ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಬಗ್ಗೆ ಮಾಹಿತಿ | Sardar Vallabhbhai Patel Statue Information in Kannada

ಏಕತೆಯ ಪ್ರತಿಮೆ ಬಗ್ಗೆ ಪ್ರಬಂಧ | Statue of Unity in Kannada Best No1 Information

statue of unity in kannada, ರಾಷ್ಟ್ರೀಯ ಏಕತೆ ದಿನ , statue of unity kannada , sardar vallabhbhai patel statue information in kannada , statue of unity kannada

Statue of Unity in Kannada

ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ. ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಜಗತ್ತಿನ ಅತಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯಲ್ಲಿ ಏನೇನಿದೆ? ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.

ರಾಷ್ಟ್ರೀಯ ಏಕತೆ ದಿನ

Rashtriya Ekta Diwas 2022 Wishes, Quotes, Images, Status

Spardhavani Telegram

ಏಕತೆಯ ಪ್ರತಿಮೆ ಬಗ್ಗೆ ಮಾಹಿತಿ ಕನ್ನಡ

sardar vallabhbhai patel statue information in kannada

ಏಕತೆಯ ಪ್ರತಿಮೆ ಬಗ್ಗೆ ಪ್ರಬಂಧ | Statue of Unity in Kannada Best No1 Information
ಏಕತೆಯ ಪ್ರತಿಮೆ ಬಗ್ಗೆ ಪ್ರಬಂಧ | Statue of Unity in Kannada Best No1 Information

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ನೆನಪಲ್ಲಿ ನಿರ್ಮಿಸಿರುವ ಜಗತ್ತಿನ ಅತಿ ಎತ್ತರದ ಪ್ರತಿಮೆಯನ್ನ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಸ್ವತಂತ್ರ ಭಾರತದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ವಲ್ಲ ಬಾಯ್ ಪಟೇಲ್ ಸ್ವತಂತ್ರ ಪೂರ್ವ ದಲ್ಲಿ ಹರಿದು ಹಂಚಿ ಹೋಗಿದ್ದ ಐನೂರಾ 562 ಸಣ್ಣ ಸಣ್ಣ ಸಾಮ್ರಾಜ್ಯ ಗಳನ್ನು ಒಂದುಗೂಡಿಸಿ ಭಾರತ ಗಣರಾಜ್ಯವನ್ನು ನಿರ್ಮಿಸುವ ಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಈ ವೈವಿಧ್ಯಮಯ ಅಸ್ಮಿತೆ ಹೊಂದಿರುವ ರಾಜ್ಯಗಳನ್ನು ದೇಶದ ಹೆಸರಿನಲ್ಲಿ ಒಂದುಗೂಡಿಸಿದ ಏಕತೆಯ ಹರಿಕಾರನ ನೆನಪಿಗಾಗಿ ಪಟೇಲ್ ಅವರ 143 ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಅವರ ಬೃಹತ್ ಪ್ರತಿಮೆ ಅನಾವರಣ ಗೊಂಡಿದೆ.

ಈ ಪ್ರತಿಮೆ ಸಾಕಷ್ಟು ಅಚ್ಚರಿ ಕುತೂಹಲಗಳಿಗೆ ಕಾರಣ ವಾಗಿದೆ. ಅದರ ವಿಶೇಷತೆಗಳೇನು? ಜನರ ವೀಕ್ಷಣೆ ಗೆ ಲಭ್ಯ ಈ ಪ್ರತಿಮೆ ಇರುವುದು ಎಲ್ಲಿ ಅಂದ್ರೆ ಗುಜರಾತ್ ನ ನರ್ಮದಾ ನದಿ ತೀರ ದಿಂದ ತುಸು ದೂರ ದಲ್ಲಿರುವ ರಾಜ್‌ಪಿಪ್ಲಾ ಎಂಬಲ್ಲಿನ ಸಾಧು ಬೆಟ್ ದ್ವೀಪ ದಲ್ಲಿ ಈ ಪ್ರತಿಮೆ ನಿರ್ಮಿಸಲಾಗಿದೆ.

statue of unity kannada

ಏಕತೆಯ ಪ್ರತಿಮೆ ಬಗ್ಗೆ ಪ್ರಬಂಧ | Statue of Unity in Kannada Best No1 Information
ಏಕತೆಯ ಪ್ರತಿಮೆ ಬಗ್ಗೆ ಪ್ರಬಂಧ | Statue of Unity in Kannada Best No1 Information

ಸತ್ಪುರಾ ಮತ್ತೆ ವಿಂಧ್ಯ ಪರ್ವತ ಶ್ರೇಣಿಯ ನಡುವೆ ಪರ್ವತದಂತೆಯೇ ದೊಡ್ಡದಾದ ಪ್ರತಿಮೆ ನಿಂತಿದೆ ಗುಜರಾತ್ನ ಕೆವಾಡಿಯ ಪಟ್ಟಣ ದಿಂದ ಈ ಪ್ರತಿಮೆ ಹತ್ರ ಹೋಗೋಕೆ 3.5 ಕಿಲೋಮೀಟರ್ ಹೆದ್ದಾರಿ ಮಾರ್ಗ ಸಿಗುತ್ತೆ. ಇದು ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ. 182 ಮೀಟರ್ ಉದ್ದ ವಿರುವ ಇದು ಚೀನಾದ ಸ್ಪ್ರಿಂಗ್ ಟೆಂಪಲ್ ಬುದ್ಧನ ಪ್ರತಿಮೆ ಗಿಂತಲೂ 23 ಮೀಟರ್ ಎತ್ತರವಿದೆ. ಅಮೆರಿಕದಲ್ಲಿರುವ ಜಗದ್ವಿಖ್ಯಾತ ಲಿಬರ್ಟಿ ಪ್ರತಿಮೆಯ ಸುಮಾರು ಎರಡು ಪಟ್ಟು ಎತ್ತರ ವಿದೆ.

ಈ ಪ್ರತಿಮೆಯು 60 ಮೀಟರ್ ವೇಗದಲ್ಲಿ ಗಾಳಿ ಬೀಸಿದರು. ಭೂಕಂಪ ಸಂಭವಿಸಿದರೂ ತಾಳಿ ಕೊಳ್ಳುವ ಗಟ್ಟಿತನ ಹೊಂದಿದೆ. ಈ ಪ್ರತಿಮೆಯನ್ನ ಕೇವಲ ಮೂರೂವರೆ ವರ್ಷದ ಒಳಗೆ ಸುಮಾರು 3000 ಕೆಲಸಗಾರರು ನಿರ್ಮಿಸಿದ್ದಾರೆ. ಇದರಲ್ಲಿ ಲಾರ್ಸನ್ ಅನ್ಡ್ ಟರ್ಬೋ 300 ಎಂಜಿನಿಯರ್‌ಗಳೂ ಸೇರಿದ್ದಾರೆ.

Rashtriya Ekta Diwas 2022 Wishes, Quotes, Images, Status
Rashtriya Ekta Diwas 2022 Wishes, Quotes, Images, Status

2010 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ವಿಧಾನಸಭೆ ಚುನಾವಣೆಗೂ ಮುಂಚೆ ಈ ಯೋಜನೆಯನ್ನು ಘೋಷಿಸಿದ್ದರು. ಇದಕ್ಕೆ ತಗುಲುವ ಸಂಪೂರ್ಣ ವೆಚ್ಚ 3050 ಕೋಟಿ ಗುಜರಾತ್ ಸರ್ಕಾರ ವೇ ಭರಿಸಿದೆ. ಈ ಯೋಜನೆಯನ್ನು ನಿರ್ವಹಿಸಲೆಂದೇ ಮೋದಿ 2011ರಲ್ಲಿ ಸರ್ದಾರ್ ವಲ್ಲ ಭಾಯ್ ಪಟೇಲ್ ರಾಷ್ಟ್ರೀಯ ಏಕ ತಾ ಟ್ರಸ್ಟ್ನ ಸ್ಥಾಪಿಸಿದರು.

