Lingagalu in Kannada | ಲಿಂಗಗಳು ಕನ್ನಡ । Lingagalu in Kannada Examples ಇಲ್ಲಿ ಕ್ಲಿಕ್ ಮಾಡಿ

kannada lingagalu

kannada lingagalu | ಲಿಂಗಗಳು । lingagalu in kannada grammar examples

Lingagalu in Kannada, ಲಿಂಗಗಳು, ಕನ್ನಡ ವ್ಯಾಕರಣ – ಲಿಂಗಗಳು, lingagalu in kannada grammar examples, ಲಿಂಗಗಳು ಎಂದರೇನು? linga galu in kannada

Lingagalu in Kannada

spardhavani telegram      

kannada lingagalu, ಲಿಂಗಗಳು, ಕನ್ನಡ ವ್ಯಾಕರಣ – ಲಿಂಗಗಳು, lingagalu in kannada grammar examples, ಲಿಂಗಗಳು ಎಂದರೇನು? ಲಿಂಗಗಳ ವಿಧಗಳು ಯಾವುವು?

 ಜ್ಞಾನ ಅಥವಾ ಅಜ್ಞಾನದ ಕುರುಹಿನ ನಾಮ ಪ್ರಕೃತಿಯನ್ನು ‘ ಲಿಂಗ ‘ ಎನ್ನುವರು . ಇದು ಗಂಡಸು , ಹೆಂಗಸರನ್ನು ಸೂಚಿಸುವ ಶಬ್ದಗಳಾಗಿವೆ . ಕನ್ನಡದಲ್ಲಿ ಪುಲ್ಲಿಂಗ , ಸ್ತ್ರೀಲಿಂಗ , ಮತ್ತು ನಪುಂಸಕ ಲಿಂಗಗಳೆಂದು ಮೂರು ವಿಧಗಳಿವೆ .

 

1. ಪುಲ್ಲಿಂಗ :

* ಪುರುಷರನ್ನು ಸೂಚಿಸುವ ನಾಮಪದಗಳಿಗೆ ಮಾತ್ರ ‘ ಪುಲ್ಲಿಂಗ ‘ ಶಬ್ದಗಳು ಎಂದು ಹೆಸರು .

ಉದಾ : ರಮೇಶ , ಮಂಜು , ಜಗದೀಶ , ಮಾವ , ಹುಡುಗ , ದೊಡ್ಡವನು , ಮುದುಕ , ಕಳ್ಳ , ಮನುಷ್ಯ , ಶಂಕರ , ಬಸವ , ಹುಡುಗ , ಕೆಟ್ಟವನು , ಅರಸು , ಪ್ರಧಾನಿ , ಮಂತ್ರಿ , ಜಟ್ಟಿ , ಶಕ್ತಿವಂತ , ತಂದೆ , ಮಾವ , ಸಹೋದರ , ಅಣ್ಣ , ತಮ್ಮ , ಚಿಕ್ಕಪ್ಪ , ಸಚಿವ , ರಾಮ , ಕೃಷ್ಣ , ಶಂಕರಾಚಾರ , ಮದುಮಗ , ದಾಸ , ಕವಿ ,ದೊಡ್ಡವನು , ಮುದುಕ , ಕಳ್ಳ , ಮನುಷ್ಯ , ಶಂಕರ , ಬಸವ , ಹುಡುಗ , ಕೆಟ್ಟವನು , ಅರಸು , ಪ್ರಧಾನಿ ವಿಮರ್ಶಕ , -ಇತ್ಯಾದಿ .

ಮೇಲಿನ ಯಾವ ಶಬ್ದವನ್ನು ಹೇಳಿದರೂ ನಮ್ಮ ಭಾವನೆಗೆ ಗಂಡಸು ಎಂಬರ್ಥ ಹೊಳೆಯುವುದು . ಆದ್ದರಿಂದ ಇವು ಪುಲ್ಲಿಂಗಗಳು .

kannada lingagalu

2. ಸ್ತ್ರೀಲಿಂಗ

*ಸ್ತ್ರೀಯರನ್ನು ಸೂಚಿಸುವ ನಾಮಪದಗಳು ಮಾತ್ರ “ ಸ್ತ್ರೀಲಿಂಗ ‘ ಶಬ್ದಗಳು ಎಂದು ಹೆಸರು .

ಉದಾ : ರುಕ್ಕಿಣಿ , ಭವಾನಿ , ಯಲ್ಲಮ್ಮ , ಹುಡುಗಿ , ಸಿಸಿಲಿಯಾ ,

3. ನಪುಂಸಕಲಿಂಗ :

ಪ್ರಾಣಿವರ್ಗ ಹಾಗೂ ನಿರ್ಜಿವ ವಸ್ತುಗಳನ್ನು ಸೂಚಿಸುವ ನಾಮಪದಗಳು ‘ ನಪುಂಸಕಲಿಂಗ ಶಬ್ದಗಳು ಎಂದು ಹೆಸರು . 

ಸೂಚನೆ : ಪ್ರಾಣಿ ವರ್ಗದಲ್ಲಿ ಗಂಡು – ಹೆಣ್ಣುಗಳಿದ್ದರೂ ಅವು ಬೌದ್ಧಿಕ ಸ್ತರದಲ್ಲಿ ಮನುಷ್ಯನಂತೆ ಜ್ಞಾನದ ಅರಿವು ಮಾಡಿಕೊಳ್ಳಲಾರವು . ಕಾರಣ ಕನ್ನಡದಲ್ಲಿ ಅವನ್ನು ‘ ನಪುಂಸಕಲಿಂಗ ‘ ಗಳೆಂದೇ ತಿಳಿಯುತ್ತಾರೆ .

ಉದಾ : ಆಕಳು , ಎಮ್ಮೆ , ಎತ್ತು , ಆಡು , ಕುರಿ , ಟಗರು , ಹೊಲಮನೆ , ಪುಸ್ತಕ , ನಕ್ಷತ್ರ , ಕಾಡು , ಇತ್ಯಾದಿಗಳು

ಸೂಚನೆ : ಇವುಗಳಲ್ಲದೆ ಲಿಂಗಗಳಲ್ಲಿ ಇನ್ನೂ ಕೆಲವು ವಿಧಗಳಿವೆ . ಪುಸ್ತಕ , ನಕ್ಷತ್ರ , ಕಾಡು , ಇತ್ಯಾದಿಗಳು

ಅ . ದ್ವಿಲಿಂಗ ಪದಗಳು :

ಈ ಪದಗಳು ಎರಡೆರಡು ಲಿಂಗಗಳಲ್ಲಿ ನಡೆಯುವ ಶಬ್ದಗಳು . ಇವನ್ನು ‘ ವಾಚ್ಯಲಿಂಗ ‘ ಅಥವಾ ‘ ಉಭಯ ಲಿಂಗ ‘ ಎಂದೂ ಕರೆಯುವರು .

1. ಪು – ಸ್ತ್ರೀಲಿಂಗ ಶಬ್ದಗಳು :

• ಇವು ಪುಲ್ಲಿಂಗ , ಸ್ತ್ರೀಲಿಂಗ ಎರಡೂ ಲಿಂಗಗಳ ಅರ್ಥಕೊಡು ವಂತಹ ಶಬ್ದಗಳಾಗಿವೆ .

2 ಪುನ್ನಪುಂಸಕಲಿಂಗ ಶಬ್ದಗಳು :

• ಈ ಶಬ್ದಗಳು ಪುಲ್ಲಿಂಗ , ನಪುಂಸಕಲಿಂಗ ಎರಡೂ ಲಿಂಗಗಳ ಅರ್ಥಕೊಡುವ ಶಬ್ದಗಳು

ಉದಾ : ಆಳು , ಮಾರುತ , ವರ , ಜನ , ಸೂರ್ಯ , ಮಂಗಳ ವಸಂತ – ಗ್ರೀಷ್ , ಇತ್ಯಾದಿಗಳು

3. ಸ್ತ್ರೀ – ನಪುಂಸಕಲಿಂಗ ಶಬ್ದಗಳು : + ಸೀಲಿಂಗ – ನಪುಂಸಕಲಿಂಗ ಎರಡೂ ಲಿಂಗಗಳ ಅರ್ಥ ಕೊಡುವ ಶಬ್ದಗಳು

ಉದಾ : ತೊತ್ತು , ಸರಸ್ವತಿ , ನರ್ಮದೆ , ಗಂಗೆ

4. ನಿತ್ಯನಪುಂಸಕ ಅಂಗ ಶಬ್ದಗಳು ಯಾವಾಗಲೂ ನಪುಂಸಕಲಿಂಗ ಅರ್ಥವನ್ನೇ ಕೊಡುವ ಶಬ್ದಗಳಾಗಿವೆ .

ಉದಾ : ಹೂಸು , ಮಗು , ಶಿಶು , ದಂಡು , ಗುಂಪು ಜನ ಮುಂತಾದವುಗಳು .

ತ್ರಿಲಿಂಗಗಳು :  ಇವು ಮೂರು ಲಿಂಗಗಳಲ್ಲಿ ನಡೆಯುವ ಶಬ್ದಗಳು . ಈ ಶಬ್ದಗಳು ಸರ್ವನಾಮ , ಪರಿಮಾಣವಾಚಕ , ಸಂಖ್ಯಾವಾಚಕ ಮುಂತಾದ ಶಬ್ದಗಳಿಗೆ ವಿಶೇಷಣಗಳಾಗುವುದರಿಂದ ಇವನ್ನು “ ವಿಶೇಷ್ಯಾದೀನಲಿಂಗ ‘ ಗಳೆಂದೂ ಕರೆಯುವರು.

ಉದಾ : ನಾನು – ನಾವು , ಬಿಳಿಯ , ಕರಿಯ , ಒಂದು , ಒಬ್ಬನು , ಒಬಳು .

spardhavani

sarvanama in kannada grammar | ಸರ್ವನಾಮ ಎಂದರೇನು?

ಪ್ರಬಂಧಗಳ ಪಟ್ಟಿ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

2 thoughts on “Lingagalu in Kannada | ಲಿಂಗಗಳು ಕನ್ನಡ । Lingagalu in Kannada Examples ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *