ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಪ್ರಶ್ನೋತ್ತರಗಳು | British Alvikeya Parinamagalu in Kannada Notes

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಪ್ರಶ್ನೋತ್ತರಗಳು | British Alvikeya Parinamagalu in Kannada Notes

British Alvikeya Parinamagalu in Kannada Question Answer, ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು, British Alvikeya Parinamagalu in Kannada Notes, Pdf

British Alvikeya Parinamagalu in Kannada Question Answer

ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ

1. ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು ? .

ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ಲಾರ್ಡ ಕಾರ್ನವಾಲೀಸ್

2. ರೆಗ್ಯುಲೇಟಿಂಗ್ ಕಾಯ್ದೆಯನ್ನು ಯಾವಾಗ ಜಾರಿಗೊಳಿಸಲಾಯಿತು ?

ಉತ್ತರ : ರೆಗ್ಯುಲೇಟಿಂಗ್ ಕಾಯ್ದೆಯನ್ನು 1773 ರಲ್ಲಿ ಜಾರಿಗೊಳಿಸಲಾಯಿತು .

3. ರೆಗ್ಯುಲೇಟಿಂಗ್ ಕಾಯ್ದೆಯ ಉದ್ದೇಶವೇನು ?

ರೆಗ್ಯುಲೇಟಿಂಗ್ ಕಾಯ್ದೆಯ ಉದ್ದೇಶ ನಿಯಂತ್ರಣ ಹೇರುವುದು .

4. ಕಲ್ಕತ್ತಾದಲ್ಲಿ ಫೋರ್ಟಿ ವಿಲಿಯಂ ಕಾಲೇಜನ್ನು ಸ್ಥಾಪಿಸಿದವರು ಯಾರು ?

* ಕಲ್ಕತ್ತಾದಲ್ಲಿ ಫೋರ್ಟಿ ವಿಲಿಯಂ ಕಾಲೇಜನ್ನು ಸ್ಥಾಪಿಸಿದವರು ಲಾರ್ಡ ಕಾರ್ನವಾಲೀಸ್ . 00 ರಲ್ಲಿ ಜಾರಿಗೆ

5.” ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ ” ಎಂದು ಪ್ರತಿಪಾದಿಸಿದವರು ಯಾರು ?

• ” ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ ” ಎಂದು ಪ್ರತಿಪಾದಿಸಿದವರು ಲಾರ್ಡ ಕಾರ್ನವಾಲೀಸ್ .

6. ದಿವಾನಿ ಅದಾಲತ್ ಮತ್ತು ಫೌಜದಾರಿ ಅದಾಲತ್‌ಗಳನ್ನು ಜಾರಿಗೆ ತಂದವರು ಯಾರು ?

• ದಿವಾನಿ ಅದಾಲತ್ ಮತ್ತು ಫೌಜದಾರಿ ಆದಾಲತ್‌ಗಳನ್ನು ಜಾರಿಗೆ ತಂದವರು ವಾರನ್ ಹೇಸ್ಟಿಂಗ್ಸ್
7.ದಿವಾನಿ ಅದಾಲತ್ ಎಂದರೇನು ?

ದಿವಾನಿ ಅದಾಲತ್ ಎಂದರೆ ನಾಗರೀಕ ನ್ಯಾಯಾಲಯ

8. ಫೌಜದಾರಿ ಆದಾಲತ್ ಎಂದರೇನು ?

ಫೌಜದಾರಿ ಅದಾಲತ್ ಎಂದರೆ ಅಪರಾಧ ನ್ಯಾಯಾಲಯ

9. ನಾಗರೀಕ ನ್ಯಾಯಾಲಯಗಳು ಯಾರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು ?

ನಾಗರೀಕ ನ್ಯಾಯಾಲಯಗಳು ಯುರೋಪಿನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು

10. ಪ್ರಥಮತಃ ವ್ಯವಸ್ಥಿತವಾದ ಪೋಲಿಸ್ ವಿಭಾಗವನ್ನು ಅಸ್ತಿತ್ವಕ್ಕೆ ತಂದವನು ಯಾರು ?

ಪ್ರಥಮತಃ ವ್ಯವಸ್ಥಿತವಾದ ಪೋಲಿಸ್ ವಿಭಾಗವನ್ನು ಅಸ್ಥಿತ್ವಕ್ಕೆ ತಂದವನು ಲಾರ್ಡ ಕಾರ್ನವಾಲೀಸ್

11. ಸೂಪರಿಡೆಂಟೆಂಟ್ ಆಫ್ ಸೋಲಿಸ್ ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿಸಿದವನು ಯಾರು ?

ಸೂಪರಿಡೆಂಟೆಂಟ್ ಆಫ್ ಸೋಲಿಸ್ ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿಸಿ ಸ ಕಾರ್ಪ ಕಾರ್ನವಾಲೀಸ್ . .

12. ಕೊತ್ವಾಲರ ಕಾರ್ಯಗಳೇನು ?

ಹಳ್ಳಿಗಳ ಮಟ್ಟದಲ್ಲಿ ಕಳ್ಳತನ ಅಪರಾಧಗಳು , ದರೋಡೆಗಳ ನಿಯಂತ್ರಣ

13.1902 ರ ಪೋಲಿಸ್ ಕಮಿಷನ್ ಕಾಯ್ದೆಯ ಮಹತ್ವವೇನು ?

1902 ರ ಪೋಲಿಸ್ ಕಮಿಷನ್ ಕಾಯ್ದೆಯ ಮಹತ್ವ ವಿದ್ಯಾರ್ಥತೆಯನ್ನು ಪಡೆದವರನ್ನು ಅಧಿಕಾರಿ ಹುದ್ದೆಗೆ ನೇಮಿಸುವ ಅವಕಾಶವನ್ನು ಕಲ್ಪಿಸಿತು .

14. ಬ್ರಿಟಿಷರ ಕಾಲದಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ ಯಾವುದು ?

ಬ್ರಿಟಿಷರ ಕಾಲದಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ ಸುಬೇದಾರ್ ಸ್ಥಾನ

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಪ್ರಶ್ನೋತ್ತರಗಳು

15. ಸೈನಿಕ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸಲು ನೇಮಕವಾದ ಸಮಿತಿ ಯಾವುದು ?

ಸೈನಿಕ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸಲು ನೇಮಕವಾದ ಸಮಿತಿ ಪೀಲ್ ಎಂಬುವವರ ನೇತೃತ್ವದ ಸಮಿತಿ

16. ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು ?

ಈ ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು ಲಾರ್ಡ ಕಾರ್ನವಾಲೀಸ್

17.ಖಾಯಂ ಜಮೀನ್ದಾರಿ ಪದ್ಧತಿ ಎಂದರೇನು ?

ವಾರ್ಷಿಕವಾಗಿ ನಿರ್ದಿಷ್ಟ ಕಂದಾಯದ ಹಣವನ್ನು ಪಡೆಯಲು ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ಜಾರಿಗೊಳಿಸಿದ ಹೊಸ ಕಂದಾಯ ಪದ್ಧತಿಯನ್ನು ಖಾಯಂ ಜಮೀನ್ದಾರಿ ಪದ್ಧತಿ ಎನ್ನುವರು .

18 , ” ಭಾರತದ ರೈತರು ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ ಸಾಲದಲ್ಲೇ ಸತ್ತರು ” ಎಂದವರು ಯಾರು ?

ಭಾರತದ ರೈತರು ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ , ಸಾಲದಲ್ಲೇ ಸತ್ತರು ” ಎಂದವರು ಚಾರ್ಲ್ಸ್ ಮಟಕಾಫ್.

19. ಭಾರತದ ರೈತರು ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ ಸಾಲದಲ್ಲೇ ಸಾಯಲು ಕಾರಣವೇನು ?

ಭಾರತದ ರೈತರು ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ , ಸಾಲದಲ್ಲೇ ಸಾಯಲು ಕಾರಣ ಬ್ರಿಟಿಷ್ ಭೂಕಂದಾಯ ನೀತಿ

20. ಮಹಲ್ ಎಂದರೇನು ?

ಮಹಲ್ ಎಂದರೆ ತಾಲ್ಲೂಕು

21. ಮಹಲ್‌ವಾರಿ ಪದ್ಧತಿಯನ್ನು ಪ್ರಯೋಗಿಸಿದವರು ಯಾರು ?

ಮಹಲ್‌ವಾರಿ ಪದ್ಧತಿಯನ್ನು ಪ್ರಯೋಗಿಸಿದವರು ಆರ್‌.ಎಂ.ಬರ್ಡ ಮತ್ತು ಜೇಮ್ಸ್ ಫಾಮ್ಸ್‌ನ್

22. ರೈತವಾರಿ ಪದ್ಧತಿಯನ್ನು ಮೊದಲು ಜಾರಿಗೊಳಿಸಿದವನು ಯಾರು ?

23.ರೈತವಾರಿ ಪದ್ಧತಿಯನ್ನು ಮೊದಲಿಗೆ ಒಂದು ಪ್ರಯೋಗವಾಗಿ ಎಲ್ಲಿ ಜಾರಿಗೊಳಿಸಲಾಯಿತು ?

ರೈತವಾರಿ ಪದ್ಧತಿಯನ್ನು ಮೊದಲಿಗೆ ಒಂದು ಪ್ರಯೋಗವಾಗಿ ಭಾರಮಲ್ ಪ್ರಾಂತ್ಯದಲ್ಲಿ ರೈತವಾರಿ ಪದ್ಧತಿಯನ್ನು ಮೊದಲು ಜಾರಿಗೊಳಿಸಿದವನು ಅಲೆಕ್ಸಾಂಡರ್ ರೀಡ್ . ಜಾರಿಗೊಳಿಸಲಾಯಿತು .

24 , ರೈತವಾರಿ ಪದ್ಧತಿಯನ್ನು ಮದರಾಸು ಮತ್ತು ಮೈಸೂರು ಪ್ರಾಂತ್ಯಗಳಲ್ಲಿ ಜಾರಿಗೊಳಿಸಿದವನು ಯಾರು ?

ರೈತವಾರಿ ಪದ್ಧತಿಯನ್ನು ಮದರಾಸು ಮತ್ತು ಮೈಸೂರು ಪ್ರಾಂತ್ಯಗಳಲ್ಲಿ ಜಾರಿಗೊಳಿಸಿದವನು ಥಾಮಸ್ ಮನೋ .

25. ಯಾವ ಪದ್ಧತಿಯಿಂದ ಗರಿಷ್ಠ ಪ್ರಮಾಣದ ರೈತರು ಸಾಲದ ಸುಳಿಗೆ ಸಿಲುಕಿದರು ?

ರೈತವಾರಿ ಪದ್ಧತಿಯಿಂದ ಪದ್ಧತಿಯಿಂದ ಗರಿಷ್ಠ ಪ್ರಮಾಣದ ರೈತರು ಸಾಲದ ಸುಳಿಗೆ ಸಿಲುಕಿದರು .

26. ಆಧುನಿಕ ಶಿಕ್ಷಣ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ ಯಾರು ?

ಆಧುನಿಕ ಶಿಕ್ಷಣ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ ವಾರನ್ ಹೇಸ್ಟಿಂಗ್ಸ್

27. ಕಲ್ಕತ್ತಾ ಮದರಸಾವನ್ನು ಪ್ರಾರಂಭಿಸಿದವರು ಯಾರು ?

ಕಲ್ಕತ್ತಾ ಮದರಸಾವನ್ನು ಪ್ರಾರಂಭಿಸಿದವರು ವಾರನ್ ಹೇಸ್ಟಿಂಗ್ಸ್

28 , ಬನಾರಸ್ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದವರು ಯಾರು ?

ಬನಾರಸ್ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದವರು ಜೋನಾಥನ್‌ ಡಂಕನ್‌

29. ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವರು ಯಾರು ?

ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವರು ಚಾರ್ಲ್ಸ್ ಗ್ರಾಂಟ್

30. ಗವರ್ನರ್ ಜನರಲ್‌ನ ಕಾರ್ಯಾಂಗ ಸಭೆಗೆ ಕಾನೂನು ಸದಸ್ಯರನ್ನಾಗಿ ಯಾರನ್ನು ನಮಕ ಮಾಡಲಾಯಿತು ?

ಗವರ್ನರ್ ಜನರಲ್‌ನ , ಕಾರ್ಯಾಂಗ ಸಭೆಗೆ ಕಾನೂನು ಸದಸ್ಯನನ್ನಾಗಿ ಮೆಕಾಲೆಯನ್ನು ನೇಮಕ ಮಾಡಲಾಯಿತು.

31. ಸಾರ್ವಜನಿಕ ಶಿಕ್ಷಣ ಸಮಿತಿಯ ಅಧ್ಯಕ್ಷರು ಯಾರು ?

ಸಾರ್ವಜನಿಕ ಶಿಕ್ಷಣ ಸಮಿತಿಯ ಅಧ್ಯಕ್ಷರು ಮಹಾಲೆ

British Alvikeya Parinamagalu in Kannada Notes

32 , ಆಧುನಿಕ ಭಾರತ ಶಿಕ್ಷಣ ವ್ಯವಸ್ಥೆಗೆ ತಳಹದಿ ಯಾವುದು

ಆಧುನಿಕ ಭಾರತ ಶಿಕ್ಷಣ ವ್ಯವಸ್ಥೆಗೆ ತಳಹದಿ ಮೆಕಾಲೆ ವರದಿ

33.” ರಕ್ತ , ಮಾಂಸಗಳಲ್ಲಿ , ಭಾರತೀಯರಾಗಿಯ ಅಭಿರುಚಿ , ಅಭಿಪ್ರಾಯ ನೀತಿ ಮತ್ತು ಬುದ್ದಿವಂತಿಕೆಯಲ್ಲಿ ಅಂಗ್ಲಿಷರಾಗುವ ” ಹೊಸ ಭಾರತೀಯ ವಿದ್ಯಾನಂತ ವರ್ಗದ ಸೃಷ್ಟಿ ಯಾದ ಯೋಜನೆ ಆಗಿತ್ತು ? .

ರಕ್ತ , ಮಾಂಸಗಳಲ್ಲಿ ಭಾರತೀಯರಾಗಿಯೂ ಅಭಿರಾಜಭಿಪ್ರಾಯ , ನೀತಿ ಮತ್ತು ಬುದ್ಧಿವಂತಿಕೆಯಲ್ಲಿ ಪುರಷರಾಗುವ ” ಹೊಸ ಭಾರತೀಯ ವಿದ್ಯಾವಂತ ನರ್ಗದ ಸೃಷ್ಟಿ ಮೆಕಾಲೆ ಯೋಜನೆ ಆಗಿತ್ತು .

34. ಕಲ್ಕತ್ತಾ , ಬಾಂಬೆ ಮತ್ತು ಮದರಾಸುಗಳಲ್ಲಿ ನೂತನ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದವನು ಯಾರು ?

ಕಲ್ಕತ್ತಾ , ಬಾಂಬೆ ಮತ್ತು ಮದರಾಸುಗಳಲ್ಲಿ ನೂತನ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದವನು ಬಾರ್ಡ ಡಾಲ್‌ಹೌಸಿ.

35. ಲಾರ್ಡ್ ಡಾಲ್‌ಹೌಸಿಯು ಕಲ್ಕತ್ತಾ , ಬಾಂಬೆ ಮತ್ತು ಮದರಾಸುಗಳಲ್ಲಿ ನೂತನ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿದವರು ಯಾರು ?

ಲಾರ್ಡ್ ಡಾಲ್‌ಹೌಸಿಯು ಕಲ್ಕತ್ತಾ , ಬಾಂಬೆ ಮತ್ತು ಮದರಾಸುಗಳಲ್ಲಿ ನೂತನ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿದವರು ಸರ್ ಚಾಲ್ಸ್ ವುಡ್ ಆಯೋಗ

36. ರೆಗ್ಯುಲೇಟಿಂಗ್ ಶಾಸನ ಯಾವಾಗ ಜಾರಿಗೆ ಬಂದಿತು

ರೆಗ್ಯುಲೇಟಿಂಗ್ ಪಾಸನ 1773 ರಲ್ಲಿ ಜಾರಿಗೆ ಬಂದಿತು

37.ಈಸ್ಟ್ ಇಂಡಿಯಾ ಕಂಪೆನಿಯಿಂದ ಬ್ರಿಟಿಷ್ ಸರ್ಕಾರ ಪಡೆಯುತ್ತಿದ್ದ ತೆರಿಗೆ ಹಣವನ್ನು ಅಪರಾಧ ತೆರಿಗೆ ” ಎಂದು ತೀಕ್ಷವಾಗಿ ಟೀಕಿಸಿದವನು ಯಾರು ?

ಈಸ್ಟ್ ಇಂಡಿಯಾ ಕಂಪೆನಿಯಿಂದ ಬ್ರಿಟಿಷ್ ಸರ್ಕಾರ ಪಡೆಯುತ್ತಿದ್ದ ತೆರಿಗೆ ಹಣವನ್ನು “ ಅಪರಾಧ ತೆರಿಗೆ ” ಎಂದು ತೀಕ್ಷವಾಗಿ ಟೀಕಿಸಿದವನು ಎಡ್ಕಂಡ್ ಬರ್ಕ

38. ಯಾವ ಶಾಸನದ ಮೇರೆಗೆ ಕಲ್ಕತ್ತಾದಲ್ಲಿ ಸುಪ್ರೀಂಕೋರ್ಟನ್ನು ಸ್ಥಾಪನೆ ಮಾಡಲಾಯಿತು ?

ರೆಗ್ಯುಲೇಟಿಂಗ್ ಶಾಸನದ ಮೇರೆಗೆ ಕಲ್ಕತ್ತಾದಲ್ಲಿ ಸುಪ್ರೀಂಕೋರ್ಟನ್ನು ಸ್ಥಾಪನೆ ಮಾಡಲಾಯಿತು .

39. ಪಿಟ್ಸ್ ಇಂಡಿಯಾ ಕಾಯ್ದೆ ಯಾವಾಗ ಜಾರಿಗೆ ಬಂತು ?

ಪಿಟ್ಸ್ ಇಂಡಿಯಾ ಕಾಯ್ದೆ 1784 ರಲ್ಲಿ ಜಾರಿಗೆ ಬಂತು .

40 , ನಿಯಂತ್ರಣ ಮಂಡಳಿಯ ಸ್ಥಾಪನೆಗೆ ಅವಕಾಶ ನೀಡಿದ ಕಾಯ್ದೆ ಯಾವುದು ?

ಈ ನಿಯಂತ್ರಣ ಮಂಡಳಿಯ ಸ್ಥಾಪನೆಗೆ ಅವಕಾಶ ನೀಡಿದ ಕಾಯ್ದೆ ಪಿಟ್ಸ್ ಇಂಡಿಯಾ ಕಾಯ್ದೆ

41. ಭಾರತದಲ್ಲಿದ್ದ ಕಂಪನಿಯ ಅಧೀನದ ಪ್ರದೇಶಗಳಿಗೆ ಇಂಗ್ಲೆಂಡಿನ ಸರ್ಕಾರವೇ ಅಂತಿಮ ಸಾರ್ವಭೌಮ ಎಂದು ಘೋಷಣೆ ಮಾಡಿದ ಕಾಯ್ದೆ ಯಾವುದು ?

ಭಾರತದಲ್ಲಿದ್ದ ಕಂಪೆನಿಯ ಅಧೀನದ ಪ್ರದೇಶಗಳಿಗೆ ಇಂಗ್ಲೆಂಡಿನ ಸರ್ಕಾರವೇ ಅಂತಿಮ ಸಾರ್ವಭೌಮ ಎಂದು ಘೋಷಣೆ ಮಾಡಿದ ಕಾಯ್ದೆ ಪಿಟ್ಸ್ ಇಂಡಿಯಾ ಕಾಯ್ದೆ

42. ಚರ್ಚಗಳಿಗೆ ಭಾರತಕ್ಕೆ ಪ್ರವೇಶ ಮಾಡಲು ಅಧಿಕೃತ ಅವಕಾಶವನ್ನು ನೀಡಿದ ಶಾಸನ ಯಾವುದು ?

ಚರ್ಚಗಳಿಗೆ ಭಾರತಕ್ಕೆ ಪ್ರವೇಶ ಮಾಡಲು ಅಧಿಕೃತ ಅವಕಾಶವನ್ನು ನೀಡಿದ ಶಾಸನ 1813 ರ ಚಾರ್ಟರ್ ಕಾಯ್ದೆ.

43.ಬಂಗಾಳದ ಗವರ್ನರ್ ಜನರಲ್‌ನನ್ನು ಭಾರತದ ಗವರ್ನರ್ ಜನರಲ್ ಆಗಿ ನಾಮಕರಣ ಮಾಡಿದ ಶಾಸನ ಯಾವುದು ?

ಬಂಗಾಳದ ಗವರ್ನರ್ ಜನರಲ್‌ನನ್ನು ಭಾರತದ ಗವರ್ನರ್ ಜನರಲ್ ಆಗಿ ನಾಮಕರಣ ಮಾಡಿದ ಶಾಸನ 1833 ರ ಚಾರ್ಟರ್ ಕಾಯ್ದೆ .

44. ಗವರ್ನರ್ ಜನರಲ್ ಪದನಾಮವನ್ನು ಬದಲಾಯಿಸಿ ವೈಸರಾಯ್ ಎಂಬ ಪದನಾಮ ನೀಡಿದ ಶಾಸನ ಯಾವುದು ?

ಗವರ್ನರ್ ಜನರಲ್ ಪದನಾಮವನ್ನು ಬದಲಾಯಿಸಿ ವೈಸರಾಯ್ ಎಂಬ ಪದನಾಮ ನೀಡಿದ ಶಾಸನ ಭಾರತ ಸರ್ಕಾರದ ಕಾಯ್ದೆ -1858

45. ಭಾರತದ ಮೊದಲ ವೈಸರಾಯ್ ಯಾರು ?

ಭಾರತದ ಮೊದಲ ವೈಸರಾಯ್ ಲಾರ್ಡ ಕ್ಯಾನಿಂಗ್

46.1909 : ಭಾರತೀಯ ಪರಿಷತ್ ಕಾಯ್ದೆಯ ಮತ್ತೊಂದು ಹೆಸರೇನು ?

british alvikeya parinamagalu in kannada notes

1909 ಭಾರತೀಯ ಪರಿಷತ್‌ ಕಾಯ್ದೆಯ ಮತ್ತೊಂದು ಹೆಸರು ಮಿಂಟೊ ಮಾರ್ಲೆ ಸುಧಾರಣಾ ಕಾಯ್ದೆ

47. ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ಜಾರಿಗೆ ತಂದ ಶಾಸನ ಯಾವುದು ?

ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ಜಾರಿಗೆ ತಂದ ಶಾಸನ 1909 ಭಾರತೀಯ ಪರಿಷತ್ ಕಾಯೆ

48 , 1919 ಭಾರತೀಯ ಪರಿಷತ್ ಕಾಯ್ದೆಯ ಮತ್ತೊಂದು ಹೆಸರೇನು ?

1919 ಭಾರತೀಯ ಪರಿಷತ್ ಕಾಯ್ದೆಯ ಮತ್ತೊಂದು ಹೆಸರು ಮಾಂಟೆಗೂ ಚೆಮ್ಸ್‌ಫರ್ಡ ಸುಧಾರಣಾ ಕಾಯ್ದೆ

49 , ಮೊದಲನೆಯ ಮಹಾಯುದ್ಧದ ಸಂದರ್ಭದಲ್ಲಿ ಭಾರತೀಯರನ್ನು ಯುದ್ಧದಲ್ಲಿ ಬ್ರಿಟಿಷರ ಪರವಾಗಿ ಭಾಗವಹಿಸಲು ಪ್ರೇರೇಪಿಸಿದ ಹಿನ್ನಲೆಯಲ್ಲಿ ಜಾರಿಗೆ ತರಲಾದ ಶಾಸನ ಯಾವುದು ?

1919 ಭಾರತೀಯ ಪರಿಷತ್ ಕಾಯ್ದೆ

50. “ ಭಾರತೀಯರಿಗೆ ಹಂತ ಹಂತವಾಗಿ ಜವಾಬ್ದಾರಿ ಸರ್ಕಾರವನ್ನು ನೀಡುವುದೇ ಬ್ರಿಟಿಷ್ ಸರಕಾರದ ಗುರಿ ” ಎಂದು ಘೋಷಿಸಿದವರು ಯಾರು ?

ಮಾಂಟಿಗೋ

51. ಪ್ರಾಂತ್ಯಗಳಲ್ಲಿ ದ್ವಿ ಸರ್ಕಾರ ಪದ್ಧತಿಗೆ ಅವಕಾಶ ನೀಡಿದ ಶಾಸನ ಯಾವುದು ?

1919 ಭಾರತೀಯ ಪರಿಷತ್ ಕಾಯ್ದೆ

52.ಭಾರತದ ಸಂವಿಧಾನ ರಚನೆಗೆ ಬುನಾದಿಯಾದ ಶಾಸನ ಯಾವುದು ?

1935 ರ ಭಾರತ ಸರ್ಕಾರದ ಕಾಯ್ದೆ

53.ಭಾರತೀಯ ರಿಸರ್ವ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿದ ಶಾಸನ ಯಾವುದು ?

1935 ರ ಭಾರತ ಸರ್ಕಾರದ ಕಾಯ್ದೆ

54. ಭಾರತದಲ್ಲಿ ಫೆಡರಲ್ ಕೋರ್ಟಿ ಸ್ಥಾಪನೆಗೆ ಅವಕಾಶ ನೀಡಿದ ಶಾಸನ ಯಾವುದು ?

1935 ರ ಭಾರತ ಸರ್ಕಾರದ ಕಾಯ್ದೆ

ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ .

1. ಈಸ್ಟ್ ಇಂಡಿಯಾ ಕಂಪನಿ ಮೂಲಕ ದೇಶದಲ್ಲಿ ಬ್ರಿಟಿಷರು ರೂಪಿಸಿದ ನ್ಯಾಯಾಂಗ ವ್ಯವಸ್ಥೆಯನ್ನು ವಿಶ್ಲೇಷಿಸಿರಿ .

ವಾರನ್ ಹೇಸ್ಟಿಂಗ್ಸ್‌ನು ಜಾರಿಗೆ ತಂದ ಹೊಸ ಯೋಜನೆಯ ಪ್ರಕಾರ ಪ್ರತಿ ಜಿಲ್ಲೆಯು ಎರಡು ಬಗೆಯ ನ್ಯಾಯಾಲಯಗಳನ್ನು ಹೊಂದಿರಬೇಕಿತ್ತು .

ಇಲ್ಲಿ ನಾಗರೀಕ ನ್ಯಾಯದಾನದ ಸಂದರ್ಭದಲ್ಲಿ ಹಿಂದೂಗಳಿಗೆ ಹಿಂದೂ ಶಾಸ್ತ್ರಗ್ರಂಥಗಳ ಪ್ರಕಾರ ಮತ್ತು ಮುಸ್ಲಿಮರಿಗೆ ಪರಿಯತ್ ಕಾನೂನುಗಳ ಪ್ರಕಾರ ನ್ಯಾಯದಾನ ನೀಡಲಾಗುತ್ತಿತ್ತು .

ಅವುಗಳೆಂದರೆ : ದಿವಾನಿ ಅದಾಲತ್ ‘ ಎಂಬ ನಾಗರೀಕ ನ್ಯಾಯಾಲಯಗಳು ಮತ್ತು ಭೌಜದಾರಿ ಅದಾಲತ್‌ ‘ ಎಂಬ ಅಪರಾಧ ನ್ಯಾಯಾಲಯಗಳು .

ಅಪರಾಧ ಪ್ರಕರಣಗಳಿಗೆ ಬಂದಾಗ ಎಲ್ಲರಿಗೂ ಇಸ್ಲಾಂ ಕಾನೂನುಗಳ ಅನುಸಾರ ವಿಚಾರಣೆ ನಡೆಸಲಾಗುತ್ತಿತ್ತು . ಕ್ರಮೇಣ ಬ್ರಿಟಿಷ್ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಅಪರಾಧ ಕಾನೂನುಗಳಲ್ಲಿ ಬದಲಾವಣೆ ತರಲಾಯಿತು .

2. ಬ್ರಿಟಿಷ್‌ರ ಕಾಲದಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿ ತಂದಂತಹ ಸುಧಾರಣೆಗಳಾವುವು ?

ಆಂತರಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊತ್ತಿರುವ ವರ್ಗವೆ ಪೊಲೀಸರು . ಲಾರ್ಡ್ ಕಾರ್ನ್‌ವಾಲೀಸನ್ನು ಪ್ರಥಮತಃ ವ್ಯವಸ್ಥಿತವಾದ ಪೊಲೀಸ್ ವಿಭಾಗವನ್ನು ಅಸ್ತಿತ್ವಕ್ಕೆ ತಂದನು .

ಇವನು ‘ ಸೂಪರಿಡೆಂಟೆಂಟ್ ಆಫ್ ಪೊಲೀಸ್ ‘ ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿಸಿದನು .

ಪ್ರತಿ ಜಿಲ್ಲೆಯನ್ನು ‘ ಠಾಣೆ’ಗಳನ್ನಾಗಿ ವಿಭಜಿಸಿ ಪ್ರತಿ ಠಾಣೆಯನ್ನು ‘ ಕೊತ್ವಾಲ’ರ ಅಧೀನದಲ್ಲೂ , ಹಳ್ಳಿಗಳು ‘ ಚೌಕಿದಾರ’ರ ಅಧೀನದಲ್ಲೂ ಇರುವಂತೆ ಮಾಡಿದನು .

ಕೊತ್ವಾಲರುಗಳು ಹಳ್ಳಿಗಳ ಮಟ್ಟದಲ್ಲಿ ಕಳ್ಳತನ , ಅಪರಾಧಗಳು , ದರೋಡೆಗಳ ನಿಯಂತ್ರಣದ ಜವಾಬ್ದಾರಿಯನ್ನು ಹೊತ್ತಿದ್ದರು .

ಬ್ರಿಟಿಷ್ ಮ್ಯಾಜಿಸ್ಟ್ರೇಟ್‌ಗಳನ್ನು ನೇಮಕ ಮಾಡುವ ಪದ್ಧತಿ ಜಾರಿಗೊಂಡಿತು . ಪೊಲೀಸ್ ಅಧಿಕಾರಿಗಳು ಮ್ಯಾಜಿಸ್ಟ್ರೇಟ್‌ಗಳ ಅಧೀನಕ್ಕೊಳಪಟ್ಟರು .

British Alvikeya Parinamagalu in Kannada Question Answer

3. ಖಾಯಂ ಜಮೀನ್ದಾರಿ ಪದ್ಧತಿಯು ರೈತರನ್ನು ‘ ಸಾಲದಲ್ಲೇ ಹುಟ್ಟಿ , ಸಾಲದಲ್ಲೇ ಬದುಕಿ , ಸಾಲದಲ್ಲೇ ಸಾಯುವಂತೆ ಮಾಡಿತು . ಹೇಗೆ ವಿಮರ್ಶಿಸಿ ,

ವಾರ್ಷಿಕವಾಗಿ ನಿರ್ದಿಷ್ಟ ಕಂದಾಯದ ಹಣವನ್ನು ಪಡೆಯಲು ಲಾರ್ಡ್ ಕಾರ್ನ್‌ವಾಲೀಸನು ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ಹೊಸ ಕಂದಾಯ ಪದ್ಧತಿಯನ್ನು ಜಾರಿಗೊಳಿಸಿದನು . ಇದನ್ನು ಖಾಯಂ ಜಮೀನ್ದಾರಿ ಪದ್ಧತಿ ಎಂದು ಕರೆಯಲಾಯಿತು .

ಈ ಪದ್ಧತಿಯಲ್ಲಿ ಜಮೀನ್ದಾರನು ಭೂಮಾಲೀಕನಾದನು .

ಈ ಹೊಸ ಯೋಜನೆಯ ಪ್ರಕಾರ ಜಮೀನ್ದಾರನು ಪ್ರತಿವರ್ಷವೂ ನಿರ್ದಿಷ್ಟ ದಿನಕ್ಕೆ ಮೊದಲೇ ಅವನು ಒಪ್ಪಿಕೊಂಡಿದ್ದ ಕಂದಾಯದ ಮೊತ್ತವನ್ನು ಸರಕಾರಕ್ಕೆ ಸಲ್ಲಿಸಬೇಕಿತ್ತು .

ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ

1. ದಿವಾನಿ ಅದಾಲತ್ ಎಂಬ ನಾಗರಿಕ ನ್ಯಾಯಾಲಯವನ್ನು ಸ್ಥಾಪಿಸಿದವನು ( ವಾರನ್ ಹೇಸ್ಟಿಂಗ್ಸ್ )

2. ಸೂಪರಿಡೆಂಟೆಂಟ್ ಆಫ್ ಪೊಲೀಸ್ ಹುದ್ದೆಯನ್ನು ಸೃಷ್ಟಿಸಿದವನು

3 ಅಧ್ಯಾಯ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ( ಲಾರ್ಡ್ ಕಾರ್ನ್‌ವಾಲೀಸ್ )

3. ಖಾಯಂ ಜಮೀನ್ದಾರಿ ಪದ್ಧತಿಯನ್ನು ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ತರಲಾಯಿತು . ( 1793 ) .

1. ಅಲೆಕ್ಸಾಂಡರ್ ರೀಡ್ ಜಾರಿಗೆ ತಂದ ಕಂದಾಯ ಪದ್ಧತಿ …….( ರೈತವಾರಿ ಪದ್ಧತಿ )

5. ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ನೀಡಿದ ಮೊದಲ ಬ್ರಿಟಿಷ್ ಅಧಿಕಾರಿ ( ವಾರನ್ ಹೇಸ್ಟಿಂಗ್ಸ್ )

6. ರೆಗ್ಯುಲೇಟಿಂಗ್ ಕಾಯ್ದೆ ರಲ್ಲಿ ಜಾರಿಗೆ ಬಂದಿತು .

ಹತ್ತನೇಯ ತರಗತಿ ಸಮಾಜ ವಿಜ್ಞಾನ ಪಠ್ಯದ ನೋಟ್ಸ್

ಭಾರತಕ್ಕೆ ಯುರೋಪಿಯನ್ನರ ಆಗಮನ

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ ಪ್ರಶ್ನೆ ಉತ್ತರ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *