಯಲ್ಲ.ಶುಭ್ರವಾದ ಒಳ್ಳೆಯ ಮನಸ್ಸನ್ನು ಹೊಂದಿರುವವನೇ ನಿಜವಾದ ಮಡಿವಂತನು . ನಿರ್ಮಲ ಮನಸ್ಸೇ ನಿಜವಾದ ಮಡಿ ಎನ್ನುವುದರ ಮೂಲಕ ನಿರ್ಮಲಚಿತ್ತದ ಅಗತ್ಯವನ್ನು ಸೋಮನಾಥ ಹೇಗೆ ನಿರೂಪಿಸಿದ್ದಾನೆ .

ಪಗೆಯಂ ಬಾಲಕನೆಂಬರೇ notes | Pageyam Balakanembare Kannada Poem Notes Free For 2nd PUC Students
ಪಗೆಯಂ ಬಾಲಕನೆಂಬರೇ notes | Pageyam Balakanembare Kannada Poem Notes Free For 2nd PUC Students

Pageyam Balakanembare Kannada Poem Notes FAQ

ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

“ ಆಪತ್ತಿನೊಳ್ ಮಣಿದುಂ ನೋಡದ ಬಂಧುವೇತಕೆ . ”

ಪುಲಿಗೆರೆ ಸೋಮನಾಥನ ‘ ಸೋಮೇಶ್ವರ ಶತಕ’ದಿಂದಾಯ್ದ ‘ ಪಗೆಯಂ ಬಾಲಕನೆಂಬರೇ ‘ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಸಕಾಲಕ್ಕೆ ಒದಗುವ ಸಹಾಯವು ಮಾತ್ರ ಉಪಯುಕ್ತವೆಂಬುದನ್ನು ವಿವರಿಸುತ್ತಾ ಕವಿ ಈ ಮೇಲಿನ ಮಾತನ್ನು ಹೇಳಿರುವನು . ಬಂಧುವಾದವನು ಆಪತ್ತಿನ ಕಾಲದಲ್ಲಿ ಬಂದು ಕಷ್ಟ – ಸುಖಗಳನ್ನು ವಿಚಾರಿಸಿ ಕೊಂಡು ನೆರವಿಗೆ ಬರಬೇಕು . ಅದು ಬಿಟ್ಟು ಸುಖವಿರುವಾಗ ಮಾತ್ರ ಬಂದು ಭೇಟಿ ಮಾಡಿ ಸಂತೋಷಿಸುವುದು , ಕಷ್ಟಬಂದಾಗ ತಿರುಗಿಯೂ ನೋಡದೆ ಹೊರಗುಳಿಯುವವನು ಬಂಧುವೇ ಅಲ್ಲ . ನಿಜವಾದ ಬಂಧು ಯಾರೆಂದರೆ ಕಷ್ಟದಲ್ಲಿ ಜೊತೆಗಿರುವವನು ಮಾತ್ರ ಎಂಬುದು ಪುಲಿಗೆರೆ ಸೋಮನಾಥನ ಅಭಿಪ್ರಾಯವಾಗಿದೆ .

“ತೃಣವೇ ಪರ್ವತವಲ್ಲವೇ . ”

‘ಪುಲಿಗೆರೆ ಸೋಮನಾಥನ ‘ ಸೋಮೇಶ್ವರ ಶತಕ’ದಲ್ಲಿನ ಈ ಸುಪ್ರಸಿದ್ಧ ಮಾತನ್ನು ಕವಿಯೇ ಹೇಳಿದ್ದಾನೆ . ಕಷ್ಟಕಾಲದಲ್ಲಿ ಒಂದು ಹುಲ್ಲುಕಡ್ಡಿಯಷ್ಟು ಸಹಾಯ ದೊರೆತರೂ ಅದು ಪರ್ವತದಷ್ಟು ದೊಡ್ಡದೆಂಬುದನ್ನು ಕವಿ ಇಲ್ಲಿ ವಿವರಿಸಿದ್ದಾನೆ . ಸಹಾಯ ಚಿಕ್ಕದಿರಲಿ , ದೊಡ್ಡದಿರಲಿ ಅದರ ಪ್ರಮಾಣ ಮುಖ್ಯವಲ್ಲ . ಸಕಾಲಕ್ಕೆ ಒದಗುವ ಸಹಾಯವು ಎಲ್ಲದಕ್ಕಿಂತಲೂ ದೊಡ್ಡದು . ಅದಕ್ಕೆ ಬೆಲೆ ಕಟ್ಟಲಾಗದು . ಚಿಕ್ಕಮಟ್ಟ ಸಹಾಯಗಳು ನಮಗೆ ಭರವಸೆಯನ್ನು ತುಂಬುತ್ತವೆ . ಆದ್ದರಿಂದ ಕವಿಯು ಕಷ್ಟಕಾಲದಲ್ಲಿ ಒದಗಿಬಂದ ಹುಲ್ಲುಕಡ್ಡಿ ಕೂಡ ಪರ್ವತ ಸದೃಶವಾದುದೆಂದಿರುವನು .

Pageyam Balakanembare Kannada Poem Notes Guide

“ ಪಗೆಯಂ ಬಾಲಕನೆಂಬರೇ . ”

‘ಈ ಮೇಲಿನ ವಾಕ್ಯವನ್ನು ಪುಲಿಗೆರೆ ಸೋಮನಾಥನು ರಚಿಸಿರುವ ಸೋಮೇಶ್ವರ ಶತಕದಿಂದ ಆಯ್ದುಕೊಳ್ಳಲಾಗಿದ್ದು ಇದೇ ಈ ಕಾವ್ಯಭಾಗದ ಶೀರ್ಷಿಕೆಯೂ ಆಗಿರುವುದನ್ನು ಗಮನಿಸಬಹುದು . ಶತ್ರುವನ್ನು ಬಾಲಕನೆಂದು , ಕಡೆಗಣಿಸಬಾರದು . ಇನ್ನು ಚಿಕ್ಕ ಬಾಲಕ ತಾನೆ ? ಆತ ನಮಗೇನು ಮಾಡಿಯಾನು ಎಂದು ಉದಾಸೀನ ಮಾಡಿದರೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ . ಚಿಕ್ಕವನಿರಲಿ , ದೊಡ್ಡವನಿರಲಿ ಶತ್ರು ಶತ್ರುವೇ . ಅವರ ಬಗ್ಗೆ ನಿರ್ಲಕ್ಷ್ಯ ತಾಳದೆ ಎಚ್ಚರದಿಂದ ಇರುವುದು ಅಗತ್ಯವೆಂದು ಕವಿ ನೀತಿಬೋಧೆ ಮಾಡಿರುವನು .

“ ಚೇಳ್ ಚಿಕ್ಕದೆಂದಳ್ಳರಿಂ ತೆಗೆಯಲ್ ಕಚ್ಚದೇ ”

‘ಪುಲಿಗೆರೆ ಸೋಮನಾಥನ ‘ ಸೋಮೇಶ್ವರ ಶತಕ’ದಿಂದಾಯ್ದ ‘ ಪಗೆಯಂ ಬಾಲಕನೆಂಬರೇ ‘ ಎಂಬ ಕಾವ್ಯಭಾಗದಲ್ಲಿ ಕವಿಯು ಈ ಮೇಲಿನ ವಾಕ್ಯವನ್ನು ಹೇಳಿ ದ್ದಾನೆ . ದುಷ್ಟತನ ಚಿಕ್ಕದಾಗಿದ್ದರೂ ಅದರಿಂದ ಅಪಾಯವೇ . ಅದನ್ನು ನಿರ್ಲಕ್ಷಿಸು ವಂತಿಲ್ಲ . ಶತ್ರುವನ್ನು ಬಾಲಕನೆಂದು ಅಲಕ್ಷ್ಯ ಮಾಡಿದರೆ ಅಪಾಯಕ್ಕೆ ಈಡಾಗಬಹುದು . ಚೇಳು ಚಿಕ್ಕದೆಂದು ಪ್ರೀತಿಯಿಂದ ಕೈಯಲ್ಲಿ ಹಿಡಿದುಕೊಂಡರೆ ಅದು ಕುಟುಕದೆ ಬಿಡದು . ಆದ್ದರಿಂದ ಚಿಕ್ಕದಿರಲಿ , ದೊಡ್ಡದಿರಲಿ ಅಪಾಯ ತರುವ ಸಂಗತಿಗಳಿಂದ ದೂರವಿದ್ದು , ಆ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಸೋಮನಾಥ ಕವಿಯು ನೀತಿಬೋಧೆ ಮಾಡಿರುವನು .

