ದರ್ಶನ್ ತೂಗುದೀಪ್ ಜೀವನ ಚರಿತ್ರೆ | Darshan Biography in Kannada Information

ದರ್ಶನ್ ತೂಗುದೀಪ ಜೀವನಚರಿತ್ರೆ | Darshan Thoogudeepa Best No1 Information In Kannada

Darshan Thoogudeepa , ದರ್ಶನ್ ತೂಗುದೀಪ ಶ್ರೀನಿವಾಸ್ ಜೀವನಚರಿತ್ರೆ , Darshan Biography in Kannada, kannada actor darshan , darshan in kannada ,darshan thoogudeep

Darshan Thoogudeepa (Challenging Star Darshan)

ದರ್ಶನ್ ತೂಗುದೀಪ್ ಜೀವನ ಚರಿತ್ರೆ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ ಇದು ಸ,ಪೂರ್ಣವಾಗಿ ಉಚಿತವಾಗಿದೆ.

Spardhavani Telegram

Darshan Biography in Kannada

ದರ್ಶನ್ ತೂಗುದೀಪ ಜೀವನಚರಿತ್ರೆ | Darshan Thoogudeepa Best No1 Information In Kannada
ದರ್ಶನ್ ತೂಗುದೀಪ ಜೀವನಚರಿತ್ರೆ | Darshan Thoogudeepa Best No1 Information In Kannada

ಆಕರ್ಷಕ ನಿಲುವಿನ ಎತ್ತರ ಕಾಯದ ಆ ಹುಡುಗನ ಕಣ್ಣಲ್ಲಿ ಕನಸಿತ್ತು. ಏನನ್ನೋ ಸಾಧಿಸಬೇಕು ಎಂಬ ಛಲವಿತ್ತು. ಎಲ್ಲಕ್ಕೂ ಮಿಗಿಲಾಗಿ ತನ್ನ ಶ್ರಮದ ಮೇಲೆ ಆತನಿಗೆ ನಂಬಿಕೆ ಇತ್ತು. ಚಿತ್ರರಂಗದ ನಂಟಿತ್ತು ಆದರೂ ಜೀವನದ ಸಂಕಷ್ಟ ಗಳಿಗಾಗಿ ಹುಡುಗ ನಾನಾ ತರದ ಕೆಲಸಗಳನ್ನು ಮಾಡ್ತಾ ಇದ್ದ ಹಾಲು ಮಾರುವುದರಿಂದ ಹಿಡಿದು ಪೇಪರ್ ಹಾಕುವುದು, ಶೂಟಿಂಗ್ ಸೆಟ್‌ನಲ್ಲಿ ಎಲ್ಲ ವಿಭಾಗದ ಸಣ್ಣ ಸಣ್ಣ ಕೆಲಸ ಗಳನ್ನು ಆತ ನಿರ್ವಹಿಸಿದ ಒಳ್ಳೆಯ ಅಧಿಕಾರಿಯಾಗಿ ಕುಟುಂಬವನ್ನು ಸಾಕುವ ಅಂದ್ರೆ ಹೆಚ್ಚು ಓದಿಲ್ಲ ಎಂಬ ಅಳುಕಿತ್ತು.

ಕೊಟ್ಟ ಕೆಲಸವನ್ನು ಆತ ನಿಷ್ಠೆಯಿಂದ ಮಾಡ್ತಾ ಇದ್ದ ಅದಕ್ಕೆ ತಕ್ಕ ಕೂಲಿ ಪಡೆದಿದ್ದ ಕಡೆಗೂ ಚಿತ್ರರಂಗ ದಲ್ಲಿ ಸಣ್ಣ ಪುಟ್ಟ ಪಾತ್ರಗಳ ಅವಕಾಶ ಸಿಕ್ಕಾಗ ಹುಡುಗ ಎಲ್ಲವನ್ನು ಒಪ್ಪಿ ನಟಿಸಿದ. ಆತ ಒಮ್ಮೆ ಹಣಕ್ಕಾಗಿ ಸ್ಟಾರ್ ನಟರುಗಳು ತಿರಸ್ಕರಿಸಿದ ಒಟ್ಟು ಏಳು ಚಿತ್ರಗಳಲ್ಲಿ ತಾನು ನಟಿಸಲು ಸಿದ್ಧ ನಾಗಿದ್ದ.

ಅದು ಬರಿ 1,00,000 ರೂ ಗಳಿಗಾಗಿ ಇದೆ. 1,00,000 ದಿಂದ ಹಿಡಿದು ಈಗ ಒಂದು ಸಿನಿಮಾಗೆ 10 ಕೋಟಿಯಷ್ಟು ಸಂಭಾವನೆ ಪಡೆಯುವ ಮಟ್ಟಿಗೆ ಬೆಳೆದು ಬಂದ ಆ ಹುಡುಗನ ಹೆಸರೇ ಹೇಮಂತ್ ಕುಮಾರ್ ಅಲಿಯಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಳೆದು ಬಂದ ಹಾದಿಯೇ ಆಗಿತ್ತು.

darshan thoogudeepa biography in kannada

ಅಲ್ಲಿ ಅನೇಕ ಎಡವು ತೊಡವಿನ ಸವಾಲು ಇದು ಅದೆಲ್ಲವನ್ನು ಮೀರಿ ಬಂದ ದರ್ಶನ್ ಇಂದು ತಲುಪಿರುವ ಎತ್ತರದ ಮಟ್ಟ ಇವತ್ತಿಗೆ ಒಂದು ಇತಿಹಾಸ ದರ್ಶನ್ ಬೆಳೆದು ಬಂದ ಬಗೆ ಇವತ್ತು ಕನ್ನಡದ ಅತ್ಯುನ್ನತ ನಟ ನಿರ್ಮಾಪಕರಾಗಿ ಗುರುತಿಸಿಕೊಂಡು ಅಭಿಮಾನಿಗಳ ಪ್ರೀತಿಯ ದಾಸನಾಗಿ 50 ಚಿತ್ರಗಳ ಸರದಾರ ಪಟ್ಟ ಹೊತ್ತಿರುವ ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ದರ್ಶನ್ ಖ್ಯಾತ ನಟರಾಗಿದ್ದ ಶ್ರೀ ದಿವಂಗತ ತೂಗುದೀಪ ಶ್ರೀನಿವಾಸರ ಹಿರಿಯ ಪುತ್ರ.

ದರ್ಶನ್ ತೂಗುದೀಪ್ ಅವರ ಕುಟುಂಬದ ಬಗ್ಗೆ

ದರ್ಶನ್ ತೂಗುದೀಪ ಜೀವನಚರಿತ್ರೆ | Darshan Thoogudeepa Best No1 Information In Kannada
ದರ್ಶನ್ ತೂಗುದೀಪ ಜೀವನಚರಿತ್ರೆ | Darshan Thoogudeepa Best No1 Information In Kannada

ತೂಗುದೀಪ ಶ್ರೀನಿವಾಸ್ ಹಾಗೂ ಮೀನಾ ದಂಪತಿಗಳ ಮೂರು ಮಕ್ಕಳಲ್ಲಿ ಹಿರಿಯವರಾಗಿ ಫೆಬ್ರವರಿ 16, 1977ರ ಶಿವರಾತ್ರಿಯ ದಿನದಂದು ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮ ದಲ್ಲಿ ಜನಿಸಿದ ದರ್ಶನ ಜನ್ಮ ನಾಮ ಹೇಮಂತ್ ಕುಮಾರ್ ಅಂತ ದರ್ಶನ್‌ಗೆ ದಿನಕರ್ ಎಂಬ ಕಿರಿಯ ಸಹೋದರ ಹಾಗು ದಿವ್ಯ ಎಂಬ ಹಿರಿ ಅಕ್ಕ ಸಹ ಇದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಲ್ಯ

ದರ್ಶನ್ ಚಿಕ್ಕಂದಿನಲ್ಲೇ ಬಹಳ ಲವಲವಿಕೆಯ ಹಾಗು ಚುರುಕಾದ ಹುಡುಗ ಸ್ವಲ್ಪ ಮೊಂಡು ಸ್ವಭಾವದವನಾಗಿದ್ದ ದರ್ಶನ್ ಆರಂಭಿಕ ಜೀವನ ಬಹಳ ರಸಮಯವಾಗಿತ್ತು. ದರ್ಶನ ಬಾಲ್ಯ ಹೆಚ್ಚು ಕಾಲ ಮೈಸೂರಲ್ಲಿ ಕಲಿತು ಅವರು ಅಲ್ಲಿಯೇ ತಮ್ಮ ಹೈಸ್ಕೂಲ್ ಶಿಕ್ಷಣ ಪೂರೈಸಿದರು.

ತಂದೆ ಶ್ರೀನಿವಾಸ್ ಅವರ ಬಗ್ಗೆ

ಚಿತ್ರರಂಗ ದಲ್ಲಿ ಖ್ಯಾತ ಕಳನಟರೆಂದೇ ಗುರುತಿಸಿಕೊಂಡಿದ್ದ ಶ್ರೀತೂಗುದೀಪ ಶ್ರೀನಿವಾಸ್ ಅವರು ಚಿತ್ರರಂಗ ದಲ್ಲಿ ಭದ್ರವಾಗಿ ನೆಲೆಯೂರಿದ್ದವರು. 1966 ರಲ್ಲಿ ಅವರು ನಡೆಸಿದ ತೂಗುದೀಪ ಎಂಬ ಹೆಸರಿನ ಸಿನಿಮಾದ ಖ್ಯಾತಿಯೇ ಅವರು ಮುಂದೆ ತೂಗುದೀಪ ಶ್ರೀನಿವಾಸ ಎಂದು ಪ್ರಸಿದ್ಧಿಗೆ ಬರಲು ಮೂಲ ಕಾರಣ ವಾಯಿತು.

ಅವರ ತಮ್ಮ ಸಿನಿಮಾ ಕೆರಿಯರ್ ನ ಸಹಾಯ ದಿಂದ ತಮ್ಮ ಕುಟುಂಬವನ್ನ ಚೆನ್ನಾಗಿ ಪೋಷಿಸಿದ್ದರು. ಆದರೆ ತೊಂಬತ್ತರ ದಶಕದ ಆರಂಭದಲ್ಲಿ ಅವರು ವಿಪರೀತ ಗಂಭೀರ ಅನಾರೋಗ್ಯಕ್ಕೆ ಒಳಗಾದರು. ಅವರಿಗೆ ಕಿಡ್ನಿ ವೈಫಲ್ಯ ಉಂಟಾಗಿತ್ತು.

ಅವರ ಪತ್ನಿ ಮೀನಾರವರೇ ತಮ್ಮ ಒಂದು ಕಿಡ್ನಿ ಯನ್ನು ಪತಿ ಶ್ರೀನಿವಾಸ್ ಅವರಿಗೆ ಕೊಟ್ಟಿದ್ದರು. ಆದರೂ ಸಹ ಶ್ರೀನಿವಾಸ್ ಅವರು ಹೆಚ್ಚು ಕಾಲ ಉಳಿಯಲಿಲ್ಲ. 1992ರಲ್ಲಿ ತಮ್ಮ 52 ನೇ ವರ್ಷ ಕ್ಕೆ ಅವರು ವಿಧಿವಶರಾದರು. ತಮ್ಮ ಪತಿಯ ಒಳಿತಿಗಾಗಿ ಪತ್ನಿ ಮೀನಾರು ಮಾಡದ ತ್ಯಾಗವೇ ಇಲ್ಲ ಎನ್ನಬಹುದು.

darshan thoogudeepa srinivas

ದರ್ಶನ್ ತೂಗುದೀಪ ಜೀವನಚರಿತ್ರೆ | Darshan Thoogudeepa Best No1 Information In Kannada
ದರ್ಶನ್ ತೂಗುದೀಪ ಜೀವನಚರಿತ್ರೆ | Darshan Thoogudeepa Best No1 Information In Kannada

ಅವರು ತಾವು ವಾಸವಿದ್ದ ಚಿಕ್ಕ ಮನೆಯೊಂದನ್ನು ಬಿಟ್ಟು ಮಿಕ್ಕ ತಮ್ಮ ಪಾಲಿನ ಎಲ್ಲ ವನ್ನು ಸಹ ಪತಿಯ ಚಿಕಿತ್ಸೆಗೆ ಒತ್ತೆ ಇಟ್ಟಿದ್ದರು. ದರ್ಶನ ಕುಟುಂಬಕ್ಕೆ ಇದು ಬಹು ದೊಡ್ಡ ಆಘಾತ. ಮನೆಯಲ್ಲಿ ದುಡಿಯುವವರು ಯಾರು ಸಹ ಇರಲಿಲ್ಲ.

ಕುಟುಂಬಕ್ಕೆ ಆಧಾರವಾಗಿದ್ದ ಶ್ರೀನಿವಾಸ್ ಅವರು ಅಕಾಲ ಮೃತ್ಯು ವಿಗೆ ಈಡಾಗಿದ್ದರು. ಈಗ ಇಡೀ ಕುಟುಂಬದ ಜವಾಬ್ದಾರಿ ಹಿರಿಯ ಮಗ ದರ್ಶನ್ರ ಹೆಗಲ ಮೇಲಿತ್ತು. ದರ್ಶನ್‌ರ ತಾಯಿ ಜೀವನಾಧಾರ ಕ್ಕೆ ಒಂದು ಚಿಕ್ಕ ಮೆಸ್ ನ ತೆರೆದಿದ್ದು, ದರ್ಶನ್ ಒಂದು ಹಸುವನ್ನು ಖರೀದಿಸಿ ದಿನವು ಅದರ ಹಾಲು ಕರೆದು ಮನೆ ಮನೆಗೆ ಕೊಡ್ತಾ ಇದ್ರು. ತಂದೆ ಇಲ್ಲದ ಜೀವನ ಎಷ್ಟು ಭಯಾನಕ ಎಂಬುದರ ಅರಿವು ಅವರಿಗಾಗಿತ್ತು.

ಮುಂದೆ ಯಾವತ್ತಾದರೂ ನಮಗೆ ಇಂತಹ ಒಂದು ಸ್ಥಿತಿ ಬಂದೊದಗಬಹುದು ಎಂಬ ಕಾರಣಕ್ಕೆ ತಂದೆ ಆಗಾಗ ಚೆನ್ನಾಗಿ ಓದುವಂತೆ ಹಾಗು ಒಳ್ಳೆಯ ಸ್ಥಾನಕ್ಕೇ ರುವಂತೆ ಹೇಳಿದ ಬುದ್ಧಿ ಮಾತುಗಳು ಆಗ ದರ್ಶನ್ ಅವರಿಗೆ ನೆನಪಾಗಿತ್ತು.

ದರ್ಶನ್ ಅವರ ಶಿಕ್ಷಣದ ಬಗ್ಗೆ ಮಾಹಿತಿ

ದರ್ಶನ್ ಶಾಲೆಯಲ್ಲಿದ್ದಾಗ ಅಷ್ಟೇನೂ ಪ್ರತಿಭಾ ವಂತ ವಿದ್ಯಾರ್ಥಿಯಾಗಿರಲಿಲ್ಲ. ಅವರಿಗೆ ಯಾಕೋ ಓದು ಅಷ್ಟಾಗಿ ತಲೆಗೆ ಹತ್ತಲಿಲ್ಲ. ಹೇಗೋ ತಂದೆ ಒತ್ತಾಯಕ್ಕೆ ಹೈಸ್ಕೂಲಿನ ವರೆಗೆ ಓದಿದರು. ಮುಂದೆ ಮಗ ನನ್ನ ಡಿಪ್ಲೋಮಾ ಸೇರಿಸಿ ಒಂದು ಲೆತ್ ಅಂಗಡಿಯನ್ನ ತೆರೆಸಬೇಕು ಅಂತ ತೂಗುದೀಪರ ದೇಯವಾಗಿತ್ತು.

ಆದರೆ ದರ್ಶನ್‌ಗೆ ಡಿಪ್ಲೊಮೊ ಸಹ ಕಬ್ಬಿಣದ ಕಡಲೆಯಾಗಿತ್ತು. ಇದೇ ಸಮಯದಲ್ಲಿ ತಂದೆಯವರ ಆರೋಗ್ಯ ತೀರಾ ಹದಗೆಡ ಲಾರಂಭಿಸಿತು. ದರ್ಶನ್ ತಂದೆಯ ಶುಶ್ರೂಷೆಗಾಗಿ ಎಲ್ಲವನ್ನೂ ತ್ಯಜಿಸಿ ಮನೆಯಲ್ಲೇ ಇದ್ರು ಅವರನ್ನ ನಿತ್ಯವೂ ಆಸ್ಪತ್ರೆಗೆ ಒಯ್ಯುವ ಹಾಗು ಕರೆತರುವುದೇ ಅವರ ಕಾಯಕವಾಯಿತು.

ದರ್ಶನ್ ಕುಟುಂಬ ನಿರ್ವಹಣೆಗೆ ನಾನಾ ದಾರಿ ಕಂಡುಕೊಂಡರು

ಇನ್ನು ತಂದೆ ವಿಧಿವಶರಾದಾಗ ದರ್ಶನ್ ಕುಟುಂಬ ನಿರ್ವಹಣೆಗೆ ನಾನಾ ದಾರಿಗಳನ್ನು ಕಂಡುಕೊಂಡರು. ದರ್ಶನ್ ಚಿತ್ರರಂಗದಲ್ಲಿ ಹೆಸರು ಮಾಡಬೇಕು ಅಂತ ಆಗಲೇ ಚಿಂತಿಸಿದರು. ಇದಕ್ಕಾಗಿ ಅವರು ತೊಂಬತ್ತರ ದಶಕದ ಆರಂಭದಲ್ಲಿ ನಟನೆಯ ಶಾಸ್ತ್ರೀಯ ಕಲಿಕೆಗಾಗಿ ಶಿವಮೊಗ್ಗದ ನಟನಾ ಕೇಂದ್ರವಾದ ನೀನಾಸಂ ಗೆಸೇರಿದರು.

ತಮ್ಮ ಮಕ್ಕಳಲ್ಲಿ ಯಾರು ಸಹ ಸಿನಿಮಾ ಕ್ಷೇತ್ರಕ್ಕೆ ಬರಬೇಕೆಂದು ತೂಗುದೀಪ ಶ್ರೀನಿವಾಸ್ ಅವರು ಬಯಸಿರಲಿಲ್ಲ. ಅದರಲ್ಲೂ ತಮ್ಮ ಮಗ ದರ್ಶನ್ ಈ ಕ್ಷೇತ್ರಕ್ಕೆ ಬರುವುದು ಅವರಿಗೆ ಸುತಾರಾಂ ಇಷ್ಟ ಇರಲಿಲ್ಲ. ತಂದೆ ಇಚ್ಚೆ ವಿರುದ್ಧ ದರ್ಶನ್ ನೀನಾಸಂ ಸೇರಿದರು. ಅಲ್ಲಿ ಅವರಿಗೆ ತರಬೇತಿ ಕೊಟ್ಟವರು ನಟ ಮಂಡ್ಯ ರಮೇಶ್ ಈ ಸಮಯದಲ್ಲಿ

darshan thoogudeepa biography

ದರ್ಶನ್ ಅವರ ತಂದೆಯು ಕಾಲ ವಾದರು ದರ್ಶನ್ ಹೇಗೋ ನೀನಾಸಂ ನಲ್ಲಿ ತಮ್ಮ ತರಬೇತಿ ಮುಗಿಸಿ ವಾಪಸಾದರು. 1996 ರ ಸಮಯದಲ್ಲಿ ದರ್ಶನ್ ಬೆಂಗಳೂರಿಗೆ ಬಂದರು. ಇಲ್ಲಿ ಖ್ಯಾತ ಛಾಯಾಗ್ರಾಹಕರಾದ ಬಿ ಸಿ. ಗೌರಿ ಶಂಕರ್ ಅವರ ಪರಿಚಯ ಅವರಿಗೆ ಸಿಕ್ತು. ಗೌರಿ ಶಂಕರ ತಮ್ಮ ಚಿತ್ರಗಳಲ್ಲಿ ದರ್ಶನ್ ರನ್ನ ಸಹಾಯಕ ಛಾಯಾಗ್ರಾಹಕ ನಾಗಿ ನೇಮಿಸಿಕೊಂಡರು.

ಇಂದು ಖ್ಯಾತ ನಿರ್ಮಾಪಕರಾಗಿರುವ ಅಣಜಿ ನಾಗರಾಜ್ ಅವರ ಮೊದಲ ಭೇಟಿ ಅವರಿಗೆ ಆಗಿದ್ದು ಸಹ ಇಲ್ಲಿ ದರ್ಶನ್ ಈ ಒಂದು ಸಮಯದಲ್ಲಿ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಕೆಲವು ಮೋಡ್‌ಲ್ ಷೋ ಗಳಲ್ಲಿ ಭಾಗಿಯಾಗಿದ್ದರು.

ಅವರಿಗೆ ಕಿರುತೆರೆಯಲ್ಲಿ ಮೊಟ್ಟ ಮೊದಲು ಅವಕಾಶ ನೀಡಿದವರು ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರು ನಾರಾಯಣ್ ಅವರ ನಿರ್ದೇಶನ, ಅಂಬಿಕ, ಡಿಟೆಕ್ಟಿವ್ ಚಂದ್ರಕಾಂತ, ಧಾರಾವಾಹಿಗಳಲ್ಲಿ ನಟಿಸಿದ್ದ ದರ್ಶನ್ ಅವರಿಗೆ ಹೆಸರು ತಂದುಕೊಟ್ಟದ್ದು, ಅಂಬಿಕಾ ಧಾರಾವಾಹಿಯ ಅವರ ಪಾತ್ರ.

ಇದಾದ ಬಳಿಕ ದರ್ಶನ್ ಮಹಾಭಾರತ ಎಂಬ ಚಿತ್ರದಲ್ಲಿ ಸಣ್ಣ ಪಾತ್ರ ವೊಂದನ್ನು ಮಾಡುವ ಮೂಲಕ ಹಿರಿತೆರೆಗೆ ಪ್ರವೇಶ ಮಾಡಿದರು. 1997 ರಲ್ಲಿ ತೆರೆಕಂಡಿದ್ದ ಎಸ್ ನಾರಾಯಣ್ ನಿರ್ದೇಶನದ ಸಿನಿಮಾ ಆಗಿತ್ತು. ಈ ಚಿತ್ರದ ನಾಯಕ ವಿನೋದ್ ರಾಜ್ ಇದಾದ ಬಳಿಕ ದೇವರ ಮಗ, ಎಲ್ಲರ ಮನೆ ದೋಸೆನು. ಭೂತಯ್ಯನ ಮಕ್ಕಳು, ಮಿಸ್ಟಾರ್ ಹರಿಶ್ಚಂದ್ರ ಮುಂತಾದ ಚಿತ್ರ ಗಳಲ್ಲಿ 2000 ಹಾಗು 2001 ರ ಪ್ರಾರಂಭವು ಕ್ರಮ ವಾಗಿ ಪೋಷಕ ಪಾತ್ರಗಳಲ್ಲಿ ದರ್ಶನ್ ಮಿಂಚಿದ್ದರು.

ಇದೇ ಸಮಯದಲ್ಲಿ ಕನ್ನಡಕ್ಕೆ ಡಬ್ ಆಗಿದ್ದ ಕೆಲ ಕಾರ್ಟೂನ್ ಗಳಲ್ಲಿ ದರ್ಶನ್ ಧ್ವನಿಯನ್ನು ಸಹ ನೀಡಿದರು ಕ್ಲಬ್‌ನ ಸಹಾಯಕ, ಕ್ಯಾಮೆರಾ ಮನ್ ಹೀಗೆ ಚಿತ್ರರಂಗದ ಎಲ್ಲ ವಲಯಗಳಲ್ಲೂ ಕೆಲಸ ಮಾಡಿದ ದರ್ಶನ್ ಎಂದು ಸಹ ಲೈಮಲೈಟ್ ಬಯಸಿದವರಲ್ಲ.

darshan thoogudeepa bagge biography

ದರ್ಶನ್ ತೂಗುದೀಪ ಜೀವನಚರಿತ್ರೆ | Darshan Thoogudeepa Best No1 Information In Kannada
ದರ್ಶನ್ ತೂಗುದೀಪ ಜೀವನಚರಿತ್ರೆ | Darshan Thoogudeepa Best No1 Information In Kannada

ಅವಕಾಶ ಸಿಗದಿದ್ದಾಗ ಧೃತಿಗೆಡ ದರ್ಶನ

ನೀನಾಸಂ ನಲ್ಲಿ ಪದವಿ ಪಡೆದು ಬಂದರು ಚಿತ್ರರಂಗ ದಲ್ಲಿ ಪ್ರಗತಿ ಸಾಧ್ಯವಾಗದೆ ಅವರು ನಿರಾಶ ಪಟ್ಟಿದ್ದು ನಿಜವೇ ಆದರೆ ಧೃತಿಗೆಡಲಿಲ್ಲ ಖ್ಯಾತ ನಟರೊಬ್ಬರ ಮಗನಾಗಿಯೂ ದರ್ಶನ್ ಕೈಗೆ ಸಿಕ್ಕ ಯಾವ ಕೆಲಸಗಳ ಕಡೆಗೂ ಹಿಂಜರಿಕೆಯನ್ನಾಗಲಿ ಅಲಕ್ಷಣವಾಗಲಿ ತೋರಲಿಲ್ಲ.

ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಎಲ್ಲರೀತಿಯ ನೋವು, ಅಪಮಾನ ಗಳನ್ನು ಮೌನವಾಗಿ ಅನುಭವಿಸುವ ದರ್ಶನ್ ಅವರಿಗೆ ಬ್ರೇಕ್ ಕೊಟ್ಟಿದ್ದು ನಿರ್ದೇಶಕ ಪಿ ಎನ್ ಸತ್ಯ ಅವರ ಮೆಜೆಸ್ಟಿಕ್ ಸಿನಿಮಾ 2001 ರಲ್ಲಿ ತೆರೆಗೆ ಬಂದ ಈ ಚಿತ್ರ ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆದು ಹಲವು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿತು.

ದರ್ಶನ್ ಅವರನ್ನ ಅಂಬಿಕ ಹಾಗೂ ಮುಂದಾದ ಟೆಲಿ ಸೀರಿಯಲ್ ಗಳಲ್ಲಿ ನೋಡಿದ ನಿರ್ದೇಶಕ ಪಿ ಎನ್ ಸತ್ಯ ಅವರು ತಮ್ಮ ಹೊಸ ಮಾಸ್ ಕಥೆಗೆ ದರ್ಶನ್ ನಟಿಸಿದ್ರು. ದರ್ಶನ್ರನ್ನ ಸ್ವತಃ ತಾವೇ ಭೇಟಿಯಾಗಿ ಕಥೆ ಒಪ್ಪಿಸಿದ ಪಿ ಎನ್ ಸತ್ಯ ಅವರು ದರ್ಶನ್ ಅವರ ಕೆರಿಯರ್ ಬೆಳೆಯಲು ನೀರು ಎರೆದವರಲ್ಲಿ ಮುಖ್ಯ ವ್ಯಕ್ತಿ ಅಂತ ಹೇಳಬಹುದು.

darshan thoogudeepa life history in kannada

ಮೆಜೆಸ್ಟಿಕ್ನ ಗೆಲುವಿನ ಬಳಿಕ ದರ್ಶನ್ ಚಿತ್ರರಂಗದ ಮನೆಮಾತಾದರು. ಅವರಿಗೆ ಸಾಲು ಸಾಲು ಅವಕಾಶಗಳು ಬರಲಾರಂಭಿಸಿದವು ಮೆಜೆಸ್ಟಿಕ್ನ ಬಳಿಕ ನಿನಗೋಸ್ಕರ ಕಿಟ್ಟಿ ನೀನಂದ್ರೆ ಇಷ್ಟ ಚಿತ್ರ ಗಳಲ್ಲಿ ನಟಿಸಿದ ದರ್ಶನ್ ರಿಗೆ ಮತ್ತೊಂದು ಭರ್ಜರಿ ಗೆಲುವು ತಂದುಕೊಟ್ಟದ್ದು 2003 ರ ಕರಿಯ ಚಿತ್ರ ಇದು ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದ ಮೊಟ್ಟ ಮೊದಲ ಚಿತ್ರ ಕೂಡ ಕರಿಯ ಗೆಲುವಿನ ಬಳಿಕ ದರ್ಶನ್ ಚಿತ್ರರಂಗದ ಸೂಪರ್ ಸ್ಟಾರ್ ನಟರಲ್ಲಿ ಒಬ್ಬರಾಗಿ ಹೊರಹೊಮ್ಮಿ ದರು.

ಆದರೆ ಕರಿಯಾದ ಬಳಿಕ ತೆರೆಗೆ ಬಂದ ಕೆಲವು ಚಿತ್ರಗಳು ಹೆಚ್ಚು ಯಶಸ್ಸನ್ನು ಕಾಣಲಿಲ್ಲ.

2005 ರ ಓಂಪ್ರಕಾಶ್ ರಾವ್ ನಿರ್ದೇಶನದ ಕಲಾಸಿಪಾಳ್ಯ ಚಿತ್ರ ಮತ್ತೊಮ್ಮೆ ಅವರನ್ನ ಗೆಲುವಿನ ಅಲೆಯಲ್ಲಿ ತೇಲಿಸಿತು ಮುಂದೆ ದಾಸ ಮಂಡ್ಯ ಅಯ್ಯ ಶಾಸ್ತ್ರೀ ಚಿತ್ರಗಳ ಮಿಶ್ರ ಗೆಲುವಿನ ಹೊಯ್ದಾಟ ದಲ್ಲಿ ಅವರ ಹಿರಿತರೆ ಜರ್ನಿ ಸಾಗಲು ಆರಂಭಿಸಿತು.

darshan thoogudeepa history in kannada

2007 ರಲ್ಲಿ ಅನಾಥರು ಸಿನಿಮಾದ ಮೂಲಕ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಮೊಟ್ಟ ಮೊದಲಸಲ ದರ್ಶನ್ ವೇದಿಕೆಯನ್ನು ಹಂಚಿಕೊಂಡರು. ಇದಾದ ಯಶಸ್ಸಿನ ಬಳಿಕ ಅದೇ ವರ್ಷ ಈ ಬಂಧನ ಚಿತ್ರದ ಮೂಲಕ ಮೊದಲ ಬಾರಿಗೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಮಗನ ಪಾತ್ರ ದಲ್ಲೂ ಸಹ ದರ್ಶನ್ ಅವರು ಅಭಿನಯಿಸಿದರು. ಈ ಹಿಂದೆ ಅಣ್ಣಾವ್ರು ಚಿತ್ರ ದಲ್ಲಿ ದರ್ಶನ್ ರೆಬಲ್ ಸ್ಟಾರ್ ಅಂಬರೀಶ್ ಜೊತೆಯೂ ನಟಿಸಿದ್ದರು.

ಅಂಬರೀಶ್ ಹಾಗೂ ವಿಷ್ಣುವರ್ಧನ್ ಈ ಇಬ್ಬರು ಖ್ಯಾತ ನಟರ ಮಗನ ಪಾತ್ರ ದಲ್ಲಿ ನಟಿಸಿದ ಕನ್ನಡದ ಏಕೈಕ ಕಲಾವಿದ ಎಂಬ ಹೆಗ್ಗಳಿಕೆ ಗೆ ನಟ ದರ್ಶನ್ ಅವರದ್ದು ಸ್ವಚ್ಛ ಮನಸ್ಸಿನ ನೇರ ನಡೆಯ ದರ್ಶನ್ ಕನ್ನಡ ಚಿತ್ರರಂಗ ಕಂಡ ವಿಶೇಷ ಹಾಗೂ ವಿಶಿಷ್ಟ ನಟರು

darshan thoogudeepa life story in kannada

ತಮ್ಮ 50 ನೇ ಚಿತ್ರ ಕುರುಕ್ಷೇತ್ರ ದಲ್ಲಿ ಕೌರವನ ಪಾತ್ರದ ಅಭಿನಯವೇ ಅವರ ನಟನಾ ಕೌಶಲ್ಯಕ್ಕೆ ಒಂದು ಕನ್ನಡಿ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಕ್ರಾಂತಿ ಚಿತ್ರ ತೆರೆಗೆ ಬರಲಿದೆ ಇದರಲ್ಲೂ ಸಹ ಯಶಸ್ಸುನ್ನು ಗಳಿಸಿ ಇನ್ನಷ್ಟು ಒಳ್ಳೆ ಒಳ್ಳೆ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಲಿ ಎಂದು ಹಾರೈಸೋಣ. ಇಷ್ಟೇ ಅಲ್ಲದೆ ದರ್ಶನ್ ಸಿನಿಮಾ ಹೊರತಾಗಿ ಒಬ್ಬ ಮಾನವತಾವಾದಿ ಸ್ನೇಹಮಯಿ ವ್ಯಕ್ತಿ ಹಾಗೂ ಒಬ್ಬ ಸಹೋದಯಿ ಅಂತ ಹೇಳಿದರೆ ತಪ್ಪಾಗಲಾರದು .

FAQ

ದರ್ಶನ್ ತೂಗುದೀಪ್ birthday

16 February 1977

darshan thoogudeep age

45

ವಿಡಿಯೋ ನೋಡಲು ಕ್ಲಿಕ್ ಮಾಡಿ

ಇತರೆ ಪ್ರಬಂಧಗಳನ್ನು ಓದಿ

Leave a Reply

Your email address will not be published. Required fields are marked *