ಕರ್ನಾಟಕದ ಖನಿಜ ಸಂಪನ್ಮೂಲಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ

ಕಬ್ಬಿಣದ ಅದಿರು 

ಕಬ್ಬಿಣದ ಅದಿರು - ವಿಕಿಪೀಡಿಯ

  • ಭಾರತದಲ್ಲಿ ಕರ್ನಾಟಕವು ಕಬ್ಬಿಣದ ಅದಿರಿನ ನಿಕ್ಷೇಪ ಮತ್ತು ಉತ್ಪಾದನೆಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ .
  •  ಕರ್ನಾಟಕದಲ್ಲಿ ಮ್ಯಾಗ್ನಾಟೈಟ್ ಮತ್ತು ಹೆಮಟೈಟ್ ಅದಿರಿನ ಕ್ಷೇಪಗಳು ಸುಮಾರು ಶೇ . 65 ರಷ್ಟಿದೆ .
  • ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ , ಕಾಳಹಟ್ಟಿ ಯನ್ನು ಹಾಗೂ ಕೆಮ್ಮಣ್ಣುಗುಂಡಿ , ಬಳ್ಳಾರಿ ಜಿಲ್ಲೆಯ ಸಂಡೂರು ಮತ್ತು ಹೊಸಪೇಟೆ ಮತ್ತು ರಾಮದುರ್ಗ , ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮತ್ತು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ , ಶಿವಮೊಗ್ಗ ಜಿಲ್ಲೆಯ ಸಿದ್ದರಹಳ್ಳಿ , ದಾವಣಗೆರೆ ಜಿಲ್ಲೆಯ ಚನ್ನಗಿರಿಗಳಲ್ಲಿ ಕಬ್ಬಿಣದ ಅದಿರಿನ ನಿಕ್ಷೇಪಗಳು ಕಂಡುಬರುತ್ತವೆ .
  • ಚಿಕ್ಕಮಗಳೂರಿನ ಭಾಬಾಬುಡನ್ ಗಿರಿ ಮತ್ತು ಕುದುರೆಮುಖ ಪ್ರದೇಶಗಳಲ್ಲಿ ಅತಿ ಹೆಚ್ಚು ಕಬ್ಬಿಣದ ಅದಿರಿನ ನಿಕ್ಷೇಪಗಳು ಕಂಡುಬರುತ್ತವೆ . ಇಲ್ಲಿ ಮೊಟ್ಟ ಮೊದಲು ಕಬ್ಬಿಣದ ಅದಿರಿನ ಗಣಿಗಾರಿಕೆಯನ್ನು ಪ್ರಾರಂಭಿಸಲಾಯಿತು .
  • ರಾಜ್ಯದ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ದೋಣಿ ಮಲೈನಲ್ಲಿ ಉತ್ತಮ ದರ್ಜೆಯ ಕಬ್ಬಿಣದ ಅದಿರು ದೊರೆಯುತ್ತದೆ .
  • ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಹೆಮಟೈಟ್ ದರ್ಜೆಗೆ ಸೇರಿದ ಕಬ್ಬಿಣದ ಅದಿರು ದೊರೆಯುತ್ತದೆ . ಈ ಅದಿರು ಜಿಂದಾಲ್ ಕೈಗಾರಿಕೆಯಲ್ಲಿ ಬಳಕೆಯಾಗುತ್ತದೆ . ಅಲ್ಲದೆ ಇಲ್ಲಿನ ಹೆಚ್ಚಿನ ಪ್ರಮಾಣದ ಅದಿರು ಮರ್ಮಗೋವಾ ಮತ್ತು ವಿಶಾಖಪಟ್ಟಣ ಬಂದರಿನ ಮೂಲಕ ವಿದೇಶಗಳಿಗೆ ರಫ್ತಾಗುತ್ತದೆ .
  •  ಕುದುರೆಮುಖ ಪ್ರದೇಶದಲ್ಲಿ ಮ್ಯಾಗ್ನಟೈಟ್ ಅದಿರು ದೊರೆಯುತ್ತದೆ . ಇಲ್ಲಿ ದೊರೆಯುವ ಅದಿರನ್ನು ಜಪಾನ್ ಮತ್ತು ಇರಾನ್ ದೇಶಗಳಿಗೆ ರಫ್ತು ಮಾಡಲಾಗುತ್ತದೆ .

ಮ್ಯಾಂಗನೀಸ್

Manganeso Símbolo: Mn Estado: Solido Es un metal de transición ...

