Kasagi Patra in Kannada, Kasagi Patra in Kannada Format, kannada kasagi patragalu, , ವೈಯಕ್ತಿಕ ಪತ್ರ ಲೇಖನ pdf, ಖಾಸಗಿ ಪತ್ರ ಕನ್ನಡ, 8th, 9th, 10th
Kasagi Patra in Kannada
ನೀವು ಶಿವಮೊಗ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿರುವ ‘ ರಾಜೇಂದ್ರ ‘ ಎಂದು ಭಾವಿಸಿ ಶೈಕ್ಷಣಿಕ ಪ್ರವಾಸಕ್ಕೆ ಹೋಗಲು 10000 ರೂ ಹಣ ಕಳುಹಿಸಿ ಕೊಡುವಂತೆ ಸಾಗರದಲ್ಲಿರುವ ನಿಮ್ಮ ತಂದೆಯವರಿಗೊಂದು ಪತ್ರ ಬರೆಯಿರಿ .
ಕ್ಷೇಮ ದಿನಾಂಕ : ನವೆಂಬರ್ 11 , 2021
ರಾಜೇಂದ್ರ
ಪ್ರಥಮ ಪಿ.ಯು.ಸಿ.
ಸರ್ಕಾರಿ ಪದವಿ ಪೂರ್ವ ಕಾಲೇಜು ,
ಶಿವಮೊಗ್ಗ
ತೀರ್ಥರೂಪರವರಿಗೆ ನಿಮ್ಮ ಮಗನಾದ ರಾಜೇಂದ್ರನು ಮಾಡುವ ದೀರ್ಘದಂಡ ಪ್ರಣಾಮಗಳು . ನಾನು ಇಲ್ಲಿ ಕ್ಷೇಮವಾಗಿದ್ದೇನೆ . ನಿಮ್ಮ ಕ್ಷೇಮ ಸಮಾಚಾರದ ಬಗ್ಗೆ ಪತ್ರ ಬರೆಯಿರಿ .
ನಾನು ನಿಮಗೆ ತಿಳಿಸುವುದೇನೆಂದರೆ ನಮ್ಮ ಕಾಲೇಜಿನಲ್ಲಿ ಇದೇ ತಿಂಗಳು 26 , 27 ರಂದು ಬೇಲೂರು , ಹಳೇಬೀಡು , ಶ್ರವಣಬೆಳಗೋಳ ಮುಂತಾದ ಐತಿಹಾಸಿಕ ಸ್ಥಳಗಳಿಗೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಿದ್ದಾರೆ .
ನನ್ನ ಗೆಳೆಯರೆಲ್ಲರೂ ಪ್ರವಾಸಕ್ಕೆ ಹೊರಟಿದ್ದಾರೆ . ನೀವು ಒಪ್ಪಿಗೆ ನೀಡಿ 10000 ರೂಪಾಯಿಗಳನ್ನು ಅಂಚೆಯ ಮೂಲಕ ಕಳುಹಿಸಿಕೊಟ್ಟರೆ ನಾನು ಹೋಗಿಬರುತ್ತೇನೆ .
ಮಾತೃಶ್ರೀಯವರಿಗೆ ನನ್ನ ಅನಂತ ನಮಸ್ಕಾರಗಳು .
ನಿಮ್ಮ ಉತ್ತರಕ್ಕಾಗಿ ಕಾಯುತ್ತೇನೆ .
ಇಂತಿ ನಿಮ್ಮ ಪ್ರೀತಿಯ ಮಗ
ರಾಜೇಂದ್ರ
ಹೊರ ವಿಳಾಸ :
ಇವರಿಗೆ ,
ಅಣ್ಣಪ್ಪ
ಕುವೆಂಪು ನಗರ , ೫ ನೇ ಅಡ್ಡ ರಸ್ತೆ ,
ಸಾಗರ -577-418
ತಂದೆಗೆ ವೈಯಕ್ತಿಕ ಪತ್ರ ಲೇಖನ
ವಿದ್ಯಾಭ್ಯಾಸದ ಪ್ರಗತಿಯನ್ನು ಕುರಿತು ತಂದೆಗೆ ಬರೆದ ಪತ್ರ
ದಿನಾಂಕ : ಜನೇವರಿ 8/2021
ನಾಗರಾಜ
ಹತ್ತನೆಯ ತರಗತಿ , ‘ ಎ ‘ ವಿಭಾಗ
ಶಿವಮೊಗ್ಗ ಪ್ರೌಢಶಾಲೆ
ಶಿವಮೊಗ್ಗ
ಪೂಜ್ಯ ತಂದೆಯವರಿಗೆ ನಿಮ್ಮ ಮಗನಾದ ನಾಗರಾಜನು ಮಾಡುವ ಸಾಷ್ಟಾಂಗ ನಮಸ್ಕಾರಗಳು . ನಾನು ತಮ್ಮ ಆಶೀರ್ವಾದದಿಂದ ಕ್ಷೇಮವಾಗಿದ್ದೇನೆ . ತಮ್ಮ ಕ್ಷೇಮ ಸಮಾಚಾರದ ಬಗ್ಗೆ ಪತ್ರ ಬರೆಯಿರಿ .
ನನ್ನ ಅಭ್ಯಾಸ ಇಲ್ಲಿ ಉತ್ತಮ ರೀತಿಯಲ್ಲಿ ಸಾಗಿದೆಯೆಂದು ತಿಳಿಸಲು ಸಂತೋಷವಾಗುತ್ತಿದೆ . ಎಲ್ಲಾ ವಿಷಯಗಳ ಪಾಠಗಳೂ ಮುಕ್ತಾಯದ ಹಂತಕ್ಕೆ ಬಂದಿವೆ . ನನ್ನ ಅದೃಷ್ಟಕ್ಕೆ ಒಳ್ಳೆಯ ಶಿಕ್ಷಕರು ಸಿಕ್ಕಿದ್ದಾರೆ .
ಅರ್ಥವಾಗುವ ರೀತಿಯಲ್ಲಿ ಬೋಧಿಸುತ್ತಾರೆ . ತಿಳಿಯದಿದ್ದರೆ , ಕೇಳಿದರೆ ಬೇಸರವಿಲ್ಲದೆ ತಿಳಿಸಿ ಹೇಳುತ್ತಾರೆ . ಹೀಗಾಗಿ ನನಗೆ ಯಾವ ವಿಷಯಗಳೂ ಕಷ್ಟವೆನಿಸುತ್ತಿಲ್ಲ .
ಇದೇ ತಿಂಗಳ ಕೊನೆಯಲ್ಲಿ ಮೊದಲ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯಲಿವೆ . ಹೆಚ್ಚಿನ ಅಂಕಗಳನ್ನು ಪಡೆಯುವ ಪ್ರಯತ್ನ ಮಾಡುತ್ತೇನೆ . ಅದಕ್ಕೆ ತಮ್ಮ ಆಶೀರ್ವಾದವನ್ನು ಬಯಸುತ್ತೇನೆ .
ಮಾತೃಶ್ರೀಯವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿರಿ . ತಂಗಿಗೆ ನನ್ನ ಸವಿನೆನಪುಗಳನ್ನು ತಿಳಿಸಿರಿ . ನಿಮ್ಮ ಪತ್ರದ ದಾರಿ ಕಾಯುತ್ತೇನೆ .
ಇಂತಿ ನಿಮ್ಮ ಪ್ರೀತಿಯ ಮಗ
ನಾಗರಾಜ
ಹೊರ ವಿಳಾಸ :
ಇವರಿಗೆ ,
ಅಣ್ಣಪ್ಪ
‘ಕಮಲನಗರ ,
6 ನೇ ಕ್ರಾಸ , ಸಾಗರ
ಖಾಸಗಿ ಪತ್ರ ಕನ್ನಡ ತಂದೆಗೆ
ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಗೆಳೆಯ / ಗೆಳತಿಯನ್ನು ಆಹ್ವಾನಿಸಿ ಬರೆದ ಪತ್ರ
ಕ್ಷೇಮ
ದಿನಾಂಕ ಜನೇವರಿ 18/2021
ಸಂಚಿತ
ಸರ್ಕಾರಿ ಪ್ರೌಢಶಾಲೆ
ಅಂಬೇಡ್ಕರ್ ಕಾಲೋನಿ , ಶಿವಮೊಗ್ಗ 577201
ಪ್ರೀತಿಯ ಗೆಳತಿಯಾದ ರಮ್ಯಾಗೆ ನಿನ್ನ ಗೆಳತಿಯಾದ ಸಂಚಿತ ಮಾಡುವ ವಂದನೆಗಳು . ನಾನು ಇಲ್ಲಿ . ನನ್ನ ಅಭ್ಯಾಸದೊಂದಿಗೆ ಆರಾಮದಿಂದ ಇರುವೆನು , ನೀನು ಕೂಡಾ ಆರಾಮದಿಂದ ಇರುವೆ ಎಂದು ಭಾವಿಸಿರುವೆನು . ನಿನಗೂ ಮತ್ತು ಉಳಿದ ಎಲ್ಲ ಗೆಳೆಯರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು .
ಈಗ ಪತ್ರ ಬರೆಯಲು ಕಾರಣವೇನೆಂದರೆ ನಮ್ಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವು ಬರುವ 23/11/2021 ರಂದು ನಡೆಯಲಿದೆ . ಅಂದು ಸಾಯಂಕಾಲ 6 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಖ್ಯಾತ ವಾಗ್ನಿಗಳಾದ ಸೂಲಿಬೆಲೆ ಚಕ್ರವರ್ತಿಗಳು ಆಗಮಿಸಲಿದ್ದಾರೆ .
ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಲಿದೆ . ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ . ನಾನೂ ಕೂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವೆ . ನಮ್ಮ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ನೀನು ತಪ್ಪದೇ ಬರಬೇಕೆಂದು ವಿನಂತಿಸುವೆನು .
ಇಂತಿ ನಿನ್ನ ಗೆಳೆಯ
ಸಂಚಿತ
ಹೊರ ವಿಳಾಸ :
ಇವರಿಗೆ
ವಾಗೀಶ ಎಂ .
೯ ನೇ ತರಗತಿ ,
ಸರಕಾರಿ ಪ್ರಾಥಮಿಕ ಶಾಲೆ ,
ಬೈಚಬಾಳ , ತಾ | ಹುಣಸಗಿ , ಜಿ ಯಾದಗಿರಿ
ವೈಯಕ್ತಿಕ ಪತ್ರ ಕನ್ನಡ
ಧಾರವಾಡದ ಮಲ್ಲಸಜ್ಜನ ಪ್ರೌಢ ಶಾಲೆಯಲ್ಲಿ ಓದುತ್ತಿರುವ ಕೃಷ್ಣಾನಂದ ಎಂದು ಭಾವಿಸಿ ಕೂಡಲಗಿಯ ಶ್ರೀ ಸ್ವಯಂಭೂವರ ಸಿದ್ಧಿವಿನಾಯಕ ವಿದ್ಯಾಪೀಠದಲ್ಲಿ ಓದುತ್ತಿರುವ ತಮ್ಮನಾದ ಮಾಣಿಕ್ಯತೇಜನಿಗೆ ನಿನ್ನ ಹುಟ್ಟುಹಬ್ಬಕ್ಕೆ ಬರುವಂತೆ ತಿಳಿಸಿ ಒಂದು ಪತ್ರ ಬರೆಯಿರಿ .
ಕ್ಷೇಮ
ದಿನಾಂಕ : ೨೦-೯-೨೦೧೯
ಕೃಷ್ಣಾನಂದ ಬಿ .
ಹತ್ತನೇ ತರಗತಿ , ‘ ಎ ‘ ವಿಭಾಗ
ಮಲ್ಲಸಜ್ಜನ ಪ್ರೌಢಶಾಲೆ
ಮರಾಠಾ ಕಾಲೋನಿ ,
ಧಾರವಾಡ ೫೮೦ ೦೦೮ .
ಪ್ರೀತಿಯ ತಮ್ಮ ಚಿ || ಮಾಣಿಕ್ಯತೇಜನಿಗೆ ನಿನ್ನ ಅಣ್ಣನಾದ ಕೃಷ್ಣಾನಂದನ ಆಶೀರ್ವಾದಗಳು , ನಾನು ಇಲ್ಲಿ ಕ್ಷೇಮ , ಅಲ್ಲಿ ನಿನ್ನ ಕ್ಷೇಮ ಸಮಾಚಾರಕ್ಕೆ ಪತ್ರ ಬರೆ . ನೀನು ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ವಿಚಾರ ತೀರ್ಥರೂಪರ ಪತ್ರದಿಂದ ತಿಳಿದು ತುಂಬ ಸಂತೋಷವಾಯಿತು . ರಾಜ್ಯಮಟ್ಟದ ಸ್ಪರ್ಧೆಯಲ್ಲೂ ನಿನಗೆ ಯಶಸ್ಸು ಲಭಿಸಲಿ . ಇದೇ ಅಕ್ಟೋಬರ್ ೨ ರಂದು ನನ್ನ ಹುಟ್ಟುಹಬ್ಬವಿದೆ . ನನ್ನ ಎಲ್ಲಾ ಸ್ನೇಹಿತರನ್ನೂ ಹುಟ್ಟುಹಬ್ಬಕ್ಕೆ ಆಹ್ವಾನಿಸಿದ್ದೇನೆ . ನೀನೂ ತಪ್ಪದೆ ಬರಬೇಕು . ಮಾತೃಶ್ರೀಯವರಿಗೆ ಸಾದರಪೂರ್ವಕ ಪ್ರಣಾಮಗಳನ್ನು ತಿಳಿಸು .
ಆಶೀರ್ವಾದಗಳೊಂದಿಗೆ
ನಿನ್ನ ಪ್ರೀತಿಯ ಅಣ್ಣ
ಕೃಷ್ಣಾನಂದ
ಹೊರ ವಿಳಾಸ :
ಇವರಿಗೆ ,
ಮಾಣಿಕ್ಯತೇಜ ಬಿ .
೫ ನೇ ತರಗತಿ , ‘ ಬಿ ‘ ವಿಭಾಗ
ಶ್ರೀ ಸ್ವಯಂಭೂ ವರಸಿದ್ಧಿವಿನಾಯಕ ವಿದ್ಯಾಪೀಠ
ಕೂಡಲಗಿ
ಸಾ || ಹುಣಸಗಿ , ಜಿ || ಯಾದಗಿರಿ
ಕನ್ನಡ ಖಾಸಗಿ ಪತ್ರ | Kasagi Patra in Kannada Best No1 Information
ಪತ್ರಲೇಖನ ಎಂದರೇನು?
ನಮ್ಮ ಎದುರಿಗೆ ಇರುವವರ ಜೊತೆ ಸಂಭಾಷಣೆ ನಡೆಸಿದಂತೆ ದೂರದಲ್ಲಿರುವ (ಬೇರೆಡೆಯಲ್ಲಿ ವಾಸಿಸುತ್ತಿರುವ)ವ್ಯಕ್ತಿಗಳ ಜೊತೆ ಮಾತುಕತೆಗೆ ,ಪರಸ್ಪರ ವಿಚಾರ ವಿನಿಮಯಕ್ಕೆ ಬಳಕೆಯಾಗುವ ಪರಿಣಾಮಕಾರಿ ಸಾಧನ ಪತ್ರ
ವ್ಯಾವಹಾರಿಕ ಪತ್ರ
ಸಾಮಾನ್ಯವಾಗಿ, ಈ ವ್ಯಾವಹಾರಿಕ ಪತ್ರಗಳನ್ನು ಖಾಸಗಿ ಕಂಪನಿಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗುತ್ತದೆ. ಆದರೆ ಕೆಲ ಕಂಪನಿಗಳು, ವಿಶೇಷವಾಗಿ ಸರ್ಕಾರಿ ಸಂಸ್ಥೆಗಳಿಗೆ ಕನ್ನಡ ಭಾಷೆಯಲ್ಲಿ ಬರೆದ ವ್ಯಾವಹಾರಿಕ ಪತ್ರಗಳನ್ನು ಬರೆಯಬೇಕು.
ಇದನ್ನು ಓದಿರಿ …ಕನ್ನಡ ಪತ್ರಲೇಖನಗಳು
ಇನ್ನಷ್ಟು ಓದಿ :- ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ
- ಕನ್ನಡ
- ಇತಿಹಾಸ
- ಭೂಗೋಳಶಾಸ್ತ್ರ
- ಭಾರತದ ಸಂವಿಧಾನ
- ವಿಜ್ಞಾನ
- ಅರ್ಥಶಾಸ್ತ್ರ
- ಮಾನಸಿಕ ಸಾಮರ್ಥ್ಯ
- ಇಂಗ್ಲೀಷ್ ವ್ಯಾಕರಣ
- ಪ್ರಚಲಿತ ವಿದ್ಯಮಾನ
- ಸಾಮಾನ್ಯ ಜ್ಞಾನ