ಸ್ವಾತಂತ್ರ್ಯ ದಿನಾಚರಣೆ ಪ್ರಬಂಧ ಕನ್ನಡ Independence Day Essay in Kannada  2022

15 ನೆಯ ಆಗಸ್ಟ್ 1947! ಭಾರತದ ಇತಿಹಾಸದಲ್ಲಿಯೇ ಸ್ವರ್ಣಾಕ್ಷರಗಳಿಂದ ಬರೆದಿಡಬೇಕಾದ ದಿನ . ಅಂದು ಭಾರತೀಯರಾದ ನಮಗೆಲ್ಲರಿಗೂ ಸ್ವಾತಂತ್ರ್ಯ ಪ್ರಾಪ್ತವಾದ ದಿನ .  

ಭಾರತಮಾತೆಗೆ ತೊಡಿಸಿದ್ದ ದಾಸ್ಯತೆಯ ಶೃಂಖಲೆಗಳನ್ನು ಕಳಚಿ ಹಾಕಿದ ಅಪೂರ್ವ ದಿನ . ಈ ಮೊದಲು ಸಹಸ್ರಾರು ಮೈಲಿಗಳ ದೂರದಲ್ಲಿದ್ದ ಇಂಗ್ಲಿಷರು ವ್ಯಾಪಾರಕ್ಕೆಂದು ಒಂಟೆಗಳ ಹಾಗೆ ಬಂದು , ಮುಗ್ಧಮನದ ಭಾರತೀಯರನ್ನು ಮರುಳು ಮಾಡಿ , ವೈವಿಧ್ಯತೆಯಲ್ಲಿ ಏಕತೆಯ ಕುಹಕ ತತ್ವದಿಂದ ಭಾರತದ ರಾಜರುಗಳಲ್ಲಿ ಇಲ್ಲಸಲ್ಲದ ವೈಮನಸ್ಯಗಳನ್ನು ತಂದು , ದೇಶದ ಐಕ್ಯತೆಯನ್ನೇ ಛಿದ್ರಛಿದ್ರಗೊಳಿಸಿ , ತಮ್ಮ ದಬ್ಬಾಳಿಕೆಯ ಆಡಳಿತವನ್ನು ನೂರಾರು ವರ್ಷಗಳ ಕಾಲ ನಡೆಸಿ , ಭಾರತದ ಸಕಲ ಸಂಪತ್ತನ್ನೂ ಸೂರೆಮಾಡಿದರು .

ಹುಲುಸಾದ ಭೂಮಿಯಿಂದ ಕೂಡಿದ ಭಾರತವನ್ನೇ ತಮ್ಮ ಸ್ವಾರ್ಥಲಾಲಸೆಗಳ ಕಾರಣ ಬರಡುಮಾಡಿ ಹೋದರು . ಇವರನ್ನು ಬಡಿದೋಡಿಸಲು ಭಾರತದ ಸ್ವಾತಂತ್ರ್ಯವೀರರು , ಜನ ನಾಯಕರು , ಪಟ್ಟಪಾಡು ವರ್ಣಿಸಲಾಗದು , ದೇಶಮಾತೆಯ ರಕ್ಷಣೆಯ ಸಲು ವಾಗಿ ಪ್ರಾಣ - ಪಣತೊಟ್ಟು , ತೆತ್ತು ಹೋರಾಡಿದವರು ಅಸಂಖ್ಯಾತ . 

ಭಗತ್‌ಸಿಂಗ್ , ಚಂದ್ರಶೇಖರ ಅಜಾದ್ , ಬಿಸ್ಮಿಲ್ಲಾ , ರಾಜಗುರು , ಸುಭಾಷ್ ಚಂದ್ರ ಬೋಸ್ , ಹೀಗೆಯೇ ಎಣಿಸುತ್ತಾ ಹೋದರೆ , ಹಾಗೆ ಹುತಾತ್ಮರಾದವರ ಸಂಖ್ಯೆ ಗಗನವನ್ನೇ ಮುಟ್ಟಿತು .  

ಇವರೆಲ್ಲರ ಬಲಿದಾನದ ಕಾರಣ ನಾವಿಂದು ಸ್ವತಂತ್ರ ಭಾರತದ ಪೌರರೆನಿಸಿದ್ದೇವೆ . ಇಂತಹವರೆಲ್ಲರನ್ನೂ ಸ್ವಾತಂತ್ರ ದಿನಾಚರಣೆಯ ದಿನ ಸ್ಮರಿಸುವುದೇ ಮುಖ್ಯ ಉದ್ದೇಶ . ಜೊತೆಗೆ ನಾವೂ ಸಹ ಅಂತಹ ಹುತಾತ್ಮ ವೀರರಿಂದ ಸ್ಫೂರ್ತಿ ಪಡೆದು , ಬಿಸಿರಕ್ತದ ಕೋಡಿ ಹರಿಸಿ , ಗಳಿಸಿಕೊಟ್ಟು ಹೋಗಿರುವ ಸ್ವಾತಂತ್ರ್ಯವನ್ನು ಉಳಿಸುವ ಸಲುವಾಗಿ ಈ ದಿನಾಚರಣೆಯ ದಿನ ಪಣ ತೊಡಬೇಕಾದುದು ಇಂದಿನ ಉದ್ದೇಶವೇ ಆಗಿದೆ .  

ಭಾರತೀಯ ಪೌರರೆನಿಸಿದ ನಮ್ಮೆಲ್ಲರಿಗೂ ಸ್ವಾತಂತ್ರೋತ್ಸವನ್ನು ಆಚರಿಸುವುದೆಂದರೆ ಹರ್ಷದ , ಹೆಮ್ಮೆಯ ವಿಷಯ . ನಾವೆಲ್ಲರೂ ಆಚರಣೆಯ ಒಂದೆರಡು ದಿನಗಳ ಮೊದಲೇ ಉತ್ಸವದ ಪೂರ್ವಸಿದ್ಧತೆಗಳಿಗೆ ತೊಡಗಿರುತ್ತೇವೆ . ಕಾರಣ ನಮ್ಮಲ್ಲಿ ದೇಶಭಕ್ತಿಯ ಭಾವನೆ ತುಂಬಿರುತ್ತದೆ .  

ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