vakaragama sandhi in kannada ।। ವಕಾರಾಗಮ ಸಂಧಿ, ಕನ್ನಡ ವ್ಯಾಕರಣ
ವಕಾರಾಗಮ ಸಂಧಿ
ಉ , ಊ , ಋ , ಓ , ಔ , ಕಾರಗಳ ಮುಂದೆ ಸ್ವರವು ಬಂದರೆ ‘ ವ್ ‘ ವ್ಯಂಜನ ಆಗಮವಾಗುವದು . ‘ ವ ‘ ಕಾರ ಆಗಮವಾಗುವುದು .
ಉದಾ : –
ಕರು + ಅನ್ನು = ಕರುವನ್ನು
( ಉ ) + ಅ = ‘ ವ್ ‘
ಗುರು + ಅನ್ನು = ಗುರುವನ್ನು
ಗುರು + ಇಗೆ = ಗುರುವಿಗೆ
ಪಿತ್ತು + ಅನ್ನು = ಪಿತ್ರುವನ್ನು
ಹೂ + ಇಂದ = ಹೂವಿಂದ
ಆ + ಉಂಗುರ = ಆ + ವ್ +ಉಂಗುರ = ಆಉಂಗುರ
ಪೂ + ಅನ್ನು = ಪೂ + ವ್ ಅನ್ನು = ಪೂವನ್ನು
vakaragama sandhi in kannada
ಮೇಲೆ ತೋರಿಸಿರುವ ಯಕಾರಗಮ , ವಕಾರಾಗಮ ಸಂಧಿ ಬಂದಿರುವ ಸ್ಥಳಗಳಲ್ಲೆಲ್ಲ ಲೋಪಸಂಧಿಯನ್ನು ಮಾಡಿ ಹೇಳಲೂ ಬಾರದು , ಬರೆಯಲೂ ಬಾರದು .
ಹಾಗೆ ಲೋಪ ಮಾಡಿದರೆ ಅರ್ಥವು ಹಾಳಾಗುವುದೆಂದು ಕಂಡಿದ್ದೀರಿ . ಆದುದರಿಂದ ಈ ಆಗಮಸಂಧಿಗೆ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು :
ಸ್ವರದ ಮುಂದೆ ಸ್ವರವು ಬಂದಾಗ ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ ಯಕಾರವನ್ನೋ ಅಥವಾ ವಕಾರವನ್ನೋ ಹೊಸದಾಗಿ ಸೇರಿಸಿ ಹೇಳುತ್ತೇವೆ . ಇದಕ್ಕೆ ‘ ಆಗಮ ಸಂಧಿ ‘ ಎನ್ನುವರು.