ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್ | 2nd PUC Political Science 1st Chapter Notes in Kannada

ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್ | 2nd PUC Political Science 1st Chapter Notes in Kannada

2nd PUC Political Science 1st Chapter Notes in Kannada,ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್, 2nd puc notes kannada

2nd PUC Political Science 1st Chapter Notes in Kannada

Download Political Science Chapter 1 Origin and Growth of Indian Political System Questions and Answers, Notes Pdf, 2nd PUC Kannada

Spardhavani Telegram
Spardhavani.com

ಒಂದು ಅಂಕದ ಪ್ರಶ್ನೆಗಳು

1.ಭಾರತ ಯಾವಾಗ ಸ್ವಾತಂತ್ರ್ಯವಾಯಿತು ?

ಭಾರತವು 15 ನೇ ಆಗಸ್ಟ್ 1947 ರಂದು ಸ್ವತಂತ್ರವಾಯಿತು .

2. ಭಾರತ ಸಂವಿಧಾನ ಯಾವಾಗ ಅಸ್ತಿತ್ವಕ್ಕೆ ಬಂದಿತು ?

ಭಾರತದ ಸಂವಿಧಾನವು 26 ನೇ ಜನವರಿ 1950 ರಂದು ಅಸ್ತಿತ್ವಕ್ಕೆ ಬಂದಿತು .

3.ಭಾರತ ರಾಷ್ಟ್ರೀಯ ಕಾಂಗ್ರೆಸ್ ಯಾವಾಗ ಉದಯಿಸಿತು ?

ಭಾರತ ರಾಷ್ಟ್ರೀಯ ಕಾಂಗ್ರೆಸ್ 1885 ಡಿಸೆಂಬರ್ 24 ರಂದು ಉದಯಿಸಿತು .

4. ಯಾವ ಕಾಯಿದೆಯು ಅಧಿಕಾರವನ್ನು ಕಂಪನಿಯಿಂದ ಕೌನ್‌ಗೆ ವರ್ಗಾಯಿಸಿತು ?

1858 ರ ಕಾಯಿದೆಯು ಅಧಿಕಾರವನ್ನು ಕಂಪನಿಯಿಂದ ಕೌನ್‌ಗೆ [ ಬ್ರಿಟಿಷ್ ಅರಸನಿಗೆ ] ವರ್ಗಾಯಿಸಿತು .

5. ಮಿಂಟೋ – ಮಾರ್ಲೆ ಸುಧಾರಣೆಯ ಒಂದು ಮುಖ್ಯಾಂಶವನ್ನು ಸೂಚಿಸಿ ,

ಕೇಂದ್ರ ಮತ್ತು ಪ್ರಾಂತೀಯ ಶಾಸನ ಸಭೆಗಳ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿರುವುದು ಮಿಂಟೋ – ಮಾರ್ಲೆ ಸುಧಾರಣೆಯ ಪ್ರಮುಖ ಅಂಶವಾಗಿದೆ .

6. 1919 ರ ಭಾರತ ಸರ್ಕಾರ ಕಾಯ್ದೆಯ ಒಂದು ಮುಖ್ಯಾಂಶವನ್ನು ಸೂಚಿಸಿ .

ಆಡಳಿತದ ವಿಷಯಗಳನ್ನು 2 ವರ್ಗಗಳನ್ನಾಗಿ ವಿಂಗಡಿಸಿದ್ದು , 1919 ರ ಭಾರತ ಸರ್ಕಾರ ಕಾಯ್ದೆಯ ಪ್ರಮುಖ ಮುಖ್ಯಾಂಶವಾಗಿದೆ .

7. ಡಯಾರ್ಕಿ ಎಂದರೇನು ?

ಡಯಾರ್ಕಿ ಎಂದರೆ ದ್ವಿ ಸರ್ಕಾರ ಪದ್ದತಿ ಎಂದರ್ಥ .

8. ಶಾಸನಾತ್ಮಕ ಆಯೋಗವನ್ನು ಏಕೆ ರಚಿಸಲಾಯಿತು ?

ಗಾಂಧೀಜಿಯವರು ಸ್ವರಾಜ್ಯ ಆಂದೋಲನವನ್ನು ಪ್ರಾರಂಭಿಸಿದ್ದರಿಂದ ಶಾಸನಾತ್ಮಕ ಆಯೋಗವನ್ನು ರಚಿಸಲಾಯಿತು .

9. ಸೈಮನ್ ಆಯೋಗವು ಏನನ್ನು ಶಿಫಾರಸ್ಸು ಮಾಡಿತು ?

ಸೈಮನ್ ಆಯೋಗವು ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡಬೇಕೆಂದು ಶಿಫಾರಸ್ಸು ಮಾಡಿತು .

10. 3 ನೇ ದುಂಡು ಮೇಜಿನ ಸಮ್ಮೇಳನ ಯಾವಾಗ ನಡೆಯಿತು ?

1932 ರ ನವೆಂಬರ್ 17 ರಿಂದ ಡಿಸೆಂಬರ್ 24 ರ ವರೆಗೆ 3 ನೇ ದುಂಡು ಮೇಜಿನ ಸಮ್ಮೇಳನವು ನಡೆಯಿತು .

11. 1935 ರ ಭಾರತ ಸರ್ಕಾರದ ಕಾಯ್ದೆಯ ಒಂದು ಮುಖ್ಯಾಂಶವನ್ನು ಬರೆಯಿರಿ .

1935 ರ ಕಾಯಿದೆಯು ಬ್ರಿಟಿಷ್ ಆಡಳಿತ ಪ್ರಾಂತ್ಯಗಳು ಮತ್ತು ದೇಶೀಯ ಸಂಸ್ಥಾನಗಳನ್ನೊಳಗೊಂಡ ಭಾರತದ ಸಂಯುಕ್ತ ಪದ್ಧತಿಗೆ ಅವಕಾಶವನ್ನು ಕಲ್ಪಿಸಿತು .

12. 1947 ರ ಭಾರತ ಸ್ವಾತಂತ್ರ್ಯ ಕಾಯ್ದೆಯ ಒಂದು ಮುಖ್ಯಾಂಶವನ್ನು ಬರೆಯಿರಿ .

15 ನೇ ಆಗಸ್ಟ್ 1947 ರಂದು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಡೊಮಿನಿಯನ್‌ಗಳನ್ನು ಸ್ಥಾಪಿಸಲು 1947 ರ ಭಾರತ ಸ್ವಾತಂತ್ರ್ಯ ಕಾಯಿದೆಯು ಅವಕಾಶ ಕಲ್ಪಿಸಿತು .

2nd PUC Political Science 1st Chapter Notes in Kannada

13. ಗಡಿ ರೇಖೆ ಆಯೋಗದ ಅಧ್ಯಕ್ಷರು ಯಾರು ?

ಸರ್ ಸಿರಿಲ್ ರಾಡ್‌ಕ್ಲಿಫ್ ರವರು ಗಡಿ ರೇಖೆ ಆಯೋಗದ ಅಧ್ಯಕ್ಷರು .

14. ಮಧ್ಯಂತರ ಸರ್ಕಾರ ಯಾವಾಗ ರಚನೆಯಾಯಿತು ?

2 ನೇ ಸೆಪ್ಟೆಂಬರ್ 1946 ರಂದು ಮಧ್ಯಂತರ ಸರ್ಕಾರವು ರಚನೆಯಾಯಿತು .

15. ಯಾವ ಸಭೆಯು ಮಧ್ಯಂತರ ಸರ್ಕಾರವನ್ನು ರಚಿಸಿತು ?

ಸಂವಿಧಾನ ರಚನಾ ಸಭೆಯು ಮಧ್ಯಂತರ ಸರ್ಕಾರವನ್ನು ರಚಿಸಿತು .

origin and growth of indian political system in kannada

ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್ | 2nd PUC Political Science 1st Chapter Notes in Kannada
ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ

16 , ಎಲ್ಲಿಯವರೆವಿಗೂ ಮಧ್ಯಂತರ ಸರ್ಕಾರ ಅಸ್ತಿತ್ವದಲ್ಲಿತ್ತು ?

ಭಾರತವು ಸ್ವಾತಂತ್ರ್ಯ ಹೊಂದುವವರೆಗೂ ಮಧ್ಯಂತರ ಸರ್ಕಾರ ಅಸ್ತಿತ್ವದಲ್ಲಿತ್ತು .

17. ವೈಸ್‌ರಾಯ್ ರವರ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರು ಯಾರು ?

ಪಂಡಿತ್ ಜವಹರಲಾಲ್ ನೆಹರು ಅವರು ವೈಸ್‌ರಾಯ್ ರವರ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರಾಗಿದ್ದರು

18. ಪ್ರಥಮ ಸಾರ್ವತ್ರಿಕ ಚುನಾವಣೆ ಯಾವಾಗ ನಡೆಯಿತು ?

ಪ್ರಥಮ ಸಾರ್ವತ್ರಿಕ ಚುನಾವಣೆ ಅಕ್ಟೋಬರ್ 1951 ರಿಂದ ಫೆಬ್ರವರಿ 1952 ರವರೆಗೆ ನಡೆಯಿತು .

19.ಯಾವ ದೇಶವನ್ನು ಜಗತ್ತಿನ ಬೃಹತ್ ಪ್ರಜಾಸತಾತ್ಮಕ ದೇಶ ಎಂದು ಕರೆಯುತ್ತೇವೆ ?

ಭಾರತ ದೇಶವನ್ನು ಜಗತ್ತಿನ ಬೃಹತ್ ಪ್ರಜಾಸತಾತ್ಮಕ ದೇಶ ಎಂದು ಕರೆಯುತ್ತೇವೆ .

political science in kannada notes

ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್

ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್ | 2nd PUC Political Science 1st Chapter Notes in Kannada Best Notes
ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್ | 2nd PUC Political Science 1st Chapter Notes in Kannada Best Notes

20. ಪ್ಯಾರಾಮೌಂಟ್ ಎಂದರೇನು ?

ಪ್ಯಾರಾ ಮೌಂಟ್ಲಿ ಅಧಿಕಾರ ಎಂದರೆ ರಾಜ ಅಥವಾ ರಾಣಿಗೆ ತಮ್ಮ ತಮ್ಮ ರಾಜ್ಯದ ಮೇಲಿರುವ ಸರ್ವಾಧಿಕಾರ .

21. ಆಪರೇಷನ್ ಪೋಲೊ ಎಂದರೇನು ?

ಹೈದರಾಬಾದ್‌ನ ಅರಾಜಕತೆಯನ್ನು ಅಂತ್ಯಗೊಳಿಸಲು ಮಾಡಿದ ಪೋಲಿಸ್ ಕಾರ್ಯಾಚರಣೆಯನ್ನು ಆಪರೇಷನ್ ಹೋಲೋ ‘ ಎಂದು ಕರೆಯಲಾಗಿದೆ .

22. ಇನ್‌ಸ್ಟುಮೆಂಟ್ ಆಫ್ ಅಕ್ಸೆಷನ್ ಎಂದರೇನು ?

ಹಲವು ರಾಜ್ಯಗಳ ರಕ್ಷಣೆ , ವಿದೇಶಾಂಗ ವ್ಯವಹಾರಗಳು ಮತ್ತು ಸಂಪರ್ಕಗಳಿಗೆ ಸಂಬಂಧಪಟ್ಟಂತೆ ಭಾರತದ ಒಕ್ಕೂಟದಲ್ಲಿ ಸೇರಲು ಮಾಡಿಕೊಂಡ ಒಪ್ಪಂದವೇ ‘ ಇನ್‌ಸ್ಟ್ರುಮೆಂಟ್ ‘ ಆಫ್ ಅಕ್ಷೆಷನ್ .

23. ಸಂವಿಧಾನದ ಯಾವ ವಿಧಿಯು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನವನ್ನು ನೀಡಿದೆ ?

ಸಂವಿಧಾನದ 370 ನೇ ವಿಧಿಯು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನವನ್ನು ನೀಡಿದೆ .

24. ರಾಜ್ಯಗಳ ಏಕೀಕರಣದ ರೂವಾರಿ ಯಾರು ?

ರಾಜ್ಯಗಳ ಏಕೀಕರಣದ ರೂವಾರಿಯು ಸರ್ದಾರ್ ವಲ್ಲಬಭಾಯಿ ಪಟೇಲ್ ,

25. ಉಕ್ಕಿನ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ ?

ಉಕ್ಕಿನ ಮನುಷ್ಯ ಎಂದು ವಲ್ಲಬಭಾಯಿ ಪಟೇಲ್‌ರನ್ನು ಕರೆಯುತ್ತಾರೆ .

26. ರಾಜ್ಯ ಪುನರ್ ರಚನಾ ಆಯೋಗ ಯಾವಾಗ ರಚನೆಯಾಯಿತು ?

1953 ರ ಡಿಸೆಂಬರ್‌ನಲ್ಲಿ ರಾಜ್ಯ ಪುನರ್‌ ರಚನಾ ಆಯೋಗವು ರಚನೆಯಾಯಿತು .

27. ರಾಜ್ಯ ಪುನರ್ ರಚನಾ ಆಯೋಗದ ಒಬ್ಬ ಸದಸ್ಯರನ್ನು ಹೆಸರಿಸಿ .

ರಾಜ್ಯ ಪುನರ್ ರಚನಾ ಆಯೋಗದ ಪ್ರಮುಖ ಸದಸ್ಯರು ಯಾರೆಂದರೆ ‘ ಫಜಲ್ ಅಲಿ ‘ .

28 , ರಾಜ್ಯ ಪುನರ್ ರಚನಾ ಕಾಯ್ದೆಯು ಯಾವಾಗ ಅಂಗೀಕಾರವಾಯಿತು ?

1956 ರ ನವೆಂಬರ್‌ನಲ್ಲಿ ರಾಜ್ಯ ಪುನರ್‌ ರಚನಾ ಆಯೋಗವು ಅಂಗೀಕಾರವಾಯಿತು .

29. 1956 ರಲ್ಲಿ ರಾಜ್ಯ ಪುನರ್ ರಚನಾ ಕಾಯ್ದೆಯು ಎಷ್ಟು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಿತು ?

14 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳನ್ನು 1956 ರಲ್ಲಿ ಈ ಆಯೋಗವು ರಚಿಸಿತು .

30 , ಬಾಂಬೆಯನ್ನು ಯಾವಾಗ ವಿಭಜಿಸಲಾಯಿತು ?

1960 ರಲ್ಲಿ ಬಾಂಬೆಯನ್ನು ವಿಭಜಿಸಲಾಯಿತು .

31. ಪಂಜಾಬ್ ಅನ್ನು ಯಾವಾಗ ವಿಭಜಿಸಲಾಯಿತು ?

ಪಂಜಾಬ್ ಅನ್ನು 1960 ರಲ್ಲಿ ವಿಭಜಿಸಲಾಯಿತು .

32. 2014 ರಲ್ಲಿ ಯಾವ ರಾಜ್ಯವನ್ನು ವಿಭಜಿಸಲಾಯಿತು ?

2014 ರಲ್ಲಿ ಆಂಧ್ರಪ್ರದೇಶವನ್ನು ವಿಭಜಿಸಲಾಯಿತು .

33. ಯಾವ ಕಾಯ್ದೆಯು ಭಾರತದಲ್ಲಿ ಜವಾಬ್ದಾರಿಯುತ ಸರ್ಕಾರವನ್ನು ಪ್ರಚಾರಪಡಿಸಿತು ?

1909 ರ ಕಾಯ್ದೆಯು ಭಾರತದಲ್ಲಿ ಜವಾಬ್ದಾರಿಯುತ ಸರ್ಕಾರವನ್ನು ಪ್ರಚಾರಪಡಿಸಿತು .

34. ಭಾರತದಲ್ಲಿ ಸಂಯುಕ್ತ ವ್ಯವಸ್ಥೆಗೆ ಯಾವ ಕಾಯ್ದೆಯು ಅವಕಾಶ ಕಲ್ಪಿಸಿತು ?

ಭಾರತದಲ್ಲಿ ಸಂಯುಕ್ತ ವ್ಯವಸ್ಥೆಗೆ 1935 ರ ಭಾರತ ಸರ್ಕಾರ ಕಾಯ್ದೆಯು ಅವಕಾಶ ಕಲ್ಪಿಸಿತು .

35. ಪ್ರಥಮ ಲೋಕಸಭೆಯ ಸ್ಪೀಕರ್‌ ಯಾರು ?

ಗಣೇಶ ವಾಸುದೇವ , ಮಾವಳಂಕರ್‌ರವರು ಪ್ರಥಮ ಲೋಕಸಭೆಯ ಸ್ಪೀಕರ್ ಆಗಿದ್ದರು .

2nd PUC Political Science 1st Chapter Notes in Kannada

ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್ | 2nd PUC Political Science 1st Chapter Notes in Kannada Best Notes
ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್ | 2nd PUC Political Science 1st Chapter Notes in Kannada Best Notes

ಎರಡು ಅಂಕದ ಪ್ರಶ್ನೆಗಳು :

1. ಫೆಡರಲ್ ನ್ಯಾಯಾಲಯವು ಎಲ್ಲಿ ಮತ್ತು ಯಾವಾಗ ಸ್ಥಾಪನೆಯಾಯಿತು ?

ಫೆಡರಲ್ ನ್ಯಾಯಾಲಯವು ದೆಹಲಿಯಲ್ಲಿ 1935 ರಲ್ಲಿ ಸ್ಥಾಪನೆಯಾಯಿತು .

2. ಬಾಂಬೆಯನ್ನು ಎಷ್ಟು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು ? ಅವು ಯಾವುವು ?

ಬಾಂಬೆಯನ್ನು 2 ರಾಜ್ಯಗಳನ್ನಾಗಿ ವಿಂಗಡಿಸಲಾಯಿತು .

ಅವು ಯಾವುವೆಂದರೆ ; 1. ಮಹಾರಾಷ್ಟ್ರ , 2. ಗುಜರಾತ್ .

3.ಪ೦ಜಾಬನ್ನು ಎಷ್ಟು ರಾಜ್ಯಗಳ ನ್ನಾಗಿ ವಿಂಗಡಿಸಲಾಯಿತು ? ಅವು ಯಾವುವು ?

ಪಂಜಾಬನ್ನು 2 ರಾಜ್ಯಗಳನ್ನಾಗಿ ವಿಂಗಡಿಸಲಾಯಿತು . ಅವು ಯಾವುವೆಂದರೆ 1. ಪಂಜಾಬ್ , 2. ಹರಿಯಾಣ .

ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್ | 2nd PUC Political Science 1st Chapter Notes in Kannada Best Notes
ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್ | 2nd PUC Political Science 1st Chapter Notes in Kannada Best Notes

4. ಪ್ರಥಮ ಲೋಕಸಭಾ ಚುನಾವಣೆಯ ಬಗ್ಗೆ ಟಿಪ್ಪಣಿ ಬರೆಯಿರಿ .

ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯನ್ನು ಆದರಿಸಿ ಪ್ರಥಮ ಲೋಕಸಭಾ ಚುನಾವಣೆಯು ಅಕ್ಟೋಬರ್ 1951 ರಿಂದ ಫೆಬ್ರವರಿ 1952 ರವರೆಗೆ ನಡೆಯಿತು . -ಈ ಚುನಾವಣೆಯು ಪ್ರಜೆಗಳು ಮತ್ತು ಪ್ರಜಾಪ್ರಭುತ್ವದಲ್ಲಿ ಇಟ್ಟಿದ್ದ ವಿಶ್ವಾಸವನ್ನು ಕಾರ್ಯರೂಪಕ್ಕೆ ತರುವ ದಿಟ್ಟ ಹೆಜ್ಜೆಯಾಯಿತು . ಇದೊಂದು ಬೃಹತ್ ರಾಜಕೀಯ ಪ್ರಯೋಗವಾಗಿದೆ .

5. 1919 ರಲ್ಲಿ ಸೂಚಿಸಿರುವಂತೆ ಡಯಾರ್ಕಿ ಬಗ್ಗೆ ಟಿಪ್ಪಣಿ ಬರೆಯಿರಿ .

1919 ರ ಕಾಯಿದೆಯು ಕೆಲವು ಪ್ರಮುಖ ಪ್ರಾಂತ್ಯಗಳಲ್ಲಿ ಡಯಾರ್ಕಿ [ ದ್ವಿ ಸರ್ಕಾರ ಪದ್ಧತಿಯನ್ನು] ಜಾರಿಗೆ ತಂದಿತು. ಈ ಪದ್ಧತಿಗೆ ಅನುಗುಣವಾಗಿ ಸರ್ಕಾರದ ವಿಷಯಗಳನ್ನು ಕಾಯ್ದಿರಿಸಿದ ವಿಷಯಗಳು ಮತ್ತು ವರ್ಗಾಯಿಸಿದ ವಿಷಯಗಳನ್ನಾಗಿ ವಿಂಗಡಿಸಿತು .

28 ಕಾಯ್ದಿರಿಸಿದ ವಿಷಯಗಳನ್ನು ಪ್ರಾಂತ್ಯದ ರಾಜ್ಯಪಾಲ ಮತ್ತು ಕಾರ್ಯನಿರ್ವಾಹಕ ಮಂಡಳಿಯು ಶಾಸನ ಸಭೆಗೆ ಜವಾಬ್ದಾರಿಯಾಗಿಲ್ಲದೆ ನೋಡಿಕೊಳ್ಳುತ್ತಿದ್ದರು ಮತ್ತು 22 ವರ್ಗಾಯಿಸಿದ ವಿಷಯಗಳನ್ನು ರಾಜ್ಯಪಾಲ ಮತ್ತು ಭಾರತೀಯರನ್ನೊಳಗೊಂಡ ಮಂತ್ರಿಮಂಡಲವು ಶಾಸನ ಸಭೆಗೆ ಜವಾಬ್ದಾರಿಯಾಗಿ ನೋಡಿಕೊಳ್ಳುತ್ತಿದ್ದರು .

6. ಸೈಮನ್ ಕಮಿಷನ್ ಅನ್ನು ಏಕೆ ನೇಮಿಸಲಾಯಿತು ?

ಸೈಮನ್ ಕಮಿಷನ್ ಅನ್ನು ಕೆಳಗಿನ ಪ್ರಮುಖ ಕಾರಣಗಳಿಗಾಗಿ ನೇಮಿಸಲಾಯಿತು .

a ) 1919 ರ ಕಾಯ್ದೆಯ ಸುಧಾರಣೆಗಳು ವಿಫಲವಾದ ಕಾರಣ ಭಾರತೀಯರ ಸ್ವಾತಂತ್ರ್ಯ ಹೋರಾಟ ಇಮ್ಮಡಿಸಿತು .

b ) 1919 ಕಾಯಿದೆಯನ್ನು ಏರ್ಪಡಿಸಲು ಮತ್ತು ಎಷ್ಟರ ಮಟ್ಟಿಗೆ ಜವಾಬ್ದಾರಿ ಸರ್ಕಾರ ಪದ್ಧತಿಯನ್ನು ಜಾರಿಗೊಳಿಸಬಹುದು ಎಂಬುದರ ಬಗ್ಗೆ ಶಿಫಾರಸ್ಸು ಮಾಡಲು ಸೈಮನ್ ಕಮೀಷನ್ ನೇಮಿಸಲಾಯಿತು .

7. 1935 ರ ಕಾಯ್ದೆಯಲ್ಲಿ ಎಷ್ಟು ವಿಧಿಗಳು ಮತ್ತು ಷೆಡ್ಯೂಲ್ಗಳಿವೆ ?

1935 ರ ಭಾರತ ಸರ್ಕಾರದ ಕಾಯ್ದೆಯಲ್ಲಿ 321 ವಿಧಿಗಳು ಹಾಗೂ 10 ಷೆಡ್ಯೂಲ್‌ಗಳಿವೆ .

ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್ | 2nd PUC Political Science 1st Chapter Notes in Kannada Best Notes
ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್ | 2nd PUC Political Science 1st Chapter Notes in Kannada Best Notes

ದ್ವಿತೀಯ ಪಿ ಯು ಸಿ ರಾಜ್ಯಶಾಸ್ತ್ರ ನೋಟ್ಸ್

ಅಧ್ಯಾಯ :- 02- ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ

ಅಧ್ಯಾಯ :- 03- ಭಾರತದಲ್ಲಿ ಆಡಳಿತ ಯಂತ್ರ

ಅಧ್ಯಾಯ :- 04- ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು notes

ಅಧ್ಯಾಯ :- 05 –ರಾಷ್ಟ್ರನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು

ಅಧ್ಯಾಯ :- 06 – ಭಾರತದ ರಾಜಕೀಯ ನೂತನ ಪ್ರವೃತ್ತಿಗಳು

ಅಧ್ಯಾಯ :- 07 –ಸಮಕಾಲೀನ ರಾಜಕೀಯ ವಿದ್ಯಮಾನಗಳು

ಅಧ್ಯಾಯ :- 08 –ಅಂತರ್ರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ

ಅಧ್ಯಾಯ :- 09-ಭಾರತದ ವಿದೇಶಾಂಗ ನೀತಿ

9 thoughts on “ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್ | 2nd PUC Political Science 1st Chapter Notes in Kannada

Leave a Reply

Your email address will not be published. Required fields are marked *