Sahitya Karnataka ಸಾಹಿತ್ಯ ಕರ್ನಾಟಕ , sahitya karnataka,ಸಾಹಿತ್ಯ ಕರ್ನಾಟಕ, kannada sahitya,janapada sahitya in kannada, kannada sahitya in kannada, kannada sahitya charitre, ನವೋದಯ
Sahitya Karnataka ಸಾಹಿತ್ಯ ಕರ್ನಾಟಕ
ಕನ್ನಡ ಸಾಹಿತ್ಯದ ಚರಿತ್ರೆಯನ್ನು ಮೂರು ಘಟ್ಟಗಳಾಗಿ ವಿಂಗಡಿಸಬಹುದು: ಹಳೆಗನ್ನಡ, ನಡುಗನ್ನಡ ಹಾಗೂ ಆಧುನಿಕ ಕನ್ನಡ.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹತ್ತನೇ ಶತಮಾನದಿಂದ ಸುಮಾರು ಹನ್ನೆರಡನೇ ಶತಮಾನದ ವರೆಗಿನ ಕಾಲಘಟ್ಟವನ್ನು ಹಳೆಗನ್ನಡ ಎಂದು ಗುರುತಿಸಬಹುದು.
ಈ ಕಾಲದ ಸಾಹಿತ್ಯ ಮುಖ್ಯವಾಗಿ ಜೈನ ಧರ್ಮವನ್ನು ಅವಲಂಬಿಸಿದೆ.
ಕನ್ನಡ ಚರಿತ್ರೆಯ ಈ ಘಟ್ಟಕ್ಕೆ ಆದಿ-ಕಾವ್ಯ ಎಂದೂ ಸಹ ಕರೆಯಬಹುದು.
ಈ ಕಾಲದ ಅತಿ ಪ್ರಸಿದ್ಧ ಕವಿಯೆಂದರೆ ಪಂಪ (ಕ್ರಿ.ಶ. 902-975).
ಪಂಪನ ವಿಕ್ರಮಾರ್ಜುನ ವಿಜಯ ಅಥವಾ ಪಂಪ ಭಾರತ ಇಂದಿಗೂ ಮೇರು ಕೃತಿಯೆಂದು ಪರಿಗಣಿತವಾಗಿದೆ.
ಪಂಪ ಭಾರತ ಮತ್ತು ತನ್ನ ಇನ್ನೊಂದು ಮುಖ್ಯಕೃತಿಯಾದ ಆದಿಪುರಾಣದ ಮೂಲಕ ಪಂಪ ಕನ್ನಡ ಕಾವ್ಯಪರಂಪರೆಯ ದಿಗ್ಗಜರಲ್ಲಿ ಒಬ್ಬನಾಗಿದ್ದಾನೆ.
ಪಂಪ ಭಾರತ ಸಂಸ್ಕೃತ ಮಹಾಭಾರತದ ಕನ್ನಡ ರೂಪಾಂತರ.
ತನ್ನ ಮಾನವತಾವಾದ ಹಾಗೂ ಗಂಭೀರ ಲೇಖನಶೈಲಿಯ ಮೂಲಕ ಕನ್ನಡದ ಅತ್ಯಂತ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬನಾಗಿದ್ದಾನೆ.
ಇದೇ ಕಾಲದ ಇನ್ನೊಬ್ಬ ಪ್ರಮುಖ ಲೇಖಕನೆಂದರೆ ಶಾಂತಿನಾಥ ಪುರಾಣವನ್ನು ರಚಿಸಿದ ಪೊನ್ನ (939-966).
ಈ ಕಾಲದ ಮತ್ತೊಬ್ಬ ಹೆಸರಾಂತ ಕವಿ ರನ್ನ (949-?).
ರನ್ನನ ಪ್ರಮುಖ ಕೃತಿಗಳು ಜೈನ ಧರ್ಮೀಯವಾದ ಅಜಿತ ತೀರ್ಥಂಕರ ಪುರಾಣ ಮತ್ತು ಗದಾಯುದ್ಧಂ ಅಥವಾ ಸಾಹಸಭೀಮ ವಿಜಯ.
ಇದು ಇಡೀ ಮಹಾಭಾರತದ ಒಂದು ಸಿಂಹಾವಲೋಕನ ದೃಷ್ಟಿ.
ಮಹಾಭಾರತ ಯುದ್ಧದ ಕೊನೆಯ ದಿನದಲ್ಲಿ ಸ್ಥಿತವಾಗಿದ್ದರೂ ಸಿಂಹಾವಲೋಕನ ಕ್ರಮದಲ್ಲಿ ಇಡಿಯ ಮಹಾಭಾರತವನ್ನು ಪರಿಶೀಲಿಸುತ್ತದೆ.
ಛಂದಸ್ಸಿನ ದೃಷ್ಟಿಯಿಂದ ಈ ಕಾಲದ ಕಾವ್ಯ ಚಂಪೂ ಶೈಲಿಯಲ್ಲಿದೆ (ಒಂದು ರೀತಿಯ ಗದ್ಯ ಮಿಶ್ರಿತ ಪದ್ಯ)
Sahitya Karnataka ಸಾಹಿತ್ಯ ಕರ್ನಾಟಕ
ನಡುಗನ್ನಡ
ನಡುಗನ್ನಡ ಸಾಹಿತ್ಯದಲ್ಲಿ ಅನೇಕ ಹೊಸ ಸಾಹಿತ್ಯ ಪ್ರಕಾರಗಳು ಬೆಳಕಿಗೆ ಬಂದವು.
ಇವುಗಳಲ್ಲಿ ಮುಖ್ಯವಾದವು
- ರಗಳೆ
- ಸಾಂಗತ್ಯ ಮತ್ತು
- ದೇಸಿ
ಈ ಕಾಲದ ಸಾಹಿತ್ಯ ಜೈನ, ಹಿಂದೂ ಹಾಗೂ ಜಾತ್ಯತೀತ ಬೋಧನೆಗಳ ಮೇಲೆ ಆಧಾರಿತವಾಗಿದೆ.
ಈ ಘಟ್ಟದ ಪ್ರಮುಖ ಲೇಖಕರಲ್ಲಿ ಇಬ್ಬರೆಂದರೆ ಹರಿಹರ ಮತ್ತು ರಾಘವಾಂಕ.
ಇಬ್ಬರೂ ತಮ್ಮದೇ ಶೈಲಿಯಲ್ಲಿ ಕನ್ನಡ ಸಾಹಿತ್ಯದ ದಾರಿಯನ್ನು ಬೆಳಗಿದವರು.
ಹರಿಹರ ರಗಳೆ ಸಾಹಿತ್ಯವನ್ನು ಬಳಕೆಗೆ ತಂದನು
ತನ್ನ ಶೈವ ಮತ್ತು ವೀರಶೈವ ಕೃತಿಗಳ ಮೂಲಕ. ರಾಘವಾಂಕ ತನ್ನ ಆರು ಕೃತಿಗಳ ಮೂಲಕ ಷಟ್ಪದಿ ಛಂದಸ್ಸನ್ನು ಜನಪ್ರಿಯಗೊಳಿಸಿದನು.
ರಾಘವಾಂಕನ ಮುಖ್ಯ ಕೃತಿ ಹರಿಶ್ಚಂದ್ರ ಕಾವ್ಯ
ಪೌರಾಣಿಕ ಪಾತ್ರವಾದ ಹರಿಶ್ಚಂದ್ರನ ಜೀವನವನ್ನು ಕುರಿತದ್ದು.
ಈ ಕೃತಿ ಸಹ ತನ್ನ ತೀವ್ರವಾದ ಮಾನವತಾವಾದಕ್ಕೆ ಪ್ರಸಿದ್ಧವಾಗಿದೆ.
ಇದೇ ಕಾಲದ ಇನ್ನೊಬ್ಬ ಪ್ರಸಿದ್ಧ ಜೈನ ಕವಿ ಜನ್ನ.
ಜನ್ನ ನ ಕೃತಿಗಳಾದ ಯಶೋಧರ ಚರಿತೆ ಮತ್ತು ಅನಂಥನಾಥ ಪುರಾಣಗಳ ಮೂಲಕ ಜೈನ ಸಂಪ್ರದಾಯದ ಬಗ್ಗೆ ಬರೆದನು.
ಇದೇ ಕಾಲದ ಕನ್ನಡ ವ್ಯಾಕರಣದ ಬಗೆಗಿನ ಮುಖ್ಯ ಕೃತಿ ಕೇಶಿರಾಜನ ಶಬ್ದ ಮಣಿ ದರ್ಪಣ.
Sahitya Karnataka ಸಾಹಿತ್ಯ ಕರ್ನಾಟಕ
ವಚನ ಸಾಹಿತ್ಯ:
sahitya karnataka
ವಚನಗಳು ಎಂದು ಸಾಮಾನ್ಯವಾಗಿ ಕರೆಯಲಾಗುವ ವೀರಶೈವ ಶರಣರ ವಚನಗಳು ಮುಕ್ತ ಛಂದಸ್ಸಿನಲ್ಲಿವೆ.
ಬಸವೇಶ್ವರ, ಅಕ್ಕಮಹಾದೇವಿ ಮೊದಲಾದವರ ವಚನಗಳನ್ನು ಶಾಸ್ತ್ರೀಯ ಸಂಗೀತದಲ್ಲಿ ಅಳವಡಿಸಿ ಮಲ್ಲಿಕಾರ್ಜುನ ಮನಸೂರ ಮೊದಲಾದ ಹಿಂದುಸ್ತಾನಿ ಸಂಗೀತ ಕಾರರು ಹಾಡಿದ್ದಾರೆ.
ಶರಣರ ನಂತರದ ಕವಿಯಾದ ಸರ್ವಜ್ಞರ ವಚನಗಳು ಮಾತ್ರ ತ್ರಿಪದಿಯಲ್ಲಿವೆ.
ವಚನಗಳು ಅಂದಿನ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗೆಗಿನ ಯೋಚನಾಧಾರೆಗಳು.
ಇನ್ನೂ ಮುಖ್ಯವಾಗಿ, ವಚನ ಸಾಹಿತ್ಯ ಅಂದಿನ ಸಾಮಾಜಿಕ ಕ್ರಾಂತಿಯ ಪ್ರಕ್ರಿಯೆಗೆ ಕನ್ನಡಿ ಹಿಡಿಯುತ್ತದೆ.
ಬಸವಣ್ಣನವರಿಂದ ಆರಂಭವಾದ ಈ ಕ್ರಾಂತಿ ಜಾತಿ, ಮತ, ಧರ್ಮಗಳ ಯೋಚನೆಗಳ ಕ್ರಾಂತಿಕಾರಿ ಮರು-ಪರಿಶೀಲನೆಗೆ ದಾರಿ ಮಾಡಿಕೊಟ್ಟಿತು.
ವಚನ ಸಾಹಿತ್ಯದಿಂದ ಬಂದ ಮುಖ್ಯ ಬೋಧನೆಗಳೆಂದರೆ ಕಾಯಕವೇ ಕೈಲಾಸ ಮತ್ತು ಅಧ್ಯಾತ್ಮಿಕತೆಯ ಬಗ್ಗೆ ಹೊಸ ನೋಟ.
ವಚನ ಸಾಹಿತ್ಯದ ಪ್ರಮುಖ ಹರಿಕಾರರೆಂದರೆ ಬಸವೇಶ್ವರ (1134-1196), ಅಲ್ಲಮಪ್ರಭು ಮತ್ತು ಕನ್ನಡದ ಮೊದಲ ಮಹಿಳಾ ಲೇಖಕಿಯಾದ ಅಕ್ಕ ಮಹಾದೇವಿ (12ನೇ ಶತಮಾನ).
Sahitya Karnataka ಸಾಹಿತ್ಯ ಕರ್ನಾಟಕ
ಕುಮಾರವ್ಯಾಸ
ಕುಮಾರವ್ಯಾಸ ಪ್ರಾಯಶಃ ಕನ್ನಡದ ಅತ್ಯಂತ ಪ್ರಸಿದ್ಧ ಹಾಗೂ ಅತ್ಯಂತ ಪ್ರಭಾವಶಾಲಿ ಕವಿ ಎಂದರೂ ಸರಿ.
ಕುಮಾರವ್ಯಾಸನ ಜೀವನಕೃತಿ ಕರ್ನಾಟ ಭಾರತ ಕಥಾಮಂಜರಿ.
ಇದು ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಅತ್ಯದ್ಭುತ ಶೈಲಿಯಲ್ಲಿ ಭಾಮಿನಿ ಷಟ್ಪ್ದಿದಿಯಲ್ಲಿ ರಚಿಸಿದ್ದಾನೆ.
ಅದು ಕೇವಲ ರೂಪಾಂತರವಲ್ಲ ; ಅನೇಕ ಕವಿ ಸಮಯ ದಿಂದ ಕೂಡಿದ್ದು , ಸ್ವಂತ ಕೃತಿಯೆಂಬಂತೆ ರಚಿಸಿದ್ದಾನೆ .
ಈ ಕೃತಿ ಕನ್ನಡ ಸಾಹಿತ್ಯದಲ್ಲಿ ಅತಿ ಹೆಚ್ಚು ಮಾನ್ಯತೆ ಪಡೆದ ಕೃತಿಯಿದ್ದೀತು.
ಇದರ ಪ್ರಸಿದ್ಧಿಗೆ ಪ್ರಮುಖ ಕಾರಣ ಇದು ಎಲ್ಲ ಕಾಲಗಳಲ್ಲಿಯೂ ಎಲ್ಲ ಬುದ್ಧಿಮತ್ತೆಯ ಜನರಿಗೂ ಸಹ ಅವರವರ ಶಕ್ತಿಗನುಸಾರವಾಗಿ ನಿಲುಕಿದೆ.
ಇಡೀ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿಸಲ್ಪಟ್ಟಿದೆ.
ಕುಮಾರವ್ಯಾಸ ಹುಡುಕಿ ನೋಡುವ ಮಾನವ ಭಾವಗಳ ವ್ಯಾಪ್ತಿ, ಆತನ ಕಾವ್ಯದ ವೈವಿಧ್ಯತೆ ಮತ್ತು ಶಬ್ದಭಂಡಾರ ಓದುಗರನ್ನು ಬೆರಗುಗೊಳಿಸುತ್ತವೆ.
ಕುಮಾರವ್ಯಾಸ ಎಲ್ಲಕ್ಕಿಂತ ಹೆಚ್ಚಾಗಿ ತನ್ನ ರೂಪಕಾಲಂಕಾರ ಚಮತ್ಕಾರಕ್ಕೆ ಪ್ರಸಿದ್ಧನಾಗಿದ್ದಾನೆ.
ಇದರಿಂದಾಗಿಯೇ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದಿಗೂ ಪಾತ್ರನಾಗಿದ್ದಾನೆ.
ಕುಮಾರವ್ಯಾಸನು ಗದುಗಿನ ವೀರನಾರಾಯಣನ ಭಕ್ತ, ಅವನನ್ನು ಗದುಗಿನ ನಾರಣಪ್ಪ ಎಂದು ಕರೆಯುತ್ತಾರೆ.
ಈತನ ಮೊದಲಿನ ಹೆಸರು ನಾರಯಣಪ್ಪ ಎಂದು (ಹೆಸರು).
Sahitya Karnataka ಸಾಹಿತ್ಯ ಕರ್ನಾಟಕ
ದಾಸ ಸಾಹಿತ್ಯ:
sahitya karnataka
ದಾಸ ಸಾಹಿತ್ಯ (ಭಕ್ತಿ ಸಾಹಿತ್ಯ) 15ನೇ ಶತಮಾನದಲ್ಲಿ ಆರಂಭಗೊಂಡ ಭಕ್ತಿ ಪಂಥದ ಹರಿದಾಸರಿಂದ ವಿರಚಿತವಾದದ್ದು.
ಈ ಪದ್ಯಗಳಿಗೆ ಸಾಮಾನ್ಯವಾಗಿ ‘ಪದ’ ಗಳೆಂದು ಹೆಸರು.
ಇವು ಭಗವಂತನಲ್ಲಿ ಒಂದಾಗ ಬಯಸುವ ಭಕ್ತನ ಭಾವವನ್ನು ಪ್ರತಿಬಿಂಬಿಸುತ್ತವೆ.
ಈ ಸಾಹಿತ್ಯ ಸಂಗೀತದೊಂದಿಗೂ ನಿಲುಕಿದೆ.
ದಾಸ ಸಾಹಿತ್ಯ ಭಾರತದ ಶಾಸ್ತ್ರೀಯ ಸಂಗೀತ ಪದ್ಧತಿಗಳಲ್ಲೊಂದಾದ ಕರ್ನಾಟಕ ಸಂಗೀತಕ್ಕೆ ಬುನಾದಿಯಾಗಿದೆ.
ದಾಸರ ಪದಗಳಿಗೆ ದೇವರನಾಮಗಳೆಂದೂ ಹೆಸರು.
ಈ ಪ್ರಕಾರದ ಮುಖ್ಯ ಕನ್ನಡ ಕವಿಗಳೆಂದರೆ ಪುರಂದರದಾಸ (1494-1564) ಮತ್ತು ಕನಕದಾಸ. ಇವರನ್ನು ದಾಸ ಸಾಹಿತ್ಯದ ಅಶ್ವಿನಿದೇವತೆಗಳೆಂದು ಕರೆಯಲಾಗಿದೆ.
Sahitya Karnataka ಸಾಹಿತ್ಯ ಕರ್ನಾಟಕ
ಕರ್ನಾಟಕ ಏಕೀಕರಣ ಚಳುವಳಿ
- ಕರ್ಣಾಟಕ ವಿದ್ಯಾವರ್ಧಕ ಸಂಘ
- ಕನ್ನಡ ಸಾಹಿತ್ಯ ಪರಿಷತ್ತು
- ಕರ್ನಾಟಕ ಸಭೆ
- ಕರ್ನಾಟಕ ರಾಜಕೀಯ ಪರಿಷತ್ತು
- ಕೇಳ್ಕರ್ ಸಮಿತಿ ವರದಿ
- ಮಾಂಟೆಗೋ-ಚೆಲ್ಮ್ಸ್ಫರ್ಡ್ ಸಮಿತಿ
- ಮೋತಿಲಾಲ್ ನೆಹರೂ ಸಮಿತಿ
- ವಿಧಾನ ಪರಿಷತ್ತುಗಳಲ್ಲಿ ಪ್ರಸ್ತಾವನೆ
- ಸೈಮನ್ ಆಯೋಗ
- ಕರ್ನಾಟಕ ಏಕೀಕರಣ ಪರಿಷತ್ತುಗಳು ಮತ್ತು ಕರ್ನಾಟಕಸ್ಥರ ಮಹಾಸಭೆ
- ಹತ್ತನೆಯ ಕರ್ನಾಟಕ ಏಕೀಕರಣ ಪರಿಷತ್ತು ಮತ್ತು ಮೂವತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನ
- ಮುಂಬಯಿ ಶಾಸನ ಸಭೆಯಲ್ಲಿ ವಿಷಯ ಮಂಡನೆ
- ಬೆಂಗಳೂರು ಮತ್ತು ಬೀರೂರುಗಳ ಕಾಂಗ್ರೆಸ್ ಅಧಿವೇಶನ
- ಧರ್ ಆಯೋಗ
- ಜೆ.ವಿ.ಪಿ. (ತ್ರಿಮೂರ್ತಿ) ಸಮಿತಿ
- ಪಕ್ಷೇತರ ಕರ್ನಾಟಕ ಏಕೀಕರಣ ಪರಿಷತ್ತು
- ಪೊಟ್ಟಿ ಶ್ರೀರಾಮುಲು ಉಪವಾಸ ಮತ್ತು ಮರಣ
ಮುಖ್ಯಾಂಶಗಳು
Sahitya Karnataka ಸಾಹಿತ್ಯ ಕರ್ನಾಟಕ
- ಕನ್ನಡ ಭಾಷಾ ರಾಜ್ಯ ಉದಯಕ್ಕೆ ಮೊದಲಿಗೆ ನಾಂದಿ ಹಾಕಿದವರು ಡೆಪ್ಯುಟಿ ಚನ್ನಬಸಪ್ಪ ,
- 1890 ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆ . ( ಸ್ಥಾಪಕರು , ಹ.ರಾ. ದೇಶಪಾಂಡೆ )
- ಕನ್ನಡ ಕುಲ ಪುರೋಹಿತ ಎಂದು ಹೆಸರಾದ ಆಲೂರು ವೆಂಕಟರಾಯರು ” ಕರ್ನಾಟಕ ಗತವೈಭವ ” ಮತ್ತು ” ಕರ್ನಾಟಕ ವೀರ ರತ್ನಗಳು ” ಕೃತಿಯ ಮೂಲಕ ಕನ್ನಡಿಗರಲ್ಲಿ ಭಾಷೆ , ಸಂಸ್ಕೃತಿ , ಚರಿತ್ರೆ ಬಗ್ಗೆ ಅಭಿಮಾನ ಮೂಡಿಸಿ ಏಕೀಕರಣಕ್ಕೆ ಸ್ಫೂರ್ತಿ ನೀಡಿದರು .
- 1915 ರಲ್ಲಿ ರಚನೆಯಾದ ಕನ್ನಡ ಸಾಹಿತ್ಯ ಪರಿಷತ್ , 1916 ರಲ್ಲಿ ಧಾರವಾಡದಲ್ಲಿ ಸ್ಥಾಪನೆಯಾದ ಕರ್ನಾಟಕ ಸಭಾಗಳು ಏಕೀಕರಣಕ್ಕೆ ಸ್ಫೂರ್ತಿ ನೀಡಿದವು
- 1920 ರಲ್ಲಿ ಧಾರವಾಡದಲ್ಲಿ ದಿವಾನ್ ವಿ.ಪಿ. ಮಾಧವರಾಯರ ಅಧ್ಯಕ್ಷತೆಯಲ್ಲಿ ಪ್ರಥಮ ರಾಜ್ಯ ರಾಜಕೀಯ ಅಧಿವೇಶನ ನಡೆಯಿತು . ಇಲ್ಲಿ ತೆಗೆದುಕೊಂಡ ತೀರ್ಮಾನದಂತೆ 1920 ರ ನಾಗಪುರ ಕಾಂಗ್ರೆಸ್ ಅಧಿವೇಶನದಲ್ಲಿ ಆಗ್ರಹ ಮಾಡಿದ್ದರಿಂದ ಕನ್ನಡಿಗರಿಗೆ ಪ್ರತ್ಯೇಕವಾದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ( KPCC ) ಸ್ಥಾಪನೆಗೆ ಅವಕಾಶ ದೊರೆಯಿತು . ಇದರ ಪ್ರಥಮ ಅಧ್ಯಕ್ಷರಾಗಿ ಕರ್ನಾಟಕದ ಕೇಸರಿ ಎಂದು ಹೆಸರಾದ ಗಂಗಾಧರರಾವ್ ದೇಶಪಾಂಡೆಯವರು ನೇಮಕವಾದರು .
- 1924 – ಸಿದ್ದಪ್ಪ ಕಂಬಳಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಪ್ರಥಮ ಏಕೀಕರಣ ಸಮ್ಮೇಳನ ನಡೆಯಿತು , ಉಯಿಲಗೋಳ ನಾರಾಯಣರಾಯರ ‘ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ‘ ಗೀತೆಯನ್ನು ಇಲ್ಲಿ ಹಾಡಲಾಯಿತು .
- 1946 ರಲ್ಲಿ ಬೊಂಬಾಯಿಯಲ್ಲಿ ಅಲ್ಲಿನ ಮುಖ್ಯಮಂತ್ರಿ ಬಿ.ಜಿ. ಖೇರ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಏಕೀಕರಣ ಸಭೆ ನಡೆದಾಗ ಸರ್ದಾರ್ ಪಟೇಲ್ರವರು ಉದ್ಘಾಟನಾ ಭಾಷಣ ಮಾಡುತ್ತ “ ಸ್ವತಂತ್ರ ಭಾರತದ ಮೊಟ್ಟಮೊದಲ ಕರ್ತವ್ಯವೆಂದರೆ ಭಾಷಾವಾರು ಪ್ರಾಂತ್ಮಗಳ ರಚನೆ ” ಎಂದು ಘೋಷಿಸಿದರು .
- 1947 ರಲ್ಲಿ ಎಸ್ . ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಏಕೀಕರಣ ಮಹಾಸಮಿತಿ ರಚನೆಯಾಯಿತು .
- ಧಾರ್ ಸಮಿತಿ : 1948 ಜನವರಿಯಲ್ಲಿ ಭಾಷಾವಾರು ರಚನೆಯ ಸಾಧಕಬಾಧಕಗಳ ಬಗ್ಗೆ ಅಧ್ಯಯನ ಮಾಡಲು ಸಂವಿಧಾನಾ ರಚನಾ ಸಭೆಯು ಈ ಸಮಿತಿಯನ್ನು ನೇಮಿಸಿತು . 1948 ಡಿಸೆಂಬರ್ನಲ್ಲಿ ಇದು ವರದಿ ಸಲ್ಲಿಸಿ ಭಾಷಾವಾರು ರಚನೆಯನ್ನು ವಿರೋಧಿಸಿತು .
- ಧಾರ್ ಸಮಿತಿ ವರದಿಯಿಂದ ರೊಚ್ಚಿಗೆದ್ದ ಜನತೆಯನ್ನು ಸಮಾಧಾನ ಪಡಿಸಲು 1948 ಡಿಸೆಂಬರ್ನಲ್ಲಿ ಜೈಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕೈಗೊಂಡ ತೀರ್ಮಾನದಂತೆ ಈ ಸಮಸ್ಯೆ ಬಗೆಹರಿಸಲು ಜೆ.ಪಿ.ಪಿ. ಸಮಿತಿಯನ್ನು ನೇಮಸಿತು .
- ಜೆ.ವಿ.ಪಿ. ( ಜವಹರಲಾಲ್ ನೆಹರು , ವಲ್ಲಭಬಾಯಿಪಟೇಲ್ ಮತ್ತು ಪಟ್ಟಾಭಿಸೀತಾರಾಮಯ್ಯನವರ ನೇತೃತ್ವದ ಸಮಿತಿ ) ಸಮಿತಿಯು 1949 ಏಪ್ರಿಲ್ನಲ್ಲಿ ವರದಿ ಸಲ್ಲಿಸಿ , ಅಂದ್ರ ರಚನೆಯನ್ನು ಮಾತ್ರ ಬೆಂಬಲಿಸಿ ಇತರ ಭಾಷಾವಾರು ಪ್ರಾಂತ್ಯಗಳ ನಿರ್ಮಾಣವನ್ನು ವಿರೋಧಿಸಿತು
Sahitya Karnataka ಸಾಹಿತ್ಯ ಕರ್ನಾಟಕ
- 1951 ರಲ್ಲಿ ಕೆ . ಆರ್ . ಕಾರಂತ್ ಅಧ್ಯಕ್ಷತೆಯಲ್ಲಿ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ ಸ್ಥಾಪನೆಯಾಯಿತು .
- 1952 ಅಕ್ಟೋಬರ್ನಲ್ಲಿ ಆಂಧ್ರಪ್ರದೇಶದ ನಿರ್ಮಾಣಕ್ಕಾಗಿ ಪೊಟ್ಟಿ ಶ್ರೀರಾಮುಲು 58 ದಿನಗಳ ಕಾಲ ಅಮರಣಾಂತ ಉಪವಾಸ ಕೈಗೊಂಡು ಡಿಸೆಂಬರ್ 15 ರಂದು ಮರಣ ಹೊಂದಿದರು . ಆಂಧ್ರದಲ್ಲಿ ತೀವ್ರ ಗಲಭೆಗಳು ಆದಾಗ ನೆಹರುರವರು ಡಿಸೆಂಬರ್ 19 ರಂದೇ ಸಂಸತ್ತಿನಲ್ಲಿ ಆಂಧ್ರ ರಚನೆಯನ್ನು ಘೋಷಿಸಿದರು .
- ಜಸ್ಟಿಸ್ ಕೆ.ಎನ್ , ವಾಂಚೂ ಕಮಿಟಿ : ಈ ಸಮಿತಿಯನ್ನು ಆಂಧ್ರರಚನೆಗಾಗಿ ನೇಮಿಸಲಾಯಿತು . ಈ ಸಮಿತಿಯ ತೀರ್ಮಾನದಂತೆ ಬಳ್ಳಾರಿ ಮೈಸೂರು ಪ್ರಾಂತ್ಯಕ್ಕೆ ಸೇರ್ಪಡೆಯಾಯಿತು .
- ಕರ್ನಾಟಕ ರಾಜ್ಯ ರಚನೆಗಾಗಿ ಅಂದಾನಪ್ಪ ದೊಡ್ಡ ಮೇಟಿಯವರು ಧಾರವಾಡದ ತಮ್ಮ ಗ್ರಾಮ ಜಕ್ಕುಲಿಯಲ್ಲಿ ಹಾಗೂ ಶಂಕರಗೌಡ ಅಳವಂಡಿಯವರು ಹುಬ್ಬಳ್ಳಿಯ ಅದರಗುಂಚಿಯಲ್ಲಿ ಉಪವಾಸ ಸತ್ಯಾಗ್ರಹ ಹೂಡಿದರು .
- 1953 ಡಿಸೆಂಬರ್ 29 ರಂದು ಕೇಂದ್ರ ಸರ್ಕಾರವು ಅಂತಿಮವಾಗಿ ಫಜಲ್ ಅಲಿ ಅಧ್ಯಕ್ಷತೆಯಲ್ಲಿ ರಾಜ್ಯಗಳ ಪುನರ್ ವಿಂಗಡನಾ ಆಯೋಗವನ್ನು ರಚಿಸಿತು ಹೆಚ್.ಎನ್ . ಚಂದ್ರು ಮತ್ತು ಕೆ.ಎಮ್ . ಪಣಿಕ್ಕರ್ ಈ ಆಯೋಗದ ಸದಸ್ಯರಾಗಿದ್ದರು
- ಫಜಲ್ ಅಲಿ ಕಮಿಟಿಯ ವರದಿಯಂತೆ , 1956 ನವೆಂಬರ್ 1 ರಂದು ನವ ಮೈಸೂರು ರಾಜ್ಯ ಉದಯವಾತು
ನವ ಮೈಸೂರು ರಾಜ್ಯಕ್ಕೆ ಸೇರ್ಪಡೆಯಾದ ಪ್ರದೇಶಗಳು
Sahitya Karnataka ಸಾಹಿತ್ಯ ಕರ್ನಾಟಕ
- ಹೈದ್ರಾಬಾದ್ ಪ್ರಾಂತ್ಯದಿಂದ – ಬೀದರ್ ಗುಲ್ಬರ್ಗ , ರಾಯಚೂರು .
- ಬಳ್ಳಾರಿ
- ಬೊಂಬಾಯಿ ಪ್ರಾಂತ್ಯದಿಂದ – ಬೆಳಗಾವಿ ( ಚಂದಗಡ ತಾಲ್ಲೂಕು ಹೊರತು ಪಡಿಸಿ ) ಬಿಜಾಪುರ – ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು .
- ಮುಖ್ಯಮಂತ್ರಿ ದೇವರಾಜ ಅರಸ್ರವರ ಕಾಲದಲ್ಲಿ 1973 ನವೆಂಬರ್ 1 ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು .
- ಮದ್ರಾಸ್ ಪ್ರಾಂತ್ಯದಿಂದ – ದಕ್ಷಿಣ ಕನ್ನಡ ಜಿಲ್ಲೆ ( ಕಾಸರಗೋಡು ಮತ್ತು ಅಮಿನಿ ದ್ವೀಪಗಳನ್ನು ಬಿಟ್ಟು ) ಕೊಯಮತ್ತೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು . ಕೊಡಗು
ಇತರೆ ಸಂಬಂದಿಸಿದ ವಿಷಯಗಳು
- ಬಾದಾಮಿ ಚಾಲುಕ್ಯರ ಇತಿಹಾಸ
- ಕದಂಬರು ಇತಿಹಾಸ
- ತಲಕಾಡಿನ ಗಂಗರ ಇತಿಹಾಸ
- ನವ ಶಿಲಾಯುಗ ಭಾರತದ ಇತಿಹಾಸ
- ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳು
[email protected]