1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ | 1857 Pratham Swatantrata Sangram in Kannada

Prathama Swatantra Sangrama | 1857 ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857, Prathama Swatantra Sangrama, bharatada prathama swatantra sangrama in kannada, Notes Pdf, KSEEB, Essay

Prathama Swatantra Sangrama ಸ್ವಾತಂತ್ರ್ಯ ಸಂಗ್ರಾಮ

ಬಿಟ್ಟಿರುವ ಸ್ಥಳವನ್ನು ಸೂಕ್ತ ಉತ್ತರದಿಂದ ತುಂಬಿರಿ

1. 1857 ರ ದಂಗೆಯನ್ನು ಬ್ರಿಟಿಷ್ ಇತಿಹಾಸಕಾರರು

2. ಡಾಲ್ ಹೌಸಿಯು ಜಾರಿಗೆ ತಂದ ನೀತಿ ಎಂದು ಕರೆದಿದ್ದಾರೆ . ( ಸಿಪಾಯಿ ದಂಗೆ ) ( ದತ್ತು ಮಕ್ಕಳಿಗೆ ಹಕ್ಕಿಲ್ಲ )

3. 1857 ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವನು

4.ಝಾನ್ಸಿ ರಾಣಿಯು ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ( ಮಂಗಲ್ ಪಾಂಡೆ ) ನ್ನು ವಶಕ್ಕೆ ಪಡೆದಳು ( ಗ್ವಾಲಿಯರ್ )

Prathama Swatantra Sangrama ಸ್ವಾತಂತ್ರ್ಯ ಸಂಗ್ರಾಮ 1857 pratham swatantrata sangram in kannada

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857 Best Information | Prathama Swatantra Sangrama ಸ್ವಾತಂತ್ರ್ಯ ಸಂಗ್ರಾಮ
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857 Best Information | Prathama Swatantra Sangrama ಸ್ವಾತಂತ್ರ್ಯ ಸಂಗ್ರಾಮ

II . ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ .

1. 1857 ರ ದಂಗೆಯನ್ನು ಭಾರತೀಯ ಇತಿಹಾಸಕಾರರು ಏನೆಂದು ಕರೆದಿದ್ದಾರೆ ?

1857 ರ ದಂಗೆಯನ್ನು ಭಾರತೀಯ ಇತಿಹಾಸಕಾರರು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಕರೆದಿದ್ದಾರೆ .

2. 1857 ರ ದಂಗೆಯನ್ನು ಇಂಗ್ಲಿಷ್ ಇತಿಹಾಸಕಾರರು ಏನೆಂದು ಕರೆದಿದ್ದಾರೆ ?

1857 ರ ದಂಗೆಯನ್ನು ಇಂಗ್ಲಿಷ್ ಇತಿಹಾಸಕಾರರು ಸಿಪಾಯಿ ದಂಗೆ ಕರೆದಿದ್ದಾರೆ .

3. ಡಾಲ್ ಹೌಸಿಯು ಜಾರಿಗೆ ತಂದ ನೀತಿ ಯಾವುದು ?

ಡಾಲ್ ಹೌಸಿಯು ಜಾರಿಗೆ ತಂದ ನೀತಿ ಮತ್ತು ಮಕ್ಕಳಿಗೆ ಹಕ್ಕಿಲ್ಲ

4. 1857 ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವನು ಯಾರು ?

1857 ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವನು ಮಂಗಲ ಪಾಂಡೆ

5. ಝಾನ್ಸಿ ರಾಣಿಯು ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಯಾವ ಪ್ರದೇಶವನ್ನು ವಶಕ್ಕೆ ಪಡೆದಳು ?

ಝಾನ್ಸಿ ರಾಣಿಯು ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಗ್ವಾಲಿಯರ್ ಪ್ರದೇಶವನ್ನು ವಶಕ್ಕೆ ಪಡೆದಳು .

6. 1857 ರ ದಂಗೆಯ ಸಮಯದಲ್ಲಿ ಕಾನ್ಸುರದಲ್ಲಿ ದಂಗೆಯ ನೇತೃತ್ವವನ್ನು ವಹಿಸಿದವರು ಯಾರು ?

1857 ರ ದಂಗೆಯ ಸಮಯದಲ್ಲಿ ಕಾನ್ಸುರದಲ್ಲಿ ದಂಗೆಯ ನೇತೃತ್ವವನ್ನು ವಹಿಸಿದವರು ನಾನಾ ಸಾಹೇಬ

7. 1857 ರ ದಂಗೆಯ ಸಮಯದಲ್ಲಿ ಬ್ರಿಟಿಷರು ತಂದ ನವೀನ ಬಂದೂಕು ಯಾವುದು ?

1857 ರ ದಂಗೆಯ ಸಮಯದಲ್ಲಿ ಬ್ರಿಟಿಷರು ತಂದ ನವೀನ ಬಂದೂಕು ರಾಯಲ್ ಎನ್‌ಫೀಲ್ಡ್
ಮಂಗಲ ಪಾಂಡೆ ಬ್ರಿಟಿಷ್ ಅಧಿಕಾರಿಯನ್ನು ಕೊಂದನು ಆದ್ದರಿಂದ ಮಂಗಲ ಪಾಂಡೆಯನ್ನು ಗಲ್ಲಿಗೇರಿಸಲಾಯಿತು

. 9. ನಾನಾ ಸಾಹೇಬನ ಸಹಾಯಕನ ಹೆಸರೇನು ?

ನಾನಾ ಸಾಹೇಬನ ಸಹಾಯಕನ ಹೆಸರು ತಾತ್ಯಾಟೋಪಿ

Prathama Swatantra Sangrama ಸ್ವಾತಂತ್ರ್ಯ ಸಂಗ್ರಾಮ

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857 Best Information | Prathama Swatantra Sangrama ಸ್ವಾತಂತ್ರ್ಯ ಸಂಗ್ರಾಮ
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857 Best Information | Prathama Swatantra Sangrama ಸ್ವಾತಂತ್ರ್ಯ ಸಂಗ್ರಾಮ

II . ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ

1. ‘ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯಿಂದಾದ ಪರಿಣಾಮಗಳು ಯಾವುವು ? ವಿಶ್ಲೇಷಿಸಿ .

  • ಬ್ರಿಟಿಷರು ಜಾರಿಗೆ ತಂದಿದ್ದ ‘ ದತ್ತು ಮಕ್ಕಳಿಗೆ ಹಕ್ಕಿಲ್ಲ ‘ ಎಂಬ ನೀತಿಯಿಂದಾಗಿ ಹಲವು ದೇಶೀ ರಾಜರು ತಮ್ಮ ರಾಜ್ಯಗಳನ್ನು ಕಳೆದುಕೊಳ್ಳಬೇಕಾಯಿತು .
  • ಈ ನೀತಿಯಿಂದಾಗಿ ಸತಾರ , ಜೈಪುರ , ಝಾನ್ಸಿ , ಉದಯಪುರ ಮೊದಲಾದ ಸಂಸ್ಥಾನಗಳು ಬ್ರಿಟಿಷರ ವಶವಾದವು

Prathama Swatantra Sangrama ಸ್ವಾತಂತ್ರ್ಯ ಸಂಗ್ರಾಮ

2 , 1857 ರ ದಂಗೆಗೆ ಆರ್ಥಿಕ ಬದಲಾವಣೆಗಳು ಹೇಗೆ ಕಾರಣವಾದವು ? ವಿವರಿಸಿ .

  • ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಭಾರತದ ಕರಕುಶಲತೆ ಮತ್ತು ದೇಶೀಯ ಕೈಗಾರಿಕೆಗಳು ಕ್ಷೀಣಿಸಿದವು .
  • ಇಂಗ್ಲೆಂಡ್ ಕೇವಲ ವ್ಯಾಪಾರಿ ರಾಷ್ಟ್ರವಾಗಿರದ ಕೈಗಾರಿಕೆಗಳ ಕಾರ್ಯಾಗಾರವಾಯಿತು .
  • ಭಾರತದಲ್ಲಿದ್ದ ಕರಕುಶಲಗಾರರು ನಿರುದ್ಯೋಗಿಗಳಾದರು . ವಿಶೇಷವಾಗಿ ಬಟ್ಟೆ ಮತ್ತು ಉಣ್ಣೆ ಕೈಗಾರಿಕೆಗಳು ಅವನತಿ ಹೊಂದಿ ನೇಕಾರಿಕೆ ವೃತ್ತಿಯವರು ಉದ್ಯೋಗ ಕಳೆದುಕೊಂಡರು .
  • ಗೃಹಕೈಗಾರಿಕೆಗಳು ಇದೇ ಬಗೆಯ ತೀವ್ರ ಆರ್ಥಿಕ ನಷ್ಟ ಅನುಭವಿಸಿ ಶಿಥಿಲಗೊಂಡವು . ಭಾರತದ ವಸ್ತುಗಳನ್ನು ಇಂಗ್ಲೆಂಡಿನಲ್ಲಿ ಮಾರಲು ಇಂಗ್ಲಿಷರು ದುಬಾರಿ ಸುಂಕವನ್ನು ಹೇರಿದರು .
  • ಜಮೀನ್ದಾರಿ ಪದ್ಧತಿಯಿಂದಾಗಿ ಸರ್ಕಾರ ಮತ್ತು ರೈತನ ಮಧ್ಯೆ ಇದ್ದ ಮಧ್ಯವರ್ತಿ ಜಮೀನ್ದಾರನು ಕೃಷಿಕರನ್ನು ಶೋಷಿಸುತ್ತಿದ್ದನು .
  • ಕಂದಾಯ ವಸೂಲಿ ಮಾಡಲು ತಾಲ್ಲೂಕುದಾರರಿಗೆ ನೀಡಿದ್ದ ಹಕ್ಕುಗಳನ್ನು ಹಿಂಪಡೆಯಲಾಯಿತು .
  • ಇನಾಂ ಆಯೋಗ ನೇಮಿಸಿ ಇನಾಂ ಭೂಮಿಯನ್ನು ವಾಪಸ್ ಪಡೆಯಲಾಯಿತು .
  • ಇದರಿಂದಾಗಿ ಕೃಷಿಕರು ತೀವ್ರವಾಗಿ ಅವಮಾನ ಮತ್ತು ಆರ್ಥಿಕ ಸಂಕಷ್ಟ ಅನುಭವಿಸಿದರು .

3 , 1857 ರ ದಂಗೆಯಲ್ಲಿ ಸೈನಿಕರ ಧಾರ್ಮಿಕ ಮನೋಭಾವವನ್ನು ಪ್ರಚೋದಿಸಿದ ಅಂಶಗಳಾವುವು ?

  • ಬ್ರಿಟಿಷರ ಸೈನ್ಯದಲ್ಲಿ ಭಾರತೀಯ ಸಿಪಾಯಿಗಳ ಸ್ಥಿತಿಯು ಗಂಭೀರವಾಗಿತ್ತು .
  • ಆಂಗ್ಲ ಸೈನಿಕರಿಗಿದ್ದ ಸ್ಥಾನಮಾನ , ವೇತನ , ಬಡ್ಡಿ ಅವಕಾಶಗಳು ಭಾರತೀಯ ಸಿಪಾಯಿಗಳಿಗೆ ಇರಲಿಲ್ಲ . ಭಾರತೀಯ ಸೈನಿಕರನ್ನು ಸಾಗರೋತ್ತರ ಸೇವೆಗೆ ಒತ್ತಾಯಿಸಿದ್ದು ಧಾರ್ಮಿಕವಾಗಿ ಸೈನಿಕರನ್ನು ಪ್ರಚೋದಿಸಿತು .

4. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ತತ್‌ಕ್ಷಣದ ಕಾರಣಗಳಾವುವು ?

  • ಸೈನಿಕರಿಗೆ ‘ ರಾಯಲ್ ಎನ್ಫೀಲ್ಡ್ ‘ ಎಂಬ ನವೀನ ಬಂದೂಕುಗಳನ್ನು ನೀಡುತ್ತಿದ್ದರು .
  • ಬಂದೂಕುಗಳಿಗೆ ಉಪಯೋಗಿಸುತ್ತಿದ್ದ ತುಪಾಕಿಗಳಿಗೆ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ್ದಾರೆಂಬ ವದಂತಿ ಹಬ್ಬಿತ್ತು .
  • ಹಿಂದುಗಳಿಗೆ ಹಸು ಪವಿತ್ರವಾದರೆ , ಮುಸ್ಲಿಮರಿಗೆ ಹಂದಿಯು ನಿಷಿದ್ಧವಾಗಿತ್ತು .
  • ಈ ವದಂತಿಯು ದಂಗೆಗೆ ತಕ್ಷಣದ ಕಾರಣವಾಯಿತು .
5. ದಂಗೆಯ ವಿಫಲತೆಗೆ ಕಾರಣಗಳನ್ನು ಪಟ್ಟಿ ಮಾಡಿ
  • ಇದು ಇಡೀ ಭಾರತವನ್ನು ವ್ಯಾಪಿಸಿದ ದಂಗೆಯಾಗಿರಲಿಲ್ಲ .
  • ಇದು ದೇಶದ ಬಿಡುಗಡೆಗಾಗಿ ನಡೆದದ್ದಕ್ಕಿಂತ ರಾಜರ / ರಾಣಿಯರ ಸ್ವಹಿತಾಸಕ್ತಿ ಹಾಗೂ ಹಕ್ಕುಗಳಿಗಾಗಿ ನಡೆದಿತ್ತು . ಇದು ಯೋಜಿತ ದಂಗೆಯಾಗಿರದೆ ಅನಿರೀಕ್ಷಿತ ಕಾರಣಗಳಿಂದ ಪ್ರೇರೇಪಿತವಾಗಿತ್ತು .
  • ಬ್ರಿಟಿಷ್ ಸೈನಿಕರಲ್ಲಿನ ಒಗಟ್ಟು ಮತ್ತು ಭಾರತೀಯ ಸೈನಿಕರಲ್ಲಿದ್ದ ಭಿನ್ನತೆಯು ದಂಗೆಯ ವಿಫಲತೆಗೆ ಕಾರಣವಾಗಿದೆ . ದಂಗೆಗೆ ಸೂಕ್ತ ಮಾರ್ಗದರ್ಶನ ಮತ್ತು ವ್ಯವಸ್ಥಿತ ಸಂಘಟನೆಯ ಕೊರತೆ ಇತ್ತು .
  • ಭಾರತೀಯರಲ್ಲಿ ಯುದ್ಧ ತಂತ್ರ ಸೈನಿಕ ಪರಿಣತಿ , ಸೂಕ್ತ ಸೇನಾ ನಾಯಕತ್ವ ಮತ್ತು ಶಿಸ್ತು ಮುಂತಾದವುಗಳ ಕೊರತೆ ಇತ್ತು , ಹೋರಾಟಗಾರರಲ್ಲಿ ನಿಶ್ಚಿತ 795 ಇರಲಿಲ್ಲ .
  • ಹಲವಾರು ದೇಶೀಯ ಸಂಸ್ಥಾನಗಳ ರಾಜರು ಬ್ರಿಟಿಷರಿಗೆ ತೋರಿದ ನಿಷ್ಠೆಯಿಂದಾಗಿ ಸಿಪಾಯಿಗಳಿಗೆ ಬೆಂಬಲ ನೀಡಲಿಲ್ಲ .
  • ಸಿಪಾಯಿಗಳು ಮಾಡಿದಂತಹ ಲೂಟಿ , ದರೋಡೆ ಮೊದಲಾದ ಗಂಭೀರವಾದ ತಪ್ಪುಗಳಿಂದಾಗಿ ಜನರ ವಿಶ್ವಾಸ ಕಳೆದುಕೊಂಡರು

6. 1858 ರ ಬ್ರಿಟನ್ ರಾಣಿಯ ಘೋಷಣೆಯಲ್ಲಿದ್ದ ಅಂಶಗಳಾವುವು ?

  • ಕಂಪನಿಯು ದೇಶೀ ರಾಜರೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ಅಂಗೀಕರಿಸಲಾಯಿತು . ಪ್ರಾದೇಶಿಕ ವಿಸ್ತರಣೆಯ ಅಪೇಕ್ಷೆಯನ್ನು ಕೈಬಿಡುವುದು .
  • ಭಾರತೀಯರಿಗೆ ಸುಭದ್ರ ಸರ್ಕಾರವನ್ನು ನೀಡುವುದು ,
  • ಕಾನೂನಿನ ಮುಂದೆ ಸಮಾನತೆ .
    ಧಾರ್ಮಿಕ ಸಹಿಷ್ಣುತೆಯೊಂದಿಗೆ ಭಾರತೀಯರ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ .

7. 1857 ರ ದಂಗೆಯ ರಾಜಕೀಯ ಕಾರಣಗಳು ಯಾವುವು ?

  • ಬ್ರಿಟಿಷರು ಜಾರಿಗೆ ತಂದಿದ್ದ ‘ ದತ್ತು ಮಕ್ಕಳಿಗೆ ಹಕ್ಕಿಲ್ಲ ‘ ಎಂಬ ನೀತಿಯಿಂದಾಗಿ ಹಲವು ದೇಶೀ ರಾಜರು ತಮ್ಮ ರಾಜ್ಯಗಳನ್ನು ಕಳೆದುಕೊಳ್ಳಬೇಕಾಯಿತು . ಈ ನೀತಿಯಿಂದಾಗಿ ಸತಾರ , ಜೈಪುರ , ಝಾನ್ಸಿ , ಉದಯಪುರ ಮೊದಲಾದ ಸಂಸ್ಥಾನಗಳು ಬ್ರಿಟಿಷರ ವಶವಾದವು . ಡಾಲ್‌ಹೌಸಿಯು ತಂಜಾವೂರು ಮತ್ತು ಕರ್ನಾಟಿಕ್ ನವಾಬರಿಗಿದ್ದ ರಾಜ ಪದವಿಗಳನ್ನು ರದ್ದುಪಡಿಸಿದನು .
  • ಮೊಘಲ್ ಚಕ್ರವರ್ತಿ , ಔ‌ನ ನವಾಬ ಮೊದಲಾದ ರಾಜರುಗಳನ್ನು ಇಂಗ್ಲಿಷರು ಅಧಿಕಾರದಿಂದ ಪದಚ್ಯುತಗೊಳಿಸಿದರು .
  • ಪರಿಣಾಮವಾಗಿ ಇವರನ್ನು ಅವಲಂಬಿಸಿದ ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು .

8. 1857 ರ ದಂಗೆಯ ಆಡಳಿತಾತ್ಮಕ ಕಾರಣಗಳನ್ನು ವಿವರಿಸಿ

  • ಇಂಗ್ಲಿಷರು ಹೊಸ ನಾಗರಿಕ ಮತ್ತು ಅಪರಾಧ ಕಾಯ್ದೆಗಳನ್ನು ಜಾರಿಗೆ ತಂದರು .
  • ಕಾನೂನಿನಲ್ಲಿ ಪಕ್ಷಪಾತ ಮತ್ತು ಭಾರತೀಯರಿಗೆ ಪ್ರತ್ಯೇಕ ನಿಯಮಗಳು ಅನ್ವಯವಾಗುತ್ತಿದ್ದವು ,
  • ಆಂಗ್ಲ ಭಾಷೆಯು ನ್ಯಾಯಾಲಯದ ಭಾಷೆಯಾಯಿತು .
  • ಇಂಗ್ಲಿಷ್ ನ್ಯಾಯಾಧೀಶರು ಬಹುತೇಕವಾಗಿ ಇಂಗ್ಲಿಪರ ಪರವಾಗಿ ನ್ಯಾಯದಾನ ನೀಡುತ್ತಿದ್ದರು .
  • ಹೊಸ ಕಾನೂನಿನ ಆಶಯಗಳು ಜನರಿಗೆ ಅರಿವಾಗಲಿಲ್ಲ .

Prathama Swatantra Sangrama ಸ್ವಾತಂತ್ರ್ಯ ಸಂಗ್ರಾಮ

9. 1857 ರ ದಂಗೆಯ ಹರಡುವಿಕೆಯನ್ನು ವಿವರಿಸಿ ,

ಮೀರತ್ ಬ್ರಿಟಿಷರ ಪ್ರಬಲ ಸೇನಾ ನೆಲೆಯಾಗಿತ್ತು . ಇಲ್ಲಿಯೂ ಕೂಡಾ ಇಂಗ್ಲಿಷರು ಭಾರತೀಯ ಸೈನಿಕರಿಗೆ ತುಪಾಕಿಗಳನ್ನು ಬಳಸಲು ಆದೇಶಿಸಿದಾಗ ಭಾರತೀಯ ಸೈನಿಕರು ಅದನ್ನು ನಿರಾಕರಿಸಿದರು .

ಆಗ ಸಿಪಾಯಿಗಳನ್ನು ಬಂಧಿಸಲಾಯಿತು .

ಇದರಿಂದಾಗಿ ಮೀರತ್‌ನಲ್ಲಿ ದಂಗೆ ಉಂಟಾಯಿತು .

ಪರಿಣಾಮವಾಗಿ ಸೈನಿಕರು ಸೆರಮನೆಗೆ ನುಗ್ಗಿ ಈಗಾಗಲೇ ಬಂಧಿತರಾಗಿದ್ದ ಭಾರತೀಯ ಸಿಪಾಯಿಗಳನ್ನು ಬಿಡುಗಡೆಗೊಳಿಸಿದರು .

ನಂತರ ಸೈನಿಕರ ಗುಂಪು ಮೀರತ್‌ನಿಂದ ದೆಹಲಿಗೆ ತಲುಪಿತು . ಅವರು ಕೆಂಪುಕೋಟೆಗೆ ನುಗ್ಗಿ ಮೊಘಲ್ ದೊರೆ ಎರಡನೇ ಬಹುದ್ದೂರ ಪಾನನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿದರು .

ಹಲವಾರು ಭಾಗಗಳಿಂದ ಪ್ರತಿಭಟನಾ ನಿರತ ಸಿಪಾಯಿಗಳು ದೆಹಲಿಗೆ ತಲುಪಿದರು . ಇದರಿಂದಾಗಿ ಪ್ರತಿಭಟನೆಯು ತೀವ್ರ ಸ್ವರೂಪ ತಾಳಿತು .

ಕಾಳಿಚ್ಚಿನಂತೆ ಪ್ರತಿಭಟನೆಯು ದೆಹಲಿ , ಕಾನ್ಸುರ ಮತ್ತು ಝಾನ್ಸಿಗಳಲ್ಲಿ ಹರಡಿತು

10. 1857 ರ ದಂಗೆಯ ಪರಿಣಾಮಗಳು ಯಾವುವು ?
  • ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಕೊನೆಗೊಂಡು ಬ್ರಿಟನ್ ಸಾಮ್ರಾಜಿಗೆ ಆಡಳಿತವು ವರ್ಗಾವಣೆಗೊಂಡಿತು .
  • ಭಾರತದ ವ್ಯವಹಾರವನ್ನು ಬ್ರಿಟಿಷ್ ಪಾರ್ಲಿಮೆಂಟಿನ ಭಾರತದ ವ್ಯವಹಾರಗಳ ಕಾರ್ಯದರ್ಶಿಗೆ ಒಪ್ಪಿಸಲಾಯಿತು . 1858 ರಲ್ಲಿ ಬ್ರಿಟನ್ ರಾಣಿಯು ಒಂದು ಘೋಷಣೆ ಹೊರಡಿಸಿದರು .
  • ಕಂಪನಿಯು ದೇಶೀ ರಾಜರೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ಅಂಗೀಕರಿಸಲಾಯಿತು .
  • ಪ್ರಾದೇಶಿಕ ವಿಸ್ತರಣೆಯ ಅಪೇಕ್ಷೆಯನ್ನು ಕೈಬಿಡುವುದು . ಭಾರತೀಯರಿಗೆ ಸುಭದ್ರ ಸರ್ಕಾರವನ್ನು ನೀಡುವುದು ,
  • ಕಾನೂನಿನ ಮುಂದೆ ಸಮಾನತೆ .
  • ಧಾರ್ಮಿಕ ಸಹಿಷ್ಣುತೆಯೊಂದಿಗೆ ಭಾರತೀಯರ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ

Prathama Swatantra Sangrama ಸ್ವಾತಂತ್ರ್ಯ ಸಂಗ್ರಾಮ

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857 Best Information | Prathama Swatantra Sangrama ಸ್ವಾತಂತ್ರ್ಯ ಸಂಗ್ರಾಮ
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857 Best Information | Prathama Swatantra Sangrama ಸ್ವಾತಂತ್ರ್ಯ ಸಂಗ್ರಾಮ

FAQ

1857 ರ ದಂಗೆಯನ್ನು ಭಾರತೀಯ ಇತಿಹಾಸಕಾರರು ಏನೆಂದು ಕರೆದಿದ್ದಾರೆ ?

1857 ರ ದಂಗೆಯನ್ನು ಭಾರತೀಯ ಇತಿಹಾಸಕಾರರು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಕರೆದಿದ್ದಾರೆ .

ಡಾಲ್ ಹೌಸಿಯು ಜಾರಿಗೆ ತಂದ ನೀತಿ ಯಾವುದು ?

ಡಾಲ್ ಹೌಸಿಯು ಜಾರಿಗೆ ತಂದ ನೀತಿ ಮತ್ತು ಮಕ್ಕಳಿಗೆ ಹಕ್ಕಿಲ್ಲ

ಹತ್ತನೇಯ ತರಗತಿ ಸಮಾಜ ವಿಜ್ಞಾನ ಪಠ್ಯದ ನೋಟ್ಸ್

ಭಾರತಕ್ಕೆ ಯುರೋಪಿಯನ್ನರ ಆಗಮನ

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ ಪ್ರಶ್ನೆ ಉತ್ತರ

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಪ್ರಶ್ನೋತ್ತರಗಳು

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು ಪಾಠ 4

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *