namapada in kannada | kannada namapada | ಕನ್ನಡ ನಾಮಪದ | namapada definition in kannada

mixkit blue bubbles 295 0

ನಾಮಪದ

namapada in kannada, kannada namapada, ಕನ್ನಡ ನಾಮಪದ, FDA SDA Kannada Grammar Namapadagalu, ನಾಮಪದದ ಎಂದರೇನು?, FDA, SDA, KPSC, PDO, KAS, ನಾಮಪದ

ನಾವು ಮಾತನಾಡುವ ಮಾತುಗಳಲ್ಲಿ ಅನೇಕ ಬಗೆಯ ಶಬ್ದಗಳಿರುತ್ತವೆ . ಆ ಶಬ್ದಗಳಿಗೆ ನಾವು ಬೇರೆ ಬೇರೆ ಹೆಸರು ಕೊಟ್ಟಿರುತ್ತೇವೆ . ಅಂದರೆ ಒಂದೊಂದು ಜಾತೀಯ ಶಬ್ದಗಳನ್ನು ಒಂದೊಂದು ಗುಂಪು ಮಾಡಿ ವ್ಯಾಕರಣದಲ್ಲಿ ಹೇಳುತ್ತೇವೆ . ಉದಾಹರಣೆಗೆ ಈ ಕೆಳಗಿನ ಮಾತುಗಳಲ್ಲಿಯ ಶಬ್ದಗಳನ್ನು ನೋಡಿರಿ .

1. ಆತನು ಮನೆಯನ್ನು ಚೆನ್ನಾಗಿ ಕಟ್ಟಿದನು .

2. ಒಕ್ಕಲಿಗರು ಕಷ್ಟದಿಂದ ಬೆಳೆಯನ್ನು ಬೆಳೆಯುವರು .

ಈ ವಾಕ್ಯಗಳಲ್ಲಿ :

೧. ಆತನು , ಮನೆಯನ್ನು , ಒಕ್ಕಲಿಗರು , ಕಷ್ಟದಿಂದ , ಬೆಳೆಯನ್ನು – ಇವೆಲ್ಲ ನಾಮಪದಗಳು .

೨. ಕಟ್ಟಿದನು , ಬೆಳೆಯುವರು – ಇವು ಕ್ರಿಯಾಪದಗಳು .

೩. ಚೆನ್ನಾಗಿ – ಎಂಬುದು ಅವ್ಯಯ .

ಹೀಗೆ ನಾವು ಆಡುವ ಮಾತುಗಳನ್ನು ಮುಖ್ಯವಾಗಿ ಮೂರು ಗುಂಪುಗಳಾಗಿ ಮಾಡುತ್ತೇವೆ .

( ೧ ) ನಾಮಪದ

( ೨ ) ಕ್ರಿಯಾಪದ

 

namapada in kannada

( ೩ ) ಅವ್ಯಯ – ಇವೇ ಆ ಮೂರು ಗುಂಪುಗಳು . ಮನೆಯನ್ನು ಮನೆಯದೆಸೆಯಿಂದ ಮನೆಯಿಂದ ಮನೆಯ ಮನೆಗೆ . ಮನೆಯಲ್ಲಿ ಇವೆಲ್ಲ ‘ ನಾಮಪದ’ಗಳು . ಈ ಪದಗಳಲ್ಲೆಲ್ಲ ‘ ಮನೆ ‘ ಎಂಬುದು ಮೂಲರೂಪ . ಈ ಮೂಲರೂಪವಾದ ‘ ಮನೆ ‘ ಎಂಬ ಶಬ್ದವನ್ನು ನಾಮಪದದ ಮೂಲರೂಪ ಅಥವಾ ‘ ನಾಮಪ್ರಕೃತಿ ‘ ಎನ್ನುತ್ತೇವೆ .

ಕಟ್ಟಿದನು ‘ , ಕಟ್ಟುವನು , ಕಟ್ಟುತ್ತಾನೆ , ಕಟ್ಟಿದರು , ಕಟ್ಟನು , ಕಟ್ಟುವಳು , ಕಟ್ಟಲಿ – ಇವೆಲ್ಲ ಕ್ರಿಯಾಪದಗಳು . ಇವುಗಳಿಗೆ ಮೂಲರೂಪ , ‘ ಕಟ್ಟು ‘ ಎಂಬುದು . ಈ ‘ ಕಟ್ಟು ‘ ಎಂಬ ಮೂಲರೂಪವು ಕ್ರಿಯಾಪದದ ಮೂಲರೂಪ . ಇದಕ್ಕೆ ‘ ಧಾತು ‘ ಎಂಬ ಇನ್ನೊಂದು ಹೆಸರುಂಟು .

ಯಾವುದೇ ವ್ಯಕ್ತಿಯ, ವಸ್ತುವಿನ , ಸ್ಥಳದ, ಸಂಖ್ಯೆಯ ಅಥವಾ ಪ್ರಾಣಿಯ ಇತ್ಯಾದಿಗಳ ಹೆಸರನ್ನು ತಿಳಿಸುವ ಶಬ್ದಗಳಿಗೆ ನಾಮಪದ (Noun) ಎನ್ನುವರು.

ಉದಾಹರಣೆ:

ಕಮಲಳು ಊಟ ಮಾಡುತ್ತಿದ್ದಾಳೆ.
ಕೆಂಪುಕೋಟೆ ದೆಹಲಿಯಲ್ಲಿದೆ .
ಆಕಳು ಒಂದು ಸಾಕುಪ್ರಾಣಿ.
ಮಾವಿನ ಹಣ್ಣು ತುಂಬಾ ರುಚಿಯಾಗಿದೆ.
ಇಲ್ಲಿ ಕಮಲ, ಕೆಂಪುಕೋಟೆ, ದೆಹಲಿ. ಆಕಳು ಮಾವಿನಹಣ್ಣು ಇವೆಲ್ಲ ನಾಮಪದಗಳಾಗಿವೆ.

ನಾಮಪದಗಳ ಪ್ರಕಾರಗಳು ( Types of Noun)

ನಾಮಪದಗಳಲ್ಲಿ ಪ್ರಕಾರಗಳು ಈ ಕೆಳಗಿನಂತಿವೆ.

ವಸ್ತುವಾಚಕಗಳು
ಗುಣವಾಚಕಗಳು
ಸಂಖ್ಯಾವಾಚಕಗಳು
ಸಂಖ್ಯೆಯವಾಚಕಗಳು
ಭಾವನಾಮಗಳು
ಪರಿಮಾಣವಾಚಕಗಳು
ಪ್ರಕಾರವಾಚಕಗಳು
ದಿಗ್ವಾಚಕಗಳು
ಸರ್ವನಾಮಗಳು

೧. ಸಹಜವಾದ ನಾಮಪ್ರಕೃತಿಗಳು

೨. ಸಾಧಿತ (ನಿಷ್ಪನ್ನ)ಗಳಾದ ನಾಮಪ್ರಕೃತಿಗಳು

ಮನುಷ್ಯರ ಹೆಸರನ್ನು ಹೇಳುವಂಥವು

ಎರಡು ಮೂರು ಪದಗಳು ಸೇರಿ ಒಂದು ಪದವಾಗುವ ಸಮಾಸಗಳು
ಪ್ರಾಣಿಗಳ ಹೆಸರು ಹೇಳುವಂಥವು

ಕ್ರಿಯಾಪ್ರಕೃತಿ (ಧಾತು)ಯಿಂದ ಹುಟ್ಟಿದ ಕೃದಂತ ನಾಮಪ್ರಕೃತಿಗಳು
ವಸ್ತುಗಳ ಗುಣ, ಸ್ವಭಾವಗಳನ್ನು ಹೇಳುವಂಥವು

 ತದ್ಧಿತಪ್ರತ್ಯಯ ಸೇರಿ ಉಂಟಾದ ತದ್ಧಿತಾಂತ ನಾಮಪ್ರಕೃತಿಗಳು
ಕಾಲ, ಸ್ಥಾನ, ಅಳತೆ, ದಿಕ್ಕು, ಸಂಖ್ಯೆಗಳನ್ನು ಸೂಚಿಸುವ ಶಬ್ದಗಳು
ಈ ಮೇಲೆ ಸೂಚಿಸಿದಂತೆ ನಾಮಪ್ರಕೃತಿಗಳು ಮುಖ್ಯವಾಗಿ ಎರಡು ಬಗೆಯವು:

KANNADA GRIMMER

ಸಹಜ ನಾಮಪ್ರಕೃತಿಗಳು

ಸಾಧಿತಗಳಾದ ಸಮಾಸ, ಕೃದಂತ, ತದ್ಧಿತಾಂತಗಳು.

ಸಹಜ ನಾಮಪ್ರಕೃತಿಗಳು_ಉದಾಹರಣೆಗೆ:-

ಹೊಲ, ನೆಲ, ಜನ, ಮನೆ, ಮರ, ಕಲ್ಲು, ಪೂರ್ವ, ಮೂಡಣ, ಎರಡು, ಕರಿದು, ದೊಡ್ಡ, ಸಣ್ಣ-ಇತ್ಯಾದಿಗಳು.

(೨) ಸಾಧಿತ (ನಿಷ್ಪನ್ನ) ನಾಮಪ್ರಕೃತಿಗಳು_

(i) ಸಮಾಸಗಳು

[1]-ಮಳೆಗಾಲ, ದೊಡ್ಡಮರ, ಹೆಬ್ಬಾಗಿಲು, ಮುಕ್ಕಣ್ಣ, ಇಕ್ಕೆಲ, ಹೆಜ್ಜೇನು, ಹೆದ್ದೊರೆ-ಮುಂತಾದವು.
(ii) ಕೃದಂತಗಳು

[2]-ಮಾಡಿದ, ಮಾಡುವಿಕೆ, ಮಾಟ, ಓಟ, ಓದುವ, ಓದಿದ, ತಿನ್ನುವ, ಇತ್ಯಾದಿಗಳು.

(iii) ತದ್ಧಿತಾಂತಗಳು

[3]-ಒಕ್ಕಲಿಗ, ಗಾಣಿಗ, ಹಾವಾಡಿಗ, ಮೋಸಗಾರ, ಒಕ್ಕಲುಗಿತ್ತಿ, ಜಾಣೆ, ದೊಡ್ಡತನ, ಮಾಲೆಗಾರ-ಇತ್ಯಾದಿಗಳು.

ನಾಮಪದ

Leave a Reply

Your email address will not be published. Required fields are marked *