Vachanakararu in Kannada, ವಚನಕಾರರು ಮತ್ತು ಅಂಕಿತನಾಮಗಳು, kannada vachanakararu names and information list, 10 vachanakararu hesarugalu name
Vachanakararu in Kannada
ವಚನಕಾರರು ಮತ್ತು ಅಂಕಿತನಾಮಗಳನ್ನು ಈ ಲೇಖನದಲ್ಲಿ ನೆಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
Vachanakararu Information in Kannada
ಕನ್ನಡ ಸಾಹಿತ್ಯದ ಪ್ರಮುಖ ರೂಪಗಳಲ್ಲಿ ವಚನವೂ ಒಂದು. ಸಾಮಾನ್ಯವಾಗಿ 12ನೇ ಶತಮಾನವು ಐತಿಹಾಸಿಕವಾಗಿ ಮಹತ್ವದ ಕಾಲಘಟ್ಟವಾದುದಲ್ಲದೆ, ಕನ್ನಡ ಸಾಹಿತ್ಯದ ಇತಿಹಾಸದಲ್ಲು ಒಂದು ಪ್ರಮುಖ ಕಾಲಮಾನವಾಗಿದೆ. ಈ ಕಾಲದಲ್ಲಿನ ಶರಣರ ಆಂದೋಲನ ಮತ್ತು ಅಭಿವ್ಯಕ್ತಿಗೆ ಸಂಗಾತಿಯಾದುದು ’ವಚನ’.
ಇಂದೊಂದು ಆತ್ಮವಿಮರ್ಶೆಯ ಪ್ರಭಾವಶಾಲಿ ಮಾಧ್ಯಮವಾಗಿ ಸ್ವತಂತ್ರವಾಗಿ ಬೆಳೆದು ಕನ್ನಡ ಸಾಹಿತ್ಯದ ಜೊತೆಗೆ ಇತರ ಭಾಷಾ ಸಾಹಿತ್ಯದ ಮೇಲೆ ಪ್ರಭಾವ ಬೀರಿ ವಿಶ್ವ ಸಾಹಿತ್ಯದಲ್ಲಿ ಒಂದು ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ.
ಸಮಾಜ ಸುಧಾರಣೆಯಲ್ಲಿ ಮಹಿಳೆಯ ಪಾತ್ರವು ಹಿರಿದಾದುದು. ಪುರಷ ಪ್ರಧಾನವಾದ ಸಮಾಜದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ನಿಲ್ಲಬಲ್ಲರೆಂಬ ಪ್ರಜ್ಞೆಯನ್ನು ಸುಮಾರು ಎಂಟುನೂರು ವರ್ಷಗಳ ಹಿಂದೆಯೇ ಮೂಡಿಸಿದ ಕರ್ನಾಟಕದ ಪ್ರಪ್ರಥಮ ಮಹಿಳೆಯೆಂದರೆ ಅಕ್ಕಮಹಾದೇವಿ.
ವಚನಕಾರರ ಅಂಕಿತನಾಮಗಳು
NO | ವಚನಕಾರರು | ಅಂಕಿತನಾಮ |
---|---|---|
1 | ಬಸವಣ್ಣ | ಕೂಡಲ ಸಂಗಮದೇವ |
2 | ಅಕ್ಕಮಹಾದೇವಿ | ಚೆನ್ನಮಲ್ಲಿಕಾರ್ಜುನ |
3 | ಚೆನ್ನ ಬಸವಣ್ಣ | ಕೂಡಲ ಚೆನ್ನಸಂಗಮದೇವ |
4 | ಆಯ್ದಕ್ಕಿ ಲಕ್ಕಮ್ಮ | ಅಮರೇಶ್ವರ ಲಿಂಗ |
5 | ಹಡಪದ ರೇಚಣ್ಣ | ನಿಷ್ಕಳಂಕ ಕೂಡಲ ಚೆನ್ನಸಂಗಮದೇವಾ |
6 | ಅಮುಗೆ ರಾಯಮ್ಮ | ಅಮುಗೇಶ್ವರ |
7 | ಗುರುಬಸವೇಶ್ವರ | ಗುರುಬಸವೇಶ್ವರ |
8 | ಹಾವಿನಾಳ ಕಲ್ಲಯ್ಯ | ಮಹಾಲಿಂಗಕಲ್ಲೇಶ್ವರ |
9 | ಸಿದ್ದರಾಮ | ಕಪಿಲಸಿದ್ಧ ಮಲ್ಲಿಕಾರ್ಜುನ |
10 | ಒಕ್ಕಲಿಗ ಮುದ್ದಣ್ಣ | ಕಾಮಭೀಮ ಜೀವದೊಡೆಯ |
11 | ಆದಯ್ಯ | ಸೌರಾಷ್ಟ್ರ ಸೋಮೇಶ್ವರ |
12 | ಗೊಗ್ಗಪ್ಪ | ನಾಸ್ತಿನಾಥ |
13 | ಅಲ್ಲಮಪ್ರಭು | ಗುಹೇಶ್ವರ |
14 | ಮಡಿವಾಳ ಮಾಚಯ್ಯ | ಕಲದೇವರ ದೇವಾ |
15 | ನುಲಿಯ ಚೆಂದಯ್ಯ | ಚಂದೇಶ್ವರಲಿಂಗ |
16 | ಹೆಂಡದ ಮಾರಯ್ಯ | ಧರ್ಮೇಶ್ವರ ಲಿಂಗ |
17 | ಚಿಕ್ಕಣ್ಣ | ಉಳಿಯುವೇಶ್ವರ |
18 | ರಕ್ಕಸದ ಬೊಮ್ಮರ್ಜುನ | ರಕ್ಕಸದೊಡೆಯ |
19 | ಗಾವುದ ಮಾಚಯ್ಯ | ಗಾವುದಮಾಚಯ್ಯ |
20 | ನಗಿಯ ಮಾರಿತಂದೆ | ಆತುರವೈರಿ ಮಾದೇಶ್ವರ |
21 | ಅಮ್ಮಿ ದೇವಯ್ಯ | ಚೆನ್ನ ಬಸವಣ್ಣಪ್ರಿಯ/ ಕಮಳೇಶ್ವರ ಲಿಂಗ |
22 | ಸಕಲೇಶ ಮಾದರಸ | ಸಕಲೇಶ್ವರ ದೇವ |
23 | ಬಾಲ ಸಂಗಣ್ಣ | ಕಮಟೇಶ್ವರ ಲಿಂಗ |
24 | ಅಕ್ಕಮ್ಮ | ಆಚಾರವೇ ಪ್ರಾಣವಾದ ರಾಮೇಶ್ವರ ಲಿಂಗ |
25 | ಮಾದರಚೆನ್ನಯ್ಯ | ನಿಷ್ಕಳಂಕ ಮಲ್ಲಿಕಾರ್ಜುನ |
26 | ಸೂಳೆ ಸಂಕವ್ವ | ನಿರ್ಲಜೇಶ್ವರ |
27 | ಎಲೇಶ್ವರದ ಕೇತಯ್ಯ | ಏಲೇಶ್ವರ ಲಿಂಗ |
28 | ಡಕ್ಕೆಯ ಬೊಮ್ಮಣ್ಣ | ಕಾಲಂತಕ ಭೀಮೇಶ್ವರಲಿಂಗ |
29 | ಸೊಡ್ಡಳ ಬಾಚರಸ | ಸೊಡ್ಡಳ |
30 | ಮನಸಂದಮಾರಿತಂದೆ | ಮನಸಂದ ಮಾರೇಶ್ವರ |
31 | ವೀರಶಂಕರ ದಾಸಯ್ಯ | ಘನಗುರುಶಿವಲಿಂಗ ರಾಮನಾಥ |
32 | ಚಂದಿಮರಸ | ಸಿಮ್ಮಲಿಗೆಯ ಚೆನ್ನರಾಮ |
33 | ಅಂಬಿಗರ ಚೌಡಯ್ಯ | ಅಂಬಿಗ ಚೌಡಯ್ಯ |
34 | ಮುಕ್ತಾಯಕ್ಕ | ಅಜಗಣ್ಣ |
35 | ವೀರಗೊಲ್ಲಾಳ | ವೀರವೀರೇಶ್ವರ ಲಿಂಗ |
36 | ದೇವರ ದಾಸಿಮಯ್ಯ | ರಾಮನಾಥ |
37 | ಡೋಹರ ಕಕ್ಕಯ್ಯ | ಕಾಮಹರ ಪ್ರಿಯ ರಾಮನಾಥ |
Vachanakararu in Kannada Information
ವಚನಗಳು
ಚೆನ್ನಬಸವಣ್ಣ
ಓದಿದ ವೇದದಲ್ಲಿ ಏನಹುದಯ್ಯಾ ? ಓದಿಸಬಾರದಂಥ ಲಿಂಗಸ್ಥಲ.
ಸಾಧಿಸಿದ ಶಾಸ್ತ್ರದಲೇನಹುದಯ್ಯಾ ? ಸಾಧ್ಯವಾಗದಂಥ ಜಂಗಮಸ್ಥಲ.
ತರ್ಕಿಸಿದ ತರ್ಕದಲ್ಲಿ ಏನಹುದಯ್ಯಾ ? ತರ್ಕಕ್ಕಗೋಚರವಹಂಥ
ಪ್ರಸಾದಿಸ್ಥಲ.
ಓದು ವೇದಶಾಸ್ತ್ರ ತರ್ಕಕ್ಕಗೋಚರ
ಕೂಡಲಚೆನ್ನಸಂಗಾ ನಿಮ್ಮ ಶರಣ.
about vachanakararu in kannada
ಅಲ್ಲಮಪ್ರಭುದೇವರು
ನಾದಬಿಂದುಗಳಿಲ್ಲದಂದು ನಿರ್ಭಯನೆಂಬ
ಗಣೇಶ್ವರನು,
ಉತ್ಪತ್ತಿ ಸ್ಥಿತಿ ಲಯವಿಲ್ಲದಂದು ಅಕ್ಷಯನೆಂಬ ಗಣೇಶ್ವರನು,
ಓದು ವೇದಂಗಳಿಲ್ಲದಂದು ಓಂಕಾರನೆಂಬ ಗಣೇಶ್ವರನು,
ಯುಗಜುಗಂಗಳಿಲ್ಲದಂದು ಊಧ್ರ್ವಮುಖನೆಂಬ ಗಣೇಶ್ವರನು,
ಗುಹೇಶ್ವರಲಿಂಗವಿಲ್ಲದಂದು ನಿರ್ಮಾಯನೆಂಬ ಗಣೇಶ್ವರನು.
vachanakarara hesaru in kannada
ಅಲ್ಲಮ ಪ್ರಭು
ಹೊನ್ನು ಮಾಯೆ ಎಂಬರು
ಹೆಣ್ಣು ಮಾಯೆ ಎಂಬರು
ಮಣ್ಣು ಮಾಯೆ ಎಂಬರು
ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯಲ್ಲ
ಮನದ ಮುಂದಣ ಆಶೆಯೇ ಮಾಯೆ ಕಾಣ ಗುಹೇಶ್ವರ ||
FAQ
ವಚನ ಎಂದರೇನು?
ವಚನ ಎಂದರೆ ಮಾತು, ಭಾಷೆ, ಪ್ರಮಾಣ ಎಂಬರ್ಥಗಳಿವೆ. ವಚನವೆಂಬುದು ಓದಿದರೆ ಗದ್ಯವಾಗುವ, ಹಾಡಿದರೆ ಹಾಡಾಗುವ ಕನ್ನಡ ಸಾಹಿತ್ಯದ ವಿಶಿಷ್ಟ ಕಾವ್ಯ ಪ್ರಕಾರ ಎಂದರೆ ತಪ್ಪಾಗಲಾರದು.
ಅಲ್ಲಮಪ್ರಭು ತಂದೆ ತಾಯಿಯ ಹೆಸರು
ತಂದೆಯ ಹೆಸರು ನಿರಹಂಕಾರ, ತಾಯಿ ಸುಜ್ಞಾನಿ