Kannada Letters, ಶಾಲೆಯ ಮುಖ್ಯೋಪಾಧ್ಯಾಯರಿಗೆ ರಜೆಯ ಪತ್ರ, letter writing in kannada, kannada basic letters, letter writing kannada, ಪತ್ರ ಲೇಖನ, essay
Kannada Letters writing in kannada for class teacher
ಶಾಲೆಯ ಮುಖ್ಯೋಪಾಧ್ಯಾಯರಿಗೆ ರಜೆಯ ಪತ್ರ
ಬೆಂಗಳೂರು
1-01-20022
ಇವರಿಗೆ,
ಮುಖ್ಯೋಪಾಧ್ಯಾಯರು
ಕಮಲನೆಹರು ಪ್ರೌಢಶಾಲೆ,
ಬಸವನಗುಡಿ,
ಬೆಂಗಳೂರು-560004
ಮಾನ್ಯರೇ,
ವಿಷಯ: ತಾರೀಖಿ 02-01.2022 ರಿಂದ 5.01.2022
(ಮೂರೂ ದಿನಗಳು ಸೇರಿ) ರವರೆಗೆ ರಜೆಗಾಗಿ ಮನವಿ.
ನನ್ನ ಅಕ್ಕನ ಮದುವೆ 02-01-2022 ರಂದು ನಂಜನಗೂಡಿನಲ್ಲಿ ನಡೆಯಲಿರು ವುದರಿಂದ ಕೃಪೆ ಮಾಡಿ 5.01.2022 ರಿಂದ 5.01.2022ರವರೆಗೆ (ಮೂರೂ ದಿನಗಳು ಸೇರಿ) ನನ್ನ ಗೈರುಹಾಜರಿಯನ್ನು ಮನ್ನಿಸಿ, ರಜೆ ದಯಪಾಲಿಸಲು ವಿನಮ್ರತೆಯೊಂದಿಗೆ ಪ್ರಾರ್ಥಿಸುತ್ತೇನೆ.
ಇದರೊಂದಿಗೆ ವಿವಾಹದ ಕರೆಯೋಲೆಯೊಂದನ್ನು ಸಹ ತಮಗೆ ತಲುಪಿಸುತ್ತಿದ್ದೇನೆ.
ತಮ್ಮ ವಿಧೇಯ ಶಿಷ್ಯ, ಬಿ. ರಘುರಾಮ 10ನೇ ತರಗತಿ, 'ಬಿ' ವಿಭಾಗ,
ಲಗತ್ತಿಸಿರುವುದು
ಮದುವೆಯ ಕರೆಯೋಲೆ.
letter writing in kannada
ತಂದೆಗೆ ಮಗನ ಪತ್ರ
ಕ್ಷೇಮ ಬಿಜಾಪುರ
09.09.2003
ತೀರ್ಥರೂಪರವರಿಗೆ ಭಾನು ಮಾಡುವ ಸಾಷ್ಟಾಂಗ ನಮಸ್ಕಾರಗಳು.
ಉಭಯಕುಶಲೋಪರಿ ಸಾಂಪ್ರತ,
ನನ್ನ ಅಂತಿಮ ಪರೀಕ್ಷೆ ಬೇಗ ಬರುತ್ತಿದೆ. ಕಷ್ಟಪಟ್ಟು ಓದುತ್ತಾ, ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದೇನೆ. ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗುವ ಗುರಿ ಉಳ್ಳವನಾಗಿದ್ದೇನೆ. ನನ್ನ ಉಪಾಧ್ಯಾಯರೆಲ್ಲರೂ ಈ ಬಗ್ಗೆ ನನ್ನಲ್ಲಿ ಉತ್ಸಾಹ-ಉತ್ತೇಜನ ತುಂಬುತ್ತಿದ್ದಾರೆ. ನಮ್ಮ ಶೈಕ್ಷಣಿಕ ಪ್ರವಾಸ ಮುಗಿದಿದೆ.
ಮನೆಯಲ್ಲಿ ನನ್ನ ತಂಗಿ, ತುಂಗಾ ಹಾಗೂ ತಮ್ಮ ತರುಣ ಚೆನ್ನಾಗಿ ಓದುತ್ತಿರುವರೆಂದು ಭಾವಿಸಿದ್ದೇನೆ. ಮಾತೃಶ್ರೀ ಅವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ. ಪರೀಕ್ಷೆ ಮುಗಿದನಂತರ ಮಿಕ್ಕ ವಿಷಯಗಳನ್ನು ಸಮಕ್ಷಮ ಮಾತಾಡುತ್ತೇನೆ.
ಇಂತಿ ನಮಸ್ಕಾರಗಳು.
ನಿಮ್ಮ ಪ್ರೀತಿಯ ಮಗ,
(ಸಹಿ) ಭಾನುಚಂದ್ರ
ವಿಳಾಸ
ಇವರಿಗೆ,
ಸನ್ಮಾನ್ಯ ಬಿ.ವಿ. ರಂಗನಾಥರಾವ್
438, 5ನೇ ಅಡ್ಡರಸ್ತೆ,
ಜಿ.ಕೆ, ಡಬ್ಲ್ಯೂ ಲೇಔಟ್,
ಬೆಂಗಳೂರು-560040
letter writing in kannada for class teacher
ನಮ್ಮ ಮಗು ಶಾಲೆಗೆ ರಜೆ ಹಾಕಿದ ಬಗ್ಗೆ ವಿವರಣೆ ನೀಡಿ ಹೇಗೆ ಪತ್ರ ಬರೆಯುವುದು?
ಪತ್ರದಲ್ಲಿ ವಿಷಯವನ್ನು ನಮೂದಿಸಿ ಯಾವ ಕಾರಣಕ್ಕಾಗಿ ಶಾಲೆಗೆ ಗೈರಾಗಿದ್ದು ಎಂಬುದನ್ನು ಸ್ಪಷ್ಟಪಡಿಸಿರಿ. ಮತ್ತು ಆ ದಿನಗಳ ಪಾಠವನ್ನು ಆದಷ್ಟು ಬೇಗ ಕಲಿತು ಮುಂದಿನ ಕಲಿಕೆಗೆ ಸಿದ್ಧರಾಗುವ ಭರವಸೆಯನ್ನು ನೀಡಿರಿ. ಅರ್ಜಿಗಳನ್ನು ಬರೆಯಲು ಹಲವಾರು ನಮೂನೆಗಳಿವೆ. ಒಂದು ಮಾದರಿಯನ್ನು ಕೆಳಗೆ ತಿಳಿಸಿದ್ದೇನೆ.
ಇಂದ,
ನಿಮ್ಮ ಹೆಸರು
ವಿಳಾಸ
ದಿನಾಂಕ:ದಿನ/ತಿಂಗಳು/ವರ್ಷ
ಇವರಿಗೆ,
ವರ್ಗ ಶಿಕ್ಷಕ/ಶಿಕ್ಷಕಿ
ಶಾಲೆಯ ಹೆಸರು
ವಿಷಯ : ಎರಡು ದಿನದ ರಜೆ ಕೋರಿ ಅರ್ಜಿ
ಪೂಜ್ಯರೇ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ತಿಳಿಯಪಡಿಸುವದೇನೆಂದರೆ ತಮ್ಮ ಶಾಲೆಯ —- ತರಗತಿಯಲ್ಲಿ ಓದುತ್ತಿರುವ ನನ್ನ ಮಗ/ಮಗಳು (ಹೆಸರು ಬರೆಯಿರಿ) ಕಳೆದ ಎರಡು ದಿನಗಳಿಂದ (ದಿನಾಂಕವನ್ನು ನಮೂದಿಸಿ) ಅನಾರೋಗ್ಯದ ಕಾರಣದಿಂದಾಗಿ (ಅಥವಾ ಯಾವ ಕಾರಣಕ್ಕಾಗಿ ರಜೆ ಕೋರುತ್ತಿದ್ದಿರೋ ಅದನ್ನು ನಮೂದಿಸಿ) ಶಾಲೆಗೆ ಹಾಜರಾಗಿರುವದಿಲ್ಲ.
ಆದ್ದರಿಂದ ಎರಡು ದಿನಗಳ ರಜೆಯನ್ನು ಪರಿಗಣಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ನನ್ನ ಮಗ/ಮಗಳು ಈ ಎರಡು ದಿನಗಳ ಪಾಠವನ್ನು ಸಾಧ್ಯವಾದಷ್ಟು ಬೇಗ ಪೂರ್ತಿಗೊಳಿಸಲು ಪ್ರಯತ್ನಿಸುತ್ತಾನೆ/ಳೆ ಎಂಬ ವಿಶ್ವಾಸವಿದೆ. ದಯವಿಟ್ಟು ನಮ್ಮ ಮನವಿಯನ್ನು ಪರಿಗಣಿಸಬೇಕಾಗಿ ವಿನಂತಿ.
ಧನ್ಯವಾದಗಳು.
ತಮ್ಮ ವಿಶ್ವಾಸಿ
ಸಹಿ
ಹೆಸರು
ಶಾಲೆಗೆ ಗೈರುಹಾಜರಿ ಪತ್ರವನ್ನು ಹೇಗೆ ಬರೆಯುವುದು?
ಕಾರ್ತಿಕ್
10ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಉಡುಪಿ
2–01–2019
ಮುಖ್ಯ ಶಿಕ್ಷಕರು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಉಡುಪಿ
ಮಾನ್ಯರೆ,
ವಿಷಯ:ಎರಡು ದಿನ ರಜೆ ಕೋರಿ ಅರ್ಜಿ.
ಮೇಲ್ಕಂಡ ವಿಷಯಕ್ಕೆ ಸಂಭದಿಸಿದಂತೆ ನಾನು 3–01–2019 ಮತ್ತು 4–01–2019 ಕ್ಕೆ ಬೆಂಗಳೂರಿನಲ್ಲಿ ನಡೆಯುವ ಸಮಾರಂಭಕ್ಕೆ ಹೋಗಬೇಕಾಗಿರುವುದರಿಂದ ನನಗೆ ಈ ಎರಡು ದಿನ ರಜೆ ಬೇಕಾಗಿದೆ.
ನೀವು ನಂಗೆ ಈ ಎರಡು ದಿನ ರಜೆ ಕೊಡುತ್ತೀರ ಎಂದು ಭಾವಿಸುತ್ತೇನೆ.ಧನ್ಯವಾದ.
ನಿಮ್ಮ ವಿಧೇಯ ವಿದ್ಯಾರ್ಥಿ
Xxxxxx
ಕೆಳಗಿನ ಮಾದರಿಯನ್ನು ಕೂಡ ಗಮನಸಿ
ಪತ್ರಲೇಖನ ಎಂದರೇನು
ನಮ್ಮ ಎದುರಿಗೆ ಇರುವವರ ಜೊತೆ ಸಂಭಾಷಣೆ ನಡೆಸಿದಂತೆ ದೂರದಲ್ಲಿರುವ (ಬೇರೆಡೆಯಲ್ಲಿ ವಾಸಿಸುತ್ತಿರುವ)ವ್ಯಕ್ತಿಗಳ ಜೊತೆ ಮಾತುಕತೆಗೆ ,ಪರಸ್ಪರ ವಿಚಾರ ವಿನಿಮಯಕ್ಕೆ ಬಳಕೆಯಾಗುವ ಪರಿಣಾಮಕಾರಿ ಸಾಧನ ಪತ್ರ.
ಇತರೆ ಲಿಂಕ್
samanya kannada question paper
ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು notes