ಕಂಪ್ಯೂಟರ್ ಪ್ರಶ್ನೋತ್ತರಗಳು | Computer Question Answer In Kannada

ಕಂಪ್ಯೂಟರ್ ಪ್ರಶ್ನೋತ್ತರಗಳು | Computer Question Answer In Kannada

computer question answer in kannada, ಕಂಪ್ಯೂಟರ್ ಪ್ರಶ್ನೋತ್ತರಗಳು, ಕಂಪ್ಯೂಟರ್ ಸಾಮಾನ್ಯ ಜ್ಞಾನ pdf download, computer notes pdf in kannada, computer notes in kannada, clt exam questions and answers pdf in kannada, pc question paper with answer in kannada pdf, computer questions and answers in kannada pdf, computer basic in kannada, computer question answer in kannada, computer pdf notes in kannada edutube kannada, basic computer notes in kannada, ಕಂಪ್ಯೂಟರ್ ರಸಪ್ರಶ್ನೆಗಳು, ಕಂಪ್ಯೂಟರ್ ಜ್ಞಾನ mcq, ಕನ್ನಡದಲ್ಲಿ ಕಂಪ್ಯೂಟರ್ ಮೂಲ ಜ್ಞಾನ

Computer Question Answer In Kannada

Spardhavani Telegram
ಕಂಪ್ಯೂಟರ್ ಪ್ರಶ್ನೋತ್ತರಗಳು | Computer Question Answer In Kannada
ಕಂಪ್ಯೂಟರ್ ಪ್ರಶ್ನೋತ್ತರಗಳು | Computer Question Answer In Kannada

Computer Question Answer In Kannada

ಅನಿಯತ ಪ್ರಾಪ್ಯಸ್ಮರಣೆ ಎಂದು ಯಾವುದಕ್ಕೆ ಹೇಳಲಾಗುತ್ತದೆ ? – RAM

ಒಂದು ಬೈಟ್‌ನಲ್ಲಿರುವ ಬಿಟ್‌ಗಳ ಸಂಖ್ಯೆ ಎಷ್ಟು ? ೮

ಕಂಪ್ಯೂಟರಿನ ಪ್ರಧಾನ ಸ್ಮರಣೆಯು ಯಾವ ವಿಧದ್ದಾಗಿದೆ ? – ಸಂವಹನ ವಿಧದ್ದು

ಕೇಂದ್ರ ಸಂಸ್ಕರಣಾ ಘಟಕ (CPU)ದಲ್ಲಿ ಔಟ್‌ಪುಟ್ ಘಟಕ ಇರುತ್ತ ದೆಯೋ ಹೇಗೆ ? ಇರುವುದಿಲ್ಲ

ಮುದ್ರಕವು ಕಂಪ್ಯೂಟರಿನ ಇನ್‌ಪುಟ್ ಸಾಧನ. ಇದು ಸರಿಯೋ ತಪ್ಪೋ? – ತಪ್ಪು

ಈಗ ಬಳಸುತ್ತಿರುವ ಕಂಪ್ಯೂಟರ್ ಕೀಲಿಮಣೆಯನ್ನು ಹೇಗೆ ಗುರುತಿಸಲಾಗುತ್ತದೆ ? – QWERTY

ಕೀಲಿಮಣೆಯ ಒಟ್ಟು ಕೀಗಳಿಗೆ ಸಂಬಂಧಿಸಿದಂತೆ ೮೪, ೧೦೧, ೧೦೪, ಮತ್ತು ೨೦೯ ಇವುಗಳಲ್ಲಿ ಯಾವ ಸಂಖ್ಯೆ ತಪ್ಪು ? ೨೦೯

ಅಂಕಿ-ಸಂಖ್ಯೆಗಳನ್ನು ಸಂಸ್ಕರಣೆಗೆ ನೀಡಲು ಮತ್ತು ಹೆಸರು, ಊರು, ಶಾಲೆಗಳಂಥ ದತ್ತ ನೀಡಲು ಕಂಪ್ಯೂಟರಿನ ಯಾವ ಭಾಗವನ್ನು ಬಳಸುತ್ತಾರೆ ? – ಕೀಲಿಮಣೆ

ದತ್ತವನ್ನು ಸ್ವೀಕರಿಸಲು ಮತ್ತು ಸಂಸ್ಕರಿಸಿದ ದತ್ತ ಮುದ್ರಿಸಲು ಕಂಪ್ಯೂಟರಿನ ಯಾವ ಘಟಕ ಸಹಕಾರಿಯಾಗಿದೆ ?

ನಿಯಂತ್ರಣ ಘಟಕ

ಪ್ರೋಗ್ರಾಂ (Program) ಇದಕ್ಕೆ ಸಮಾನಾಂತರ ಕನ್ನಡ ಪದ ಯಾವುದು ?
-ಕಾರ್ಯವಿಧಿ

ಪ್ರೋಗ್ರಾಂ (Program) ಎಂದರೇನು ?
ಒಂದು ಗೊತ್ತಾದ ಕಾರ್ಯವನ್ನು ನಿರ್ವಹಿಸಲು ಕಂಪ್ಯೂಟರ್‌ಗೆ ಕೊಡುವ ಸೂಚನೆಗಳ ಗುಂಪನ್ನು ಪ್ರೋಗ್ರಾಂ ಎನ್ನುತ್ತಾರೆ.

ಪ್ರೋಗ್ರಾಂನಲ್ಲಿರುವ ದೋಷಗಳನ್ನು ಹುಡುಕಿ ತಿದ್ದುವ ಪ್ರಕ್ರಿಯೆಗೆ ಏನೆಂದು ಕರೆಯುತ್ತಾರೆ ? (Debugging)

ಕಂಪೈಲರ್ (ಸಂಕಲನ)ದ ಕೆಲಸವೇನು ?

ಇದು ಹೈ-ಲೆವೆಲ್ ಭಾಷೆಯಲ್ಲಿ ಬರೆದ ಪ್ರೋಗ್ರಾಂ ಅನ್ನು ಕಂಪ್ಯೂಟರ್ ಅರ್ಥಮಾಡಿಕೊಳ್ಳುವ ೦ ಮತ್ತು ೧ಗಳ ಮಾದರಿಗೆ ಭಾಷಾಂತರಿಸುತ್ತದೆ. ಈ ರೀತಿ ಭಾಷಾಂತರಿಸುವ ಪ್ರಕ್ರಿಯೆಗೆ ಕಂಪೈಲರ್ ಎಂದು ಕರೆಯುತ್ತಾರೆ.

ಇಂಟರ್‌ಪ್ರಿಟರ್ (ವಿತರಣಕರ್ತ) ಎಂದರೇನು ?
ಇದು ಹೈ-ಲೆವೆಲ್ ಭಾಷೆಯ ಪ್ರೋಗ್ರಾಮನ್ನು ಯಂತ್ರಭಾಷೆಗೆ ತರ್ಜುಮೆ ಮಾಡುತ್ತದೆ. ಇದು ಒಂದು ಪ್ರೋಗ್ರಾಂನ ಒಂದೊಂದೇ ವಾಕ್ಯವನ್ನು ೦ ಮತ್ತು ೧ಗಳ ಮಾದರಿಗೆ ರೂಪಾಂತರಿಸಿ, ಕಾರ್ಯ ನಿರ್ವಹಣೆ ಮಾಡುತ್ತದೆ. ಈ ರೀತಿಯ ಪ್ರಕ್ರಿಯೆಗೆ ಇಂಟರ್ ಪ್ರಿಟೇಶನ್’ ಎಂದು ಕರೆಯುತ್ತಾರೆ.

