ಕನ್ನಡ ನೀತಿ ಕಥೆಗಳು 2024 | Moral Stories in Kannada

ಕನ್ನಡ ನೀತಿ ಕಥೆಗಳು | Story in Kannada Best No1 Moral Stories in Kannada

Story in Kannada, Moral Stories in Kannada , ಕನ್ನಡ ನೀತಿ ಕಥೆಗಳು, ಕನ್ನಡ ಸಣ್ಣ ನೀತಿ ಕಥೆಗಳು, ಕನ್ನಡ ಮಕ್ಕಳ ಸಣ್ಣ ಕಥೆಗಳು, ಕನ್ನಡ ಕಥೆಗಳು, motivational story in kannada

Story in Kannada

ಈ ಲೇಖನದದಲ್ಲಿ ಹಲವಾರು ಕನ್ನಡ ನೀತಿಕತೆಗಳನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

Kannada Neeti Kathegalu

ಒಮ್ಮೆ ಸತ್ಯ ಸುಳ್ಳು ಎರಡೂ ವಾಕಿಂಗ್ ಹೋಗಿದ್ದು, ಹಾದಿಯಲ್ಲಿ ಒಂದು ಸುಂದರ ನದಿ ಕಂಡಿತು. ಸರಿ, ಎರಡೂ ತಮ್ಮ ವಸ್ತ್ರಗಳನ್ನ ತೆಗೆದು ಸ್ನಾನಕ್ಕೆ ಇಳಿದವು. ಸುಂದರ ಸಂಜೆಯಲ್ಲಿ ತಂಪಾದ ನದಿಯಲ್ಲಿ ಈಜುತ್ತಾ ಮೈ ಮರೆತವು.
ಒಂದಷ್ಟು ಹೊತ್ತಾದ ಮೇಲೆ ಸುಳ್ಳು ಮೇಲೆದ್ದು ಬಂತು. ಸತ್ಯ ಇನ್ನೂ ಮೈ ಮರೆತು ಈಜುತ್ತಾ ಇತ್ತು. ಸುಳ್ಳು ಅತ್ತಿತ್ತ ನೋಡಿ ಸತ್ಯದ ಬಟ್ಟೆಗಳನ್ನ ಧರಿಸಿ ಹೊರಟು ಬಿಟ್ಟಿತು. ಸಾಕಷ್ಟು ಸಮಯದ ನಂತರ ಸತ್ಯ ಮೇಲೆದ್ದು ಬಂದಾಗ ಅದರ ವಸ್ತ್ರಗಳೇ ಇರಲಿಲ್ಲ.
ಸತ್ಯಕ್ಕೆ ಸುಳ್ಳಿನ ವಸ್ತ್ರ ಧರಿಸಲು ಹಿಂಸೆಯೆನಿಸಿತು, ಅಸಹ್ಯ ಎನಿಸಿತು. ಅಂದಿನಿಂದ ಸತ್ಯ ಬೆತ್ತಲಾಗೆ ತೆರೆಮರೆಯಲ್ಲೇ ಓಡಾಡಲು ಶುರುಮಾಡಿತು. ಸುಳ್ಳು ಸತ್ಯದ ಹೊದಿಕೆ ಹೊದ್ದು ತಿರುಗುತ್ತಲೇ ಇದೆ ರಾಜಾರೋಷವಾಗಿ.

ಮಕ್ಕಳು ನಮ್ಮ ಮಾತು ಕೇಳುವುದಿಲ್ಲ. ಆದರೆ ನಮ್ಮನ್ನು ಅನುಸರಿಸುತ್ತಾರೆ

ಕನ್ನಡ ಕಥೆಗಳು

download 13 1
ಕನ್ನಡ ನೀತಿ ಕಥೆಗಳು | Story in Kannada Best No1 Moral Stories in Kannada

ಎಂಟು ವರ್ಷದ ಮಗುವಿನೊಂದಿಗೆ ಮಹಿಳೆ ರೈಲಲ್ಲಿ ಪ್ರಯಾಣಿಸುತ್ತಿದ್ದಳು.ಅಮ್ಮ ಮತ್ತು ಮಗು ಪುಸ್ತಕ ಓದುತ್ತಿದ್ದರು.
ಇದನ್ನು ಗಮನಿಸುತ್ತಿದ್ದ ಪಕ್ಕದ ಮುದುಕನೊಬ್ಬ ಕೇಳಿದ
“ಅಮಾ ಇಂದಿನ ಜಗತ್ತಿನಲ್ಲಿ ಮಕ್ಕಳು ಮೊಬೈಲ್ ಮತ್ತು ಟ್ಯಾಬ್ ನಲ್ಲಿ ಆಟವಾಡ್ತಾರೆ.ನಿನ್ನೆ ಹುಟ್ಟಿದ ಮಗುವೂ ಮೊಬೈಲ್ ಟ್ಯಾಬಿಗೆ ಮರುಳಾಗಿದೆ. ನಿಮ್ಮ ಮಗು ಪುಸ್ತಕ ಓದುತ್ತಿದೆ.ನಿಮ್ಮ ಯಾವ ಮಾತಿನಿಂದಾಗಿ ಇಂತಹ ಬದಲಾವಣೆ ಸಾಧ್ಯವಾಯಿತು.?
ಮಹಿಳೆ ಸಾವಧಾನವಾಗಿ ಉತ್ತರಿಸಿದಳು….
“ಮಕ್ಕಳು ನಮ್ಮ ಮಾತು ಕೇಳುವುದಿಲ್ಲ. ಆದರೆ ನಮ್ಮನ್ನು ಅನುಸರಿಸುತ್ತಾರೆ”

ಕಮಲ ಅಹಂಕಾರ

ಕನ್ನಡ ನೀತಿ ಕಥೆಗಳು | Story in Kannada Best No1 Moral Stories in Kannada
ಕನ್ನಡ ನೀತಿ ಕಥೆಗಳು | Story in Kannada Best No1 Moral Stories in Kannada

ಕಮಲ ಮತ್ತು ವಿಮಲ ಇಬ್ಬರೂ ಓರಗಿತ್ತಿಯರು. ಕಮಲ ಪಟ್ಟಣದಲ್ಲಿದಲ್ಲಿದ್ದರೆ ವಿಮಲನ ವಾಸ ಹಳ್ಳಿಯಲ್ಲಿ ಕಮಲನಿಗೆ ಇಬ್ಬರು ಗಂಡು ಮಕ್ಕಳು ವಿಮಲನಿಗೆ ಎರಡು ಹೆಣ್ಣು ಕಮಲನ ಮಕ್ಕಳಿಗೆ ಪೇಟೆಯ ಸವಲತ್ತುಗಳ ನಡುವೆ ಆಂಗ್ಲಮಾಧ್ಯಮ ಶಿಕ್ಷಣವಾದರೆ ವಿಮಲನ ಮಕ್ಕಳು ಹಳ್ಳಿಯ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಕಮಲಳಿಗೆ ವಿಮಲನ ಕಂಡರೆ ಏನೋ ಅಸಡ್ಡೆ . ತಾವೇ ಗ್ರೇಟ್ ಎನ್ನುವ
ಮನೋಭಾವ .
ಹಳ್ಳಿ ಮನೆಗೆ ಬಂದಾಗಲೆಲ್ಲಾ ಚುಚ್ಚು ಮಾತುಗಳಿಂದ ತಂಗಿಯನ್ನು ನಿಂದಿಸುತ್ತಿದ್ದಳು.ತನಗೋ ಗಂಡು ಮಕ್ಕಳು,ಪೇಟೆಯ ಶಾಲೆಯ ಶಿಕ್ಷಣ ಓದಿ ವಿದ್ಯಾವಂತರಾದರೆಂಬ ಭರವಸೆ.

ತಂಗಿಯ ಹೆಣ್ಣು ಮಕ್ಕಳು ಹಳ್ಳಿಯ ಶಿಕ್ಷಣದಲ್ಲಿ ಬೆಳಗಿನ ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟ ನಡೆಸಲು ಸಾಧ್ಯವಿಲ್ಲ ಎಂಬ ಪೊಳ್ಳು ನಂಬಿಕೆಯಲ್ಲಿ ಅಹಂಕಾರದಿಂದ ಮೇರೆಯುವಳು. ಆದರೆ ವರ್ಷಗಳು ಉರುಳಿದವು.ಓರಗಿತ್ತಿಯ ಮಕ್ಕಳಿಬ್ಬರು ಶ್ರದ್ಧೆಯಿಂದ ಕಲಿತು ವಿದ್ಯಾವಂತರಾಗಿ ವಿದೇಶದಲ್ಲಿರುವ ವರವನ್ನು ವರಿಸಿ ಹೆತ್ತವರನ್ನು ತಮ್ಮ ಜೊತೆ ಕರೆದುಕೊಂಡು ಹೋದರು. ಇತ್ತ ಕಮಲನ ಮಕ್ಕಳಿಬ್ಬರು ಅಷ್ಟೇನೂ ಓದದೆ ಕೊನೆಗೆ ಹೆತ್ತವರನ್ನೂ ನೋಡಿಕೊಳ್ಳಲಾಗದೆ ಅನಾಥಾಶ್ರಮಕ್ಕೆ ಸೇರಿಸಿದರು, ಅಹಂಕಾರದಿ ಮೆರೆಯುತ್ತಿದ್ದ ಕಮಲನಿಗೆ ತಕ್ಕ ಶಾಸ್ತಿ ಆಯಿತು

ಶ್ರಮದ ಫಲ

ಕನ್ನಡ ನೀತಿ ಕಥೆಗಳು | Story in Kannada Best No1 Moral Stories in Kannada
ಕನ್ನಡ ನೀತಿ ಕಥೆಗಳು | Story in Kannada Best No1 Moral Stories in Kannada

ತುಂಟ ರಾಮು ನಾಲ್ಕನೆಯ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ, ಆಟವಾಡುವುದೆಂದರೆ ಅವನಿಗೆ ಬಹಳ ಇಷ್ಟ ಆಟವಾಡುತ್ತಲೇ ಇರುತ್ತಿದ್ದ ಪರೀಕ್ಷೆಗೆ ಇನ್ನೂ ಕೆಲವೇ ದಿನಗಳ ಇರುವಾಗ ಹಗಲೂ-ರಾತ್ರಿ ಓದುತ್ತಿದ್ದ ಸರಿಯಾದ ಪೂರ್ವಸಿದ್ಧತೆ ಇಲ್ಲದೆ ಪರೀಕ್ಷೆ ಬರೆಯುತ್ತಿರುವುದರಿಂದ ಅವನಿಗೆ ಕಡಿಮೆ ಅಂಕೆಗಳು ಬರುತ್ತಿತ್ತು.


ಅವನ ಅಂಕ ಪಟ್ಟಿಯನ್ನು ಕಂಡು ಅವನ ತಂದೆ ಬೈದಾಗ “ಅಪ್ಪಾ ನಾನು ಹಗಲೂ ರಾತ್ರಿ ಓದಿ ಕಷ್ಟಪಟ್ಟಿದೆ ಆದರೆ ನನಗೆ ಹೆಚ್ಚಿನ ಅಂಕಗಳು ಬರುತ್ತಿಲ್ಲ, ನನ್ನ ಜೊತೆಗಿನ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲೂ ಆಟ ಆಡುತ್ತಾರೆ, ಆದರೂ ಅವರಿಗೆ ಒಳ್ಳೆಯ ಅಂಕಗಳು ಬರುತ್ತದೆ ಅವರೆಲ್ಲ ಸುಲಬವಾಗಿ ಓದುವ ಯಾವುದೋ ದಾರಿಯನ್ನು ಕಂಡುಕೊಂಡಿದ್ದಾರೆ’ ಎನ್ನುತ್ತಿದ್ದ
ಒಮ್ಮೆ ಊರಿನಿಂದ ಬಂದಿದ್ದ ರಾಮುವಿನ ತಾತ, ಈ ಮಾತು ಗಳನ್ನು ಕೇಳಿಸಿಕೊಂಡು ಮೊಮ್ಮಗನಿಗೆ ಬುದ್ಧಿಹೇಳಿ, ಸರಿ ದಾರಿಗೆ ತರಬೇಕೆಂದು ನಿಶ್ಚಯಿಸಿದರು.

ಮರುದಿನ ಸಂಜೆ ರಾಮು ಆಟವಾಡಲು ಹೊರಡುತ್ತಿರುವಾಗ ಅವನನ್ನು ಕರೆದು, “ಇಂದು ಸಂಜೆ ನಾನು ನಿನಗೆ ಒಂದು ಕಥೆ ಹೇಳುತ್ತೇನೆ. ಮನೆಯಲ್ಲೇ ಇರು’ ಎಂದು ಪುಸಲಾಯಿಸಿದರು.
ರಾಮು ಮನೆಯಲ್ಲೇ ಉಳಿದ.
“ಮುನಿ ಶ್ರೇಷ್ಠರಾದ ಭರದ್ವಾಜರು ದೊಡ್ಡ ತಪಸ್ವಿಗಳು, ಜ್ಞಾನಿಗಳೂ ಆಗಿದ್ದರು. ಅವರಿಗೆ ಯವಕ್ರೀತನೆಂಬ ಮಗನಿದ್ದ.

ಅವನಿಗೆ ಚಿಕ್ಕಂದಿನಿಂದಲೂ ದೊಡ್ಡವೇದ ಪಾರಂಗತನಾದಬೇಕೆಂಬ ಆಸೆ ಇತ್ತು. ಆದರೆ ಅದಕ್ಕಾಗಿ ಗುರುಗಳ ಬಳಿ ಹೋಗಿ ಹಲವು ವರ್ಷಕಾಲಗಳ ಕಷ್ಟಪಟ್ಟು ಅಭ್ಯಾಸ ಮಾಡಲು ಇಷ್ಟ ಇರಲಿಲ್ಲ. ಆದ್ದರಿಂದ ಅವನು ಇಂದ್ರನ ಅನುಗ್ರಹ ಕೋರಿ ಘೋರ ತಪಸ್ಸು ಮಾಡತೊಡಗಿದ.

ಆ ಬಾಲಕನ ಕ್ರಮವನ್ನು ಕಂಡು ಕನಿಕರಗೊಂಡ ಇಂದ್ರನು ಪ್ರತ್ಯಕ್ಷನಾಗಿ, “ನಿನಗೇನು ಬೇಕು ಮಗು?” ಎಂದ.
“ನಾನು ಸಕಲ ವೇದಶಾಸ್ತ್ರಪಾರಂಗತನಾಗಬೇಕು. ಎಲ್ಲರನ್ನೂ ಮೀರಿಸು ವಂತಾಗಬೇಕು. ಗುರುಗಳ ಮೂಲಕ ಕಲಿಯಲು ಹೋದರೆ ಅದಕ್ಕೆ ಹೆಚ್ಚು ಕಾಲ ಹಿಡಿಯುತ್ತದೆ.

ಅಲ್ಲದೆ ದಿನವೂ ಶ್ರಮಪಡಬೇಕು ಅದಕ್ಕಾಗಿ ನಾನು ನಿಮ್ಮನ್ನು ಕುರಿತು ತಪಸ್ಸು ಮಾಡಿದೆ. ತಾವು ನನ್ನನ್ನು ಅನುಗ್ರಹಿಸಿ, ವಿದ್ಯಾಜ್ಞಾನ ನೀಡಿ’ ಎಂದ ಯವಕ್ರೀತ
ಆ ನುಡಿಗಳನ್ನು ಕೇಳಿ ನಕ್ಕ ಇಂದ್ರ, “ಮಗು, ವೇದಗಳನ್ನು ತಪಸ್ಸು ಮಾಡಿ ಕಲಿಯಲು ಸಾಧ್ಯವಿಲ್ಲ. ಸಮಯ ವ್ಯರ್ಥ ಮಾಡದೆ ಯೋಗ್ಯ ಗುರುಗಳ ಬಳಿ ಹೋಗಿ ವಿದ್ಯಾದಾನ ಪಡೆ.

Story in Kannada Kathegalu

ಮರುದಿನ ಸಂಜೆ ರಾಮು ಆಟವಾಡಲು ಹೊರಡುತ್ತಿರು ವಾಗ ಅವನನ್ನು ಕರೆದು, “ಇಂದು ಸಂಜೆ ನಾನು ನಿನಗೆ ಒಂದು ಕಥೆ ಹೇಳುತ್ತೇನೆ. ಮನೆಯಲ್ಲೇ ಇರು’ ಎಂದು ಪುಸಲಾಯಿಸಿದರು.
ರಾಮು ಮನೆಯಲ್ಲೇ ಉಳಿದ.
“ಮುನಿ ಶ್ರೇಷ್ಠರಾದ ಭರದ್ವಾಜರು ದೊಡ್ಡ ತಪಸ್ವಿಗಳು, ಜ್ಞಾನಿಗಳೂ ಆಗಿದ್ದರು. ಅವರಿಗೆ ಯವಕ್ರೀತನೆಂಬ ಮಗನಿದ್ದ. ಅವನಿಗೆ ಚಿಕ್ಕಂದಿನಿಂದಲೂ ದೊಡ್ಡವೇದ ಪಾರಂಗತನಾದಬೇಕೆಂಬ ಆಸೆ ಇತ್ತು.

ಆದರೆ ಅದಕ್ಕಾಗಿ ಗುರುಗಳ ಬಳಿ ಹೋಗಿ ಹಲವು ವರ್ಷಕಾಲಗಳ ಕಷ್ಟಪಟ್ಟು ಅಭ್ಯಾಸ ಮಾಡಲು ಇಷ್ಟ ಇರಲಿಲ್ಲ. ಆದ್ದರಿಂದ ಅವನು ಇಂದ್ರನ ಅನುಗ್ರಹ ಕೋರಿ ಘೋರ ತಪಸ್ಸು ಮಾಡತೊಡಗಿದ. ಆ ಬಾಲಕನ ಕ್ರಮವನ್ನು ಕಂಡು ಕನಿಕರಗೊಂಡ ಇಂದ್ರನು ಪ್ರತ್ಯಕ್ಷನಾಗಿ, “ನಿನಗೇನು ಬೇಕು ಮಗು?” ಎಂದ.


“ನಾನು ಸಕಲ ವೇದಶಾಸ್ತ್ರಪಾರಂಗತನಾಗಬೇಕು. ಎಲ್ಲರನ್ನೂ ಮೀರಿಸು ವಂತಾಗಬೇಕು. ಗುರುಗಳ ಮೂಲಕ ಕಲಿಯಲು ಹೋದರೆ ಅದಕ್ಕೆ ಹೆಚ್ಚು ಕಾಲ ಹಿಡಿಯುತ್ತದೆ. ಅಲ್ಲದೆ ದಿನವೂ ಶ್ರಮಪಡಬೇಕು. ಅದಕ್ಕಾಗಿ ನಾನು ನಿಮ್ಮನ್ನು ಕುರಿತು ತಪಸ್ಸು ಮಾಡಿದೆ. ತಾವು ನನ್ನನ್ನು ಅನುಗ್ರಹಿಸಿ, ವಿದ್ಯಾಜ್ಞಾನ ನೀಡಿ’ ಎಂದ ಯವಕ್ರೀತ
ಆ ನುಡಿಗಳನ್ನು ಕೇಳಿ ನಕ್ಕ ಇಂದ್ರ, “ಮಗು, ವೇದಗಳನ್ನು ತಪಸ್ಸು ಮಾಡಿ ಕಲಿಯಲು ಸಾಧ್ಯವಿಲ್ಲ. ಸಮಯ ವ್ಯರ್ಥ ಮಾಡದೆ ಯೋಗ್ಯ ಗುರುಗಳ ಬಳಿ ಹೋಗಿ ವಿದ್ಯಾದಾನ ಪಡೆ.

Motivational Story in Kannada

ತೆಗೆದುಕೊಳ್ಳಲಿದ್ದೇನೆ’ ಎಂದು ಘೋಷಿಸಿದನು.
ಈಗ ಮಾತ್ರ ಆ ವ್ಯಾಪಾರಿಯು ಬೆಪ್ಪಾದನು. ‘ಈಗ ನಾನು ಇವನು ಹೇಳಿದ್ದೆಲ್ಲ ನಿಜವೆಂದು ಒಪ್ಪಿಕೊಂಡರೆ ನನ್ನಲ್ಲಿರುವ ಎಲ್ಲ ವಸ್ತುವನ್ನೂ ಇವನಿಗೆ ಒಪ್ಪಿಸಬೇಕು. ಇಲ್ಲವೆಂದರೂ ಎಲ್ಲವನ್ನೂ ಸ್ಪರ್ಧೆಯ ನಿಯಮದಂತೆ ಒಪ್ಪಿಸಬೇಕು. ಆದ್ದರಿಂದ ಕಳ್ಳನಾಗುವುದ ಕ್ಕಿಂತ ಸೋಲುವುದೇ ಉತ್ತಮ’ ಎಂದು ಯೋಚಿಸಿ, ವಸ್ತುವನ್ನು ಕೊಟ್ಟುಬಿಟ್ಟ
ವಸ್ತುಗಳನ್ನು ಪಡೆದುಕೊಂಡು, ಆನಂದದಿಂದ ಬೀಗುತ್ತಾ ತಮ್ಮ ಸ್ಥಳಗಳಿಂದ ಏಳಲಾರಂಭಿಸಿದರು ಮೂವರು.
ಅಷ್ಟರಲ್ಲಿ ಆ ವ್ಯಾಪಾರಿಯು, “ಇದೇನು ಇಷ್ಟು ಬೇಗನೇ ಎದ್ದು ಹೋಗುತ್ತೀರಿ! ಇನ್ನೂ ಸ್ಪರ್ಧೆಯೇ ಮುಗಿದಿಲ್ಲವಲ್ಲ?” ಎಂದ. ಅದನ್ನು ಕೇಳಿ ಮೂವರೂ ಬೆರಗಾಗಿ ನಿಂತರು. “ನಿಮ್ಮಂತೆಯೇ ನಾನೂ ಒಂದು ಕತೆ ಹೇಳುವುದು ಬೇಡವೇ?” ಎಂದ.
ಗೆದ್ದ ಹುಮ್ಮಸ್ಸಿನಲ್ಲಿದ್ದ ಮೂವರೂ ಅದಕ್ಕೊಪ್ಪಿ ಮತ್ತೆ ತಮ್ಮ ತಮ್ಮ ಸ್ಥಾನಗಳಲ್ಲಿ ಕುಳಿತರು. ಆ ವ್ಯಾಪಾರಿ ತನ್ನ ಕತೆಯನ್ನು ಹೇಳಲು ಆರಂಭಿಸಿದ.
“ನಾನು ಈ ಹಿಂದೆಯೇ ತಿಳಿಸಿದಂತೆ ಒಬ್ಬ ವ್ಯಾಪಾರಿ. ನಿಜವಾಗಿ ನೋಡಿದರೆ ನನ್ನದು ನಿಮ್ಮ ಕತೆಗಳಷ್ಟು ರಮ್ಯವಾಗಲಿ, ಸೋಗಸಾಗಿಯಾಗಲಿ ಇಲ್ಲ. ನನ್ನ ವಹಿವಾಟು ಬಹಳ ದೊಡ್ಡದು. ಆದ್ದರಿಂದ ನಾನು ಹಲವಾರು ಆಳುಗಳನ್ನು ನನ್ನಲ್ಲಿ ಕೆಲಸ ಮಾಡಲಿ

ಕನ್ನಡ ನೀತಿ ಕಥೆಗಳು

ಎಂದು ಜೀತಕ್ಕೆ ತೆಗೆದುಕೊಂಡಿದ್ದೇನೆ. ಅಂತಹ ಆಜನ್ಮ ಜೀತದಾಳು ಗಳ ಪೈಕಿ ಮೂವರು ಸೋಮಾರಿಗಳೂ ಇದ್ದರು.
“ಅವರಿಗೆ ಕೆಲಸ ಮಾಡುವುದು ಎಂದರೆ ಮೈ ಬಗ್ಗದು. ಸದಾ ಒಂದೆಡೆ ಕೂತು ಯಾರನ್ನಾದರೂ ಟೀಕಿಸುತ್ತಾ, ಮಾತಿನ ಜಾಲದಲ್ಲಿ ಸಿಕ್ಕಿಸುತ್ತಾ, ಆಟವಾಡಿಸುವುದೆಂದರೆ ಬಹಳ ಆನಂದ ನನ್ನ ದಿವಾನರು, ಅವರನ್ನು ಹಲವು ಬಾರಿ ಎಚ್ಚರಿಸಿದ ರಂತೆ. ಆದರೂ ಪ್ರಯೋಜನ ಆಗಲಿಲ್ಲ.
“ಈಗ್ಗೆ ಆರು ತಿಂಗಳ ಹಿಂದೆ ಸೋಮಾರಿತನಕ್ಕಾಗಿ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಯಿತು. ಅದಾದನಂತರ ಅವರು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿಬಿಟ್ಟರು. ನಾನೀಗ ವ್ಯಾಪಾರಕ್ಕೆಂದು ಹೊರಟರೂ ಸಹ ಅವರನ್ನು ಹುಡುಕುವುದೂ ನನ್ನ ಒಂದು ಉದ್ದೇಶವಾಗಿತ್ತು. ಅವರ ಹೆಗ್ಗುರುತೆಂದರೆ ಕಂಡ-ಕಂಡವರನ್ನೆಲ್ಲ ಎಂತೆಂತಹುದೋ ವಿಚಿತ್ರ ಸ್ಪರ್ಧೆಗೆ ಎಳೆಯುತ್ತಾರೆ ಇತರರಿಗೆ ತೊಂದರೆಯಾದರೆ ತಾವು ಸಂತೋಷಪಡುತ್ತಾರೆ.

ನಿಜದ ಅರ್ಥ

images 8 1
ಕನ್ನಡ ನೀತಿ ಕಥೆಗಳು | Story in Kannada Best No1 Moral Stories in Kannada

ಹಿರಿಯರೊಬ್ಬರು ಒಮ್ಮೆ ಮುಲ್ಲಾ ನಸರುದ್ದೀನ್‌ ನನ್ನು ನೋಡಲು
ಬಂದರು.
“ನಸರುದ್ದೀನ್! ನೀನು ಬಹಳ ವಿಷಯ ತಿಳಿದುಕೊಂಡಿರುವವನು. ನನಗೆ ‘ನಿಜ’ ಎಂದರೇನೆಂದು ತಿಳಿದುಕೊಳ್ಳುವ ಬಯಕೆಯಾಗಿದೆ. ‘ಸತ್ಯ’ ಅಥವಾ ‘ನಿಜ’ಕ್ಕೆ ಹಲವರು ಹಲವು ವಿಧಗಳಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಒಬ್ಬರು ಹೇಳಿದುದಕ್ಕೆ ಸಂಪೂರ್ಣ ವಿರುದ್ಧವಾಗಿ ಮತ್ತೊಬ್ಬರು ಹೇಳಿರುವುದೂ ಉಂಟು. ‘ನಿಜ’ ಎಂಬುದಕ್ಕೆ ನೀನೇನು ವಿವರಣೆ ಕೊಡುವೆಯೋ ಹೇಳು?” ಎಂದು ಕೇಳಿಕೊಂಡರು ಹಿರಿಯ ವ್ಯಕ್ತಿ.


“ನಿಜ’ವೇ! ಅದು ಬಹಳ ಸರಳವಾದ ಪದ, ಅದನ್ನು ಬಿಡಿಸಿ ಹೇಳಲು ಏನೇನೂ ಕಷ್ಟವಾಗುವುದಿಲ್ಲ. ನಾನು ಇದುವರೆಗೆ ಹೇಳದಿರುವುದು ಯಾವುದೋ ಅದೇ ‘ನಿಜ’! ಇನ್ನು ಮುಂದೆ ಜೀವಿತ ಕಾಲದಲ್ಲೇ ಹೇಳಲು ಇಚ್ಛಿಸದಿರುವುದು ಯಾವುದೋ ಅದೇ ‘ನಿಜ’! ‘ನಿಜ’ ಎಂದರೇನೆಂದು ಇದಕ್ಕಿಂತ ನಿಜವಾದ ವಿವರಣೆ ಬೇಕೆ?” ಎಂದ ನಸರುದ್ದೀನ್.
ನಿಜವೆಂಬುದನ್ನು ಮಾತಾಡುವುದು ಸುಲಭ. ಆದರೆ ಅದನ್ನು ಕಾರ್ಯ ರೂಪಕ್ಕೆ ತರುವುದು ಕಷ್ಟ ಎಂಬುದನ್ನು ನಸರುದ್ದೀನ್‌, ನಾಜೂಕಾಗಿ ಹೇಳುತ್ತಿದ್ದಾನೆಂದು ಆ ಹಿರಿಯರು ಅರಿತುಕೊಂಡರು.

ವಜ್ರವನ್ನು ನುಂಗಿದ ಇಲಿ ಕಥೆ

ಒಂದು ಇಲಿ ವಜ್ರವನ್ನು ನುಂಗಿತು ವಜ್ರದ ಮಾಲೀಕ ಇಲಿಯನ್ನು ಕೊಲ್ಲುವುದಕ್ಕಾಗಿ ಒಬ್ಬ ವ್ಯಕ್ತಿಯನ್ನು ನೇಮಕ ಮಾಡುತ್ತಾನೆ.
ಆ ವ್ಯಕ್ತಿ ಇಲಿಯನ್ನು ಕೊಲ್ಲಲು ಬಂದಾಗ ಸಾವಿರಾರು ಇಲಿಗಳು ಗುಂಪಾಗಿ ಕುಳಿತಿದ್ದವು, ಆದರೆ, ಒಂದು ಇಲಿ ಮಾತ್ರ ಗುಂಪಿನಿಂದ ದೂರ ಎತ್ತರವಾದ ಜಾಗದಲ್ಲಿ ಕುಳಿತಿತ್ತು.
ವ್ಯಕ್ತಿಯು ಆ ಇಲಿಯನ್ನು ಕೊಂದಾಗ ಅದರ ಹೊಟ್ಟೆಯಲ್ಲಿ ವಜ್ರ ದೊರಕಿತು.
ಆಶ್ಚರ್ಯಚಕಿತನಾದ ವಜ್ರದ ಮಾಲಿಕ ಇಷ್ಟು ದೊಡ್ಡ ಗುಂಪಿನಲ್ಲಿ ವಜ್ರ ನುಂಗಿದ ಇಲಿ ಇದೇ ಎಂದು ನಿನಗೆ ಹೇಗೆ ಗೊತ್ತಾಯಿತು.
ಎಂದು ಪ್ರಶ್ನಿಸಿದ.
ತುಂಬಾ ಸುಲಭ ಎಂದು ಆ ವ್ಯಕ್ತಿ ಉತ್ತರಿಸಿದ
ಒಬ್ಬ ಶ್ರೀಮಂತನಾದಾಗ ಆತ ಇತರರೊಂದಿಗೆ ಬೆರೆಯುವುದಿಲ್ಲ….

ಮನುಷ್ಯ ಸ್ವಭಾವ

ಕನ್ನಡ ನೀತಿ ಕಥೆಗಳು | Story in Kannada Best No1 Moral Stories in Kannada
ಕನ್ನಡ ನೀತಿ ಕಥೆಗಳು | Story in Kannada Best No1 Moral Stories in Kannada

ದಟ್ಟ ಕಾಡೊಂದರಲ್ಲಿ ಸಾಧು ತಪಸ್ಸು ಮಾಡುತ್ತಿದ್ದ. ಆಗ ಹುಲಿಯೊಂದು ಗರ್ಜಿಸುತ್ತ ಬಂದು ನಾನು ಮುಂದೆ ನಿನ್ನನ್ನು ತಿನ್ನುವೆ ಎಂದು ಹೇಳಿತು. ಆಗ ನಾನು, ನೀನು ಯಾಕೆ ನನ್ನನ್ನು ತಿನ್ನುವೆ ಎಂದು ಕೇಳಿದಾಗ ಹುಲಿಯು, ಮನುಷ್ಯರನ್ನು ತಿನ್ನುವುದು ಪ್ರಾಣಿಯ ಸ್ವಭಾವ ಎಂದು ಹೇಳಿತು.

ಆಗ ಸಾಧು ನನ್ನ ಮಂತ್ರ ಶಕ್ತಿಯಿಂದ ಅಲ್ಲಿಂದ ಮಾಯವಾದ, ಹುಲಿ ಅಲ್ಲಿಂದ ಓಡಿ ಹೋಯಿತು
ಸಾಧು ಮತ್ತೆ ತಪಸ್ಸಿಗೆ ಕುಳಿತಾಗ ಸಾಧು ಮತ್ತೆ ತಪಸ್ಸಿಗೆ ಕುಳಿತಾಗ ನಾಗರಹಾವು ಬಂದು ಬುಸುಗುಟ್ಟುತಿತ್ತು ಹೆಡೆಯೆತ್ತಿ ನಾನು ನಿನಗೆ ಕಚ್ಚುವೆ ಎಂದು ಸಾಧುವಿಗೆ ಹೇಳಿತು.

ಆಗ ಸಾಧು, ನನಗೇಕೆ ನೀನು ಕಚ್ಚುವೆ ಎಂದು ಕೇಳಿದಾಗ ಅದು, ಕಚ್ಚುವುದು ನನ್ನ ಸ್ವಭಾವ ಎಂದು ಹೇಳಿತು. ಸಾದು ತನ್ನ ಮಂತ್ರ ಶಕ್ತಿಯಿಂದ ಮಾಯವಾದಾಗ ಹಾವು ಅಲ್ಲಿಂದ ಕದಲಿತು.


ಸಾದು ಮತ್ತೆ ತಪಸ್ಸಿಗೆ ಕುಳಿತಾಗ ಅಳಿಲೊಂದು ಸದುವಿನ ಹತ್ತಿರ ಬಂದಿತು ಕಾಲು ನೆಕ್ಕುತ್ತ ಕಾಡಿನಲ್ಲಿರುವ ಮಾವಿನಹಣ್ಣನ್ನು ಸಾಧುವಿಗೆ ತಂದು ಕೊಟ್ಟಿತು ಆಗ ಸಾಧು ಒಂದೊಂದು ಪ್ರಾಣಿಗಳಲ್ಲಿ ಒಂದೊಂದು ಸ್ವಭಾವ ಇರುವಂತೆ ಮನುಷರಲ್ಲಿಯೂ ಒಬ್ಬೊಬ್ಬರಲ್ಲೂ ಒಂದೊಂದು ಸ್ವಭಾವ ಇರುತ್ತದೆ ಎಂದು ಅಂದುಕೊಂಡು ತಪಸ್ಸಿನಲ್ಲಿ ಲೀನವಾದರು.

ಇತರೆ ಪ್ರಬಂಧಗಳನ್ನು ಓದಿ

ಮಹಾತ್ಮ ಗಾಂಧಿ ಜೀವನ ಚರಿತ್ರೆ ಕನ್ನಡ ಪ್ರಬಂಧ Gandhiji Information in Kannada

ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ

ಮಾಲತಿ ಕೃಷ್ಣಮೂರ್ತಿ ಹೊಳ್ಳ

2 thoughts on “ಕನ್ನಡ ನೀತಿ ಕಥೆಗಳು 2024 | Moral Stories in Kannada

Leave a Reply

Your email address will not be published. Required fields are marked *