ಕರ್ನಾಟಕ ವಿಧಾನ ಪರಿಷತ್ ಸದಸ್ಯರು 2021, vidhan parishad karnataka, vidhan parishad, ಕರ್ನಾಟಕ ವಿಧಾನ ಪರಿಷತ್, karnataka legislative assembly in kannada
ಕರ್ನಾಟಕ ವಿಧಾನ ಪರಿಷತ್ ಸದಸ್ಯರು 2021
ವಿಧಾನ ಪರಿಷತ್ in english
Member of the Legislative Council
ವಿಧಾನ ಪರಿಷತ್ ಸದಸ್ಯರ ಅವಧಿ
ಈ ಸಭೆಗೆ ಆಯ್ಕೆಯಾಗುವ ಸದಸ್ಯರ ಅಧಿಕಾರವಧಿ 6 ವರ್ಷವಾಗುತ್ತದೆ .
ವಿಧಾನ ಪರಿಷತ್ತಿನಲ್ಲಿಯೂ ಪ್ರತಿ 2 ವರ್ಷಕ್ಕೊಮ್ಮೆ 1/3 ರಷ್ಟು ಜನ ನಿವೃತ್ತಿ ಹೊಂದುತ್ತಾರೆ .
ವಿಧಾನ ಪರಿಷತ್’ ಕರ್ನಾಟಕ ರಾಜ್ಯ ಶಾಸಕಾಂಗದ ಮೇಲ್ಮನೆ.
ವಿಧಾನಸಭೆಯನ್ನು ಕೆಳಮನೆ ಎಂದು ಕರಿಯಲಾಗುತ್ತದೆ
ಭಾರತದ ಶಾಸಕಾಂಗ ವ್ಯವಸ್ಥೆಯಲ್ಲಿ ಈ ಎರಡೂ ಸಭೆಗಳು ನಿರ್ಧಿಷ್ಟ ಕಾರ್ಯ ನಿರ್ವಹಿಸುತ್ತವೆ.
ವಿಧಾನ ಪರಿಷತ್ ನ್ನು ಭಾರತದ ರಾಜ್ಯಸಭೆಗೆ ಹೋಲಿಸಬಹುದು.
ವಿಧಾನ ಪರಿಷತ್ ಕಾರ್ಯ ನಿರ್ವಹಿಸುವ ರಾಜ್ಯಗಳು
ಸಂಖ್ಯೆ | ರಾಜ್ಯಗಳು | ಸದಸ್ಯರ ಸಂಖ್ಯೆ |
01 | ಬಿಹಾರ | 75 |
02 | ಉತ್ತರ ಪ್ರದೇಶ | 100 |
03 | ಮಹಾರಾಷ್ಟ್ರ | 78 |
04 | ಕರ್ನಾಟಕ | 75 |
05 | ಆಂಧ್ರಪ್ರದೇಶ | 58 |
06 | ತೆಲಂಗಾಣ | 40 |
ಕರ್ನಾಟಕ ವಿಧಾನ ಪರಿಷತ್ತು
ಇದನ್ನು ರಾಜ್ಯ ಶಾಸಕಾಂಗದ ಮೇಲ್ಮನೆ , ಬುದ್ಧಿವಂತರ ಸದನ , ಹಿರಿಯರ ಸದನ , ಶಾಶ್ವತ ಸದನ , ಹೀಗೆ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ .
ವಿಧಿ -169 ವಿಧಾನ ಪರಿಷತ್ತಿನ ಸ್ಥಾಪನೆ
ಈ ವಿಧಿಯು ವಿಧಾನ ಪರಿಷತ್ತನ್ನು ಸ್ಥಾಪಿಸುವ ಮತ್ತು ರದ್ದು ಮಾಡುವ ಅಧಿಕಾರದ ಕುರಿತು ತಿಳಿಸಲಾಗುತ್ತದೆ .
ಅಂದರೆ ರಾಜ್ಯ ಬಹುಮತದೊಂದಿಗೆ ಸಂಸತ್ತಿಗೆ ಶಿಫಾರಸ್ಸು ಮಾಡಿದಾಗ ಸಂಸತ್ತು ವಿಧಾನ ಪರಿಷತ್ತನ್ನು ರದ್ದು ಮಾಡುವ ಮತ್ತು ವಿಧಾನ ಪರಿಷತ್ತನ್ನು ಸ್ಥಾಪಿಸುವ ಅಧಿಕಾರ ಹೊಂದಿದೆ .
ವಿಧಿ -171 ವಿಧಾನ ಪರಿಷತ್ತಿನ ರಚನೆ
ವಿಧಾನ ಪರಿಷತ್ತಿಗೆ ಈ ಕೆಳಗಿನ ಕ್ಷೇತ್ರಗಳಿಂದ ಸದಸ್ಯರು ಆಯ್ಕೆಯಾಗುತ್ತಾರೆ .
ಸಂ . ಕ್ಷೇತ್ರ ಶೇ ಸಂಖ್ಯೆ
1 ) ಎಮ್.ಎಲ್.ಎ. ಗಳಿಂದ 1/3 25
2 ) ಸ್ಥಳೀಯ ಸಂಸ್ಥೆಗಳಿಂದ 1/3 25
3 ) ಶಿಕ್ಷಕರ ಕ್ಷೇತ್ರದಿಂದ 1/12 07
4 ) ಪದವೀಧರ ಕ್ಷೇತ್ರದಿಂದ 1/12 07
5 ) ರಾಜ್ಯಪಾಲರ ನಾಮಕರಣ 1/6 11
ಒಟ್ಟು . 75
ಸದಸ್ಯರ ಅರ್ಹತೆಗಳು
ಭಾರತದ ಪ್ರಜೆಯಾಗಿರಬೇಕು .
30 ವರ್ಷ ವಯಸ್ಸಾಗಿರಬೇಕು .
ಲಾಭದಾಯಕ ಹುದ್ದೆ ಹೊಂದಿರಬಾರದು .
ದಿವಾಳಿಕೋರನಾಗಿರಬಾರದು
ಮತದಾರರ ಪಟಿಯಲಿ ಹೆಸರಿರಬೇಕು .
ಅವಧಿ
ಈ ಸಭೆಗೆ ಆಯ್ಕೆಯಾಗುವ ಸದಸ್ಯರ ಅಧಿಕಾರವಧಿ 6 ವರ್ಷವಾಗುತ್ತದೆ .
ವಿಧಾನಪರಿಷತ್ತಿನಲ್ಲಿಯೂ ಪ್ರತಿ 2 ವರ್ಷಕ್ಕೊಮ್ಮೆ 1/3 ರಷ್ಟು ಜನ ನಿವೃತ್ತಿ ಹೊಂದುತ್ತಾರೆ .
ಪ್ರಮಾಣ ವಚನ
ಈ ಸಭೆಗೆ ಆಯ್ಕೆಯಾಗಿರುವ ಸದಸ್ಯರಿಗೆ ಪ್ರಮಾಣ ವಚನವನ್ನು ವಿಧಾನ ಪರಿಷತ್ತಿನ ಸಭಾಪತಿಗಳು ಬೋಧಿ ಸುತ್ತಾರೆ .
ರಾಜೀನಾಮೆ
* ಈ ಸಭೆಗೆ ಆಯ್ಕೆಯಾಗಿರುವ ಸದಸ್ಯರು ತಮ್ಮ ರಾಜೀನಾಮೆಯನ್ನು ವಿಧಾನ ಪರಿಷತ್ತಿನ ಸಭಾಪತಿಗಳಿಗೆ ಸಲ್ಲಿಸುವದರ ಮೂಲಕ ತಮ್ಮ ಹುದ್ದೆ ಖಾಲಿ ಮಾಡುತ್ತಾರೆ .