Kannada Kanda Padya ಕನ್ನಡ ಕಂದ ಪದ್ಯ
kannada kanda padya , Kanda Padya in Kannada , ಕಂದ ಪದ್ಯ – ಕನ್ನಡ ವ್ಯಾಕರಣ , kanda padya kannada, ಕನ್ನಡ ಕಂದ ಪದ್ಯ, example
Kannada Kanda Padya
ಪ್ರಾಚೀನ ಕಾವ್ಯಗಳಲ್ಲಿ ಖ್ಯಾತ ಕರ್ಣಾಟಕಗಳನ್ನು ಬಿಟ್ಟರೆ ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಳ್ಳುವುದು ಕಂದ ಪದ್ಯಗಳು , ರತ್ನತ್ರಯರಾದ ಪಂಪ , ಪೊನ್ನ , ರನ್ನ ಮೊದಲಾದವರ ಕಾವ್ಯಗಳಲ್ಲಿ ಕಂದ ಪದ್ಯದ ಬಳಕೆಯನ್ನು ಕಾಣಬಹುದು .
ಕಂದಪದ್ಯವು ಪ್ರಪ್ರಥಮವಾಗಿ ಬಳಕೆಗೊಂಡ ಕೃತಿ ಕವಿರಾಜ ಮಾರ್ಗವಾಗಿದೆ . ಹಾಗೂ ಪ್ರಥಮ ಕಾವ್ಯ ಎಂದರೆ ಆದಿ ಪುರಾಣವಾಗಿದೆ . ಛಂದೋಂಬುದಿ , ಶಬ್ದಮಣಿದರ್ಪಣ , ಕಾವ್ಯಾವಲೋಕನ ಮೊದಲಾದ ಕೃತಿಗಳೂ ಕಂದ ಪಂದ್ಯಗಳಿಂದಲೇ ರಚಿತವಾಗಿದೆ .
* ಕಂದಪದ್ಯವು ನೇರವಾಗಿ ಕನ್ನಡ ಛಂದಸ್ಸಲ್ಲ . ಹೀಗಾಗಿ ಕಂದಪದ್ಯದ ಮೂಲ ಕನ್ನಡದಲ್ಲಿ ದೊರೆಯುವುದಿಲ್ಲ . ಇದು ಸಂಸ್ಕೃತದಲ್ಲಿ ಹೆಸರಿನಿಂದ ಪ್ರಚಾರ ‘ ಆರ್ಯಾಗೀತಿ ‘ ಎಂಬ ದಲ್ಲಿದ್ದು , ಪ್ರಸಿದ್ಧಿಯನ್ನು ಪಡೆದುಕೊಂಡಿದೆ . ಪ್ರಾಕೃತದ ಸ್ಕಂಧಕ ಕನ್ನಡದಲ್ಲಿ ‘ ಕಂದ ‘ ಎಂಬ ಹೆಸರಿನಿಂದ ಪ್ರಚಲಿತವಾಗಿದೆ .
ಕಂದ ಪದ್ಯ
ಕಂದ ಪದ್ಯವು ಮಾತ್ರಾಗಣಗಳಿಂದ ಕೂಡಿರುವ ಪದ್ಯ ಜಾತಿ . ಕಂದ ಪದ್ಯದಲ್ಲಿ ನಾಲ್ಕು ಸಾಲುಗಳಿರುತ್ತವೆ .
ಈ ನಾಲ್ಕು ಸಾಲಿಗಳಲ್ಲಿ ಒಂದು & 3 ನೇ ಸಾಲುಗಳು ಒಂದು ಸಮವಾಗಿಯೂ , ಎರಡು ಮತ್ತು ನಾಲ್ಕು ಸಾಲುಗಳು ಮತ್ತೊಂದು ಸಮವಾಗಿಯೂ ಇರುತ್ತವೆ .
ಒಂದು ಮತ್ತು 3 ನೇ ಚರಣಗಳಲ್ಲಿ ನಾಲ್ಕು ಮಾತ್ರೆಯ ಮೂರು ಗಣಗಳೂ , ಎರಡು & ನಾಲ್ಕನೆಯ ಚರಣಗಳಲ್ಲಿ ನಾಲ್ಕು ಮಾತ್ರೆಯ 5 ಗಣಗಳೂ ಬರುತ್ತವೆ .
ವಿಷಮ ಸ್ಥಾನದಲ್ಲಿ ‘ ಜಗಣ ‘ ( U-U ) ಅಂದರೆ ಮಧ್ಯೆ ಗುರುವಿರುವ ಗಣ ಬರ ಕೂಡದು . ವಿಷಯ ಸ್ಥಾನ ಎಂದರೆ ಒಂದು , ಮೂರು , ಐದು , ಏಳು ಇಂತಹ ಗಣಗಳು ಎಂದರ್ಥ .
ಆರನೆಯ ಗಣಸ್ಥಾನದಲ್ಲಕಿ ‘ ಜಗಣ ‘ ವಾಗಲಿ ಅಥವಾ ಸರ್ವ ಲಘುವಿನ ಗುಣವಾಗಲೀ ಬರಬೇಕು .
ಪ್ರತಿ ಅರ್ಧ ಪದ್ಯದ ಕೊನೆಯ ಅಂದರೆ ಎಂಟನೆಯ ಗಣದ ಕೊನೆಯಲ್ಲಿ ಗುರು ಕಡ್ಡಾಯವಾಗಿ ಜೊತೆಗೆ ಪ್ರತಿಯೊಂದು ಗಣವೂ ನಾಲ್ಕು ನಾಲ್ಕು ಮಾತ್ರೆಗಳನ್ನು ಹೊಂದಿರಲೇಬೇಕು .
– – U-U – –
ಉದಾ : – ಕಾವೇ | ರಿಯಿಂದ | ಮಾ ಗೋ
-U U UU- U -U – – UU –
ದಾವರಿ | ವರಮಿ | ರ್ದ ನಾಡ | ದಾ ಕ | ನ್ನಡ ದೊಳ್
-U U U UUU – UU
ಭಾವಿಸಿ | ದ ಜನಪ | ದಂ ವಸು
-UU UU- U UUU U UUU – –
ಧಾವಳ | ಯವಿಲೀ | ನ ವಿಶದ | ವಿಷಯವಿ | ಶೇಷಂ
ಕನ್ನಡ ಕಂದ ಪದ್ಯ
ಲಕ್ಷಣ:-
ನಾಲ್ಕು ಸಾಲುಗಳಿಂದ ಕೂಡಿದ ಪದ್ಯ; ಒಂದನೆಯ ಮೂರನೆಯ ಸಾಲುಗಳು ಸಮಾನವಾಗಿದ್ದು ನಾಲ್ಕು ಮಾತ್ರೆಯ ಮೂರು ಗಣಗಳಿಂದ ಕೂಡಿವೆ. ಎರಡನೆಯ, ನಾಲ್ಕನೆಯ ಸಾಲುಗಳು ಸಮನಾಗಿದ್ದು ನಾಲ್ಕು ಮಾತ್ರೆಯ ಐದು ಗಣಗಳಿಂದ ಕೂಡಿವೆ.
ಪೂರ್ವಾರ್ಧದಲ್ಲಿ ಎಂಟು ಗಣಗಳೂ, ಉತ್ತರಾರ್ಧದಲ್ಲಿ ಎಂಟು ಗಣಗಳೂ ಇವೆ. ಪೂರ್ವಾರ್ಧ ಉತ್ತರಾರ್ಧಗಳ ವಿಷಮ ಸ್ಥಾನಗಳಲ್ಲಿ ಎಂದರೆ ೧, ೩, ೫, ೭ನೆಯ ಗಣಗಳ ಸ್ಥಾನದಲ್ಲಿ “U _ U” ಈ ರೀತಿಯ ಮಧ್ಯ ಗುರುವುಳ್ಳ ಗಣವು ಬರಕೂಡದು.
kanda padya in kannada
ಪೂರ್ವಾರ್ಧ ಉತ್ತರಾರ್ಧಗಳ ೬ನೆಯ ಗಣವು ಮಾತ್ರ ನಾಲ್ಕು ಮಾತ್ರೆಗಳ UUUU ಹೀಗಿರುವ ಗಣವಾಗಲಿ,
ಮಧ್ಯ ಗುರುವುಳ್ಳ U _ U ಹೀಗಿರುವ ಗಣವಾಗಲಿ ಬರಬೇಕು. ಪೂರ್ವಾರ್ಧ ಉತ್ತರಾರ್ಧಗಳಲ್ಲಿ ಕೊನೆಗೆ ಗುರು ಬರುವ “_ _” ಇಂಥ ಗಣವಾಗಲಿ, ” U _ U “ ಇಂಥ ಗಣವಾಗಲಿ ಬರಬೇಕು.
ಮೇಲಿನ ಕಂದ ಪದ್ಯದಲ್ಲಿ ಮೇಲೆ ಹೇಳಿರುವ ಲಕ್ಷಣಗಳೆಲ್ಲ ಬಂದಿರುವುದನ್ನು ಗಮನಿಸಿರಿ.
kanda padya kannada
ಇತರೆ ಪ್ರಬಂಧಗಳನ್ನು ಓದಿ
- ಕೆಳದಿ ಚೆನ್ನಮ್ಮ ಇತಿಹಾಸ
- ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ
- ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಮಾಹಿತಿ
- ಸುಭಾಷ್ ಚಂದ್ರ ಬೋಸ್ ಬಗ್ಗೆ ಮಾಹಿತಿ
- ಸಿದ್ದಲಿಂಗಯ್ಯ ಅವರ ಪರಿಚಯ
- ಭಗತ್ ಸಿಂಗ್ ಅವರ ಬಗ್ಗೆ
- ನಾಡಪ್ರಭು ಕೆಂಪೇಗೌಡ ಬಗ್ಗೆ