ಶಾತವಾಹನರು । satavahana history in kannada । satavahana dynasty in kannada
satavahana history in kannada, ಶಾತವಾಹನರ ಇತಿಹಾಸ, Satavahana Dynasty in Kannada, satavahana rajadhani in kannada karnataka
satavahana history in kannada
- ಕರ್ನಾಟಕವನ್ನು ಆಳಿದ ಮೊದಲ ರಾಜಮನೆತನ
- ಶಾತವಾಹನ ಶಕೆಯ ಆರಂಭ – ಕ್ರಿ.ಶ.78.
- ರಾಜಧಾನಿ ಪೈತಾನ (ಪ್ರತಿಷ್ಠಾನ )
- ರಾಜ್ಯ ಲಾಂಛನ :- ವರಾಹ
- ಮೌರ್ಯರ ಸಾಮಂತರಾಗಿದ್ದ ಇವರು ಅವರ ಪತನದೊಂದಿಗೆ ದಕ್ಷಿಣದಲ್ಲಿ ಅಧಿಕಾರಕ್ಕೆ ಬಂದು ಕ್ರಿ.ಶ 23 ರದಲ್ಲಿ ಸಾಮ್ರಾಜ್ಯ ಸ್ಥಾಪಿಸಿ ಕ್ರಿ.ಶ. 220 ರ ತನಕ ಆಳಿದರು .
- ಇವರ ಮೂಲ ನಿವಾಸ – ಸಾತಹನಿಹಾರ ಅಂದರೆ ಈಗಿನ ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಯ ಭಾಗ
- ಶಾತವಾಹನರು ಸುಮಾರು – 460 ವರ್ಷ ಸಾಮ್ರಾಜ್ಯ ಆಳಿದರು .
- ಇವರನ್ನು ಆಂಧ್ರ ಭೃತ್ಯ ಎನ್ನುವರು ಅಂದರೆ – ಮೌರ್ಯರ ಸೇವಕರಾಗಿದ್ದು , ಆಶೋಕನ ನಂತರ ದಕ್ಷಿಣಕ್ಕೆ ಬಂದು ಸ್ವತಂತ್ರ ರಾಜ್ಯ ನಿರ್ಮಿಸಿದರೆಂದು ತಿಳಿದುಬರುತ್ತದೆ .
- ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಭೂಮಿಯನ್ನು ದಾನವಾಗಿ ನೀಡಿದ ವಂಶ -ಶಾತವಾಹನರು
- ಚಿತ್ರದುರ್ಗ ಮತ್ತು ಚಂದ್ರವಳ್ಳಿಯಲ್ಲಿ ನಡೆದ ಭೂ ಸಂಶೋಧನೆಗಳು ಶಾತವಾಹನರ ಬಗ್ಗೆ ಹೆಚ್ಚು ಬೆಳಕು ಬೀರುತ್ತವೆ
- ಈ ಕಾಲದ ನಾಣ್ಯಗಳು ಚಿತ್ರದುರ್ಗದ ಚಂದ್ರವಳ್ಳಿಯಲ್ಲಿ ದೊರೆತಿದೆ
- ಶಾತವಾಹನರ ಅಧೀನರಾಗಿ – ಜಾಟರು ( ಬನವಾಸಿ ) ಬಾಣರು ( ಪುರ್ವ ಮೈಸೂರಿನ ಭಾಗ ) ಅಳುಪರು ( ಪಶ್ಚಿಮ ಘಟ್ಟ ಪ್ರದೇಶ ) ಸೇಂದ್ರಕರು ( ನಾಗರಬಂಡ ) ಮತ್ತು ನಳರು ( ಬಳ್ಳಾರಿ ಸುತ್ತಮುತ್ತ ) ಆಳುತ್ತಿದ್ದರು.
- ಶಾತವಾಹನ ನಂತರ ಕುಂತಲವನ್ನು ಆಳಿದವರೆಂದರೆ – ಚೂಟರು ನಂತರ ಕದಂಬರು ಮತ್ತು ಗಂಗರು ಆಳಿದರು .
- ಹಿರೇಹಡಗಲಿ ಶಾಸನದ ಪ್ರಕಾರ ಶಾತವಾಹನರ ಮೂಲ – ಶತಾಹನಿರಟ್ಟ ( ಬಳ್ಳಾರಿ )
- ಅಶೋಕನ 12 ನೇ ಶಾಸನವು ಇವರನ್ನು ಆಂಧ್ರ ಭೃತ್ಯರೆಂದು ಹೆಸರಿಸಿದೆ .
- ಶಾತವಾಹನರನ್ನು “ ಕುಂತಲ ದೊರೆ “ ಎಂದು ಸಂಭೋದಿಸಿದ ಕೃತಿಯ ಹೆಸರೇನು – ರಾಜ ಶೇಖರ ಕವಿಯ “ಕಾವ್ಯ ಮಿಮಾಂಸೆ “ .
- ಬನವಾಸಿಯ ಪ್ರಾಚೀನ ಹೆಸರು – ವೈಜಯಂತಿ ಪುರ ( ವಿಜಯ ಪಕಾಕೆಪುರ ) .
