ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-1 ಪೀಠಿಕೆ | 2nd Puc History Notes Chapter 1

ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-1 ಪೀಠಿಕೆ | 2nd Puc History Notes Chapter 1

2nd puc history notes chapter 1, ದ್ವಿತೀಯ ಪಿ.ಯು.ಸಿ ಇತಿಹಾಸ, 2nd puc history chapter 1 question answer in kannada, ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ, 2nd puc history 1st chapter notes, 2nd puc history notes chapter 1 kannada, 2nd puc history notes chapter 1 in kannada, 2nd puc history chapter 1 notes

2nd Puc History Notes Chapter 1

ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-1 ರ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೆಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದುದಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದೆ.

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram
ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-1 ಪೀಠಿಕೆ | 2nd Puc History Notes Chapter 1
ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-1 ಪೀಠಿಕೆ | 2nd Puc History Notes Chapter 1

ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ.

ಬುದ್ಧ ಚರಿತವನ್ನು ಬರೆದವರು ಯಾರು
ಅಶ್ವಘೋಷ

ಪ್ಲಿನಿಯ ಪ್ರಸಿದ್ಧ ಗ್ರಂಥ ಯಾವುದು?
ನ್ಯಾಚುರಲ್ ಹಿಸ್ಟೋರಿಯಾ

ಇಂಡಿಯಾ ‘ ಎ೦ಬ ಪದವು ಯಾವ ಭಾಷೆಯಿಂದ ಬಂದಿದೆ?

ಪರ್ಷಿಯನ್ ಭಾಷೆಯಿಂದ ಬಂದಿದೆ .

ಪ್ರಾಚೀನ ಕರ್ನಾಟಕದ ಮೇರೆ ಉಲ್ಲೇಖಿಸುವ ಗ್ರಂಥವನ್ನು ಹೆಸರಿಸಿ .
ಕವಿರಾಜ ಮಾರ್ಗ

‘ನಾಣ್ಯಶಾಸ್ತ್ರ’ ಎಂದರೇನು?
ನಾಣ್ಯಗಳನ್ನು ವೈಜ್ಞಾನಿಕವಾಗಿ ಮಾಡುವುದಕ್ಕೆ ನಾಣ್ಯಶಾಸ್ತ್ರ ಎಂದು ಕರೆಯುವರು.

ಉತ್ಪನನ ಎಂದರೇನು?
ಆಧಾರಗಳನ್ನು ಹೆಕ್ಕಿ ತೆಗೆಯಲು ಕೈಗೊಳ್ಳುವ ವೈಜ್ಞಾನಿಕ ಭೂ-ಅಗೆತವನ್ನು ಉತ್ಪನನ ಎನ್ನುವರು.

ಐಹೋಳೆ ಶಾಸನ ಯಾರ ದಿಗ್ವಿಜಯಗಳನ್ನು ವಿವರಿಸುತ್ತದೆ?
ಇಮ್ಮಡಿ ಪುಲಿಕೇಶಿ

ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-1 ಪೀಠಿಕೆ | 2nd Puc History Notes Chapter 1
ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-1 ಪೀಠಿಕೆ | 2nd Puc History Notes Chapter 1

ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಎರಡು ಪದ ಅಥವಾ ವಾಕ್ಯಗಳಲ್ಲಿ ಉತ್ತರಿಸಿ :

ಆರ್ಯಭಟನ ಕೃತಿಗಳನ್ನು ಹೆಸರಿಸಿ .
ಸೂರ್ಯಸಿದ್ಧಾಂತ ಮತ್ತು ರೋಮಕ ಸಿದ್ಧಾಂತ .

ಭಾರತಕ್ಕೆ ಭೇಟಿ ನೀಡಿದ ಯಾರಾದರೂ ಇಬ್ಬರು ಚೀನಾ ಯಾತ್ರಿಕರನ್ನು ಹೆಸರಿಸಿ .
ಹೂಯಾನ್‌ತ್ಸಾಂಗ್ ಮತ್ತು ಫಾಹಿಯಾನ್ .

ವಿಜಯನಗರಕ್ಕೆ ಭೇಟಿ ನೀಡಿದ ಯಾರಾದರೂ ಇಬ್ಬರು ವಿದೇಶಿಯರನ್ನು ಹೆಸರಿಸಿ .
ಇಟಲಿಯ ನಿಕಲೋಕಾಂಟಿ ಮತ್ತು ಪರ್ಷಿಯಾದ ಅಬ್ದುಲ್ ರಜಾಕ್ .

ಭಾರತವನ್ನು ಪಶ್ಚಿಮದೊಂದಿಗೆ ಸಂಪರ್ಕಿಸುವ ಯಾವುದಾದರೂ ಎರಡು ಕಣಿವೆಗಳನ್ನು ತಿಳಿಸಿ .
ಖೈಬರ್ ಮತ್ತು ಬೋಲಾನ್ ಕಣಿವೆ .

ವಿಷ್ಣುಪುರಾಣದ ಪ್ರಕಾರ ಭಾರತದ ವ್ಯಾಪ್ತಿ ಏನು ?
ಸಾಗರದಿಂದ ಉತ್ತರಕ್ಕೆ ಮತ್ತು ಹಿಮಾಲಯದಿಂದ ದಕ್ಷಿಣಕ್ಕೆ ಇರುವ ಪ್ರದೇಶವೇ ಭಾರತದ ವ್ಯಾಪ್ತಿ .

ಭಾರತದ ಯಾವುದಾದರೂ ಎರಡು ಹೆಸರುಗಳನ್ನು ತಿಳಿಸಿ .
ಹಿಂದೂಸ್ತಾನ , ಇಂಡಿಯಾ

ಭಾರತದ ಯಾವುದಾದರೂ ಎರಡು ನೈಸರ್ಗಿಕ ಲಕ್ಷಣಗಳನ್ನು ತಿಳಿಸಿ .
ಉತ್ತರಕ್ಕೆ ಹಿಮಾಲಯ , ದಕ್ಷಿಣಕ್ಕೆ ಸಾಗರಗಳು , ಪಶ್ಚಿಮದ ಮರುಭೂಮಿಗಳು , ದಖನ್ ಪ್ರಸ್ಥಭೂಮಿಗಳು .

ಪ್ರಾಚೀನ ಭಾರತದ ಯಾವುದಾದರೂ ಎರಡು ವಿಶ್ವವಿದ್ಯಾಲಯಗಳನ್ನು ಹೆಸರಿಸಿ .
ನಳಂದಾ ಮತ್ತು ವಿಕ್ರಮಶೀಲಾ ವಿಶ್ವವಿದ್ಯಾನಿಲಯಗಳು .

ಪ್ರಾಚೀನ ಭಾರತದ ಯಾವುದಾದರೂ ಎರಡು ಪ್ರಮುಖ ರಾಜಮನೆತನಗಳನ್ನು ಹೆಸರಿಸಿ
ಮೌರ್ಯರು ಮತ್ತು ಗುಪ್ತರು ,

ಮಧ್ಯಕಾಲೀನ ಭಾರತದ ಯಾವುದಾದರೂ ಎರಡು ಪ್ರಮುಖ ರಾಜಮನೆತನಗಳನ್ನು ಹೆಸರಿಸಿ .

ವರ್ಧನರು ಮತ್ತು ರಾಷ್ಟ್ರಕೂಟರು .

ಆಧಾರವಿಲ್ಲದೆ ಇತಿಹಾಸವಿಲ್ಲ , ಏಕೆ ?

ಇತಿಹಾಸವು ಗತಿಸಿಹೋದ ಘಟನೆಗಳ ವೈಜ್ಞಾನಿಕ ವಿಶ್ಲೇಶಣೆಯಾದ್ದರಿಂದ ಆಧಾರಗಳು ಅತ್ಯಗತ್ಯ , ಆದ್ದರಿಂದ ಆಧಾರವಿಲ್ಲದೆ ಇತಿಹಾಸವಿಲ್ಲ .

ಇತಿಹಾಸ ಮತ್ತು ಇತಿಹಾಸ ಪೂರ್ವಕಾಲಗಳ ನಡುವಿನ ವ್ಯತ್ಯಾಸವೇನು ?
ಲಿಖಿತ ಮೂಲಾಧಾರಗಳು ಲಭ್ಯವಿಲ್ಲದ ಕಾಲವೇ ಇತಿಹಾಸದ ಪೂರ್ವಕಾಲ
ಲಿಖಿತ ಮೂಲಾಧಾರಗಳೂ ಲಭ್ಯವಿರುವ ಕಾಲವೇ ಇತಿಹಾಸ ಕಾಲ

ಇತಿಹಾಸ ರಚನೆಯಲ್ಲಿ ನಾಣ್ಯಗಳಿಂದಾಗುವ ಯಾವು ದಾದರೂ ಎರಡು ಉಪಯೋಗಗಳನ್ನು ತಿಳಿಸಿ .
ನಾಣ್ಯಗಳು , ಕಾಲ , ರಾಜವಂಶ , ಆರ್ಥಿಕ ಸ್ಥಿತಿಗಳ ಬಗ್ಗೆ ತಿಳಿಸುತ್ತವೆ .
ಕಲಾಕೌಶಲ್ಯ , ವ್ಯಾಪಾರ ಸಂಬಂಧದ ಬಗ್ಗೆ ಬೆಳಕು ಚೆಲ್ಲುತ್ತವೆ .

ಕವಿರಾಜಮಾರ್ಗದ ಪ್ರಕಾರ ಕರ್ನಾಟಕದ ಮೇರೆ ಎಲ್ಲಿಂದ ಎಲ್ಲಿಯವರೆಗೆ ಹಬ್ಬಿತ್ತು ?
ದಕ್ಷಿಣಕ್ಕೆ ಕಾವೇರಿ ನದಿಯಿಂದ ಉತ್ತರಕ್ಕೆ ಗೋದಾವರಿ ನದಿಯವರೆವಿಗೂ ಹಬ್ಬಿತ್ತು .

ಕರ್ನಾಟಕವನ್ನು ಆಳಿದ ಯಾವುದಾದರೂ ಎರಡು ಪ್ರಮುಖ ರಾಜಮನೆತನಗಳನ್ನು ಹೆಸರಿಸಿ .
ಬಾದಾಮಿ ಚಾಲುಕ್ಯರು ಮತ್ತು ಹೊಯ್ಸಳರು .

ಕರ್ನಾಟಕದ ಯಾವುದಾದರೂ ಎರಡು ಭೌಗೋಳಿಕ ಲಕ್ಷಣಗಳನ್ನು ಬರೆಯಿರಿ .
ಕಡಲತೀರಗಳು ಮತ್ತು ಪಶ್ಚಿಮ ಘಟ್ಟಗಳು ( ಸಹ್ಯಾದಿ ) ಮಲೆನಾಡು ಹಾಗೂ ಉತ್ತರ ದಕ್ಷಿಣದ ಬಯಲುಗಳು

ಇತಿಹಾಸ ರಚನೆಯಲ್ಲಿ ಶಿಲಾಶಾಸನಗಳು ಅತ್ಯಂತ ನಂಬಲಾರ್ಹ ಆಧಾರಗಳಾಗಿವೆ . ಏಕೆ ?
ಅವು ಸಾಮಾನ್ಯವಾಗಿ ಸಮಕಾಲೀನವಾಗಿರುತ್ತವೆ .
ಮೌಲ್ಯಯುತ , ಪ್ರಮಾಣಬದ್ದ , ನೇರ ಆಧಾರಗಳಾಗಿವೆ .

ಪಾಕ್ತನ ಅಥವಾ ಪುರಾತತ್ವ ಆಧಾರಗಳು ಎಂದರೇನು ?
ಪ್ರಾಚೀನ ಮಾನವರ ಜೀವನ ಮತ್ತು ಚಟುವಟಿಕೆಗಳ ಅವಶೇಷಗಳೇ ಪ್ರಾಕ್ತನ ಅಥವಾ ಪುರಾತತ್ವ ಆಧಾರಗಳು .

ಸಾಹಿತ್ಯಾಧಾರದ ಎರಡು ಪ್ರಮುಖ ಪ್ರಕಾರಗಳನ್ನು ತಿಳಿಸಿ .
ದೇಶೀಯ ಸಾಹಿತ್ಯ
ವಿದೇಶಿಯರ ಬರವಣಿಗೆಗಳು

ಭಾರತದ ಮಹಾಕಾವ್ಯಗಳನ್ನು ಹೆಸರಿಸಿ .
ರಾಮಾಯಣ ಮತ್ತು ಮಹಾಭಾರತ

ಭಾರತದ ಯಾವುದಾದರೂ ಎರಡು ಪರ್ವತಗಳನ್ನು ತಿಳಿಸಿ .
ಮೌಂಟ್ ಎವರೆಸ್ಟ್ ಮತ್ತು ಕಾಂಚನಜುಂಗ

ಭಾರತದಲ್ಲಿ ಉದಯಿಸಿರುವ ಯಾವುದಾದರೂ ಎರಡು ಪ್ರಮುಖ ಧರ್ಮಗಳನ್ನು ಹೆಸರಿಸಿ .
ಜೈನಧರ್ಮ ಮತ್ತು ಬೌದ್ಧ ಧರ್ಮ .

ವಿಶ್ವಪರಂಪರೆ ಪಟ್ಟಿಯಲ್ಲಿರುವ ಭಾರತದ ಯಾವು ದಾದರೂ ಎರಡು ಐತಿಹಾಸಿಕ ತಾಣಗಳನ್ನು ತಿಳಿಸಿ .
ರಾಜಸ್ಥಾನದ ಗಿರಿದುರ್ಗಗಳು ಮತ್ತು ಹಂಪಿ

ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-1 ಪೀಠಿಕೆ | 2nd Puc History Notes Chapter 1
ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-1 ಪೀಠಿಕೆ | 2nd Puc History Notes Chapter 1

ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15-20 ವಾಕ್ಯಗಳಲ್ಲಿ ಉತ್ತರಿಸಿ :

ಭಾರತದ ಇತಿಹಾಸ ರಚನೆಗೆ ಪ್ರಾಕ್ತನ ಆಧಾರಗಳ ಮಹತ್ವವನ್ನು ಕುರಿತು ಬರೆಯಿರಿ .

ಪ್ರಾಕ್ತನ ಅಥವಾ ಪುರಾತತ್ವ ಮೂಲಾಧಾರಗಳೂ ಪ್ರಾಚೀನ ಮಾನವರ ಜೀವನ ಮತ್ತು ಚಟುವಟಿಕೆಗಳ ಅವಶೇಷಗಳಾಗಿದ್ದು ಇವು ಇತಿಹಾಸದ ಪುನರ್ ರಚನೆಗೆ ಅಮೂಲ್ಯ ಮತ್ತು ಉಪಯುಕ್ತ ಮಾಹಿತಿಯನ್ನು ನೀಡುತ್ತವೆ .
ಉತ್ಪನನಗಳು – ಮೂಲಾಧಾರಗಳನ್ನು ಹೆಕ್ಕಿ ತೆಗೆಯಲು ಕೈಗೊಳ್ಳುವ ವೈಜ್ಞಾನಿಕ ಭೂ ಅಗತ್ಯವೇ ಉತ್ಪನನ . ಭಾರತದ ಇತಿಹಾಸ ಪೂರ್ವಕಾಲವನ್ನು ಉತ್ಪನ ನಗಳ ಆಧಾರದಿಂದಲೇ ಬರೆಯಲಾಗಿದೆ . ಸಿಂಧೂ ನಾಗರೀಕತೆಯ ಅಧ್ಯಯನಕ್ಕೆ ಉತ್ಪನನಗಳೇ ಆಧಾರ , ಕಾಂಬೋಡಿಯಾ , ಜಾವಾ , ತಕ್ಷಶಿಲಾ , ಗಯಾ , ಪಾಟಲೀಪುತ್ರ ಹಂಪಿ ಮುಂತಾದ ಕಡೆ ನಡೆಸಿದ ಉತ್ಪನನಗಳಿಂದಾಗಿ ಭಾರತದ ಇತಿಹಾಸವನ್ನು ಅರಿಯಲು ಸಹಾಯಕವಾಗಿವೆ .
ಸ್ಮಾರಕಗಳು : ಇವು ಐತಿಹಾಸಿಕ ಮಹತ್ವದ ನಿವೇಶನಗಳು ಮತ್ತು ರಚನೆಗಳಾಗಿವೆ . ಕೋಟೆಗಳು , ಅರಮನೆಗಳು , ಗುಹೆಗಳು , ಗುಡಿಗಳು , ಬಸದಿಗಳು , ಮೂರ್ತಿಗಳು , ಸ್ತೂಪಗಳು ಮುಂತಾದವುಗಳಾಗಿವೆ .
ನಾಣ್ಯಗಳು : ನಾಣ್ಯಗಳು ಕಾಲ , ರಾಜವಂಶ , ಆರ್ಥಿಕಸ್ಥಿತಿ , ಧರ್ಮ ಲಿಪಿ ಮತ್ತು ಭಾಷೆಗಳನ್ನು ತಿಳಿಯಲು ಸಹಾಯ ಮಾಡುತ್ತವೆ .
ವರ್ಣಚಿತ್ರಗಳು : ವಿವಿಧ ಕಾಲಗಳ ವರ್ಣಚಿತ್ರಗಳು ನಮಗೆ ಅಂದಿನ ಕಾಲದ ಸಾಮಾಜಿಕ , ಸಾಂಸ್ಕೃತಿಕ ಮತ್ತು ಧಾರ್ಮಿಕ ವಿಷಯಗಳನ್ನು ಕಣ್ಣಿಗೆ ಕಟ್ಟುವಂತೆ ತಿಳಿಸುತ್ತದೆ .
ಶಾಸನಗಳು : ಶಾಸನಗಳು ಇತಿಹಾಸ ರಚನೆಯಲ್ಲಿ ನಂಬಲಾರ್ಹ ಆಧಾರಗಳು , ಶಾಸನಗಳನ್ನು , ಶಿಲೆಗಳು , ಬಂಡೆಗಳು , ಗೋಡೆಗಳು , ಮಣ್ಣಿನ ಮುದ್ರಿಕೆಗಳು , ಕಬ್ಬಿಣದ ಕಂಬಗಳು , ತಾಮ್ರಪಟಗಳ ಮೇಲೆ ಕೆತ್ತಲಾಗಿದ್ದು ಭಾರತದಲ್ಲಿ ಈವರೆವಿಗೆ ಸುಮಾರು 75,000 ಶಾಸನಗಳು ದೊರೆತಿದ್ದು ಇವು ಇತಿಹಾಸದ ಅಧ್ಯಯನಕ್ಕೆ ಬೆಳಕು ಚೆಲ್ಲಿವೆ .

ಭಾರತ ಇತಿಹಾಸದ ವಿಶಿಷ್ಠ ಲಕ್ಷಣಗಳನ್ನು ವಿವರಿಸಿ .

ಭಾರತವು ವಿಸ್ತೀರ್ಣದಲ್ಲಿ ಜಗತ್ತಿನ ಏಳನೇ ದೊಡ್ಡ ರಾಷ್ಟ್ರವಾಗಿದ್ದು ಜನಸಂಖ್ಯೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ .
ಇದು ಚೀನಾದ ಹಾಗೆ ಸುಮಾರು ನಾಲ್ಕು ಸಾವಿರ ವರ್ಷಗಳ ನಿರಂತರ ಇತಿಹಾಸವನ್ನು ಹೊಂದಿದೆ .
ಸಿಂಧೂ ನಾಗರೀಕತೆಯಿಂದ ವೈದಿಕ ನಾಗರೀಕತೆ , ಹೊಸ ಮತಗಳ ಉದಯಕ್ಕೆ , ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಅಭಿವೃದ್ಧಿಗೆ ಸರಬದ್ಧ ವಿಕಾಸವನ್ನು ರೂಪಿಸಿದೆ .
ಗ್ರೀಕರು , ಪರ್ಶಿಯನ್ನರು , ಹೂಣರು , ಶಕರು , ಅರಬ್ಬರು , ಟರ್ಕರು , ಕುಶಾನರು , ಆಫ್ಘನ್ನರು ಹೀಗೆ ವಿದೇಶೀಯರ ದಾಳಿಗೆ ಒಳಗಾದರೂ ಭಾರತೀಯ ಸಂಸ್ಕೃತಿಗೆ ಕಲೆ , ಮತ್ತು ವಾಸ್ತುಶಿಲ್ಪಕ್ಕೆ ಅಗಾಧ ಕೊಡುಗೆಗಳನ್ನು ನೀಡಿದ್ದಾರೆ .
ಹಿಂದೂ , ಜೈನ , ಬೌದ್ಧ , ಸಿಖ್ , ಮುಸ್ಲಿಂ , ಕ್ರೈಸ್ತ , ಪಾರಸೀ ಹಾಗು ವಿವಿಧ ಬುಡಕಟ್ಟು ಧರ್ಮ ಮತ್ತು ಆಚರಣೆಗಳ ತವರಾಗಿದೆ .
ಭಾರತವು ಜಗತ್ತಿಗೆ ಸಾಹಿತ್ಯ , ತತ್ವಶಾಸ್ತ್ರ , ಸಂಗೀತ , ನೃತ್ಯ , ಕಲೆ , ವಾಸ್ತುಶಿಲ್ಪ , ಮೂರ್ತಿಕಲೆ , ವಿಜ್ಞಾನ , ಯೋಗ , ವೈದ್ಯಕೀಯ , ಗಣಿತ , ಖಗೋಳಶಾಸ್ತ್ರ ಶಿಕ್ಷಣ ಮುಂತಾದ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ .
ವಿಶೇಷವಾದ ಭೌಗೋಳಿಕ ರಚನೆಯನ್ನು ಹೊಂದಿದ್ದು ವಿದೇಶಿಯರ ಆಕರ್ಷಣೆಯ ಕೇಂದ್ರವಾಗಿದೆ .
ವಿವಿಧತೆಯಲ್ಲಿ ಏಕತೆಯನ್ನು ರೂಪಿಸಿದೆ .

ಗ್ರೀಕ್ ರಾಯಭಾರಿ ಮೆಗಾಸ್ತನೀಸನ ‘ ಇಂಡಿಕಾ ‘ ಗ್ರಂಥದಿಂದ ಮೌರ್ಯರ ಕಾಲವನ್ನು ತಿಳಿದು ಕೊಳ್ಳಬಹುದು.
ಟಾಲಮಿಯ ‘ ಜಿಯಾಗ್ರಫಿ ‘ ಗ್ರಂಥದಿಂದ ಪ್ರಾಚೀನ ಭಾರತದ ವಾಣಿಜ್ಯ ಸಂಬಂಧದ ಬಗ್ಗೆ ತಿಳಿದು ಕೊಳ್ಳಬಹುದು .
ಪ್ಲಿನಿಯ ನ್ಯಾಚುರಲ್ ಹಿಸ್ಟೋರಿಯಾದಿಂದ ಭಾರತ ರೋಮ್ ಸಂಬಂಧ ಮತ್ತು ಅಂದಿನ ಭಾರತದ ರಾಜಕೀಯ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದು .
ಚೀನಿ ಯಾತ್ರಿಕರಾದ ಫಾಹಿಯಾನ್ ಮತ್ತು ನ್ಯೂಯಾನ್ ತ್ಸಾಂಗ್‌ರ ಗ್ರಂಥಗಳಿಂದ ಮೌರ್ಯರ , ವರ್ಧನರ , ಬಾದಾಮಿ ಚಾಲುಕ್ಯರ ಇತಿಹಾಸವನ್ನು ತಿಳಿದುಕೊಳ್ಳಬಹುದು .
ಇಟಲಿಯ ನಿಕಲೋಕಾಂಟಿ , ಫರ್ಷಿಯಾದ ಅಬ್ದುಲ್ ರಜಾಕ್ , ಪೋರ್ಚುಗಲ್‌ನ ಬಾಸಾ , ಡೋಮಿಂ ಗೋಪೇಸ್ , ರಷ್ಯಾದ ನಿಕಟಿನ್ ಮುಂತಾದವರ ಬರಹಗಳಿಂದ ವಿಜಯನಗರ ಮತ್ತು ಬಹುಮನಿಗಳ ಇತಿಹಾಸದ ಬಗ್ಗೆ ತಿಳಿದುಕೊಳ್ಳಬಹುದು .

ವೈವಿಧ್ಯತೆಯಲ್ಲಿ ಏಕತೆ – ಭಾರತದ ಪ್ರಮುಖ ಲಕ್ಷಣ . ವಿವರಿಸಿ .

ಭಾರತವು ಭೌಗೋಳಿಕ ವೈವಿಧ್ಯತೆಯೊಂದಿಗೆ ಮಾನವ ಚಟುವಟಿಕೆಯ ಪ್ರತಿಯೊಂದು ರಂಗದಲ್ಲಿಯೂ ವೈವಿದ್ಯತೆಯನ್ನು ಹೊಂದಿದೆ .

ಭೌಗೋಳಿಕ ವೈವಿಧ್ಯತೆ- ಮರುಭೂಮಿಗಳು , ಹಿಮಾಲಯ ಪರ್ವತಗಳು , ಪ್ರಸ್ತಭೂಮಿಗಳು , ಕಡಲತೀರಗಳು ವೈವಿಧ್ಯಮಯವಾದ ಜೀವಸಂಕುಲಕ್ಕೆ ಆಶೆಯವಾಗಿದ್ದು ಏಕತೆಯನ್ನು ಹೊಂದಿದೆ .
ದ್ರಾವಿಡ , ನೀಗ್ರೋ , ಮಂಗೋಲಿಯನ್ , ಅಲ್ಪಾಯಿನ್ ಮುಂತಾದ ಜನಾಂಗಗಳು , ವಿವಿಧ ಜಾತಿ ಜನಾಂಗದವರು ವಿವಿಧ ಭಾಷಿಗರು ವಾಸವಾಗಿದ್ದು ಸಾಮರಸ್ಯದೊಂದಿಗೆ ಸಹಬಾಳ್ವೆ ನಡೆಸುತ್ತಿದ್ದಾರೆ .
ಸಂಪನ್ಮೂಲಗಳು ಅಸಮಾನವಾಗಿ ಹಂಚಿಕೆಯಾಗಿದ್ದು , ಬಡವರು ಮತ್ತು ಶ್ರೀಮಂತರು ಎಂಬ ಎರಡು ವರ್ಗಗಳಿದ್ದರೂ , ಕೆಲವು ಪ್ರದೇಶಗಳು ಅಭಿವೃದ್ಧಿಶೀಲ , ಕೆಲವು ಪ್ರದೇಶಗಳು ಅನಭಿವೃದ್ಧಿ ಹೊಂದಿವೆ .
ಹಲವಾರು ರಾಜ್ಯಗಳು ವಿಭಿನ್ನತೆಯನ್ನು ಹೊಂದಿದ್ದರೂ ಏಕೀಕರಿಸಿ ನಮ್ಮದೇ ಸಂವಿಧಾನವನ್ನು ರೂಪಿಸಿ ಏಕತೆ ಸ್ಥಾಪಿಸಲಾಗಿದೆ .
ಏಕರೂಪ ಶಿಕ್ಷಣ ಮತ್ತು ಸಾಹಿತ್ಯ ಮುಂತಾದ ಮಾರ್ಪಾಡುಗಳೊಂದಿಗೆ ವಿವಿಧತೆಯಲ್ಲಿ ಏಕತೆಯನ್ನು ಸ್ಥಾಪಿಸಲಾಗಿದೆ .

ಭಾರತ ಇತಿಹಾಸ ರಚನೆಗೆ ವಿದೇಶಿ ಬರಹಗಾರರ ಕೊಡುಗೆಗಳನ್ನು ಕುರಿತು ಟಿಪ್ಪಣಿ ಬರೆಯಿರಿ .

ಭಾರತವು ತನ್ನ ವಿಶೇಷವಾದ ಆಕರ್ಷಣೆಯಿಂದಾಗಿ ವಿದೇಶೀಯರನ್ನು ತನ್ನತ್ತ ಸೆಳೆಯಿತು . ಅವರಲ್ಲಿ ಅನೇಕರು ತಮ್ಮ ಅನುಭವ ಅಭಿಪ್ರಾಯಗಳನ್ನು ಬರೆದಿಟ್ಟಿದ್ದಾರೆ . ಅವುಗಳೇ ವಿದೇಶಿ ಬರವಣಿಗೆಗಳು . ಇವುಗಳು ಭಾರತದ ಇತಿಹಾಸ ತಿಳಿಯಲು ಸಹಕಾರಿಯಾಗಿವೆ .

ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವವನ್ನು ಸಂಕ್ಷಿಪ್ತವಾಗಿ ವಿವರಿಸಿ .

ಭಾರತದ ಭೌಗೋಳಿಕ ಲಕ್ಷಣಗಳಾದ ಹಿಮಾಲಯ ಪರ್ವತಗಳು , ಉತ್ತರದ ಬಯಲುಗಳು , ಮರುಭೂಮಿ , ಪರ್ವತಗಳು , ನದಿಗಳು , ದಕ್ಷಿಣದ ಪ್ರಸ್ತಭೂಮಿ ಮತ್ತು ಕರಾವಳಿ ತೀರಗಳು ಭಾರತದ ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸದ ಮೇಲೆ ತನ್ನದೇ ಪ್ರಭಾವವನ್ನು ಬೀರಿದೆ .

