shakti ginta yukti melu gade in kannada, shakti ginta yukti melu explanation in kannada , ಶಕ್ತಿಗಿಂತ ಯುಕ್ತಿ ಮೇಲು ಅರ್ಥ, shakti ginta yukti melu explanation in kannada, shakti ginta yukti melu meaning in kannada, shakti ginta yukti melu kannada gadhe , ಶಕ್ತಿಗಿಂತ ಯುಕ್ತಿ ಮೇಲು essay, ಶಕ್ತಿಗಿಂತ ಯುಕ್ತಿ ಮೇಲು ವಿವರಣೆ, ಶಕ್ತಿಗಿಂತ ಯುಕ್ತಿ ಮೇಲು ಗಾದೆ ವಿಸ್ತರಣೆ, ಶಕ್ತಿಗಿಂತ ಯುಕ್ತಿ ಮೇಲು ವಿಸ್ತರಣೆ, ಶಕ್ತಿಗಿಂತ ಯುಕ್ತಿ ಮೇಲು ಗಾದೆ ಮಾತು
Shakti Ginta Yukti Melu Gade In Kannada
ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು. ಗಾದೆಗಳನ್ನು ಐದನೆಯ ವೇದಗಳೆಂದು ಕರೆಯಲಾಗಿದೆ. ಅಂತಹ ಗಾದೆಗಳಲ್ಲಿ ಮೇಲಿನ ಗಾದೆ ಮಾತೂ ಕೂಡಾ ಒಂದಾಗಿದೆ.
ಶಕ್ತಿಯು ವ್ಯಕ್ತಿಯ ಅಥವಾ ಜೀಏಯ ದೈಹಿಕ ಸಾಮರ್ಥ್ಯಕ್ಕೆ ಸಂಬಂಧ ಪಟ್ಟಿದ್ದಾದರೆ, ಯುಕ್ತಿಯು ವ್ಯಕ್ತಿ ಅಥವಾ ಜೀವಿಯ ಮಾನಸಿಕ ಸಾಮರ್ಥ್ಯಕ್ಕೆ ಸಂಬಂಧ ಪಟ್ಟಿದ್ದಾಗಿದೆ. ಕೇವಲ ಶಕ್ತಿ ಇದ್ದರೆ ಸಾಲದು,ಬುದ್ಧಿಯೂ ಅಷ್ಟೇ ಅವಶ್ಯವಾದುದದು. ಶಕ್ತಿಯಿಂದ ಗೆಲ್ಲಲಾಗದ ಎಷ್ಟೋ ಸಮಸ್ಯೆಗಳನ್ನು ಬುದ್ಧಿಶಕ್ತಿಯನ್ನು ಉಪಯೋಗಿಸಿ ಗೆದ್ದ
ಉದಾಹರಣೆಗಳಿವೆ.
ದುರ್ಗಸಿಂಹನ ಪಂಚತಂತ್ರ ಕಥೆಯಲ್ಲಿ ಬರುವ ಒಂದು ಕಥೆಯಂತೆ ಚಿಕ್ಕ ಮೊಲವು ಸಿಂಹಕ್ಕೆ ಆಹಾಶವಾಗಿ ಹೋಗಬೇಕಾಗಿ ಸಂದರ್ಭ ಬಂದೊದಗಿದಾಗ ಅದು ಆ ಸಿಂಹವನ್ನು ತನ್ನ ಮಾತಿನ ಶಕ್ತಿಯಿಂದ ನಂಬುವಂತೆ ಮಾಡಿ ಆ ಸಿಂಹದ ತರಹವೇ ಇನ್ನೊಂದು ಸಿಂಹವಿದೆಯೆಂದು ಅದು ಈ ಸಿಂಹಕ್ಕಿಂತ ಇನ್ನೂ ಬಲಿಷ್ಠವಿದೆಯೆಂದೂ,
ಈ ಸಿಂಹದ ಬಗ್ಗೆ ಅವಮಾನಕರ ಮಾತುಗಳನ್ನಾಡಿತೆಂದೂ ಹೇಳಿ ಸಿಂಹವನ್ನು ಕೆರಳಿಸಿದಾಗ,ಕೆರಳಿದ ಸಿಂಹವು ಆ ಮತ್ತೊಂದು ಸಿಂಹವೆಲ್ಲಿ ಎಂದಿತು.ಉಪಾಯದಿಂದ ಮೊಲನು ಶುಭ್ರ ನೀರಿರುವ ಬಾವಿಯ ಬಳಿ ಕರೆತಂದು ಸಿಂಹಕ್ಕೆ ಆ ಬಾವಿಯನ್ನು ತೋರಿಸಿ ಮತ್ತೊಂದು ಸಿಂಹ ಅಲ್ಲಿದೆ ಎಂದಾಗ ಯೋಚಿಸದೆ ಇಣುಕಿ ಅಲ್ಲಿ ಇರುವುದು ತನ್ನ ಪ್ರತಿಬಿಂಬ ಎಂದು ಅರಿಯದೆ ಮತ್ತೊಂದು ಸಿಂಹವನ್ನು ಹಿಡಿಯಲು ಬಾವಿಯಲ್ಲಿ ಹಾರಿ ಪ್ರಾಣ ಕಳೆದುಕೊಂಡಿತು. ಹೀಗೆ ಪುಟ್ಟ ಮೊಲವು ತನ್ನ ಯುಕ್ತಿಯನ್ನು ಬಳಸಿ ಪ್ರಾಣ ಉಳಿಸಿಕೊಂಡಿತು.
ಆದ್ದರಿಂದ ಸಮಸ್ಯೆಗಳು,ಸಂಕಷ್ಟಗಳು ಎದುರಾದಾಗ ನಮ್ಮ ಬುದ್ಧಿಶಕ್ತಿಗೆ ಚಾಲನೆ ಕೊಡಬೇಕು .ಅಪಾಯದ ಸನ್ನಿವೇಶವನ್ನು ಯುಕ್ತಿಯಿಂದ ಗೆಲ್ಲ ಬೇಕು ಎಂದು ಮೇಲಿನ ಗಾದೆ ತಿಳಿಸುತ್ತದೆ.
ಶಕ್ತಿಗಿಂತ ಯುಕ್ತಿ ಮೇಲು ಅರ್ಥ

ಇತರೆ ಸಂಬಂದಿಸಿದ ವಿಷಯಗಳು
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ
ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಗಾದೆ