2nd puc political science chapter 8 notes in kannada, ಅಂತರ್ರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ ದ್ವಿತೀಯ ಪಿಯುಸಿ ನೋಟ್ಸ್, International Relations in Kannada, Download Political Science Chapter 8 International Relations and Politics Questions and Answers, Notes Pdf, 2nd PUC Political Science
ಒಂದು ಅಂಕದ ಪ್ರಶ್ನೆಗಳು
1. ಅಂತರಾಷ್ಟ್ರೀಯ ಸಂಬಂಧ ಎಂದರೇನು ?
ರಾಷ್ಟ್ರಗಳ ನಡುವಿನ ಶಕ್ತಿ ಪ್ರದರ್ಶನದಲ್ಲಿ ನಡೆಯುವ ಒಂದು ವ್ಯವಸ್ಥಿತ ವಿದ್ಯಮಾನಗಳನ್ನು ಅಂತಾರಾಷ್ಟ್ರೀಯ ಸಂಬಂಧ ಎನ್ನುವರು .
2. ಅಂತಾರಾಷ್ಟ್ರೀಯ ಸಂಬಂಧ ಎಂಬ ಪದವನ್ನು ಮೊದಲು ಬಳಸಿದವರಾರು ?
ಅಂತಾರಾಷ್ಟ್ರೀಯ ಸಂಬಂಧ ಎಂಬ ಪದವನ್ನು ಜೆರ್ಮಿ ಟೆಂಥಾಮ್‌ರವರು ಮೊದಲು ಬಳಸಿದರು .
ಜೀನ್‌ಬೋಡಿನ್‌ರವರ ಕೃತಿಯನ್ನು ಹೆಸರಿಸಿ .
2nd PUC Political Science Chapter 8 Notes in Kannada
3.ಜೀನ್‌ಬೋಡಿನ್‌ರವರ ಕೃತಿ ‘ ದ ರಿಪಬ್ಲಿಕಾ ‘ ರಾಷ್ಟ್ರೀಯ ಶಕ್ತಿ ಎಂದರೇನು ?
ಜೀನ್ ಬೋಡಿನ್ ರವರ ಕೃತಿ ರೀಪಬ್ಲ್ಲಿಕಾ.
4.ರಾಷ್ಟ್ರೀಯ ಶಕ್ತಿ ಎಂದರೇನು ?
ರಾಜ್ಯದ ಒಟ್ಟು ಮೊತ್ತದ ಸಾಮರ್ಥ್ಯ ಮತ್ತು ಬಲವನ್ನುರಾಷ್ಟ್ರೀಯ ಶಕ್ತಿ ಎನ್ನುವರು .
5. ಶಕ್ತಿಬಣ ಎಂದರೇನು ?
ಶೀತಲ ಸಮರದೊಂದಿಗೆ ಪ್ರಪಂಚದಲ್ಲಿ ಕಮ್ಯುನಿಸ್ಟ್ ಮತ್ತು ಬಂಡವಾಳಶಾಹಿ ತತ್ವಗಳನ್ನಾಧರಿಸಿ ಹುಟ್ಟಿಕೊಂಡ ಗುಂಪುಗಳೇ ಶಕ್ತಿ ಬಣಗಳು ,
ಉದಾ ; U.S.A and U.S.S.R
6. ರಾಷ್ಟ್ರಾಧಿಪತ್ಯ ಎಂದರೇನು ?
ಅಂತಾರಾಷ್ಟ್ರೀಯ ಸಂಬಂಧದಲ್ಲಿ ಒಂದು ವ್ಯವಸ್ಥೆಯ ಶಕ್ತಿಪ್ರದರ್ಶನವನ್ನು ರಾಷ್ಟ್ರಾಧಿಪತ್ಯ ಎನ್ನುವರು .
7. ವೆಸ್ಟ್ ಫಾಲಿಯಾ ಒಪ್ಪಂದ ಯಾವಾಗ ನಡೆಯಿತು ?
ವೆಸ್ಟ್ ಫಾಲಿಯಾ ಒಪ್ಪಂದ ಕ್ರಿ.ಶ .1648 ರಲ್ಲಿ ನಡೆಯಿತು .
8. ರಾಷ್ಟ್ರಗಳ ಸಂಘ ಯಾವಾಗ ಅಸ್ತಿತ್ವಕ್ಕೆ ಬಂತು ?
ರಾಷ್ಟ್ರಗಳ ಸಂಘ 1920 ರಲ್ಲಿ ಅಸ್ತಿತ್ವಕ್ಕೆ ಬಂತು .
9.ರಾಷ್ಟ್ರಗಳ ಸಂಘ ಯಾವಾಗ ಕೊನೆಗೊಂಡಿತು ?
1939 ರಲ್ಲಿ 2 ನೇ ಮಹಾಯುದ್ಧ ಸ್ಫೋಟಗೊಂಡ ನಂತರ ರಾಷ್ಟ್ರಗಳ ಸಂಘ ಕೊನೆಗೊಂಡಿತು .
10. ವಿಶ್ವಸಂಸ್ಥೆ ಯಾವಾಗ ಅಸ್ತಿತ್ವಕ್ಕೆ ಬಂತು ?
1945 , ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂತು .
10. ವಿಶ್ವಸಂಸ್ಥೆಯ ಸನ್ನಿಧಿಗೆ ಸಹಿ ಮಾಡಿದ ಮೂಲ ಸದಸ್ಯ ರಾಷ್ಟ್ರಗಳು ಎಷ್ಟು ?
ವಿಶ್ವಸಂಸ್ಥೆಯ ಸನ್ನಿಧಿಗೆ ಸಹಿ ಮಾಡಿದ ಮೂಲ ಸದಸ್ಯ ರಾಷ್ಟ್ರಗಳು 51
2nd PUC Political Science Chapter 8 Notes in Kannada
11. ವಿಶ್ವಸಂಸ್ಥೆಯ ಮೂಲತತ್ವಗಳನ್ನು ಯಾವ ವಿಧಿ ತಿಳಿಸುತ್ತದೆ ?
ವಿಶ್ವಸಂಸ್ಥೆಯ ಮೂಲತತ್ವಗಳನ್ನು ಪ್ರಣಾಳಿಕೆಯ 2 ನೇ ವಿಧಿಯಲ್ಲಿ ತಿಳಿಸುತ್ತದೆ .
12.. ವಿಶ್ವಸಂಸ್ಥೆಯ ಯಾವುದಾದರೊಂದು ಮೂಲತತ್ವವನ್ನು ತಿಳಿಸಿ .
1 ) ಎಲ್ಲಾ ಸದಸ್ಯ ರಾಷ್ಟ್ರಗಳ ಸಾರ್ವಭೌಮ ಸಮಾನತೆ ತತ್ವದ ಮೇಲೆ ವಿಶ್ವಸಂಸ್ಥೆ ನಿಂತಿದೆ . ಇದು ಮೂಲತತ್ವಗಳ ಲ್ಲೊಂದಾಗಿದೆ .
14. ಪ್ರಸ್ತುತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು ?
ಪ್ರಸ್ತುತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಂಖ್ಯೆ -193 .
15. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಒಂದು ರಾಷ್ಟ್ರದಿಂದ ಎಷ್ಟು ಸದಸ್ಯರು ಭಾಗವಹಿಸುವರು ?
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಒಂದು ರಾಷ್ಟ್ರದಿಂದ 5 ಮಂದಿ ಸದಸ್ಯರು ಭಾಗವಹಿಸುವರು .
2nd PUC Political Science Chapter 8 Notes in Kannada
16 , ವಿಶ್ವಸಂಸ್ಥೆಯ ಶಕ್ತಿಯುತ ಅಂಗ ಯಾವುದು ?
ವಿಶ್ವಸಂಸ್ಥೆಯ ಶಕ್ತಿಯುತ ಅಂಗ ಭದ್ರತಾ ಮಂಡಲಿ ,
17. ಭದ್ರತಾ ಮಂಡಲಿಯ ಖಾಯಂ ಸದಸ್ಯರು ಎಷ್ಟು ?
ಭದ್ರತಾ ಮಂಡಲಿಯ ಖಾಯಂ ಸದಸ್ಯರು 5 ರಾಷ್ಟ್ರಗಳು .
18. ಅಂತಾರಾಷ್ಟ್ರೀಯ ನ್ಯಾಯಾಲಯ ಎಲ್ಲಿದೆ ?
ಅಂತಾರಾಷ್ಟ್ರೀಯ ನ್ಯಾಯಾಲಯ ಹೇಗ್‌ನಲ್ಲಿದೆ .
19. ವಿಶ್ವಸಂಸ್ಥೆಯ ಪ್ರಧಾನ ಕಛೇರಿ ಎಲ್ಲಿದೆ ?
ವಿಶ್ವಸಂಸ್ಥೆಯ ಪ್ರಧಾನ ಕಛೇರಿ ನ್ಯೂಯಾರ್ಕ್ ನಗರದಲ್ಲಿದೆ .
20. ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಎಷ್ಟು ನ್ಯಾಯಾಧೀಶರಿರುತ್ತಾರೆ ?
ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಒಟ್ಟು 13 ನ್ಯಾಯಾಧೀಶರಿರುತ್ತಾರೆ .
21. ವಿಶ್ವಸಂಸ್ಥೆಯ ಈಗಿನ ಪ್ರಧಾನ ಕಾವ್ಯದರ್ಶಿ ಹೆಸರಿಸಿ .
ವಿಶ್ವಸಂಸ್ಥೆಯ ಈಗಿನ ಪ್ರಧಾನ ಕಾವ್ಯದರ್ಶಿ ಬಾನ್ ಕಿ – ಮೂನ್ .
22. ರಾಷ್ಟ್ರಾಧಿಪತ್ಯ ಎಂದರೇನು ?
ಅಂತಾರಾಷ್ಟ್ರೀಯ ವ್ಯವಸ್ಥೆಗೆ ಅನುಗುಣವಾಗಿ ಅಧಿಕಾರ ಹಂಚಿಕೆಯಾಗಿರುವ ಸ್ಥಿತಿಗತಿಯನ್ನು ರಾಷ್ಟ್ರಾಧಿಪತ್ಯ ಎನ್ನುವರು .
23. ಏಕಪಕ್ಷೀಯ ರಾಷ್ಟ್ರಾಧಿಪತ್ಯ ಎಂದರೇನು ?
ಅಂತಾರಾಷ್ಟ್ರೀಯ ರಾಜಕೀಯ ವಿದ್ಯಮಾನಗಳಲ್ಲಿ ಒಂದೇ ರಾಷ್ಟ್ರ ತಮ್ಮ ಅಧಿಕಾರ ಸ್ಥಾನಮಾನಗಳನ್ನು ಹೊಂದಿದ್ದರೆ ಹಾಗೆಯೇ ತನ್ನ ಸಂಸ್ಕೃತಿ , ಆರ್ಥಿಕ ಸದೃಢತೆ ಮತ್ತು ಮಿಲಿಟರಿ ಪ್ರಭಾವವನ್ನು ಪ್ರದರ್ಶಿಸುವ ಸಾಮರ್ಥ್ಯ ವನ್ನು ಹೊಂದಿರುವುದನ್ನು ಏಕಪಕ್ಷೀಯ ರಾಷ್ಟ್ರಾಧಿಪತ್ಯ ಎನ್ನುವರು .
24. ದ್ವಿಪಕ್ಷೀಯ ರಾಷ್ಟ್ರಾಧಿಪತ್ಯ ಎಂದರೇನು ?
ಅಂತಾರಾಷ್ಟ್ರೀಯ ಮಟ್ಟದಲ್ಲಿ ಎರಡು ರಾಷ್ಟ್ರಗಳು ತಮ್ಮ ಬಲ ಪ್ರದರ್ಶನದಲ್ಲಿ ಪೈಪೋಟಿಯನ್ನು ಹೊಂದಿರುವರಾಜಕೀಯ ಸಾಮರ್ಥ್ಯಗಳ ಸ್ಥಿತಿಗತಿಗಳನ್ನು ದ್ವಿಪಕ್ಷೀಯ ರಾಷ್ಟ್ರಾಧಿಪತ್ಯ ಎನ್ನುವರು .
25. ಬಹುಪಕ್ಷೀಯ ರಾಷ್ಟ್ರಾಧಿಪತ್ಯ ಎಂದರೇನು ?
ಅಂತಾರಾಷ್ಟ್ರೀಯ ರಾಜಕೀಯ ವಿದ್ಯಮಾನಗಳಲ್ಲಿ ದೇಶಗಳು ತಮ್ಮ ಪ್ರಾಬಲ್ಯ ತೋರಿಸಲು ಪೈಪೋಟಿಯನ್ನು ಹೊಂದಿರುವ ರಾಜಕೀಯ ಸಾಮರ್ಥ್ಯಗಳ ಸ್ಥಿತಿಗತಿಗಳನ್ನು ಬಹುಪಕ್ಷೀಯ – ರಾಷ್ಟ್ರಾಧಿಪತ್ಯ ಎನ್ನುವರು .
26. ಸಂಯುಕ್ತ ರಾಷ್ಟ್ರ ಸಂಘ ಎಂದರೇನು ?
2 ನೇ ಜಾಗತಿಕ ಯುದ್ಧದ ನಂತರ ವಿಶ್ವದ ಪ್ರಬಲ ರಾಷ್ಟ್ರಗಳ ನಾಯಕರು ಯುದ್ಧವನ್ನು ತಡೆಗಟ್ಟಿ , ಶಾಂತಿ ಸ್ಥಾಪಿಸಲು ಜಾಗತಿಕ ಮಟ್ಟದಲ್ಲಿ ಸ್ಥಾಪನೆಗೊಂಡ ಸಂಸ್ಥೆಯನ್ನು ಅಂತರಾಷ್ಟ್ರೀಯ ಸಂಘ ಎನ್ನುವರು .
2nd PUC Political Science Chapter 8 Notes in Kannada
27. ಅಮ್ ಫೀಟೋನಿಕ್ ಸಂಘ ಎಂದು ಯಾವುದನ್ನು ಕರೆಯಲಾಗಿದೆ ?
ಗ್ರೀಕ್ ದೇಶದಲ್ಲಿ ಕ್ರಿ.ಶ .6 ನೇ ಶತಮಾನದಲ್ಲಿ ಯುದ್ಧಗಳನ್ನು ತಡೆಗಟ್ಟಲು ಮತ್ತು ರಾಜ್ಯಗಳ ನಡುವೆ ಉತ್ತಮ ಮೈತ್ರಿ ಪ್ರೋತ್ಸಾಹಿಸಲು ಸ್ಥಾಪಿಸಲ್ಪಟ್ಟ ಅಂತಾರಾಷ್ಟ್ರೀಯ ಸಂಘಟನೆಯನ್ನು ಅಮ್ ಫೀಟೂನಿಕ್ ( Ampeietyonic ) ಎನ್ನುವರು .
28. ಪ್ರಾದೇಶಿಕ ಸಂಘ ಎಂದರೇನು ?
ಒಂದು ಪ್ರದೇಶದಲ್ಲಿರುವ ಸಾರ್ವಭೌಮ ಸ್ವತಂತ್ರ ಹಗಳು ತಮ್ಮ ಸಾಮಾನ್ಯ ಆಸಕ್ತಿಗಳಿಂದ ಪ್ರಾದೇಶಿಕವಾಗಿ * ಯಿಂದ ಸ್ಥಾಪಿಸಿಕೊಂಡ ಸಂಘಟನೆಯನ್ನು ಪ್ರಾದೇಶಿಕ ಸಂಘ ಎನ್ನುವರು .
29. ಯಾವುದಾದರೊಂದು ಒಂದು ಪ್ರಾದೇಶಿಕ ಸಂಘವನ್ನು ಹೆಸರಿಸಿ .
ಸಾರ್ಕ್ ಒಂದು ಪ್ರಾದೇಶಿಕ ಸಂಘವಾಗಿದೆ .
30. ವಿಶ್ವಸಂಸ್ಥೆಯ ಯಾವುದಾದರೊಂದು ಅಂಗಸಂಸ್ಥೆ ಯನ್ನು ಹೆಸರಿಸಿ .
WHO – ವಿಶ್ವ ಆರೋಗ್ಯ ಸಂಘ , ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿದೆ .
31. ಆಸಿಯಾನ್ ಸಂಘಟನೆಯು ಯಾವಾಗ ಅಸ್ತಿತ್ವಕ್ಕೆ ಬಂತು ?
ಆಸಿಯಾನ್ ಸಂಘಟನೆಯು ಅಗಸ್ಟ್ 8 , 1967 ರಲ್ಲಿ ಬ್ಯಾಂಕಾಕ್‌ನಲ್ಲಿ ಅಸ್ತಿತ್ವಕ್ಕೆ ಬಂತು .
32. ಆಸಿಯಾನ್ ಸಂಘಟನೆಯಲ್ಲಿ ಎಷ್ಟು ಸದಸ್ಯರಿದ್ದಾರೆ ?
ಆಸಿಯಾನ್ ಸಂಘಟನೆಯಲ್ಲಿ 10 ಸದಸ್ಯ ರಾಷ್ಟ್ರಗಳಿವೆ .
33. ಭಾರತವು ಯಾವಾಗ ಆಸಿಯಾನ್ ಸಂಪೂರ್ಣವಾಗಿ ಅತಿಥಿ ರಾಷ್ಟ್ರವಾಯಿತು ?
ಭಾರತವು 1996 ರಲ್ಲಿ ರಾಷ್ಟ್ರವಾಯಿತು . ಆಸಿಯಾನ್‌ದ ಸಂಪೂರ್ಣ ಅತಿಥಿ ರಾಷ್ಟ್ರವಾಯಿತು.
34.ಭಾರತ ಮತ್ತು ಆಸಿಯಾನ್ ನಡುವಿನ ಪ್ರಥಮ ಸಮ್ಮೇಳನ ಯಾವಾಗ ನಡೆಯಿತು?
ಭಾರತ ಮತ್ತು ಆಸಿಯಾನ್ ನಡುವಿನ ಪ್ರಥಮ ಸಮ್ಮೇಳನ 2002 ರಲ್ಲಿ ನಡೆಯಿತು .
35. ಸಾರ್ಕ್ ಯಾವಾಗ ಅಸ್ತಿತ್ವಕ್ಕೆ ಬಂದಿತು ?
ಸಾರ್ಕ್ 1985 ರಲ್ಲಿ ಅಸ್ತಿತ್ವಕ್ಕೆ ಬಂದಿತು .
36. ಸಾರ್ಕ್‌ನ ಪಿತಾಮಹ ಯಾರು ?
ಸಾರ್ಕ್‌ನ ಪಿತಾಮಹ ಬಾಂಗ್ಲಾದೇಶದ ಅಧ್ಯಕ್ಷ ಜಿಯಾ ಉರ್ – ರೆಹಮಾನ್
37. ಸಾರ್ಕ್‌ನ ಕೇಂದ್ರ ಕಛೇರಿ ಎಲ್ಲಿದೆ ?
ಸಾರ್ಕ್‌ನ ಕೇಂದ್ರ ಕಛೇರಿ ನೇಪಾಳದ ರಾಜಧಾನಿ ಕಂಡುವಿನಲ್ಲಿದೆ .
38. ಸಾರ್ಕ್‌ನ ಸದಸ್ಯ ರಾಷ್ಟ್ರಗಳು ಎಷ್ಟು ?
ಸಾರ್ಕ್‌ನ ಸದಸ್ಯ ರಾಷ್ಟ್ರಗಳು 8 .
2nd PUC Political Science Chapter 8 Notes in Kannada
39. ಅಫ್ಘಾನಿಸ್ತಾನ ಯಾವಾಗ ಸಾರ್ಕ್‌ನ ಸದಸ್ಯ ರಾಷ್ಟ್ರವಾಯಿತು ?
ಸಾರ್ಕ್‌ನ ಸದಸ್ಯ ಅಫ್ಘಾನಿಸ್ತಾನ 2010 ರಲ್ಲಿ ರಾಷ್ಟ್ರವಾಯಿತು .
40. ಸಾರ್ಕ್‌ನ ಪ್ರಥಮ ಸಮ್ಮೇಳನ ಯಾವಾಗ ನಡೆಯಿತು ?
ಸಾರ್ಕ್‌ನ ಪ್ರಥಮ ಸಮ್ಮೇಳನ ಡಿಸೆಂಬರ್ 7 ಮತ್ತು 8 ರಂದು 1985 ರಲ್ಲಿ ನಡೆಯಿತು .
41 , ಯಾವಾಗ ಸಾರ್ಕ್ ಚಾರ್ಟರ್ ದಿನಾಚರಣೆ ಆಚರಿಸಲಾಗುತ್ತದೆ ?
ಡಿಸೆಂಬರ್ 8 ನ್ನು ಸಾರ್ಕ್ ಚಾರ್ಟರ್ ದಿನವನ್ನಾಗಿ ಆಚರಿಸಲಾಗುತ್ತದೆ .
42. SAARC ವಿಸ್ತರಿಸಿ .
South Aisan Association For Regional Co operation . ದಕ್ಷಿಣ ಏಷ್ಯ ಪ್ರಾದೇಶಿಕ ಸಹಕಾರ ಸಂಘಟನೆ .
43. SAFTA ವಿಸ್ತರಿಸಿ ಬರೆಯಿರಿ .
South Asian Freen Trade Area .
44. SAEU ವಿಸ್ತರಿಸಿ .
South Asian Economic Union .
45 ಬ್ರಿಕ್ಸ್‌ನ ಸದಸ್ಯ ರಾಷ್ಟ್ರಗಳು ಎಷ್ಟು ?
ಬ್ರಿಕ್ಸ್‌ನ ಸದಸ್ಯ ರಾಷ್ಟ್ರಗಳು 5 .
46.ಯಾವಾಗ ದಕ್ಷಿಣ ಆಫ್ರಿಕಾ ಬ್ರಿಕ್ಸ್ ಸದಸ್ಯ ರಾಷ್ಟ್ರವಾಯಿತು ?
ಡಿಸೆಂಬರ್ 24 , 2010 ರಲ್ಲಿ ಬ್ರಿಕ್ಸ್‌ನ ಸದಸ್ಯ ರಾಷ್ಟ್ರವಾಗಿ ದಕ್ಷಿಣ ಆಫ್ರಿಕಾ ಸೇರ್ಪಡೆಯಾಯಿತು .
ಎರಡು ಅಂಕದ ಪ್ರಶ್ನೆಗಳು
ಅಂತಾರಾಷ್ಟ್ರೀಯ ಸಂಬಂಧಗಳ ಒಂದು ವ್ಯಾಖ್ಯೆ ನೀಡಿ .
ಓಲಾ ಜೊಸಫ್‌ರವರ ಪ್ರಕಾರ “ ಅಂತಾರಾಷ್ಟ್ರೀಯ ಸಂಬಂಧ ಎಂಬುದು ರಾಷ್ಟ್ರಗಳ ನಡುವೆ ಅಥವಾ ವಿವಿಧ ಸಂಘಟನೆಗಳ ಸದಸ್ಯರ ನಡುವೆ ಉಂಟಾಗುವ ಪ್ರತಿಕ್ರಿಯೆಗಳು ಅಂತಾರಾಷ್ಟ್ರೀಯ ವ್ಯವಸ್ಥೆಯೊಳಗೆ ನಡೆಯುವ ಅಧ್ಯಯನವಾಗಿರುತ್ತದೆ ” .
2. ಅಂತಾರಾಷ್ಟ್ರೀಯ ಸಂಬಂಧಗಳ ಕುರಿತು ಪಾಮರ್ ಮತ್ತು ಪರ್ಕಿನ್‌ರವರ ವ್ಯಾಖ್ಯಾನ ತಿಳಿಸಿ .
