Swami Vivekananda in Kannada , Swami Vivekananda Information in Kannada , ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ , ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ , swami vivekananda thoughts in kannada , inspiration swami vivekananda quotes in kannada
Swami Vivekananda in Kannada Prabandha in Kannada
ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಈ ಲೇಖನದಲ್ಲಿ ತಿಳಿಸಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
swami vivekananda information in kannada

swami vivekananda jivan charitra in kannada
ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ

ಸ್ವಾಮಿ ವಿವೇಕಾನಂದರ ಬಗ್ಗೆ ಪೀಠಿಕೆ
ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ತಾಯಿ ನಾಡಿನ ಹಿರಿಮೆಯನ್ನು ಪಶ್ಚಿಮ ದೇಶಗಳಿಗೆ ತೋರಿಸಿಕೊಟ್ಟ ಸ್ವಾಮಿ ವಿವೇಕಾನಂದರು ಭಾರತೀಯರಿಗೆ ನೀಡಿದ ಕರೆಯಿದು.
ಸ್ವಾಮಿ ವಿವೇಕಾನಂದರು ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರು ನಿರ್ಭಯತೆ ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಣಿತರಾಗಿದ್ದಾರೆ. ಇವರ ಜನ್ಮದಿನವಾದ ಜನವರಿ 12 ರಂದು ರಾಷ್ಟ್ರೀಯ ಯುವ ದಿನ ವೆಂದು ಆಚರಿಸಲಾಗುತ್ತದೆ.
ಸ್ವಾಮಿ ವಿವೇಕಾನಂದರ ಬಗ್ಗೆ ವಿವರಣೆ
ಸ್ವಾಮಿ ವಿವೇಕಾನಂದರು ಭಾರತದಲ್ಲಿ ಜನಿಸಿದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು.
- ವಿವೇಕಾನಂದರ ಜನನ :- ಜನವರಿ 12, 1863 ರಂದು ಕೊಲ್ಕತ್ತಾ ದಲ್ಲಿ ಜನಿಸಿದರು.
- ಇವರ ಬಾಲ್ಯದ ಹೆಸರು :- ನರೇಂದ್ರನಾಥ ದತ್ತ
- ತಂದೆ :- ವಿಶ್ವನಾಥ ದತ್ತ
- ತಾಯಿ :- ಭುವನೇಶ್ವರಿ ದೇವಿ
ಕನ್ನಡದಲ್ಲಿ ಸ್ವಾಮಿ ವಿವೇಕಾನಂದ ಭಾಷಣ
Swami vivekananda Biography in Kannada

ಸ್ವಾಮಿ ವಿವೇಕಾನಂದರು ಸತ್ಯ ವಾಗ್ಮಿ, ಉತ್ತಮ ವಿದ್ವಾಂಸ ಹಾಗೂ ಕ್ರೀಡಾಪಟು ಬಾಲ್ಯದಿಂದಲು ಧಾರ್ಮಿಕ ಸ್ವಭಾವದವರಾಗಿದ್ದರು ಮತ್ತು ದೇವರ ಪ್ರಾಪ್ತಿಯ ಬಗ್ಗೆ ಚಿಂತಿತರಾಗಿದ್ದರು. ಭೂಮಿಯ ಮೇಲೆ ತಾವು ಬದುಕಿದ್ದ ಅಲ್ಪಾವಧಿಯಲ್ಲಿಯೇ ವಿವೇಕಾನಂದರು ಭಾರತವನ್ನು ಜಗತ್ತಿಗೆ ಪರಿಚಯ ಮಾಡಿಕೊಡುವುದರಲ್ಲಿ ಮತ್ತು ಭಾರತೀಯರಿಗೆ ತಮ್ಮ ಸಂಸ್ಕೃತಿಯ ಪರಂಪರೆಯನ್ನು ಹಾಗು ಕರ್ತವ್ಯವನ್ನು ತಿಳಿಸಿ ಕೊಡುವಲ್ಲಿ ಯಶಸ್ಸು ಗಳಿಸಿದರು.
ಅಮೇರಿಕಾದ ಚಿಕಾಗೋ ನಗರದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಸನಾತನ ಹಿಂದು ಧರ್ಮದ ಸಂದೇಶವನ್ನು ಪ್ರಪಂಚಕ್ಕೆ ಸಾರಿದರು. ಈ ಸಮ್ಮೇಳನ ದಲ್ಲಿ ಅವರು ಮಾಡಿದ ಭಾಷಣ ಪಶ್ಚಿಮ ದೇಶದವರ ಕಣ್ಣನ್ನು ತೆರೆಸಿತು ಅದು ವರೆಗೂ ಅವರು ಭಾರತವನ್ನು ಮೂಢ ನಂಬಿಕೆಗಳ ಮತ್ತು ಅನಾಗರಿಕರ ದೇಶ ಎಂದು ತಿಳಿದಿದ್ದರು.
ವಿವೇಕಾನಂದರ ಭಾಷಣ ಹಿಂದೂ ಧರ್ಮದ ಹಿರಿಮೆಯನ್ನು ಮತ್ತು ಭಾರತದ ಸಂಸ್ಕೃತಿಯನ್ನು ಅವರಿಗೆ ಪರಿಚಯಿಸಿತ್ತು. ನಂತರ 1897 ಜನವರಿ 15 ರಂದು ಭಾರತಕ್ಕೆ ಹಿಂದುರಿಗಿದ ಅವರು ತಮ್ಮ ಸಂದೇಶವನ್ನು ಭಾರತದಲ್ಲಿ ಹರಡಿ ಸಿದ್ದರು. ನಾವು ನಮ್ಮ ಕಾಲ ಮೇಲೆ ನಿಂತು ಮನುಷ್ಯ ರಾಗೋಣ ನಮಗಿದು ಪುರುಷ ಸಿಂಹರನ್ನು ನಿರ್ಮಿಸುವ ಧೈರ್ಯ ಬೇಕು. ಸಿದ್ಧಾಂತ ಬೇಕು ಮತ್ತು ಸರ್ವತೋಮುಖಗಳನ್ನಾಗಿ ಮಾಡುವ ಒಳ್ಳೆಯ ವಿದ್ಯಾಭ್ಯಾಸಬೇಕು.
ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಯಾವುದು ದುರ್ಬಲರನ್ನಾಗಿ ಮಾಡುವುದು, ಅದನ್ನು ವಿಷದಂತೆ ತೇಜಿಸಬೇಕು. ನಾವು ದೇವರ ಮಕ್ಕಳು ನಮ್ಮಲ್ಲಿ ನಮಗೆ ನಂಬಿಕೆ ಇರಬೇಕು. ಹೀಗೆ ವಿವೇಕಾನಂದರು ಭಾರತೀಯರನ್ನು ಎಚ್ಚರಿಸಿ ಅವರಲ್ಲಿ ಹೊಸ ಹುರುಪನ್ನು ತುಂಬಿಸುತ್ತಿದ್ದರು.
ಸ್ವಾಮಿ ವಿವೇಕಾನಂದರು ತತ್ವಜ್ಞಾನಿಗಳು, ದೈವಭಕ್ತರು, ಕರ್ಮಯೋಗಿಗಳು, ಸಮಾಜ ಸುಧಾರಕರು ಮತ್ತು ದೇಶ ಭಕ್ತರು ಭಾರತೀಯರಲ್ಲಿ ಇರುವ ಲೋಪ ದೋಷಗಳನ್ನು ತೋರಿಸಿ ಪರಿಹಾರವನ್ನು ಹೇಳುತ್ತಿದ್ದ ರು. ಸಹಕಾರ ಮನೋಭಾವದ ಅಭಾವ, ಅಸೂಯೆ, ಸೋಮಾರಿತನ, ಸ್ತ್ರೀಯರ ವಿದ್ಯಾಭ್ಯಾಸಕ್ಕೆ ಗಮನ ಹರಿಸದಿರುವುದು, ಜಾತಿ ಭೇದ, ಪ್ರಾದೇಶಿಕತೆ ಅಂತಅಭಿಮಾನ ಇವುಗಳನ್ನೆಲ್ಲ ಖಂಡಿಸುತ್ತಿದ್ದರು. ವಿವೇಕಾನಂದರ ಬೋಧನೆಗಳು ಹೆಚ್ಚಾಗಿ ರಾಮ ಕೃಷ್ಣರ ದೈವಿಕ ಅಭಿವ್ಯಕ್ತಿಗಳ ಅಧ್ಯಾತ್ಮಿಕ ಬೋಧನೆಗಳು ಮತ್ತು ಅದ್ವೈತ ವೇದಾಂತ ತತ್ವಶಾಸ್ತ್ರದ ವೈಯಕ್ತಿಕ ಆಂತರಿಕ ತೆಯನ್ನು ಆಧರಿಸಿವೆ.
ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ

ಅವರ ಪ್ರಕಾರ ಜೀವನದ ಅಂತಿಮ ಗುರಿ ಆತ್ಮದ ಸ್ವಾತಂತ್ರ್ಯವನ್ನು ಸಾಧಿಸುವುದು ಮತ್ತು ಅದು ಒಬ್ಬರ ಧರ್ಮದ ಸಂಪೂರ್ಣ ತೆಯನ್ನು ಒಳಗೊಂಡಿರುವುದು ವಿವೇಕಾನಂದರ ಬೋಧನೆಗಳು ಯುವಕರನ್ನು ಮಾತ್ರವಲ್ಲ, ಅವುಗಳು ಇಡೀ ಜಗತ್ತನ್ನು ಪ್ರೇರೇಪಿಸಿತು. ಅವರ ಉಪನ್ಯಾಸ ಗಳು ಬರಹಗಳು ಪತ್ರಗಳು, ಕವಿತೆಗಳು, ವಿಚಾರಗಳು ಇಡೀ ವಿಶ್ವಕ್ಕೆ ಪ್ರೇರಣೆ ಯಾಯಿತು.
ಹೀಗೆ ವಿವೇಕಾನಂದರು ಒಂದು ರಾಷ್ಟ್ರವಾಗಿ ಭಾರತದ ಏಕತೆಗೆ ನಿಜವಾದ ಅಡಿಪಾಯವನ್ನು ಹಾಕಿದರು. ಹೀಗೆ ಭೂಮಿಯ ಮೇಲೆ ತಾವು ಬದುಕಿದ್ದ ಅಲ್ಪಾವಧಿಯ ಲ್ಲಿಯೇ ವಿವೇಕಾನಂದರು ಭಾರತವನ್ನು ಮತ್ತು ಇಲ್ಲಿಯ ಸಂಸ್ಕೃತಿಯನ್ನು ಇಡೀಯ ಜಗತ್ತಿಗೆ ಪರಿಚಯ ಮಾಡಿಕೊಟ್ಟ ರು. ನಂತರ 1902 ಜುಲೈ 4 ರಂದು ಧ್ಯಾನ ಸಿದ್ದ ಕರ್ಮಯೋಗಿ ವಿವೇಕಾನಂದರು ಧ್ಯಾನ ಮಗ್ನರಾಗಿರುವಾಗಲೇ ಮರಣ ಹೊಂದಿದರು.
ಉಪಸಂಹಾರ
ಸ್ವಾಮಿ ವಿವೇಕಾನಂದರ ಅಸಾಧಾರಣ ಪ್ರತಿಭೆ ಮತ್ತು ಅವರ ದೂರದೃಷ್ಟಿ ಎಷ್ಟೋ ಅಸಾಧ್ಯತೆಗಳನ್ನು ಸಾಧ್ಯಗೊಳಿಸಿವೆ. ಹೀಗಾಗಿ ನಾವೆಲ್ಲರೂ ಅವರ ಚಿಂತನೆಗಳನ್ನು ನಮ್ಮ ಜೀವನ ದಲ್ಲಿ ಅಳವಡಿಸಿಕೊಂಡು ಉತ್ತಮ ಕಾರ್ಯಗಳನ್ನು ಮಾಡೋಣ. ಹಾಗೆ ಯೇ ಅವರ ಸಂದೇಶ ಗಳನ್ನು ಎಲ್ಲರಿಗೂ ಸಾರೋಣ.
Inspiration Swami Vivekananda Quotes in Kannada



FAQ
ಸ್ವಾಮಿ ವಿವೇಕಾನಂದರ -ತಾಯಿಯ ಹೆಸರು?
ಭುವನೇಶ್ವರಿ ದೇವಿ
ಸ್ವಾಮಿ ವಿವೇಕಾನಂದರ ಗುರುಗಳು ಯಾರು?
ರಾಮಕೃಷ್ಣ ಪರಮಹಂಸ
ಇತರ ಪ್ರಮುಖ ವಿಷಯಗಳ ಮಾಹಿತಿ
- ಸರ್.ಎಂ. ವಿಶ್ವೇಶ್ವರಯ್ಯನವರ ಬಗ್ಗೆ
- ನಾಗಚಂದ್ರ ಕವಿ ಪರಿಚಯ
- ಕವಿರಾಜಮಾರ್ಗ ಬಗ್ಗೆ ಮಾಹಿತಿ
- ದೇವನೂರು ಮಹಾದೇವ ಕವಿ ಪರಿಚಯ
- ರಾಘವಾಂಕ ಕವಿ ಪರಿಚಯ
- ಕನ್ನಡ ಕವಿಗಳ ಹೆಸರು ಮತ್ತು ಕಾವ್ಯನಾಮ
- ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಚರಿತ್ರೆ