Vyakarana in Kannada | ಕರ್ತರಿ ಪ್ರಯೋಗ

Vyakarana in Kannada | ಕರ್ತರಿ ಪ್ರಯೋಗ

Vyakarana in Kannada, ಕರ್ತರಿ ಪ್ರಯೋಗ, ಕರ್ಮಣಿ ಪ್ರಯೋಗ, kannada vyakarana, notes, charts, pustaka,darpana, pdf guide, grammar in kannada

vyakarana in kannada

ಕರ್ತರಿ ಪ್ರಯೋಗ ಎಂದರೇನು ?

ಕ್ರಿಯಾ ಪದವು ವಾಕ್ಯಗಳಲ್ಲಿ ಕರ್ತೃಪದವನ್ನು ಪ್ರಧಾನವಾಗಿ ಅನುಸರಿಸುತ್ತಿದ್ದರೆ ಅದನ್ನು ಕರ್ತರಿ ಪ್ರಯೋಗ ಎಂದು ಕರೆಯುತ್ತೇವೆ

ಕರ್ಮಣಿ ಪ್ರಯೋಗ ಎಂದರೇನು?

ಕರ್ಮಪದವನ್ನು ಅನುಸರಿಸಿ ಕ್ರಿಯಾಪದ ಪ್ರಯೋಗವಾಗಿರುವುದಕ್ಕೆ ಕರ್ಮಣಿ ಪ್ರಯೋಗ ಎಂದು ಹೆಸರು

ಕರ್ತರಿ ಪ್ರಯೋಗ

ಕ್ರಿಯಾ ಪದವು ವಾಕ್ಯಗಳಲ್ಲಿ ಕರ್ತೃಪದವನ್ನು ಪ್ರಧಾನವಾಗಿ ಅನುಸರಿಸುತ್ತಿದ್ದರೆ ಅದನ್ನು ಕರ್ತರಿ ಪ್ರಯೋಗ ಎಂದು ಕರೆಯುತ್ತೇವೆ .”

ಉದಾಹರಣೆ : ಕರ್ತೃಪದ ಕರ್ಮಪದ ಕ್ರಿಯಾಪದ
ರಾಮನು ರಾವಣನನ್ನು ಕೊಂದನು

ಈ ಉದಾ ಯಲ್ಲಿ ” ಕೊಂದನು ” ಎಂಬ ಕ್ರಿಯಾಪದವು ” ರಾಮನು” ಎಂಬ ಕರ್ತೃ ಪದವನ್ನು ಅನುಸರಿಸಿದೆ. ಕರ್ತರಿ ಪ್ರಯೋಗವು ಯಾವಾಗಲೂ ಆದಿಯಲ್ಲಿ ಕರ್ತೃ ಪದವನ್ನು ಮಧ್ಯದಲ್ಲಿ ಕರ್ಮಪದವನ್ನು ಅಂತ್ಯದಲ್ಲಿ ಕ್ರಿಯಾಪದವನ್ನು ಒಳಗೊಂದಿರುತ್ತದೆ.

ಕರ್ತೃ ಪದವು ಪ್ರಧಮವಿಭಕ್ತಿಯಿಂದ ಕೂಡದ್ದು.ಕರ್ಮ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿರುತ್ತದೆ.ಕ್ರಿಯಾ ಪದವು ಕ್ರಿಯೆಯನ್ನು ಸೂಚಿಸುತ್ತದೆ.

ಉದಾಹರಣೆ :
1.ಅಣ್ಣನು ನನ್ನನ್ನು ಕೊಂದನು.
2.ನಾನು ಕವಿತೆಯನ್ನು ಬರೆಯುತ್ತೇನೆ.
3.ಸೀತೆಯು ಹಣ್ಣನ್ನು ತಿಂದಳು
4.ಮಳೆಯು ಇಳೆಯನ್ನು ತಣಿಸಿತು.
5.ರಾಮನು ಸೇತುವೆಯನ್ನು ಕಟ್ಟಿದನು.
6.ಭೀಮನು ಬಕಾಸುರನನ್ನು ಕೊಂದನು.
7.ರಾಮನು ರಾವಣನನ್ನು ಕೊಂದನು
8.ಮಕ್ಕಳು ಪುಸ್ತಕವನ್ನು ಓದಿದರು.
9.ಜನರು ಜಾತ್ರೆಯನ್ನು ಕಂಡರು .

ಕರ್ಮಣಿ ಪ್ರಯೋಗ

‘ಕರ್ಮಪದವನ್ನು ಅನುಸರಿಸಿ ಕ್ರಿಯಾಪದ ಪ್ರಯೋಗವಾಗಿರುವುದಕ್ಕೆ ಕರ್ಮಣಿ ಪ್ರಯೋಗ ಎಂದು ಹೆಸರು”

ಉದಾ: ಕರ್ಮಪದ ಕರ್ತೃಪದ ಕ್ರಿಯಾಪದ ರಾವಣನು ರಾಮನಿಂದ ಕೊಲ್ಲಲ್ಪಟ್ಟನು

ಈ ಉದಾಹರಣೆಯಲ್ಲಿ“ರಾವಣನು” ಎಂಬ ಕರ್ಮಪದವು ಪ್ರಧಾನವಾಗಿದೆ. ಹಾಗೂ ಪ್ರಥಮ ವಿಭಕ್ತಿಯಿಂದ ಕೂಡಿದೆ.ರಾಮನಿಂದ ಎಂಬ ಕರ್ತೃ ಪದವು ಕರ್ತೃ ಪದವು ತೃತೀಯ ವಿಭಕ್ತಿಯಿಮದ ಕೂಡಿದೆ.

ಕರ್ಮಣಿ ಪ್ರಯೋಗದ ಲಕ಼ಣಗಳು

ಕರ್ತರಿ ಪ್ರಯೋಗದಲ್ಲಿ ಕರ್ತೃಪದವು ವಿಭಕ್ತಿಯನ್ನು ಅಂತ್ಯವಾಗಿ ಹೊಂದಿರುತ್ತದೆ.
ಕರ್ತರಿ ಪ್ರಯೋಗದಲ್ಲಿ ಕರ್ಮವಾಗಿದ್ದ ಪದವು ಕರ್ಮವಾಗಿದ್ದ ಪದವು ಕರ್ಮಣಿ ಪ್ರಯೋಗದಲ್ಲಿ ಪ್ರಥಮ ವಿಭಕ್ತಿಯನ್ನು ಅಂತ್ಯವಾಗಿ ಉಳ್ಳ ಕರ್ತೃ ಸ್ಥಾನವನ್ನು ಪಡೆಯುತ್ತದೆ.
ಕರ್ತೃ ಪದವು ಕರ್ಮಣಿ ಪ್ರಯೋಗದಲ್ಲಿ ತ್ರತಿಯಾ ವಿಭಕ್ತಿಯಿಂದ ಕೂಡಿದ್ದು ಮಧ್ಯದಲ್ಲಿ ಬಂದಿರುತ್ತದೆ.
ಕ್ರಿಯಾಪದವು ಅಂತ್ಯದಲ್ಲಿ ಬಂದು ಇದೂ ಧಾತುವಿಗೂ ಅಖ್ಯಾತ ಪ್ರತ್ಯಯಕ್ಕೂ ನದುವೆ “ಅಲ್ಪದು” ಎಮಬುದು ಸೇರುತ್ತದೆ.
ಕ್ರೀಯಾಪದವು ಲಿಂಗ, ವಚನ, ಪುರುಷಗಳನ್ನು, ಅನುಸರಿಸುತ್ತದೆ.
ಉದಾಹರಣೆ:

ಬಕಾಸುರನು ಭೀಮನಿಂದ ಕೊಲ್ಲಲ್ಪಟ್ಟಿತ್ತು.
ನಾನು ಅಣ್ಣನಿಂದ ಕರೆಯಲ್ಪಟ್ಟನು.
ಪುಸ್ತಕವು ಮಕ್ಕಳಿಂದ ಓದಲ್ಪಟ್ಟಿತು.
ಜಾತ್ರೆಯು ಜನರಿಂದ ಮಾಡಲ್ಪಟ್ಟಿತ್ತು.

ರಾವಣನು ರಾಮನಿಂದ ಕೊಲ್ಲಲ್ಪಟ್ಟನು.
ಕವಿತೆಯು ನನ್ನಿಂದ ಬರೆಯಲ್ಪಟ್ಟಿತ್ತು.,
ಹಣ್ಣು ಸೀತೆಯಿಂದ ತಿನ್ನಲ್ಪಟ್ಟಿತ್ತು.
ಇಳೆಯು ಮಳೆಯಿಂದ ತಣಿಯಲ್ಪಟ್ಟಿತ್ತು.
ಸೆತುವೆಯು ರಾಮನಿಂದ ಕಟ್ಟಲ್ಪಟ್ಟಿತ್ತು.

ಕಾಲ ಪಲ್ಲಟ

“ಒಂದೂ ಕಾಲದ ಕ್ರಿಯಾಪದವನ್ನು (ಭೂತಕಾಲ, ವರ್ತಮಾನ, ಭವಿಷ್ಯತ್) ಬಳಸುವ ಜಾಗದಲ್ಲಿ ಮತ್ತೂಂದು ಕಾಲದ ರೂಪಗಳನ್ನು ಬಳಸುತ್ತೇವೆ. ಈ ರೀತೀಯ ಬದಲಾವಣೆಯನ್ನು ಕಾಲ ಪಲ್ಲಟ ಅಥವ ಕಾಲ ಬದಲಾವಣೆ ಎನ್ನುವರು.
ಉದಾಹರಣೆ :ನಾನು ಮುಂದಿನ ವರ್ಷ ಮೈಸೂರು ದಸರೆಗೆ ಹೋಗುತ್ತೇನೆ.

ಮೇಲಿನ ಉದಾ: “ಹೋಗುತ್ತೇನೆ” ಎಂಬ ಕ್ರಿಯಾಪದವೇ ವರ್ತಮಾನ ಕಾಲದಲ್ಲಿ ಪ್ರಯೋಗವಾಗಿದೆ.ಭವಿಷ್ಯತ್ ಕಾಲದ “ಹೋಗುವೆನು”ಎಂದು ಪ್ರಯೋಗವಾಗುವ ಬದಲು “ಹೋಗುತ್ತೇನೆ” ಎಂಬ ವರ್ತಮಾನ ಕಾಲದಲ್ಲಿ ಪ್ರಯೋಗವಾಗಿದೆ.ಅದುದರಿಮದ ಇದು ಕಾಲ ಪಲ್ಲಟವಾಗಿದೆ.

ಉದಾಹರಣೆ:

ನಿನ್ನೆ ನಾನು ದೇವರ ದರ್ಶನಕ್ಕೆ ಹೋಗುವೆನು.ಮೇಲಿನ ಉದಾಯದಲ್ಲಿ “ಹೋಗಿದ್ದೆನು” ಎಂದು ಪ್ರಯೋಗವಾಗುವ ಬದಲು “ಹೋಗುವೆನು” ಎಂದು ಪ್ರಯೋಗವಾಗಿ ಕಾಲ ಪಲ್ಲಟವಾಗಿದೆ.
ಉದಾ: ಈ ರಸ್ತೆ ಹಾಸನಕ್ಕೆ ಹೋಗುತ್ತದೆ, ಈ ರಸ್ತೆ ಹಾಸನಕ್ಕೆ ಹೋಗುವುದು

ಇತರೆ ಪ್ರಮುಖ ವಿಷಯದ ಮಾಹಿತಿ ಲಿಂಕ್

ಚುನಾವಣಾ ಆಯೋಗ ಮಾಹಿತಿ

ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು

ಗಿರೀಶ್ ಕಾರ್ನಾಡ್ ಅವರ ಬಗ್ಗೆ ವಿವರಣೆ

ಲೇಖನ ಚಿಹ್ನೆ ಕನ್ನಡ ಮಾಹಿತಿ

ಇತರೆ ವೆಬ್ಸೈಟ್ ಲಿಂಕ್

Leave a Reply

Your email address will not be published. Required fields are marked *