  • ಕರ್ನಾಟಕ ಮ್ಯಾಂಗನೀಸ್ ಅದಿರಿನ ಉತ್ಪಾದನೆಯಲ್ಲಿ ದೇಶದಲ್ಲಿ 4 ನೇ ಸ್ಥಾನದಲ್ಲಿದೆ .
  • ಕರ್ನಾಟಕದಲ್ಲಿ 1904 ರಲ್ಲಿ ಮ್ಯಾಂಗನೀಸ್ ಗಣಿ ಕಾರ್ಯ ಆರಂಭವಾಯಿತು .
  • ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ 15 ರಷ್ಟು ಉತ್ಪಾದನೆಯನ್ನು ಕರ್ನಾಟಕ ಹೊಂದಿದೆ
  • ಕರ್ನಾಟಕದಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು , ಚಿಕ್ಕಮಗಳೂರಿನ ತರೀಕರೆ , ಶಿವಮೊಗ್ಗದ ಶಂಕರಗುಡ್ಡ , ಹೊನ್ನಹಳ್ಳಿ , ತುಮಕೂರಿನ ಚಿಕ್ಕನಾಯಕನಹಳ್ಳಿ , ಉತ್ತರಕನ್ನಡದ ಸೂಪಾ , ಬೆಳಗಾವಿಯ ಲೋಂಡಾ , ಮೊದಲಾದ ಕಡೆ ಮ್ಯಾಂಗನೀಸ್ ಅದಿರಿನ ನಿಕ್ಷೇಪಗಳು ಕಂಡುಬರುತ್ತವೆ .
  • ಕರ್ನಾಟಕದಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ಮ್ಯಾಂಗನೀಸ್ ಅದಿರನ್ನು ಉತ್ಪಾದಿಸುವ ಮುಖ್ಯ ಗಣಿ ಪ್ರದೇಶವಾಗಿದೆ .

ಕರ್ನಾಟಕದ ಖನಿಜ ಸಂಪನ್ಮೂಲಗಳು

ಬಾಕ್ಸೈಟ್

ಬಾಕ್ಸೈಟ್ - ವಿಕಿಪೀಡಿಯ

  • ಕರ್ನಾಟಕ ರಾಜ್ಯದಲ್ಲಿ ಬಾಕ್ಸೈಟ್ ಅದಿರಿನ ನಿಕ್ಷೇಪ ಮತ್ತು ಉತ್ಪಾದನೆ ಅತ್ಯಲ್ಪವಾಗಿರುತ್ತದೆ .
  • ದೇಶದ ಒಟ್ಟು ನಿಕ್ಷೇಪದ ಶೇ 1.5 ರಷ್ಟನ್ನು ಮಾತ್ರ ಹೊಂದಿದೆ .
  • ರಾಜ್ಯದಲ್ಲಿ ಬಾಕ್ಸೈಟ್ ಅದಿರನ್ನು ಉತ್ಪಾದಿಸುವ ಮುಖ್ಯ ಜಿಲ್ಲೆಗಳೆಂದರೆ : – ಬೆಳಗಾವಿ , ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿ , ಧೂಪದಗಿರಿ ಮತ್ತು ಖಾತಾಗಿರಿ .
  • ಕರ್ನಾಟಕದಲ್ಲಿ ಬೆಳಗಾವಿ ಜಿಲ್ಲೆಯು ಬಾಕ್ಸೈಟ್ ಅದಿರನ್ನು ಉತ್ಪಾದಿಸುವ ಪ್ರಮುಖ ಜಿಲ್ಲೆಯಾಗಿದೆ .
  • ಬೆಳಗಾವಿಯಲ್ಲಿ ಉತ್ಪಾದನೆಯಾಗುವ ಬಾಕ್ಸೈಟ್ ಅಲ್ಯೂಮಿನಿಯಂ ಕೈಗಾರಿಕೆಗಳಲ್ಲಿ ಸಂಸ್ಕರಣೆಗೊಳ್ಳುತ್ತದೆ .

