Nudigattu in Kannada | ನುಡಿಗಟ್ಟುಗಳು ಮತ್ತು ಅದರ ಅರ್ಥ

Nudigattu in Kannada| ನುಡಿಗಟ್ಟುಗಳು ಮತ್ತು ಅದರ ಅರ್ಥ

Nudigattu in Kannada, ನುಡಿಗಟ್ಟುಗಳು ಮತ್ತು ಅದರ ಅರ್ಥ, vyakarana in kannada, ನುಡಿಗಟ್ಟುಗಳು ಉದಾಹರಣೆ, FDA-SDA , KAS, PDO, PSI,PC, PDF, NOTES

Nudigattu in Kannada


ಎದೆಯ ಮೇಲೆ ಕೈಯಿಟ್ಟು ಹೇಳು : ಪ್ರಮಾಣ ಮಾಡಿ ಹೇಳು .

ಎಮ್ಮೆತಮ್ಮಣ್ಣ : ಮಂದಬುದ್ಧಿಯವ

ಎರಡು ನಾಲಗೆ : ಒಂದೊಂದು ಸಲ ಒಂದೊಂದು ರೀತಿ ಹೇಳುವುದು .

ಎರಡುಬಗೆ : ದ್ರೋಹವನ್ನು ಚಿಂತಿಸು ; ಭೇದ ಮಾಡು .

ಎರಡೆಣಿಸು : ದ್ರೋಹವನ್ನು ಚಿಂತಿಸು ; ಭೇದ ಮಾಡು .

ಎಲ್ಲರ ಬಾಯಲ್ಲೂ ಇರು : ಪ್ರಸಿದ್ಧವಾಗಿರು .

ಎಲೆ ಎಂಜಲು ಮಾಡು : ನೆಪಮಾತ್ರಕ್ಕೆ ಊಟಮಾಡು .

ಎಳ್ಳಷ್ಟು : ಅತ್ಯಲ್ಪ .

Nudigattu in Kannada

ಎಳ್ಳುನೀರು ಬಿಡು : ಶಾಶ್ವತವಾಗಿ ಋಣವನ್ನು ಕಡಿದುಕೊಳ್ಳು ; ಕೈಬಿಡು .

ಏತಿಯೆಂದರೆ ಪ್ರೀತಿಯೆನ್ನು : ಹೇಳಿದುದಕ್ಕೆ ವಿರುದ್ಧವಾಗಿ ಹೇಳು .

ಏಳನೆಯ ತಿಂಗಳಿನಲ್ಲಿ ಹುಟ್ಟಿದವ : ಅವಸರಪಡುವವ .

ಏಳು ಕೆರೆಯ ನೀರು ಕುಡಿದವ : ಬಹಳ ಅನುಭವ ಶಾಲಿ .

ಒಂಟಿಕಾಲಿನ ಮೇಲೆ ನಿಲ್ಲು : ಬಹಳ ಕುತೂಹಲ ದಿಂದಿರು ; ಬಹಳ ಕಾತರದಿಂದಿರು .

ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚು : ಪಕ್ಷಪಾತಮಾಡು .

ಒಂದು ಕಾಲು ಒಳಗೆ , ಒಂದು ಕಾಲು ಹೊರಗೆ : ಗಡಿಬಿಡಿಯಲ್ಲಿರು ; ಯಾವ ಪಕ್ಷಕ್ಕೂ ಸೇರದಿರು .

ಒಗ್ಗರಣೆ ಹಾಕು : ಅತಿಶಯವಾಗಿ ಹೇಳು ; ಇಲ್ಲದಿರು ವುದನ್ನೂ ಬೆರೆಸಿ ಹೇಳು .

ಒಡಕುಬಾಯಿ : ಗುಟ್ಟು ನಿಲ್ಲದ ಬಾಯಿ .

ಒಡಕುಹಣೆಯುವ : ದುರದೃಷ್ಟವಂತ ; ಹತಭಾಗ್ಯ .

ಒಣಜಂಬ : ವ್ಯರ್ಥ ಅಹಂಕಾರ ,

ಒಣಜಗಳ : ನಿಷ್ಪಲ ಹೋರಾಟ ,

ಒಣ ಪಾಂಡಿತ್ಯ : ರಸಗ್ರಹಣಮಾಡದ ಪಾಂಡಿತ್ಯ .

ಒಣಹರಟೆ : ಪೊಳ್ಳುಮಾತುಗಳಿಂದ ಕೂಡಿದ ಹರಟೆ ; ಉಪಯೋಗವಿಲ್ಲದ ಹರಟೆ .

ಒರೆಗೆ ಹಚ್ಚು : ಚೆನ್ನಾಗಿ ಪರೀಕ್ಷಿಸು .

ಓಂ ಪ್ರಥಮ : ಮೊತ್ತ ಮೊದಲು .

ಓಗೊಡು : ಪ್ರತ್ಯುತ್ತರ ಕೊಡು ; ಒಪ್ಪಿಗೆ ಸೂಚಿಸು .

ಓನಾಮ : ಪ್ರಾರಂಭದ ಪಾಠ

ನುಡಿಗಟ್ಟುಗಳು ಮತ್ತು ಅದರ ಅರ್ಥ

ಕಣ್ಣುಗುಡ್ಡೆ ಮೇಲೆ ಹೋಗು : ಬಹಳ ಕಷ್ಟವಾಗು .

ಕಣ್ಣುತಪ್ಪಿಸು : ಮರೆಯಾಗು

ಕಣ್ಣುತಾಗು : ದೃಷ್ಟಿಯಾಗು .

ಕಣ್ಣುತಿರುಗು : ಗಮನ ಹರಿ

ಕಣ್ಣು ಬಿಡು : ಹುಟ್ಟು ; ದಯೆತೋರಿಸು , ಲಕ್ಷದಲ್ಲಿ ತಂದುಕೊಳ್ಳು .

ಕಣ್ಣು ಬೀಳು : ಲಕ್ಷ ಬೀಳು .

ಕಣ್ಣು ಮುಚ್ಚಿ : ಹಿಂದೆ ಮುಂದೆ ನೋಡದೆ .

ಕಣ್ಣುಮುಚ್ಚು : ಸಾಯು .

ಕ ಕಣ್ಣುರಿ : ಅಸೂಯೆ ; ಹೊಟ್ಟೆಕಿಚ್ಚು .

Nudigattu in Kannada

ಕಣ್ಣುಹಾಕು : ಆಶಿಸು .

ಕಣ್ಣುಹಾಯಿಸು : ಮೇಲು ಮೇಲಕ್ಕೆ ನೋಡು ; ಸೂಲವಾಗಿ ಪರಿಶೀಲಿಸು .

ಕಣ್ಮರೆಸು : ಸಮಾಧಾನಮಾಡು .

ಕಣ್ಮಣಿ : ಪ್ರೀತಿಪಾತ್ರವಾದದ್ದು .

ಕತ್ತರಿಹಾಕು : ಕದಿ ; ಕಿತ್ತುಕೊಳ್ಳು .

ಕತ್ತಿಕಟ್ಟು : ಯುದ್ಧಕ್ಕೆ ಸಿದ್ಧವಾಗು ; ದ್ವೇಷಿಸು .

ಕತ್ತಿ ಮಸೆ : ಹಗೆಸಾಧಿಸು .

ಕತ್ತೆದುಡಿತ : ವಿಪರೀತ ಕೆಲಸ .

ಕನಸಿನ ಗಂಟು : ಅಲಭ್ಯವಾದುದು .

ಕನಸಿನ ಗೋಪುರ : ಭ್ರಮೆ ; ಫಲಿಸದ ಆಸೆ .

ಕನ್ನಡಿಯೊಳಗಿನ ಗಂಟು : ಅಲಭ್ಯವಾದುದು .

ಕಪಾಲಮೋಕ್ಷ : ಕೆನ್ನೆಗೆ ಏಟು .

ಕಪಿಮುಷ್ಟಿ : ಬಿಗಿಯಾದ ಹಿಡಿತ .

ಕಬ್ಬಿಣದ ಕಡಲೆ : ತುಂಬ ಗಹನವಾದ ಸಂಗತಿ ; ಅತ್ಯಂತ ಕಠಿನವಾದ ವಿಷಯ .

ಕರುಳು ಕತ್ತರಿಸು : ಮನಸ್ಸಿಗೆ ತೀಕ್ಷ್ಮವಾದ ನೋವುಂಟು ಮಾಡು .

ಕರುಳು ಕಿತ್ತುಬರು : ಬಹಳ ದುಃಖವಾಗು .

ಕರುಳುಹಿಂಡು : ಬಹಳ ಸಂಕಟವಾಗು ; ಹೃದಯ ಕಲಕು .

ಕಲ್ಲುಮನಸ್ಸು : ಕಠಿಣ ಮನಸ್ಸು ,

ಕಲ್ಲುಹಾಕು : ವಿಘ್ನವುಂಟುಮಾಡು .

ಕಸದ ಬುಟ್ಟಿಯಲ್ಲಿ ಹಾಕು : ಅಲಕ್ಷಿಸು ತಿರಸ್ಕರಿಸು .

ಕಾಮಾಲೆಕಣ್ಣಿನಿಂದ ನೋಡು : ಸಹಜವಲ್ಲದ ದೃಷ್ಟಿಯಿಂದ ನೋಡು .

vyakarana in kannada

ಕಾಲಾಡು : ತಿರುಗಾಡು ; ಸುತ್ತಾಡು ,

ಕಾಲಿಗೆ ಬುದ್ಧಿಹೇಳು : ಓಡು .

ಕಾಲುಕಟ್ಟು : ಯಾಚಿಸು ; ದೈನ್ಯದಿಂದ ಕೇಳು .

ಕಾಲೂರು : ನೆಲೆಯಾಗಿ ನಿಲ್ಲು

ಕಾಲೆಳೆದುಕೊಂಡು ಹೋಗು : ನಿಧಾನವಾಗಿ ನಡೆ .

ಕಾಸಿಗೂ ಕಡೆ : ಅಪ್ರಯೋಜಕ .

ಕಾಸಿಗೊಂದು ಕೊಸರಿಗೆರಡು : ಬಹಳ ಅಗ್ಗವಾಗಿ ಸಿಗುವ

ಕಿಡಿಕಾರು : ಸಿಟ್ಟಿಗೇಳು ; ಉರಿದುಬೀಳು .

ಕಿರುಬೆರಳಲ್ಲಿ ಕುಣಿಸು : ಹೇಳಿದಂತೆ ಕೇಳುವ ಹಾಗೆ ಮಾಡು .

ಕಿವಿಕಚ್ಚು : ಚಾಡಿ ಹೇಳು .

ಕಿವಿಕೊಟ್ಟು ಕೇಳು : ಗಮನವಿಟ್ಟು ಕೇಳು .

ಕಿವಿಕೊಡು : ತಲ್ಲೀನತೆಯಿಂದ ಕೇಳು .

ಕಿವಿಗೆ ಬೀಳು : ಆಕಸ್ಮಿಕವಾಗಿ ಕೇಳು .

ಕಿವಿಗೆ ಹಬ್ಬವಾಗು : ಕೇಳಿ ಸಂತೋಷವುಂಟಾಗು .

ಕಿವಿ ನೆಟ್ಟಗಾಗು : ಕೇಳುವ ಆಸಕ್ತಿ ಹೆಚ್ಚಾಗು .

ಕಿವಿಯ ಮೇಲೆ ಹಾಕಿಕೊಳ್ಳು : ಸರಿಯಾಗಿ ಕೇಳು .

ಕುಡಿವ ನೀರು ಅಲ್ಲಾಡದೆ : ಏನೂ ತೊಂದರೆಯಾಗಿದೆ .

Nudigattu in Kannada

ಕುತ್ತಿಗೆ ಕೊಯ್ಯ : ಮೋಸಮಾಡು ; ವಿಶ್ವಾಸಘಾತ ಮಾಡು .

ಕುತ್ತಿಗೆಗೆ ಕಟ್ಟಿಕೊಳ್ಳು : ಹೊಣೆ ಹೊತ್ತು ಕೊಳ್ಳು ; ಮದುವೆ ಯಾಗು .

ಕುರುಡುನಂಬಿಕೆ : ವಿವೇಕವಿಲ್ಲದ ನಂಬಿಕೆ .

ಕೂದಲು ಕೊಂಕದಿರು : ಕೆಡುಕಾಗದಿರು .

ಕೂಪಮಂಡೂಕ : ಸಂಕುಚಿತ ವಿಚಾರವುಳ್ಳವ ; ಲೋಕಾನು ಭವವಿಲ್ಲದವ .

ಕೈ ಇಡು : ಕಾರ್ಯದಲ್ಲಿ ತೊಡಗು ; ಉದ್ಯೋಗಿಸು .

ಕೈಕಚ್ಚು : ನಷ್ಟವಾಗು . ಕೈಕಟ್ಟಿ ಕೂಡು : ನಿರುಪಾಯನಾಗು .

ಕೈಕಟ್ಟು : ನಿಯಂತ್ರಿಸು ; ತಡೆ . ಕೈಕಾಲು ಬಿಡು : ಧೈರ್ಯಗೆಡು .

ಕೈಕೊಡು : ಮೋಸಮಾಡು .

ಕೈಗೆ ಕರಟ ಕೊಡು : ತೀರ ಬಡವನನ್ನಾಗಿ ಮಾಡ

ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

ಕನ್ನಡ ನುಡಿಗಟ್ಟುಗಳು-೦೧

ನುಡಿಗಟ್ಟುಗಳು ಭಾಗ-

ನುಡಿಗಟ್ಟುಗಳು ಉದಾಹರಣೆ-೦೩

ವೆಬ್ಸೈಟ್

Leave a Reply

Your email address will not be published. Required fields are marked *