Computer Question Answer In Kannada ಪಿಡಿಎಫ್

ಕಂಪ್ಯೂಟರ್ ಪ್ರಶ್ನೋತ್ತರಗಳು | Computer Question Answer In Kannada
ಕಂಪ್ಯೂಟರ್ ಪ್ರಶ್ನೋತ್ತರಗಳು | Computer Question Answer In Kannada

ಸಂಸ್ಕರಣಾ ವೇಗಕ್ಕೆ ಸಂಬಂಧಿಸಿದಂತೆ ಕ್ಯಾಲ್ಕುಲೇಟರ್ ಮತ್ತು ಕಂಪ್ಯೂಟರ್ ನಡುವಿನ ಭಿನ್ನತೆ ಏನು ?

ಕ್ಯಾಲ್ಕುಲೇಟರಿನ ಸಂಸ್ಕರಣಾ ವೇಗ ಕಡಿಮೆ, ಆದರೆ ಕಂಪ್ಯೂಟರಿನ ಸಂಸ್ಕರಣಾ ವೇಗವು ತುಂಬಾ ಹೆಚ್ಚು.

ಕಂಪ್ಯೂಟರ್ ಹೇಗೆ ಕಾರ್ಯ ನಿರ್ವಹಿಸುತ್ತದೆ ? – ಕಂಪ್ಯೂಟರ್‌ಗೆ ನಾವು ದತ್ತ ಅಥವಾ ಮಾಹಿತಿಯನ್ನು ನೀಡ ಬೇಕಾಗುತ್ತದೆ. ಈ ಮಾಹಿತಿಯು ಕಂಪ್ಯೂಟರ್ ಸ್ಮರಣೆಯಲ್ಲಿ ಸಂಗ್ರಹವಾಗು ತದೆ. ಮುಂದೊಮ್ಮೆ ಮಾಡಬೇಕಾದ ಲೆಕ್ಕಾಚಾರಕ್ಕೆ ಈ ಮಾಹಿತಿಯನ್ನು ಕಳುಹಿಸುತ್ತದೆ

CPU ದಲ್ಲಿ ನಿಯಂತ್ರಣ ಘಟಕದ ಸ್ಥಾನವೇನು ? ಪ್ರಮುಖ ಘಟಕ

ಪ್ರಪ್ರಥಮ ಕಂಪ್ಯೂಟರ್” ಎಂದು ಮಾನವನು ಗುರುತಿಸಿದ್ದು ಯಾವುದನನ್ನು ? ಅಬ್ಯಾಕಸ್

ಕಂಪ್ಯೂಟರ್ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ? – ಚಾರ್ಲಸ್ ಬ್ಯಾಬೇಜ್

ಪ್ರಪ್ರಥಮ ವಿದ್ಯುನ್ಮಾನ ಕಂಪ್ಯೂಟರ್ ಯಾವುದು ? ENIAC

ENIAC ಅನ್ನು ವಿನ್ಯಾಸಗೊಳಿಸಿದವರು ಯಾರು? – ಮ್ಯಾಚಿತಿ

ಯಾವ ಸಂಖ್ಯಾಪದ್ಧತಿಯನ್ನು ಕಂಪ್ಯೂಟರಿನ ಭಾಷೆಯಾಗಿ ಸೂಚಿಸಲಾಗಿದೆ? ದ್ವಿಮಾನ ಪದ್ಧತಿ

ಕಂಪ್ಯೂಟರಿನ ಸಂಸ್ಕರಣಾ ವೇಗವನ್ನು ಯಾವುದರಿಂದ ಮಾಪನ ಮಾಡು ತ್ತಾರೆ ? ನ್ಯಾನೋ ಸೆಕೆಂಡ್

ಒಂದು ನ್ಯಾನೋ ಸೆಕೆಂಡ್ ಎಂದರೆ ಎಷ್ಟು ಸೆಕೆಂಡುಗಳು ? – 10-9

ಕಂಪ್ಯೂಟರ್ ಎಂಬ ಪದ ಯಾವ ಭಾಷೆಯಿಂದ ಉತ್ಪತ್ತಿಯಾಗಿದೆ ? – ಲ್ಯಾಟಿನ್

ಕಂಪ್ಯೂಟರಿನ ಮುಖ್ಯ ಘಟಕ ಯಾವುದು ? – ಕೇಂದ್ರ ಸಂಸ್ಕರಣಾ ಘಟಕ (CPU)

MS-DOSನ್ನು ಸಿದ್ಧಪಡಿಸಿದವರು ಯಾರು ? – ಬಿಲ್‌ಗೇಟ್ಸ್ ಮತ್ತು ಪೌಲ್ ಅಲೆನ್

ಗ್ರಾಫಿಕಲ್‌ ಯೂಸರ್ ಇಂಟರ್‌ಫೇಸ್‌ ಇರುವ ಆಪರೇಟಿಂಗ್ ಸಿಸ್ಟಂ ಯಾವುದು ? – ವಿಂಡೋಸ್‌ ೯೫ (Windows 95)

ವಿಂಡೋಸ್ ೯೫ ಆಪರೇಟಿಂಗ್ ಸಿಸ್ಟಂ ಯಾವ ವಾತಾವರಣವನ್ನು ಕಲ್ಪಿಸಿ ಕೊಡುತ್ತದೆ ? – ಮಲ್ಟಿ ಟಾಸ್ಕಿಂಗ್

ಕಂಪ್ಯೂಟರಿನ ಸ್ಮರಣ ವಿಭಾಗವು ಯಾವುದರಿಂದಾಗಿದೆ ? – ಅನೇಕ ಪುಟ್ಟ ಪುಟ್ಟ ಪೆಟ್ಟಿಗೆಗಳಿಂದ ಆಗಿದೆ.

ಕಂಪ್ಯೂಟರಿನ ಸ್ಮರಣ ವಿಭಾಗದಲ್ಲಿರುವ ಅನೇಕಾನೇಕ ಪೆಟ್ಟಿಗೆಗಳಿಗೆ ಏನು ಇರುತ್ತವೆ ?

ಪ್ರತಿಯೊಂದಕ್ಕೂ ಒಂದೊಂದು ಲೇಬಲ್ ಇರುತ್ತದೆ

ಕಂಪ್ಯೂಟರಿನ ಸ್ಮರಣ ವಿಭಾಗದಲ್ಲಿರುವ ಅನೇಕಾನೇಕ ಪೆಟ್ಟಿಗೆಗಳಿಗೆ ಪ್ರತಿಯೊಂದಕ್ಕೂ ಇರುವ ಒಂದೊಂದು ಲೇಬಲ್‌ಗಳಿಗೆ ಏನೆಂದು ಹೆಸರಿದೆ ?

ವಿಳಾಸಗಳು (Addresses)
ಕಂಪ್ಯೂಟರಿನ ಸ್ಮರಣ ವಿಭಾಗದ (Memory Unit) ಕೆಲಸವೇನು ? – ಸ್ಮರಣೆ ಎಂದರೆ ನೆನಪಿಟ್ಟುಕೊಳ್ಳುವುದು ಎಂದು ಅರ್ಥ. ಆದ್ದರಿಂದ ಈ ವಿಭಾಗವು ದೊರೆತ ಮಾಹಿತಿಗಳನ್ನು ನೆನಪಿಟ್ಟುಕೊಳ್ಳಲು ಕಂಪ್ಯೂಟರಿಗೆ ಸಹಾಯ ಮಾಡುತ್ತದೆ.

ಮನುಷ್ಯನ ಮೆದುಳಿಗೂ ಕಂಪ್ಯೂಟರಿನ ಸ್ಮರಣೆಘಟಕಕ್ಕೂ ಇರುವ ಹೋಲಿಕೆ ಎಂಥದ್ದು ?

