Nudigattugalu in Kannada Language Examples | ಕನ್ನಡ ನುಡಿಗಟ್ಟುಗಳು

Nudigattugalu in Kannada Language Examples | ಕನ್ನಡ ನುಡಿಗಟ್ಟುಗಳು

Nudigattugalu in Kannada Language Examples, 20 ನುಡಿಗಟ್ಟುಗಳು,50 ನುಡಿಗಟ್ಟುಗಳು, ಪ್ರಮುಖ ನುಡಿಗಟ್ಟುಗಳು, nudigattu kannada nudigattugalu examples,pdf

Nudigattugalu in Kannada Language Examples

ಕಿಡಿಕಾರು ( ಸಿಟ್ಟಿಗೇಳು ) – ವಿಭೀಷಣನನ್ನು ಕಾಣುತ್ತಲೇ ರಾವಣನು ಕಿಡಿಕಾರಿದನು .

ಕಿವಿ ಕಚ್ಚು ( ಚಾಡಿ ಹೇಳು ) – ನಿಮ್ಮಿಬ್ಬರ ಸ್ನೇಹ ಹಾಳು ಮಾಡಲೆಂದೇ ಕೆಲವರು ಅಲ್ಲಿ ಇಲ್ಲಿ ಕಿವಿ ಕಚ್ಚುತ್ತಿರುತ್ತಾರೆ .

ಕಿವಿಗೊಡು ( ಗಮನವಿಟ್ಟು ಕಿವಿಗೊಡುವುದು ಚಿಕ್ಕವರ ಕರ್ತವ್ಯ . ಕೇಳು ) ಹಿರಿಯರ ಮಾತಿಗೆ

ಕಿವಿಯ ಮೇಲೆ ಹಾಕಿಕೊಳ್ಳು ( ಮನಸ್ಸಿಟ್ಟು ಕೇಳು ) ಬಸವಣ್ಣನ ವಿರುದ್ಧ ತನಗೆ ಹಲವರು ಕೊಟ್ಟ ದೂರನ್ನು ಬಿಜ್ಜಳನು ಮೊದಮೊದಲು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ .

ಕಿವಿನೆಟ್ಟಗಾಗು ( ಗಮನ ಸೆಳೆ ) ಒಡವೆಯ ವಿಷಯ ಬಂದಾಗ ರಂಗಮ್ಮನ ಕಿವಿ ನೆಟ್ಟಗಾಯಿತು .

ಕಿವಿ ಹಿಂಡು ( ಬುದ್ಧಿ ಹೇಳು ) ನೀವಾದರೂ ಈ ಹುಡುಗನಿಗೆ ಕಿವಿಹಿಂಡಿ ಒಳ್ಳೇ ಮಾತು ಹೇಳಿ ” ಎಂದು ರಾಜಪ್ಪ ಕೇಳಿಕೊಂಡ .

ಕಿವಿದೂರ ( ಸರಿಯಾಗಿ ಕೇಳದಿರು ) – ತಿಮ್ಮಯ್ಯನ ಕಿವಿದೂರ ; ಸ್ವಲ್ಪ ಜೋರಾಗಿ ಮಾತನಾಡು . –

ಕುಂಟುನೆಪ ( ಸಕಾರಣವಲ್ಲದುದು ) ರವಿ ಸಾಲ ಕೇಳಲು ಏನಾದರೂ ಕುಂಟುನೆಪ ಹುಡುಕುತ್ತಿರುತ್ತಾನೆ .

ಕುಗ್ಗಿ ಹೋಗು ( ಕೃಶವಾಗು , ದುಃಖಿತನಾಗು ) ಹೆಂಡತಿಯನ್ನು ಕಳೆದುಕೊಂಡ ರಾಯರು ಕುಗ್ಗಿ ಹೋದರು .

ಕುತ್ತಿಗೆಗೆ ಕಟ್ಟು ( ಬಲವಂತವಾಗಿ ಹೊಣೆ ವಹಿಸು ) ಕೊನೆಗಾಲದಲ್ಲಿ ಸಾಲದ ಹೊರೆಯನ್ನು ಅಣ್ಣಯ್ಯನ ಕುತ್ತಿಗೆಗೆ ಕಟ್ಟಿಯೇ ಸತ್ತನು .

ಕುತ್ತಿಗೆ ಕೊಯ್ಯು ( ಮೋಸ ಮಾಡು ) ನಂಬಿದ ಗೆಳೆಯನೇ ಹೀಗೆ ಕುತ್ತಿಗೆ ಕೊಯ್ಯಬಹುದೇ ?

ಕುತ್ತಿಗೆಯ ಮೇಲೆ ಕುಳಿತುಕೊಳ್ಳು ( ಬಲವಂತ ಮಾಡು ) – ಚಿಕ್ಕವನು ತಾನೂ ಸಂತೆಗೆ ಬರುವುದಾಗಿ ಕುತ್ತಿಗೆಯ ಮೇಲೆ ಕುಳಿತುಬಿಟ್ಟನು .

ಕೂದಲು ಕೊಂಕದಿರು ( ಏನೂ ತೊಂದರೆಯಾಗದಿರು ) ಶಿಕ್ಷಕರು ಪ್ರವಾಸದಲ್ಲಿ ಮಕ್ಕಳ ಕೂದಲು ಕೊಂಕದ ಹಾಗೆ ಎಚ್ಚರಿಕೆಯಿಂದ ನೋಡಿಕೊಂಡರು .

ಕೂದಲು ನೆಟ್ಟಗೆ ನಿಲ್ಲು ( ರೋಮಾಂಚವಾಗು )ಆ ಭಯಾನಕ ಚಲನಚಿತ್ರ ನೋಡುತ್ತಿದ್ದರೆ ಕೂದಲು ನೆಟ್ಟಗೆ ನಿಲ್ಲುತ್ತದೆ .

ಕೈಕಟ್ಟು ( ತಡೆ , ಹಿಂದೆ ನಿಲ್ಲು )ಗಾಂಧೀಜಿಯ ಅಹಿಂಸಾವಾದದ ದೆಸೆಯಿಂದ ಅನೇಕರ ಕೈಕಟ್ಟಿದಂತಾಯಿತು .

ಕೈಕಟ್ಟಿ ಕುಳಿತುಕೊಳ್ಳು ( ನಿಸ್ಸಹಾಯಕನಾಗು ) – ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಮುಂದೆ ಕೆಲಸ ಸಾಗುವುದಿಲ್ಲ .

ಕೈಕೈ ಹಿಸುಕಿಕೊಳ್ಳು ( ಪೇಚಾಡು ) ಕಳ್ಳನು ತಪ್ಪಿಸಿಕೊಂಡ ಮೇಲೆ ಪೋಲೀಸರು ಕೈಕೈ ಹಿಸುಕಿಕೊಂಡರು .

ಕೈ ಕೊಡು ( ಮೋಸ ಮಾಡು) ಅರ್ಧಬೆಲೆಗೆ ವಸ್ತುಗಳನ್ನು ಮಾರುವುದಾಗಿ ಮುಂಗಡ ಪಡೆದ ವ್ಯಾಪಾರಿ ಎಲ್ಲರಿಗೂ ಕೈಕೊಟ್ಟು ಪರಾರಿಯಾದನು .

ಕೈಗೆ ಕೈ ಹತ್ತು ( ಜಗಳವಾಗು ) ನೀರಿನ ವಿಷಯಕ್ಕೆ ಶುರುವಾದ ಚರ್ಚೆ ಕೈಗೆ ಕೈ ಹತ್ತುವವರೆಗೂ ಬೆಳೆಯಿತು .

ಕೈಚಾಚು ( ನೆರವು ಕೇಳು ) – ಆಸ್ತಿ ಕಳೆದುಕೊಂಡ ಈರನು ಕಂಡವರ ಎದುರು ಕೈಚಾಚತೊಡಗಿದನು .

ಕೈಚೆಲ್ಲು ( ನಿರಾಶನಾಗು ) ಮಳೆ ಬಾರದೆ ಇದ್ದಾಗ ಹಳ್ಳಿಯವರು ಕೈಚೆಲ್ಲಿ ಕುಳಿತರು . ಮಂತ್ರಿಪದವಿ ಕೇಳಿದವರಿಗೆಲ್ಲ ದಾನ ‘ ಕಷ್ಟಕಾಲದಲ್ಲಿ ನೀವು ಕೈಬಿಟ್ಟರೆ

ಕೈ ಜಾರು ( ಅಧೀನದಿಂದ ಬಿಟ್ಟು ಹೋಗು ) ಕೈಜಾರಿದ ಮೇಲೆ ರಾಜಪ್ಪನವರನ್ನು ಕಾಣುವುದೇ ಅಪರೂಪ .

ಕೈ ಬರಿದಾಗು ( ಏನೂ ಇಲ್ಲದಿರು ) ಕೊಡುತ್ತಿದ್ದ ಪಟೇಲರ ಕೈ ಬರಿದಾಯಿತು .

ಕೈಬಿಡು ( ಸಹಾಯ ಮಾಡದಿರು ) ನನಗಾರು ಗತಿ ? ” ಎಂದು ರಹೀಮನು ಗೋಗರೆದನು . ಕೈ ಬಿಸಿ ಮಾಡು ( ಲಂಚ ಕೊಡು ) ಬಿಸಿಮಾಡದಿದ್ದರೆ ನಿಮ್ಮ ಕೆಲಸ ಆಗೋದಿಲ್ಲ .

ಕೈ ಮಾಡು ( ಹೊಡೆ ) ಕೆಲವರು ಚಾಲಕನ ಮೇಲೆ ಕೈ ಮಾಡಿದರು . ಈ ಕಛೇರಿಯಲ್ಲಿ ಕೈ ವಾಹನವನ್ನು ಅಡ್ಡನಿಲ್ಲಿಸಿದ ಕಾರಣಕ್ಕೆ

ಕೈ ಮೇಲಾಗು ( ಗೆಲ್ಲು ) ಈ ಸಲದ ಚುನಾವಣೆಯಲ್ಲಿ ಪ್ರತಿಪಕ್ಷದ ಕೈಮೇಲಾಗುವಂತಿದೆ .

kannada nudigattu examples

ಕೈ ಸುಟ್ಟುಕೊಳ್ಳು ( ವ್ಯವಹಾರದಲ್ಲಿ ನಷ್ಟವಾಗು ) ದೀಪಾವಳಿಗೆ ಮಳೆ ಬಂದು ಪಟಾಕಿ ವ್ಯಾಪಾರಿಗಳು ಕೈ ಸುಟ್ಟುಕೊಂಡರು .

ಕೈ ಹಿಡಿ ( ಮದುವೆಯಾಗು ) ಶಾಮಣ್ಣ ಕೈಹಿಡಿಯಲು ಒಪ್ಪಿದ್ದಾನೆ . ರಾಯರ ಮಗಳ

ಕೊರಳಿಗೆ ಕಟ್ಟು ( ಒತ್ತಾಯದಿಂದ ವಹಿಸು )ಉಪಾಧ್ಯಕ್ಷರ ಪದವಿಯನ್ನು ಗೌಡರ ಕೊರಳಿಗೆ ಕಟ್ಟಿದ್ದಾರೆ .

ಕೊಡಲಿ ಪೆಟ್ಟು ( ಮೂಲಕ್ಕೆ ಆಘಾತವಾಗು )- ಬರಗಾಲವು ರೈತರ ಭವಿಷ್ಯಕ್ಕೆ ಕೊಡಲಿಪೆಟ್ಟಾಗಿ ಪರಿಣಮಿಸುತ್ತದೆ .

ಕೋಡು ಮೂಡು ( ಗರ್ಪಿಸು ) – ಮಗನಿಗೆ ಕೆಲಸ ಸಿಕ್ಕಿದ ಮೇಲೆ ಗೌರಮ್ಮನಿಗೆ ಕೋಡುಮೂಡಿದಂತಾಯಿತು .

ಕ್ಷೌರವಾಗು ( ಹಣ ನಷ್ಟವಾಗು ) ಚೀಟಿ ವ್ಯವಹಾರದಲ್ಲಿ ಅನೇಕರಿಗೆ ಸರಿಯಾಗಿ ಕ್ಷೌರವಾಗಿದೆ .

ಗಂಟಲು ಬಿಗಿ ( ದುಃಖದಿಂದ ಮಾತನಾಡದಂತಾಗು ) ಮಕ್ಕಳನ್ನು ನೀನು ಉದ್ದೇಶಿಸಿ ಮಾತನಾಡಲು ನಿಂತ ಶಿಕ್ಷಕರಿಗೆ ಗಂಟಲು ಬಿಗಿದು ಬಂದಿತು .

ಗಂಟಲು ಹರಿದುಕೋ ( ಗಟ್ಟಿಯಾಗಿ ಮಾತನಾಡು ) ಎಷ್ಟಾದರೂ ಗಂಟಲು ಹರಿದುಕೋ , ನಾನು ಮಾತ್ರ ಪಾಲು ಕೊಡೋದಿಲ್ಲ .

ಗಂಟುಬೀಳು ( ಸಂಬಂಧವಾಗು ) ಹರಿಶ್ಚಂದ್ರನಿಗೆ ನಕತ್ರಿಕ ಗಂಟುಬಿದ್ದ ಹಾಗಾಯಿತು .

ಗಂಟು ಕರಗು ( ಹಣವೆಲ್ಲ ಖರ್ಚಾಗು ) ಹೀಗೆ ದುಂದುವೆಚ್ಚ ಮಾಡಿದರೆ ಗಂಟು ಕರಗದೆ ಇರುತ್ತದೆಯೇ ?

ಗಂಟುಮೂಟೆ ಕಟ್ಟು ( ಊರು ಬಿಟ್ಟು ಹೊರಡು ) – ಸಾಹುಕಾರನಿಂದ ವಂಚಿತರಾದ ಆಳುಗಳು ಗಂಟು ಮೂಟೆ ಕಟ್ಟಿದರು .

ಗಜಗಮನ ( ನಿಧಾನದ ನಡೆ ) ಸರ್ಕಾರದಲ್ಲಿ ಹಣವಿಲ್ಲದೆ ಅಭಿವೃದ್ಧಿ
ಕಾರಗಳು ಗಜಗಮನದಲ್ಲಿ ಸಾಗಿವೆ .

ಗಾಡಿ ಬಿಡು ( ಹೊರಡು ) – ನಿನಗೆ ಇಲ್ಲೇನೂ ಸಿಗುವುದಿಲ್ಲ . ಮೊದಲು ಗಾಡಿ ಬಿಡು .

ಗಾಯದ ಮೇಲೆ ಬರೆ ಎಳೆ ( ಮತ್ತೆ ಮತ್ತೆ ಕಷ್ಟ ಬರುವುದು ) ಮೊದಲೇ ಸಾಕಷ್ಟು ನೊಂದಿದ್ದ ನಂಜಪ್ಪನಿಗೆ ಮಳೆಯೂ ಸಕಾಲಕ್ಕೆ ಬಾರದೆ ಗಾಯದ ಮೇಲೆ ಬರೆ ಎಳೆದಂತಾಯಿತು . ನುಡಿಗಟ್ಟುಗಳು

ಕಣ್ಣುಮುಚ್ಚು ( ಮರಣ ಹೊಂದು ) ಕೊನೆಗೂ ಆ ಮುದುಕ ಕಣ್ಣುಮುಚ್ಚಿದನಂತೆ .

ಕಣೋಡಿಸು ( ಮೇಲುನೋಟಕ್ಕೆ ಪರೀಕ್ಷಿಸು ) – ವೈದ್ಯರು ಚಿಕಿತ್ಸೆಯ ವರದಿಯನ್ನು ಹಿಡಿದು ಒಮ್ಮೆ ಕಣೋಡಿಸಿದರು .

ಕನಸು ನನಸಾಗು ( ಆಶೆ ನೆರವೇರು ) ಬೇಕೆಂಬ ಬಾಲುವಿನ ಕನಸು ನನಸಾಯಿತು . ತಾನೂ ಕ್ರಿಕೆಟ್ ಆಟಗಾರನಾಗ

ಪಾಲಮೋಕ್ಷ ಮಾಡು ( ಕೆನ್ನೆಗೆ ಹೊಡೆ ) – ಮಕ್ಕಳ ದುಡ್ಡು ಕದ್ದು ಸಿಕ್ಕಿಬಿದ್ದ ಬಸವನಿಗೆ ಉಪಾಧ್ಯಾಯರು ಕಪಾಲಮೋಕ್ಷ ಮಾಡಿದರು .

ಕಬ್ಬಿಣದ ಕಡಲೆ ( ಕಠಿಣ ವಿಷಯ ) – ಕೆಲವು ಮಕ್ಕಳಿಗೆ ಗಣಿತವೆಂದರೆ ಕಬ್ಬಿಣದ ಕಡಲೆ .

ಕರ ಜೋಡಿಸು ( ಕೈಮುಗಿ ) – ತಮ್ಮ ಮನವಿಯನ್ನು ಅಂಗೀಕರಿಸು ವಂತೆ ರೈತರು ಅಧಿಕಾರಿಯ ಎದುರು ಕರಜೋಡಿಸಿ ನಿಂತರು .

ಕನ್ನಡ ನುಡಿಗಟ್ಟುಗಳು

ಕರುಳು ಹಿಂಡು ( ಸಂಕಟವಾಗು ) – ಮಗುವಿನ ನರಳಾಟವನ್ನು ಕಂಡು ತಾಯಿಯ ಕರುಳು ಹಿಂಡಿದಂತಾಯಿತು .

ತಾಯ ಕರುಳು ಕಿತ್ತು ಬರು ( ಬಹಳ ದುಃಖವಾಗು ) ರೋದನವನ್ನು ಕಂಡವರ ಕರುಳು ಕಿತ್ತುಬರುವಂತಿತ್ತು .

ಕಲ್ಲು ಮನಸ್ಸು ( ಕಠೋರವಾದ ಮನಸ್ಸು ) ಕಲ್ಲುಮನಸ್ಸಿನವನೆಂದು ನನಗೆ ತಿಳಿದಿರಲಿಲ್ಲ . ನೀನು ಇಷ್ಟೊಂದು

ಕಾಲಿಗೆ ಬುದ್ಧಿ ಹೇಳು ( ಪಲಾಯನ ಮಾಡು ) – ನಾಯಿಯನ್ನು ಕಂಡ ನರಿ ಕಾಲಿಗೆ ಬುದ್ಧಿ ಹೇಳಿತು .

ಕಾಲೂರು ( ನೆಲೆ ನಿಲ್ಲು ) ನಮ್ಮ ಪೂರ್ವಿಕರು ಮೈಸೂರಿನಲ್ಲೇ ಕಾಲೂರಿದರು .

ಕಾಲು ಕೀಳು ( ಹೊರಡು )ಇನ್ನು ಅಲ್ಲಿ ನಿಲ್ಲುವುದು ಸರಿಯಲ್ಲ ಎಂದು ಅಪ್ಪು ಅಲ್ಲಿಂದ ಕಾಲುಕಿತ್ತನು .

ಕಾಲು ಕೆರೆ ( ಜಗಳಕ್ಕೆ ಮುಂದಾಗು ) ಕೆರೆಯುತ್ತಿದ್ದರೆ ಯಾರು ತಾನೇ ನಿನ್ನ ಜೊತೆಗಿರುತ್ತಾರೆ ? ಹೀಗೆ ಯಾವಾಗಲೂ ಕಾಲು

ಕಾಲು ಚಾಚಿ ಕುಳಿತುಕೊಳ್ಳು ( ದುಡಿಯದೆ ಆರಾಮವಾಗಿರು ) ಪುಣ್ಯಾತ್ಮ ಇರುವ ಕೆಲಸವನ್ನೂ ಬಿಟ್ಟು ಕಾಲುಚಾಚಿಕೊಂಡು ಕುಳಿತಿದ್ದಾನೆ .

Leave a Reply

Your email address will not be published. Required fields are marked *