ಜೈನ ಮತ್ತು ಬೌದ್ಧ ಧರ್ಮಗಳ ಉದಯ Notes । Jagattina Prachina Nagarikatha in kannada

ಜೈನ ಮತ್ತು ಬೌದ್ಧ ಧರ್ಮಗಳ ಉದಯ Notes । Jagattina Prachina Nagarikatha in kannada

ಜೈನ ಮತ್ತು ಬೌದ್ಧ ಧರ್ಮಗಳ ಉದಯ Notes, Jaina Mattu Bauddha Dharmagala Udaya Questions and Answers, Notes Pdf, Social Science History Chapter 6

ಜೈನ ಮತ್ತು ಬೌದ್ಧ ಧರ್ಮಗಳ ಉದಯ Notes

ಈ ಕೆಳಕಂಡ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ .

ಹೊಸ ಧರ್ಮಗಳ ಉದಯದ ಪೂರ್ವದಲ್ಲಿದ್ದ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ವಿವರಿಸಿ .

  • ಸಾ.ಶ.ಪೂ. 6 ನೆಯ ಶತಮಾನದ ಹೊತ್ತಿಗೆ ಭಾರತೀಯ ಸಮಾಜ ನಾಲ್ಕು ವರ್ಣಾಧಾರಿತವಾಗಿ ವಿಭಜಿತವಾಗಿತ್ತು .
  • ಬ್ರಾಹ್ಮಣರು ಪುರೋಹಿತರಾಗಿ , ಯಜ್ಞಯಾಗಾದಿಗಳ ಧಾರ್ಮಿಕ ಕ್ರಿಯೆಗಳ ಆಚರಣೆಯಲ್ಲಿ ಮುಖ್ಯಸ್ಥರಾಗಿದ್ದರು . ಎರಡನೇ ಹಂತದಲ್ಲಿದ್ದ ಕ್ಷತ್ರಿಯರು ಆಳುವ ವರ್ಗದವರಾಗಿದ್ದು ರೈತನ ಕಂದಾಯದ ಮೇಲೆ ಬದುಕುತ್ತಿದ್ದರು .
  • ಕೃಷಿ , ಪಶುಪಾಲನೆ ಮತ್ತು ವ್ಯಾಪಾರಿ ವೈಶ್ಯರನ್ನು ದ್ವಿಜರೆಂದು ಮಾನ್ಯ ಮಾಡಿದ್ದರೂ , ಅವರ ಮೇಲೆ ನಿರ್ಬಂಧಗಳಿದ್ದವು .
  • ಶೂದ್ರರು ಕೃಷಿಯಾಳು , ಮನೆಯಾಳುಗಳಾಗಿ ಮತ್ತು ಕುಶಲ ಕಸುಬುದಾರಿಕೆ ಸೇವೆಗಾಗಿಯೇ ಮೀಸಲಾಗಿದ್ದರು .
  • ಸಮಾಜದಲ್ಲಿ ಎಲ್ಲಾ ಸವಲತ್ತುಗಳು ಮನ್ನಣೆಗಳು ಉಚ್ಚವರ್ಣದವರಿಗೆ ಸೀಮಿತವಾಗಿದ್ದವು .
  • ಸ್ತ್ರೀಯರು ಸೇರಿದಂತೆ ಶೂದರು ಅಶುದ್ಧರೆಂದು ಪರಿಗಣಿಸಲ್ಪಟ್ಟಿದ್ದರು .
  • ಈ ವರ್ಣಾಧಾರಿತ ತಾರತಮ್ಯತೆಯು ಸಮಾಜದಲ್ಲಿ ಸಾಮಾಜಿಕ ವಿರಸ ಮತ್ತು ತುಮುಲಗಳನ್ನು ಸೃಷ್ಟಿಸಿತ್ತು .

ಮಹಾವೀರನ ಜೀವನ ಕುರಿತು ಬರೆಯಿರಿ .

ವರ್ಧಮಾನನು ವೈಶಾಲಿಯ ಕುಂಡಲಗ್ರಾಮದಲ್ಲಿ ಜನಿಸಿದನು . ಇವನ ತಂದೆ ಸಿದ್ದಾರ್ಥ , ತಾಯಿ ತ್ರಿಶಲಾದೇವಿ .

ತನ್ನ 30 ನೆಯ ವಯಸ್ಸಿನಲ್ಲಿ ಸತ್ಯಾನ್ವೇಷಣೆಯ ಹುಡುಕಾಟದಲ್ಲಿ ತೊಡಗಿದ ಈತ ಮನೆಯನ್ನು ತ್ಯಜಿಸಿದನು .


ನಂತರ ಇವನು 12 ವರ್ಷಗಳ ಕಾಲ ಸತ್ಯದ ಹುಡುಕಾಟದಲ್ಲಿ ಅಲೆದಾಡಿದ , ತಪಸ್ಸು ಮಾಡಿದ ದೇಹವನ್ನು ದಂಡಿಸಿಕೊಂಡನು .

ಆತ 42 ನೆಯ ವಯಸ್ಸಿನಲ್ಲಿ ಕೈವಲ್ಯ ಜ್ಞಾನವನ್ನು ಪಡೆದನು . ಈ ಸಾಧನೆಗಾಗಿ ಇವನು ‘ ಮಹಾವೀರ’ನೆಂದು ಕರೆಸಿಕೊಂಡು ‘ ಜನ’ನಾದನು .

ಇವನ ಅನುಯಾಯಿಗಳನ್ನು ಜೈನರೆಂದು ಕರೆಯುತ್ತಾರೆ .

ಮಹಾವೀರನು ತನ್ನ ಉಳಿದ 30 ವರ್ಷಗಳ ಬದುಕನ್ನು ಗಂಗಾನದಿಯ ಪ್ರದೇಶದ ಜನತೆಗೆ ತನ್ನ ತಿಳಿವನ್ನು ಬೋಧಿಸುತ್ತಾ ಕಳೆದನು .

ಇವನು ತನ್ನ ಪಶ್ಚಿಮ ಭಾರತಕ್ಕೂ ಬೋಧಿಸುತ್ತಾ ಪ್ರಯಾಣಿಸಿದ

ಇವನು ತನ್ನ 72 ನೆಯ ವಯಸ್ಸಿನಲ್ಲಿ ಬಿಹಾರದ ಪಾವಾವುಲ ಎಂಬಲ್ಲಿ ನಿರ್ಮಾಣವನ್ನು ಹೊಂದಿದನು .

3. ತಿರತ್ನಗಳೆಂದರೇನು ?

ಮಹಾವೀರನು ನಡವಳಿಕೆಯ 3 ನಿಯಮಗಳನ್ನು ಬೋಧಿಸಿದನು . ಇವುಗಳನ್ನು ತಿರತ್ನಗಳೆಂದು ಕರೆಯುತ್ತಾರೆ .

1. ಸಮ್ಯಕ್ ಜ್ಞಾನ

2. ಸಮ್ಯಕ್‌ದರ್ಶನ

3. ಸಮ್ಯಕ್ ಚಾರಿತ

4. ಜೈನರ ಪಂಗಡಗಳನ್ನು ಹೆಸರಿಸಿರಿ .

ಜೈನರಲ್ಲಿ ಶ್ವೇತಾಂಬರ ಹಾಗೂ ದಿಗಂಬರರೆಂಬ ಎರಡು ಮುಖ್ಯ ಪಂಗಡಗಳಿವೆ .

ಬೆಳೆಯ ಉಡುಪು ಧರಿಸಿದ ಜೈನ ಮುನಿಗಳನ್ನು ಹಾಗೂ ಅವರ ಅನುಯಾಯಿಗಳನ್ನು ಶ್ವೇತಾಂಬರರೆಂದು ಕರೆಯುತ್ತಾರೆ .

ಉಡುಪನ್ನು ಧರಿಸದ : ಜೈನಮುನಿಗಳನ್ನು ಹಾಗೂ ಅವರ ಅನುಯಾಯಿಗಳನ್ನು ದಿಗಂಬರ ಪಂಥಕ್ಕೆ ಸೇರಿದವರೆಂದು ಪರಿಗಣಿಸಲಾಗಿದೆ .

5 , ಮಧ್ಯಮ ಪಥವೆಂದರೇನು ?

ಲೋಕವೆಲ್ಲ ದುಃಖ ಹಾಗೂ ನೋವಿನಿಂದ ಆವರಿಸಿದೆ . ಆಸೆಯೇ ದುಃಖಕ್ಕೆ ಮೂಲಕಾರಣ ಎಂಬ ಸತ್ಯವನ್ನು ಬುದ್ಧನು ಬೋಧಿಸಿದನು .

ಅತಿಯಾದ ಆಸೆಯ ವಿಮುಕ್ತಿಯಿಂದ ಮಾತ್ರ ನೆಮ್ಮದಿಯ ಬದುಕು ಸಾಧ್ಯ

ಆಸೆಯ ವಿಮುಕ್ತಿಗಾಗಿ ಅಷ್ಟಾಂಗಿಕ ಮಾರ್ಗವನ್ನು ಬುದ್ಧನು ಬೋಧಿಸಿದನು . ಇದನ್ನು ಮಧ್ಯಮ ಪಥವೆಂದು ಕರೆಯುವರು .

6. ಹೊಸ ಧರ್ಮದಿಂದ ಪ್ರೇರಿತರಾದವರು ಯಾರು ?

ಶ್ರೀಮಂತ ವರ್ತಕರು , ಕುಶಲಕರ್ಮಿಗಳು , ಜನಸಾಮಾನ್ಯರು ಈ ಹೊಸ ಧರ್ಮದ ಪ್ರತಿಪಾದನೆಯಿಂದ ಪ್ರೇರಿತರಾದರು .

7. ತ್ರಿಪಿಟಿಕಗಳ ಬಗ್ಗೆ ಟಿಪ್ಪಣಿ ಬರೆಯಿರಿ

ಬುದ್ಧನ ಮರಣದ ನಂತರ ಅವನ ಅನುಯಾಯಿಗಳು ಬುದ್ಧನ ಬೋಧನೆ ಹಾಗೂ ಸಂಪ್ರದಾಯವನ್ನು ತ್ರಿಪಿಟಕಗಳಲ್ಲಿ ಕ್ರೋಡೀಕರಿಸಿದರು ಅವುಗಳೆಂದರೆ

1 ) ವಿನಂದ ಪಿಟಕ

2 ) .ಸುತ್ತ ಪಿಟಕ

3 ) ಅಭಿಧಮ್ಮ ಪಿಟಕ

ಬಿಟ್ಟ ಸ್ಥಳಗಳಲ್ಲಿ ಸೂಕ್ತ ಪದಗಳಿಂದ ಭರ್ತಿ ಮಾಡಿ

1. ಜೈನರ ಮೊದಲ ತೀರ್ಥಂಕರನು

2. ವರ್ಧಮಾನನು ಜನಿಸಿದ ಸ್ಥಳ

3. ಮಹಾವೀರನು ತನ್ನ 42 ನೆಯ ವಯಸ್ಸಿನಲ್ಲಿ…………ಪಡೆದನು

4. ಮಹಾವೀರನು ತನ್ನ 72 ನೆಯ ವಯಸ್ಸಿನಲ್ಲಿ ……………..ಎಂಬಲ್ಲಿ ನಿರ್ವಾಣ ಹೊಂದಿದನು .

5. ಗೌತಮ ಬುದ್ಧನ ಮೊದಲ ಹೆಸರು …..

6. ಬುದ್ಧನು ತನ್ನ ಮೊದಲ ಬೋಧನೆಯನ್ನು ….ದಲ್ಲಿ ಮಾಡಿದನು

7. ಬುದ್ಧನ ಮೊದಲ ಬೋಧನೆಯನ್ನು ………..ಎಂದು ಕರೆಯಲಾಗಿದೆ

ಉತ್ತರಗಳು : – 1 ) ಋಷಭ 2 ) ವೈಶಾಲಿಯ ಕುಂಡಲಗ್ರಾಮ 3 ) ಕೈವಲ್ಯ ಜ್ಞಾನ 4 ) ಬಿಹಾರದ ಪಾವಾಪುರಿ 5 ) ಸಿದ್ಧಾರ್ಥ 6 ) ಸಾರಾನಾಥದ ಜಿಂಕೆ ವನ 7 ) ಧರ್ಮ ಚಕ್ರ ಪ್ರವರ್ತನೆ .

ಜೈನರ ಮೊದಲ ತೀರ್ಥಂಕರನು ?

ಋಷಭ

ಗೌತಮ ಬುದ್ಧನ ಮೊದಲ ಹೆಸರು?

ಸಿದ್ಧಾರ್ಥ

8ನೇ ತರಗತಿ ಸಮಾಜ ವಿಜ್ಞಾನ ಪಾಠದ ನೋಟ್ಸ್:

ಅದ್ಯಾಯ -೧ –ಆಧಾರಗಳು ಪಾಠದ ಪ್ರಶ್ನೆ ಉತ್ತರ

ಅದ್ಯಾಯ -೨ – ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ ಪ್ರಶ್ನೆ ಉತ್ತರ

ಅಧ್ಯಾಯ -೩-ಭಾರತದ ಪ್ರಾಚೀನ ನಾಗರಿಕತೆಗಳು ಪಾಠದ ಪ್ರಶ್ನೆ ಉತ್ತರ

ಅಧ್ಯಾಯ -೪- ಜಗತ್ತಿನ ಪ್ರಾಚೀನ ನಾಗರಿಕತೆಗಳು ಪ್ರಶ್ನೋತ್ತರಗಳು

Leave a Reply

Your email address will not be published. Required fields are marked *