Christmas in Kannada, ಕ್ರಿಸ್ಮಸ್ ಹಬ್ಬದ ಶುಭಾಶಯಗಳು, merry christmas in kannadawishes and happy information in kannada
ಸಾಮಾನ್ಯವಾಗಿ ಡಿಸೆಂಬರ್ ಅಂದ ತಕ್ಷಣ ಎಲ್ಲರಿಗೂ ಸರ್ವೇಸಾಮಾನ್ಯವಾಗಿ ನೆನಪಿಗೆ ತಕ್ಷಣ ಬರುವುದು ಕ್ರಿಸ್ಮಸ್ ಹಬ್ಬದ ಆಚರಣೆ.
ಹೌದು ಫ್ರೆಂಡ್ಸ್ ಇದು ಒಂದು ಕ್ರಿಶ್ಚಿಯನ್‌ರ ಹಬ್ಬವಾದರೂ ಎಲ್ಲರೂ ಸಹ ಸಂತೋಷದಿಂದ ಈ ಆಚರಣೆಯಲ್ಲಿ ಭಾಗವಹಿಸುವುದು ಇದರ ವಿಶೇಷ.
ಅದ್ರಲ್ಲಂತೂ ಸಂತಾ ಕ್ಲಾಸ್ ಬರುವುದು, ಕೇಕ್, ವಿವಿಧ ಬಗೆಯ ಭಕ್ಷ್ಯ, ಕ್ರಿಸ್ಮಸ್ ಟ್ರೀ, ಹೀಗೆ ವಿವಿಧ ಬಗೆಯ ಭಕ್ಷ್ಯ ಇವುಗಳಿಂದ ಕ್ರಿಸ್ಮಸ್ ತುಂಬಾ ವಿಶೇಷವಾಗಿರುತ್ತದೆ.
ನಾವು ನಿಮ್ಮ ಪ್ರೀತಿ ಪಾತ್ರರಿಗೆ ಕ್ರಿಸ್ಮಸ್ ಗೆ ಶುಭ ಕೋರಲು ಇಲ್ಲಿ ವಾಟ್ಸಾಪ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಲು ಕೆಲವೊಂದು ಶುಭಾಶಯಗಳನ್ನು ನೀಡಿದ್ದೇವೆ ನೋಡಿ.
ಕ್ರಿಸ್ಮಸ್ ಹಬ್ಬದ ಶುಭಾಶಯಗಳು
ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.
ಕ್ಷಮೆ, ಪ್ರೀತಿ, ಸಹನೆ, ಸಹಬಾಳ್ವೆಯೇ ಜೀವನದ ಉಸಿರು ಎಂಬ ಸಂದೇಶ ನೀಡಿರುವ ಏಸುಕ್ರಿಸ್ತರ ಜನ್ಮದಿನದ ಶುಭ ಹಾರೈಕೆಗಳು
ವಿಶ್ವಕ್ಕೆ ಶಾಂತಿ, ಸಹಬಾಳ್ವೆಯ ಮೌಲ್ಯಗಳನ್ನು ಸಾರಿದ ಏಸುಕ್ರಿಸ್ತರ ಜನ್ಮದಿನದ ಶುಭಾಶಯಗಳು
ಶಾಂತಿದೂತ ಏಸುಕ್ರಿಸ್ತರು ಜನಿಸಿದ ಶುಭದಿನ ಎಲ್ಲರಿಗೂ ಒಳಿತನ್ನೇ ತರಲಿ. ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು
ಮೆರಿ ಕ್ರಿಸ್ಮಸ್ ಮೈ ಫ್ರೆಂಡ್… ಈ ಕ್ರಿಸ್ಮಸ್‌ನ ಶುಭ ಸಮಯದಲ್ಲಿ ನೀನು ಬಯಸಿದ್ದು ನೆರವೇರಲು ಆ ದೇವರ ಆಶೀರ್ವಾದ ನಿನ್ನ ಮೇಲಿರಲಿ.
ನನಗೆ ಈ ಜಗತ್ತಿನಲ್ಲಿ ಅತ್ಯಂತ ಪ್ರಿಯವಾದ ವ್ಯಕ್ತಿಗೆ ಮೇರಿ ಕ್ರಿಸ್ಮಸ್. ಈ ಹಬ್ಬದ ಸಮಯವನ್ನು ಮತ್ತಷ್ಟು ಸ್ಪೆಷಲ್ ಆಗಿಸೋಣ….