ಎಸ್ ಎಸ್ ಎಲ್ ಸಿ ಮಾದರಿ ಪ್ರಶ್ನೆ ಪತ್ರಿಕೆಗಳು 2022 | SSLC Kannada Model Question Paper

SSLC Kannada Model Question Paper | ಎಸ್ ಎಸ್ ಎಲ್ ಸಿ ಮಾದರಿ ಪ್ರಶ್ನೆ ಪತ್ರಿಕೆಗಳು 2022

SSLC Kannada Model Question Paper, ಎಸ್ ಎಸ್ ಎಲ್ ಸಿ ಮಾದರಿ ಪ್ರಶ್ನೆ ಪತ್ರಿಕೆಗಳು 2022, sslc kannada question paper with answer, kseeb, 10th class

ಪರಿವಿಡಿ

SSLC Kannada Model Question Paper

ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ ಕ್ರಮಾಕ್ಷರದೊಂದಿಗೆ ಬರೆಯಿರಿ.

SSLC Kannada Model Question Paper Free For10 Students | ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ
SSLC Kannada Model Question Paper Free For10 Students | ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ

1.ಪ್ರಶ್ನೆರೂಪದ ಪದ ಮತ್ತು ವಾಕ್ಯಗಳ ಮುಂದೆ ಈ ಚಿಹ್ನೆಯನ್ನು ಬಳಸಲಾಗುವುದು.
ಎ) ಉದ್ಧರಣ ಬಿ) ಅರ್ಧವಿರಾಮ
ಸಿ) ಪ್ರಶ್ನಾರ್ಥಕ ಡಿ) ಆವರಣ


2.ಮನಸ್ಸಿನಲ್ಲಿ ಉಂಟಾಗುವ ಕೋಪ, ಹರ್ಷ, ದುಃಖ, ಮೆಚ್ಚುಗೆ, ಆಕ್ಷೇಪ, ತಿರಸ್ಕಾರ ಇತ್ಯಾದಿ ಭಾವಗಳನ್ನು
ವ್ಯಕ್ತಪಡಿಸುವಾಗ ಅರ್ಥವಿಲ್ಲದ ಕೆಲವು ಪದಗಳನ್ನು ಬಳಸುತ್ತೇವೆ. ಅಂತಹ ಪದಗಳನ್ನು ಹೀಗೆನ್ನುವರು.

ಎ) ಭಾವಸೂಚಕಾವ್ಯಯ ಬಿ) ಅನುಕರಣಾವ್ಯಯ
ಸಿ) ಸಾಮಾನ್ಯಾವ್ಯಯ ಡಿ) ಸಂಬAಧಾರ್ಥಕಾವ್ಯಯ

3.‘ಸುರಾಸುರ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ.
ಎ) ಲೋಪ ಸಂಧಿ ಬಿ) ಆಗಮ ಸಂಧಿ
ಸಿ) ಆದೇಶ ಸಂಧಿ ಡಿ) ಸವರ್ಣದೀರ್ಘ ಸಂಧಿ
4. ಚತುರ್ಥೀ ವಿಭಕ್ತಿಗೆ ಉದಾಹರಣೆಯಾದ ಪ್ರತ್ಯಯ ಇದು
ಎ) ಉ ಬಿ) ಗೆ, ಕೆ, ಕ್ಕೆ
ಸಿ) ಅನ್ನು ಡಿ) ಇಂದ
5. ನಿಷೇಧಾರ್ಥಕ ಕ್ರಿಯಾಪದವಿದು
ಎ) ನೋಡಲಿ ಬಿ) ನೋಡಿಯಾರು
ಸಿ) ನೋಡಿದರು ಡಿ) ನೋಡರು
6. ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕ ಅಕ್ಷರಗಳ ಸಂಖ್ಯೆ
ಎ) ೦೫ ಬಿ) ೦೬
ಸಿ) ೦೯ ಡಿ) ೦೨

ಕೆಳಗಿನವುಗಳಲ್ಲಿ ಮೊದಲೆರಡು ಪದಗಳಿರುವ ಸಂಬಂಧಿಸಿದಂತೆ ಮೂರನೆಯ ಪದಕ್ಕೆ ಸರಿಹೊಂದುವ
ಸಂಬಂದಿ ಪದವನ್ನು ಬರೆಯಿರಿ.

7. ವಿದ್ಯೆ : ಬಿಜ್ಜೆ : : ಪ್ರಸಾದ :
8. ನಡೆ ನಡೆ : ದ್ವಿರುಕ್ತಿ : : ಸತಿಪತಿ :

9. ಅಂಗೈ : ಅಂಶಿ ಸಮಾಸ : : ಮೈಮುಚ್ಚು :
10. ಅರ್ತಿ : ಪ್ರೀತಿ : : ಅಬ್ಬೆ :

ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದೊ0ದು ವಾಕ್ಯದಲ್ಲಿ ಉತ್ತರ ಬರೆಯಿರಿ

೧೧. ರಾಹಿಲನು ಯಾರು?
೧೨. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?
೧೩. ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರೇನು?
೧೪. ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು?
೧೫. ಹಲಗಲಿ ಗ್ರಾಮ ಗುರುತು ಉಳಿಯದಂತಾದುದು ಏಕೆ?
೧೬. ಅಶ್ವಿನಿ ದೇವತೆಗಳ ವರಬಲದಿಂದ ಜನಿಸಿದವರು ಯಾರು?
೧೭. ವಿವೇಕಾನಂದರನ್ನು ‘ಮಾನವತಾಮಿತ್ರ’ರೆಂದು ಕರೆದವರಾರು?

SSLC Kannada Model Question Paper Free For10 Students | ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ
SSLC Kannada Model Question Paper Free For10 Students | ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ
ಕೆಳಗಿನ ಪ್ರಶ್ನೆಗಳಿಗೆ ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

೧೮. ‘ವೂಲವರ್ಥ’ ಅಂಗಡಿಯಲ್ಲಿ ಸಿಗುವ ವಸ್ತುಗಳಾವುವು?
೧೯. ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯನವರ ಅಭಿಪ್ರಾಯವೇನು?
೨೦. ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೇನು? ವಿವರಿಸಿ.
೨೧. ವಚನಕಾರರಿಗೆ ಯಾವುದು ದೇವರಾಗಿತ್ತು? ವಿವರಿಸಿ.
೨೨. ಹೊಸಗಾಲದ ಹಸುಮಕ್ಕಳನ್ನು ಹಕ್ಕಿ ಹೇಗೆ ಹರಸಿದೆ?
೨೩. ಹಸುರು ಸಕಲೇಂದ್ರಿಯಗಳನ್ನು ವ್ಯಾಪಿಸಿದೆ ಎಂಬುದನ್ನು ಕವಿ ಹೇಗೆ ವರ್ಣಿಸಿದ್ದಾರೆ?
೨೪. ವಿವೇಕಾನಂದರು ಕೋಮುವಾದದ ಕಟ್ಟಾ ವಿರೋಧಿಯಾಗಿದ್ದರು. ಏಕೆ?
೨೫. ವಸಂತನು ಯಾರು ಯಾರಿಗೆ ಮುಖ ತೋರಲಿಲ್ಲ?
೨೬. ಭಗತ್‌ಸಿಂಗ್ ತನ್ನ ಸಹೋದರಿಗೆ ಮಣ್ಣು ಯಾವುದರ ಪ್ರತೀಕ ಎಂದು ತೋರಿಸುತ್ತಾನೆ?
೨೭. ಹೊಲದಲ್ಲಿ ಹುಟ್ಟಿದ ಉತ್ತರಾಣಿ ಗಿಡ ಹಾಗೂ ಗರಿಕೆ ಹುಲ್ಲು ಕೊಡುವ ತೊಂದರೆಯನ್ನು
ಜನಪದರು ಒಗಟಿನಲ್ಲಿ ಹೇಗೆ ವಿವರಿಸಿದ್ದಾರೆ?

ಕೆಳಗಿನ ಕವಿಗಳ/ಸಾಹಿತಿಗಳ ಜನ್ಮಸ್ಥಳ, ಕಾಲ, ಕೃತಿ ಮತ್ತು ಬಿರುದು/ಪ್ರಶಸ್ತಿಗಳನ್ನು ಕುರಿತು ವಾಕ್ಯ ರೂಪದಲ್ಲಿ ಬರೆಯಿರಿ

೨೮. ಸಾರಾ ಅಬೂಬಕ್ಕರ್
೨೯. ದ.ರಾ. ಬೇಂದ್ರೆ

ಕೆಳಗಿನ ಪದ್ಯ ಭಾಗಕ್ಕೆ ಪ್ರಸ್ತಾರ ಹಾಕಿ ಗಣ ವಿಭಾಗ ಮಾಡಿ ಛಂದಸ್ಸಿನ ಹೆಸರನ್ನು ಬರೆಯಿರಿ.

೩೧. ಸಿಡಿಲ ಸಿಡಿದ್ಹಾಂಗ ಗುಂಡು ಸುರಿದಾವ

ಕೆಳಗಿನ ಗಾದೆಗಳಲ್ಲಿ ಯಾವುದಾದರೂ ಒಂದನ್ನು ಗಾದೆಯ ಮಹತ್ವದೊಡನೆ ವಿಸ್ತರಿಸಿ ಬರೆಯಿರಿ

೩೨. ಕೂಡಿ ಬಾಳಿದರೆ ಸ್ವರ್ಗಸುಖ
ಅಥವಾ
ಆಳಾಗಬಲ್ಲವನು; ಅರಸನಾಗಬಲ್ಲನು

SSLC Kannada Model Question Paper Notes

ಕೆಳಗಿನ ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯಗಳನ್ನು ಬರೆಯಿರಿ

೩೩. ‘‘ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ’’
೩೪. ‘‘ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು.’’
೩೫. ‘‘ಹುಸಿಯದ ಬೇಹಾರಿಯೇ ಇಲ್ಲ’’
೩೬. ‘‘ಹೊಡೆದರೊ ಗುಂಡ ಕರುಣ ಇಲ್ಲದ್ಹಂಗ’’
೩೭. ‘‘ಜೀಯ ಹಸಾದವೆಂಬುದು ಕಷ್ಟ’’
೩೮. ‘‘ಹಸುರು ಹಸುರಿಳೆಯುಸಿರೂ’’

SSLC Kannada Model Question Paper Free For10 Students | ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ
SSLC Kannada Model Question Paper Free For10 Students | ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ

ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ ಬರೆಯಿರಿ SSLC Kannada Model Question Paper 10th

ನೆಲಕಿಱಿವೆನೆಂದು……………………….
……………………………………………
……………………………………………
……………………….ಪುದುವಾ¿್ದಪೆನೇ

ಅಥವಾ
ಪುಟ್ಟಿದ…………………………………..
……………………………………………
……………………………………………
………………………………..ಮೆರೆವೆಂ

ಕೆಳಗಿನ ಪದ್ಯಭಾಗವನ್ನು ಓದಿ ಅರ್ಥಮಾಡಿಕೊಂಡು, ಅಡಕವಾಗಿರುವ ಮೌಲ್ಯವನ್ನಾಧರಿಸಿ ಸಾರಾಂಶ
ಬರೆಯಿರಿ.
SSLC Kannada Model Question Paper kseeb

ಎತ್ತಣ ತುರಂಗಮಿದು ಪೊಕ್ಕು ಪೂದೋಟಮಂ
ತೊತ್ತಳದುಳಿದುದು ವಾಲ್ಮೀಕಿ ಮುನಿನಾಥನೇ
ಪೊತ್ತುಮಾರೈವುದೆಂದೆನಗೆ ನೇಮಿಸಿ ಪೋದನಬ್ಧಿಪಂ ಕರೆಸಲಾಗಿ
ಮತ್ತೆ ವರುಣನ ಲೋಕದಿಂ ಬಂದು ಮುಳಿದಪನೆ
ನುತ ಹಯದೆಡೆಗೆ ನಡೆತಂದು ನೋಡಲ್ಕದರ
ನೆತ್ತಿಯೊಳ್ ಮೆರೆವ ಪಟ್ಟದ ಲಿಖಿತಮಂ ಕಂಡು ಲವನೋದಿಕೊಳುತಿರ್ದನು.

ಕೆಳಗಿನ ಪ್ರಶ್ನೆಗಳಿಗೆ ಎಂಟು ಅಥವಾ ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ. SSLC Kannada Model Question Paper karnataka

ಮೂರ್ತಿರಾಯರ ದೃಷ್ಟಿಯಲ್ಲಿ ಹುಲಿಯು ಬೇಟೆಯಾಡುವ ಬಗೆಯನ್ನು ವಿವರಿಸಿ.
ಅಥವಾ
ಶಾನುಭೋಗರು ಬದುಕುಳಿದದ್ದು ಹುಲಿಯ ಧರ್ಮಶ್ರದ್ಧೆಯಿಂದ ಎಂಬುದನ್ನು ಲೇಖಕರು
ಹೇಗೆ ವಿವರಿಸಿದ್ದಾರೆ?
೪೨. ನಾವು ಯಾವ ಸಂಕಲ್ಪ ಕೈಗೊಳ್ಳಬೇಕೆಂಬುದು ಕವಿ ಶಿವರುದ್ರಪ್ಪನವರ ಆಶಯವಾಗಿದೆ?
ಅಥವಾ
ಸಂಕಲ್ಪ ಮತ್ತು ಅನುಷ್ಠಾನದ ಕುರಿತು ಕವಿ ಶಿವರುದ್ರಪ್ಪನವರ ಅಭಿಪ್ರಾಯವನ್ನು ವಿವರಿಸಿ.

ಕೆಳಗಿನ ಗದ್ಯಭಾಗವನ್ನು ಮನಸ್ಸಿನಲ್ಲಿ ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ದೈನ್ಯದ ಬುಡದಲ್ಲಿ ಭಯವಿದೆ. ಭಯವೇ ನರನನ್ನು ದೀನನನ್ನಾಗಿ ಮಾಡುತ್ತದೆ. ಭಯದ
ಸನ್ನಿವೇಶಗಳೆಂದರೆ, ದಟ್ಟಡವಿಯಲ್ಲಿ ದಾರಿತಪ್ಪಿದ ಗೋವು, ಮುಚ್ಚಿದ ಕಣ್ಣುಗಳು, ಹಾರುತ್ತಿರುವ
ಎದೆ, ಕತ್ತಲೆಯಲ್ಲಿ ಕಂಗೆಟ್ಟ ಶಿಶು, ಚಕ್ರವರ್ತಿಯ ಎದುರಿಗೆ ನ್ಯಾಯ ಸ್ಥಾನದಲ್ಲಿ ನಡುಗುತ್ತ ನಿಂತ
ಅಪರಾಧಿ, ಬೇಟೆನಾಯಿ ಬೆನ್ನಟ್ಟಿದ ಮೊಲವೇ ಭಯ. ಭಯ ಹುಟ್ಟುವುದು ಅಜ್ಞಾನದಿಂದ,
ಪಾಪ ಶಂಕೆಯಿAದ, ದೂಷಿತ ಹೃದಯದಿಂದ. ಜ್ಞಾನ ಹೆಚ್ಚಿದಂತೆ ಭಯ ಕಡಿಮೆಯಾಗುವುದು.
ಹಳ್ಳಿಗ ವಿಮಾನದಲ್ಲಿ ಕೂಡಲು ಅಂಜುತ್ತಾನೆ. ಆದರೆ ಕೆಲವು ತಿಂಗಳು ತರಬೇತಿ ಪಡೆದ
ನಂತರ ಅವನೇ ವಿಮಾನ ನಡೆಸಬಹುದು. ಪ್ರತಿಯೊಬ್ಬನ ಮೇಲೆ ನಾವು ಹೊಣೆ ಹೊರಿಸಲು
ಹೋಗುವುದು ತಪ್ಪಾದೀತು. ಆದರೆ ಆ ವ್ಯಕ್ತಿ ಇಲ್ಲವೇ ಸಂಸ್ಥೆಯ ಧೋರಣೆಯ ಹೊಣೆಯನ್ನು
ನಾವು ಹೊತ್ತಿರಬಾರದು. ಭೀಷ್ಮ ದ್ರೋಣರಂತೆ ಒಡೆಯನಿಗೋಸ್ಕರ ದೇಹವನ್ನರ್ಪಿಸುವುದು
ಕಾರ್ಯವೆಂದು ತಿಳಿದಿದ್ದರೂ ಆ ಕಾರ್ಯದ ಸಾಧು ಅಸಾಧುತೆಗಳ ಬಗ್ಗೆ ಅಭಿಪ್ರಾಯವು
ಭೀಷ್ಮ ದ್ರೋಣರಲ್ಲಿರುವಂತೆ ಸ್ಪಷ್ಟವಾಗಿರಬೇಕು. ಬಳ್ಳಿಯಂತೆ ಯಾರೂ ಕಾಲ್ತೊಡಕಾಗಬಾರದು.
ನಾಯಿಯಂತೆ ಯಾವ ಬಾಗಿಲಲ್ಲಿಯೂ ಸುಳಿದಿರಬಾರದು, ಮೋಡದಂತೆ ಗುರಿಯಿಲ್ಲದೆ ಗಾಳಿಯ
ತೊತ್ತಾಗಬಾರದು. ನಿಲ್ಲಬೇಕಾದಲ್ಲಿ ನಿಲ್ಲುವ, ಉರುಳ ಬೇಕಾದಲ್ಲಿ ಉರುಳುವ ಗೋಲವಾಗಬೇಕು.
ಇದೇ ನಿಜವಾದ ವ್ಯಕ್ತಿತ್ವ. ಈ ಕೇಂದ್ರದಲ್ಲಿಯೇ ವ್ಯಕ್ತಿ ಸಮಾಜಗಳ ಸಾಮರಸ್ಯದ ಬೀಜವಿದೆ.

ಪ್ರಶ್ನೆಗಳು

ಅ) ನಿಜವಾದ ವ್ಯಕ್ತಿತ್ವ ಎಂಬುದು ಹೇಗಿರಬೇಕು?
ಆ) ಭಯದ ಬೇರೆ ಬೇರೆ ಸನ್ನಿವೇಶಗಳನ್ನು ಪಟ್ಟಿ ಮಾಡಿ.

ಕೆಳಗಿನ ಯಾವುದಾದರೂ ಒಂದಕ್ಕೆ ಕೊಟ್ಟಿರುವ ಮಾಹಿತಿಯನ್ನು ಆಧರಿಸಿ ಪತ್ರ ಬರೆಯಿರಿ. SSLC Kannada Model Question Paper pathra lekhana

ನಿಮ್ಮನ್ನು ಬೆಂಗಳೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ‘ಚಂದನಾ’ ಎಂದು ಭಾವಿಸಿಕೊಂಡು
ಶಾಲಾ ವಿದ್ಯಾರ್ಥಿಗಳಿಗೆ ‘ಆರೋಗ್ಯ ತಪಾಸಣೆ’ ಕೈಗೊಳ್ಳುವಂತೆ ಕೋರಿ ‘ಪ್ರಾಥಮಿಕ ಆರೋಗ್ಯ
ಕೇಂದ್ರದ ವೈದ್ಯಾಧಿಕಾರಿ’ಗಳಿಗೊಂದು ಮನವಿ ಪತ್ರ ಬರೆಯಿರಿ.
ಅಥವಾ
ನಿಮ್ಮನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿನ ‘ಸಾರ್ವಜನಿಕ ವಿದ್ಯಾರ್ಥಿನಿಲಯ’ದ
ವಿದ್ಯಾರ್ಥಿ ‘ಮದನ್’ ಎಂದು ಭಾವಿಸಿಕೊಂಡು ವಿದ್ಯಾರ್ಥಿನಿಲಯದಲ್ಲಿ ಏರ್ಪಡಿಸಿರುವ ಪೋಷಕರ
ಸಭೆಗೆ ಆಹ್ವಾನಿಸಿ, ‘ಮೋಹನ್ ಕುಮಾರ್’ ಎಂಬ ಹೆಸರಿನ ತಂದೆಯವರಿಗೆ ಒಂದು ಪತ್ರ
ಬರೆಯಿರಿ.

ಕೆಳಗಿನ ಯಾವುದಾದರೂ ಒಂದು ವಿಷಯದಲ್ಲಿ ಹದಿನೈದು ವಾಕ್ಯಗಳಿಗೆ ಕಡಿಮೆ ಇಲ್ಲದಂತೆ ಪ್ರಬಂಧ
ಬರೆಯಿರಿ.
SSLC Kannada Model Question Paper pdf

ಕೋವಿಡ್-೧೯ ರ ಸಾಂಕ್ರಾಮಿಕ ರೋಗ ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು
ಅಥವಾ
ಗ್ರಂಥಾಲಯಗಳ ಮಹತ್ವ

ಪಿಡಿಎಫ್ ಡೌನ್ಲೋಡ್ ಮಾಡಲು

ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

sslc multiple choice questions in kannada

ಶಬರಿ ಪಾಠದ ಪ್ರಶ್ನೋತ್ತರಗಳು

ಕನ್ನಡ ಕಥೆಗಳು

ಕನ್ನಡ ಭಾಮಿನಿ ಷಟ್ಪದಿ

Leave a Reply

Your email address will not be published. Required fields are marked *