ಚಿನ್ನ ( ಬಂಗಾರ- Gold )

Gold, Indian Mineral Resource

  • ಕರ್ನಾಟಕವು ದೇಶದಲ್ಲಿಯೇ ಅತೀ ಹೆಚ್ಚು ಚಿನ್ನವನ್ನು ಉತ್ಪಾದಿಸುವ ರಾಜ್ಯವಾಗಿದೆ .
  • ದೇಶದ ಉತ್ಪಾದನೆಯಲ್ಲಿ ಶೇ . 98 ರಷ್ಟನ್ನು ಉತ್ಪಾದಿಸುತ್ತದೆ .
  • ಕರ್ನಾಟಕದಲ್ಲಿ ಚಿನ್ನದ ನಿಕ್ಷೇಪಗಳು ಪ್ರಮುಖವಾಗಿ ಕೋಲಾರ , ರಾಯಚೂರು , ಧಾರವಾಡ , ಗದಗ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಕಂಡು ಬರುತ್ತವೆ .
  • ಕೋಲಾರದಲ್ಲಿ ಚಿನ್ನ ಅನ್ವೇಷಣೆಯು ಪ್ರಥಮ ದಾಖಲೆ ದೊರೆತಿದ್ದು ಕ್ರಿ.ಶ. 1802 ರಲ್ಲಿ ಇಲ್ಲಿಯ ಚಿನ್ನದ ನಿಕ್ಷೇಪದ ಜಾಡನ್ನು ಈಸ್ಟ್ ಇಂಡಿಯಾ ಕಂಪನಿಯ ‘ ಲೆಫ್ಟಿನೆಂಟ್ ಜಾನ್ ವಾರೆನ್ ‘ ಕಂಡು ಹಿಡಿದರು . ಆನಂತರ ಜಾನ್ . ಟೇಲರ್ ಆಧುನಿಕ ಗಣಿ ತಂತ್ರಜ್ಞನಾಗಿ ಕೋಲಾರದ ಚಿನ್ನದ ಉದ್ಯಮಕ್ಕೆ 1882 ರಲ್ಲಿ ಜೀವ ತುಂಬಿದನು .
  • ಕೋಲಾರದ ಗಣಿಗಳಲ್ಲಿ ದೊರೆಯುವ ಅದಿರಿನ ಪ್ರಮಾಣ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಚಿನ್ನವನ್ನು ಹೊರತೆಗೆಯುವ ಕಾರ್ಯವನ್ನು ಸ್ಥಗಿತ ಗೊಳಿಸಲಾಗಿದೆ .
  • ರಾಯಚೂರಿನ ಹಟ್ಟಿ ಚಿನ್ನದ ಗಣಿಗಳು ಜಗತ್ತಿನ ಪುರಾತನ ಗಣಿಗಳ ಸಾಲಿಗೆ ಸೇರುತ್ತದೆ .
  • ಕ್ರಿ.ಶ. 1906 ರಲ್ಲಿ ಮೆಕಾನ್ ಎಂಬಾತ ದಕ್ಷಿಣ ಭಾರತದಾದ್ಯಂತ ಚಿನ್ನದ ಗಣಿಗಳ ನಿಕ್ಷೇಪವನ್ನು ಪರಿಶೀಲಿಸಿ ಸುಮಾರು 300 ಪುರಾತನ ಚಿನ್ನದ ಗಣಿಗಳಿರುವುದನ್ನು ಪತ್ತೆ ಹಚ್ಚಿದ್ದನು .
  • ಕ್ರಿ.ಶ. 1877 ರ ಸುಮಾರಿಗೆ ಹೈದರಾಬಾದಿನ ಡೆಕ್ಕನ್ ಕಂಪನಿಯು ಹಟ್ಟಿಯಲ್ಲಿ 2590 ಚ.ಕಿ.ಮೀ. ಪ್ರದೇಶವನ್ನು ಗುತ್ತಿಗೆ ಪಡೆದು ರಾಯಚೂರು ದೋ ಅಬ್ ಗೋಲ್ಡ್ ಫೀಲ್ಡ್ ಎನ್ನುವ ಹೆಸರಿನಲ್ಲಿ ಸಮೀಕ್ಷೆ ನಡೆಸಿ ಚಿನ್ನ ಶೋಧನೆ ಕೈಗೆತ್ತಿಕೊಂಡಿತು .
  • ಹೈದರಾಬಾದಿನ ಅಧೀನಕ್ಕೊಳಪಟ್ಟಿದ್ದ ಹಟ್ಟಿ ಚಿನ್ನದ ಗಣಿಗಳು ಕರ್ನಾಟಕದ ಏಕೀಕರಣ ನೀತಿಯಿಂದಾಗಿ 1956 ರಲ್ಲಿ ಮೈಸೂರು ಸರ್ಕಾರ ಸ್ವಾಮ್ಯಕ್ಕೊಳಪಟ್ಟವು . ಪ್ರಸ್ತುತ ‘ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ‘ ಕಂಪನಿಯು ಚಿನ್ನದ ಉತ್ಪಾದನೆಯ ಜವಾಬ್ದಾರಿ ವಹಿಸಿಕೊಂಡಿದೆ .
  • ಅಲ್ಲದೆ ರಾಜ್ಯದಲ್ಲಿ ಚಿತ್ರದುರ್ಗದ ಗೋಲ್ಡ್ ಯೂನಿಟ್ ಮತ್ತು ತುಮಕೂರಿನ ಅಜ್ಜನಹಳ್ಳಿ , ರಾಯಚೂರಿನ ಹಿರಾಬುದ್ದಿನ್ನಿ , ಮಸ್ಕಿ ಬುದ್ದಿನ್ನಿಗಳಲ್ಲಿ ಗಣಿಗಾರಿಕೆ ಕೈಗೊಳ್ಳುವ ಯೋಜನೆಗಳಿವೆ .

