Durgasimha Kavi Parichaya in Kannada | ದುರ್ಗಸಿಂಹ ಕವಿ ಪರಿಚಯ

Durgasimha Kavi Parichaya in Kannada | ದುರ್ಗಸಿಂಹ ಕವಿ ಪರಿಚಯ

Durgasimha Kavi Parichaya in Kannada, ದುರ್ಗಸಿಂಹ ಕವಿ ಪರಿಚಯ, durgasimha information in kannada, durgasimha panchatantra stories in kannada, pdf

Durgasimha Kavi Parichaya in Kannada

ಹಳಗನ್ನಡದ ಪ್ರಮುಖ ಕವಿಗಳಲ್ಲೊಬ್ಬನು.

ಕಾಲ ಕ್ರಿ.ಶ.1030 ಎಂದು ಸಾಹಿತ್ಯ ಚರಿತ್ರಕಾರರ ಅಭಿಪ್ರಾಯವಾಗಿದೆ.

ಕರ್ಣಾಟ ಪಂಚತಂತ್ರ – ದುರ್ಗಸಿಂಹ ರಚಿಸಿದ ಮಹತ್ವಪೂರ್ಣ ಚಂಪೂ ಕಾವ್ಯ. ಗದ್ಯ ಪದ್ಯಗಳಿಂದ ಕೂಡಿರುವ ಗ್ರಂಥ.

ಚಾಲುಕ್ಯ ರಾಜನಾಗಿದ್ದ ಜಗದೇಕಮಲ್ಲ ಬಳಿ ದಂಡನಾಯಕನೂ ಸಂಧಿವಿಗ್ರಿಹಿಯೂ ಆಗಿದನು ವಸುಭಾಗಭಟ್ಟನ್ನು ಸಂಸ್ಕೃತದಲ್ಲಿ ರಚಿಸಿದ ಪಂಚತಂತ್ರ ವನ್ನು ಕನ್ನಡಕ್ಕೆ ತಂದವನು .

ಗುರು : ಶಂಕರಭಟ್ಟ

ಸ್ಥಳ :ಈತ ಇದ್ದದ್ದು ಕಿಸುನಾಡಿನ ಸಯ್ಯಡಿ ಎಂಬ ಅಗ್ರಹಾರದಲ್ಲಿ.

ಈತ ತನ್ನ ಪ್ರಭವಿನ ಆಣತಿಯಂತೆ ಹರಿಹರ ದೇವಾಲಯಗಳನ್ನು ಕಟ್ಟಿಸಿದನು.ಇದು ಐದು ತಂತ್ರಗಳನ್ನು ಕಥೆಗಳ ಮೂಲಕ ಬೋಧಿಸುವ ಚಂಪು ಕಾವ್ಯ ಪಂಚತಂತ್ರ .

ಬಾಲ್ಯ ಜೀವನ

ಜನನ ಸ್ಥಳ : ಕಿಸುಕಾಡನಾಡು

ತಂದೆ : ಈಶ್ವರಾಚಾರ್ಯ

ತಾಯಿ : ರೇವಾಂಬಿಕೆ

ಗುರು : ಮಹಾಯೋಗಿ ಶಂಕರಭಟ್ಟ

ಈತ ಹೆಸರುವಾಸಿಯಾಗಿದ್ದ ದುರ್ಗಮಯ್ಯನ ಮೊಮ್ಮಗ.

ಕಮ್ಮೆ ಕುಲದ ಸ್ಮಾರ್ತ ಬ್ರಾಹ್ಮಣ.

ಗೌತಮ ಗೋತ್ರದವ.

ಜಗದೇಕಮಲ್ಲನ ಆಸ್ಥಾನದಲ್ಲಿ ಕುಮಾರಸ್ವಾಮಿ ಎಂಬಾತ ತನಗೆ ಸಂಧಿವಿಗ್ರಹಿ ಪದವಿಯನ್ನು ಕೊಡಿಸಿದನೆಂದು ಈತನೇ ತನ್ನ ಗ್ರಂಥದಲ್ಲಿ ಹೇಳಿದ್ದಾನೆ.

ದುರ್ಗಸಿಂಹ ರಾಜತಂತ್ರ ನಿಪುಣನಾಗಿದ್ದನೆಂಬುದರಲ್ಲಿ ಸಂದೇಹವಿಲ್ಲ.

ರಾಜ ಜಗದೇಕಮಲ್ಲನ ಆಣತಿಯಂತೆ ತಾನು ಸೈಯಡಿಯಲ್ಲಿ ಹರಿಹರಭವನಗಳನ್ನು ಕಟ್ಟಿಸಿರುವುದಾಗಿಯೂ ತಿಳಿಸಿದ್ದಾನೆ.

ಈತನ ಸಾಹಿತ್ಯಕೃತಿಗಳು

ದುರ್ಗಸಿಂಹ ಕರ್ಣಾಟಕ ಪಂಚತಂತ್ರ ಕಾವ್ಯವು ಇಂದು ಪ್ರಸಿದ್ಧವಾಗಿರುವ ವಿಷ್ಣುಶರ್ಮನ ಪಂಚತಂತ್ರದ ಅನುವಾದವಲ್ಲ.
ಗುಣಾಢ್ಯನು ಪೈಶಾಚಿಭಾಷೆಯಲ್ಲಿ ಬರೆದ ಬೃಹತ್ಕಥೆಯನ್ನು ಆಧಾರವಾಗಿ ಇಟ್ಟುಕೊಂಡು ವಸುಭಾಗಭಟ್ಟನು ರಚಿಸಿದ ಪಂಚತಂತ್ರ ಎಂಬ ಸಂಸ್ಕೃತ ಕೃತಿಯೇ ನನ್ನ ಕಾವ್ಯಕ್ಕೆ ಆಧಾರವೆಂದು ದುರ್ಗಸಿಂಹನು ಹೇಳಿದ್ದಾನೆ.


ಪಂಚತಂತ್ರಗಳಾದ ಭೇದ, ಪರೀಕ್ಷಾ, ವಿಶ್ವಾಸ, ವಂಚನೆ ಮತ್ತು ಮಿತ್ರಕಾರ್ಯ ಇವುಗಳ ಮೇಲೆ ಕಥೆ, ಉಪಕಥೆಗಳನ್ನು ಹೆಣೆದು ರಚಿಸಿದ ಕಾಲ್ಪನಿಕ ಕೃತಿ.
ದುರ್ಗಸಿಂಹನು ಮತಪ್ರಚಾರಕ್ಕಾಗಿ ಕೃತಿ ರಚನೆಗೆ ತೊಡಗಿದವನಲ್ಲ. ಆದರೂ ಪಂಚತಂತ್ರದಲ್ಲಿ ಕೊಂಚ ಜೈನ ಧರ್ಮದ ಆವರಣದಲ್ಲಿ ಮೂಡಿ ಬಂದಿದೆ.
ಚಂಪೂ ಸಂಪ್ರದಾಯ ಶೈಲಿಯಲ್ಲಿ ಬರೆದಿದ್ದರೂ ಸಂಸ್ಕೃತ ಶಬ್ದಗಳನ್ನು ಸೂಕ್ತವಾಗಿ ಬಳಸಲಾಗಿದೆ.

ಜೊತೆಗೆ ಕನ್ನಡದ ಗಾದೆಗಳನ್ನು ಬಹಳ ಹಿತವಾಗಿ ಬಳಸಿಕೊಂಡು ಕನ್ನಡದ ಗದ್ಯದ ಬೆಳವಣಿಗೆಗೆ ಸಹಾಯ ಮಾಡಿದ್ದಾನೆ.
ಪಂಚತಂತ್ರದಲ್ಲಿ ಪ್ರಾಣಿಪಕ್ಷಿ, ಜಡವಸ್ತುಗಳು ಪ್ರಧಾನ ಪಾತ್ರಗಳಾಗಿ ಮಾನವರ ರೀತಿಯಲ್ಲಿ ಮಾತನಾಡುವುದನ್ನು ಕಾಣಬಹುದು.

ಇದರಲ್ಲಿ ಚಿತ್ರಿತವಾದ ಪಾತ್ರಗಳಾದ ಪಿಂಗಳಿಕ ಎಂಬ ಸಿಂಹ, ಸಂಜೀವಕ ಎಂಬ ಎತ್ತು, ಕರಟಕ ದಮನಕರೆಂಬ ನರಿಗಳು, ಹಿರಣ್ಯರೋಮ ಎಂಬ ಇಲಿ ..ಮುಂತಾದವುಗಳು ಓದುಗರ ಮನಸ್ಸಿನಲ್ಲಿ ಅಚ್ಚೊತ್ತಿದೆ ಎಂದರೆ ಅದರಲ್ಲಿ ಅತಿಶಯೋಕ್ತಿಯೇನಿಲ್ಲ.

ಪಂಚತಂತ್ರ ಸಾಹಿತ್ಯದ ಇತಿಹಾಸ

ಪಂಚತಂತ್ರದ ಮೂಲ ಪಠ್ಯವು ಕಳೆದುಹೋಗಿದ್ದರೂ, ಇದು 300 CE ಯಲ್ಲಿ ಸಂಸ್ಕೃತದಲ್ಲಿ ಬರೆಯಲ್ಪಟ್ಟ ಸ್ವತಂತ್ರ ಕೃತಿಯಾಗಿದೆ.
ಪಠ್ಯದೊಳಗೆ ಅದರ ಸಂಯೋಜಿತ ಲೇಖಕನನ್ನು ಸಾಮಾನ್ಯವಾಗಿ ವಿಷ್ಣು ಶರ್ಮಾ ಎಂದು ನೀಡಲಾಗುತ್ತದೆ , ಆದರೆ ಇದು ಕಾಲ್ಪನಿಕ ಕಥೆ ಹೇಳುವ ವ್ಯಕ್ತಿಗೆ ವಿರುದ್ಧವಾಗಿ ನಿಜವಾದ ವ್ಯಕ್ತಿ ಎಂದು ಸೂಚಿಸುವ ಯಾವುದೇ ಪುರಾವೆಗಳಿಲ್ಲ.
ದುರ್ಗಸಿಂಹನ ಅನುವಾದವು “ದಕ್ಷಿಣ ಪಂಚತಂತ್ರ ” ಎಂದು ಕರೆಯಲ್ಪಡುವ ಮೇಲೆ ಆಧಾರಿತವಾಗಿದೆ – ಇದು ಮೂಲವನ್ನು ಹೋಲುವ ಆವೃತ್ತಿಯಾಗಿದೆ, ಇದು ಹಲವಾರು ಇತರ ಭಾರತೀಯ ಸ್ಥಳೀಯ ಆವೃತ್ತಿಗಳನ್ನು ಮತ್ತು ಹಿತೋಪದೇಶವನ್ನು ಹುಟ್ಟುಹಾಕಿದೆ .

ಪೌರಾಣಿಕ ಮೂಲ

ಪಂಚತಂತ್ರ -ಚಂಪೂರೂಪದಲ್ಲಿದೆ.

ಇದರಲ್ಲಿ 5 ತಂತ್ರಗಳಿವೆ.

ಒಂದೊಂದು ತಂತ್ರಕ್ಕೂ ಒಂದೊಂದು ಅಧ್ಯಾಯವಿದೆ.

ಮೊದಲನೆಯ ತಂತ್ರದಲ್ಲಿ ಭೇದ ಪ್ರಕರಣವಿದೆ,

2ನೆಯದರಲ್ಲಿ ಪರೀಕ್ಷಾ ವ್ಯಾವರ್ಣನೆ

3ನೆಯದರಲ್ಲಿ ವಿಶ್ವಾಸ ಪ್ರಕರಣ

4ನೆಯದರಲ್ಲಿ ವಂಚನಾ ಪ್ರಕರಣ

5ನೆಯರದಲ್ಲಿ ಮಿತ್ರಕಾರ್ಯ ವರ್ಣನೆ ಇವೆ.

ಒಂದನೆಯ ಪ್ರಕರಣದಲ್ಲಿ ಎತ್ತಿಗೂ ಸಿಂಹಕ್ಕೂ ಉಂಟಾದ ಗೆಳೆತನವನ್ನು ನರಿ ಮುರಿದ ಕಥೆಯನ್ನೂ ಎರಡನೆಯದರಲ್ಲಿ ಬ್ರಾಹ್ಮಣನೊಬ್ಬ ಮುಂಗುಸಿಯನ್ನು ಕೊಂದ ಕಥೆಯನ್ನೂ ಮೂರನೆಯದರಲ್ಲಿ ಕಾಗೆಗಳು ಗೂಬೆಗಳ ಗುಹೆಯನ್ನು ಸುಟ್ಟ ಕಥೆಯನ್ನೂ ನಾಲ್ಕನೆಯದರಲ್ಲಿ ಕಪಿ ಮೊಸಳೆಯನ್ನು ವಂಚಿಸಿದ ಕಥೆಯನ್ನೂ ಐದನೆಯದರಲ್ಲಿ ಕಾಗೆ, ಆಮೆ, ಸಾರಂಗ ಮತ್ತು ಇಲಿಗಳ ಸ್ನೇಹದ ಕಥೆಯನ್ನೂ ಕಾಣಬಹುದಾಗಿದೆ.

ಕಾವ್ಯದ ಆರಂಭದಲ್ಲಿ ಕವಿ ತ್ರಿಮೂರ್ತಿಗಳನ್ನೂ ಸರಸ್ವತಿ ಚಂದ್ರ ಮನ್ಮಥ ಸೂರ್ಯ ವಿನಾಯಕ ದುರ್ಗಿಯರನ್ನೂ ಸ್ತೋತ್ರ ಮಾಡಿದ್ದಾನೆ.

ಅನಂತರ ವಾಲ್ಮೀಕಿ ವ್ಯಾಸ ನೀತಿಶಾಸ್ತ್ರಕಾರರು ಮತ್ತು ಚಂದ್ರಗುಪ್ತನಿಗೆ ರಾಜ್ಯವನ್ನು ಕೊಡಿಸಿದ ನೀತಿವಿದನಾದ ವಿಷ್ಣುಗುಪ್ತ-ಇವರುಗಳನ್ನು ಸ್ತುತಿಸಿದ್ದಾನೆ.

ಗುಣಾಢ್ಯ ವರರುಚಿ ಕಾಳಿದಾಸ ಬಾಣ ಭಾರವಿ ಮೊದಲಾದ ಸಂಸ್ಕøತ ಕವಿಗಳನ್ನೂ ಶ್ರೀವಿಜಯ ಕನ್ನಮಯ್ಯ ಚಂದ್ರ ಪೊನ್ನ ಪಂಪ ಗಜಾಂಕುಶ ಕವಿತಾ ವಿಲಸ ಎಂಬ ಕನ್ನಡ ಕವಿಗಳನ್ನೂ ಸ್ಮರಿಸಿದ್ದಾನೆ. ಶ್ರೀ ಮಾದಿರಾಜ ಮುನಿಪುಂಗವರು ತನ್ನ ಗ್ರಂಥವನ್ನು ತಿದ್ದಿಕೊಟ್ಟರೆಂದೂ ಹೇಳಿದ್ದಾನೆ.

ಇದರಲ್ಲಿ 457 ಪದ್ಯಗಳೂ 230 ಶ್ಲೋಕಗಳೂ 48 ಉಪಕಥೆಗಳೂ ಇವೆ. ಚಂಪೂ ರೂಪದಲ್ಲಿದ್ದರೂ ಇದರಲ್ಲಿ ಗದ್ಯವೇ ಹೆಚ್ಚಾಗಿದೆ.

ಇಲ್ಲಿ ಬರುವ ಕಥೆಗಳು ಮೃಗಪಕ್ಷಿಗಳಿಗೆ ಸಂಬಂಧಿಸಿದವು. ಇವು ಸ್ವಾರಸ್ಯವಾಗಿರುವುವಲ್ಲದೆ ರಾಜನೀತಿ ವ್ಯವಹಾರ ನೀತಿಗಳನ್ನೂ ಬೋಧಿಸುತ್ತವೆ.

ಅಲ್ಲಲ್ಲೇ ಕವಿ ಸೊಗಸಾದ ಅಲಂಕಾರಗಳನ್ನು ಗಾದೆಗಳನ್ನೂ ಬಳಸಿದ್ದಾನೆ. ಈ ಕಥೆಗಳು ಕುತೂಹಲವನ್ನು ಕೆರೆಳಿಸುವಂತಿದ್ದು ಅಬಾಲವೃದ್ಧರಿಗೂ ಮನರಂಜಕವಾಗಿವೆ.

ಬ್ರಾಹ್ಮಣ ಸಾಹಿತ್ಯದ ಪ್ರಾಚೀನ ಕವಿಗಳಲ್ಲಿ ದುರ್ಗಸಿಂಹ ಒಬ್ಬನಾಗಿರುವುದರ ಜೊತೆಗೆ ಪ್ರಸಿದ್ಧ ಕವಿಯೂ ಆಗಿದ್ದಾನೆ. ಅನಾಮಿಕ ಕವಿಯೊಬ್ಬನ ಪದ್ಯವೊಂದರಲ್ಲಿ ಈತನನ್ನು ಕನ್ನಡದ ಮಹಾಕವಿಗಳೊಡನೆ ಹೆಸರಿಸಿರುವುದು ಕಂಡುಬರುತ್ತದೆ.

ಸೂಕ್ತಿ ಸುಧಾರ್ಣವವನ್ನು ರಚಿಸಿದ ಮಲ್ಲಿಕಾರ್ಜುನ ಈತನ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆದಿರುವುದು ಈತನ ವಿದ್ವತ್ತಿಗೂ ಈತನಿಗಿದ್ದ ಕೀರ್ತಿಗೂ ಸಾಕ್ಷಿಯಾಗಿದೆ.

ಸಾಹಿತ್ಯದ ಮೂಲಕ ಕನ್ನಡದಲ್ಲಿ ರಾಜತಂತ್ರವನ್ನೂ ವ್ಯವಹಾರ ನೀತಿಯನ್ನೂ ಬೋಧಿಸಲು ಹೊರಟ ಕವಿಗಳಲ್ಲಿ ದುರ್ಗಸಿಂಹ ಮೊತ್ತಮೊದಲಿಗ ಎನ್ನಬಹುದು.

ಇನ್ನಷ್ಟು ಓದಿ : ಕರ್ನಾಟಕ ರತ್ನ ಪ್ರಶಸ್ತಿ ಪಡೆದವರ ಪಟ್ಟಿ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *