Ponna Kavi Parichaya in Kannada, ಪೊನ್ನ ಕವಿ ಪರಿಚಯ ಕನ್ನಡ, ponna in kannada, ponna poet information in kannada, about ponna in kannada, notes
Ponna Kavi Parichaya in Kannada
ಪೊನ್ನನು ಹಳೆಗನ್ನಡದ ಮೂವರು ರತ್ನತ್ರಯರಲ್ಲಿ ಒಬ್ಬನು.
ಈತನ ಕಾಲ ಕ್ರಿ.ಶ.950.
ರಾಷ್ಟ್ರಕೂಟ ಚಕ್ರವರ್ತಿ 3ನೆಯ ಕೃಷ್ಣನ ಆಸ್ಥಾನದಲ್ಲಿ(939-965) ಪೊನ್ನನು ಆಸ್ಥಾನ ಕವಿಯಾಗಿದ್ದನು.
ಕನ್ನಡ ಹಾಗು ಸಂಸ್ಕೃತ ಗಳಲ್ಲಿ ಇವನಿಗೆ ಅಪಾರ ಪಾಂಡಿತ್ಯವಿದ್ದುದರಿಂದ ಈತನಿಗೆ ‘ಉಭಯ ಕವಿಚಕ್ರವರ್ತಿ’ ಎಂದು ಕರೆಯಲಾಗುತ್ತಿತ್ತು.
ಈತನು ತನ್ನನ್ನು ‘ಕುರುಳ್ಗಳ ಸವಣ’ ಎಂದು ಕರೆದುಕೊಂಡಿದ್ದಾನೆ. ಆದುದರಿಂದ ಈತನು ಸನ್ಯಾಸಿಯಂತೆ ಇದ್ದನೆಂದು ಭಾವಿಸಬಹುದು.
ಪೊನ್ನನ ಕೃತಿಗಳು
- ಪೊನ್ನನು 4 ಕಾವ್ಯಗಳನ್ನು ರಚಿಸಿದ್ದಾನೆಂದು ಹೇಳಲಾಗುತ್ತಿದೆ. ಲಭ್ಯವಿರುವ ಕಾವ್ಯಗಳು ಎರಡು:
- ಶಾಂತಿಪುರಾಣ
- ಜಿನಾಕ್ಷರಮಾಲೆ
- ‘ಭುವನೈಕ ರಾಮಾಭ್ಯುದಯ’ ಹಾಗು ‘ಗತಪ್ರತ್ಯಾಗತ’ ಈ ಕಾವ್ಯಗಳು ಲಭ್ಯವಿಲ್ಲ.
ಶಾಂತಿ ಪುರಾಣ
ಇದಕ್ಕೆ ‘ಪುರಾಣ ನಾಮ ಚೂಡಾಮಣಿ’ಎಂಬ ಪರ್ಯಾಯನಾಮವಿದೆ. 12 ಆಶ್ವಾಸಗಳಲ್ಲಿ ರಚನೆಯಾಗಿರುವ ಈ ಚಂಪೂ ಕಾವ್ಯ 16ನೆಯ ತೀರ್ಥಂಕರನಾದ ಶಾಂತಿನಾಥನನ್ನು ಕುರಿತದ್ದು.
ಈ ಕಾವ್ಯದಲ್ಲಿ ಪೊನ್ನನ ವಿದ್ವತ್ತು, ಪ್ರೌಢಿಮೆ, ಭಾಷೆ, ಛಂದಸ್ಸುಗಳ ಮೇಲೆ ಇರುವ ಹಿಡಿತ ಎದ್ದು ಕಾಣುತ್ತದೆ. ತೀರ್ಥಂಕರನಾಗಲಿರುವವನು 6ನೆಯ ಜನ್ಮದಲ್ಲಿ ‘ಅಪರಾಜಿತ’ನಾಗಿ ಹುಟ್ಟಿದಂದಿನಿಂದ ಕಥೆ ಆರಂಭವಾಗಿ, ಕೊನೆಯ 3(10-12) ಆಶ್ವಾಸಗಳಲ್ಲಿ ಶಾಂತಿನಾಥನ ಸ್ವಂತ ಜೀವನವೂ, ಸಿದ್ಧಿಯೂ ವರ್ಣಿಸಲ್ಪಟ್ಟಿದೆ. ಜೈನಧರ್ಮದ ತತ್ವಗಳನ್ನು ಕವಿ ಕಾವ್ಯದುದ್ದಕ್ಕೂ ಪ್ರತಿಪಾದಿಸಿದ್ದಾನೆ.
ಜಿನಾಕ್ಷರಮಾಲೆ
36 ಕಂದಪದ್ಯಗಳಿರುವ ಕೃತಿ. ‘ಕ’ಕಾರದಿಂದ ಹಿಡಿದು ‘ಳ’ಕಾರದವರೆಗೂ ಕ್ರಮವಾಗಿ ಒಂದೊಂದು ಪದ್ಯಾಕ್ಷರ ಆರಂಭವಾಗುತ್ತದೆ.
ಭುವನೈಕ ರಾಮಾಭ್ಯುದಯ
ಇದು ೧೪ ಆಶ್ವಾಸಗಳ ಚಂಪೂ ಕಾವ್ಯ. ಈ ಗ್ರಂಥವು ಲಭ್ಯವಿಲ್ಲವಾದ್ದರಿಂದ ಇದರ ಕಥಾವಸ್ತು ಚಕ್ರವರ್ತಿ ಕೃಷ್ನನ ಸಾಮಂತರಾಜ ಶಂಕರಗಂಡನ ಕುರಿತದ್ದೊ,
ಅಥವಾ ರಾಮಕಥೆಯನ್ನು ಕುರಿತದ್ದೊ, ಇಲ್ಲವೇ ತನ್ನನ್ನು ‘ಕೋದಂಡರಾಮ’ನೆಂದು ಕರೆದುಕೊಳ್ಳುತ್ತಿದ್ದ ಚೋಳರಾಜ ರಾಜಾದಿತ್ಯನ ಮೇಲೆ ಮುಮ್ಮಡಿಕೃಷ್ಣ ತಕ್ಕೋಲದಲ್ಲಿ ವಿಜಯ ಸಾಧಿಸಿದ ಕಥೆಯೋ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ.
ಪೊನ್ನನಿಗಿದ್ದ ಬಿರುದುಗಳು:
- ಪೊನ್ನನನ್ನು ಕುರುಳ್ಗಳ್ ಸವಣ ಎಂದು ಕರೆಯುತ್ತಿದ್ದರು.
- ಕವಿಚಕ್ರವರ್ತಿ ಎಂಬ ಬಿರುದನ್ನು ತನ್ನ ಅರಸನಿಂದ ಪಡೆದಿದ್ದನು.
ಇನ್ನಷ್ಟು ಓದಿ :
ಪ್ರಶ್ನೋತ್ತರಗಳು
ಆದಿಕವಿ” ಮತ್ತು “ಕನ್ನಡದ ಕಾವ್ಯ ಪಿತಾಮಹ” ಎಂದು ಯಾರನ್ನು ಕರೆಯುತ್ತಾರೆ?
A). ಪಂಪ
B). ರನ್ನ
C). ಜನ್ನ
D). ಪೊನ್ನ
Correct Ans: (A)
Description:
ಪಂಪ
ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾಣ ಮತ್ತೊಂದು ವಿಕ್ರಮಾರ್ಜುನ ವಿಜಯ (ಪಂಪ ಭಾರತ). “ಆದಿಕವಿ”, “ಕನ್ನಡದ ಕಾವ್ಯ ಪಿತಾಮಹ” ಮತ್ತು “ಕನ್ನಡದ ರತ್ನಾತ್ರಯ” ಎಂಬ ಬಿರುದುಗಳು ಇವೆ.
2.)
“ಪಂಪನು ಕನ್ನಡದ ಕಾಳಿದಾಸ” ಎಂದು ಕರೆದವರು ಯಾರು?
A). ದ.ರಾ.ಬೇಂದ್ರೆ
B). ಕುವೆಂಪು
C). ತಿ.ನಂ.ಶ್ರೀಕಂಠಯ್ಯ
D). ಬಿ.ಎಂ.ಶ್ರೀ.
Correct Ans: (C)
Description:
ತಿ.ನಂ.ಶ್ರೀಕಂಠಯ್ಯ
“ಪಂಪನು ಕನ್ನಡದ ಕಾಳಿದಾಸ” ಎಂದು ಕರೆದವರು ತಿ.ನಂ.ಶ್ರೀಕಂಠಯ್ಯ. ಪಂಪನಿಗೆ “ಕವಿತಾಗುಣಾರ್ಣವ ಸರಸ್ವತಿ ಮಣಿಹಾರ” ಮತ್ತು “ಕನ್ನಡದ ವ್ಯಾಸ” ಎಂಬ ಬಿರುದುಗಳಿವೆ. ಶತ್ರುಗಳಿಗೆ ತನ್ನನ್ನು ಒಪ್ಪಿಸಿಕೊಳ್ಳುವ ರಾಜನನ್ನು ಪಂಪ “ಪಗರಣದರಸ” ಎಂದು ಕಾವ್ಯಗಳಲ್ಲಿ ಉಲ್ಲೇಖಿಸಿದ್ದಾನೆ.
3.)
‘ಕವಿ ಚಕ್ರವರ್ತಿ” ಮತ್ತು “ಉಭಯ ಚಕ್ರವರ್ತಿ’ ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ಪಂಪ
B). ಪೊನ್ನ
C). ರನ್ನ
D). ಕುವೆಂಪು
Correct Ans: (B)
Description:
ಪೊನ್ನ
ಕವಿ ರತ್ನಾತ್ರಯರಲ್ಲಿ ಪೊನ್ನ ಎರಡನೆಯವನು. ರಾಷ್ಟ್ರಕೂಟರ 3ನೇ ಕೃಷ್ಣನ ಆಸ್ಥಾನದ ಕವಿ. ಇವರ ಪ್ರಮುಖ ಕೃತಿಗಳು ಶಾಂತಿ ಪುರಾಣ, ಜಿನಾಕ್ಷರ ಮಾಲೆ. ಇವರಿಗೆ ‘ಕವಿಚಕ್ರವರ್ತಿ’, ‘ಉಭಯ ಚಕ್ರವರ್ತಿ’ ಮತ್ತು ‘ಕುರುಳ್ಗಳ್ ಸವಣ’ ಎಂಬ ಬಿರುದುಗಳಿವೆ.
4.)
‘ಜಿನಧರ್ಮಪಾತಕೆ’ ಎಂದು ಯಾರನ್ನು ಕವಿ ರನ್ನ ಹೊಗಳಿದ್ದಾರೆ?
A). ಅತ್ತಿಮಬ್ಬೆ
B). ಅಬ್ಬಲಬ್ಬೆ
C). ಶಾಂತಿ
D). ಜಿನವಲ್ಲಭ
Correct Ans: (A)
Description:
ಅತ್ತಿಮಬ್ಬೆ
ಕವಿ ರನ್ನ ತನ್ನ ಅಜಿತ ಪುರಾಣದ ಪೀಠಿಕಾ ಭಾಗದಲ್ಲಿ ಅತ್ತಿಮಬ್ಬೆಯ ಜಿನ ಭಕ್ತಿಯನ್ನು ‘ಜಿನಧರ್ಮಪಾತಕೆ’ ಎಂದು ಕೊಂಡಾಡಿದ್ದಾನೆ. ರನ್ನನ ಗುರುವಿನ ಹೆಸರು ಅಜಿತಸೇನಾಚಾರ್ಯರು. ಕನ್ನಡದ ರತ್ನಾತ್ರಯರಲ್ಲಿ ಕವಿ ರನ್ನನ್ನು ಸಹ ಒಬ್ಬರಾಗಿದ್ದಾರೆ.
5.)
‘ಕವಿಕುಲ ಚಕ್ರವರ್ತಿ’ ಮತ್ತು ‘ಕವಿತಿಲಕ’ ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ಜನ್ನ
B). ಪೊನ್ನ
C). ರನ್ನ
D). ಪಂಪ
Correct Ans: (C)
Description:
ರನ್ನ
ರನ್ನ ಒಬ್ಬ ಶ್ರೇಷ್ಟ ಕವಿ. ಇವರ ಪ್ರಮುಖ ಕೃತಿಗಳು ಅಜಿತ ಪುರಾಣ, ಚಕ್ರೇಶ್ವರ ಚರಿತೆ (ದೊರೆತಿಲ್ಲ), ಸಾಹಸ ಭೀಮ ವಿಜಯ ಮತ್ತು ಪರಶುರಾಮ ಚರಿತೆ. ಕವಿ ರನ್ನ ಇವರಿಗೆ ಇರುವ ಬಿರುದುಗಳು ಹೀಗಿವೆ: ‘ಕವಿಕುಲಚಕ್ರವರ್ತಿ’ ‘ಕವಿಜನಚೂಡಾರತ್ನ’, ಕವಿತಿಲಕ ಮತ್ತು ಕವಿ ಚರ್ತುಮುಖ.
Ponna Information in Kannada
6.)
‘ವೀರ ಮಾರ್ತಾಂಡ ದೇವ’ ಎಂಬ ಬಿರುದನ್ನು ಹೊಂದಿದವರು ಯಾರು?
A). ಒಂದನೇ ನಾಗವರ್ಮ
B). ಪೊನ್ನ
C). ನಯನಸೇನ
D). ಚಾವುಂಡರಾಯ
Correct Ans: (D)
Description:
ಚಾವುಂಡರಾಯ
ಚಾವುಂಡರಾಯ ಗಂಗ ದೊರೆ ರಾಜಮಲ್ಲನ ಮಂತ್ರಿ. ಇವರ ಪ್ರಮುಖ ಗ್ರಂಥ ‘ತ್ರಿಷಷ್ಟಿಲಕ್ಷಣ ಮಹಾ ಪುರಾಣ’. ಚಾವುಂಡರಾಯನು ‘ವೀರ ಮಾರ್ತಾಂಡ ದೇವ’ ಮತ್ತು ‘ಸಮ್ಯಕ್ತ್ವ ರತ್ನಾಕರ’ ಎಂಬ ಬಿರುದ್ದನ್ನು ಹೊಂದಿದ್ದನ್ನು.
ಪೊನ್ನ ಕವಿ ಪರಿಚಯ ಸಂಪೂರ್ಣ ಮಾಹಿತಿ
7.)’ಅಭಿನವ ಪಂಪ’ ಎಂದು ಯಾರನ್ನು ಕರೆಯುತ್ತಾರೆ?
A). ನಾಗಚಂದ್ರ
B). ನಯನಸೇನ
C). ದುರ್ಗಸಿಂಹ
D). ಕುವೆಂಪು
Correct Ans: (A)
Description:
ನಾಗಚಂದ್ರ
‘ಹಿತಮಿತವಪ್ಪ ಲಲಿತ ಶೈಲಿಯಲ್ಲಿ ಕಾವ್ಯರಚಿಸಿರುವನೆಂದು ತನ್ನನ್ನು ಪಂಪನೊಂದಿಗೆ ಹೋಲಿಸಿಕೊಂಡು ‘ಅಭಿನವ ಪಂಪ’ ಎಂದು ಕೊಂಡಿದ್ದಾನೆ. ನಾಗಚಂದ್ರನ ಪ್ರಮುಖ ಗ್ರಂಥಗಳು ‘ಮಲ್ಲಿನಾಥ ಪುರಾಣ’ ಮತ್ತು ‘ರಾಮಚಂದ್ರ ಚರಿತ ಪುರಾಣ (ಪಂಪ ರಾಮಾಯಣ)’.
8.)
‘ವಿಡಂಬನಾ ಕವಿ’ ಎಂದು ಯಾರನ್ನು ಕರೆಯುತ್ತಾರೆ?
A). ನಾಗಚಂದ್ರ
B). ನಾಗವರ್ಮ
C). ನಯನಸೇನ
D). ದುರ್ಗಸಿಂಹ
Correct Ans: (C)
Description:
ನಯನಸೇನ
‘ಧರ್ಮಾಮೃತ’ ನಯಸೇನ ರಚಿಸಿದ ಕೃತಿಯಾಗಿದೆ. ಧರ್ಮಾಮೃತದಲ್ಲಿ ಕವಿ ಸ್ವಧರ್ಮ ಮಂಡನೆಗಾಗಿ ಅನ್ಯ ಧರ್ಮವನ್ನು ಕಟುವಾಗಿ ಟೀಕಿಸಿದ್ದಾನೆ. ಈ ಕಾವ್ಯದಲ್ಲಿನ ವಿಡಂಬನೆಯಿಂದ ಇವನನ್ನು ‘ವಿಡಂಬನಾ ಕವಿ’ ಎಂದು ಕರೆಯಲಾಗಿದೆ. ಧರ್ಮಾಮೃತ ಸರಳ ಚಂಪೂ ಮಾರ್ಗದಲ್ಲಿ ರಚಿತವಾದ ಮೊದಲ ಜೈನ ಪುರಾಣ ಎಂದು ಪ್ರಸಿದ್ಧಿಯಾಗಿದೆ.
9.)
ದಕ್ಷಿಣ ಭಾರತದ ಮೀರಾದೇವಿ ಎಂದು ಯಾರನ್ನು ಕರೆಯುತ್ತಾರೆ?
A). ರಮಾದೇವಿ
B). ನಿರ್ಮಲ
C). ಅಕ್ಕ ಮಹಾದೇವಿ
D). ಸುಮತಿ
Correct Ans: (C)
Description:
ಅಕ್ಕಮಹಾದೇವಿ
ಅಕ್ಕಮಹಾದೇವಿಯವರನ್ನು ದಕ್ಷಿಣ ಭಾರತದ ಮೀರಾದೇವಿ ಎಂದು ಕರೆಯುವರು. ಇವರು ಕನ್ನಡ ಸಾಹಿತ್ಯದ ಮೊದಲ ಕವಯತ್ರಿ ಮತ್ತು ವಚನಕಾರ್ತಿ. ಚೆನ್ನಮಲ್ಲಿಕಾರ್ಜುನ ಎಂಬುದು ಇವರ ಅಂಕಿತನಾಮ. ‘ಯೋಗಾಂಗ ತ್ರಿವಿಧಿ’ ಎಂಬುದು ಅಕ್ಕಮಹಾದೇವಿಯವರ ತ್ರಿಪದಿಯಲ್ಲಿ ರಚಿತವಾಗಿರು ಕೃತಿ.
10.)
‘ರಗಳೆ ಕವಿ’ ಮತ್ತು ‘ಶಿವ ಕವಿ’ ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ರಾಘವಾಂಕ
B). ಹರಿಹರ
C). ಸಿದ್ಧರಾಮ
D). ಚೆನ್ನ ಬಸವಣ್ಣ
Correct Ans: (B)
Description:
ಹರಿಹರ
ಶಿವ ಕವಿ, ಭಕ್ತಿ ಕವಿ, ಕ್ರಾಂತಿ ಕವಿ ಮತ್ತು ರಗಳೆ ಕವಿ ಎಂದು ಪ್ರಸಿದ್ಧವಾದ ಕವಿ ಹರಿಹರ. ವೀರಶೈವ/
ಸಾಹಿತ್ಯದಲ್ಲಿ ಹಿರಿಯನೂ ಪ್ರಮುಖನು ಆದ ಪ್ರಾಚೀನ ಕವಿ. ಕನ್ನಡ ಸಾಹಿತ್ಯಕ್ಕೆ ಮೊದಲು ರಗಳೆಗಳನ್ನು ಪರಿಚಯಿಸಿದವನು ಹರಿಹರ. ಗಿರಿಜಾ ಕಲ್ಯಾಣ, ಪಂಪಶತಕ, ರಕ್ಷಾ ಶತಕ, ಮುಡಿಗೆಯ ಅಷ್ಟಕ ಶಿವಶರಣರ ರಗಳೆಯನ್ನು ರಚಿಸಿದ್ದಾರೆ.
11.)
‘ಷಟ್ಪದಿ ಬ್ರಹ್ಮ’ ಎಂದು ಯಾರನ್ನು ಕರೆಯುತ್ತಾರೆ?
A). ರಾಘವಾಂಕ
B). ಕುಮಾರ ವ್ಯಾಸ
C). ಹರಿಹರ
D). ಜನ್ನ
Correct Ans: (A)
Description:
ರಾಘವಾಂಕ
ರಾಘವಾಂಕನು ತನ್ನ ಕೃತಿಗಳನ್ನು ವಾರ್ಧಕ ಷಟ್ಪಧಿಯಲ್ಲಿ ರಚಿಸಿ “ಷಟ್ಪದಿ ಬ್ರಹ್ಮ” ಎಂದು ಪ್ರಸಿದ್ಧಿಯನ್ನು ಹೊಂದಿದ್ದಾನೆ. ಉಭಯ ಕವಿ, ಕಮಲ ಕವಿ, ಕವಿ ಶರಭ ಭೇರುಂಡ, ಷಟ್ಪದಿಗಳ ಬ್ರಹ್ಮ ಎಂಬ ಬಿರುದುಗಳನ್ನು ಹೊಂದಿದ್ದಾನೆ. ಇವರ ಪ್ರಮುಖ ಕೃತಿಗಳು : ಹರಿಶ್ಚಂದ್ರ ಕಾವ್ಯ, ಸೋಮನಾಥ ಚರಿತೆ, ಸಿದ್ಧರಾಮ ಚರಿತೆ, ವೀರೇಶ ಚರಿತೆ, ಶರಭಚಾರಿತ್ರ್ಯ.
ponna kavi parichaya in kannada
12.)’ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂದು ಪ್ರಸಿದ್ಧಿ ಪಡೆದ ಕವಿ ಯಾರು?
A). ಜನ್ನ
B). ರಾಘವಾಂಕ
C). ಕುಮಾರವ್ಯಾಸ
D). ಲಕ್ಷ್ಮೀಶ
Correct Ans: (C)
Description:
ಕುಮಾರ ವ್ಯಾಸ
ಕುಮಾರವ್ಯಾಸ ತನ್ನ ಕಾವ್ಯದಲ್ಲಿ ಹೆಚ್ಚು ರೂಪಕಗಳನ್ನು ಬಳಸಿದ್ದಾನೆ, ಆದ್ದರಿಂದ ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂದು ಕರೆಯುತ್ತಾರೆ. ಕನ್ನಡ ಭಾರತ, ಗದುಗಿನ ಭಾರತ, ಕುಮಾರವ್ಯಾಸ ಭಾರತ ಎಂದು ಪ್ರಸಿದ್ಧವಾಗಿರುವ “ಕರ್ಣಾಟಕ ಭಾರತ ಕಥಾಮಂಜರಿ” ಎಂಬ ಭಾಮಿನಿ ಷಟ್ಪದಿಯ ಕಾವ್ಯವನ್ನು ರಚಿಸಿದವರು ಕುಮಾರವ್ಯಾಸ.
13.)
‘ಶೃಂಗಾರ ಕವಿ’ ಎಂದು ಯಾರನ್ನು ಕರೆಯುತ್ತಾರೆ?
A). ಚಾಮರಸ
B). ರತ್ನಾಕರವರ್ಣಿ
C). ಅಂಡಯ್ಯ
D). ಮಲ್ಲಿಕಾರ್ಜುನ
Correct Ans: (B)
Description:
ರತ್ನಾಕರವರ್ಣಿ
‘ಶೃಂಗಾರ ಕವಿ’ ಎಂದು ಪ್ರಸಿದ್ಧರಾಗಿರುವ ರತ್ನಾಕರವರ್ಣಿಯವರು ಮೂಡಬಿದರೆಯವರು. ಇವರ ಪ್ರಮುಖ ಕೃತಿಗಳೆಂದರೆ : ಭರತೇಶ ವೈಭವ (ಸಾಂಗತ್ಯ), ತ್ರಿಲೋಕ ಶತಕ (ಕಂದ ಪದ್ಯ), ರತ್ನಾಕರಾಧೀಶ್ವರ ಶತಕ, ಅಪರಾಜಿತೇಶ್ವರ ಶತಕ. ಇವರು ಕಾರ್ಕಳದ ಅರಸು ಭೈರವ ರಾಜನ ಆಸ್ಥಾನದ ಕವಿ.
14.)
‘ನಾದಲೋಲ’ ಮತ್ತು ‘ಉಪಮಾ ಲೋಲ’ ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ಲಕ್ಷ್ಮೀಶ
B). ನಂಜುಂಡ ಕವಿ
C). ಕೇಶಿರಾಜ
D). ಶಿಶುಮಾಯಣ
Correct Ans: (A)
Description:
ಲಕ್ಷ್ಮೀಶ
pampa ponna ranna
15.)
‘ಕವಿತಾಸಾರ’ ಮತ್ತು ‘ತತ್ವ ವಿದ್ಯಾಕಲಾಪ’ ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ಅಂಬಿಗರ ಚೌಡಯ್ಯ
B). ಪಾಲ್ಕುರಿಕೆ ಸೋಮ
C). ಕುಮದೇಂದು
D). ಚೌಂಡರಸ
Correct Ans: (B)
Description:
ಪಾಲ್ಕುರಿಕೆ ಸೋಮ
ಪಾಲ್ಕುರಿಕೆ ಸೋಮ ತೆಲುಗು ಕವಿಯಾಗಿದ್ದ, ಸಂಸ್ಕೃತ ಪ್ರಾಕೃತ, ಕನ್ನಡ ಭಾಷೆಗಳಲ್ಲಿಯೂ ಗ್ರಂಥ ರಚನೆ ಮಾಡಿದ್ದಾನೆ ಈತನಿಗಿರುವ ಬಿರುದುಗಳು: ಕವಿತಾಸಾರ, ತತ್ವ ವಿದ್ಯಾಕಲಾಪ ಮತ್ತು ಅನ್ಯದೇವ ಕೋಲಾಹಲ.
ಕವಿರಾಜಹಂಸ
16.)
‘ಕವಿರಾಜಹಂಸ’ ಎಂಬ ಬಿರುದು ಹೊಂದಿರುವ ಕವಿ ಯಾರು?
A). ಕುಮಾರ ವಾಲ್ಮೀಕಿ
B). ಭೀಮಕವಿ
C). ಷಡಕ್ಷರಿ
D). ತಿರುಮಲಾರ್ಯ
Correct Ans: (A)
Description:
ಕುಮಾರ ವಾಲ್ಮೀಕಿ
ಕುಮಾರ ವಾಲ್ಮೀಕಿ ಇವನ ನಿಜನಾಮ ನರಹರಿ. ಈತನಿಗೆ ಕವಿರಾಜಹಂಸ ಎಂಬ ಬಿರುದು ಇದೆ. ಈತನು ತೊರೆವ ರಾಮಾಯಣ (ಭಾಮಿನಿ ಷಟ್ಪದಿಯಲ್ಲಿದ್ದು ರಾಮಾಯಣದ ಕಥಾ ಅಂಧರವನ್ನು ಒಳಗೊಂಡಿದೆ) ಮತ್ತು ಐರಾವಣ ಕಾಳಗ ಎಂಬ ಕಾವ್ಯಗಳನ್ನು ರಚಿಸಿದ್ದಾನೆ.
17.)
‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಯಾರನ್ನು ಕರೆಯುತ್ತಾರೆ?
A). ಕನಕದಾಸ
B). ವಾದಿರಾಜ
C). ಬಸವಣ್ಣ
D). ಪುರಂದರ ದಾಸ
Correct Ans: (D)
Description:
ಪುರಂದರ ದಾಸ
ಗಣಪತಿಯ ಸ್ತುತಿಯಾದ ಪಿಳ್ಳಾರಿಗೀತೆಗಳ ಮೂಲಕ ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಜನಪ್ರಿಯರಾದರು. ಇವರ ಕೀರ್ತನೆಗಳ ಅಂಕಿತ ‘ಪುರಂದರ ವಿಠಲ’.ಪುರಂದರ ದಾಸರ ಪೂರ್ವದ ಹೆಸರು ಶ್ರೀನಿವಾಸ ನಾಯಕ. ಇವರ ಕೀರ್ತನೆಗಳು ಶ್ರೀ ಕೃಷ್ಣನ ಬಾಲಲೀಲೆಗಳನ್ನು, ವಾತ್ಸಲ್ಯ ಭಾವದ ಗೀತೆಗಳನ್ನು ಮುಂತಾದವುಗಳ ಬಗ್ಗೆ ತಿಳಿಸಿದ್ದಾರೆ.
18.)
‘ಸರಸ ಸಾಹಿತ್ಯದ ವರದೇವತೆ’ ಎಂದು ಯಾರನ್ನು ಕರೆಯುತ್ತಾರೆ?
A). ಅತ್ತಿಮಬ್ಬೆ
B). ಸಂಚಿಯಹೊನ್ನಮ್ಮ
C). ಅಕ್ಕಮಹಾದೇವಿ
D). ಮಂಜುಳಾ
Correct Ans: (B)
Description:
ಸಂಚಿಯಹೊನ್ನಮ್ಮ
‘ಸರಸ ಸಾಹಿತ್ಯದ ವರದೇವತೆ’ ಎಂಬ ಬಿರುದಿಗೆ ಪಾತ್ರವಾಗಿರುವ ಸಂಚಿಯಹೊನ್ನಮ್ಮ ಕನ್ನಡ ಸಾಸಸತ್ವ ಲೋಕದ ಕವಿಯತ್ರಿಯರಲ್ಲಿ ಪ್ರಮುಖರು. ಇವರು ರಚಿಸಿದ ಪ್ರಮುಖ ಗ್ರಂಥ ‘ಹದಿಬದೆಯ ಧರ್ಮ'(ಸಾಂಗತ್ಯ). ಹದಿಬದೆಯ ಧರ್ಮ ಕಾವ್ಯದಲ್ಲಿ ಪತಿವೃತಾ ಸ್ತ್ರೀಯ ಧರ್ಮವು ವಿಶದವಾಗಿ ರೂಪಿತವಾಗಿದೆ.
19.)
‘ಕನ್ನಡದ ವರ್ಡ್ಸ್ವರ್ತ್’ ಎಂಬ ಬಿರುದನ್ನು ಹೊಂದಿರುವ ಕವಿ ಯಾರು?
A). ಕುವೆಂಪು
B). ದ.ರಾ.ಬೇಂದ್ರೆ
C). ವಿನಾಯಕ
D). ಬಿ.ಎಂ.ಶ್ರೀ.
Correct Ans: (A)
Description:
ಕುವೆಂಪು
ಕುವೆಂಪು ಇವರ ಪೂರ್ಣ ಹೆಸರು ಕುಪ್ಪಳ್ಲಿ ವೆಂಕಟ್ಟಪ್ಪ ಪುಟ್ಟಪ್ಪ. ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ(1967) ಪಡೆದವರು ಮತ್ತು ಎರಡನೇ ರಾಷ್ಟ್ರಕವಿ (1964). ಇವರಿಗೆ ಕನ್ನಡದ ವರ್ಡ್ಸ್ವರ್ತ್ ಮತ್ತು ರಸ ಋಷಿ ಎಂಬ ಬಿರುದುಗಳಿವೆ. ಇವರ ಪ್ರಮುಖ ಕೃತಿಗಳು ಶ್ರೀ ರಾಮಾಯಣ ದರ್ಶನಂ, ನೆನಪಿನ ದೋಣಿಯಲ್ಲಿ (ಆತ್ಮಕಥನ).
about ponna in kannada
20.)’ಕನ್ನಡದ ವರಕವಿ’ ಎಂಬ ಬಿರುದನ್ನು ಪಡೆದ ಕವಿ ಯಾರು?
A). ಕುವೆಂಪು
B). ವಿ.ಕೃ.ಗೋಕಾಕ್
C). ಶಿವರಾಮ ಕಾರಂತ
D). ದ.ರಾ.ಬೇಂದ್ರೆ
Correct Ans: (D)
Description:
ದ.ರಾ.ಬೇಂದ್ರೆ
ದ.ರಾ.ಬೇಂದ್ರೆ ಇವರ ಪೂರ್ಣ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಇವರ ಕಾವ್ಯನಾಮ ಅಂಬಿಕಾತನಯ ದತ್ತ. ಇವರ ನಾಕುತಂತಿ ಎಂಬ ಕೃತಿಗೆ 1973ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇವರನ್ನು ಕನ್ನಡದ ವರಕವಿ ಎಂದು ಕರೆಯುತ್ತಾರೆ. ಇವರ ಪ್ರಮುಖ ಕೃತಿಗಳು ಮೇಘದೂತ, ನಾದ ಲೀಲೆ, ಅರಳು ಮರಳು, ಉಯ್ಯಾಲೆ ಇತ್ಯಾದಿ.
21.)
‘ಕಡಲ ತೀರ ಭಾರ್ಗವ’ ಎಂಬ ಬಿರುದನ್ನು ಹೊಂದಿರುವ ಕವಿ ಯಾರು?
A). ಶಿವರಾಮ ಕಾರಂತ
B). ದ.ರಾ.ಬೇಂದ್ರೆ
C). ವಿನಾಯಕ
D). ಬಿ.ಎಂ.ಶ್ರೀ.
Correct Ans: (A)
Description:
ಶಿವರಾಮ ಕಾರಂತ
ಶಿವರಾಮ ಕಾರಂತರು ಮೊದಲು ಪ್ರಕಟಿಸಿದ ಪುಸ್ತಕ ‘ರಾಷ್ಟ್ರಗೀತೆ ಸುಧಾಕರ’ ಎಂಬ ಕವನ ಸಂಕಲನ. ಶಿವರಾಮ ಕಾರಂತರು 10 ಅಕ್ಟೋಬರ್ 1902ರಂದು ಜನಿಸಿದರು. “ಕಡಲತೀರದ ಭಾರ್ಗವ”, “ನಡೆದಾಡುವ ವಿಶ್ವಕೋಶ” ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಆಡುಮುಟ್ಟದ ಸೊಪ್ಪಿಲ್ಲ. ಹಾಗೇಯೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ಪಂಪ ಪ್ರಶಸ್ತಿ, ಪದ್ಮಭೂಷಣ, ಜ್ಞಾನಪೀಠ (ಮೂಕಜ್ಜಿಯ ಕನಸು ಎಂಬ ಕೃತಿಗೆ) ಮತ್ತು ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ಗಳನ್ನ
ಿತ್ತು ಪುರಸ್ಕರಿಸಿವೆ.
22.)
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರಿಗೆ ಇದ್ದ ಬಿರುದು?
A). ಕನ್ನಡದ ಶ್ರೀನಿವಾಸ
B). ಕನ್ನಡದ ಆಸ್ತಿ
C). ಕನ್ನಡದ ಮೇಸ್ಟ್ರು
D). ಕವಿ ವಲ್ಲಭ
Correct Ans: (B)
Description:
ಕನ್ನಡದ ಆಸ್ತಿ
ಮಾಸ್ತಿ ಕನ್ನಡದ ಆಸ್ತಿ ಎಂದೇ ಜನಪ್ರಿಯವಾಗಿದ್ದವರು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರು. ಇವರು ಚಿಕ್ಕವೀರ ರಾಜೇಂದ್ರ ಎಂಬ ಕೃತಿಗೆ 1983ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಇವರು ರಚಿಸಿದ ಪ್ರಮುಖ ಕೃತಿಗಳು ಶ್ರೀ ರಾಮ ಪಟ್ಟಾಭಿಷೇಕ, ಗೌಡರ ಮಲ್ಲಿ, ರಾಮನವಮಿ, ತಾವರೆ ಮಲಾರ ನವರಾತ್ರಿ, ಒಂದು ಹಳೆಯ ಕಥೆ.