ಫಾಮರ್ ಮತ್ತು ಪರ್ಕಿನ್‌ರವರ ಪ್ರಕಾರ ಅಂತರಾಷ್ಟ್ರೀಯ ಸಂಬಂಧಗಳ ಅಧ್ಯಯನ ಎಂಬುದು ಸಮಸ್ಯೆಯನ್ನು ಸುಧಾರಿಸಬಲ್ಲ ಒಂದು ವಿಜ್ಞಾನವಲ್ಲ , ಇದೊಂದು ಉತ್ತಮವಾದಂತಹ ಸಮಸ್ಯೆಗಳ ಪರಿಹಾರ ಹುಡುಕಬಲ್ಲ ಉದ್ದೇಶ ಮತ್ತು ಕ್ರಮಬದ್ಧ ಸಿದ್ಧಾಂತವಾಗಿದೆ ” .
3. ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಶಕ್ತಿ ಪ್ರಧಾನವಾದದ್ದು ಎಂದು ತಿಳಿಸಿದವರು ಯಾರು ?
ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಶಕ್ತಿ ಪ್ರಧಾನ ವಾದದ್ದು ಎಂದು ಪ್ರೊಹೆನ್ಸ್‌ಮಾರ್ಗೆಂಥೋರವರು ತಿಳಿಸಿದ್ದಾರೆ .
2nd PUC Political Science Chapter 8 Notes in Kannada
4.ರಾಷ್ಟ್ರೀಯ ಶಕ್ತಿ ಎಂದರೇನು ?
ರಾಷ್ಟ್ರೀಯ ಶಕ್ತಿ ಎಂದರೆ ರಾಜ್ಯದ ಒಟ್ಟು ಮೊತ್ತದ ಸಾಮರ್ಥ್ಯ ಮತ್ತು ಬಲ ಎಂಬುದಾಗಿದೆ . ಇವುಗಳನ್ನು ರಾಜ್ಯದ ಸ್ವರೂಪ ಮತ್ತು ಸಂಪನ್ಮೂಲನಕ್ಕೆ ಅನುಗುಣವಾಗಿ ಸೇರಿಸಲಾಗುತ್ತದೆ .
5. ರಾಷ್ಟ್ರೀಯ ಹಿತಾಸಕ್ತಿ ಎಂದರೇನು ?
ಒಂದು ರಾಷ್ಟ್ರವು ಮತ್ತೊಂದು ರಾಷ್ಟ್ರದ ಮೇಲಿನ ಕಾರಾಚರಣೆಗಳನ್ನು ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ತೆಗೆದುಕೊಳ್ಳುವ ನಿರ್ಧಾರಗಳನ್ನು ರಾಷ್ಟ್ರೀಯ ಹಿತಾಸಕ್ತಿ ಎನ್ನಲಾಗುತ್ತದೆ .
6 , ಶಕ್ತಿ ಬಣಗಳು ಎಂದರೇನು ? ಉದಾಹರಣೆ ಕೊಡಿ .
ಶೀತಲಸಮರದೊಂದಿಗೆ ಎರಡು ಶಕ್ತಿಬಣಗಳು ಹುಟ್ಟಿಕೊಂಡವು . ಅಮೆರಿಕಾ ಮತ್ತು ರಷ್ಯಾಗಳು ಬಂಡವಾಳಶಾಹಿ ಮತ್ತು ಕಮ್ಯುನಿಸಂ ಸಿದ್ಧಾಂತಗಳನ್ನು ಇತರ ರಾಷ್ಟ್ರಗಳ ಮೇಲೆ ಹೇರಲು ರಚಿಸಿಕೊಂಡ ಸೆಂಟೋ , ಸಿಟೋ ಮತ್ತು ಮಾಸ್ಕೊ ಸೇನಾಪಡೆಗಳೇ ಶಕ್ತಿಬಣಗಳು .
7. ಯಾವಾಗ ವೆಸ್ಟ್‌ಫಾಲಿಯಾ ಮತ್ತು ಯುಟ್ರೆಚ್ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಲಾಯಿತು ?
1648 ರಲ್ಲಿ ವೆಸ್ಟ್ಫಾಲಿಯಾ ಮತ್ತು 1713 ರಲ್ಲಿ ಯುಟ್ರೆಚ್ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಲಾಯಿತು .
8.ರಾಷ್ಟ್ರಗಳ ಸಂಘದ ಎರಡು ಉದ್ದೇಶಗಳನ್ನು ತಿಳಿಸಿ
- ಅಂತಾರಾಷ್ಟ್ರೀಯ ಸಹಕಾರ ಸಮಸ್ಯೆ ಮತ್ತು ಬಿಕ್ಕಟ್ಟುಗಳಿಗೆ ಪರಿಹಾರ ಒದಗಿಸುವುದು .
- ಭವಿಷ್ಯದ ಯುದ್ಧಗಳನ್ನು ತಡೆಗಟ್ಟುವುದು .
- ಆರೋಗ್ಯ ಸುಧಾರಣೆ , ಶಿಕ್ಷಣ ಮತ್ತು ಆರ್ಥಿಕ ಬೆಳವಣಿಗೆ ಸಾಧಿಸುವುದು .
9.ವಿಶ್ವಸಂಸ್ಥೆಯ ಪ್ರಣಾಳಿಕೆ ಕುರಿತು ಬರೆಯಿರಿ .
ವಿಶ್ವಸಂಸ್ಥೆಯ ಪ್ರಣಾಳಿಕೆಯಲ್ಲಿ 51 ರಾಷ್ಟ್ರಗಳು ಸಹಿ ಮಾಡಿದ್ದವು . ಈ ಪ್ರಣಾಳಿಕೆಯಲ್ಲಿ 19 ಭಾಗಗಳು , 111 ವಿಧಿಗಳನ್ನು ಒಳಗೊಂಡಿದೆ . ಪ್ರಣಾಳಿಕೆಯ 1 ನೇ ವಿಧಿಯಲ್ಲಿ ಉದ್ದೇಶಗಳು , 2 ನೇ ವಿಧಿಯಲ್ಲಿ ಮೂಲತತ್ವಗಳ ಕುರಿತು ತಿಳಿಸಲಾಗಿದೆ .
10. ವಿಶ್ವಸಂಸ್ಥೆಯ ಎರಡು ಉದ್ದೇಶಗಳನ್ನು ತಿಳಿಸಿ .
- ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಸ್ಥಾಪಿಸುವುದು , ಯುದ್ಧ ಹಾಗೂ ಅವರ ಭೀತಿಯಿಂದ ಜನರನ್ನು ಮುಕ್ತ ಗೊಳಿಸುವುದು
- ರಾಷ್ಟ್ರಗಳ ನಡುವೆ ಸ್ನೇಹ ಸಂಬಂಧಗಳನ್ನು ಹೆಚ್ಚಿಸಿ ಆಕ್ರಮಣಕಾರಿ ರಾಷ್ಟ್ರದ ವಿರುದ್ಧ ಸಾಮೂಹಿಕ ಕ್ರಮ ತೆಗೆದುಕೊಳ್ಳುವುದು
2nd PUC Political Science Chapter 8 Notes in Kannada
11. ವಿಶ್ವಸಂಸ್ಥೆಯ ಎರಡು ತತ್ವಗಳನ್ನು ತಿಳಿಸಿ .
- ಎಲ್ಲಾ ಸದಸ್ಯ ರಾಷ್ಟ್ರಗಳ ಸಾರ್ವಭೌಮ ಸಮಾನತೆಯ ತತ್ವದ ಮೇಲೆ ನಿಂತಿದೆ .
- ಅಂತರರಾಷ್ಟ್ರೀಯ ಸಮಸ್ಯೆಗಳನ್ನು ಸದಸ್ಯ ರಾಷ್ಟ್ರ ಗಳು ಶಾಂತಿಯುತ ಮಾರ್ಗಗಳಿಂದ ಬಗೆಹರಿಸಿಕೊಳ್ಳುವುದು .
12. ವಿಶ್ವಸಂಸ್ಥೆಯ ಎರಡು ಅಂಗಗಳನ್ನು ಹೆಸರಿಸಿ .
- ಸಾಮಾನ್ಯ ಸಭೆ
- ಭದ್ರತಾ ಮಂಡಳಿ
13 . ಸಾಮಾನ್ಯ ಸಭೆಯ ಎರಡು ಕಾವ್ಯಗಳನ್ನು ತಿಳಿಸಿ .
1.ಸಾಮಾನ್ಯ ಸಭೆಯು ಚರ್ಚಿಸುವ , ಮೇಲ್ವಿಚಾರಣೆ ಮಾಡುವ ಹಣಕಾಸಿನ ಚುನಾವಣೆಯ ಮತ್ತು ಸಂವಿಧಾನಿಕ ಕಾರನಿರ್ವಹಿಸುತ್ತದೆ .
2.ಸಭೆಯಲ್ಲಿ ಚರ್ಚಿಸಿದ ಹಾಗೂ ಭದ್ರತಾ ಮಂಡಲಿ ಶಿಫಾರಸ್ಸು ಮಾಡಿದ ಮಸೂದೆಗಳನ್ನು ಅಂಗೀಕರಿಸುವ , ಪ್ರಶೋತ್ತರಗಳಿಗೆ ಅವಕಾಶ ನೀಡುವ ಮತ್ತು ಆದೇಶಿಸುವ ಶಾಸನೀಯ ಕಾರ್ಯ ನಿರ್ವಹಿಸುತ್ತದೆ .
14. ಭದ್ರತಾ ಮಂಡಳಿಯ ಸದಸ್ಯತ್ವ ಕುರಿತು ಬರೆಯಿರಿ ,
ಭದ್ರತಾ ಮಂಡಳಿಯಲ್ಲಿ ಒಟ್ಟು 15 ಸದಸ್ಯ ರಾಷ್ಟ್ರಗಳು ಇದ್ದು , ಇದರಲ್ಲಿ ಖಾಯಂ ರಾಷ್ಟ್ರಗಳು 5 , ಖಾಯಂ ಅಲ್ಲದ 10 ಸದಸ್ಯ ರಾಷ್ಟ್ರಗಳಿರುತ್ತವೆ . 10 ಖಾಯಂ ಅಲ್ಲದ ರಾಷ್ಟ್ರಗಳನ್ನು ಸಾಮಾನ್ಯ ಸಭೆಯು 2 ವರ್ಷಗಳ ಅವಧಿಗೆ ಆಯ್ಕೆ ಮಾಡುತ್ತದೆ .
15 , ಭದ್ರತಾ ಮಂಡಳಿಯ ಎರಡು ಖಾಯಂ ಸದಸ್ಯರನ್ನು ಹೆಸರಿಸಿ .
ಭದ್ರತಾ ಮಂಡಳಿಯ ಎರಡು ಖಾಯಂ ಸದಸ್ಯ ರಾಷ್ಟ್ರಗಳು ಅಮೇರಿಕಾ , ಚೀನಾ .
2nd PUC Political Science Chapter 8 Notes in Kannada
16. ವಿಶ್ವಸಂಸ್ಥೆಯ ಈಗಿನ ಪ್ರಧಾನ ಕಾವ್ಯದರ್ಶಿ ಯಾರು ?
ವಿಶ್ವಸಂಸ್ಥೆಯ ಈಗಿನ ಪ್ರಧಾನ ಕಾವ್ಯದರ್ಶಿ ಬಾನ್ – ಕಿ – ಮೂನ್ .
17. ವಿಶ್ವಸಂಸ್ಥೆಯ ಪ್ರಧಾನ ಕಾವ್ಯದರ್ಶಿ ಯಾರು ನೇಮಿಸುತ್ತಾರೆ ?
ವಿಶ್ವಸಂಸ್ಥೆಯ ಪ್ರಧಾನ ಕಾವ್ಯದರ್ಶಿಯನ್ನು ಸಾಮಾನ್ಯ ಸಭೆಯು ನೇಮಿಸುತ್ತದೆ .
18. ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಸದಸ್ಯರು ಎಷ್ಟು ?
ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯು 54 ಸದಸ್ಯರನ್ನು ಹೊಂದಿದೆ .
19. ಅಂತಾರಾಷ್ಟ್ರೀಯ ಸಂಘ ಕುರಿತು ವ್ಯಾಖ್ಯಾನ ನೀಡಿ .
ಪಟರ್‌ರವರ ಪ್ರಕಾರ ಅಂತರರಾಷ್ಟ್ರೀಯ ಸಂಘಗಳೆಂದರೆ ನೀತಿ ನಿಯಮಗಳ ಕ್ರಮಬದ್ಧತೆ ಮತ್ತು ರಾಷ್ಟ್ರಗಳ ಒಟ್ಟಾರೆ ಒಗ್ಗೂಡುವಿಕೆಯನ್ನು ಪ್ರದರ್ಶಿಸುವ ಅಂಗವಾಗಿರುತ್ತದೆ ” .
20. ಪ್ರಾದೇಶಿಕ ಸಂಘ ಕುರಿತು ವ್ಯಾಖ್ಯಾನ ನೀಡಿ .
ನಾರ್ಮಲ್ ಹಿಲ್‌ರವರ ಪ್ರಕಾರ – “ ಒಂದು ಪ್ರದೇಶದಲ್ಲಿರುವ ಸಾರ್ವಭೌಮ ಸ್ವತಂತ್ರ ರಾಷ್ಟ್ರಗಳು ತಮ್ಮ ಮಾನ್ಯ ಆಸಕ್ತಿಗಳಿಂದ ಪ್ರಾದೇಶಿಕವಾಗಿ ಯಾರದೋ ಬಲವಂತವಿಲ್ಲದೆ ಸ್ವ ಇಚ್ಛೆಯಿಂದ ಸಂಘಟಿತರಾಗುವುದು ” .
21. ಭಾರತ ಸಂವಿಧಾನದ ಎಷ್ಟನೇ ವಿಧಿಯಲ್ಲಿ ಅಂತಾ ರಾಷ್ಟ್ರೀಯ ಶಾಂತಿ ಮತ್ತು ಒಪ್ಪಂದ ಕುರಿತು ತಿಳಿಸಿದೆ ?
ಭಾರತದ ಸಂವಿಧಾನದ ರಾಜ್ಯ ನೀತಿ ನಿರ್ದೇಶಕ ತತ್ವಗಳಲ್ಲಿನ 51 ನೇ ವಿಧಿಯು ಅಂತರಾಷ್ಟ್ರೀಯ ಶಾಂತಿ ಮತ್ತು ಒಪ್ಪಂದ ಕುರಿತು ತಿಳಿಸಿದೆ .
22. ರಾಷ್ಟ್ರಗಳ ಸಂಘ ಯಾವಾಗ ಜಾರಿಗೆ ಬಂದಿತು ? ಯಾವಾಗ ಸದಸ್ಯ ರಾಷ್ಟ್ರಗಳು ಸಹಿ ಮಾಡಿದವು ?
ರಾಷ್ಟ್ರಗಳ ಸಂಘ 10 ನೇ ಜನವರಿ 1920 ರಲ್ಲಿ ಜಾರಿಗೆ ಬಂದಿತು . 1918-19ರಲ್ಲಿ ಸದಸ್ಯ ರಾಷ್ಟ್ರಗಳು 8 ಸಹಿ ಮಾಡಿದ್ದವು .
23. ವಿಶ್ವಸಂಸ್ಥೆಯು ಯಾವಾಗ ಜಾರಿಗೆ ಬಂದಿತು ಮತ್ತು ಯಾವಾಗ ಸದಸ್ಯ ರಾಷ್ಟ್ರಗಳು ಸಹಿ ಮಾಡಿದವು ?
ವಿಶ್ವಸಂಸ್ಥೆಯು ಅಕ್ಟೋಬರ್ 24 , 1945 ಜಾರಿಗೆ ಬಂದಿತು . ಜನವರಿ 1 , 1942 ರಲ್ಲಿ ಸದಸ್ಯ ರಾಷ್ಟ್ರಗಳು ಸಹಿ stabens ಮಾಡಿದವು .
2nd PUC Political Science Chapter 8 Notes in Kannada
24. ಜೋಸೆಫ್ ನೇ ರವರ ಪ್ರಾದೇಶಿಕ ಸಂಘಟನೆ ಕುರಿತು ವ್ಯಾಖ್ಯಾನ ನೀಡಿ .
ಜೋಸೆಫ್ ನೇ ರವರ ಪ್ರಕಾರ “ ಪ್ರಾದೇಶಿಕ ಸಂಘಟನೆ ಎಂದರೆ ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ರಾಜ್ಯ ರಾಜ್ಯಗಳ ನಡುವೆ ವಿವಿಧ ಗುಂಪುಗಳಾಗಿ ರಚಿಸಿಕೊಳ್ಳುವ ಸಂಘಟನೆ ಗಳಾಗಿರುತ್ತವೆ .
25. ವಿಶ್ವಸಂಸ್ಥೆಯ ಎರಡು ಅಂಗಸಂಸ್ಥೆಗಳನ್ನು ಹೆಸರಿಸಿ .
- I LO – ಅಂತಾರಾಷ್ಟ್ರೀಯ ಕಾರ್ಮಿಕ ಸಂಘ
- FAO – ಆಹಾರ ಮತ್ತು ಕೃಷಿ ಸಂಘ
26. ಯಾವುದಾದರೂ ಎರಡು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಕಾರಾಚರಣೆ ಹೆಸರಿಸಿ .
ಕೊರಿಯಾ ( 1950-54 ) ಅಫ್ಘಾನಿಸ್ತಾನ ( 1993 ) ದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯು ಕಾರಾಚರಣೆ ನಡೆಸಿದೆ .
27 , ಭಾರತ ಮತ್ತು ಅಸಿಯಾನ್ ಸಹಭಾಗಿತ್ವ ಕುರಿತು ಬರೆಯಿರಿ .
ಆಸಿಯಾನ್‌ದಲ್ಲಿ 10 ಅತಿಥಿ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದ್ದು , 1992 ರಲ್ಲಿ ಭಾರತವು ಆಸಿಯಾನ್ ಮಾತುಕತೆ ಸಹಭಾಗಿತ್ವದಲ್ಲಿ ಪಾತ್ರವಹಿಸಿತು . ನಂತರ ಪೂರ್ತಿ ಸಹಭಾಗಿತ್ವವನ್ನು 1996 ರಲ್ಲಿ ಪಡೆಯಿತು . 2002 ರಿಂದ ಆಸಿಯಾನ್ – ಭಾರತವು ವಾರ್ಷಿಕ ಶೃಂಗಸಭೆಯನ್ನು ನಡೆಸುತ್ತಾ ಬಂದಿದೆ .
28. ಭಾರತ ಮತ್ತು ಅಸಿಯಾನ್ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಬರೆಯಿರಿ .
ಭಾರತ ಮತ್ತು ಅಸಿಯಾನ್ ಮುಕ್ತ ವ್ಯಾಪಾರ ಒಪ್ಪಂದ AIFTA ಎಂಬುದು ನಡೆದಿದ್ದು ಈ ಒಪ್ಪಂದದ ಪ್ರಕಾರ ಶೇ .90 ರಷ್ಟು ಉತ್ಪಾದನೆಗಳನ್ನು ಸುಂಕ ಮುಕ್ತವಾಗಿ ವ್ಯಾಪಾರ ಮಾಡಬಹುದಾಗಿದೆ . ಇವುಗಳಲ್ಲಿ ಕಾಫಿ , ಬ್ಲಾಕ್ ಟೀ , ಪೆಪ್ಪರ್ ಸುಮಾರು 4,000 ಉತ್ಪಾದನೆ ವಸ್ತುಗಳಿಗೆ ಶುಲ್ಕ ವಿನಾಯಿತಿ ನೀಡಲು 2016 ರವರೆಗೆ ಸಮಯ ನಿಗದಿಗೊಳಿಸಲಾಗಿದೆ .
29.ಸಾರ್ಕನ ಎರಡು ಸದಸ್ಯರುಗಳನ್ನು ಹೆಸರಿಸಿ .
1 ) ಭಾರತ
2 ) ಭೂತಾನ್
2nd PUC Political Science Chapter 8 Notes in Kannada
30. ಭಾರತದಲ್ಲಿ ನಡೆದ ಸಾರ್ಕ್ ಶೃಂಗ ಸಮ್ಮೇಳನಗಳನ್ನು ಹೆಸರಿಸಿ .
- ಭಾರತದಲ್ಲಿ ನಡೆದ ಸಾರ್ಕ್ ಶೃಂಗ ಸಮ್ಮೇಳನಗಳು : ಬೆಂಗಳೂರಿನಲ್ಲಿ ಎರಡನೇ ಸಾರ್ಕ್ ಸಮ್ಮೇಳನ 1986 ರಲ್ಲಿ ನಡೆಯಿತು .
- ನವದೆಹಲಿಯಲ್ಲಿ 8 ನೇ ಸಾರ್ಕ್ ಸಮ್ಮೇಳನ 1995 ರಲ್ಲಿ ನಡೆಯಿತು .
31. ಸಾರ್ಕ್ ಯಾವಾಗ ಸ್ಥಾಪನೆಯಾಯಿತು ಮತ್ತು ಅದರ ಕೇಂದ್ರ ಕಛೇರಿ ಎಲ್ಲಿದೆ ?
ಸಾರ್ಕ್ 1985 ರಲ್ಲಿ ಸ್ಥಾಪನೆಯಾಯಿತು ಮತ್ತು ಅದರ ಕೇಂದ್ರ ಕಛೇರಿ ನೇಪಾಳದ ರಾಜಧಾನಿ ಕಠಂಡುವಿನಲ್ಲಿದೆ .
32. ಸಾರ್ಕ್‌ನ ಎರಡು ಅಪೆಕ್ಸ್ ಸಂಸ್ಥೆಗಳನ್ನು ಹೆಸರಿಸಿ .
- SARRALAW ಎಂಬ ಸಾರ್ಕ್ ಸದಸ್ಯ ರಾಷ್ಟ್ರಗಳ ಕಾನೂನು ಪಂಡಿತರ ಸಮುದಾಯದ ವ್ಯಕ್ತಿಗಳ ಸಂಘ ,
- SCCI – ಸಾರ್ಕ್‌ನ ವಾಣಿಜ್ಯ ಮತ್ತು ಕೈಗಾರಿಕೆ .
33. ಭಾರತದಲ್ಲಿರುವ ಎರಡು ಸಾರ್ಕ್ ಪ್ರಾದೇಶಿಕ ಕೇಂದ್ರ ಗಳನ್ನು ಹೆಸರಿಸಿ .
- ಸಾರ್ಕ್ ದಾಖಲೆಯ ಕೇಂದ್ರ ( ಎಸ್‌ಡಿಸಿ ) ನವದೆಹಲಿ
- ಸಾರ್ಕ್ ಅಭಿವೃದ್ಧಿ ನಿಧಿ ( ಎಸ್‌ಡಿಎಫ್ )
2nd PUC Political Science Chapter 8 Notes in Kannada
34. ಬ್ರಿಕ್ಸ್‌ನ ಎರಡು ದೇಶಗಳನ್ನು ಹೆಸರಿಸಿ .
1 ) ಭಾರತ 2 ) ರಷ್ಯಾ
35. ಬ್ರಿಕ್ಸ್‌ನ ಪ್ರಥಮ ಸಮ್ಮೇಳನ ಯಾವಾಗ ನಡೆಯಿತು ?
ಬ್ರಿಕ್ಸ್‌ನ ಪ್ರಥಮ ಸಮ್ಮೇಳನ ಜುಲೈ 17 , 2006 ರಂದು ನಡೆಯಿತು .
ದ್ವಿತೀಯ ಪಿ ಯು ಸಿ ರಾಜ್ಯಶಾಸ್ತ್ರ ನೋಟ್ಸ್
ಅಧ್ಯಾಯ :- 02- ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ
ಅಧ್ಯಾಯ :- 03- ಭಾರತದಲ್ಲಿ ಆಡಳಿತ ಯಂತ್ರ
ಅಧ್ಯಾಯ :- 04- ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು notes
ಅಧ್ಯಾಯ :- 05 –ರಾಷ್ಟ್ರನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು
ಅಧ್ಯಾಯ :- 06 – ಭಾರತದ ರಾಜಕೀಯ ನೂತನ ಪ್ರವೃತ್ತಿಗಳು
ಅಧ್ಯಾಯ :- 07 –ಸಮಕಾಲೀನ ರಾಜಕೀಯ ವಿದ್ಯಮಾನಗಳು
Super information
tq