ನಾವು ನಮ್ಮ ಮೆದುಳಿನಲ್ಲಿ ಹೇಗೆ ಬೇರೆ ಬೇರೆ ವಿಚಾರಗಳನ್ನು, ವಿಷಯಗಳನ್ನು ನೆನಪಿಟ್ಟುಕೊಳ್ಳುತ್ತೇವೆಯೋ ಹಾಗೆಯೇ ಕಂಪ್ಯೂಟರಿನ ಸ್ಮರಣವಿಭಾಗವೂ ಕೂಡ ಸೂಚನೆಗಳನ್ನು, ಮಾಹಿತಿಗಳನ್ನು, ಅಲ್ಲದೇ ಫಲಿತಾಂಶಗಳನ್ನು ಕೂಡ ಶೇಖರಿಸಿಟ್ಟುಕೊಳ್ಳುತ್ತದೆ.

ಕಂಪ್ಯೂಟರಿನ ಸ್ಮರಣ ವಿಭಾಗದಲ್ಲಿರುವ ಸ್ಮರಣ ಪೆಟ್ಟಿಗೆಗಳಿಗೆ ಕೊಟ್ಟಿರುವ ಪ್ರತಿಯೊಂದು ವಿಳಾಸಗಳಿಂದ ಏನು ಪ್ರಯೋಜನ ?

ಅವುಗಳನ್ನು ಗುರುತಿಸಲು ಸಹಾಯಕಾರಿ

ಮಲ್ಟಿ ಟಾಸ್ಕಿಂಗ್ ವ್ಯವಸ್ಥೆ ಎಂದರೇನು ?

ನಾವು ಒಂದು ಮಾಹಿತಿಯನ್ನು ಕಂಪ್ಯೂಟರ್‌ನಿಂದ ಪ್ರಿಂಟ್ ಮಾಡಿಸುವ ಸಂದರ್ಭದಲ್ಲಿಯೇ ಮತ್ತೊಂದು ಕೆಲಸವನ್ನು ಮಾಡ ಬಹುದು.

ಯುನಿಕ್ಸ್ (Unix) ಇದು ಯಾವ ಕಂಪನಿ ಅಭಿವೃದ್ಧಿ ಪಡಿಸಿದ ಸಾಫ್ಟ್ :- ಅಮೇರಿಕೆಯ ಬೆಲ್ ಲ್ಯಾಬೊರೇಟರಿ

ಯುನಿಕ್ಸ್ (Unix) ಇದರ ಕಾರ್ಯಾಚರಣೆ ವ್ಯವಸ್ಥೆ ಹೇಗಿದೆ ? – ಮಲ್ಟಿ ಯೂಸರ್ ಆಪರೇಟಿಂಗ್ ಸಿಸ್ಟಂ (ಅನೇಕ ವ್ಯಕ್ತಿ ಕಾರ್ಯಾಚರಣೆ ವ್ಯವಸ್ಥೆ )

ಮಲ್ಟಿಯೂಸರ್ ಆಪರೇಟಿಂಗ್ ಸಿಸ್ಟಂ ಎಂದರೇನು ?

ಏಕಕಾಲದಲ್ಲಿ ಅನೇಕ ವ್ಯಕ್ತಿಗಳು ತಮ್ಮ ತಮ್ಮ ಕೆಲಸಗಳನ್ನು ಒಂದೇ ಸಿಪಿಯು ಸಹಾಯದಿಂದ ಮಾಡಬಹುದು.

ಸ್ಮರಣಶಕ್ತಿಗೆ (ಮೆಮೊರಿ) ಸಂಬಂಧಿಸಿದಂತೆ ಕ್ಯಾಲ್ಕುಲೇಟರ್‌ಗೂ ಕಂಪ್ಯೂಟರ್‌ಗೂ ಇರುವ ಭಿನ್ನತೆ ಏನು ?

ಕ್ಯಾಲ್ಕುಲೇಟರಿನ ಸ್ಮರಣಶಕ್ತಿ ಕಡಿಮೆ, ಆದರೆ ಕಂಪ್ಯೂಟರಿನ ಸ್ಮರಣ ಶಕ್ತಿ ತುಂಬಾ ಜಾಸ್ತಿ.

ಫ್ಲಾಪಿ ಡಿಸ್ಕ್‌ನ ಬಾಗುವಂತಹ ಪ್ಲಾಸ್ಟಿಕ್‌ನ ಮೇಲೆ ಏನನ್ನು ಲೇಪಿಸ
ಲಾಗಿರುತ್ತದೆ ? – ಅಯಸ್ಕಾಂತೀಯ ಲೇಪ

ಫ್ಲಾಪಿ ಡಿಸ್ಕ್‌ಗೆ ಆ ಹೆಸರು ಬರಲು ಕಾರಣವೇನು ? – ಬಾಗುವಂತಹ (Flexible) ಗುಣವಿರುವುದರಿಂದ Floppy ಎಂದರೆ ತೂಗಾಡು ಎಂದರ್ಥ

ಫ್ಲಾಪಿ ಡಿಸ್ಕ್‌ಗಳು ಯಾವ ಆಕಾರದಲ್ಲಿ ಇರುತ್ತವೆ ? – ಚೌಕಾಕಾರದಲ್ಲಿ

ಫ್ಲಾಪಿಯಲ್ಲಿ ಸಂಗ್ರಹಿಸಬಹುದಾದ ಮಾಹಿತಿಗಳ ಮೊತ್ತದ ಅಳತೆಯನ್ನು ಯಾವುದರಲ್ಲಿ ಸೂಚಿಸುತ್ತಾರೆ ?- ಕಿಲೊ ಬೈಟ್ (ಕೆಬಿ) ಅಥವಾ ಮೆಗಾ ಬೈಟ್ (ಎಂಬಿ)ಗಳಲ್ಲಿ

೧ ಕಿಲೋಬೈಟ್ (ಕೆಬಿ) ಎಂದರೆ ಎಷ್ಟು ಬೈಟ್‌ಗಳು ? ಸುಮಾರು ೧೦೦೦ ಬೈಟ್‌ಗಳು

೧ ಮೆಗಾ ಬೈಟ್ (ಎಂ.ಬಿ) ಎಂದರೆ ಎಷ್ಟು ಬೈಟ್‌ಗಳಾಗುತ್ತವೆ ? – ಸುಮಾರು ೧ ಮಿಲಿಯನ್ ಬೈಟ್‌ಗಳು

೩೬೦ ಕೆ.ಬಿ ಸಂಗ್ರಹಣಾ ಸಾಮರ್ಥ್ಯದ ಫ್ಲಾಪಿಗಳು ಯಾವ ಅಳತೆಯ ವಿರುತ್ತವೆ ? ೫.೨೫ ಇಂಚು ಅಳತೆಯವು.

೧.೨ ಎಂ.ಬಿ. ಸಂಗ್ರಹಣಾ ಸಾಮರ್ಥ್ಯದ ಫ್ಲಾಪಿಗಳು ಯಾವ ಅಳತೆಯ ವಿರುತ್ತವೆ ? – ಇವೂ ಸಹ ೫.೨೫ ಇಂಚು ಅಳತೆಯವು

ಮೊದಲೇ ಮುದ್ರಿಸಿಕೊಂಡಿರುವ ಮಾಹಿತಿಗಳನ್ನು ಕೆಸೆಟ್‌ನಿಂದ ಕಂಪ್ಯೂಟರಿಗೆ ವರ್ಗಾಯಿಸಲಿಕ್ಕೆ ಬರುತ್ತದೆಯೋ ? ಹೌದು, ಬರುತ್ತದೆ

ಮೂರು ವಿಧದ ಒಳ ರವಾನೆ ವಿಭಾಗಗಳು ಯಾವವು ?

೧. ಕೀಲಿಮಣೆ (Key Board)

೨. ಫ್ಲಾಪಿ ಡಿಸ್ಕ್ (Floppy Disk)

೩ ಕೆಸೆಟ್‌ ಟೇಪ್‌ರಿಕಾರ್ಡರ್ (Casset-Tape Recorder)

ಇತರ ವಿಷಯಗಳನ್ನು ಓದಿ

All Competitive Exams Important Notes

Output Devices

Leave a Reply

Your email address will not be published. Required fields are marked *