- ಮೂರು ಸಾಗರಗಳ ಒಡೆಯರು ಎಂದು ಕರೆಯಲ್ಪಟ್ಟವರು – ಶಾತವಾಹನರು .
- ಆಂದ್ರ ಭೃತೃಗಳು ಎಂದು ಕರೆಯಲ್ಪಟ್ಟವರು – ಶಾತವಾಹನರು .
- ಮೌರ್ಯರ ಪತನಾ ನಂತರ ದಖನ್ ಪ್ರಸ್ಥಭೂಮಿಯಲ್ಲಿ ಪ್ರಪ್ರಥಮ ಐತಿಹಾಸಿಕ ಹಿರಿಯ ಸಾಮ್ರಾಜ್ಯ ವನ್ನು ಸ್ಥಾಪಿಸಿದವರು – ಶಾತವಾಹನರು
- ಎಲ್.ಡಿ.ಬಾರ್ನೆಟ್ ಪ್ರಕಾರ ಶಾತವಾಹನರ ಮೊದಲ ರಾಜಧಾನಿ ಶೀ ಕಾಕುಲು ಹಾಗೂ ನಂರದ ರಾಜಧಾನಿ – ಧನ್ಯ ಕಟಕ .
ಶಾತವಾಹನರ ರಾಜಕೀಯ ಇತಿಹಾಸ
- ಶಾತವಾಹನರ ಸಂತತಿಯ ಸ್ಥಾಪಕ:- ಸಿಮುಕ
- ಮಗದದ ಕಣ್ಣ ವಂಶದ ಕೊನೆಯ ರಾಜ ಸುಶರ್ಮನನ್ನು ಸೋಲಿಸಿದವರು ಸಿಮುಖ
- ಇವನ ತಮ್ಮ – ಕಂನ್ಹೆ / ಕೃಷ್ಣಮನು – ನಾಸಿಕದಲ್ಲಿ ಬೌದ್ಧ ಗುಹಾಲಯ ನಿರ್ಮಿಸಿದ .
- ಗೌತಮಿಪುತ್ರನ ನಾಸಿಕ ಶಾಸನದಲ್ಲಿ ಸಿಮುಖನನ್ನು ಏಕಬ್ರಾಹ್ಮಣ ಎಂದು ಕರೆಯಲಾಗಿದ್ದು , ಕ್ಷತ್ರಿಯರ ದರ್ಪ ಮುರಿದವನೆಂದು ವರ್ಣಿಸಿದೆ .
- 1ನೇ ಶಾತಕರ್ಣಿ
- ಒಂದನೇ ಶಾತಕರ್ಣಿ ಈತ – ಸಿಮುಖನ ಮಗ .
- “ ದಕ್ಷಿಣ ಪಥ ಸಾರ್ವಬೌಮ “ ಹಾಗೂ ಅಪ್ರತ್ರಿಹಿತ ಎಂಬ ಬಿರುದುಳ್ಳ ಅರಸ – ಒಂದನೇ ಶಾತಕರ್ಣಿ .
- ಅಶ್ವಮೇಧ , ರಾಜಸೂಯಯಾಗ ಆಚರಿಸಿ , ” ದಕ್ಷಿಣಪಥಪತಿ ” ( ದಕ್ಷಿಣಪಥ ಸಾರ್ವಭೌಮ ) ಮತ್ತು ಅಪ್ರತಿಹತ ಎಂಬ ಬಿರುದುಗಳನ್ನು ಧರಿಸಿದ್ದ .
- ಇವನ ಮಡದಿ – ನಾಗನಿಕ ( ನಾಯನಿಕ ) ಇವಳ ಶಾಸನ – ನಾನಾಘಾಟ್ ಶಾಸನ .
- ಸಿಮುಖನನ್ನು “ ರಾಜ ಸಿಮುಖ ಶಾತವಾಹನ “ ಎಂದು ವರ್ಣಿಸಿರುವ ಶಾಸನ – ನಾನಾ ಘಾಟ್ ಶಾಸನ .
- ಸಿಮುಖನಿಗೆ “ ಶಾತವಾಹನ “ ಎಂಬ ಹೆಸರನ್ನು ಕೊಟ್ಟಿರುವ ಗ್ರಂಥ – ಜೈನ ಗ್ರಂಥ
- ಸಿಮುಖನ ನಂತರ ಅಧಿಕಾರಕ್ಕೆ ಬಂದವರು – ಇವನ ತಮ್ಮ ಕೃಷ್ಣ .
ಹಾಲ
- ಶಾತವಾಹನರ 17 ನೇ ರಾಜ .
- ಶಾತವಾಹನ ಶಕೆಯನ್ನು ಆರಂಭಿಸಿದವರು – ಶಾತವಾಹನರು ( ಹಾಲ )
- ಲೀಲಾವಾಯಿ ಕೃತಿ – ಇವನ ಆಳ್ವಿಕೆ ಬಗ್ಗೆ ವರ್ಣನೆ ನೀಡುತ್ತದೆ .
- ಲೀಲಾವಾಯಿ ಕೃತಿ ಪ್ರಕಾರ – ಈತ ಸಿಂಹಳ ( ಶ್ರೀಲಂಕಾ ) ಗೆದ್ದು , ಅಲ್ಲಿನ ರಾಜನ ಮಗಳು ಲೀಲಾವತಿಯನ್ನು ಸಪ್ತಗೋದಾವರಿ ಭೀಮಂ ಅಥವಾ ದ್ರಾಕ್ಷಾರಾಮ ಎಂಬ ಸ್ಥಳದಲ್ಲಿ ವಿವಾಹವಾದ .
- ಹಾಲನ ನಂತರ ಶಕರು ಈ ಸಾಮ್ರಾಜ್ಯದ ಹಲವು ಭಾಗಗಳನ್ನು ವಶಪಡಿಸಿಕೊಂಡರು . ಶಕರ ಆಕ್ರಮಣದಿಂದಾಗಿ ಶಾತವಾಹನರು ಒಂದು ಶತಮಾನ ಕಾಲ ದುರ್ಬಲವಾದರು .
- ಈತನು ಪ್ರಾಕೃತದಲ್ಲಿ – ಗಾಥಸಪ್ತಶತಿ ಅಥವಾ ಶಟಾಸ್ತಿ ಎಂಬ ಕೃತಿ ಬರೆದಿದ್ದಾನೆ .
- ಹಾಲನ ಆಸ್ಥಾನ ಕವಿ ಗುಣಾಡ್ಯನು ಪೈಶಾಚಿ ಭಾಷೆಯಲ್ಲಿ ಬೃಹತ್ಕಥಾ ಗ್ರಂಥ ರಚಿಸಿದ್ದಾನೆ . ಈ ಕೃತಿಯನ್ನು ಕ್ಷೇಮೇಂದ್ರನು ಸಂಸ್ಕೃತಕ್ಕೆ ಅನುವಾದಿಸಿದ್ದಾನೆ .
- ಕ್ರಿ.ಶ. 78 ರ ಶಾಲಿವಾಹನ ಶಕ ವರ್ಷವನ್ನು ಈತ ಆರಂಭಿಸಿದ ಎಂಬುದು ಹಲವರ ಅಭಿಮತ ( ಕುಶಾನರ ರಾಜ ಕಾನಿಷ್ಕ ಆರಂಭಿಸಿದ ಎಂಬ ಅಭಿಪ್ರಾಯವೂ ಇದೆ . )
ಗೌತಮಿ ಪುತ್ರ ಶಾತಕರ್ಣಿ : ಕ್ರಿ.ಶ. 106-130 / ಕ್ರಿ.ಶ. 70-95
- ಪ್ರಸಿದ್ಧ ರಾಜ , ಶಾತವಾಹನ ವೈಭವದ ಪುನರ್ ಸ್ಥಾಪಕ .
- ಇವನ ಕಾಲದಲ್ಲಿ ಶಾತವಾಹನರು ಪುನಃ ಪ್ರಬಲರಾದರು .
- ಈತನ ತಾಯಿ ಗೌತಮೀ ಬಾಲಶ್ರೀಯು ಕೆತ್ತಿಸಿರುವ ನಾಕ್ ಶಾಸನವು ಈತನನ್ನು ಶಕ , ಯವನ ಮತ್ತು ಪತ್ನವ ನಿರ್ಮೂಲನೆಂದು ವರ್ಣಿಸಿದೆ .
- ಶತ ಕ್ಷತ್ರಪ ನಹಪಾಣ ಮತ್ತು ಅವನ ಅಳಿಯ ಉಷವದತ್ತನನ್ನು ಕೊಂದು ಕ್ಷತ್ರಪ ವಂಶವನ್ನು ನಿರ್ಮೂಲನೆ ಮಾಡಿದ . ಈ ವಿಜಯದ ಸಂಕೇತವಾಗಿ ನಹಪಗಾನ ನಾಣ್ಯಗಳ ಮೇಲೆ ತನ್ನ ರಾಜ ಚಿಹ್ನೆಯನ್ನು ಪುನಃ ಮುದ್ರಿಸಿ ಆಚರಣೆಗೆ ತಂದ .
- ಇತರೆ ಬಿರುದುಗಳು – ವರವರ್ಣ ವಿಕ್ರಮ , ಚತುರ ವಿಕ್ರಮ , ಸಹಾರಾತವಂಶ ನಿರವಶೇಷಕದ .
- ತ್ರೈ ಸಮುದ್ರ ತೋಯಾ ಪಿತಾವಾಹನ ಹಾಗೂ ಶಾತವಾಹನ ಕುಲ ಪ್ರತಿಷ್ಠಾಪಿತ ಎಂಬ ಬಿರುದುಳ್ಳ ಅರಸ -ಗೌತಮೀಪುತ್ರ ಶಾತಕರ್ಣಿ( ನಾಸಿಕ ಶಾಸನದಲ್ಲಿ ಉಲ್ಲೇಖ )
- ತ್ರೈಸಮುದ್ರತೋಯ ಪೀತವಾಹನದ ಅರ್ಥ – ಮೂರು ಸಮುದ್ರಗಳ ನೀರನ್ನು ಕುಡಿದು ಕುದುರೆಯನ್ನು ವಾಹನವಾಗಿ ಪಡೆದವ
- ಕ್ರಿ.ಶ. 150 ರ ರುದ್ರಧಾಮನ್‌ನ ಜುನಾಘಡ್ ಶಾಸನದ ಪ್ರಕಾರ ಇವನ ಪ್ರದೇಶಗಳನ್ನು ಶಕದೊರೆ ರುದ್ರರಾಮನ್ ಪುನಃ ವಶಪಡಿಸಿಕೊಂಡನು .
- ನಾಸಿಕ್‌ನ ( ಮಹಾರಾಷ್ಟ್ರ ) ಜೋಗಲತಂಬಿಯಲ್ಲಿ ದೊರೆತಿರುವ ನಹಪಗನ ಬೆಳ್ಳಿಯ ನಾಣ್ಯಗಳ ಮೇಲೆ ಈತನ ಹೆಸರನ್ನು ಮುದ್ರಿಸಲಾಗಿದೆ .
- ಬ್ರಾಹ್ಮಣನಾಗಿದ್ದರೂ – ಬೌದ್ಧ ಶಿಲ್ಪಕಲಾ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ .
- ಶಕಯವನ ಪಲ್ಲವ ನಿಸೂಧನ ಎಂಬ ಬಿರುದನ್ನು ಹೊಂದಿದವರು – ಗೌತಮೀಪುತ್ರ ಶಾತಕರ್ಣಿ
- ತಾನು ಗೆದ್ದ ಕೆಲವು ಪ್ರದೇಶಗಳನ್ನು ಉಳಿಸಿಕೊಳ್ಳಲೋಸುಗ ರುದ್ರ ದಾಮನ್‌ನೊಂದಿಗೆ ವೈವಾಹಿಕ ಸಂಬಂಧ ಬೆಳೆಸಿದ
- ಅಶೋಕನ ಈ ಶಾಸನದಲ್ಲಿ ಶಾತವಾಹನರು ಆಂಧ್ರ ಭೃತ್ಯರು ಎಂದು ಕರೆದಿದೆ. – 12 ನೇ ಶಾತವಾಹನ
- ಶಕದೊರೆ ರುದ್ರಧಾಮನ ಮಗಳನ್ನು ವರಿಸಿದ .
- ದಕ್ಷಿಣಪಥೇಶ್ವರ , ನವನಗರಸ್ವಾಮಿ ಇವನ ಬಿರುದುಗಳು
- ನವನಗರ / ಪ್ರತಿಷ್ಠಾಪನವನ್ನು ರಾಜಧಾನಿಯಾಗಿ ಮಾಡಿದ
- ಗಿರ್ನಾರ್ ( ಜುನಾಗಢ ) ಶಾಸನದ ಪ್ರಕಾರ – ರುದ್ರಧಾಮವನಿಂದ ಎರಡು ಬಾರಿ ಸೋತನು
- ಅಮರಾವತಿ ಬೌದ್ಧ ಸ್ತೂಪ ನಿರ್ಮಾಣ ಮಾಡಿದ
- ಮೊದಲ ಬಾರಿಗೆ ಅಂದ್ರವನ್ನು ಗೆದ್ದ .
- ಪುಲುಮಾಯಿಯ ರಾಜಧಾನಿ – ಬನವಾಸಿ .
.
ಶಾತವಾಹನರ ಕೊಡುಗೆಗಳು
ಶಾತವಾಹನರ ಆಡಳಿತ
- ಮೌರ್ಯರ ಆಡಳಿತವನ್ನು ಮುಂದುವರಿಸಿಕೊಂಡು ಬಂದರು .
- ಶಾತವಾಹನರ ಪ್ರಾಂತ್ಯವನ್ನು ಅಹರಗಳೆಂದು ಕರೆಯುವರು .
- ಅಹರಗಳ ಮುಖ್ಯಸ್ಥ – ಅಮಾತ್ಮ
- ಪ್ರತಿ ಅಹರದಲ್ಲೂ, “ ನಿಗಮ ” ಎಂಬ ಪಟ್ಟಣಗಳಿದ್ದವು
- ಗೌತಮೀಪುತ್ರ ಶಾತಕರ್ಣಿ ಕಾಲದಲ್ಲಿ ವಿಷ್ಣುಪಾಲಿಕ , ಶಿವಸ್ಕಂದ , ದತ್ತ ಸ್ಯಾಮಕ ಮುಂತಾದವರು ಅಮಾತ್ಯರಾಗಿ ಸೇವೆ ಸಲ್ಲಿಸಿದರು .
- ಉದಾ : 1 ನೇ ಶಾತಕರ್ಣಿಯ ರಾಣಿ ನಾಗನಿಕ ಮತ್ತು ಗೌತಮೀಪುತ್ರ ಶಾತಕರ್ಣಿಯ ತಾಯಿ ಗೌತಮಿಬಾಲಾಶ್ರಿ . 1 ನೇ ಶಾತಕರ್ಣಿಯ ಮರಣದ ನಂತರ ಅವನ ಇಬ್ಬರು ಅಪ್ರಾಪ್ತ ವಯಸ್ಕರಾದ ವೇದಿಶ್ರೀ ಮತ್ತು ಸತಿಶ್ರೀ ಪಟ್ಟಕ್ಕೆ ಬಂದಾಗ ಅವನ ರಾಣಿ ನಯನಿಕ ( ನಾಗನಿಕ ) ಪ್ರತಿನಿಧಿಯಾಗಿ ರಾಜ್ಯಾಡಳಿತ ನಡೆಸಿದಳು .
- ಶಾತವಾಹನರ ಆಡಳಿತದಲ್ಲಿ ಸ್ತ್ರೀಯರು ಭಾಗವಹಿಸುತ್ತಿದ್ದರು .
- ಪಟ್ಟಣಗಳ ಆಡಳಿತವನ್ನು “ ನಿಗಮ ಸಭೆಗಳು ನೋಡಿಕೊಳ್ಳುತ್ತಿದ್ದವು .
- ಗ್ರಾಮದ ಅಧಿಕಾರಿಗಳನ್ನು ಮಹಾ ಆರ್ಯಕರೆಂದು ಕರೆಯಲಾಗುತ್ತಿತ್ತು .
- ಗ್ರಾಮೀಣ ಪ್ರದೇಶದಲ್ಲಿನ ಸೇವಾಧಿಕಾರಿಯನ್ನು ಗೌಲ್ಮಿಕಎನ್ನುವರು .
ಶಾತವಾಹನರ ರಾಜ್ಯದ ಪ್ರಮುಖ ಆಡಳಿತಾಧಿಕಾರಿಗಳು
- ನಿಬಂಧಕ ( ದಾಖಲೆ ವ್ಯವಸ್ಥಾಪಕ )
- ಭಾಂಡಗಾರಿಕ ( ಗ್ರಾಗಾಧಿಕಾರಿ )
- ಹೇರಣಿಕ ( ಹಣಕಾಸು ಅಧಿಕಾರಿ )
- ಲೇಖಕ ( ರಾಜ್ಯ ಮುಖ್ಯ ಕಾರ್ಯದರ್ಶಿ )
ಶಾತವಾಹನರ ಸಾಮಾಜಿಕ ಜೀವನ
- ಗೌತಮೀಪುತ್ರ ಶಾತಕರ್ಣಿಯು ವರ್ಣಸಂಕರವನ್ನು ನಿಷೇಧಿಸಿದ
- ಗ್ರೀಕರು , ಶಕರು , ಪಾರ್ಥಿನಯನ್ನರು ಮೊದಲಾದ ವಿದೇಶಿಯರು ಭಾರತಕ್ಕೆ ಆಗಮಿಸಿ ಭಾರತೀಕರಣಗೊಂಡು ಹಿಂದೂ ಹೆಸರನ್ನು ಪಡೆದು ಹಿಂದೂ ಮಹಿಳೆಯರನ್ನು ವಿವಾಹವಾದ್ದರಿಂದ ಮಿಶ್ರ ಜಾತಿಗಳು ಸೃಷ್ಟಿಯಾಗಲು ಕಾರಣವಾಯಿತು . ಹೀಗೆ ಜಾತಿ ಉಪಜಾತಿಗಳು ಉಂಟಾದರೂ ಜಾತಿವ್ಯವಸ್ಥೆ ಸಂಕೀರ್ಣವಾಗಿರಲಿಲ್ಲ ಇವುಗಳನ್ನು ವ್ಯಕ್ತಿಗೆ ಅನುಗುಣವಾಗಿ ವಿಭಜಿಸಲಾಯಿತು .
- ಅವಿಭಕ್ತ ಕುಟುಂಬಗಳು ಸಾಮಾನ್ಯವಾಗಿದ್ದವು
- ಸವರ್ಣಿಯರು ಮತ್ತು ಶೂದ್ರರ ನಡುವಿನ ವಿವಾಹ ಸಂಬಂಧವನ್ನು “ ವರ್ಣಸಂಕರ ‘ ( ಮಿಶ್ರ ವಿವಾಹ ) ಎನ್ನಲಾಗುತ್ತಿತ್ತು
- ಸಮಾಜದಲ್ಲಿ ಸ್ತ್ರೀಯರಿಗೆ ಉನ್ನತ ಸ್ನಾನವಿತ್ತು ಆದರೆ ಉಪನಯನ ದೀಕ್ಷೆ ಇರಲಿಲ್ಲ .
- ಅಂತರ್ಜಾತಿ ವಿವಾಹಗಳು ಸಾಮಾನ್ಯವಾಗಿದ್ದವು
ಶಾತವಾಹನರ ಆರ್ಥಿಕ ವ್ಯವಸ್ಥೆ
- ಉಪ್ಪಿನ ಉತ್ಪಾದನೆಯ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿತ್ತು
- ಕೃಷಿಯೇ ಮೂಲ ಕಸುಬು , 16 ಭಾಗ ಕಂದಾಯ ವಿಧಿಸಲಾಗಿತ್ತು
- ಕೃಷ್ಣ – ಗೋದಾವರಿ ನದಿ ನೀರು – ಕೃಷಿಗೆ ಸಹಕಾರಿಯಾಗಿತ್ತು
ಶಾತವಾಹನರ ವ್ಯಾಪಾರ
satavahana history in kannada- ತಮಿಳುನಾಡಿನ ಪಾಂಡಿಚೇರಿ ಸಮೀಪವಿರುವ ಅರಿಕಮೇಡು ರೋಮನ್ನರ ಪ್ರಮುಖ ವ್ಯಾಪಾರ ಕೇಂದ್ರ
- ರೋಮನ್ನರ ಚಿನ್ನದ ನಾಣ್ಯಗಳು – ಚಂದ್ರವಳ್ಳಿ , ಅರಿಕಮೇಡುವಿನಲ್ಲಿ ದೊರೆತಿವೆ .
- ಪ್ರಮುಖ ಬಂದರುಗಳು – ಸೋಪಾ , ಕಲ್ಯಾಣ , ಬ್ರೋಚ್ .
- ಪ್ರಮುಖ ವ್ಯಾಪಾರ ಕೇಂದ್ರಗಳು – ಜುನ್ನಾರ , ಪೈಠಾಣ , ಅಮರಾವತಿ , ನಾಸಿಕ್ ವೈಜಯಂತಿ ( ಬನವಾಸಿ ) ಬಟ್ಕಳ ,ಬಾದಾಮಿ
- ಆಮದು ವಸ್ತುಗಳ – ಸತು , ಸೀಸ ,ದ್ರಾಕ್ಷಾರಸ , ಗೋಮೇದಕ
- ರೋಮ್‌ಗೆ ರಫ್ತಾಗುತ್ತಿದ್ದ ಪ್ರಮುಖ ವಸ್ತುಗಳು – ಶ್ರೀಗಂಧ ವಸ್ತುಗಳು , ಆಭರಣಗಳು , ರತ್ನ ಮತ್ತು ವಜ್ರಗಳು ಚಿನ್ನ ಮತ್ತು ಬೆಳ್ಳಿ ಆಭರಣಗಳು, ಮಸ್ಲಿನ್ ಬಟ್ಟೆಗಳು , ಮೆಣಸು , ಏಲಕ್ಕಿ ,
- 2 ನೇ ಪುಲುಮಾಯಿ ಕಾಲದಿಂದ ಚೀನ ಮತ್ತು ಜಪಾನ್ ದೇಶಗಳ ಸಂಗಡ ವ್ಯಾಪಾರ ಪ್ರಾರಂಭವಾಯಿತು .
- ಪೂರ್ವ ತೀರದ , ಧಾನ್ಯ ಕಟಕ ಪ್ರಮುಖ ಅಂತರ್ ದೇಶಿಯ ಮಾರುಕಟ್ಟೆ
- ರೋಮ್ ಮತ್ತು ಈಜಿಪ್ಟ್ ದೇಶಗಳೊಂದಿಗೆ ವಿದೇಶಿ ವ್ಯಾಪಾರ ಹೊಂದಿದ್ದರು .
ಶಾತವಾಹನರ ವೃತ್ತಿ ಸಂಘಗಳು / ಶ್ರೇಣಿಗಳು
- ಶ್ರೇಣಿಧರ್ಮ ಎಂಬ ತಮ್ಮದೇ ಆದ ಕಾನೂನು ಸಂಹಿತೆಯನ್ನು ರಚಿಸಿಕೊಂಡು ಮೋಸ ,ವಂಚನೆ ಗಳಿಗೆ ಅವಕಾಶವಿಲ್ಲದಂತೆ ವೃತ್ತಿಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದವು
- ಶಕರಾಜ ನಹಪಣನ ಅಳಿಯ ಉಷವದತ್ತನು 200 ಕಹವಣ ನಾಣ್ಯಗಳನ್ನು ಸ್ಥಿರಬಂಡವಾಳವನ್ನಾಗಿಟ್ಟು ಶೇ 1 ರ ಬಡ್ಡಿಯಂತೆ ಹಣವನ್ನು ಸಾಲವಾಗಿ ಕೊಡುತ್ತಿದ್ದ ಮತ್ತು 1000 ಕಹರಣಗಳನ್ನು ಇಟ್ಟು ಶೇ . 3 ರಿಂದ 4 ರ ಬಡ್ಡಿಯಂತೆ 20 ಮಂದಿ ಬೌದ್ಧ ಭಿಕ್ಕುಗಳಿಗೆ ತಲಾ 12 ಕಹಪಣಗಳನ್ನು ವಸ್ತ್ರಗಳಿಗಾಗಿ ಕೊಡುತ್ತಿದ್ದ ಎಂದು ನಾಸಿಕ ಶಾಸನವು ಉಲ್ಲೇಯದೆ
- ಇವುಗಳು ಸ್ವಾಯುತ್ತ ಸಂಸ್ಥೆಗಳಂತೆ ಕಾರ್ಯನಿರ್ವಹಿಸುತ್ತಿದ್ದವು
- ಆಧುನಿಕ ಬ್ಯಾಂಕುಗಳಂತೆ ಕಾರ್ಯನಿರ್ವಹಿಸುತ್ತಿದ್ದವು
- ಠೇವಣಿಗಳನ್ನು ಸ್ವೀಕರಿಸಿ , ನಿಗಧಿಯಾದ ದರದಲ್ಲಿ ಬಡ್ಡಿ ನೀಡುತ್ತಿದ್ದವು
- ಅನೇಕ ಆರ್ಥಿಕ , ಸಾಮಾಜಿಕ ಕಲ್ಯಾಣ ಕಾರ್ಯಗಳನ್ನು ನೆರವೇರಿಸುತ್ತಿದ್ದವು .
- ಅನಾಥರಿಗೆ , ದಾರಿಹೋಕರಿಗೆ ಉಚಿತ ಊಟ ಮತಿಯನ್ನು ನೀಡುತ್ತಿದ್ದವು
- ಸಿದ್ಧಲಪುತ್ರನೆಂಬ ಶ್ರೀಮಂತ ಕುಂಬಾರನು 500 ಕುಂಬಾರರ ಶಾಲೆಗಳನ್ನು ಹೊಂದಿದ್ದು , ಗಂಗಾನದಿಯ ವಿವಿಧ ಬಂದರುಗಳಿಗೆ ಮಡಿಕೆಗಳನ್ನು ಸಾಗಿಸಲು ದೋಣಿಗಳನ್ನು ಹೊಂದಿದ್ದನು ಎಂಬ ವಿಚಾರ ವೃತ್ತಿ ಸಂಘಗಳ ಗಾತ್ರವನ್ನು ತಿಳಿಸುತ್ತದೆ
- ವಿವಾಹಿತ ಸ್ತ್ರೀಯು ಬೌದ್ಧ ಧರ್ಮದಲ್ಲಿ ಸನ್ಯಾಸಿಯಾಗಿ ಸೇರ್ಪಡೆಯಾಗಬೇಕಾದರೆ ಆಕೆ ತನ್ನ ಪತಿಯ ಅಪ್ಪಣೆಯ ಜೊತೆಗೆ ಸಂಘದ ಅನುಮತಿಯನ್ನು ಸಹ ಪಡೆಯಬೇಕಿತ್ತು ,
- ವ್ಯಾಪಾರ , ಕೈಗಾರಿಕೆಗಳ ಸ್ಥಾಪನೆಗೆ ಸಾಲದ ಹಣದ ಪೂರೈಕೆ ಮಾಡುತ್ತಿದ್ದವು
ಶಾತವಾಹನರ ಧರ್ಮ
- ಬೌದ್ಧ ಧರ್ಮವು ಸಹ ದಕ್ಷಿಣ ಭಾರತದಲ್ಲಿ ಅಸ್ತಿತ್ವದಲ್ಲಿತ್ತು ,
- ಶಾತವಾಹನರು ವೈಧಿಕ ಧರ್ಮದ ಅನುಯಾಯಿಗಳಾಗಿದ್ದು ವರ್ಣಾಶ್ರಮ ವ್ಯವಸ್ಥೆಯನ್ನು ಪಾಲಿಸುತ್ತಿದ್ದರು .
- ರಾಜರು ಯಜ್ಞಯಾಗಗಳನ್ನು ಮಾಡುತ್ತಿದ್ದರು .
- ಸಿಂಹ ಧ್ವಜ ಮತ್ತು ಧರ್ಮರೆಂಬ ಇಬ್ಬರು ವಿದೇಶಿಯರು ( ಯವನರು / ಗ್ರೀಕರು ) ಬೌದ್ದ ಧರ್ಣ ಸ್ವೀಕರಿಸಿದ್ದರು .
- ಶಾತವಾಹನರ ಮಳವಳ್ಳಿ ಸ್ತಂಭ ಶಾಸನದಲ್ಲಿ ಭೂದಾನ ( ಬ್ರಹ್ಮದೇಯದಾನ ) ದ 8 ವಿಚಾರಗಳಿವೆ .
- ಜೈನ ಧರ್ಮದ ದಿಗಂಬರ ಗುರುವಾದ ಕುಂದಾ ಕುಂದಾಚಾರ್ಯರು ಶಾತವಾಹನ ರಾಜರ ಗುರುಗಳಾಗಿದ್ದರು .
- ಶಾತವಾಹನರಿಗಿಂತ ಮುಂಚೆಯೇ ಜೈನಧರ್ಮಕ್ಕೆ ಪ್ರವೇಶಿಸಿತ್ತು .
- ಹಾಲನ ಗಾಥಸಪ್ತಶತಿ ಕೃತಿಯು – ಶಿವ ಮತ್ತು ಗೌರಿಯ ಸ್ತೋತ್ರದಿಂದ ಆರಂಭವಾಗುತ್ತದೆ .
ಶಾತವಾಹನರ ಚಲಾವಣೆಯಲ್ಲಿದ್ದ ನಾಣ್ಯಗಳು
- ಕುಷಣ : ಬೆಳ್ಳಿ
- ಪಣ : ದೀನಾರ (ಚಿನ್ನ)
- ಕರ್ಷಪಣ : ( ತಾಮ್ರ ಮತ್ತು ಬೆಲ್ಲ
- ನಾಣ್ಯಗಳ ತೂಕ 35 ರಿಂದ 560 ಗ್ರಾಂ .
- ಗದ್ಯಾಣ : ಸುವರ್ಣ ( ಚಿನ್ನ )
- ನಾಣ್ಯಗಳ ಮೇಲಿರುವ ಚಿತ್ರಗಳು – ಆನೆ , ಕುದುರೆ , ಸಿಂಹ ಮತ್ತು ಬಾಣದ ಚಿಹ್ನೆಗಳು
ಶಾತವಾಹನರ ಸಾಹಿತ್ಯ
- ಮಹಾರಾಷ್ಟ್ರ ಪ್ರಾಕೃತವು ಶಾತವಾಹನರ ರಾಜ ಭಾಷೆ
- ಇವರ ಕಾಲ ಪ್ರಾಕೃತ ಭಾಷೆಯ ಚಿನ್ನದ ಯುಗ
ಶಾತವಾಹನರ ಪ್ರಮುಖ ಕೃತಿಕಾರರು ಮತ್ತು ಕೃತಿಗಳು
- ಹಾಲ : ಗಾಥಸಪ್ತಶತಿ
- ಕುಂದ ಕುಂದಾಚಾರ್ಯ -ಪ್ರಬಿತಸಾರ
- ದ್ವಾದಶ – ಪ್ರೇಕಗ್ರಂಥ
- ಗುಣಾಢ್ಯ : ಬೃಹತ್ಕಥಾ ( ವೈಶಾಚಿಭಾಷೆ )
- ಸರ್ವವರ್ಮ – ಕಾತಂತ್ರ ವ್ಯಾಕರಣ
- ರಾಯನಸಾರ , ಸಮಯಸಾರ , ಪ್ರವಚನಸಾರ
ಶಾತವಾಹನರ ಕಲೆ ಮತ್ತು ವಾಸ್ತುಶಿಲ್ಪ
- ಶಾತವಾಹನರ ಕಲಾ ಬೆಳವಣಿಗೆಯನ್ನು 3 ಭಾಗಗಳಾಗಿ ವಿಂಗಡಿಸಬಹುದು .
- ಶಿಲ್ಪಕಲೆ
- ಚಿತ್ರಕಲೆ
- ಶಿಲಾಕಟ್ಟಡಗಳು ( ವಾಸ್ತುಶಿಲ್ಪ )
ಶಾತವಾಹನರ ಶಿಲಾಕಟ್ಟಡಗಳಲ್ಲಿ 3 ವಿಧಗಳು
- ಚೈತ್ಯಾಲಯಗಳು
- ವಿಹಾರಗಳು
- ಸ್ಕೂಪಗಳು
ಶಾತವಾಹನರ ಚೈತ್ರಾಲಯಗಳು ಇವು ಬೌದ್ಧರ ಪ್ರಾರ್ಥನಾ ಮಂದಿರಗಳು
- ಬಾಜ , ಬೇಡ , ನಾಸಿಕ್ , ಆಂತಾದ 9 ಮತ್ತು 10 ನೇ ಗುಹೆಗಳು
- ಕಾರ್ಲೆ , ಕೊಂಡಣ್ಣ , ಪೀತಲ್ ಕೋರ .
ಶಾತವಾಹನರ ಚಿತ್ರಕಲೆ
- ಅಜಂತಾದ 9 ಮತ್ತು 10 ನೇ ಗುಹೆಗಳಲ್ಲಿ ಕಂಡು ಬರುತ್ತವೆ .
- ಕಲ್ಲ ವಗ್ಗ ಎಂಬ ಗ್ರಂಥದಲ್ಲಿನ 2 ಅಧ್ಯಾಯಗಳು – ಇವರ ಕಾಲದ ಚಿತ್ರಕಲೆಯನ್ನು ವರ್ಣಿಸುತ್ತವೆ .
ಶಾತವಾಹನರ ವಿಹಾರಗಳು
- ಇವುಗಳು ಬೌದ್ಧ ಸನ್ಯಾಸಿಗಳ ವಾಸಸ್ಥಳಗಳು ಸಾಮಾನ್ಯವಾಗಿ ಪ್ರತಿ ಚೈತ್ಯಾಲಯ ಬಳಿ ಇವುಗಳು ಇರುತ್ತವೆ . ಇವುಗಳನ್ನು ಸಂಘರಾಮಗಳೆಂತಲೂ ಕರೆಯುವರು .
- ಅಜಂತಾದ 12 ಗುಹೆ ಶಾತವಾಹನರ ಅತಿ ಪ್ರಾಚೀನ ವಿಹಾರವಾಗಿದೆ .
ಶಾತವಾಹನರ ಸ್ಕೂಪಗಳು
- ಬೌದ್ಧ ಸನ್ಯಾಸಿಗಳ ಸಮಾಧಿ ಸ್ಥಳಗಳು ಇವಾಗಿದೆ .
- ಉದಾ : ಕಾರ್ಲೆ , ಜಗ್ಗಯ್ಯಪೇಟೆ ಭಟ್ಟಿ ಪ್ರೋಲು ಅಮರಾವತಿ ( ಅತಿದೊಡ್ಡ ಸ್ತೂಪ ) ನಾಗಾರ್ಜುನಕೊಂಡ ( ಪ್ರಮುಖ ಸ್ತೂಪ )