ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ ಪ್ರಶ್ನೆ ಉತ್ತರ | Bhougolika Lakshanagalu Haagu Charitre Purva Bharata

ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ ಪ್ರಶ್ನೆ ಉತ್ತರ | Bhougolika Lakshanagalu Haagu Charitre Purva Bharata

ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ ಪ್ರಶ್ನೆ ಉತ್ತರ, Bhougolika Lakshanagalu Haagu Charitre Purva Bharata Questions and Answers, pdf, 8th

ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ ಪ್ರಶ್ನೆ ಉತ್ತರ

ಕೆಳಕಂಡ ವಾಕ್ಯಗಳನ್ನು ಪೂರ್ಣಗೊಳಿಸಿ ,

1. ಭಾರತವು ಒಂದು…………… ದ್ವೀಪವಾಗಿದೆ .

2. ಬೂದಿಯ ಕುರುಹುಗಳು-…………….. ಗವಿಗಳಲ್ಲಿ ದೊರೆತಿವೆ .

3. ಮಧ್ಯಶಿಲಾಯುಗದ ಪರಿಕರಗಳನ್ನು ……………..ಎಂದು ಕರೆಯುತ್ತಾರೆ .

ಉತ್ತರ : – 1 ) ಪರ್ಯಾಯ , 2 ) ಕರ್ನೂಲಿನ , 3 ) ಸ್ಥಿತ್ಯಂತರ ಸೂಕ್ಷ್ಮ ಶಿಲಾಯುಗ

II . ಸಂಕ್ಷಿಪ್ತವಾಗಿ ಉತ್ತರಿಸಿ .

1. ಭಾರತದ ಭೂ ಮೇಲೆ ರಚನೆಯನ್ನು ಸ್ಕೂಲವಾಗಿ ತಿಳಿಸಿ . ಭಾರತದ ಭೂ ಮೇಲ್ಮ ರಚನೆಯ ಲಕ್ಷಣಗಳು

  • ಉತ್ತರದಲ್ಲಿ ಹಿಮಾಲಯದ ಪರ್ವತಶ್ರೇಣಿಗಳನ್ನು
  • ಸಮತಟ್ಟಾದ ಸಿಂಧೂ , ಗಂಗಾ ಬಯಲು ಪ್ರದೇಶವನ್ನು
  • ದಕ್ಷಿಣದ ದಖನ್ ಪ್ರಸ್ಥಭೂಮಿಯನ್ನು ಹಾಗೂ
  • ಕರಾವಳಿ ತೀರ ಪ್ರದೇಶವನ್ನು ಹೊಂದಿದೆ .

8ನೇ ತರಗತಿ ಸಮಾಜ ವಿಜ್ಞಾನ ಪಾಠ 1 ನೋಟ್ಸ್ :- ಆಧಾರಗಳು ಪಾಠದ ಪ್ರಶ್ನೆ ಉತ್ತರ

2. ಯಾವ ಕಣಿವೆಗಳ ಮೂಲಕ ಭಾರತದ ಮೇಲೆ ದಾಳಿಗಳು ಸಂಭವಿಸಿವೆ .

ವಾಯವ್ಯ ಭಾರತದಲ್ಲಿನ ಬೊಲಾನ್ ಮತ್ತು ಬೈಬರ್ ಕಣಿವೆಮಾರ್ಗಗಳ ಮೂಲಕವೇ ಭಾರತದ ಮೇಲೆ ದಾಳಿಗಳು ಸಂಭವಿಸಿವೆ .

3. ಪ್ರಾಗೈತಿಹಾಸಿಕ ಕಾಲ ಎಂದರೇನು ?

ಮಾನವರು ಲೇಖನ ಕಲೆಯನ್ನು ಕಂಡು ಹಿಡಿಯುವುದಕ್ಕೆ ಮೊದಲಿನ ಕಾಲವನ್ನು ಪ್ರಾಗೈತಿಹಾಸಿಕ ಕಾಲವೆನ್ನುತ್ತೇವೆ . ಈ ಕಾಲಘಟ್ಟದಲ್ಲಿ ಭಾಷೆಯ ಬಳವಣಿಗೆ ಹಾಗೂ ಲಿಪಿಯ ಬಳಕೆಯ ಬಗ್ಗೆ ನಮಗೆ ಆಧಾರಗಳು ಸಿಗದೆ ಇರುವುದರಿಂದ ಇದನ್ನು ಚರಿತ್ರೆಯ ಪೂರ್ವಕಾಲವೆಂದು ಕರೆಯುತ್ತೇವೆ

4. ಪಶುಸಂಗೋಪನೆ ಮತ್ತು ಹೈನುಗಾರಿಕೆಯು ಹೇಗೆ ಪ್ರಾರಂಭವಾಯಿತು ?

ಸುಮಾರು 12,000 ವರ್ಷಗಳ ಹಿಂದೆ ಭೂ ಮಂಡಲದ ತಾಪಮಾನವು ಮತ್ತಷ್ಟು ಹೆಚ್ಚಿತು . ಹಲವೆಡೆ ಇದು ಹುಲ್ಲುಗಾವಲಿನ ಬೆಳವಣಿಗೆಗೆ ಕಾರಣವಾಯಿತು .

ಪ್ರಾಣಿ ಪಕ್ಷಿಗಳ ಸಂತತಿಯು ಹೆಚ್ಚಾಗತೊಡಗಿದವು . ಈ ಸಂಕುಲಗಳ ಜೊತೆಯಲ್ಲಿಯೇ ಜಿಂಕೆ , ಕಡವೆ , ಮೇಕೆ , ಕುರಿ ಹಾಗೂ ಇನ್ನಿತರ ಪ್ರಾಣಿಗಳು ಹುಲ್ಲುಗಾವಲು ಪ್ರದೇಶದಲ್ಲಿ ಸಮೃದ್ಧಿಯಿಂದ ಬೆಳೆದವು .

ಕ್ರಮೇಣವಾಗಿ ಈ ಕೆಲಪ್ರಾಣಿಗಳನ್ನು ಹಿಡಿದು ತಂದು ಮಾನವರು ಪೋಷಿಸತೊಡಗಿದರು . ಹೀಗೆ ಪಶುಸಂಗೋಪನೆ ಮತ್ತು ಹೈನುಗಾರಿಕೆಯು ಪ್ರಾರಂಭವಾಯಿತು .

5. ಪ್ರಾಗೈತಿಹಾಸಿಕ ಕಾಲಘಟ್ಟವನ್ನು ವಿದ್ವಾಂಸರು ವಿವಿಧ ಹೆಸರುಗಳಿಂದ ಕರೆದಿದ್ದಾರೆ . ಅವು ಯಾವುವು ? ಪ್ರಾಗೈತಿಹಾಸದ ವಿವಿಧ ಕಾಲಘಟ್ಟಗಳು

1 ) ಹಳೆ ಶಿಲಾಯುಗ

  • ಆದಿ ಹಳೆ ಶಿಲಾಯುಗ
  • ಆ ) ಮಧ್ಯೆ ಹಳೆ ಶಿಲಾಯುಗ
  • ಅಂತ್ಯ ಹಳೆ ಶಿಲಾಯುಗ

2 ) ಮಧ್ಯ ಶಿಲಾಯುಗ

3 ) ನವ ಶಿಲಾಯುಗ

ಭಾರತವು ಒಂದು…………… ದ್ವೀಪವಾಗಿದೆ ?

ಪರ್ಯಾಯ

ಮಧ್ಯಶಿಲಾಯುಗದ ಪರಿಕರಗಳನ್ನು ……………..ಎಂದು ಕರೆಯುತ್ತಾರೆ?

ಸ್ಥಿತ್ಯಂತರ ಸೂಕ್ಷ್ಮ ಶಿಲಾಯುಗ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

ಕನ್ನಡ
ಇತಿಹಾಸ
ಭೂಗೋಳಶಾಸ್ತ್ರ
ಭಾರತದ ಸಂವಿಧಾನ
ವಿಜ್ಞಾನ
ಅರ್ಥಶಾಸ್ತ್ರ
ಮಾನಸಿಕ ಸಾಮರ್ಥ್ಯ
ಇಂಗ್ಲೀಷ್ ವ್ಯಾಕರಣ
ಪ್ರಚಲಿತ ವಿದ್ಯಮಾನ
ಸಾಮಾನ್ಯ ಜ್ಞಾನ

ಎಲ್ಲಾ ಉದ್ಯೋಗಗಳು | WCD ಚಿತ್ರದುರ್ಗ ನೇಮಕಾತಿ 2022

Leave a Reply

Your email address will not be published. Required fields are marked *