akshara gana in kannada | ಅಕ್ಷರಗಣ | SDA, SDA, KPSC, PDO, RDPR. KSP

akshara gana in kannada

akshara gana in kannada

akshara gana in kannada, ಅಕ್ಷರಗಣ, AKSHARA GANA, MATRA GANA and AMSHA GANA, akshara gana kannada grammar, FDA, SDA, KPSC, PDO, RDPR. KSP
ಇದು ಮುಖ್ಯವಾಗಿ ಸಂಸ್ಕೃತ ಭಾಷೆಯಲ್ಲಿದೆ ಇದರಲ್ಲಿ ಮೂರು ಮೂರು ಅಕ್ಷರಗಳನ್ನು ಒಂದೊಂದು ಗುಂಪಾಗಿ ವಿಭಾಜಿಸಲಾಗಿದೆ . ಅಕ್ಷರಗಳಿಗೆ ಪ್ರಸ್ತಾರ ಹಾಕಿ ಅಲ್ಲಿ ಅಕ್ಷರದ ಆಧಾರದ ಮೇಲಿಂದ ಗಣ ವಿಭಾಗ ಮಾಡುವುದನ್ನು ಅಕ್ಷರ ಗಣ ಎನ್ನುತ್ತೇವೆ . ಇದರಲ್ಲಿ 8 ಪ್ರಕಾರಗಳನ್ನಾಗಿ ವಿಂಗಡಿಸಲಾಗಿದೆ . ಈ ಎಂಟು ಅಕ್ಷರಗಳನ್ನು ಕುರಿತು ಈಶ್ವರ ಕವಿಯು ತನ್ನ ಜಿಹ್ವಾಬಂಧನ ಕೃತಿಯಲ್ಲಿ ಹೀಗೆ ಹೇಳಿದ್ದಾನೆ .

akshara gana in kannada

ಗುರು ಲಘು ಮೂರಿರೆ ಮನಗಣ

ಗುರು. ಲಘು ಮೊದಲಲಿ ಬರಲು ಭಯಗಣಮಕ್ಕುಂ

ಲಘು ಗುರು  ನಡುವಿರೆ ಜರಗಣ

ಲಘು ಗುರು , ಕೊನೆಯಲ್ಲಿ ಬರಲು ಸತಗಣಮಕ್ಕುಂ

ಗುರು ಮೂರಿರ –  ಮ’ಗಣ 

ಲಘು ಮೂರಿರೆ  – ನ’ಗಣ  : UUU

ಗುರು ಮೊದಲಿಗೆ –  ಭ’ಗಣ :  -UU

ಲಘು ಮೊದಲಿಗೆ –  ಯ’ಗಣ : U- –

ಗುರು ನಡುವಿರೆ    –  ಜ’ಗಣ  :  U – U

ಲಘು ನಡುವಿರೆ  –  ರ’ಗಣ  :  -U –

ಗುರು ಕೊನೆಯಿರ  – ಸ’ಗಣ : UU –

ಲಘು ಕೊನೆಗಿರ  –   ‘ ತ’ಗಣ  : – –  U      

"<yoastmark

ಈ ಮೇಲಿನ ಸೂತ್ರವನ್ನಲ್ಲದೇ ‘ ಯಮಾತಾರಾಜಭಾನಸಲಗಂ ‘ ಎಂಬ ಸೂತ್ರದ ಮೂಲಕವೂ ಎಂಟು ಗಣಗಳನ್ನು ರಚಿಸಬಹುದು

ಯಮಾತಾ Ú- -ಯ ಗಣ  : ಜಭಾನ U – U ಜ ಗಣ

ಮಾತಾರಾ- – -ಮ ಗಣ | ಭಾನಸ –U | -U U ಭ ಗಣ

ತಾರಾಜ U ತ ಗಣ | ನಸಲ UU U ನ ಗಣ

ರಾಜಭಾ – U – ರ ಗಣ ಸಲಗಂ UU – ಸ ಗಣ     

ಅಕ್ಷರ ವೃತ್ತಗಳು ಅಥವಾ ವರ್ಣವೃತ್ತಗಳು

ಇವು ಸಂಸ್ಕೃತದಿಂದ ಕನ್ನಡಕ್ಕೆ ಬಂದಿವೆ . ಇಲ್ಲಿ ಪದ್ಯವನ್ನ ಇನ್ನುವಮಾನದಂಡ ಅಕ್ಷರಗಣಗಳು ಅಂದರೆ ಅಕ್ಷರಗಣಗಳಿಂದ ಕೂಡಿದ ಪದ್ಯ ಜಾತಿಗಳೇ ಅಕ್ಷರ ವೃತ್ತಗಳು ಇಲ್ಲಿ ಪ್ರತಿ ವೃತ್ತಕ್ಕೆ ಗಣಗಳು ನಿರ್ಧಿಷ್ಟ ಸಂಖ್ಯೆಯಲ್ಲಿರುತ್ತವೆ .

ವರ್ಣ ವೃತ್ತಗಳಲ್ಲಿ ಪ್ರಕಾರಗಳು

1 ) ಸಮವೃತ್ತ

2 ) ಅರ್ಧ ವೃತ್ತ

3 ) ವಿಷಮ ವೃತ್ತ

ಸಮವೃತ್ತ : ಸಮವೃತ್ತವು ನಾಲ್ಕು ರೀತಿಯ ಪಾದಗಳುಳ್ಳ ಪದ್ಯ . ನಾಲ್ಕು ಪಾದಗಳು ಒಂದೇ ಸಮನಾಗಿದ್ದು , ನಾಲ್ಕೂ ಪಾದಗಳಲ್ಲಿ ಒಂದೇ ಲಕ್ಷಣಗಳನ್ನು ಹೊಂದಿರುತ್ತವೆ . ಇವುಗಳಲ್ಲಿ ಒಂದು ಪಾದದಲ್ಲಿ ಒಂದರಿಂದ ಇಪ್ಪತ್ತಾರರವರೆಗೂ ವರ್ಣಗಳಿರುತ್ತವೆ . ಪ್ರತಿ ಪಾದದ ಅಕ್ಷರಗಳ ಸಂಖ್ಯೆಯನ್ನು ಅನುಸರಿಸಿ 26 ಪ್ರಭೇಧಗಳಿವೆ .

 ಅರ್ಧ ಸಮ ವೃತ್ತ : –

ಇದು ಕೂಡ ನಾಲ್ಕು ಪಾದಗಳನ್ನು ಹೊಂದಿದ್ದು , 1 & 3 ನೇ ಯ ಪಾದಗಳು ಹಾಗೂ 2 & 4 ನೇಯ ಪಾದಗಳು ಒಂದು ಸಮನಾಗಿರುತ್ತದೆ . ಅರ್ಧ ಸಮವೃತ್ತಗಳಲ್ಲಿ 4 ಪ್ರಬೇಧಗಳು ಕಂಡು ಬರುತ್ತವೆ . ಅವುಗಳೆಂದರೆ

1 ) ನಾಗ

2 ) ವಿನಿಯೋಗಿನಿ

3 ) ವಸಂತ ಮಾಲಿಕೆ

4 ) ಪುಷ್ಟಿತಾಗ ಇವುಗಳು ತಮ್ಮದೇ ಆದ ಲಕ್ಷಣಗಳನ್ನು ಹೊಂದಿದ್ದು , ಕವಿರಾಜಮಾರ್ಗ , ಚಿಕ್ಕದೇವರಾಯ ವಿಜಯ ಇತ್ಯಾದಿ ಕೃತಿಗಳಲ್ಲಿ ಬಳಕೆಯಾಗಿರುವುದು ಕಂಡು ಬರುತ್ತದೆ.

ವಿಷಮ ವೃತ್ತ :-

ವಿಷಮ ವೃತ್ತಗಳು ಕೂಡ ನಾಲ್ಕು ಸಾಲುಗಳ ಪದ್ಯವಾಗಿದ್ದು , ಹೆಸರೇ ಸೂಚಿಸುವಂತೆ 4 ಪಾದಗಳು ಬೇರೆ ಬೇರೆ ಲಕ್ಷಣವನ್ನು ಹೊಂದಿರುತ್ತವೆ.

                        chandassu in kannada | ಕನ್ನಡ ಛಂದಸ್ಸು | chandassu kannada grammar

 

Leave a Reply

Your email address will not be published. Required fields are marked *