ಭಾರತದ ಪ್ರಾಚೀನ ನಾಗರಿಕತೆಗಳು ಪಾಠದ ಪ್ರಶ್ನೆ ಉತ್ತರ, notes, Bharathada Prachina Nagarikathegalu Questions and Answers, Notes Pdf, Class 8 History
ಭಾರತದ ಪ್ರಾಚೀನ ನಾಗರಿಕತೆಗಳು ಪಾಠದ ಪ್ರಶ್ನೆ ಉತ್ತರ
ಸಂಕ್ಷಿಪ್ತವಾಗಿ ಉತ್ತರಿಸಿ .
1. ಹರಪ್ಪ ನಗರದ ವಿಶೇಷತೆಯನ್ನು ಬರೆಯಿರಿ
ಹರಪ್ಪದ ನಗರಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಭಾಗವನ್ನು ಕಾಣಬಹುದು .
ಪಶ್ಚಿಮದ ಭಾಗವು ಕಿರಿದಾಗಿದ್ದು ಅದು ಎತ್ತರದಲ್ಲಿದೆ . ಇದನ್ನು ಪ್ರಾಕ್ತನಶಾಸ್ತ್ರಜ್ಞರು ಕೋಟೆಯೆಂದಿದ್ದಾರೆ . ಸಾಮಾನ್ಯವಾಗಿ ಪೂರ್ವದ ಭಾಗವು ವಿಶಾಲವಾಗಿದ್ದು ಅದು ತಗ್ಗು ಪ್ರದೇಶದಲ್ಲಿದೆ . ಇದನ್ನು ಕೆಳಗಿನ ಗ್ರಾಮವೆಂದಿದ್ದಾರೆ .
ಪ್ರತಿಯೊಂದು ಭಾಗದ ಸುತ್ತಲು ಸುಟ್ಟ ಇಟ್ಟಿಗೆಗಳ ಗೋಡೆಯೊಂದನ್ನು ಕಟ್ಟಿದ್ದರು . ಇಟ್ಟಿಗೆಗಳನ್ನು ಪರಸ್ಪರ ಬೆಸೆಯುವ ರೀತಿಯಲ್ಲಿ ಅಳವಡಿಸಿದ್ದರಿಂದ ಗೋಡೆಯು ಹೆಚ್ಚು ಭದ್ರವಾಗಿತ್ತು .
ಕೋಟೆಯ ಒಳಗೆ ಗಮನಾರ್ಹವಾದ ಕಟ್ಟಡಗಳಿದ್ದವು .
2. ಮೊಹೆಂಜೋದಾರೊವಿನ ಈಜು ಸ್ನಾನ ಕೊಳದ ಬಗ್ಗೆ ಬರೆಯಿರಿ .
ಮೊಹೆಂಜೋದಾರೊವಿನಲ್ಲಿ ಒಂದು ಕೊಳವನ್ನು ವಿದ್ವಾಂಸರು ಸ್ನಾನದ ಕೊಳವೆಂದಿದ್ದಾರೆ ಇದನ್ನು ಇಟ್ಟಿಗೆಗಳಿಂದ ಕಟ್ಟಿದ್ದಾರೆ .
ಈ ಮೂಲಕ ಕೊಳದಿಂದ ನೀರಿನ ಸೋರಿಕೆ ಆಗದಂತೆ ನಿರ್ಮಿಸಿದ್ದಾರೆ . ಇದರ ಎರಡು ಕಡೆಗಳಲ್ಲಿ ಇಳಿಯುವ ಮೆಟ್ಟಿಲುಗಳಿದ್ದು ಸುತ್ತಲು ಕೊಠಡಿಗಳಿವೆ .
ಇದಕ್ಕೆ ನೀರಿನ ಪೂರೈಕೆಯು ಬಾವಿಯಿಂದ ಆಗುತಿತ್ತು , ಬಳಕೆಯ ನೀರನ್ನು ಹೊರಗೆ ಬಿಡಲಾಗುತ್ತಿತ್ತು .
ಈ ಕೊಳದಲ್ಲಿ ಬಹು ಮುಖ್ಯ ವ್ಯಕ್ತಿಗಳು ವಿಶೇಷವಾದ ಸಂದರ್ಭಗಳಲ್ಲಿ ಸ್ನಾನ ಮಾಡುತ್ತಿದ್ದಿರಬಹುದು . . .
3. ನಗರ ಯೋಜನೆ ಯಾವ ರೀತಿಯದಾಗಿತ್ತು ?
- ನಗರವನ್ನು ಅತ್ಯಂತ ವ್ಯವಸ್ಥಿತವಾದ ರೀತಿಯಲ್ಲಿ ರಚಿಸಲಾಗಿತ್ತು .
- ಕ್ರಮಬದ್ಧವಾಗಿ ನಿರ್ಮಿಸಲಾದ ಮನೆಗಳನ್ನು , ರಸ್ತೆಗಳನ್ನು ಹಾಗೂ ಚರಂಡಿಗಳಿದ್ದವು .
- ಜನರು ಒಂದು ಅಥವಾ ಎರಡು ಅಂತಸ್ತಿನ ಮನೆಯನ್ನು ಹೊಂದಿದ್ದರು .
- ಮನೆಗಳು ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿದ್ದು , ಅವುಗಳ ಗೋಡೆಯು ಭದ್ರವಾಗಿದ್ದವು .
- ಒಳಾಂಗಣದ ಸುತ್ತ ಕೊಠಡಿಗಳು ಇದ್ದವು .
- ಸಂಗತಿ ಯಾದ ವಿಜ್ಞಾನ ಪ್ರಚೋತ್ತರ ಮಾಲಿಕೆ
- ಕೆಲವೊಂದರಲ್ಲಿ ಬಾವಿಗಳಿದ್ದು ಅವುಗಳಿಂದ ನೀರಿನ ಪೂರೈಕೆಯಾಗುತ್ತಿತ್ತು .
- ಇಟ್ಟಿಗೆಯಿಂದ ನಿರ್ಮಿಸಲಾಗಿದ್ದ ಚರಂಡಿಯನ್ನು ಚಪ್ಪಡಿಗಳಿಂದ ಮುಚ್ಚಲಾಗಿತ್ತು .
- ಮನೆಯ ಮೋರಿಗಳನ್ನು ಹೊರಗಿನ ಚರಂಡಿಗೆ ಹೊಂದಿಸಲಾಗಿತ್ತು .
- ನಗರಗಳು ಒಳಚರಂಡಿ ಮನೆ ಬಳಕೆಯ ಹಾಗೂ ಸ್ನಾನದಲ್ಲಿ ಬಳಸಿದ ಕಲುಷಿತ ನೀರು ಮೋರಿಯ ಮೂಲಕ ಚರಂಡಿಗೆ ಬಂದು ಸೇರುತ್ತಿದ್ದವು ,
- ಚರಂಡಿಗಳನ್ನು ಕಾಲದಿಂದ ಕಾಲಕ್ಕೆ ಶುಚಿಯಾಗಿಡಲು ಅಲ್ಲಲ್ಲಿ ಉಧ್ರಗಳನ್ನು ನಿರ್ಮಿಸಿದ್ದರು .
4. ವೇದಗಳನ್ನು ಹೆಸರಿಸಿ
ವೇದಗಳು ನಾಲ್ಕು : ಋಗ್ವೇದ , ಸಾಮವೇದ , ಯರ್ಜುವೇದ ಮತ್ತು ಅಥರ್ವವೇದ
5. ವೇದಗಳ ಕಾಲದಲ್ಲಿ ಯಾವ ಯಜ್ಞಯಾಗಾದಿಗಳು ಪ್ರಮುಖವಾಗಿದ್ದವು ?
ವೇದಗಳ ಕಾಲದಲ್ಲಿ ‘ ರಾಜಸೂಯ ‘ , ‘ ಅಶ್ವಮೇಧ’ಯಾಗ , ಪ್ರಮುಖವಾಗಿದ್ದವು .
6. ಉತ್ತರ ಋಗ್ಗೇದ ಕಾಲದ ವೃತ್ತಿಗಳ ಬಗ್ಗೆ ವಿವರಿಸಿ .
- ಬ್ರಾಹ್ಮಣರು ವೈದಿಕ ಯಜ್ಞ ಮತ್ತು ಆಚರಣೆಗಳನ್ನು ಮಾಡುವುದಕ್ಕೆ ಪ್ರತಿಫಲವಾಗಿ ಕಾಣಿಕೆಗಳನ್ನು ಸ್ವೀಕರಿಸುತ್ತಿದ್ದರು .
- ರಾಜನ್ಯ ಎಂಬುದು ಕ್ಷತ್ರಿಯ ವರ್ಣವನ್ನು ಸೂಚಿಸುತ್ತಿತ್ತು , ಬಿಲ್ಲುವಿದ್ಯೆಯಲ್ಲಿ ಪರಿಣತರು ಮತ್ತು ರಥಗಳಲ್ಲಿ ಕುಳಿತು ಯುದ್ಧ ಮಾಡಬಲ್ಲ ಯೋಧರಾಗಿ ರಾಜನ್ಯರ ಮಹತ್ವ ಹೆಚ್ಚಾಯಿತು .
- ವೈಶ್ಯರು ಇವರನ್ನು ಇವೆ . ಬ ೦ ದಾಗ ದಬ್ಬಾಳಿಕೆಗೆ ಕಾಣಿಕೆಯನ್ನು ಇನ್ನೊಬ್ಬರಿಗೆ ಕೊಡಬೇಕಾಗಿತ್ತು . ಒಳಪಡಿಸಬಹುದಾಗಿತ್ತು .
- ಮೇಲಿನ ಎಲ್ಲಾ ವರ್ಣಗಳ ಸೇವೆ ಮಾಡುವವರನ್ನು ಶೂದರು ಎಂದು ಅವರನ್ನು ವರ್ಣ ವ್ಯವಸ್ಥೆಯ ಕೊನೆಯಲ್ಲಿ ಇಡಲಾಗಿತ್ತು .
- ಕೆಲವು ಆದಿಕಾಲದ ‘ ಆಹಾರ ಸಂಗಡ ‘ ಸಮುದಾಯಗಳಾದ ನಿಷಾವರು ‘ ಮತ್ತು ‘ ಚಂಡ’ರನ್ನು ಅಸ್ಪಶ್ಯ ಜಾತಿಗಳೊಂದಿಗೆ ಸೇರಿಸಲಾಗಿದೆ .
- ಆರ್ಯರ ಜೀವನ ಪದ್ಧತಿಯಲ್ಲಿ ಈಗ ಭೇಟೆ ಮತ್ತು ಪಶುಪಾಲನೆಗಿಂತ ಕೃಷಿ ಪ್ರಮುಖವಾಯಿತು , ಕೃಷಿ ಮತ್ತು ವಾಣಿಜ್ಯದಲ್ಲಿ ಯಾರು ತೊಡಗಿಕೊಂಡಿಲ್ಲವೋ ಅವರನ್ನು ‘ ವ್ಯಾತರು ‘ , ಅಂದರೆ ಪರಕೀಯರು ಕಾದ ಕರೆಯಲಾಯಿತು . ಆದರೆ ವ್ಯವಸಾಯ ಮತ್ತು ವಸ್ತುಗಳ ಸಾಗಾಣಿಕೆಗೆ ದನಗಳ ಸಾಕಾಣಿಕೆ ಅಗತ್ಯವಾಗಿತ್ತು .
ಕೆಳಕಂಡ ವಾಕ್ಯಗಳನ್ನು ಪೂರ್ಣಗೊಳಿಸಿ .
1. ಬೊಲನ್‌ಪಾಸಿನ ಫಲವತ್ತಾದ ಮೈದಾನದ ಸಮೀಪದಲ್ಲಿ ಇರುವ ನೆಲೆ …………
2. ಹರಪ್ಪ ನೆಲೆಯು ಪಂಜಾಬಿನ …………….ಕಣಿವೆ ಪ್ರದೇಶದಲ್ಲಿ ಕಂಡುಬಂದಿದೆ .
3. ಹರಪ್ಪ ಸಂಸ್ಕೃತಿಯ ಜನ ಕೃಷಿ ಮತ್ತು …………..ಅವಲಂಬಿಸಿದ್ದರು
1. ಅತ್ಯಂತ ಹಳೆಯ ವೇದ ……………
5. ಋಗೈದದಲ್ಲಿ ಯಜ್ಞಗಳನ್ನು ನಡೆಸಿಕೊಡುವ ಪುರೋಹಿತನನ್ನು………….ಎಂದು ಕರೆಯಲಾಗುತ್ತಿತ್ತು
ಉತ್ತರ : – 1 ) ಮೆಹರ್‌ಗರ್ 2 ) ಸಿಂದ್ 3 ) ವ್ಯಾಪಾರ 4 ) ಋಗ್ವದ 5 ) ‘ ಹೊತರ್ ‘
ಹರಪ್ಪ ನೆಲೆಯು ಪಂಜಾಬಿನ …………….ಕಣಿವೆ ಪ್ರದೇಶದಲ್ಲಿ ಕಂಡುಬಂದಿದೆ .
ಮೆಹರ್‌ಗರ್
ಋಗೈದದಲ್ಲಿ ಯಜ್ಞಗಳನ್ನು ನಡೆಸಿಕೊಡುವ ಪುರೋಹಿತನನ್ನು………….ಎಂದು ಕರೆಯಲಾಗುತ್ತಿತ್ತು
‘ ಹೊತರ್ ‘
8ನೇ ತರಗತಿ ಸಮಾಜ ವಿಜ್ಞಾನ ಪಾಠದ ನೋಟ್ಸ್:
ಅದ್ಯಾಯ -೧ –ಆಧಾರಗಳು ಪಾಠದ ಪ್ರಶ್ನೆ ಉತ್ತರ
ಅದ್ಯಾಯ -೨ – ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ ಪ್ರಶ್ನೆ ಉತ್ತರ
ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ
ಕನ್ನಡ
ಇತಿಹಾಸ
ಭೂಗೋಳಶಾಸ್ತ್ರ
ಭಾರತದ ಸಂವಿಧಾನ
ವಿಜ್ಞಾನ
ಅರ್ಥಶಾಸ್ತ್ರ
ಮಾನಸಿಕ ಸಾಮರ್ಥ್ಯ
ಇಂಗ್ಲೀಷ್ ವ್ಯಾಕರಣ
ಪ್ರಚಲಿತ ವಿದ್ಯಮಾನ
ಸಾಮಾನ್ಯ ಜ್ಞಾನ
10 ನೇ ತರಗತಿ ಕನ್ನಡ ನೋಟ್ಸ್ ಪುಸ್ತಕದ ಹೆಸರು ಹಾಕಿರಿ