“ ಕಡುಪಾಪಂ ಬಲು ಮೀಯಲಾತ ಶುಚಿಯೇ . ”

‘ಸೋಮೇಶ್ವರ ಶತಕ’ದ ಕವಿ ಪುಲಿಗೆರೆಯ ಸೋಮನಾಥ ಈ ಮೇಲಿನಂತೆ ಪ್ರಶ್ನಿಸಿದ್ದಾನೆ . ಅಂತರಂಗದ ಶುಚಿತ್ವ ಮುಖ್ಯವೇ ಹೊರತು , ಬಹಿರಂಗದ ಶುಚಿಯಲ್ಲ ಎಂಬುದನ್ನು ವಿವರಿಸುವಾಗ ಆತ ಈ ಮೇಲಿನಂತೆ ಪ್ರಶ್ನಿಸಿರುವನು . ಕೆಲವರು ಸದಾ ಪಾಪಕಾರ್ಯಗಳಲ್ಲಿ ತೊಡಗಿಕೊಂಡಿದ್ದು , ಮೇಲಿಂದ ಮೇಲೆ ತೀರ್ಥಯಾತ್ರೆಗೆ ತೆರಳಿ , ಪವಿತ್ರ ತೀರ್ಥಗಳಲ್ಲಿ ಮಿಂದು ಪುಣ್ಯವಂತರಾದೆವೆಂಬ ಭ್ರಮೆಯಲ್ಲಿರುತ್ತಾರೆ . ತೀರ್ಥಸ್ನಾನ ಮಾಡಿದಾಕ್ಷಣ ಅವರ ಪಾಪ ದೂರಾಗಿ ಪುಣ್ಯ ಲಭಿಸುವುದೆ ? ತೀರ್ಥಸ್ನಾನ ಮಾಡಿ ಶುಚಿಗೊಳ್ಳುವುದಕ್ಕಿಂತ , ಪಾಪ ಕೆಲಸಗಳನ್ನು ಮಾಡದೆ ಅಂತರಂಗವನ್ನು ಶುಚಿಯಾಗಿಟ್ಟುಕೊಳ್ಳುವುದು ಅತ್ಯಂತ ಮುಖ್ಯವೆಂದು ಕವಿ ಇಲ್ಲಿ ವಿವರಿಸಿರುವುದನ್ನು ಮನಗಾಣಬೇಕು .

Pageyam Balakanembare Kannada Poem Notes KSEEB Karnataka

“ ಕೆಲವಂ ಬಲ್ಲವರಿಂದ ಕಲ್ಲು” .

‘ಪುಲಿಗೆರೆ ಸೋಮನಾಥನು ರಚಿಸಿರುವ ಶತಕದ ಪದ್ಯವೊಂದರ ಆರಂಭದ ಮಾತುಗಳಿವು . ಮನುಷ್ಯ ತಿಳಿವಳಿಕೆಯ ಮೂಲಕ ಸರ್ವಜ್ಞತೆಯನ್ನು ಹೊಂದಬೇಕು . ಹಲವು ಹಳ್ಳಗಳು ಸೇರಿ ಸಮುದ್ರವಾಗುವಂತೆ ಹಲವು ಮೂಲಗಳಿಂದ ವಿಚಾರವನ್ನು ತಿಳಿದುಕೊಳ್ಳಬೇಕೆಂಬುದನ್ನು ವಿವರಿಸುತ್ತಾ ಕವಿಯು ಈ ಮೇಲಿನ ವಾಕ್ಯವನ್ನು ಹೇಳಿರು ವನು . ನಮಗೆ ತಿಳಿದಿರದ ವಿಚಾರವನ್ನು ವಿಷಯತಜ್ಞರಾದ ಪಂಡಿತರಿಂದ ಕೇಳಿ ತಿಳಿದುಕೊಳ್ಳಬೇಕೆಂದು ಕವಿ ಈ ಮೇಲಿನ ವಾಕ್ಯದ ಮೂಲಕ ಸೂಚಿಸಿದ್ದಾನೆ .

“ ಲೋಕದೊಳ್ ಮಡಿಯೇ ನಿರ್ಮಲ ಚಿತ್ತವೆ . ”

‘ಈ ಮೇಲಿನ ವಾಕ್ಯವನ್ನು ಪುಲಿಗೆರೆ ಸೋಮನಾಥನ ‘ ಸೋಮೇಶ್ವರ ಶತಕ ‘ ದಿಂದಾಯ್ದ ‘ ಪಗೆಯಂ ಬಾಲಕನೆಂಬರೇ ‘ ಎಂಬ ಕಾವ್ಯಭಾಗದಿಂದ ಆಯ್ದುಕೊಳ್ಳಲಾಗಿದೆ . ಕೆಟ್ಟದ್ದನ್ನು ಒಳ್ಳೆಯದರ ಜೊತೆಗಿಟ್ಟ ಮಾತ್ರಕ್ಕೆ ಅದರ ಕೆಟ್ಟ ಗುಣ ದೂರಾಗುವು ದಿಲ್ಲವೆಂಬುದನ್ನು ವಿವರಿಸುವಾಗ ಕವಿ ಈ ಮಾತನ್ನು ಹೇಳಿದ್ದಾನೆ . ಪಾಪಕಾರ್ಯಗಳಲ್ಲಿ ತೊಡಗಿದವನು ಪಂಚತೀರ್ಥಗಳಲ್ಲಿ ಮಿಂದ ಮಾತ್ರಕ್ಕೆ ಶುಚಿಯೆನಿಸುವುದಿಲ್ಲ . ಬೇವನ್ನು ಬೆಲ್ಲದ ಪಾನಕದೊಳಿಟ್ಟ ಮಾತ್ರಕ್ಕೆ ಅದರ ಕಹಿ ಗುಣ ದೂರಾಗಿ ಸಿಹಿಯಾಗುವುದೆ ? ಆದ್ದರಿಂದ ಮನಸ್ಸಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದೇ ನಿಜವಾದ ಮಡಿ , ಇತರ ಮಡಿಯ ಆಚರಣೆಗಳೆಲ್ಲ ಅರ್ಥಹೀನವೆಂದು ಕವಿಯು ವಿವರಿಸಿದ್ದಾನೆ .

FAQ

ಯಾರನ್ನು ಯೋಗಿ ಎನ್ನಬಹುದು ?

ಅರಿಷಡ್ವರ್ಗಗಳಾದ ಕಾಮ , ಕ್ರೋಧ , ಲೋಭ , ಮೋಹ , ಮದ , ಮತ್ಸರಗಳನ್ನು ಗೆದ್ದವನನ್ನು ‘ ಯೋಗಿ ‘ ಎನ್ನಬಹುದು .

ಹಗೆಯನ್ನು ಏನೆಂದು ಉಪೇಕ್ಷಿಸಬಾರದೆಂದು ಸೋಮನು ಹೇಳಿದ್ದಾನೆ ?

ಹಗೆಯನ್ನು ಚಿಕ್ಕದೆಂದು ಬಾಲಕನೆಂದು ಉಪೇಕ್ಷಿಸಬಾರದು ಎಂದು ಸೋಮನಾಥನು ಹೇಳಿದ್ದಾನೆ .

ಇತರೆ ವಿಷಯಗಳನ್ನು ಓದಿರಿ

ದ್ವಿತೀಯ ಪಿ.ಯು.ಸಿ. ಬಸವಣ್ಣನವರ ವಚನಗಳು ಕನ್ನಡ ನೋಟ್ಸ್‌

ಕದಡಿದ ಸಲಿಲಂ ತಿಳಿವಂದದೆ ಸಾರಾಂಶ

Leave a Reply

Your email address will not be published. Required fields are marked *