ಕನ್ನಡ ಪತ್ರಲೇಖನ | Letter Writing In Kannada

ಕನ್ನಡ ಪತ್ರಲೇಖನ | Letter Writing In Kannada

letter writing in kannada, ಕನ್ನಡ ಪತ್ರಲೇಖನ, official letter writing in kannada, kannada letter, informal letter in kannada, leave letter in kannada, letter writing in english, ಕನ್ನಡ ಪತ್ರಲೇಖನ pdf, ವ್ಯವಹಾರಿಕ ಪತ್ರ ಕನ್ನಡ, ವೈಯಕ್ತಿಕ ಪತ್ರ ಕನ್ನಡ pdf, kannada letter writing, letter writing in kannada pdf, kannada pathralekana

Letter Writing In Kannada

ಅಮ್ಮನಿಗೊಂದು ಪತ್ರ

ಬೆಂಗಳೂರು

10-01-2017

ನನ್ನ ಪ್ರೀತಿಯ ಅಮ್ಮನಿಗೆ,

ನಿಮ್ಮ ಮಗಳಾದ ತೇಜಸ್ವಿನಿ ಮಾಡುವ ನಮಸ್ಕಾರಗಳು. ಇಲ್ಲಿ ನಾನು ಆರೋಗ್ಯವಾಗಿದ್ದೇನೆ. ನಿಮ್ಮ ಆರೋಗ್ಯದ ಬಗ್ಗೆ ಆಗಾಗ ಪತ್ರ ಬರೆಯುತ್ತಿರಿ.
ಕಳೆದ ಶನಿವಾರ ಡಿಸೆಂಬರ್ 24ರಂದು ಶಾಲಾ ಪ್ರವಾಸ ಏರ್ಪಡಿಸಿದರು. ಬೆಳಗಿನ ಜಾವ 4.00 ಗಂಟೆಗೆ ಬಸ್ಸು ಹತ್ತಿದೆವು. ಎಲ್ಲರಲ್ಲೂ ಉತ್ಸಾಹ ಸಡಗರ ತುಂಬಿತ್ತು. ಪ್ರವಾಸಿ ಬಸ್ ನಮ್ಮೆಲ್ಲರನ್ನು ಹೊತ್ತು ಬೆಂಗಳೂರಿನಿಂದ ಹೊರಟಿತು. ಸುಮಾರು 175 ಕಿ.ಮೀ. ದೂರದಲ್ಲಿರುವ ಶ್ರವಣಬೆಳಗೊಳವನ್ನು ತಲುಪಿತು. ಆಗ ಬೆಳಗಿನ 8.00 ಗಂಟೆಯ ಸಮಯ. ಅಲ್ಲಿನ ಅತಿಥಿ ಗೃಹವೊಂದರಲ್ಲಿ ನಮ್ಮ ನಿತ್ಯ ಕರ್ಮಗಳನ್ನು ಮುಗಿಸಿದೆವು. ಉಪಾಹಾರ ಸೇವಿಸಿ ಬೆಟ್ಟದತ್ತ ಹೆಜ್ಜೆ ಹಾಕಿದೆವು.
ಸುಮಾರು 650 ಕ್ಕೂ ಹೆಚ್ಚು ಮೆಟ್ಟಿಲುಗಳು, ಭೂ ಮಟ್ಟದಿಂದ ಸುಮಾರು 470 ಅಡಿಗಳಷ್ಟು ಎತ್ತರ. ನಾವೆಲ್ಲರೂ ಜಿಂಕೆಯಂತೆ ಓಡುತ್ತಾ-ಜಿಗಿಯುತ್ತಾ ಬೆಟ್ಟ ಹತ್ತಿದೆವು. ಬೆಟ್ಟದ ತುದಿಯನ್ನು ಏರಿದಾಗ 58 ಅಡಿ ಎತ್ತರದ ಭವ್ಯವಾದ ಗೊಮ್ಮಟೇಶ್ವರನ ವಿಗ್ರಹ, ಚಾವುಂಡರಾಯನು ಅದನ್ನು ಕೆತ್ತಿಸಿರುವನೆಂದು ಹೇಳುತ್ತಾರೆ.

ಅದು ಏಕಶಿಲಾ ಸುಂದರ ಮೂರ್ತಿ, ತಲೆ ಎತ್ತಿ ನೋಡಬೇಕು. ಬಾಹುಬಲಿ ವಿಗ್ರಹದ ಮುಂದೆ ನಾವು ಬಹಳ ಚಿಕ್ಕವರಾಗಿ ಕಾಣುತ್ತೇವೆ. ಮುಗುಳಗೆಯನ್ನು ಸೂಸುತ್ತಿರುವ ಆ ಮುಖ ಅದ್ಭುತವಾಗಿದೆ. ಗೊಮ್ಮಟನ ಮೂರ್ತಿಗೆ ಹಚ್ಚಿದ ಶಿಲಾಲತೆ ವಿಶೇಷ ಸೌಂದರ್ಯ ನೀಡಿದೆ. ನೋಡಿದಷ್ಟೂ ನೋಡಬೇಕು ಎನಿಸುತ್ತದೆ. ಕಣ್ಣು ತಣಿಯದು, ಮನಸ್ಸು ಮಾಗದು. ಆ ಬೃಹತ್ ವಿಗ್ರಹ ಕೆತ್ತಿದ ಶಿಲ್ಪಿಗೆ ನಾವೆಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಮನಸ್ಸಿಲ್ಲದ ಮನಸ್ಸಿನಿಂದ ಬೆಟ್ಟ ಇಳಿದೆವು.

ಮಧ್ಯಾಹ್ನ ಊಟ ಮಾಡಿದ ನಂತರ ಮರದ ಕೆಳಗೆ ಒಂದಿಷ್ಟು ವಿಶ್ರಾಂತಿ ಪಡೆದೆವು. ನಾನು ನನ್ನ ಗೆಳತಿಯರು ಕೆಲವು ಅಪರೂಪದ ಕಲಾಕೃತಿಗಳನ್ನು ಕೊಂಡುಕೊಂಡೆವು. ನಂತರ ಬಸ್ಸನ್ನು ಏರಿ ಕುಳಿತ ನಮಗೆ ಬೆಂಗಳೂರು ತಲುಪಿದ್ದು ಗೊತ್ತಾಗಲೇ ಇಲ್ಲ. ಗೊಮ್ಮಟ ಮೂರ್ತಿಯ ಹಸನ್ಮುಖತೆ ದಿವ್ಯ ಸಂದೇಶವನ್ನು ನೀಡುತ್ತಿತ್ತು.

ಅಮ್ಮ ಇದೊಂದು ಅಪರೂಪದ ಯಾತ್ರಾ ಸ್ಥಳ, ಮತ್ತೊಮ್ಮೆ ನಿಮ್ಮ ಜೊತೆ ಶ್ರವಣಬೆಳಗೊಳಕ್ಕೆ ಹೋಗಬೇಕು ಅನಿಸುತ್ತಿದೆ. ಈ ಪತ್ರದ ಜೊತೆಗೆ ಕೆಲವು ಫೋಟೋಗಳನ್ನು ಕಳಿಸಿರುವೆನು. ಅಪ್ಪನಿಗೆ ವಂದನೆಗಳನ್ನು ತಿಳಿಸು.

ನಿಮ್ಮ ಪ್ರೀತಿಯ ಮಗಳು

ತೇಜಸ್ವಿನಿ

ಬನಶಂಕರಿ ಸರ್ಕಾರಿ ಹಿ. ಪ್ರಾ.ಶಾಲೆ

ಹೊಸಕೆರೆಹಳ್ಳಿ, ಬೆಂಗಳೂರು-85

ಇವರಿಗೆ:
ಶ್ರೀಮತಿ ರಾಜೇಶ್ವರಿ ಮನೆ ನಂ.

10; ಜಿ.ಎಸ್. ಶಿವರುದ್ರಪ್ಪ ರಸ್ತೆ,

ಶಿಕಾರಿಪುರ – 577472 ಶಿವಮೊಗ್ಗ ಜಿಲ್ಲೆ.

ಅಮ್ಮನಿಂದ ಮಗಳಿಗೆ ಮರುಪತ್ರ

15-01-2017

ಶಿಕಾರಿಪುರದಿಂದ

ಪ್ರೀತಿಯ ತೇಜಸ್ವಿನಿಗೆ
ನಾವು ಇಲ್ಲಿ ಆರೋಗ್ಯದಿಂದ ಇದೇನೆ. ನಿನ್ನೆ ದಿನ ನಿನ್ನ ಪತ್ರ ಬಂದು ತಲುಪಿತು. ನೀವು ಶಾಲೆಯಿಂದ ಪ್ರವಾಸಕ್ಕೆ ಹೋದ ವಿಚಾರ ತಿಳಿದು ಸಂತೋಷವಾಯಿತು. ನೀನು ಶ್ರವಣಬೆಳಗೊಳ ನೋಡಿದ ಬಗ್ಗೆ ತುಂಬಾ ಚೆನ್ನಾಗಿ ಬರೆದಿರುವೆ. ನೀನು ಕಳಿಸಿದ ಫೋಟೋಗಳನ್ನು ಮತ್ತು ನೀನು ಬರೆದ ಪತ್ರವನ್ನು ನೋಡಿದ ನಿನ್ನ ಅಪ್ಪ “ನೋಡು, ನಮ್ಮ ಮಗಳು ಎಷ್ಟು ಚೆನ್ನಾಗಿ ಪತ್ರ ಬರೆದಿದ್ದಾಳೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನೀನು ಪತ್ರವನ್ನು ಬರೆಯುತ್ತಾ ಇರು. ನಿನ್ನ ಬರವಣಿಗೆ ಬಹಳಷ್ಟು ಸುಧಾರಿಸುತ್ತದೆ.
ಅರೋಗ್ಯದ ಕಡೆ ಗಮನ ಕೊಡು, ಅಭ್ಯಾಸದತ್ತ ಒಲವು ಇರಲಿ, ವ್ಯರ್ಥವಾಗಿ ಸಮಯ ಕಳೆಯಬೇಡ. ಚೆನ್ನಾಗಿ ಊಟಮಾಡು, ಆಟ ಆಡು, ನಿದ್ರೆಮಾಡು, ಅದೇ ರೀತಿ ಚೆನ್ನಾಗಿ ಓದಿ ಕೀರ್ತಿ ಸಂಪಾದಿಸಬೇಕು. ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಇರುತ್ತದೆ ಎಂಬುದನ್ನು ನೆನಪಿಡು. ನಿನಗೆ ಒಳ್ಳೆಯದಾಗಲಿ…. ಆಗಾಗ ಪತ್ರ ಬರೆಯುತ್ತಿರು. ಶುಭಾಶೀರ್ವಾದಗಳೊಂದಿಗೆ,

ನಿನ್ನ ಪ್ರೀತಿಯ ಅಮ್ಮ

ರಾಜೇಶ್ವರಿ

ಇವರಿಗೆ,
ಕು|| ತೇಜಸ್ವಿನಿ
6ನೇ ತರಗತಿ
ಬನಶಂಕರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಹೊಸಕೆರೆಹಳ್ಳಿ, ಬೆಂಗಳೂರು – 560 085.

Kannada Letter Writing Letter Writing in Kannada and Kannada Letter Writing Format

ಈ ಲೇಖನದಲ್ಲಿ ಪತ್ರಲೇಖನವನ್ನು ಪಬರೆಯುವ ವಿಧಾನದ ಕುರಿತು ಕೆಲವು ಪತ್ರ ಲೇಖನವನ್ನು ನೀಡಲಾಗಿದೆ.

Spardhavani Telegram

kannada language kannada letter writing format

ಕನ್ನಡ ಪತ್ರಲೇಖನಗಳು | Kannada Letter Writing Format In Kannada Best No1 Inforamtion
Letter Writing Format In Kannada


( ಕುಡಿಯುವ ನೀರಿನ ವ್ಯವಸ್ಥೆ ಕುರಿತು ) ಕುಡಿಯುವ ನೀರಿಗೆ ಸಂಬಂಧಿಸಿ ಸರಿಯಾದ ವ್ಯವಸ್ಥೆ ಮಾಡಬೇಕೆಂದು ವಿಜ್ಞಾಪಿ ನಗರಸಭೆಯ ಮುಖ್ಯಾಧಿಕಾರಿಗಳಿಗೆ ಪತ್ರ

ಯ . ರ . ವ .

ಚನ್ನಗಿರಿ

ನಗರಸಭಾ ಅಧ್ಯಕ್ಷರು ,

ಚನ್ನಗಿರಿ .

ಮಾನ್ಯರೇ ,

ಕಳೆದ ಎರಡು ವರ್ಷಗಳಿಂದ ಮಳೆಯಿಲ್ಲದ ಪರಿಣಾಮವಾಗಿ ನಮ್ಮ ಭಾಗದ ಜನರಿಗೆ ಅತೀವ ತೊಂದರೆಯಾಗಿದೆ . ನಮ್ಮ ಹಳ್ಳಿಯ ಜನರಂತೂ ತತ್ತರಿಸಿ ಹೋಗಿದ್ದಾರೆ . ಇದ್ದ ಕೆರೆಯು ಬತ್ತಿ ಹೋಗಿದೆ . ನೀರಿನ ತೊಂದರೆಯಾಗಿದೆ . ಒಂದು ಕೊಡ ನೀರಿಗಾಗಿ ಪರದಾಡುವ ಪ್ರಸಂಗ ಬಂದಿದೆ .

ಹತ್ತು ಸಾವಿರ ಜನಸಂಖ್ಯೆ ಇರುವ ನಮ್ಮ ಹಳ್ಳಿಯನ್ನು ರಾಜಕಾರಣಿಗಳು ಮರೆತಿದ್ದಾರೆ . ನಮಗೆ ಇದು ತುಂಬ ವಿಷಾದನೀಯ , ನಮಗೆ ಒಂದು ಶಾಶ್ವತ ನೀರಿನ ವ್ಯವಸ್ಥೆ ಮಾಡುವುದು ಅತ್ಯವಶ್ಯವಾಗಿದೆ . ಹತ್ತಿರದಲ್ಲಿದ್ದ ದೊಡ್ಡ ನಗರದಿಂದ ನೀರನ್ನು ಪಡೆದು , ಒಂದು ದೊಡ್ಡ ನೀರಿನ ಟ್ಯಾಂಕ್ ನಿರ್ಮಿಸಬೇಕು . ನಳದಿಂದ ನಿತ್ಯ ನೀರಿನ ಸರಬರಾಜು ಮಾಡಬೇಕು ಅಲ್ಲಿಯವರೆಗೆ ಕೊಳವೆ ಭಾವಿ ಹಾಕಿಸಿ ನೀರಿನ ಸರಬರಾಜು ಮಾಡಬೇಕಾಗಿ ವಿನಂತಿ.

ನಮ್ಮ ಈ ಮನವಿಯನ್ನು ತಾವು ಓದಿ ಅದನ್ನು ಕಾರ್ಯರೂಪದಲ್ಲಿ ತರುವಿರೆಂದು ನಂಬಿರುವೆ .

ತಮ್ಮ ವಿಶ್ವಾಸಿಕ ,

ಚನ್ನಗಿರಿ

10-6-2012 ಯ . ರ . ವ .

Letter Writing Format In Kannada

ಕನ್ನಡ ಪತ್ರಲೇಖನಗಳು | Kannada Letter Writing Format In Kannada Best No1 Inforamtion

ವೈಯಕ್ತಿಕ ಪತ್ರ ( ತಂದೆಗೆ ಮಗನ ಪತ್ರ )

ನೀವು ಬಿ . ಚಂದ್ರಶೇಖರನೆಂದು ತಿಳಿದು ನೀವು ಕೈಗೊಳ್ಳಲಿರುವ ಶಾಲಾ ಪ್ರವಾಸಕ್ಕಾಗಿ ಹಣ ಕಳಿಸುವಂತೆ ಪ್ರಾರ್ಥಿಸಿ ನಿಮ್ಮ ತಂದೆಗೆ ಪತ್ರ ಬರೆಯಿರಿ .

ಬಿ ಚಂದ್ರಶೇಖರ

ರಾಜನಗರ

2-9-2012

ತೀರ್ಥರೂಪ ತಂದೆಯವರಿಗೆ

ನಿಮ್ಮ ಚಿರಂಜೀವ ಅ.ಬ.ಕ. ಮಾಡುವ ವಂದನೆಗಳು .

ಇಲ್ಲಿ ನನ್ನ ಅಭ್ಯಾಸ ಚೆನ್ನಾಗಿ ನಡೆದಿದೆ . ಪರೀಕ್ಷೆಯ ನಂತರದ ಬಿಡುವಿನಲ್ಲಿ ನಮ್ಮ ಶಾಲೆಯ ವತಿಯಿಂದ ಬಾದಾಮಿ , ಐಹೊಳೆ , ಪಟ್ಟದಕಲ್ಲು , ಶಿವಯೋಗ ಮಂದಿರ ಮುಂತಾದ ಸ್ಥಳಗಳಿಗೆ ಪ್ರವಾಸವನ್ನು ಏರ್ಪಡಿಸಿರುವವು . ಅದಕ್ಕೆ ತಗಲುವ ವೆಚ್ಚ ಕೇವಲ ರೂಪಾಯಿ 200 / – . ಈ ಪ್ರವಾಸವು ಶೈಕ್ಷಣಿಕ ಪ್ರವಾಸವಿದ್ದು ನನಗೂ ಹೋಗುವ ಬಯಕೆ .

ಕಾರಣ ಪತ್ರ ತಲುಪಿದ ಕೂಡಲೆ ಹಣವನ್ನು ಕಳುಹಿಸಿ ಕೊಡಲು ವಿನಂತಿ . ಇದರೊಂದಿಗೆ ತಮ್ಮ ಆಶೀರ್ವಾದವೂ ಬೇಕು . ಮಾತೋಶ್ರೀ ತಾಯಿಯವರಿಗೆ ನನ್ನ ನಮಸ್ಕಾರಗಳು . ಉತ್ತರ ಬರೆಯಿರಿ .

ತಮ್ಮ ಪ್ರೀತಿಯ

ಗೆ- ಚಂದ್ರು

ಶ್ರೀ ಬಸವರಾಜ ಕೆ .

ಮೈಸೂರು – ಬೆಂಗಳೂರು ರೋಡ ,

39 , ದ್ವಿತೀಯ ಕ್ರಾಸ್ , ರಾಜ್ ಲೇಔಟ್ , ಬೆಂಗಳೂರು -54 .

Letter Writing In Kannada

ಕನ್ನಡ ಪತ್ರಲೇಖನಗಳು

ಕನ್ನಡ ಪತ್ರಲೇಖನಗಳು | Kannada Letter Writing Format In Kannada Best No1 Inforamtion
Letter Writing In Kannada

ಒಂದು ಅರ್ಜಿ

ನಿಮ್ಮ ಹಳ್ಳಿಯಲ್ಲಿ ಜನ ಮುಗಳ ಅಂಗಡಿಯನ್ನು ಪ್ರಾರಂಭಿಸಲು ಸಂಬಂಧಿಸಿದ ಅಧಿಕಾರಿಗಳನ್ನು ಉದ್ದೇಶಿಸಿ ಅರ್ಜಿ ಬರೆಯಿರಿ.


ಮಾನ್ಯ ಜಿಲ್ಲಾಧಿಕಾರಿಗಳು

ಧಾರವಾಡ ಜಿಲ್ಲೆ ಧಾರವಾಡ

ಯ . ರ . ವ .

10-6-2012

ವಿಷಯ : ಪತರ ವಸ್ತುಗಳ ನ್ಯಾಯಬೆಲೆ ಅಂಗಡಿ ಪ್ರಾರಂಭಿಸಲು ಅರ್ಜಿ

ಯ . ರ . ವ .

ಸುರಪುರ

10-6-2012

ಮಾನ್ಯರೇ ,

ಕಳಗೆ ಸಹಿ ಮಾಡಿದ ನಾನು ಯ.ರ.ವ. ಸುರಪುರದ ನಿವಾಸಿ , ಮಹತ್ವದ ವಿಷಯವೊಂದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ . ನಮ್ಮ ಗ್ರಾಮದ ಜನಸಂಖ್ಯೆ ಹದಿನೈದು ಸಾವಿರ . ಆದರೂ ಇಲ್ಲಿ ಪಡಿತರ ವಸ್ತುಗಳ ನ್ಯಾಯಬೆಲೆ ಅಂಗಡಿ ಇಲ್ಲ . ಸದ್ಯ ನಾವು ನಮ್ಮೂರಿಗೆ ಸಮೀಪವಿರುವ ನರಸಾಪುರಕ್ಕೆ ವಾರಕ್ಕೊಂದು ಸಲ ಹೋಗಿ ಪಡಿತರ ವಸ್ತುಗಳನ್ನು ತರುತ್ತಿದ್ದೇವೆ . ಇದರಿಂದ ವಿಪರೀತ ಖರ್ಚು ಬರುತ್ತದೆ ಹಾಗೂ ಅನಾನುಕೂಲವೂ ಆಗುತ್ತದೆ . ನಗರವಾಸಿಗಳಾದ ಶ್ರೀಮಂತರಿಗೂ ಸಹ ಪಡಿತರ ವಸ್ತುಗಳನ್ನು ನ್ಯಾಯಬೆಲೆಯಲ್ಲಿ ಒದಗಿಸಲಾಗುತ್ತದೆ . ಆದರೆ ಹಳ್ಳಿಯಲ್ಲಿಯ ಬಡವರು ಈ ಅವಕಾಶದಿಂದ ವಂಚಿತರಾಗಿದ್ದಾರೆ .

ಪರಮ ದಯಾಳುಗಳಾದ ತಾವು ಈ ವಿಷಯವನ್ನು ಪರಾಮರ್ಶಿಸಬೇಕು . ನಮ್ಮ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯೊಂದನ್ನು ಆದಷ್ಟು ಬೇಗ ಮಂಜೂರು ಮಾಡಬೇಕಾಗಿ ವಿನಂತಿ ,

ಸುರಪುರ ತಮ್ಮ ವಿಧೇಯ

10-6-2012 ಯ . ರ . ವ

Letter Writing In Kannada

FAQ

  • ಪತ್ರಲೇಖನ ಎಂದರೇನು?ನಮ್ಮ ಎದುರಿಗೆ ಇರುವವರ ಜೊತೆ ಸಂಭಾಷಣೆ ನಡೆಸಿದಂತೆ ದೂರದಲ್ಲಿರುವ (ಬೇರೆಡೆಯಲ್ಲಿ ವಾಸಿಸುತ್ತಿರುವ)ವ್ಯಕ್ತಿಗಳ ಜೊತೆ ಮಾತುಕತೆಗೆ ,ಪರಸ್ಪರ ವಿಚಾರ ವಿನಿಮಯಕ್ಕೆ ಬಳಕೆಯಾಗುವ ಪರಿಣಾಮಕಾರಿ ಸಾಧನ ಪತ್ರAdd Image

ಇತರೆ ಲಿಂಕ್ :

> ಕನ್ನಡ ಪ್ರಬಂಧ

> ಕನ್ನಡ ಅಣಕು ಪರೀಕ್ಷೆ ಭಾಗ -04

Leave a Reply

Your email address will not be published. Required fields are marked *