Nudigattugalu in Kannada, ಕನ್ನಡ ನುಡಿಗಟ್ಟುಗಳು, 500 ನುಡಿಗಟ್ಟುಗಳುಕನ್ನಡ ನುಡಿಗಟ್ಟುಗಳು pdf, nudigattu in kannada, notes, information, grammar, gk
Nudigattugalu in Kannada
ಅಂಗೈನಲ್ಲಿ: ಚೆನ್ನಾಗಿ ತಿಳಿದಿರುವುದು .
ಅಂಗೈಯಲ್ಲಿ ಜೀವ ಹಿಡಿದುಕೊಳ್ಳು : ಬಹಳ ಭಯ ಹಾಗೂ ಎಚ್ಚರಿಕೆಗಳಿಂದ ಕೂಡಿರು .
ಅಂತರ್ಲಾಗ ಹಾಕು : ಬಹಳ ಪ್ರಯತ್ನಮಾಡು .
ಅಗ್ರತಾಂಬೂಲ : ಮೊದಲ ಮರ್ಯಾದೆ .
ಅಗ್ರಪೀಠ : ಮುಖ್ಯ ಸ್ಥಾನ ; ಮೊದಲ ಮರ್ಯಾದೆ .
ಅಗ್ರವೀಳ್ಯ : ಮೊದಲ ಮರ್ಯಾದೆ .
ಅಜ್ಜನ ಕಾಲದ್ದು : ಬಹಳ ಹಳೆಯದು .
ಅಜ್ಜಿಕತೆ : ಕಟ್ಟುಕತೆ .
ಅಟ್ಟಕ್ಕೇರಿಸು : ಹೊಗಳಿ ಉಬ್ಬಿಸು .
ಅಡಕೆ ಕೊಡು : ಬೀಳ್ಕೊಡು .
ಅಡ್ಡದಾರಿ ಹಿಡಿ : ಕೆಟ್ಟಚಾಳಿಯಲ್ಲಿ ತೊಡಗು .
ಅನ್ನ ಕಿತ್ತುಕೊಳ್ಳು : ಜೀವನಮಾರ್ಗವನ್ನು ಕೆಡಿಸು ,
ಅನ್ನಕ್ಕೆ ಕಲ್ಲುಹಾಕು : ಜೀವನಮಾರ್ಗವನ್ನು ಹಾಳು ಮಾಡು .
ಅನ್ನದ ದಾರಿ : ಬದುಕುವ ಮಾರ್ಗ .
ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ : ಬಹಳ ಅಪರೂಪವಾಗಿ ,
ಅರೆದು ಕುಡಿಸು : ಚೆನ್ನಾಗಿ ತಿಳಿಯುವಂತೆ ಹೇಳಿ ಕೊಡು .
ಅರ್ಧಚಂದ್ರ ಪ್ರಯೋಗಮಾಡು : ಕತ್ತು ಹಿಡಿದು ನೂಕು .
ಅವತಾರ ಮುಗಿ : ಶಕ್ತಿ , ಪ್ರಭಾವ ಮುಂತಾದುವೆಲ್ಲ ತೀರ ತಗ್ಗಿ ಹೋಗು ; ಸಾಯು .
ಅಳಲೆಕಾಯಿ ಪಂಡಿತ : ನಕಲಿ ವೈದ್ಯ .
ಅಳಿಲುಸೇವೆ : ನಿಷ್ಠೆಯಿಂದ ಮಾಡುವ ಅಲ್ಪಸೇವೆ .
ಅಳೆದು ಸುರಿದು : ಹಿಂದೆಮುಂದೆ ಯೋಚಿಸಿ .
ಆಕಾಶಕ್ಕೆ ಏಣಿ ಇಡು : ಅಸಾಧ್ಯವಾದ ಕೆಲಸಕ್ಕೆ ಕೈಹಾಕು ಆಕಾಶಕ್ಕೆ ಹಾರು : ಅತ್ಯಾನಂದಪಡು .
ಆಕಾಶಕ್ಕೇರು : ಹೆಚ್ಚಿನ ಆನಂದಪಡು ; ಜಂಬ ಮಾಡು
ಆಕಾಶದಿಂದ ಇಳಿದುಬರು : ದೊಡ್ಡಗುಣಗಳಿಂದ ಕೂಡಿರು .
ಆಟ ನಡೆ : ಪ್ರಭಾವ ಬೀರು
ಆಹುತಿಯಾಗು : ಬಲಿಯಾಗು ; ನಾಶಹೊಂದು .
ಇಂದ್ರ ಚಂದ್ರ ಅನ್ನು : ಅತಿಯಾಗಿ ಹೊಗಳು
ಕನ್ನಡ ನುಡಿಗಟ್ಟುಗಳು
ಇಕ್ಕಳ ಹಾಕು : ಒತ್ತಾಯದ ಪ್ರಚೋದನೆ ಮಾಡು ,
ಇತಿಶ್ರೀ : ಮುಕ್ತಾಯ ; ಕೊನೆ ಇಲ್ಲಿಯ ಕಡ್ಡಿಯನ್ನು ಅಲ್ಲಿ ಎತ್ತಿ ಇಡದಿರು ಯಾವ ಕೆಲಸವನ್ನೂ ಮಾಡದಿರು . ಇಹಲೋಕದ ಯಾತ್ರೆ ಮುಗಿಸು : ಸಾಯು
ಉಕ್ಕಿನ ಕಡಲೆ : ತುಂಬ ಗಹನವಾದ ಸಂಗತಿ ; ಅತ್ಯಂತ ಕಠಿನವಾದ ವಿಷಯ .
ಉತ್ಸವಮೂರ್ತಿ : ಚೆಲುವ ; ಕೆಲಸಮಾಡದೆ ಆಲಸ್ಯ ದಿಂದಿರುವವನು .
ಉಪ್ಪಿಡು : ಅನ್ನಹಾಕು ; ಕಾಪಾಡು .
ಉಪ್ಪಿಲ್ಲ ಹುಳಿಯಿಲ್ಲ : ನೀರಸವಾದುದು ; ಸ್ವಾರಸ್ಯವಿಲ್ಲದ್ದು .
ಉಪ್ಪುಖಾರ ಹಚ್ಚು : ಇಲ್ಲದ್ದನ್ನು ಸೇರಿಸು .
ಉಭಯಸಂಕಟ : ಸಂದಿಗ್ಧ ಸ್ಥಿತಿ .
ಉರಿದುಬೀಳು : ಬಹುವಾಗಿ ರೇಗು .
ಉರಿ ಹೊತ್ತಿಸು : ತುಂಬ ರೇಗಿಸು ; ವೈಷಮ್ಯ ಹುಟ್ಟಿಸು .
ಎಂಜಲಿಗೆ ಕೈಯೊಡ್ಡು : ಹಂಗಿಗೆ ಒಳಗಾಗು .
ಎಂಜಲುಕೈಯಲ್ಲಿ ಕಾಗೆ ಓಡಿಸದವ : ಜಿಪುಣ ,
ಎಕ್ಕಹುಟ್ಟಿಹೋಗು : ಹಾಳಾಗು .
ಎಡವಿದ ಕಡ್ಡಿ ಎತ್ತದಿರು : ಸೋಮಾರಿಯಾಗು .
ಎತ್ತಂಗಡಿಯಾಗು : ವರ್ಗವಾಗು ; ದಿವಾಳಿ ತೆಗೆ
ಎತ್ತಿದ ಕೈ : ಪ್ರವೀಣ .
ಎತ್ತಿದವರ ಕೈಗೂಸು : ಸ್ವಬುದ್ಧಿಯಿಲ್ಲದವ .
ಎದುರುಹಾಕಿಕೊಳ್ಳು : ವಿರೋಧ ಕಟ್ಟಿಕೊಳ್ಳು
ಎದೆಗಟ್ಟಿ ಮಾಡಿಕೊಳ್ಳು : ಧೈರ್ಯ ತಂದುಕೊಳ್ಳು
ಎದೆತಟ್ಟಿ ಹೇಳು : ಧೈರ್ಯದಿಂದ ಹೇಳು .
ಎದೆತುಂಬಿಬರು : ಭಾವೋದ್ವೇಗವುಂಟಾಗು .
ಎದೆಭಾರವಾಗು : ದುಃಖವಾಗು .
ಎದೆಮಾಡು : ಸಾಹಸಮಾಡು .
ಎದೆಯ ಮೇಲಿನ ಭಾರ ಇಳಿ : ಹೊಣೆಗಾರಿಕೆ ಕಡಿಮೆಯಾಗು .
ಎದೆಯ ಮೇಲೆ ಕುಳಿತುಕೊಳ್ಳು : ಮೇಲ್ವಿಚಾರಣೆ ನಡೆಸಿ ಕೆಲಸ ತೆಗೆದುಕೊಳ್ಳು ; ಅತಿ ಅವಸರ ಪಡಿಸು
500 ನುಡಿಗಟ್ಟುಗಳುಕನ್ನಡ
ಓಬಿರಾಯನ ಕಾಲ : ಬಹಳ ಪ್ರಾಚೀನ ಕಾಲ
ಕಂಕಣಬದ್ಧನಾಗು : ಸಂಕಲ್ಪ ಮಾಡು .
ಕಂತಪುರಾಣ : ಯಾರಿಗೂ ಬೇಡವಾದ ಹಳೆಯ ವಿಚಾರ .
ಕಂತೆಬಿಚ್ಚು : ಹಳೆಯ ಮತ್ತು ಸುಳ್ಳಾದ ವಿಷಯವನ್ನು ಹೇಳತೊಡಗು .
ಕಂಬಕೀಳು : ಓಡಿಹೋಗು . ಕಗ್ಗಂಟು : ಬಗೆಹರಿಸಲಾಗದ ಸಮಸ್ಯೆ .
ಕಚ್ಚೆಕಟ್ಟು : ಸಿದ್ಧನಾಗು .
ಕಟ್ಟಿಟ್ಟ ಬುತ್ತಿ : ಅನುಭವಿಸಲೇಬೇಕಾಗಿರುವುದು .
ಕಟ್ಟಿಡು : ಮಾಸಲಾಗಿಡು ; ಬದಿಗಿರಿಸು .
ಕಟ್ಟುಕತೆ : ಸುಳ್ಳುಮಾತು ; ಸುಳ್ಳು ಪ್ರಸಂಗ .
ಕಟ್ಟೆಪುರಾಣ : ಕಾಡುಹರಟೆ ; ವ್ಯರ್ಥಚರ್ಚೆ .
ಕಡಿದು ತೋರಣಕಟ್ಟು : ಶಿಕ್ಷಿಸು .
ಕಡಿವಾಣ ಹಾಕು : ಹತೋಟಿಯಲ್ಲಿಡು .
ಕಣಕ್ಕೆ ಇಳಿ : ಕರೆಗೆ ಸಿದ್ಧನಾಗಿ ನಿಲ್ಲು , ಹೋರಾಟಕ್ಕೆ ತೊಡಗು .
ಕಣ್ಣಾಡಿಸು : ಸ್ಕೂಲವಾಗಿ ಪರಿಶೀಲಿಸು ; ಮೇಲು ಮೇಲಕ್ಕೆ ನೋಡು .
ಕಣ್ಣಿಗೆ ಮಣ್ಣೆರಚು : ಮೋಸಮಾಡು .
ಕಣ್ಣಿಗೆಹಬ್ಬವಾಗು : ( ಸುಂದರ ದೃಶ್ಯಗಳನ್ನು ) ನೋಡಿ ಬಹಳ ಸಂತೋಷವುಂಟಾಗು .
ಕಣ್ಣಿಗೆ ಹೊಡೆ : ಸ್ಪಷ್ಟವಾಗಿ ಕಾಣಿಸಿಕೊಳ್ಳು .
ಕಣ್ಣಿನಲ್ಲಿ ಎಣ್ಣೆ ಹಾಕಿನೋಡು : ಜಾಗರೂಕತೆಯಿಂದ ಹುಡುಕು ; ಸೂಕ್ಷ್ಮವಾಗಿ ಪರಿಶೀಲಿಸು .
ಕಣ್ಣಿನಲ್ಲಿ ಕಣ್ಣಿಟ್ಟು ನೋಡು : ಬಹಳ ಎಚ್ಚರಿಕೆಯಿಂದ ನೋಡು .
ಕಣ್ಣಿನಲ್ಲಿ ರಕ್ತಬರು : ಬಹಳ ಯಾತನೆಯಾಗು : ಬಹಳ ಕಷ್ಟಪಡು .
ಕಣ್ಣಿನಿಂದ ಕೆಂಡಕಾರು : ಬಹಳ ಸಿಟ್ಟಾಗು .
ಕಣ್ಣೀರಿನಲ್ಲಿ ಕೈತೊಳೆ : ಬಹಳ ದುಃಖವನ್ನೂ ಕಷ್ಟವನ್ನೂ ಅನುಭವಿಸು .
ಕಣ್ಣುಕಣ್ಣು ಬಿಡು : ಮಿಡುಕಾಡು ; ಒದ್ದಾಡು ; ಪರದಾಡು .
ಕಣ್ಣುಕೀಳು : ನೋಟವನ್ನು ಬೇರೆಡೆಗೆ ಬದಲಿಸು ಕಣ್ಣು ಕೆಂಡಮಾಡು :
ಬಹಳ ಸಿಟ್ಟಾಗು . ಕಣ್ಣು ಕೆಂಪಾಗು : ಕೋಪವುಂಟಾಗು .
ಕಣ್ಣುಗುಡ್ಡೆ ಮೇಲಕ್ಕೆ ಸಿಕ್ಕಿಕೊಳ್ಳು : ಕಷ್ಟಕ್ಕೆ ಸಿಕ್ಕಿಕೊಳ್ಳು ಬಹಳ ಕಷ್ಟವಾಗು .
ಇತರೆ ಪ್ರಮುಖ ವಿಷಯಗಳ ಮಾಹಿತಿ
ಸುಭಾಷ್ ಚಂದ್ರ ಬೋಸ್ ಬಗ್ಗೆ ಮಾಹಿತಿ ಕನ್ನಡ