parivala kannada notes, ಪಾರಿವಾಳ ಪದ್ಯದ ಪ್ರಶ್ನೋತ್ತರಗಳು 9ನೇ ತರಗತಿ, ಪಾರಿವಾಳ ಪದ್ಯದ ನೋಟ್ಸ್, 9th standard kannada notes parivala poem, ಪಾರಿವಾಳ ಪದ್ಯ ಸಾರಾಂಶ pdf, ಪಾರಿವಾಳ ಪ್ರಶ್ನೋತ್ತರ, parivala poem in kannada
Parivala Kannada Notes
ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ
ಪಾರಿವಾಳ ಪದ್ಯದ ಪ್ರಶ್ನೋತ್ತರಗಳು
ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ Parivala Kannada Notes
ಏನನ್ನು ತೊರೆದು ಬಾಳಬೇಕು ?
ವ್ಯಾಮೋಹವನ್ನು ತೊರೆದು ಬಾಳಬೇಕು .
ಜೋಡಿ ಪಾರಿವಾಳಗಳು ಹೇಗೆ ಬಾಳುತ್ತಿದ್ದವು ?
ಹಗಲಿರುಳು ಒಂದನ್ನೊಂದು ಬಿಟ್ಟಿರದೆ ಜೊತೆಗೂಡಿ ಬಾಳುತ್ತಿದ್ದವು
ಮುದ್ದು ಪಾರಿವಾಳಗಳ ಜೋಡಿ ಎಲ್ಲಿ ಸಂಸಾರ ಹೂಡಿದ್ದವು ?
ದಟ್ಟಕಾಡಿನಲ್ಲಿದ್ದ ಹೆಮ್ಮರದ ಹೊದರಿನಲ್ಲಿ ಮುದ್ದು ಪಾರಿವಾಳಗಳ ಜೋಡಿ ಸಂಸಾರ ಹೂಡಿದ್ದವು
ಬಲೆಯಲ್ಲಿದ್ದ ಮರಿಗಳು ಹೊರಗೆ ಬರಲು ಏನು ಮಾಡಿದವು ?
ಬಲೆಯಲ್ಲಿದ್ದ ಮರಿಗಳು ಹೊರಗೆ ಬರಲು ಚೀತ್ಕರಿಸತೊಡಗಿದವು.
ಈ ಪ್ರಶ್ನೆಗೆ 3-4 ವಾಕ್ಯಗಳಲ್ಲಿ ಉತ್ತರಿಸಿ. Parivala Kannada Notes
ಬೇಡ ಏನು ಮಾಡಿದನು ?
ಕಾಡಿನ ಹೆಮ್ಮರ ಹೊದರಿನಲ್ಲಿ ಜೋಡಿ ಪಾರಿವಾಳಗಳ ಜೋಡಿ ತನ್ನ ಪುಟ್ಟ ಮರಿಗಳ ಜೊತೆಗೆ ಆನಂದದಿಂದ , ಸಂತೋಷದಿಂದ ಬಾಳುತ್ತಿದ್ದವು . ಇದನ್ನು ನೋಡಿ ಬೇಡನೊಬ್ಬನು ಬಲೆಯ ಹರಡಿದನು .
ಈ ಬಲೆಯಲ್ಲಿ ಮೊದಲು ಪುಟ್ಟ ಮರಿಗಳು ಹಾರಿ ಸಿಲುಕಿ ಹೊರಗೆ ಚೀತ್ಕರಿಸತೊಡಗಿದವು . ಮರಿ ಪಾರಿವಾಳಗಳ ಸ್ಥಿತಿಯನ್ನು ಕಂಡು ತಾಯಿ ಪಾರಿವಾಳ ಬಲೆಗೆ ಧುಮುಕಿತು .
ಹೆಂಡತಿಯನ್ನು ಬಿಟ್ಟಿರಲಾರದ ಗಂಡು ಪಾರಿವಾಳವು ಸಹ ಬಲೆಯಲ್ಲಿ ಬಿದ್ದಿತು . ಹಸಿದ ಬೇಡನು ಹೊತ್ತುಕೊಂಡು ಹೋದನು .
ಪಾರಿವಾಳಗಳ ಆನಂದಕ್ಕೆ ಕಾಣವೇನು ?
ಒಂದು ದಟ್ಟಕಾಡಿನಲ್ಲಿದ್ದ ಹೆಮ್ಮರದ ಹೊದರಿನಲ್ಲಿ ಮುದ್ದು ಪಾರಿವಾಳಗಳ ಜೋಡಿ ವಾಸವಾಗಿದ್ದವು ಜೋಡಿ ಪಾರಿವಾಳಗಳು ಎಂದಿಗೂ ಒಂದನ್ನೊಂದು ಹಗಲಿರುಳು ಬಿಟ್ಟಿರದೆ ಜೊತೆಗೂಡಿ ಬಾಳಿದವು .
ಕಾಲಾಂತರದಲ್ಲಿ ಹೊದರಿನಲ್ಲಿ ಪುಟ್ಟ ಮರಿಗಳ ಮಧುರ ಸದ್ದು ಕೇಳಿತು . ಆ ಪುಟ್ಟ ಪಾರಿವಾಳಗಳ ಮಧುರವಾದ ಮಾತುಗಳನ್ನು ಕೇಳಿದ ಜೋಡಿ ಪಾರಿವಾಳಗಳಿಗೆ ಮತ್ತಷ್ಟು ಸಂತೋಷವಾಗಿತು .
ಈ ಪ್ರಶ್ನೆಗೆ 8-10 ವಾಕ್ಯಗಳಲ್ಲಿ ಉತ್ತರಿಸಿ Parivala Kannada Notes
ಪಾರಿವಾಳ ‘ ಪದ್ಯದ ಕಥೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .
‘ ಪಾರಿವಾಳ ‘ ಎಂಬ ಕವನವು ಒಂದು ಕಥನ ಕವನವಾಗಿದೆ . ಒಂದು ದಟ್ಟವಾದ ಕಾಡಿನ ಹೆಮ್ಮರದ ಹೊದರಿನಲ್ಲಿ ಮುದ್ದು ಪಾರಿವಾಳ ಜೋಡಿ ಸಂಸಾರ ಹೂಡಿ ಸುಃಖದಿಂದ ಬಾಳುತ್ತಿದ್ದವು .
ಈ ಪಾರಿವಾಳಗಳ ಜೋಡಿ ಹಗಲಿರುಳು ಒಂದನೊಂದು ಬಿಟ್ಟಿರದೆ ಜೊತೆಯಾಗಿ ಬಾಳುತ್ತಿದ್ದವು . ಈ ಪುಟ್ಟ ಸಂಸಾರದಲ್ಲಿ ಸುಃಖ , ಸಂತೋಷ , ಆನಂದ ಮನೆ ಮಾಡಿತ್ತು .
ಈ ಗೂಡಿನಲ್ಲಿ ಮೊಟ್ಟೆಯೊಡೆದು ತನ್ನ ಮರಿ ಪಾರಿವಾಳಗಳನ್ನು ನೋಡಿ ಅವುಗಳ ಸಂತೋಷ ಇಮ್ಮಡಿಯಾಯಿತು ಕಾಲಗತಿಸಿದಂತೆ ಮೊಟ್ಟೆಯೊಡೆದು ಮರಿಗಳಾಗಿ ಆ ಮರಿಗಳ ಮಧುರ ಸದ್ದು ಕೇಳಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದವು , ಆನಂದದಿಂದ ಬಾಳು ಸಾಗಿಸುತ್ತಿದ್ದವು .
ಹೀಗಿರುವಾಗ ಒಂದು ಈ ಪುಟ್ಟ ಪಾರಿವಾಳ ಕುಟುಂಬದ ಮೇಲೆ ಬೇಡನೊಬ್ಬನ ಕಣ್ಣು ಬೀಳುತ್ತದೆ . ಈ ಬೇಡನು ಬಂದು ಬಲೆಯನ್ನು ಹಾಕಿದಾಗ ಈ ಬಲೆಯಲ್ಲಿ ಮೊದಲು ಮರಿ ಪಾರಿವಾಳಗಳು ಬಿದ್ದು ಸಿಲುಕಿದವು . ಬಲೆಯಿಂದ ಹೊರ ಬರಲು ಚೀತ್ಕರಿಸ ತೊಡಗಿದವು .
ಬಲೆಯಲ್ಲಿ ಬಿದ್ದು ಕಷ್ಟ ಪಡುವುದನ್ನು ನೋಡಿದ ತಾಯಿ ಪಾರಿವಾಳ ಸ್ವಲ್ಪವೂ ಯೋಚಿಸದೆ , ತಡಮಾಡದೆ ಬಲೆಯಲ್ಲಿ ಬಿದ್ದಿತು . ತನ್ನ ಮರಿ ಪಾರಿವಾಳಗಳು ,
ಹೆಂಡತಿ ಪಾರಿವಾಳ ಬಲೆಯಲ್ಲಿ ಬಿದ್ದಿರುವುದನ್ನು ನೋಡಿ ಗಂಡು ಪಾರಿವಾಳವು ಸಹ ಹಿಂದೆ ಮುಂದೆ ನೋಡದೆ ಹೆಂಡತಿ , ಮಕ್ಕಳನ್ನು ಕಾಪಾಡಲು ತಾನು ಬಲೆಗೆ ಬಿದ್ದಿತು .
ಮರಿ ಪಾರಿವಾಳಗಳ ಮೇಲಿನ ವ್ಯಾಮೋಹ ತಾಯಿ ಪಾರಿವಾಳ ಬಲೆಯಲ್ಲಿ ಬೀಳುವಂತೆ ಮಾಡಿತು . ಹೆಂಡತಿ , ಮಕ್ಕಳ ಮೇಲಿನ ವ್ಯಾಮೋಹದಿಂದ ವಿವೇಕ ಕಳೆದುಕೊಂಡು ಗಂಡು ಪಾರಿವಾಳ ಸಹ ಬಲೆಯಲ್ಲಿ ಬಿದ್ದಿತು , ಬೇಡನಿಗೆ ಲಾಭವೆ ಆಯಿತು .
ಈ ಸಂಸಾತವನ್ನು ಬೆಡನು ಹೊತ್ತುಕೊಂಡು ನಡೆದನು . “ ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ ವ್ಯಾಮೋಹವನು ತೊರೆದು ಬಾಳಬೇಕು ಏನು ಬಂದರು ಕೂಡ ತಾಳಬೇಕು ” ಎಂಬ ಕವಿಯ ಈ ಸಾಲುಗಳು ಪಾಠವಾಗಿ ನಿಲ್ಲುತ್ತವೆ .
ಮಕ್ಕಳು ಬಲೆಯಲ್ಲಿ ಬಿದ್ದಾಗ ತಾಯಿ ಪಾರಿವಾಳ ವ್ಯಾಮೋಹ ಬಿಟ್ಟು ಸ್ವಲ್ಪ ವಿವೇಕದಿಂದ ಯೋಚನೆ ಮಾಡಬೇಕಿತ್ತು . ಇದರಿಂದ ತನ್ನ ಪ್ರಾಣ ಉಳಿಯುತ್ತಿತ್ತು .
ಬೇಡನ ಬಲೆಯಲ್ಲಿ ಬಿದ್ದು ಮರಿ ಪಾರಿವಾಳಗಳ ಜೀವ ಹೋಗಬೇಕು ಎಂದು ಆ ವಿಧಿ ಬರೆದಿದ್ದರೆ ಯಾರು ತಾನೇ ತಪ್ಪಿಸಲು ಸಾಧ್ಯ ? ಎಂದು ತಾಯಿ ಪಾರಿವಾಳ ವಿವೇಕದಿಂದ ಯೋಚನೆ ಮಾಡಬೇಕಿತ್ತು .
ಇದೇ ರೀತಿ ಮರಿ ಪಾರಿವಾಳ , ಹೆಂಡತಿ ಪಾರಿವಾಳ ಬಲೆಯಲ್ಲಿ ಬಿದ್ದಾಗ ಗಂಡು ಪಾರಿವಾಳ ಯೋಚನೆ ಮಾಡಿದ್ದರೆ ಪಾರಿವಾಳಗಳ ಕುಟುಂಬ ಸರ್ವನಾಶವಾಗುತ್ತಿರಲಿಲ್ಲ . ಜೀವನ ಎಂದ ಮೇಲೆ ಕಷ್ಟ ನಷ್ಟ ಸಮಸ್ಯೆಗಳು ಬರುತ್ತವೆ .
ಸವಾಲುಗಳಿಗೆ ಹೆದರದೆ , ಬಾವುಕರಾಗಿ ಅನಾಹುತಗಳನ್ನು ಮಾಡಿಕೊಳ್ಳದೇ ವಿವೇಕದಿಂದ ಆಲೋಚಿಸಿ ಪರಿಹಾರ ಕಂಡುಕೊಳ್ಳಬೇಕು . ಎನೇ ಬಂದರು ಕಲ್ಲುಬಂಡೆಯಂತೆ ತಾಳಬೇಕು ಎಂದು ಕವಿ ಹೇಳಿದ್ದಾರೆ .
ಜೋಡಿ ಪಾರಿವಾಳಗಳ ದುಡುಕಿನ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ?
ಕಾಡಿನಲ್ಲಿ ಒಂದು ಪಾರಿವಾಳಗಳ ಕುಟುಂಬ ವಾಸ ಮಾಡುತ್ತಿರುತ್ತದೆ . ಇವುಗಳು ಆನಂದದಿಂದ ತನ್ನ ಮರಿ ಪಾರಿವಾಳಗಳೊಂದಿಗೆ ಬಾಳುತ್ತಿರುವ ಸಂದರ್ಭದಲ್ಲಿ ಬೇಡನೊಬ್ಬನು ಬಂದು ಬಲೆಯನ್ನು ಹಾಕುತ್ತಾನೆ .
ಈ ಬಲೆಯಲ್ಲಿ ಮೊದಲು ಮರಿ ಪಾರಿವಾಳಗಳು ಬೀಳುತ್ತವೆ . ತನ್ನ ಮಕ್ಕಳು ಬಲೆಯಲ್ಲಿ ಬಿದ್ದಿರುವುದನ್ನು ನೋಡಿ ತಾಯಿ ಪಾರಿವಾಳವು ಸಹ ಬಲೆಯಲ್ಲಿ ಬೀಳುತ್ತದೆ .
ಹೆಂಡತಿ ಪಾರಿವಾಳ , ಮಕ್ಕಳು ಪಾರಿವಾಳ ಬಲೆಯಲ್ಲಿ ಬಿದ್ದಿರುವುದನ್ನು ನೋಡಿ ಗಂಡು ಪಾರಿವಾಳವು ಸಹ ಬಲೆಯಲ್ಲಿ ಬೀಳುತ್ತದೆ . ಈ ರೀತಿ ಎಲ್ಲಾ ಪಾರಿವಾಳಗಳು ದುಡುಕಿನ ನಿರ್ಧಾರವನ್ನು ತೆಗೆದುಕೊಂಡು ಬಲೆಯಲ್ಲಿ ಬೀಳಬಾರದಿತ್ತು .
ಮರಿ ಪಾರವಾಳಗಳು ಬಲೆಯಲ್ಲಿ ಬಿದ್ದಾಗ ತಾಯಿ ಪಾರಿವಾಳವು ಏವೇಕದಿಂದ ಯೋಚಿಸಿ ‘ ನಾನು ಬಲೆಯಲ್ಲಿ ಬಿದ್ದರೆ ಮರಿ ಪಾರಿವಾಳಗಳನ್ನು ಕಾಪಾಡಲು ಸಾಧ್ಯವೇ ? ‘ ಎಂದು ಯೋಚಿಸಿದ್ದರೆ ತಾನು ಬದುಕುಳಿಯಬಹುದಿತ್ತು.
ಅದರಂತೆ ಮರಿ ಪಾರಿವಾಳಗಳು , ಹೆಂಡತಿ ಪಾರಿವಾಳ ಬೇಡನ ಬಲೆಯಲ್ಲಿ ಬಿದ್ದಾಗ ಹೆಂಡತಿಯನ್ನು ಬಿಟ್ಟಿರಲಾರದೆ ಗಂಡು ಪಾರಿವಾಳ ಬಿಕ್ಕಿ ಬಿಕ್ಕಿ ಅಳುತ್ತಾ ಒಳಗೆ ಹಾರಿತು . ಅದಕ್ಕಾಗಿ ಕಾಯುತ್ತಿದ್ದ ಬೇಡ ಪಾರಿವಾಳಗಳನ್ನು ಹೊತ್ತು ನಡೆದನು .
ವ್ಯಾಮೋಹವನ್ನು ತೊರೆದು ಬಾಳಬೇಕು ಏನೇ ಬಂದರು ತಾಳ್ಮೆಯಿಂದ ಯೋಚಿಸಿ ಕಾರ್ಯಸಾಧನೆ ಮಾಡಬೇಕು . ಎಂಬುದೇ ನಮ್ಮ ಅಭಿಪ್ರಾಯವಾಗಿದೆ .
9th standard kannada notes parivala poem
ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ Parivala Kannada Notes
ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ
” ಆಯ್ಕೆ : ಈ ವಾಕ್ಯವನ್ನು ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಬೇಡನು ಹಾಕಿದ ಬಲೆಗೆ ಸಿಲುಕಿದ ಪುಟ್ಟ ಮರಿಗಳನ್ನು ಕಂಡ ತಂದೆ – ತಾಯಿ ಪಾರಿವಾಳಗಳು ಕುರುಡು ವಾತ್ಸಲ್ಯದ ಅವಿವೇಕದಿಂದ ತಾವೂ ಬಲೆಗೆ ಸಿಲುಕಿ ಬೇಡನ ಪಾಲಾದವು .
ಮೋಹ ಎಂಬುದು ಸರ್ವನಾಶಕ್ಕೆ ಕಾರಣ ವ್ಯಾಮೋಹ ತೊರೆದು ತಾಳ್ಮೆಯಿಂದ ಯೋಚಿಸಿ ಕಾರ್ಯ ಸಾಧನೆ ಮಾಡಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ .
ಸ್ವಾರಸ್ಯ : ಮಕ್ಕಳು ಮರಿ , ಹೆಂಡತಿ , ನನ್ನ ಕುಟುಂಬ ಎಂಬ ವ್ಯಾಮೋಹದಿಂದ ಬದುಕಿದರೆ ಇಡೀ ಕುಟುಂಬವೇ ಸರ್ವನಾಶವಾಗುತ್ತದೆ . ಎಂಬುದನ್ನು ಕವಿ ಸ್ವಾರಸ್ಯ ಪೂರ್ಣವಾಗಿ ವಿವರಿಸಿದ್ದಾರೆ .
ಒಳಗೆ ಬಂದಿತು ಬಳಿಗೆ ಬಿಕ್ಕಿ ಬಿಕ್ಕಿ
ಆಯ್ಕೆ : ಈ ವಾಕ್ಯವನ್ನು. ಸು . ರಂ . ಎಕ್ಕುಂಡಿ ಅವರ ‘ ಸಮಗ್ರ ಕಥನ ಕವನಗಳು ‘ ಎಂಬ ಕೃತಿಯಿಂದ ಆಯ್ದ ‘ ಪಾರಿವಾಳ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ
ಸಂದರ್ಭ : ಬೇಡನು ಹಾಕಿದ ಬಲೆಗೆ ಮೊದಲು ಮರಿ ಪಾರಿವಾಳಗಳು ಬೀಳುತ್ತವೆ . ಇದನ್ನು ನೋಡಿದ ತಾಯಿ ಪಾರಿವಾಳವು ಮಮತೆ , ವಾತ್ಸಲ್ಯದಿಂದ ಬಲೆಗೆ ಬೀಳುತ್ತದೆ .
ಹೆಂಡತಿ , ಮಕ್ಕಳು ಬಲೆಯಲ್ಲಿ ಬಿದ್ದ ದುಃಖವನ್ನು ನೋಡಿ ಸಹಿಸದ ಗಂಡು ಪಾರಿವಾಳವು ಬಲೆಯಲ್ಲಿ ಬಿದ್ದ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಮರಿಗಳ ಮೇಲಿನ ಕುರುಡು ವಾತ್ಸಲ್ಯ , ಮಮತೆಯಿಂದ ತಾಯಿ ಪಾರಿವಾಳ , ಹೆಂಡತಿ , ಮಕ್ಕಳ ಮೇಲಿನ ವ್ಯಾಮೋಹದಿಂದ ವಿವೇಕ ಕಳೆದುಕೊಂಡು ಪಾರಿವಾಳ ಕುಟುಂಬ ನಾಶವಾಗಿರುವುದನ್ನು ಕವಿ ಸ್ವಾರಸ್ಯ ಪೂರ್ಣವಾಗಿ ಹೇಳಿದ್ದಾರೆ .
ಸಂಬಂದಿಸಿದ ಇತರೆ ವಿಷಯಗಳು
ರಾಮರಾಜ್ಯ ಪಾಠದ ಪ್ರಶ್ನೆ ಉತ್ತರಗಳು
That is a nice site . It was very much helpful for students.