ನವಶಿಲಾಯುಗ (Neolithic Age ) ಕ್ರಿ.ಪೂ. 4000-1,800
ನವ ಶಿಲಾಯುಗ ಭಾರತದ ಇತಿಹಾಸ, ಕರ್ನಾಟಕದಲ್ಲಿ ನವ ಶಿಲಾಯುಗದ ನೆಲೆಗಳು, ನವೀನಶಿಲಾಯುಗದಲ್ಲಿ ಮಾನವ ಪ್ರಾರಂಭಿಕ ಶಿಲಾ ಪರಿರಕರಗಳನ್ನು ಒಂದು ಕಲ್ಲಿನಿಂದ ಇನ್ನೊಂದು ಕಲ್ಲಿಗೆ ಹೊಡೆದು ತಯಾರಿಸುತ್ತಿದ್ದು, ಶಿಲಾಪರಿಕರಗಳು ಗಡುಸು, ನಯವಲ್ಲದ ಮೇಲ್ಮೈ ಪಡೆದಿರುತ್ತಿದ್ದವು.
Indian History Neolithic Age
ನೆಲೆಗಳು :
- ಕಾಶ್ಮೀರ ಕಣಿವೆ
- ವಿಂಧ್ಯ ಪರ್ವತ
- ಮೆಹಘರ್ ( ಬಲೂಚಿಸ್ತಾನ್ )
- ಪಯ್ಯಂಪಳ್ಳಿ , ಗೌರಿಮೇಡು , ಮಂಗಲು ( ತಮಿಳುನಾಡು )
- ಪಶ್ಪಾಡು , ಕೇಸರಪಿ ನಾಗಾರ್ಜುನ ಕೊಂಡ ( ಆಂಧ್ರಪ್ರದೇಶ
ಕರ್ನಾಟಕದಲ್ಲಿನ ನೆಲೆಗಳು :
- ಹಳೂರು ( ಧಾರವಾಡ )
- ಲಿಂಗಸಗೂರು ( ರಾಯಚೂರು ಜಿಲ್ಲೆ ) ಭಾರತದಲ್ಲಿ ಮೊದಲು ಗಮನಿಸಿದ ನೂತನ ಶಿಲಾಯುಗದ ನೆಲೆ ಇರು – 1842 ರಲ್ಲಿ ಡಾ . ಪೈಪ್ರೋಸ್ ( Pimrose ) ರವರಿಂದ ಶೋಧನೆಯಾಯಿತು .
- ಚಂದ್ರವಳ್ಳಿ , ಬ್ರಹ್ಮಗಿರಿ ( ಚಿತ್ರದುರ್ಗ )
- ಟಿ . ನರಸೀಪುರ , ಹೆಮ್ಮಿಗೆ ( ಮೈಸೂರು )
- ಬನಹಳ್ಳಿ ( ಕೋಲಾರ ) .
- ಸಂಗನಕಲ್ಲು , ತೆಕ್ಕಲಕೋಟೆ ( ಬಳ್ಳಾರಿ )
ನವ ಶಿಲಾಯುಗ ಭಾರತದ ಇತಿಹಾಸ
nava shilayuga History in kannada
ಲಕ್ಷಣಗಳು :
- ಕೃಷಿ ಆಧಾರಿತ ಬದುಕು ಆರಂಭ ( ಸ್ಥಿರಜೀವನ )
- ಪ್ರಾಣಿಗಳನ್ನು ಪಳಗಿಸುವ ಕಲೆ ಪ್ರಾರಂಭ , ನಾಯಿ , ಹಸು , ಕುರಿ , ಆಡು ಇತ್ಯಾದಿ
- ತಮಿಳುನಾಡಿನ ತಿರುನಲ್ವೇಲಿಯ ಆದಿಚನ್ನಯೂರಿನಲ್ಲಿ 14 ಎಕರೆ ವಿಸ್ತಾರವಾದ ದೊಡ್ಡದಾದ ನೂತನ ಶಿಲಾಯುಗದ ಸಮಾಧಿ ದೊರೆತಿದೆ .
- ಕ್ರಿ.ಪೂ. 6000 ದ ವೇಳೆಗೆ – ಭಾರತ ಉಪಖಂಡದಲ್ಲಿ ಭತ್ತ ಬಾರ್ಲಿ , ಗೋಧಿ , ಆಹಾರ ಧಾನ್ಯ ಬೆಳೆಯುವ ಕಲೆ ಪ್ರಾರಂಭವಾಯಿತು .
- ಸಾಮೂಹಿಕ ವಾಸದಿಂದಾಗಿ ಹಳ್ಳಿಗಳ ರಚನೆ ಪ್ರಾರಂಭ
- ಚಕ್ರದ ಸಹಾಯದಿಂದ ಮಣ್ಣಿನಿಂದ ಮಡಕೆ ಮಾಡುವ ಕಲೆ ಆರಂಭ
- ಕಪ್ಪು , ಕೆಂಪು , ಬೂದು ಬಣ್ಣದ ಮಣ್ಣಿನ ಮಡಿಕೆಗಳು ದೊರೆತಿವೆ . ಮಡಿಕೆಗಳ ಮೇಲೆ ಚಿತ್ರ ಬಿಡಿಸಲಾಗುತ್ತಿತ್ತು , * ಪುನರ್ಜನ್ಮದಲ್ಲಿ ನಂಬಿಕೆ ಬೆಳೆಯಿತು . ಮನುಷ್ಯನೊಡನೆ ಸಾಕು ನಾಯಿಯನ್ನು ರಾಬಳಲಾಗುತ್ತಿತ್ತು .
- ಹರಿತವಾದ , ನುಣಪಾದ ಹೊಳಪುಳ್ಳ ಅಯುಧಗಳ ಬಳಕೆ
- ಮೂಳೆಗಳಿಂದ ಆಯುಧಗಳ ರಚನೆ
ಇತರೆ ಪ್ರಬಂಧಗಳನ್ನು ಓದಿ
- ಬೆಳವಡಿ ಮಲ್ಲಮ್ಮ ಜೀವನ ಚರಿತ್ರೆ
- ಕೆಳದಿ ಚೆನ್ನಮ್ಮ ಇತಿಹಾಸ
- ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ
- ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಮಾಹಿತಿ
- ಸುಭಾಷ್ ಚಂದ್ರ ಬೋಸ್ ಬಗ್ಗೆ ಮಾಹಿತಿ
- ಸಿದ್ದಲಿಂಗಯ್ಯ ಅವರ ಪರಿಚಯ