ದೇಶದ ಎಲ್ಲ ರಾಜ್ಯ ಗಳಿಂದ ಲೋಹ ಆಂದೋಲನ ನಡೆಸಿ 1,59,000 ಹಳ್ಳಿ ಗಳಿಂದ ಸುಮಾರು 100 ಮಿಲಿಯನ್ ರೈತರಿಂದ 129 ಟನ್ ಲೋಹವನ್ನು ಸಂಗ್ರಹಿಸ ಲಾಗಿದೆ. ಪದ್ಮ ಭೂಷಣ ಪುರಸ್ಕೃತ ಶಿಲ್ಪಿ ರಾಮ್ ವಾಂಜಿ ಸುತಾರ್ ಅವರ ನೇತೃತ್ವದಲ್ಲಿ ಪ್ರತಿಮೆ ನಿರ್ಮಿಸಲಾಗಿದ್ದು, ಚೀನಾದ ಶಾಂಕ್ಸಿ ಟೋಂಕಿನ್ ಕಂಪನಿಯ ಲೋಹ ಲೇಪನ ಕಾರ್ಯ ಮಾಡಿದೆ. ಈ ಪ್ರತಿಮೆಯನ್ನ ವೀಕ್ಷಿಸೋಕ್ಕೆ ಅನುಕೂಲವಾಗುವಂತೆ 153 ಮೀಟರ್ ಎತ್ತರದಲ್ಲಿ ಒಂದೇ ಬಾರಿಗೆ ಸುಮಾರು 200 ಮಂದಿ ನಿಲ್ಲೋಕೆ ವ್ಯವಸ್ಥೆ ಕಲ್ಪಿಸ ಲಾಗಿದೆ.

ಏಕತೆಯ ಪ್ರತಿಮೆ ಬಗ್ಗೆ ಪ್ರಬಂಧ | Statue of Unity in Kannada Best No1 Information
ಏಕತೆಯ ಪ್ರತಿಮೆ ಬಗ್ಗೆ ಪ್ರಬಂಧ | Statue of Unity in Kannada Best No1 Information

ಅದರ ಹಿನ್ನೆಲೆಯಲ್ಲಿ ಸರ್ದಾರ್ ಸರೋವರ್ ಅಣೆಕಟ್ಟಿನ ಭವ್ಯ ನೋಟ ಕೂಡ ಸಿಗುತ್ತೆ. 5700 ಟನ್ ಉಕ್ಕು 15,500 ಟನ್ ಕಾಂಕ್ರೀಟ್ ಅನ್ನು ಪ್ರತಿಮೆ ನಿರ್ಮಾಣಕ್ಕೆ ಬಳಸಿಕೊಳ್ಳ ಲಾಗಿದೆ. ಈ ಪ್ರತಿಮೆ ಮೂರು ಪದರದ ರಚನೆಯಾಗಿದೆ. ಅತಿ ಒಳಭಾಗದಲ್ಲಿ ಆರ್‌ಸಿಸಿ ಯಿಂದ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಪ್ರತಿಮೆಯ ಎದೆಯ ಭಾಗದ 127 ಮೀಟರ್ ಎತ್ತರದವರೆಗೆ ಎರಡು ಟವರ್‌ಗಳನ್ನು ಒಳಗೊಂಡಿದೆ. ಎರಡು ಪದರವು ಉಕ್ಕಿನದಾಗಿದೆ ಮೂರನೇದು ಎಂಟು ಎಂಎಂ ದಪ್ಪದ ಕಂಚಿನ ಲೇಪನವನ್ನು ಹೊಂದಿದೆ. ಆರ್‌ಸಿ ಸಿ ಗೋಪುರಗಳು ಪಟೇಲ್ ಅವರ ಪಾದದ ಬಳಿಯಿಂದ ಎರಡೂ ಭಾಗಗಳಲ್ಲಿ ನಿರ್ಮಾಣ ವಾಗಿದ್ದು, ಎರಡರಲ್ಲಿಯೂ ಲಿಫ್ಟ್‌ಗಳಿವೆ. ಈ ಲಿಫ್ಟ್‌ಗಳ ಲ್ಲಿ ತಲಾ 26 ಜನರು ಮೇಲ್ಭಾಗಕ್ಕೆ ಅರ್ಧ ನಿಮಿಷದಲ್ಲಿ ಹೋಗಬಹುದು.

Happy National Unity Day 2022 Wishes, Slogan, Quotes, SMS, Greetings, Whatsapp and Facebook Status
Happy National Unity Day 2022 Wishes, Slogan, Quotes, SMS, Greetings, Whatsapp and Facebook Status

ಸರ್ದಾರ್ ಸರೋವರ ನರ್ಮದಾ ಯೋಜನೆ ಅಣೆಕಟ್ಟಿಗಾಗಿ ತಮ್ಮಿಂದ ಸ್ವಾಧೀನಪಡಿಸಿ ಕೊಳ್ಳಲಾದ ಭೂಮಿಯಲ್ಲಿ ಪ್ರತಿಮೆ ಮತ್ತು ಇತರೆ ಪ್ರವಾಸೋದ್ಯಮ ಚಟುವಟಿಕೆಗಳ ಯೋಜನೆಗಳನ್ನ ನಡೆಸಲಾಗಿದೆ ಅಂತ ಅಲ್ಲಿನ ಬುಡಕಟ್ಟು ಸಮುದಾಯದ ಜನರು ಆರೋಪಿಸಿದ್ದಾರೆ. 75,000 ಬುಡಕಟ್ಟು ಜನರು ಇಲ್ಲಿದ್ದು ಏಕತಾ ಪ್ರತಿಮೆ ಯಿಂದ ತೊಂದರೆಗೆ ಒಳಗಾಗಿದ್ದ ಗುಜರಾತ್ ಬುಡಕಟ್ಟು ಸಂಸ್ಥೆ ಹೇಳಿದೆ. ಪ್ರತಿಮೆ ಉದ್ಘಾಟನೆನ ವಿರೋಧಿಸಿ ಈ ಸಂಘಟನೆ ಬಂದ್ ಗೆ ಕರೆಕೊಟ್ಟಿತ್ತು.

ಶಾಲೆ ಕಚೇರಿಗಳು ಹಾಗೆ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡ ಲಾಗಿತ್ತು, ಅವರ ಮನೆ ಗಳಲ್ಲಿ ಅಡುಗೆಯನ್ನ ಕೂಡ ಮಾಡಿಲ್ಲ ಅಂತ ಸಂಘಟನೆ ತಿಳಿಸಿದೆ. ಆದರೆ ಈ ಯೋಜನೆಯಿಂದಾಗಿ ಅಲ್ಲಿನ ಆದಿವಾಸಿಗಳಿಗೆ ಸುಮಾರು 15,000 ನೇರ ಉದ್ಯೋಗ ಸೃಷ್ಟಿಯಾಗಿದೆ ಅಂತ ಕೂಡ ಅಧಿಕಾರಿಗಳು ಹೇಳಿದ್ದಾರೆ. 2014 ನವೆಂಬರ್ 3 ನೇ ತಾರೀಕಿನಿಂದ ಈ ಪ್ರತಿಮೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಿದೆ.

FAQ

ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಎತ್ತರ ಎಷ್ಟು?

182 ಮೀಟರ್ ಉದ್ದ

ಭಾರತದ ಪ್ರಪ್ರಥಮ ಉಪಪ್ರಧಾನ ಮಂತ್ರಿ?

ಸರ್ದಾರ್ ವಲ್ಲಭಭಾಯಿ ಪಟೇಲ್

ಸಂಬಂದಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *