ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857, Prathama Swatantra Sangrama, bharatada prathama swatantra sangrama in kannada, Notes Pdf, KSEEB, Essay
Prathama Swatantra Sangrama ಸ್ವಾತಂತ್ರ್ಯ ಸಂಗ್ರಾಮ
ಬಿಟ್ಟಿರುವ ಸ್ಥಳವನ್ನು ಸೂಕ್ತ ಉತ್ತರದಿಂದ ತುಂಬಿರಿ
1. 1857 ರ ದಂಗೆಯನ್ನು ಬ್ರಿಟಿಷ್ ಇತಿಹಾಸಕಾರರು
2. ಡಾಲ್ ಹೌಸಿಯು ಜಾರಿಗೆ ತಂದ ನೀತಿ ಎಂದು ಕರೆದಿದ್ದಾರೆ . ( ಸಿಪಾಯಿ ದಂಗೆ ) ( ದತ್ತು ಮಕ್ಕಳಿಗೆ ಹಕ್ಕಿಲ್ಲ )
3. 1857 ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವನು
4.ಝಾನ್ಸಿ ರಾಣಿಯು ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ( ಮಂಗಲ್ ಪಾಂಡೆ ) ನ್ನು ವಶಕ್ಕೆ ಪಡೆದಳು ( ಗ್ವಾಲಿಯರ್ )
Prathama Swatantra Sangrama ಸ್ವಾತಂತ್ರ್ಯ ಸಂಗ್ರಾಮ 1857 pratham swatantrata sangram in kannada
II . ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ .
1. 1857 ರ ದಂಗೆಯನ್ನು ಭಾರತೀಯ ಇತಿಹಾಸಕಾರರು ಏನೆಂದು ಕರೆದಿದ್ದಾರೆ ?
1857 ರ ದಂಗೆಯನ್ನು ಭಾರತೀಯ ಇತಿಹಾಸಕಾರರು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಕರೆದಿದ್ದಾರೆ .
2. 1857 ರ ದಂಗೆಯನ್ನು ಇಂಗ್ಲಿಷ್ ಇತಿಹಾಸಕಾರರು ಏನೆಂದು ಕರೆದಿದ್ದಾರೆ ?
1857 ರ ದಂಗೆಯನ್ನು ಇಂಗ್ಲಿಷ್ ಇತಿಹಾಸಕಾರರು ಸಿಪಾಯಿ ದಂಗೆ ಕರೆದಿದ್ದಾರೆ .
3. ಡಾಲ್ ಹೌಸಿಯು ಜಾರಿಗೆ ತಂದ ನೀತಿ ಯಾವುದು ?
ಡಾಲ್ ಹೌಸಿಯು ಜಾರಿಗೆ ತಂದ ನೀತಿ ಮತ್ತು ಮಕ್ಕಳಿಗೆ ಹಕ್ಕಿಲ್ಲ
4. 1857 ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವನು ಯಾರು ?
1857 ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವನು ಮಂಗಲ ಪಾಂಡೆ
5. ಝಾನ್ಸಿ ರಾಣಿಯು ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಯಾವ ಪ್ರದೇಶವನ್ನು ವಶಕ್ಕೆ ಪಡೆದಳು ?
ಝಾನ್ಸಿ ರಾಣಿಯು ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಗ್ವಾಲಿಯರ್ ಪ್ರದೇಶವನ್ನು ವಶಕ್ಕೆ ಪಡೆದಳು .
6. 1857 ರ ದಂಗೆಯ ಸಮಯದಲ್ಲಿ ಕಾನ್ಸುರದಲ್ಲಿ ದಂಗೆಯ ನೇತೃತ್ವವನ್ನು ವಹಿಸಿದವರು ಯಾರು ?
1857 ರ ದಂಗೆಯ ಸಮಯದಲ್ಲಿ ಕಾನ್ಸುರದಲ್ಲಿ ದಂಗೆಯ ನೇತೃತ್ವವನ್ನು ವಹಿಸಿದವರು ನಾನಾ ಸಾಹೇಬ
7. 1857 ರ ದಂಗೆಯ ಸಮಯದಲ್ಲಿ ಬ್ರಿಟಿಷರು ತಂದ ನವೀನ ಬಂದೂಕು ಯಾವುದು ?
1857 ರ ದಂಗೆಯ ಸಮಯದಲ್ಲಿ ಬ್ರಿಟಿಷರು ತಂದ ನವೀನ ಬಂದೂಕು ರಾಯಲ್ ಎನ್‌ಫೀಲ್ಡ್
ಮಂಗಲ ಪಾಂಡೆ ಬ್ರಿಟಿಷ್ ಅಧಿಕಾರಿಯನ್ನು ಕೊಂದನು ಆದ್ದರಿಂದ ಮಂಗಲ ಪಾಂಡೆಯನ್ನು ಗಲ್ಲಿಗೇರಿಸಲಾಯಿತು
. 9. ನಾನಾ ಸಾಹೇಬನ ಸಹಾಯಕನ ಹೆಸರೇನು ?
ನಾನಾ ಸಾಹೇಬನ ಸಹಾಯಕನ ಹೆಸರು ತಾತ್ಯಾಟೋಪಿ
Prathama Swatantra Sangrama ಸ್ವಾತಂತ್ರ್ಯ ಸಂಗ್ರಾಮ
II . ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ
1. ‘ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯಿಂದಾದ ಪರಿಣಾಮಗಳು ಯಾವುವು ? ವಿಶ್ಲೇಷಿಸಿ .
- ಬ್ರಿಟಿಷರು ಜಾರಿಗೆ ತಂದಿದ್ದ ‘ ದತ್ತು ಮಕ್ಕಳಿಗೆ ಹಕ್ಕಿಲ್ಲ ‘ ಎಂಬ ನೀತಿಯಿಂದಾಗಿ ಹಲವು ದೇಶೀ ರಾಜರು ತಮ್ಮ ರಾಜ್ಯಗಳನ್ನು ಕಳೆದುಕೊಳ್ಳಬೇಕಾಯಿತು .
- ಈ ನೀತಿಯಿಂದಾಗಿ ಸತಾರ , ಜೈಪುರ , ಝಾನ್ಸಿ , ಉದಯಪುರ ಮೊದಲಾದ ಸಂಸ್ಥಾನಗಳು ಬ್ರಿಟಿಷರ ವಶವಾದವು
Prathama Swatantra Sangrama ಸ್ವಾತಂತ್ರ್ಯ ಸಂಗ್ರಾಮ
2 , 1857 ರ ದಂಗೆಗೆ ಆರ್ಥಿಕ ಬದಲಾವಣೆಗಳು ಹೇಗೆ ಕಾರಣವಾದವು ? ವಿವರಿಸಿ .
- ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಭಾರತದ ಕರಕುಶಲತೆ ಮತ್ತು ದೇಶೀಯ ಕೈಗಾರಿಕೆಗಳು ಕ್ಷೀಣಿಸಿದವು .
- ಇಂಗ್ಲೆಂಡ್ ಕೇವಲ ವ್ಯಾಪಾರಿ ರಾಷ್ಟ್ರವಾಗಿರದ ಕೈಗಾರಿಕೆಗಳ ಕಾರ್ಯಾಗಾರವಾಯಿತು .
- ಭಾರತದಲ್ಲಿದ್ದ ಕರಕುಶಲಗಾರರು ನಿರುದ್ಯೋಗಿಗಳಾದರು . ವಿಶೇಷವಾಗಿ ಬಟ್ಟೆ ಮತ್ತು ಉಣ್ಣೆ ಕೈಗಾರಿಕೆಗಳು ಅವನತಿ ಹೊಂದಿ ನೇಕಾರಿಕೆ ವೃತ್ತಿಯವರು ಉದ್ಯೋಗ ಕಳೆದುಕೊಂಡರು .
- ಗೃಹಕೈಗಾರಿಕೆಗಳು ಇದೇ ಬಗೆಯ ತೀವ್ರ ಆರ್ಥಿಕ ನಷ್ಟ ಅನುಭವಿಸಿ ಶಿಥಿಲಗೊಂಡವು . ಭಾರತದ ವಸ್ತುಗಳನ್ನು ಇಂಗ್ಲೆಂಡಿನಲ್ಲಿ ಮಾರಲು ಇಂಗ್ಲಿಷರು ದುಬಾರಿ ಸುಂಕವನ್ನು ಹೇರಿದರು .
- ಜಮೀನ್ದಾರಿ ಪದ್ಧತಿಯಿಂದಾಗಿ ಸರ್ಕಾರ ಮತ್ತು ರೈತನ ಮಧ್ಯೆ ಇದ್ದ ಮಧ್ಯವರ್ತಿ ಜಮೀನ್ದಾರನು ಕೃಷಿಕರನ್ನು ಶೋಷಿಸುತ್ತಿದ್ದನು .
- ಕಂದಾಯ ವಸೂಲಿ ಮಾಡಲು ತಾಲ್ಲೂಕುದಾರರಿಗೆ ನೀಡಿದ್ದ ಹಕ್ಕುಗಳನ್ನು ಹಿಂಪಡೆಯಲಾಯಿತು .
- ಇನಾಂ ಆಯೋಗ ನೇಮಿಸಿ ಇನಾಂ ಭೂಮಿಯನ್ನು ವಾಪಸ್ ಪಡೆಯಲಾಯಿತು .
- ಇದರಿಂದಾಗಿ ಕೃಷಿಕರು ತೀವ್ರವಾಗಿ ಅವಮಾನ ಮತ್ತು ಆರ್ಥಿಕ ಸಂಕಷ್ಟ ಅನುಭವಿಸಿದರು .
3 , 1857 ರ ದಂಗೆಯಲ್ಲಿ ಸೈನಿಕರ ಧಾರ್ಮಿಕ ಮನೋಭಾವವನ್ನು ಪ್ರಚೋದಿಸಿದ ಅಂಶಗಳಾವುವು ?
- ಬ್ರಿಟಿಷರ ಸೈನ್ಯದಲ್ಲಿ ಭಾರತೀಯ ಸಿಪಾಯಿಗಳ ಸ್ಥಿತಿಯು ಗಂಭೀರವಾಗಿತ್ತು .
- ಆಂಗ್ಲ ಸೈನಿಕರಿಗಿದ್ದ ಸ್ಥಾನಮಾನ , ವೇತನ , ಬಡ್ಡಿ ಅವಕಾಶಗಳು ಭಾರತೀಯ ಸಿಪಾಯಿಗಳಿಗೆ ಇರಲಿಲ್ಲ . ಭಾರತೀಯ ಸೈನಿಕರನ್ನು ಸಾಗರೋತ್ತರ ಸೇವೆಗೆ ಒತ್ತಾಯಿಸಿದ್ದು ಧಾರ್ಮಿಕವಾಗಿ ಸೈನಿಕರನ್ನು ಪ್ರಚೋದಿಸಿತು .
4. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ತತ್‌ಕ್ಷಣದ ಕಾರಣಗಳಾವುವು ?
- ಸೈನಿಕರಿಗೆ ‘ ರಾಯಲ್ ಎನ್ಫೀಲ್ಡ್ ‘ ಎಂಬ ನವೀನ ಬಂದೂಕುಗಳನ್ನು ನೀಡುತ್ತಿದ್ದರು .
- ಬಂದೂಕುಗಳಿಗೆ ಉಪಯೋಗಿಸುತ್ತಿದ್ದ ತುಪಾಕಿಗಳಿಗೆ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ್ದಾರೆಂಬ ವದಂತಿ ಹಬ್ಬಿತ್ತು .
- ಹಿಂದುಗಳಿಗೆ ಹಸು ಪವಿತ್ರವಾದರೆ , ಮುಸ್ಲಿಮರಿಗೆ ಹಂದಿಯು ನಿಷಿದ್ಧವಾಗಿತ್ತು .
- ಈ ವದಂತಿಯು ದಂಗೆಗೆ ತಕ್ಷಣದ ಕಾರಣವಾಯಿತು .
5. ದಂಗೆಯ ವಿಫಲತೆಗೆ ಕಾರಣಗಳನ್ನು ಪಟ್ಟಿ ಮಾಡಿ
- ಇದು ಇಡೀ ಭಾರತವನ್ನು ವ್ಯಾಪಿಸಿದ ದಂಗೆಯಾಗಿರಲಿಲ್ಲ .
- ಇದು ದೇಶದ ಬಿಡುಗಡೆಗಾಗಿ ನಡೆದದ್ದಕ್ಕಿಂತ ರಾಜರ / ರಾಣಿಯರ ಸ್ವಹಿತಾಸಕ್ತಿ ಹಾಗೂ ಹಕ್ಕುಗಳಿಗಾಗಿ ನಡೆದಿತ್ತು . ಇದು ಯೋಜಿತ ದಂಗೆಯಾಗಿರದೆ ಅನಿರೀಕ್ಷಿತ ಕಾರಣಗಳಿಂದ ಪ್ರೇರೇಪಿತವಾಗಿತ್ತು .
- ಬ್ರಿಟಿಷ್ ಸೈನಿಕರಲ್ಲಿನ ಒಗಟ್ಟು ಮತ್ತು ಭಾರತೀಯ ಸೈನಿಕರಲ್ಲಿದ್ದ ಭಿನ್ನತೆಯು ದಂಗೆಯ ವಿಫಲತೆಗೆ ಕಾರಣವಾಗಿದೆ . ದಂಗೆಗೆ ಸೂಕ್ತ ಮಾರ್ಗದರ್ಶನ ಮತ್ತು ವ್ಯವಸ್ಥಿತ ಸಂಘಟನೆಯ ಕೊರತೆ ಇತ್ತು .
- ಭಾರತೀಯರಲ್ಲಿ ಯುದ್ಧ ತಂತ್ರ ಸೈನಿಕ ಪರಿಣತಿ , ಸೂಕ್ತ ಸೇನಾ ನಾಯಕತ್ವ ಮತ್ತು ಶಿಸ್ತು ಮುಂತಾದವುಗಳ ಕೊರತೆ ಇತ್ತು , ಹೋರಾಟಗಾರರಲ್ಲಿ ನಿಶ್ಚಿತ 795 ಇರಲಿಲ್ಲ .
- ಹಲವಾರು ದೇಶೀಯ ಸಂಸ್ಥಾನಗಳ ರಾಜರು ಬ್ರಿಟಿಷರಿಗೆ ತೋರಿದ ನಿಷ್ಠೆಯಿಂದಾಗಿ ಸಿಪಾಯಿಗಳಿಗೆ ಬೆಂಬಲ ನೀಡಲಿಲ್ಲ .
- ಸಿಪಾಯಿಗಳು ಮಾಡಿದಂತಹ ಲೂಟಿ , ದರೋಡೆ ಮೊದಲಾದ ಗಂಭೀರವಾದ ತಪ್ಪುಗಳಿಂದಾಗಿ ಜನರ ವಿಶ್ವಾಸ ಕಳೆದುಕೊಂಡರು
6. 1858 ರ ಬ್ರಿಟನ್ ರಾಣಿಯ ಘೋಷಣೆಯಲ್ಲಿದ್ದ ಅಂಶಗಳಾವುವು ?
- ಕಂಪನಿಯು ದೇಶೀ ರಾಜರೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ಅಂಗೀಕರಿಸಲಾಯಿತು . ಪ್ರಾದೇಶಿಕ ವಿಸ್ತರಣೆಯ ಅಪೇಕ್ಷೆಯನ್ನು ಕೈಬಿಡುವುದು .
- ಭಾರತೀಯರಿಗೆ ಸುಭದ್ರ ಸರ್ಕಾರವನ್ನು ನೀಡುವುದು ,
- ಕಾನೂನಿನ ಮುಂದೆ ಸಮಾನತೆ .
ಧಾರ್ಮಿಕ ಸಹಿಷ್ಣುತೆಯೊಂದಿಗೆ ಭಾರತೀಯರ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ .
7. 1857 ರ ದಂಗೆಯ ರಾಜಕೀಯ ಕಾರಣಗಳು ಯಾವುವು ?
- ಬ್ರಿಟಿಷರು ಜಾರಿಗೆ ತಂದಿದ್ದ ‘ ದತ್ತು ಮಕ್ಕಳಿಗೆ ಹಕ್ಕಿಲ್ಲ ‘ ಎಂಬ ನೀತಿಯಿಂದಾಗಿ ಹಲವು ದೇಶೀ ರಾಜರು ತಮ್ಮ ರಾಜ್ಯಗಳನ್ನು ಕಳೆದುಕೊಳ್ಳಬೇಕಾಯಿತು . ಈ ನೀತಿಯಿಂದಾಗಿ ಸತಾರ , ಜೈಪುರ , ಝಾನ್ಸಿ , ಉದಯಪುರ ಮೊದಲಾದ ಸಂಸ್ಥಾನಗಳು ಬ್ರಿಟಿಷರ ವಶವಾದವು . ಡಾಲ್‌ಹೌಸಿಯು ತಂಜಾವೂರು ಮತ್ತು ಕರ್ನಾಟಿಕ್ ನವಾಬರಿಗಿದ್ದ ರಾಜ ಪದವಿಗಳನ್ನು ರದ್ದುಪಡಿಸಿದನು .
- ಮೊಘಲ್ ಚಕ್ರವರ್ತಿ , ಔನ ನವಾಬ ಮೊದಲಾದ ರಾಜರುಗಳನ್ನು ಇಂಗ್ಲಿಷರು ಅಧಿಕಾರದಿಂದ ಪದಚ್ಯುತಗೊಳಿಸಿದರು .
- ಪರಿಣಾಮವಾಗಿ ಇವರನ್ನು ಅವಲಂಬಿಸಿದ ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು .
8. 1857 ರ ದಂಗೆಯ ಆಡಳಿತಾತ್ಮಕ ಕಾರಣಗಳನ್ನು ವಿವರಿಸಿ
- ಇಂಗ್ಲಿಷರು ಹೊಸ ನಾಗರಿಕ ಮತ್ತು ಅಪರಾಧ ಕಾಯ್ದೆಗಳನ್ನು ಜಾರಿಗೆ ತಂದರು .
- ಕಾನೂನಿನಲ್ಲಿ ಪಕ್ಷಪಾತ ಮತ್ತು ಭಾರತೀಯರಿಗೆ ಪ್ರತ್ಯೇಕ ನಿಯಮಗಳು ಅನ್ವಯವಾಗುತ್ತಿದ್ದವು ,
- ಆಂಗ್ಲ ಭಾಷೆಯು ನ್ಯಾಯಾಲಯದ ಭಾಷೆಯಾಯಿತು .
- ಇಂಗ್ಲಿಷ್ ನ್ಯಾಯಾಧೀಶರು ಬಹುತೇಕವಾಗಿ ಇಂಗ್ಲಿಪರ ಪರವಾಗಿ ನ್ಯಾಯದಾನ ನೀಡುತ್ತಿದ್ದರು .
- ಹೊಸ ಕಾನೂನಿನ ಆಶಯಗಳು ಜನರಿಗೆ ಅರಿವಾಗಲಿಲ್ಲ .
Prathama Swatantra Sangrama ಸ್ವಾತಂತ್ರ್ಯ ಸಂಗ್ರಾಮ
9. 1857 ರ ದಂಗೆಯ ಹರಡುವಿಕೆಯನ್ನು ವಿವರಿಸಿ ,
ಮೀರತ್ ಬ್ರಿಟಿಷರ ಪ್ರಬಲ ಸೇನಾ ನೆಲೆಯಾಗಿತ್ತು . ಇಲ್ಲಿಯೂ ಕೂಡಾ ಇಂಗ್ಲಿಷರು ಭಾರತೀಯ ಸೈನಿಕರಿಗೆ ತುಪಾಕಿಗಳನ್ನು ಬಳಸಲು ಆದೇಶಿಸಿದಾಗ ಭಾರತೀಯ ಸೈನಿಕರು ಅದನ್ನು ನಿರಾಕರಿಸಿದರು .
ಆಗ ಸಿಪಾಯಿಗಳನ್ನು ಬಂಧಿಸಲಾಯಿತು .
ಇದರಿಂದಾಗಿ ಮೀರತ್‌ನಲ್ಲಿ ದಂಗೆ ಉಂಟಾಯಿತು .
ಪರಿಣಾಮವಾಗಿ ಸೈನಿಕರು ಸೆರಮನೆಗೆ ನುಗ್ಗಿ ಈಗಾಗಲೇ ಬಂಧಿತರಾಗಿದ್ದ ಭಾರತೀಯ ಸಿಪಾಯಿಗಳನ್ನು ಬಿಡುಗಡೆಗೊಳಿಸಿದರು .
ನಂತರ ಸೈನಿಕರ ಗುಂಪು ಮೀರತ್‌ನಿಂದ ದೆಹಲಿಗೆ ತಲುಪಿತು . ಅವರು ಕೆಂಪುಕೋಟೆಗೆ ನುಗ್ಗಿ ಮೊಘಲ್ ದೊರೆ ಎರಡನೇ ಬಹುದ್ದೂರ ಪಾನನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿದರು .
ಹಲವಾರು ಭಾಗಗಳಿಂದ ಪ್ರತಿಭಟನಾ ನಿರತ ಸಿಪಾಯಿಗಳು ದೆಹಲಿಗೆ ತಲುಪಿದರು . ಇದರಿಂದಾಗಿ ಪ್ರತಿಭಟನೆಯು ತೀವ್ರ ಸ್ವರೂಪ ತಾಳಿತು .
ಕಾಳಿಚ್ಚಿನಂತೆ ಪ್ರತಿಭಟನೆಯು ದೆಹಲಿ , ಕಾನ್ಸುರ ಮತ್ತು ಝಾನ್ಸಿಗಳಲ್ಲಿ ಹರಡಿತು
10. 1857 ರ ದಂಗೆಯ ಪರಿಣಾಮಗಳು ಯಾವುವು ?
- ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಕೊನೆಗೊಂಡು ಬ್ರಿಟನ್ ಸಾಮ್ರಾಜಿಗೆ ಆಡಳಿತವು ವರ್ಗಾವಣೆಗೊಂಡಿತು .
- ಭಾರತದ ವ್ಯವಹಾರವನ್ನು ಬ್ರಿಟಿಷ್ ಪಾರ್ಲಿಮೆಂಟಿನ ಭಾರತದ ವ್ಯವಹಾರಗಳ ಕಾರ್ಯದರ್ಶಿಗೆ ಒಪ್ಪಿಸಲಾಯಿತು . 1858 ರಲ್ಲಿ ಬ್ರಿಟನ್ ರಾಣಿಯು ಒಂದು ಘೋಷಣೆ ಹೊರಡಿಸಿದರು .
- ಕಂಪನಿಯು ದೇಶೀ ರಾಜರೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ಅಂಗೀಕರಿಸಲಾಯಿತು .
- ಪ್ರಾದೇಶಿಕ ವಿಸ್ತರಣೆಯ ಅಪೇಕ್ಷೆಯನ್ನು ಕೈಬಿಡುವುದು . ಭಾರತೀಯರಿಗೆ ಸುಭದ್ರ ಸರ್ಕಾರವನ್ನು ನೀಡುವುದು ,
- ಕಾನೂನಿನ ಮುಂದೆ ಸಮಾನತೆ .
- ಧಾರ್ಮಿಕ ಸಹಿಷ್ಣುತೆಯೊಂದಿಗೆ ಭಾರತೀಯರ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ
Prathama Swatantra Sangrama ಸ್ವಾತಂತ್ರ್ಯ ಸಂಗ್ರಾಮ
FAQ
1857 ರ ದಂಗೆಯನ್ನು ಭಾರತೀಯ ಇತಿಹಾಸಕಾರರು ಏನೆಂದು ಕರೆದಿದ್ದಾರೆ ?
1857 ರ ದಂಗೆಯನ್ನು ಭಾರತೀಯ ಇತಿಹಾಸಕಾರರು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಕರೆದಿದ್ದಾರೆ .
ಡಾಲ್ ಹೌಸಿಯು ಜಾರಿಗೆ ತಂದ ನೀತಿ ಯಾವುದು ?
ಡಾಲ್ ಹೌಸಿಯು ಜಾರಿಗೆ ತಂದ ನೀತಿ ಮತ್ತು ಮಕ್ಕಳಿಗೆ ಹಕ್ಕಿಲ್ಲ
ಹತ್ತನೇಯ ತರಗತಿ ಸಮಾಜ ವಿಜ್ಞಾನ ಪಠ್ಯದ ನೋಟ್ಸ್
ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ ಪ್ರಶ್ನೆ ಉತ್ತರ
ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಪ್ರಶ್ನೋತ್ತರಗಳು
ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು ಪಾಠ 4
ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ
- ಕನ್ನಡ
- ಇತಿಹಾಸ
- ಭೂಗೋಳಶಾಸ್ತ್ರ
- ಭಾರತದ ಸಂವಿಧಾನ
- ವಿಜ್ಞಾನ
- ಅರ್ಥಶಾಸ್ತ್ರ
- ಮಾನಸಿಕ ಸಾಮರ್ಥ್ಯ
- ಇಂಗ್ಲೀಷ್ ವ್ಯಾಕರಣ
- ಪ್ರಚಲಿತ ವಿದ್ಯಮಾನ
- ಸಾಮಾನ್ಯ ಜ್ಞಾನ