ಇತರ ಪ್ರಶ್ನೋತ್ತರಗಳು

• ಭಾರತದಲ್ಲಿ ಝಾರ್ಖಂಡ್ & ಓರಿಸ್ಸಾ ರಾಜ್ಯಗಳು ಅತಿ ಹೆಚ್ಚು ಕಬ್ಬಿಣದ ಅದಿರಿನ ನಿಕ್ಷೇಪವನ್ನು ಹೊಂದಿವೆ.
• ಬಾಕ್ಸೈಟ್ ಅದಿರಿನಿಂದ ಅಲ್ಯೂಮಿನಿಯಂ ಲೋಹವನ್ನು ಉತ್ಪಾದಿಸುತ್ತಾರೆ.
• ಅಭ್ರಕವನ್ನು ಕಾಗೆ ಬಂಗಾರ ಎಂದು ಕರೆಯುತ್ತಾರೆ.
• ಕಬ್ಬಿಣದ ಮಿಶ್ರ ಲೋಹಗಳಲ್ಲಿ ಅತಿ ಮುಖ್ಯವಾದ ಮಿಶ್ರ ಲೋಹ ಮಾಂಗನೀಸ್ ಆಗಿದೆ.
• ಭಾರತವು ಅಭ್ರಕ ಅದಿರಿನ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಅಗ್ರ ಸ್ಥಾನದಲ್ಲಿದೆ.
• ಚಿನ್ನವು ಪ್ರಾಚೀನ ಕಾಲದಿಂದಲೂ ಪ್ರಪಂಚದಾದ್ಯಂತ ಅತ್ಯಂತ ಹೆಚ್ಚಿನ ಮೌಲ್ಯವನ್ನು ಹೊಂದಿದ
• ಲೋಹವಾಗಿದೆ.
• ದ್ರವರೂಪದ ಚಿನ್ನ : ಪೇಟ್ರೋಲಿಯಂ : : ಕಪ್ಪು ಬಂಗಾರ : ಕಲ್ಲಿದ್ದಲು.
• ಭಾರತದ ಆಸ್ಸಾಂನ ‘ದಿಗ್ಬಾಯಿ’ ಎಂಬಲ್ಲಿ ಪೆಟ್ರೋಲಿಯಂನ್ನು ಮೊದಲು ಪತ್ತೆ ಹಚ್ಚಲಾಯಿತು.
• ಬಾಂಬೈ ಹೈ ಪ್ರದೇಶವು ಭಾರತದ ಅತಿ ದೊಡ್ಡ ತೈಲ ನಿಕ್ಷೇಪವಾಗಿದೆ.
• ಭಾರತದಲ್ಲಿ ಮೊದಲ ಸೌರ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ರಾಜಸ್ತಾನದ ಬಾರ್‍ಮರ್‍ನಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ.

ಕರ್ನಾಟಕದ ಖನಿಜ ಸಂಪನ್ಮೂಲಗಳು

ಪ್ರಚಲಿತ ಘಟನೆಯ ಅಣಕು ಪರೀಕ್ಷೆ ಭಾಗ -04

spardhavani mark gif

en badge web generic download tl

GENERAL STUDIES (SAMANYA ADYAYANA) KAS,IAS,KPSC,SDA/FDA, PDO BANK EXAM, ALL COMPITATIVE EXAM COMPLETE STUDY KANNADA BOOK

51OJLACayIL. SX372 BO1,204,203,200
BUY NOW

Bharatada Samvidhana Sarakara Mattu Rajakiya

 

IC
BUY NOW

Current Affairs – Useful for FDA SDA , BWSSB, RPF (Kannada)

51hVYhI47IL. SX385 BO1,204,203,200
BUY NOW

2 thoughts on “ಕರ್ನಾಟಕದ ಖನಿಜ ಸಂಪನ್ಮೂಲಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ

Leave a Reply

Your email address will not be published. Required fields are marked *