9th standard kannada poem parivala summary in kannada, 9ನೇ ತರಗತಿ ಪಾರಿವಾಳ ಪದ್ಯದ ಸಾರಾಂಶ, parivala kannada notes ಪಾರಿವಾಳ ಪದ್ಯದ ಪ್ರಶ್ನೋತ್ತರಗಳು 9ನೇ ತರಗತಿ, ಪಾರಿವಾಳ ಪದ್ಯದ ನೋಟ್ಸ್, 9th standard kannada notes parivala poem, ಪಾರಿವಾಳ ಪದ್ಯ ಸಾರಾಂಶ pdf
9th Standard Kannada Poem Parivala Summary in Kannada
ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ


9ನೇ ತರಗತಿ ಪಾರಿವಾಳ ಪದ್ಯದ ಸಾರಾಂಶ
‘ಪಾರಿವಾಳ ‘ ಎಂಬ ಕವನವು ಒಂದು ಕಥನ ಕವನವಾಗಿದೆ . ಒಂದು ದಟ್ಟವಾದ ಕಾಡಿನ ಹೆಮ್ಮರದ ಹೊದರಿನಲ್ಲಿ ಮುದ್ದು ಪಾರಿವಾಳ ಜೋಡಿ ಸಂಸಾರ ಹೂಡಿ ಸುಃಖದಿಂದ ಬಾಳುತ್ತಿದ್ದವು .
ಈ ಪಾರಿವಾಳಗಳ ಜೋಡಿ ಹಗಲಿರುಳು ಒಂದನೊಂದು ಬಿಟ್ಟಿರದ ಜೊತೆಯಾಗಿ ಬಾಳುತ್ತಿದ್ದವು .
ಈ ಪುಟ್ಟ ಸಂಸಾರದಲ್ಲಿ ಸುಃಖ , ಸಂತೋಷ , ಆನಂದ ಮನೆ ಮಾಡಿತ್ತು . ಈ ಗೂಡಿನಲ್ಲಿ ಮೊಟ್ಟೆಯೊಡೆದು ತನ್ನ ಮರಿ ಪಾರಿವಾಳಗಳನ್ನು ನೋಡಿ ಅವುಗಳ ಸಂತೋಷ ಇಮ್ಮಡಿಯಾಯಿತು .
ಕಾಲಗತಿಸಿದಂತೆ ಮೊಟ್ಟೆಯೊಡೆದು ಮರಿಗಳಾಗಿ ಆ ಮರಿಗಳ ಮಧುರ ಸದ್ದು ಕೇಳಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದವು ಆನಂದದಿಂದ ಬಾಳು ಸಾಗಿಸುತ್ತಿದ್ದವು . ಹೀಗಿರುವಾಗ ಒಂದು ಈ ಪುಟ್ಟ ಪಾರಿವಾಳ ಕುಟುಂಬದ ಮೇಲೆ ಬೇಡನೊಬ್ಬನ ಕಣ್ಣು ಬೀಳುತ್ತದೆ .
ಈ ಬೇಡನು ಬಂದು ಬಲೆಯನ್ನು ಹಾಕಿದಾಗ ಈ ಬಲೆಯಲ್ಲಿ ಮೊದಲು ಮರಿ ಪಾರಿವಾಳಗಳು ಬಿದ್ದು ಸಿಲುಕಿದವು , ಬಲೆಯಿಂದ ಹೊರ ಬರಲು ಚೀತ್ಕರಿಸತೊಡಗಿದವು ,
ಬಲೆಯಲ್ಲಿ ಬಿದ್ದು ಕಷ್ಟ ಪಡುವುದನ್ನು ನೋಡಿದ ತಾಯಿ ಪಾರಿವಾಳ ಸ್ವಲ್ಪವೂ ಯೋಚಿಸದೆ , ತಡಮಾಡದೆ ಬಲೆಯಲ್ಲಿ ಬಿದ್ದಿತು . ತನ್ನ ಮರಿ ಪಾರಿವಾಳಗಳು , ಹೆಂಡತಿ ಪಾರಿವಾಳ ಬಲೆಯಲ್ಲಿ ಬಿದ್ದಿರುವುದನ್ನು ನೋಡಿ ಗಂಡು ಪಾರಿವಾಳವು ಸಹ ಹಿಂದೆ – ಮುಂದ ನೋಡದೆ ಹೆಂಡತಿ , ಮಕ್ಕಳನ್ನು ಕಾಪಾಡಲು ತಾನು ಬಲೆಗೆ ಬಿದ್ದಿತು .
ಮರಿ ಪಾರಿವಾಳಗಳ ಮೇಲಿನ ವ್ಯಾಮೋಹ ತಾಯಿ ಪಾರಿವಾಳ ಬಲೆಯಲ್ಲಿ ಬೀಳುವಂತೆ ಮಾಡಿತು . ಹೆಂಡತಿ , ಮಕ್ಕಳ ಮೇಲಿನ ವ್ಯಾಮೋಹದಿಂದ ವಿವೇಕ ಕಳೆದುಕೊಂಡು ಗಂಡು ಪಾರಿವಾಳ ಸಹ ಬಲೆಯಲ್ಲಿ ಬಿದ್ದಿತು .
ಬೇಡನಿಗೆ ಲಾಭವೆ ಆಯಿತು . ಈ ಸಂಸಾರವನ್ನು ಬೇಡನು ಹೊತ್ತುಕೊಂಡು ನಡೆದನು . “ ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ ವ್ಯಾಮೋಹವನ್ನು ತೊರೆದು ಬಾಳಬೇಕು ಏನು ಬಂದರು ಕೂಡ ತಾಳಬೇಕು ” ಎಂಬ ಕವಿಯ ಈ ಸಾಲುಗಳು ಪಾಠವಾಗಿ ನಿಲ್ಲುತ್ತವೆ .
ಮಕ್ಕಳು ಬಲೆಯಲ್ಲಿ ಬಿದ್ದಾಗ ತಾಯಿ ಪಾರಿವಾಳ ವ್ಯಾಮೋಹ ಬಿಟ್ಟು ಸ್ವಲ್ಪ ವಿವೇಕದಿಂದ ಯೋಚನೆ ಮಾಡಬೇಕಿತ್ತು . ಇದರಿಂದ ತನ್ನ ಪಾಣ ಉಳಿಯುತ್ತಿತ್ತು .
ಬೇಡನ ಬಲೆಯಲ್ಲಿ ಬಿದ್ದು ಮರಿ ಪಾರಿವಾಳಗಳ ಜೀವ ಹೋಗಬೇಕು ಎಂದು ಆ ವಿಧಿ ಬರೆದಿದ್ದರೆ ಯಾರು ತಾನೇ ತಪ್ಪಿಸಲು ಸಾಧ್ಯ ? ಎಂದು ತಾಯಿ ಪಾರಿವಾಳ ವಿವೇಕದಿಂದ ಯೋಚನೆ ಮಾಡಬೇಕಿತ್ತು .
ಇದೇ ರೀತಿ ಮರಿ ಪಾರಿವಾಳ , ಹೆಂಡತಿ ಪಾರಿವಾಳ ಬಲೆಯಲ್ಲಿ ಬಿದ್ದಾಗ ಗಂಡು ಪಾರಿವಾಳ ಯೋಚನೆ ಮಾಡಿದ್ದರೆ ಪಾರಿವಾಳಗಳ ಕುಟುಂಬ ಸರ್ವನಾಶವಾಗುತ್ತಿರಲಿಲ್ಲ .
ಜೀವನ ಎಂದ ಮೇಲೆ ಕಷ್ಟ ನಷ್ಟ , ಸಮಸ್ಯೆಗಳು ಬರುತ್ತವೆ , ಸವಾಲುಗಳಿಗೆ ಹೆದರದೆ , ಬಾವುಕರಾಗಿ ಅನಾಹುತಗಳನ್ನು ಮಾಡಿಕೊಳ್ಳದೇ ವಿವೇಕದಿಂದ ಆಲೋಚಿಸಿ ಪರಿಹಾರ ಕಂಡುಕೊಳ್ಳಬೇಕು .
ಎನೇ ಬಂದರು ಕಲ್ಲುಬಂಡೆಯಂತೆ ತಾಳಬೇಕು ಎಂದು ಕವಿ ಹೇಳಿದ್ದಾರೆ .

ಸಂಬಂದಿಸಿದ ಇತರೆ ವಿಷಯಗಳು
ರಾಮರಾಜ್ಯ ಪಾಠದ ಪ್ರಶ್ನೆ ಉತ್ತರಗಳು