ಹಿಮಾಲಯ ಪರ್ವತವು ಭಾರತವನ್ನು ಏಷ್ಯಾದ ಇನ್ನುಳಿದ ಭಾಗಗಳಿಂದ ಪ್ರತ್ಯೇಕಿಸಿದ್ದು ಇದು ಭಾರತಕ್ಕೆ ನೈಸರ್ಗಿಕ ತಡೆಗೋಡೆಯಂತಿದೆ . ಸದಾಕಾಲ ಹರಿಯುವ ನದಿಗಳಿಗೆ ಜನ್ಮ ನೀಡಿದೆ .
ಈ ನದಿಗಳು ಉತ್ತರದ ಫಲವತ್ತಾದ ಬಯಲುಗಳನ್ನು ನಿರ್ಮಿಸಿದ್ದು ಇವು ನಾಗರೀಕತೆ ಮತ್ತು ಸಾಮ್ರಾಜ್ಯಗಳ ತೊಟ್ಟಿಲುಗಳಾಗಿವೆ .
ಉತ್ತರದ ಕಣಿವೆಗಳಾದ ಖೈಬರ್ ಮತ್ತು ಬೋಲಾನ್ ಮುಂತಾದವು ವಿದೇಶಿಯರೊಂದಿಗೆ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಬೆಳೆಸಲು ಮತ್ತು ವಿದೇಶಿ ದಾಳಿಗೆ ಕಾರಣವಾಗಿದೆ .
ಪಶ್ಚಿಮದ ಮರುಭೂಮಿ ಮತ್ತು ದಕ್ಷಿಣದ ಪ್ರಸ್ತಭೂಮಿಯ ದಟ್ಟ ಕಾಡುಗಳು ಜನರನ್ನು ಕಠಿಣ ಪರಿಶ್ರಮಿ ಮತ್ತು ಯುದ್ಧಪ್ರಿಯರನ್ನಾಗಿಸಿವೆ .
ದಕ್ಷಿಣದ ಸಮುದ್ರಗಳು ಒಂದು ಕಾಲದಲ್ಲಿ ತಡೆಬೇಲಿಗಳಾಗಿದ್ದವು .
ನಂತರದಲ್ಲಿ ಜಗತ್ತಿನ ಇತರ ಭಾಗಗಳಿಗೆ ಸಂಪರ್ಕ ಬೆಳೆಸಲು ಸಾಧನಗಳಾದವು .
ಉತ್ತರ ಮತ್ತು ದಕ್ಷಿಣದ ನದಿ ಬಯಲುಗಳು ಅತಿ ಪುರಾತನ ಕಾಲದಿಂದ ಈ ದೇಶವನ್ನು ಕೃಷಿಪ್ರಧಾನ ದೇಶವನ್ನಾಗಿಸಿವೆ .
ಇಲ್ಲಿನ ಅನೇಕ ವಿಧದ ಖನಿಜಗಳು , ಬಂಡೆಗಳು , ಮರಳುಕಲ್ಲು , ಗ್ರಾನೈಟ್ ಮತ್ತು ಅಮೃತ ಶಿಲೆಯಂತಹ
ಶಿಲೆಗಳ ಲಭ್ಯತೆಯು ಅರಮನೆಗಳು , ದುರ್ಗಗಳು , ಕೋಟೆ , ಆಯುಧಗಳು , ಮತ್ತು ವಾಸ್ತುಶಿಲ್ಪದ ಸಿರಿವಂತಿಕೆಗೆ ಸಾಕ್ಷಿಯಾಗಿವೆ .

ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-1 ಪೀಠಿಕೆ | 2nd Puc History Notes Chapter 1
ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-1 ಪೀಠಿಕೆ | 2nd Puc History Notes Chapter 1

ಹೊಂದಿಸಿ ಬರೆಯಿರಿ :

ಅ ಪಟ್ಟಿ ಬ ಪಟ್ಟಿ ಉತ್ತರಗಳು

ಆರ್ಯಭಟ ಎ . ಅಷ್ಟಾಂಗ ಯೋಗ ಸೂರ್ಯಸಿದ್ಧಾಂತ

ಪತಾಂಜಲಿ ಬಿ . ಸೂರ್ಯಸಿದ್ಧಾಂತ ಅಷ್ಟಾಂಗ ಯೋಗ

ಕಲ್ಹಣ ಸಿ . ರಾಜತರಂಗಿಣಿ ರಾಜತರಂಗಿಣಿ

ಭಾಣಭಟ್ಟ ಡಿ . ಅರ್ಥಶಾಸ್ತ್ರ ಹರ್ಷಚರಿತ

ಕೌಟಿಲ್ಯ ಇ . ಹರ್ಷಚರಿತ ಅರ್ಥಶಾಸ್ತ್ರ

ಇತರೆ ವಿಷಯಗಳನ್ನು ಓದಿರಿ

ಸೂಕ್ಷ್ಮ ಅರ್ಥಶಾಸ್ತ್ರ ಪರಿಚಯ

ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ನೋಟ್ಸ್

ದ್ವಿತೀಯ ಪಿಯುಸಿ ಕನ್ನಡ

ದ್ವಿತೀಯ PUC ಇತಿಹಾಸ ನೋಟ್ಸ್

ಪ್ರಬಂಧಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *