ಜೀವ ವೈವಿಧ್ಯತೆ ಪ್ರಬಂಧ ಕನ್ನಡ । Jeeva Vaividhya Prabanda In Kannada

ಜೀವ ವೈವಿಧ್ಯತೆ ಪ್ರಬಂಧ ಕನ್ನಡ । Jeeva Vaividhya Prabanda In Kannada

ಜೀವ ವೈವಿಧ್ಯತೆ ಪ್ರಬಂಧ ಕನ್ನಡ, ಜೀವವೈವಿಧ್ಯ ಮತ್ತು ಅದರ ಸಂರಕ್ಷಣೆ, Jeeva Vaividhya Prabandha In Kannada, prabandha in kannada, essay in kannada, pdf

ಜೀವ ವೈವಿಧ್ಯತೆ ಪ್ರಬಂಧ ಕನ್ನಡ

ಪೀಠಿಕೆ : ಭೂಮಿಯು ಸೂರ್ಯನಿಂದ ಹೊರಬಂದ ಒಂದು ಉರಿಗೋಲು ಇದು ತಣ್ಣಗಾಗುತ್ತ ತಣ್ಣಗಾಗುತ್ತ ಭೂಮಿಯಾಗಿ ರೂಪಗೊಂಡು ಸುಮಾರು 400 ಕೋಟಿ ವರ್ಷಗಳಾದವು .

ಈ ಭೂಮಿಯ ಮೇಲೆ ಸೂಕ್ಷ್ಮಾಣು ಜೀವಿಗಳಿಂದ ಹಿಡಿದು ಏಕಕೋಶ ಜೀವಿ , ಬಹುಕೋಶ ಜೀವಿಗಳು , ಸಸ್ಯ ಸಂಕುಲ , ಪ್ರಾಣಿ ಸಂಕುಲಗಳು ಗಾಳಿಯಲ್ಲಿ ಹಾರಾಡುವ ಚಿಟ್ಟೆ ಹಾಗೂ ಪಕ್ಷಿಗಳಿಂದ ಹಿಡಿದು ನೀರಿನಲ್ಲಿರುವ ಚಿಕ್ಕ ಮೀನುಗಳು , ತಿಮಿಂಗಿಲಗಳು ,

ಭೂಮಿಯನ್ನೇ ಆಳಿದಂತಹ ದೈತ್ಯಾಕಾರದ ಸರಿಸೃಪ , ಡೈನೋಸಾರಸಗಳು , ಆನೆಗಳು , ಮಂಗಗಳು , ಮಾನವರು ಹೀಗೆ ಎಲ್ಲಾ ಜೀವರಾಶಿಗಳು ಹಂತ ಹಂತವಾಗಿ ಭೂಮಿಯ ಮೇಲೆ ವಿಕಾಸ ಹೊಂದಿವೆ .

ಏಕಕೋಶ ಜೀವಿಗಳಿಂದ ಹಿಡಿದು ಮಾನವನ ಉದಯವಾಗುವಿಕೆ ಮತ್ತು ಭೂಮಿಯ ಮೇಲಿನ ಜೀವಿಗಳಿಗೆ ಬದುಕಲು ಬೇಕಾಗುವ ವಾಯು , ನೀರು , ಉಷ್ಣಾಂಶ ,

ಆಹಾರ , ವಾಸಸ್ಥಳ ಹೀಗೆ ಎಲ್ಲವನ್ನು ಒದಗಿಸಿಕೊಡುವುದು ಈ ಭೂಮಿ , ಭೂಮಿಯ ಮೇಲೆ ಅಸಂಖ್ಯಾತ ಜೀವಿಗಳು , ವಿವಿಧ ವರ್ಗಗಳ ಸೂಕ್ಷ್ಮಾಣುಗಳು , ಸಸ್ಯಗಳು , ಪ್ರಾಣಿಗಳು ಬಗೆಬಗೆಯ ರೂಪದಲ್ಲಿ ವೈವಿಧ್ಯಮಯ ಜೀವರಾಶಿಗಳು ಸಹಸ್ರಾರು ವರ್ಷಗಳಿಂದ ರಕ್ಷಣೆ ಪಡೆದು ಪ್ರಕೃತಿಯ ಸಹಾಯದಿಂದ ಬದುಕುತ್ತಿವೆ .

ವ್ಯಾಖ್ಯಾನ :

ಈ ಪ್ರಕೃತಿಯಲ್ಲಿ ಭೂಮಿಯ ಮೇಲಿರುವ ಗಾಳಿಯಲ್ಲಿ ನೀರಿನಲ್ಲಿ , ಪೃಥ್ವಿಯ ಮೇಲೆ ಹೀಗೆ ಎಲ್ಲಾ ಕಡೆ ವಾಸವಾಗಿರುವ ಸೂಕ್ಷ್ಮಾಣು ಜೀವಿಗಳು ,

ಸಸ್ಯಗಳ , ಪ್ರಾಣಿಗಳ , ಕೀಟಗಳ , ಪಕ್ಷಿಗಳ ವಿವಿಧತೆ ಮತ್ತು ವಿವಿಧ ವರ್ಗಗಳ ವೈವಿಧ್ಯತೆಯನ್ನು ಜೀವವೈವಿಧ್ಯತೆ ಎನ್ನುವರು .

2 ಈ ಪ್ರಕೃತಿಯಲ್ಲಿ ಅನೇಕ ಮಂಡಲಗಳ ವಿವಿಧ ಜೀವರಾಶಿಗಳು ವಾಯು ಮಂಡಲದ ಜೀವರಾಶಿಗಳು , ಜಲಮಂಡಲದ ಜೀವರಾಶಿಗಳು ,

ಭೂಮಂಡಲದ ಜೀವರಾಶಿಗಳು ಮತ್ತು ಜೀವರಾಶಿಗಳಲ್ಲಿರುವ ವಿವಿಧ ಬಗೆಯ ಸಸ್ಯವರ್ಗಗಳು , ಕೀಟ ವರ್ಗಗಳು , ಸೂಕ್ಷ್ಮಾಣು ಜೀವಿಗಳು , ಪ್ರಾಣಿವರ್ಗಗಳು ಅವುಗಳ ವಿವಿಧತೆಯನ್ನು ಜೀವ ವೈವಿಧ್ಯತೆ ಎನ್ನುವರು


ಆಧುನಿಕ ಯುಗದಲ್ಲಿ ಸುಮಾರು 65 ದಶಲಕ್ಷ ವರ್ಷಗಳ ಹಿಂದೆ ಹುಲ್ಲುಗಾವಲು ವಿಸ್ತಾರ ಹೊಂದಿ ಪಕ್ಷಿ ಹಾಗೂ ಸಸ್ತನಿ ಪ್ರಭೇದಗಳು , ಗೋರಿಲ್ಲಾ , ಚಿಂಪಾಂಜಿ ,

ವಾನರಗಳು ಉದಯಿಸಿದವು . ಸುಮಾರು 1.64 ದಶಲಕ್ಷ ವರ್ಷಗಳ ಹಿಂದೆ ಕೆಲವು ಸಸ್ತನಿಗಳು ನಾಶವಾದರೆ , ಗೋರಿಲ್ಲಾ ,

ಚಿಂಪಾಂಜಿಗಳಲ್ಲಿ ವಿಕಾಸಹೊಂದಿ ಆಧುನಿಕ ಮಾನವನ ಪ್ರಭೇದ ರಚಿತವಾಯಿತು . ಈ ರೀತಿಯಾಗಿ ಪ್ರಭೇದಗಳ ವಿಕಾಸ ರೂಪವು ವಿವಿಧ ಬಗೆಯ ಜೀವವಾಶಿಗಳ ವೈವಿಧ್ಯತೆಗೆ ಕಾರಣವಾಯಿತು .

ಜೈವಿಕ ವ್ಯವಸ್ಥೆಯ ವೈವಿಧ್ಯತೆ ( Ecosystem Diversity )

ಭೂಮಂಡಲದಲ್ಲಿನ ಎಲ್ಲಾ ಸ್ತರಗಳಲ್ಲಿ ಜಲಚರ , ಭೂಚರ , ವಾಯುವಲಯ , ಕಾಡು , ಮರುಭೂಮಿ ಸಮುದ್ರ ಹೀಗೆ ಎಲ್ಲಾ ಬಗೆಯ ಪರಿಸರ ವ್ಯವಸ್ಥೆಯಲ್ಲಿ ಸೂಕ್ಷ್ಮಾಣು ಜೀವಿಗಳಿಂದ ಹಿಡಿದು , ಏಕಕೋಶ , ಬಹುಕೋಶ , ಅಕಶೇರುಕ ಮತ್ತು ಕಶೇರುಕ ಜೀವಿಗಳಲ್ಲಿ ಗಾತ್ರ , ಬಣ್ಣ , ಪ್ರಭೇದ , ಹೀಗೆ ಅನೇಕ ರೀತಿಯ ವೈವಿಧ್ಯತೆಯನ್ನು ಕಾಣಬಹುದು .

ಇಲ್ಲಿಯವರೆಗೆ ಭೂಮಿಯ ಮೇಲೆ 1.5 ದಶಲಕ್ಷ ಜೀವರಾಶಿಗಳನ್ನು ಗುರುತಿಸಲಾಗಿದೆ .

ಇನ್ನೂ ಪರಿಚಯವೇ ಇರದಂತಹ , ಗುರುತಿಸಲಾಗದ ಅನೇಕ ಸಸ್ಯ ಹಾಗೂ ಪ್ರಾಣಿ ವರ್ಗಗಳಿವೆ . ಗುರುತಿಸಲಾದ ಒಟ್ಟು ಹಸಿರು ಸಸ್ಯಗಳಲ್ಲಿ ಸುಮಾರು 2 ಲಕ್ಷ 59 ಸಾವಿರ ಸಸ್ಯಗಳನ್ನು ಅಂದಾಜಿಸಲಾಗಿದೆ .

ಪ್ರಾಣಿಗಳಲ್ಲಿ 41 ಸಾವಿರ ಕಶೇರುಕಗಳು , ಉಳಿದವುಗಳು ಅಕಶೇರುಕ ಮತ್ತು ಸೂಕ್ಷ್ಮ ಜೀವಿಗಳಾಗಿವೆ .

ಭೂಮಿಯ ಮೇಲಿರುವ ಸಸ್ಯರಾಶಿಗಳಲ್ಲಿ ಸುಮಾರು 3 ಲಕ್ಷದ 50 ಸಾವಿರ ವಿವಿಧ ಬಗೆಯ ಹೂಬಿಡುವ ಮತ್ತು ಹೂಬಿಡದ ಸಸ್ಯ ವೈವಿಧ್ಯತೆಯನ್ನು ಗುರುತಿಸಿದೆ .

ಪ್ರಾಣಿ ಸಂಕುಲಗಳಲ್ಲಿ ಸುಮಾರು 9 ಲಕ್ಷದಷ್ಟು ವಿವಿಧ ಪ್ರಾಣಿಗಳಲ್ಲಿ ಅಕಶೇರುಕ ಮತ್ತು ಕಶೇರುಕ ವರ್ಗಗಳಿಗೆ ಸೇರಿವೆ .

ಭೂಮಂಡಲದಲ್ಲಿರುವ ಎಲ್ಲಾ ಜೀವರಾಶಿಗಳ ರಚನೆ , ಸಂತಾನೋತ್ಪತ್ತಿಯ ಕ್ರಮ , ಆಹಾರಸೇವನೆ ಮತ್ತು ವಾಸಸ್ಥಳದ ಪ್ರಕ್ರಿಯೆಗಳು ಬೇರೆ ಬೇರೆ ರೀತಿಯದ್ದಾಗಿವೆ .

ಪ್ರತಿಯೊಂದು ಜೀವಿಯ ಜೀವಕೋಶದಲ್ಲಿನ ವರ್ಣತಂತುವಿನ ಭಾಗವಾಗಿರುವ ವಂಶವಾಹಿನಿಯು ಉತ್ಪರಿವರ್ತನೆ ಹೊಂದಿ , ಪರಿಸರದ ಬದಲಾವಣೆಗೆ ತಕ್ಕಂತೆ ಜೀವಿಯಲ್ಲಿ ಆಂತರಿಕ ಮತ್ತು ಬಾಹ್ಯ ಬದಲಾವಣೆಗಳನ್ನು ರೂಪಿಸುತ್ತದೆ .

ಚಾರ್ಲ್ಸ್ ಡಾರ್ವಿನ್‌ರವರ ಸಿದ್ಧಾಂತದಂತೆ ಯಾವ ಜೀವಿಯು ಕಾಲ ಕಾಲಕ್ಕೆ ಬದಲಾವಣೆ ಆಗುವ ಪರಿಸರಕ್ಕೆ ಹೊಂದಿಕೊಳ್ಳುವ ಗುಣಧರ್ಮಗಳನ್ನು ಪಡೆದು ಪರಿಸರದೊಂದಿಗೆ ಹೊಂದಿಕೊಂಡು ವಂಶಾಭಿವೃದ್ಧಿ ಮಾಡುತ್ತದೆಯೋ ಅಂತಹ ಜೀವಿಗಳು ಬದುಕುಳಿಯಲು ಸಾಧ್ಯ ಮತ್ತು ಅವುಗಳನ್ನು ನಿಸರ್ಗವು ಆಯ್ಕೆ ಮಾಡಿ ಸಂತತಿ ಮುಂದುವರಿಯಲು ಸಹಾಯಮಾಡುತ್ತದೆ .

ರಾಷ್ಟ್ರಮಟ್ಟದಲ್ಲಿ ಜೀವವೈವಿಧ್ಯತೆ

ಭಾರತದ ಅಪಾರ ಭೌಗೋಳಿಕ ಗುಣಲಕ್ಷಣ ಹಾಗೂ ಹವಾಮಾನಕ್ಕೆ ಅನುಗುಣವಾಗಿ ಜೀವ ಪರಿಸರ ವ್ಯವಸ್ಥೆಯಲ್ಲಿನ ಜೀವ ವೈವಿಧ್ಯತೆಯನ್ನು ಅತಿ ಹೆಚ್ಚು ಶ್ರೀಮಂತಗೊಳಿಸಿದೆ .

ಪ್ರಪಂಚದ ಒಟ್ಟು ಭೂಭಾಗದಲ್ಲಿ ಶೇಕಡಾ 2 ರಷ್ಟು ಭೂಭಾಗ ಹೊಂದಿರುವ ಭಾರತವು ಜೀವ ವೈವಿಧ್ಯತೆಯಲ್ಲಿ ವಿವಿಧ ಜೀವರಾಶಿಗಳ ವರ್ಗವು ಈ ರೀತಿ ಇದೆ .

ಬ್ಯಾಕ್ಟಿರಿಯಾ 850 , ಶಿಲೀಂದ್ರಗಳು 23,000 , ಲೈಕೆನ್ಸ್ 1600 , ಬ್ರಯಾಫೈಟ್ಸ್ 2700 , ಟೇರಿಡೋಫಾಯಟ್ಸ್ 1022 , ಜಿಮ್ಹಾಸ್ಟಾರಮ್ 64 , ಆಂಜಿಯೋಸ್ಪರ 17,000 , ಪ್ರೋಟೊಜುವಾನ್ಸ್ 2577 , ಫೋರಿಫೇರಾ 519 , ವಿಡೇರಿಯಾ 237 , ಟಿನೋಫೋರಾ 10 , ಚಪಟ್ಟೆ ಹುಳಗಳು 1622 , ನೆಮಾಟೋಡ 2350 ,

ರಾಟಿಫರ 310 , ಕಿನೂರಿಂಕ 10 , ಮೃದ್ವಂಗಿಗಳು 5042 , ಪ್ರಥಮ ಕಶೇರುಕಗಳು 116 , ಮೀನುಗಳು 2546 , ಉಭಯವಾಸಿಗಳು 204 , ಸರಿಸ್ಕೃಪಗಳು 428 , ಪಕ್ಷಿಗಳು 1228 , ಸಸ್ತನಿಗಳು 372 ,

ಸ್ಥಳೀಯ ಮಟ್ಟದಲ್ಲಿ ಜೀವವೈವಿಧ್ಯತೆ

ಕರ್ನಾಟಕ ರಾಜ್ಯದಲ್ಲಿ ಅನೇಕ ಅರಣ್ಯ ಪ್ರದೇಶಗಳು ಪಶ್ಚಿಮ ಘಟ್ಟಗಳು ಬಿಳಿಗಿರಿ ರಂಗನಬೆಟ್ಟ , ರಂಗನತಿಟ್ಟು ಪಕ್ಷಿಧಾಮ , ಬಂಡಿಪುರ , ನಾಗರಹೊಳೆ ಅಭಯಾರಣ್ಯಗಳಲ್ಲಿ ಸಸ್ಯ ಹಾಗೂ ಪ್ರಾಣಿ ವೈವಿಧ್ಯತೆಯ ಶ್ರೀಮಂತಿಕೆ ಹೆಚ್ಚಿಸಿವೆ .

ವನ್ಯ ಪ್ರಾಣಿಗಳಾದ ಆನೆ , ಹುಲಿ , ಸಾಂಬರ ಚಿರತೆ , ಕೊಂಬಿನ ಜಿಂಕೆ , ಚಿಗರೆಗಳು , ಚಿರತೆ , ಸಿಂಹ , ಕೋತಿಗಳು ರಂಗನತಿಟ್ಟು ಪಕ್ಷಿಧಾಮದಲ್ಲಿ ಪಕ್ಷಿ ಸಂಕುಲ ಅರಣ್ಯ ಪ್ರದೇಶಗಳಲ್ಲಿ ಸಸ್ಯ ಸಂಕುಲಗಳ ವೈವಿಧ್ಯತೆಯನ್ನು ಕಾಣಬಹುದು .

ಭಾರತವು ಬೃಹತ್ ಜೀವವೈವಿಧ್ಯತೆಯನ್ನು ಹೊಂದಿದಂತಹ ರಾಷ್ಟ್ರ ( India as Mega – Diversity Nation )

ವಿಶ್ವದಲ್ಲಿ ಭಾರತವು ಬೃಹತ್ ಜೀವವೈವಿಧ್ಯತೆಯನ್ನು ಹೊಂದಿದ 12 ನೇ ರಾಷ್ಟ್ರವಾಗಿದೆ . ನಮ್ಮ ರಾಷ್ಟ್ರದ ಭೌಗೋಳಿಕತೆ , ವಾತಾವರಣ , ಪರ್ವತ , ನದಿಗಳು , ಮುಂತಾದವುಗಳು ಪರಿಸರದಲ್ಲಿನ ಜೀವವೈವಿಧ್ಯತೆಗೆ ಕಾರಣವಾಗಿವೆ . ಭಾರತದಲ್ಲಿ ಜೀವವೈವಿಧ್ಯತೆಯನ್ನು ಈ ಕೆಳಗಿನ ಜೀವ ಪರಿಸರದಲ್ಲಿ ಕಾಣಬಹುದು .

ಮರುಭೂಮಿ ಜೀವ ಪರಿಸರ ವ್ಯವಸ್ಥೆ

ಮರುಭೂಮಿ ಜೀವ ಪರಿಸರ ವ್ಯವಸ್ಥೆಯಲ್ಲಿ ಅತಿ ಕಡಿಮೆ ಮಳೆ ಬೀಳುತ್ತದೆ . ಈ ಪರಿಸರವು ಶುಷ್ಕ ಭೂಮಿಯಾಗಿದ್ದು ವಿಶಾಲವಾದ ಬಂಜರುಭೂಮಿ ಹೊಂದಿದೆ ಮತ್ತು ಬೇರೆ ಬೇರೆ ಋತುಗಳಿಗೆ ತಕ್ಕಂತೆ ಬೇರೆ ಬೇರೆ ಸಸ್ಯಗಳು ಇಲ್ಲಿ ಬೆಳೆಯುತ್ತವೆ .

ಪ್ರಾಣಿಗಳಲ್ಲಿ ಹಸುಗಳು , ಹಾವು , ಆನೆ , ಪಕ್ಷಿಗಳಲ್ಲಿ ಗರುಡ , ನವಿಲು ಎಲ್ಲವುಗಳಿಗೆ ಧಾರ್ಮಿಕವಾದ ಮಹತ್ವವನ್ನು ಕೊಟ್ಟು ಸಾಮಾಜಿಕವಾಗಿ , ಧಾರ್ಮಿಕವಾಗಿ , ಸಾಂಸ್ಕೃತಿಕವಾಗಿ ಪೂಾಜಿಸಿ ಹಬ್ಬ , ಜಾತ್ರೆಗಳನ್ನು ಆಚರಿಸುತ್ತಾ ಬರುತ್ತಿದ್ದೇವೆ .

ಗುಡ್ಡಗಾಡು ಅರಣ್ಯಪ್ರದೇಶದಲ್ಲಿ ವಾಸಿಸುವ ಗಿರಿಜನರ ಬದುಕು , ನಿಸರ್ಗದ ನೆಲೆವೀಡು , ಪ್ರಕೃತಿ ಅವರ ದೇವತೆ ಸಾಂಪ್ರದಾಯಿಕವಾಗಿ ಗಿರಿಜನರು , ಆದಿವಾಸಿಗಳು ಒಂದು ಮರ ಕಡಿದರೆ ಅದರ ಬುಡದ ಮೇಲೆ ಕಲ್ಲನ್ನಿಟ್ಟು ಪೂಜಿಸಿ ಕ್ಷಮೆ ಕೇಳುವ ಪದ್ಧತಿ ಧಾರ್ಮಿಕವಾಗಿ ಬೆಳೆದು ಬಂದಿದೆ .

ಈ ಎಲ್ಲಾ ಆಚರಣೆಗಳನ್ನು ಗಮನಿಸಿದರೆ ಪರಿಸರದ ಮೇಲೆ ಅವರಿಗಿರುವ ಅಪಾರ ಗೌರವ , ಜೀವವೈವಿಧ್ಯತೆಯ ಮಹತ್ವ ಹಾಗೂ ಅವುಗಳ ಮೇಲೆ ಮಾನವರ ಅವಲಂಬನೆ ತೋರಿಸಿಕೊಡುತ್ತದೆ .

ಸಸ್ಯ ಸಂಕುಲದಲ್ಲಿನ ವಿವಿಧ ಬಗೆಯ ಗಿಡಮೂಲಿಕೆಗಳನ್ನು ಬಳಸಿ ಸೌಂದರ್ಯ ವರ್ಧಕಗಳನ್ನು ಹಾಗೂ ಪ್ರಾಣಿಗಳಾದ , ಕೃಷ್ಣಮೃಗಗಳ ದೇಹದಲ್ಲಿನ ಸಹಿಸುವ ಗ್ರಂಥಿಯಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸಲಾಗುತ್ತಿದೆ .

ಅಭಯಾರಣ್ಯಗಳು , ನಿತ್ಯ ಹರಿದ್ವರ್ಣ ಕಾಡುಗಳು , ಬಗೆ ಬಗೆಯ ಸಸ್ಯಗಳ ರಾಶಿ , ಅಲ್ಲಿ ವಾಸಿಸುವ ಪ್ರಾಣಿ ಪಕ್ಷಿಗಳು ರಮಣೀಯ ತಾಣಗಳಾಗಿ ಪ್ರವಾಸಿಗರನ್ನು ಆಕರ್ಷಿಸುತ್ತವೆ .

ಆದುದರಿಂದ ಜೀವ ವೈವಿಧ್ಯತೆಯು ಮಾನವನ ಉಳುವಿಗೆ , ಸಾಮಾಜಿಕ ಬದುಕಿಗೆ , ಧಾರ್ಮಿಕ ಆಚರಣೆಗೆ , ಮನೋಲ್ಲಾಸಕ್ಕಾಗಿ ಸೌಂದರ್ಯದಾಯಕ ತಾಣಗಳಾಗಿ ಪ್ರಮುಖ ಪಾತ್ರ ವಹಿಸುತ್ತದೆ

ಇನ್ನಷ್ಟು ಪ್ರಬಂಧಗಳನ್ನು ಓದಿ :

ಅತಿವೃಷ್ಟಿ ಅನಾವೃಷ್ಟಿ ಪ್ರಬಂಧ

ಹೋಳಿ ಹಬ್ಬದ ಮಹತ್ವ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಜಾಗತಿಕ ತಾಪಮಾನ ಪ್ರಬಂಧ

ಶಬ್ದ ಮಾಲಿನ್ಯ ಕುರಿತು ಪ್ರಬಂಧ

ಭೂ ಮಾಲಿನ್ಯ ಕುರಿತು ಪ್ರಬಂಧ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *